ಭಾನುವಾರ, ಏಪ್ರಿಲ್ 23, 2023

ಮುಸ್ಲಿಂರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ.

ಚಿತ್ತಾಪೂರ:  ಮುಸ್ಲಿಂ ಸಮುದಾಯದ ಹಿರಿಯರು ಮತ್ತು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಹಾಜಿ ಮಲನ್, ಖಸೀಂ ಸಾಹೇಬ್ ಬಾಬಾ ಅವರ ನೇತ್ರತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಸಾವಿರಾರು ಸಂಖ್ಯೆಯ ಮುಸ್ಲಿಂ ಜನರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಬಿಜೆಪಿ ಪಕ್ಷದ ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ
ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಮುಳುಗಿದೆ. ಮುಳುಗುವ ಹಡಗಿನಲ್ಲಿ ಪ್ರಯಾಣಿಕರು ಸಂಚಾರ ಮಾಡಿದರೇ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಚಿತ್ತಾಪುರ ಕ್ಷೇತ್ರದಲ್ಲಿ 2023ಕ್ಕೆ ಕಾಂಗ್ರೆಸ್‌ ಪಕ್ಷದ ಮುಳುಗಡೆ ಖಚಿತವಾಗಿದೆ ಎಂದರು.
ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಮಿಂಚಿನ ಸಂಚಾರ ನಡೆಸಿದ್ದಾರೆ. ಚಿತ್ತಾಪುರ ಕ್ಷೇತ್ರದ ಪ್ರತಿ ಹಳ್ಳಿಯ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಬೂತ್‌ ಮಟ್ಟದ ಸಭೆಗಳನ್ನ ಈಗಾಗಲೇ ನಡೆಸಿದ್ದಾರೆ. ಬೂತ್‌ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮೀಣ ಮತದಾರರ ವಿಶ್ವಾಸಗಳಿಸಲು ಹಗಲುರಾತ್ರಿ ಎನ್ನದೇ  ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮಾತನಾಡಿ ವಿಶೇಷವಾಗಿ ಮುಸ್ಲೀಂ ಯುವ ಕಾರ್ಯಕರ್ತರ, ಮತ್ತು ಮುಸ್ಲಿಂ ಸಮುದಾಯವರು ಇಷ್ಟೊಂದು ಸಾವಿರಾರು ಸಂಖ್ಯೆಯ ಪ್ರಮಾಣದಲ್ಲಿ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಹ ಆಗಿದೆ ಎಂದರು.ಇಷ್ಟೋಂದು ಪ್ರಮಾಣದಲ್ಲಿ ಜನರು  ಖಸೀಂ ಸಾಬ್  ಸಾಹೇಬ್  ಅವರ ರೂಪ್ ದಲ್ಲಿ ಬಂದು ನನಗೆ ದೇವರ ರೂಪದಲ್ಲಿ ಆರ್ಶೀವಾದ ಮಾಡಿದ್ದೀರಿ ಎಂದು ಅಂದುಕೊಂಡಿದ್ದೇನೆ. 

ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಏನು ಮಾಡಿದೆ. ನಾವು ಮನೆಯಲ್ಲಿ ಕುಳಿತುಗೊಂಡರು ನಾನು ಗೆಲುತ್ತೇವೆ ನಮಗೆ ಮುಸ್ಲೀಂ ಮತ ಬರುತ್ತೆ ಅಂದುಕೊಂಡಿದ್ದಾರೆ.  ಕಾಂಗ್ರೆಸ್ ಪಕ್ಷ ಭ್ರಮಯಲ್ಲಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಏನು ಮಾಡಿದ್ದಾರೆ ? ಎಲ್ಲಾ ಕಡೆ ವೇದಿಕೆಯಲ್ಲಿ ಹೇಳುತ್ತಾರೆ ಮುಸ್ಲಿಂ ಸಮುದಾಯದ ಓಟ್ ನಮಗೆ ಸಿಗುತ್ತೆ ಎಂದು ,ಇಂದು ಮುಸ್ಲಿಂ ಸಮುದಾಯ ಕೂಡ ಜಾಗೃತರಾಗಿದ್ದಾರೆ ಇವತ್ತು ಇಷ್ಟೋಂದು ಪ್ರಮಾಣದಲ್ಲಿ ನೀವು ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿದ್ದೆ ಕೆಡಿಸುತ್ತದೆ ಎಂದು ಹೇಳಿದರು. 

