ಚಿತ್ತಾಪುರ: ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ರಾಜನಾಗಿರದೆ, ಅಪ್ರತಿಮ ದೇಶಪ್ರೇಮಿ ಹಾಗೂ ಜನಪರ ಆಡಳಿತಗಾರರಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಶಿವಾಜಿ ಮಹಾರಾಜರ ಕಾಲದ ಆಡಳಿತವು ಅತ್ಯಂತ ಶಿಸ್ತುಬದ್ಧವಾಗಿತ್ತು. ಸ್ವರಾಜ್ಯದ ಪರಿಕಲ್ಪನೆಯಡಿ ಅವರು ಜಾರಿಗೆ ತಂದ ಆಡಳಿತಾತ್ಮಕ ಸುಧಾರಣೆಗಳು ಇಂದಿನ ಪ್ರಜಾಪ್ರಭುತ್ವಕ್ಕೂ ಅಡಿಪಾಯದಂತಿವೆ ಎಂದು ತಹಸೀಲ್ದಾರ್ ಬಣ್ಣಿಸಿದರು.
ಪರಕೀಯರ ಆಳ್ವಿಕೆಯ ನಡುವೆ ಸ್ವಂತ ಸಾಮ್ರಾಜ್ಯ ಕಟ್ಟಿದ ಶಿವಾಜಿಯವರ ಸಾಹಸಗಾಥೆ ಹಾಗೂ ಮಾತೃಭೂಮಿಯ ಮೇಲಿದ್ದ ಅವರ ಭಕ್ತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿತ್ತು. ತಮ್ಮ ಆಡಳಿತದಲ್ಲಿ ಎಲ್ಲ ಸಮುದಾಯದವರನ್ನು ಸಮಾನವಾಗಿ ಕಂಡಿದ್ದ ಮಹಾರಾಜರು, ಮಹಿಳೆಯರ ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಜೀವನ ಚರಿತ್ರೆ ನಮಗೆ ಶೌರ್ಯ ಮತ್ತು ನೀತಿ ಎರಡನ್ನೂ ಕಲಿಸುತ್ತದೆ ಎಂದರು.
.ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ , ವಿಠ್ಠಲ್ ರಾವ್, ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಯೆಂದೆ, ಪ್ರಹ್ಲಾದ್ ವಿಶ್ವಕರ್ಮ, ಉಪಾಧ್ಯಕ್ಷ ಅನೂಪ್ ಉಬಾಳೆ, ರೋಹಿತ್ ಚವ್ಹಾಣ, ಕಾರ್ಯದರ್ಶಿ ಗುರುರಾಜ್ ಉಪ್ಪಾರ, ಸಹ ಕಾರ್ಯದರ್ಶಿ ಮನೋಜ್ ಹರಾಳೆ, ಸಂಯುಕ್ತ ಕಾರ್ಯದರ್ಶಿ ಅಂಬರೀಶ್ ಭೋವಿ, ಖಜಾಂಚಿ ನವೀನ್ ಚವ್ಹಾಣ್, ಸದಸ್ಯರಾದ ರೋಹಿತ್ ಯೆಂದೆ, ಸಂತೋಷ್ ಗಾವಲ್ಕರ್, ಸಂಜೀವ್ ಸೂರ್ಯವಂಶಿ, ಆಕಾಶ ಸುಗಂಧಿ ಲಾಡ್, ಗಣೇಶ ಜೀತುರೆ, ಮಹೇಶ್ ಸುಗಂಧಿ, ನಿತೇಶ್ ಸುಗಂಧಿ ಸೇರಿದಂತೆ ಮರಾಠ ಸಮಾಜದ ಮುಖಂಡರು ಅನೇಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