ಚಿತ್ತಾಪುರ: ರಾಜ್ಯದ ವಿಧಾನಸಭೆಯಲ್ಲಿ ನಾನು
ಸರ್ಕಾರಿ ನೌಕರರ ಧ್ವನಿಯಾಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ/ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಠ ಪಂಗಡ ನೌಕರರ ಸಂಘ ಚಿತ್ತಾಪುರ ಶಾಖೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ “ಸೇವಾ ರತ್ನ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳ ಬಗ್ಗೆ ನಮ್ಮ ಸರ್ಕಾರ ಸ್ಪಂದಿಸಿ ಈಡೇರಿಸಲು ಬದ್ಧವಾಗಿದೆ ಎಂದರು.
ಜನಸಾಮಾನ್ಯರ ಸೇವೆಗೆ ನಾವು ಹಾಗೂ ಸರ್ಕಾರಿ ನೌಕರರು ಸದಾ ಸಿದ್ಧವಾಗಿರಬೇಕು. ಜನರ ಸ್ವಾಭಿಮಾನದ ಬದುಕು ಹಾಗೂ ಜೀವನಮಟ್ಟ ಸುಧಾರಣೆಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಸುವ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಫೌಝಿಯಾ ತರನುಮ್, ಎಸ್ಪಿ ಅದ್ದೂರು ಶ್ರೀನಿವಾಸಲು, ಜಿಪಂ ಸಿಇಒ ಭಂವರಸಿಂಗ್ ಮೀನಾ, ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಪಿಎಲ್'ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಚಿಂಚನಸೂರ, ಮನೂರ್ ಆಸ್ಪತ್ರೆಯ ಸಂಸ್ಥಾಪಕ ಡಾ.ಫಾರೂಕ್, ಸಂಘದ ರಾಜ್ಯಾಧ್ಯಕ್ಷ ಮಹೇಶ ಸಿ. ಹುಬಳಿ, ಗೌರವಾಧ್ಯಕ್ಷ ವಿಠಲ ಗೋಳಾ, ಕಾರ್ಯಾಧ್ಯಕ್ಷ ಜೈ ಭೀಮ್, ರಾಜ್ಯ ಪ್ರಧಾನ ಕರ್ಯಾದರ್ಶಿ ಸುಧಾಕರ ಎಸ್. ಜಡಗಿ, ರಾಜ್ಯ ಪರಿಷತ್ ಸದಸ್ಯ ಸಂತೋಷ ಸಲಗರ, ಬೆಂಗಳೂರು ನಗರ ಸಂಘದ ಅಧ್ಯಕ್ಷ ಶ್ರೀಧರ ಕೋಟ್ರೇ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ್, ವಿಜಯಲಕ್ಷ್ಮೀ, ಕವಿತಾ ದೇವಿಂದ್ರಪ್ಪ ದೊರಿ, ಶಾಂತಮಲ್ಲಪ್ಪ ಪಾಟೀಲ, ಗೌತಮಿ ಹಿರೊಳ್ಳಿ, ಸುನೀತಾ, ಜಯಶ್ರೀ, ಮಹೇಶ್ವರಿ, ಗೀತಾ ಸೇರಿದಂತೆ ಇತರರು ಇದ್ದರು.
ಪೂಜ್ಯ ವರಜ್ಯೋತಿ ಬಂತೇಜಿ ಅಣದೂರ ದಿವ್ಯಸಾನಿದ್ಯ ವಹಿಸಿದ್ದರು, ಸಂಘದ ತಾಲೂಕು ಅಧ್ಯಕ್ಷ ಅರುಣಕುಮಾರ ಎಸ್. ಚಿಂಚನಸೂರ ಅಧ್ಯಕ್ಷತೆ ವಹಿಸಿದ್ದರು. ಮನೋವಿಜ್ಞಾನಿ ಡಾ. ದಿಲೀಪಕುಮಾರ ನವಲೆ ಕಲಬುರಗಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಾಧಕರನ್ನು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಎಸ್.ಎಸ್.ಎಲ್.ಸಿ./ ಪಿ.ಯು.ಸಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ, ಡಾ. ಬಿ.ಆರ್. ಅಂಬೇಡ್ಕರ ರವರ ಕುರಿತು ಪ್ರಬಂಧ ಸ್ಪರ್ದೆ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ದೆಯಲ್ಲಿ ವಿಜೇತರಾದ ಕಾಲೇಜು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಿದ್ದಾರ್ಥ್ ಚಿಮ್ಮಾಇದಲಾಯಿ ಪ್ರಾರ್ಥಿಸಿದರು, ಶಿವಶರಣಪ್ಪ ಮಂಠಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣಪ್ಪ ಕಟ್ಟಿ ಸ್ವಾಗತಿಸಿದರು, ಶಿವಾನಂದ ನಾಲವಾರ ನಿರೂಪಿಸಿದರು, ಸದಾಶಿವ ದೊಡ್ಡಮನಿ ವಂದಿಸಿದರು. ಕಾರ್ಯಕ್ರಮದ ಮುನ್ನ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮರೆವಣಿಗೆ ಪ್ರಾರಂಭವಾಗಿ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ನಡೆಯಿತು.