ಕೆಲ ಕಾಂಗ್ರೆಸ ಮುಂಖಡರು ನಿಮ್ಮ ಮನೆ ಬರುತ್ತಾರೆ, ದೊಡ್ಡ ದೊಡ್ಡ ಕನಸು ತೆಗದುಕೊಂಡು ಬರುತ್ತಾರೆ. ಹಣದ ಅಮಿಷ ತೊರಿಸುತ್ತಾರೆ, ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇವೆ ಎಂದು ಭರವಸೆ ನೀಡುತ್ತಾರೆ ಅದನ್ನು ನಂಬಬೇಡಿ ನಿಮ್ಮ ಮನೆಯನ್ನು ಹಾಳು ಮಾಡಿ, ಅವರು ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಅವರಿಗೆ ಸರಿಯಾಗಿ ಉತ್ತರ ನೀಡಿ ಇಷ್ಟು ದಿನಗಳು ನಮಗೆ ಏನೂ ಮಾಡಿರಿ ಎಂದು ಪ್ರಶ್ನಿಸಿ ಎಂದರು.

ಪಟ್ಟಣದಲ್ಲಿ ಬಹುದೊಡ್ಡ ಶಕ್ತಿ ಇರುವ ಹಾಜಿ ಮಾಲನ್ ಖಸೀಂ ಬಾಬಾ ಅವರು, ಬಿಜೆಪಿ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿಕೊಂಡು ಮತ್ತು ನನ್ನ ಸಮಾಜ ಸೇವೆಯನ್ನು ಮೆಚ್ಚಿಕೊಂಡು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ ನಮಗೆ ಚಿತ್ತಾಪುರ ಮತಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಕ್ಕಿದೆ ಅವರ ಅರ್ಶಿವಾದದಿಂದ ನಾವು 25 ಸಾವಿರ ಮತಗಳ ಅಂತರಗಳಿಂದ ಬಿಜೆಪಿ ಗೆಲವು ಸಾಧಿಸಲಿದ್ದೆವೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿನ ಬಿಜೆಪಿ ತಾಲೂಕ ಅಧ್ಯಕ್ಷ ನೀಲಕಂಠರಾವ ಪಾಟೀಲ, ನಿಂಗಾರೆಡ್ಢಿ ಪರಸರೆಡ್ಡಿ, ಶಶಿಧರ ಸುಗೂರ, ಮುಕುಂದ ದೇಶಪಾಂಡೆ,ನಾಗರಾಜ ಬಂಕಲಗಿ, ರವೀಂದ್ರ ಸಜ್ಜನಶೆಟ್ಟಿ, ಶಂಕರ ಚವ್ಹಾಣ, ಹಾಜಿ ಮಲಂಗ್ ಬಾಬಾ, ಶರಣು ಬಾಬಾ, ಪ್ರಭು ಗಂಗಾಣಿ, ಮಹ್ಮದ ಯುನುಸ್, ಸೇರಿದಂತೆ ಇತರರು ಇದ್ದರು.

