ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರ ಇರುವ
ಆಟೋ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಟ್ಟಣದ ವಿವಿಧೆಡೆ ಆಟೋ ನಿಲ್ದಾಣ ಮತ್ತು ನಾಮಫಲಕಗಳು ಅಳವಡಿಸಬೇಕು ಎಂದು ಆಗ್ರಹಿಸಿ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪುರಸಭೆ ಮುಖ್ಯಸ್ಥರಿಗೆ ಮನವಿ ಪತ್ರ ಸಲ್ಲಿಸಿದರು.
ನಾಗಾವಿ ವೃತ್ತದಲ್ಲಿ, ಭುವನೇಶ್ವರಿ ವೃತ್ತದಲ್ಲಿ, ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ, ಅಂಬೇಡ್ಕರ್ ವೃತ್ತದಲ್ಲಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹತ್ತಿರ, ಸ್ಟೇಷನ್ ರಸ್ತೆಯಲ್ಲಿರುವ ತಿರುಮಲ ಮನೆ ಎದುರುಗಡೆ ಇಟಗಾ ಗ್ರಾಮಕ್ಕೆ ಹೋಗುವ ಸ್ಥಳದಲ್ಲಿ ಹಾಗೂ ದಿಗ್ಗಾಂವ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಆಟೋ ನಿಲ್ದಾಣಗಳು ಹಾಕಿ ನಾಮಫಲಕಗಳು ಅಳವಡಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಯ್ಯ ಸಾಬಣ್ಣ ಭೋವಿ, ಕಾರ್ಯದರ್ಶಿ ಸುಭಾಷ್ ಕಾಶಿ, ಖಜಾಂಚಿ ಮುನಿಯಪ್ಪ ಬಾಗೋಡಿಕರ್, ಸದಸ್ಯರಾದ ಮಹೇಶ್ ಬುರ್ಲಿ, ಅಯಾಜ್, ನಾಗರಾಜ್ ಪೂಜಾರಿ, ಮಹೇಶ್ ಕಾಶಿ, ಶರಬಣ್ಣ ಮಡಿವಾಳ, ಗುರುರಾಜ್ ಚೌದರಿ, ಚಿತ್ತಣ್ಣ ಗುತ್ತೇದಾರ್, ಭೀಮು ಜಮಾದಾರ್, ಸಿದ್ದಪ್ಪ ರಾಂಪುರಹಳ್ಳಿ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