ಜನತೆಯ ಸುದ್ದಿ ವಾಹಿನಿ

ಶುಕ್ರವಾರ, ಮೇ 29, 2026

ಪ್ರಿಯಾಂಕ್ ಖರ್ಗೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಲು ಕೆಪಿಸಿಸಿಗೆ ಮನವಿ.

ಚಿತ್ತಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ಜನಪರ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಾಂಕ್ ಎಂ. ಖರ್ಗೆ ಅವರನ್ನು ಕರ್ನಾಟಕ ರಾಜ್ಯದ ನೂತನ ಉಪ ಮುಖ್ಯಮಂತ್ರಿಯನ್ನಾಗಿ (DCM) ನೇಮಕ ಮಾಡಬೇಕು ಎಂದು ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

​ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯ ಸರ್ಕಾರ ಹಾಗೂ ಪ್ರಿಯಾಂಕ ಖರ್ಗೆ ರವರ ಪರವಾಗಿ ಕಾರ್ಯಕರ್ತರು ಜಯ ಘೋಷ ಹಾಕುವ ಮೂಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರ ಮುಖಾಂತರ ಕೆಪಿಸಿಸಿ ಅಧ್ಯಕ್ಷರಿಗೆ ಈ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಿದರು.

ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ​ರಮೇಶ ಮರಗೋಳ 
ಮಾತನಾಡಿ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಯುವಜನರ ಆಕಾಂಕ್ಷೆಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ರಾಜ್ಯದ ಪ್ರಭಾವಿ ಯುವ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಸರಳತೆ, ಪ್ರಾಮಾಣಿಕತೆ ಮತ್ತು ಆಡಳಿತಾತ್ಮಕ ಅನುಭವದಿಂದ ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಶಿಕ್ಷಣ, ಉದ್ಯೋಗ, ತಂತ್ರಜ್ಞಾನ ಹಾಗೂ ಸಾಮಾಜಿಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಾ ಜನಸೇವೆ ಮಾಡುತ್ತಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ, ಹಿಂದುಳಿದ ವರ್ಗಗಳ ಏಳಿಗೆಯ ಕುರಿತಾದ ಬದ್ಧತೆ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಅವರು ವಹಿಸಿರುವ ಪಾತ್ರ ಶ್ಲಾಘನೀಯವಾಗಿದೆ ಹೀಗಾಗಿ ಪ್ರಿಯಾಂಕ ಖರ್ಗೆ ರವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ 
​"ರಾಜಕೀಯದಲ್ಲಿ ಹೊಸ ಚಿತ್ರಣ ಮೂಡಿಸುವ ಸಾಮರ್ಥ್ಯ ಮತ್ತು ಜನಪರ ಆಡಳಿತದ ದೃಷ್ಟಿಕೋನ ಹೊಂದಿರುವ ಪ್ರಿಯಾಂಕ್ ಖರ್ಗೆ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೆ, ರಾಜ್ಯದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ದೊರೆಯಲಿದೆ" ಎಂದರು ನನ್ನಗೆ ಸಲ್ಲಿಸಿದ ಮನವಿ ಪತ್ರ ಕೆಪಿಸಿಸಿ ರಾಜ್ಯ ಅಧ್ಯಕ್ಷರಿಗೆ ಸಲ್ಲಿಸಿ ಒತ್ತಡ ಹೇರುವುದಾಗಿ ತಿಳಿಸಿದರು.

​ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವರುದ್ರ ಭೇಣಿ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನಿಲ್ ದೊಡ್ಡಮನಿ, ಚಂದ್ರಶೇಖರ್ ಕಾಶಿ, ಮುಕ್ತಾರ್ ಪಾಟೇಲ್, ಮಲ್ಲಿಕಾರ್ಜುನ್ ಕಾಳಗಿ, ಶಿವಕಾಂತ ಬೇಣ್ಣೂರಕರ್, ಉದಯಕುಮಾರ್ ಸಾಗರ್, ಮಲ್ಲಿಕಾರ್ಜುನ್ ಬೇಣೂರಕರ್, ಬಸವರಾಜ್ ಚಿನ್ಮಳ್ಳಿ, ರಾಮಲಿಂಗ ಬಾನರ್, ದೇವೇಂದ್ರ ಅಣಕಲ್, ಹಣಮಂತ ಸಂಕನೂರ, ಜಗನ್ ಗೌಡ ಪಾಟೀಲ್, ಮಲ್ಲಿಕಾರ್ಜುನ ಬೋಮ್ಮನಳ್ಳಿಕರ್, ಜಗನ್ನಾಥ್ ಮುಡಬೂಳಕರ್, ದೇವಿಂದ್ರ ಯಾಬಾಳ, ನಾಮದೇವ ರಾಠೋಡ್, ಶರಣು ಡೋಣಗಾವ್, ಕರಣ ಅಲ್ಲೂರ್, ಜಗದೀಶ್ ಚವ್ಹಾಣ್, ಚಂದು ಜಾಧವ್, ಶರಣಪ್ಪ ನಾಶಿ, ನಿಂಗರೆಡ್ಡಿ ಗೌಡ, ಸೂರ್ಯಕಾಂತ ಪೂಜಾರಿ, ವಿಜಯಕುಮಾರ್, ಓಂಕಾರ ರೇಷ್ಮ, ನಾಗರಾಜ, ಮಹಾಂತೇಶ ಬೊಮ್ನಳ್ಳಿ, ವಿನ್ನುಕುಮಾರ, ರವಿಸಾಗರ, ಸೇರಿದಂತೆ ಅನೇಕ ಕಾಂಗ್ರೆಸ್ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ಸಿಗಲೆಂದು ನಾಗಾವಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ; ನೂರಾರು ತೆಂಗಿನಕಾಯಿ ಒಡೆದು ಯುವ ಕಾಂಗ್ರೆಸ್ ಪ್ರಾರ್ಥನೆ.

ಚಿತ್ತಾಪುರ: ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ಸಿಗಲಿ ಎಂದು ಹಾರೈಸಿ, ತಾಲ್ಲೂಕಿನ ಪ...