ಸೋಮವಾರ, ಏಪ್ರಿಲ್ 17, 2023

ಭ್ರಷ್ಟ ಅಧಿಕಾರಿಗಳಿಗೆ ಜೈಲಿಗೆ ಹಾಕಿಸುವೆ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ಕೆಕೆಆರ್ ಡಿಬಿಯಲ್ಲಿ ಅವ್ಯಾಹತವಾದ ಭ್ರಷ್ಟಾಚಾರ ನಡೆದಿದೆ. ಜನ ಸಾಮಾನ್ಯರ ದುಡ್ಡು ಲೂಟಿ ಮಾಡಿದ ಬ್ರಷ್ಟ ಅಧಿಕಾರಿಗಳನ್ನು ನಾವು ಅಧಿಕಾರಕ್ಕೆ ಬಂದ ನಂತರ ಜೈಲಿಗೆ ಕಳಿಸುತ್ತೇವೆ ಎಂದು ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪ್ರಿಯಾಂಕ್ ಖರ್ಗೆ ಅವರ  ನಾಮಪತ್ರ ಸಲ್ಲಿಕೆಯಾ ಬೃಹತ ಜನ ಆಶೀರ್ವಾದ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷ ಎಷ್ಟೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ. ನಮ್ಮಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದ್ದಾರೆ. ಬಿಜೆಪಿಯಲ್ಲಿ ಯಾರು ಇದ್ದಾರೆ? ಅಲ್ಲೇ ಇದ್ದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಯನ್ನು ಕೀಳಾಗಿ ನಡೆಸಿಕೊಂಡಿದ್ದರಿಂದ ಅವರಿಬ್ಬರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಪಾಪ, ಯಡಿಯೂರಪ್ಪಗೆ ಕಣ್ಣೀರು ಹಾಕಿಸಿ‌ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಯಿತು. ಹೀಗಾಗಿ ಯಾವ ನಾಯಕರು ಅಲ್ಲಿದ್ದಾರೆ! ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ರೈತರ ರಸಗೊಬ್ಬರ, ಪೆಟ್ರೋಲ್, ಅಡುಗೆ ಅನಿಲ‌ ಬೆಲೆ ದುಬಾರಿಯಾಗಿದೆ. ಪ್ರತಿ‌ ಕುಟುಂಬದ ಯಜಮಾನನಿಗೆ ಸಂಸಾರದ ತೊಂದರೆ ನೀಗಿಸಲು ನಮ್ಮ ಪಕ್ಷ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ರೂ‌,2000 ನೀಡುತ್ತೇವೆ. 200 ಯೂನಿಟ್ ವಿದ್ಯುತ್ ನ್ನು ಉಚಿತವಾಗಿ ಗೃಹಜ್ಯೋತಿ ಯೋಜನೆಯಡಿಯಲ್ಲಿ ನೀಡುತ್ತೇವೆ. ನಿರುದ್ಯೋಗಿ ಪದವಿಧರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಉದ್ಯೋಗ ಸಿಗುವವರೆಗೆ ಅಂತಹ ಯುವಕರಿಗೆ ಯುವ ನಿಧಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ರೂ, 3000 ಹಾಗೂ ಡಿಪ್ಲೋಮಾ ಮುಗಿದವರಿಗೆ ರೂ,1500 ನೀಡುತ್ತೇವೆ.

