ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಸಮೀಪವಿರುವ ಅದಾನಿ ಸಿಮೆಂಟ್ ಚಿತ್ತಾಪುರ ಘಟಕದ ವತಿಯಿಂದ ಇತ್ತೀಚೆಗೆ 'AWMS 5S' ಜಾಗೃತಿ ಮೆರವಣಿಗೆ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.
ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ನಡೆದ ಈ ಅಭಿಯಾನವು ಶಿಸ್ತು, ಸ್ವಚ್ಛತೆ ಮತ್ತು ಸುರಕ್ಷತೆಯ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಯಿತು.
ವಿದ್ಯಾರ್ಥಿಗಳಿಗೆ ವಿಂಗಡಣೆ (Sort), ವ್ಯವಸ್ಥೆ (Set in Order) ,ಸ್ವಚ್ಛತೆ (Shine),ಪ್ರಮಾಣೀಕರಣ (Standardize),ಶಿಸ್ತು (Sustain) ಇವುಗಳ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಲಾಯಿತು. ದೃಶ್ಯಪ್ರದರ್ಶನ ಹಾಗೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಈ ತತ್ವಗಳನ್ನು ದೈನಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಪ್ರಾಯೋಗಿಕವಾಗಿ ವಿವರಿಸಲಾಯಿತು. ಶಾಲಾ ಮಕ್ಕಳು ತಮ್ಮ ಮನೆ ಹಾಗೂ ಶಾಲಾ ಪರಿಸರದಲ್ಲಿ 5S ಅಭ್ಯಾಸಗಳನ್ನು ಪಾಲಿಸುವುದಾಗಿ ಈ ಸಂದರ್ಭದಲ್ಲಿ ಸಂಕಲ್ಪ ಮಾಡಿದರು.
ಅಭಿಯಾನದ ಎರಡನೇ ದಿನವಾದ ಫೆಬ್ರವರಿ 25ರಂದು ಅದಾನಿ ಸಿಮೆಂಟ್ ಘಟಕದ ಆವರಣದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಘಟಕದ ಎಲ್ಲಾ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು, ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ಸುರಕ್ಷತೆಯನ್ನು ಕಾಪಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
"AWMS ಚೌಕಟ್ಟಿನಡಿ ಆಯೋಜಿಸಲಾದ ಈ ಕಾರ್ಯಕ್ರಮವು ಉದ್ಯಮದ ಎಲ್ಲಾ ವಿಭಾಗಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಕಾರ್ಯವಿಧಾನಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ಘಟಕದ ಕಾರ್ಯಾಚರಣೆಯ ಶ್ರೇಷ್ಠತೆ ಹಾಗೂ ನಿರಂತರ ಸುಧಾರಣೆಯತ್ತ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ" ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಸಮುದಾಯ ಮತ್ತು ಕೆಲಸದ ಸ್ಥಳ ಎರಡೂ ಕಡೆಗಳಲ್ಲಿ ಸ್ವಚ್ಛ ಹಾಗೂ ಕ್ರಮಬದ್ಧ ಪರಿಸರ ನಿರ್ಮಾಣಕ್ಕೆ ಮುಂದಾಗಿರುವ ಅದಾನಿ ಸಿಮೆಂಟ್ ಸಂಸ್ಥೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