ಪ್ರತಿ ಕುಟುಂಬಕ್ಕೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಉಚಿತ ನೀಡುತ್ತೇವೆ. ಈ ನಾಲ್ಕು ಯೋಜನೆಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಾಗಿವೆ. ಈ ನಾಲ್ಕು ಯೋಜನೆಯಲ್ಲಿ ಮೂರಕ್ಕೆ ವಿರೋಧಿಸುವ ಬಿಜೆಪಿ ಅದರಲ್ಲೂ ಚಿತ್ತಾಪುರದ‌ ಬಿಜೆಪಿ ನಾಯಕರು ಅನ್ನಭಾಗ್ಯಕ್ಕೆ ಒಪ್ಪಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿಗರಿಗೆ ಸಮಾಜ ಕಲ್ಯಾಣ ಬೇಕಿಲ್ಲ ಸ್ವಯಂ ಕಲ್ಯಾಣ ಪ್ರಮುಖವಾಗಿದೆ. ಚಿತ್ತಾಪುರದಲ್ಲಿ‌ ಬಿಜೆಪಿ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಯೋಚಿಸಿದಾಗ ಲೂಟಿಗೆ ಪರೋಕ್ಷವಾಗಿ ಬೆಂಬಲವಿದೆ ಎಂದು ಒಪ್ಪಿಕೊಂಡಂತಾಗುತ್ತದೆ. ಬಡವರಿಗೆ ಹಂಚಲು ಉದ್ದೇಶಿಸುವ ಅಕ್ಕಿ ಹಾಗೂ ಹಾಲಿನ‌ ಪೌಡರ ಕದಿಯುವವರಿಗೆ ಟಿಕೇಟ್ ನೀಡಲಾಗಿದೆ. ಇದು ನಾನು ಹೇಳುತ್ತಿಲ್ಲ‌ ಇದನ್ನು ಯಾದಗಿರಿಯ ಕೋರ್ಟ್ ಹೇಳಿದೆ. ನಿಮಗೆ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ‌ ಮುಖ್ಯವಲ್ಲ. ನಿಮ್ಮ ಚುನಾವಣೆ ಹೋರಾಟ ಮೋದಿ, ಶಾ ಹಾಗೂ ಆರ್ ಎಸ್ ಎಸ್ ವಿರುದ್ದವಿರಬೇಕು ಎಂದು ಮನವಿ ಮಾಡಿದರು.

ಚಿತ್ತಾಪುರ ಹಿತ‌ಕಾಪಾಡುವುದು, ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು,‌ ಮಹಿಳೆಯರಿಗೆ ಸುರಕ್ಷತೆಯ ನೀಡುವುದಕ್ಕಾಗಿ ಈ ತಾಲೂಕಿನ ಮೊಮ್ಮಗನಾದ ನನ್ನಿಂದ ಮಾತ್ರ ಸಾಧ್ಯ ಯಾವ ಬಿಜೆಪಿ ಅಭ್ಯರ್ಥಿಯಿಂದ ಸಾಧ್ಯವಿಲ್ಲ ಹಾಗಾಗಿ ನನಗೆ ಆಶೀರ್ವಾದ ಮಾಡಿ ಎಂದು ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ತಾಲೂಕಿನಲ್ಲಿ ಪ್ರಬುದ್ಧ ಸಮಾಜ‌ ನಿರ್ಮಾಣ‌ ಮಾಡುವ ಜವಾಬ್ದಾರಿ ನನಗೆ‌ ಬಿಡಿ. ಹೋದ ಸಲವೂ ನನಗೆ ಆರಿಸಿ ತಂದಿದ್ದೀರಿ ಆದರೆ ಪಗಾರ ಕಡಿಮೆ ಮಾಡಿದ್ದೀರಿ ಆದರೆ ಈ ಸಲ ಜಾಸ್ತಿ ಪಗಾರ ನೀಡಿ. ಕನಿಷ್ಠ 25,000 ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿ. ನಿಮ್ಮ ಹದಿನೈದು ದಿನ ನಿಮ್ಮ ಶ್ರಮ ನೀಡಿ ಆಮೇಲೆ ಮುಂದಿನ ಐದು ವರ್ಷದ ಅವಧಿ ನಿಮ್ಮ ಕಾಳಜಿ ನನಗೆ ಬಿಡಿ. ನಿಮ್ಮ ಅಭಿವೃದ್ದಿ ನನಗೆ ಸೇರಿದ್ದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ 500 ಕ್ಕೂ ಅಧಿಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷವನ್ನು ಹಲವಾರು ಕಾರ್ಯಕರ್ತರು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿಗೌಡ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಮರಗೋಳ, ಶಿವಾನಂದ ಪಾಟೀಲ್, ರೇವಣಸಿದ್ದಪ್ಪ ಮಾಸ್ಟರ್, ಬಸನಗೌಡ ಸಂಕನೂರ, ನೀಲಕಂಠರಾವ್ ಮೂಲಗೆ, ಎಸ್ ಬಿ ಕಾಮರೆಡ್ಡಿ, ಮಲ್ಲಿಕಾರ್ಜುನ ಕಾಳಗಿ, ಶೃತಿ ಪೂಜಾರಿ, ಮೈಮೊದ್ ಸಾಹೇಬ, ಶ್ರೀನಿವಾಸ ಸಾಗರ, ಅಜೀಜ್ ಸೇಠ, ಲಚ್ಚಪ್ಪ ಜಮಾದಾರ್, ರಾಜು ಕಪನೂರ್, ಚಂದ್ರಶೇಖರ ಕಾಶಿ, ಸಿದ್ದುಗೌಡ ಪಾಟೀಲ್, ಮುಕ್ತಾರ ಪಟೇಲ್, ಸೇರಿದಂತೆ ಇತರರು ಇದ್ದರು.


ಗುರುವಾರ, ಏಪ್ರಿಲ್ 13, 2023

ಕೆಪಿಸಿಸಿ ಅಧ್ಯಕ್ಷರಿಂದ ಬಿ ಫಾರಂ ಸ್ವೀಕರಿಸಿದ ಪ್ರಿಯಾಂಕ ಖರ್ಗೆ.

ಬೆಂಗಳೂರ: 2023ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಿಂದ ಬಿ ಫಾರಂ ಅನ್ನು ಸ್ವೀಕರಿಸಿದರು.

ನಂತರ ಮಾತನಾಡಿದ ಪ್ರಿಯಾಂಕ ಖರ್ಗೆ ಅವರು ಚಿತ್ತಾಪುರ ಜನತೆಯ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸದಾ ನನ್ನ ಬೆನ್ನೆಲುಬಾಗಿ ನಿಂತಿರುವ ಚಿತ್ತಾಪುರದ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಚಿತ್ತಾಪುರದ ಅಭಿವೃದ್ಧಿಯ ಹಾದಿಯಲ್ಲಿ ಜೊತೆಯಾಗಿರುವ ಚಿತ್ತಾಪುರದ ಪ್ರಜ್ಞಾವಂತ ಮಹಾಜನತೆ ಮತ್ತೊಮ್ಮೆ ನಿಮ್ಮ ಅತ್ಯಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮೂಲಕ ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ನೀಡಬೇಕು ಮತಕ್ಷೇತ್ರದ ಜನರಲ್ಲಿ ವಿನಂತಿಸಿಕೊಂಡರು.

ಚಿತ್ತಾಪೂರಲ್ಲಿ ಕಮಲ ಅರಳಿಸುವುದು ಬಿಜೆಪಿ ಮುಖ್ಯ ಉದ್ದೇಶ.

ಚಿತ್ತಾಪೂರ: ವಿಧಾನ ಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸಿ ಚಿತ್ತಾಪುರನಲ್ಲಿ ಕಮಲ ಅರಳಿಸುವುದು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಮುಕುಂದ ದೇಶಪಾಂಡೆ ಹೇಳಿದರು.

ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಬಿಜೆಪಿಯ ಎಲ್ಲಾ ಅಕ್ಷಾಂಕ್ಷಿಗಳನ್ನು ಕರೆದು ಎಲ್ಲಾರನ್ನು ಸಮಾಧಾನ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ ಈ ಚುನಾವಣೆಯಲ್ಲಿ ಶತಯಗತಯಾ ಬಿಜೆಪಿಯನ್ನು ಗೆಲ್ಲಲೇಬೇಕು ಹೀಗಾಗಿ ವಿಭಿನ್ನ ರೀತಿಯಾಗಿ ಪ್ರಚಾರವನ್ನು ಪಕ್ಷ ಸಂಘಟನೆ ಮಾಡಲು ಸಿದ್ಧವಾಗಿದೆ. ಭಾರತೀಯ ಜನತಾ ಪಕ್ಷ ಚುನಾವಣೆಗೆ ಅಷ್ಟೇ ಸಭೆ ಪ್ರಚಾರ ಮಾಡುವುದಿಲ್ಲ.  ನಮ್ಮ ಬಿಜೆಪಿ ಸರ್ಕಾರದ ಉದ್ದೇಶ ಸಮಾಜದ ಕಟ್ಟಕಡೆಯ ಮನುಷ್ಯಗೂ ನಮ್ಮ ಸರ್ಕಾರದ ಯೋಜನೆಗಳನ್ನು ಕಲ್ಪಿಸುವ ಉದ್ದೇಶ ನಮ್ಮ ಪ್ರಧಾನಿ ಮತ್ತು ಪಕ್ಷದಾಗಿದೆ ಎಂದರು.

ನಮ್ಮ ತಾಲೂಕಿನಲ್ಲಿ ಬಂಡಾಯ ಅಂತ ಇಲ್ಲ. ಇದ್ದರೆ ಅವರನ್ನು ನಮ್ಮ ರಾಜ್ಯ ನಾಯಕರು ಅಸಮಾಧಾನ ಇರುವರರನ್ನು ಸಮಾಧಾನ ಪಡೆಸುವ ಕೆಲಸ ಮಾಡುತ್ತಾರೆ ಯಾರು ಸಹ ಪಕ್ಷವನ್ನು ತೊರೆಯುವ ಕೆಲಸ ಮಾಡಲ್ಲ ಎಂಬ ವಿಶ್ವಾಸವಿದೆ. ಹಾಗೂ ಝಾರ್ಖಂಡನ್ ರಾಜ್ಯ ಸಭೆ ಸದಸ್ಯ ಚಿತ್ತಾಪೂರಗೆ ಮತಕ್ಷೇತ್ರದ ಉಸ್ತುವಾರಿಯಾಗಿ ಅದಿತ್ಯ ಪ್ರಸಾದ  ಸಾಹು ಬರುತ್ತಿದ್ದಾರೆ ಎಂದು ಹೇಳಿದರು. 

ಏಪ್ರಿಲ್‍,೧೪ ಬೆಳಿಗ್ಗೆ ೧೧ ಗಂಟೆಗೆ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ವಿಧಾನ ಸಭೆ ಚುನಾವಣೆ ನಿಮಿತ್ಯ ತಾಲೂಕಿನ ೨೫೭ ಬೂತ್ ಗಳ ಬಿಜೆಪಿ ಕಾಯಕರ್ತರ ಸಭೆಯನ್ನು ಕರೆಯಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು

-ಮುಕುಂದ ದೇಶಪಾಂಡೆ.
ಬಿಜೆಪಿ ಚುನಾವಣೆ ಉಸ್ತುವಾರಿ ಚಿತ್ತಾಪುರ.

ಚಿತ್ತಾಪೂರ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿ ಮೊದಲು ನನ್ನನ್ನೂ ಅಭ್ಯರ್ಥಿಯಾಗಿ ಘೋಷಿಸಿದ ಬಿಜೆಪಿ ಕೇಂದ್ರ ಮತ್ತು ರಾಜ್ಯ ಮಟ್ಟದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಹೇಳಿ ನಂತರ ಮಾತನಾಡಿ ಬಿಜೆಪಿಯಲ್ಲಿ ಟಿಮ್ ವರ್ಕ್ ನಡೆದಿದೆ. ಪ್ರತಿಯೊಂದೂ ಬೂತ್ ಮಟ್ಟದಿಂದ ಹಿಡಿದು ಕಾರ್ಯಕರ್ತರ ಭರವಸೆಯಿದೆ ಈ ಬಾರಿ ನಾವು ೨೦ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಬಿಜೆಪಿಯಲ್ಲಿ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲ ನಮ್ಮ ಪಕ್ಷದಲ್ಲಿ ನಾವು ಅಣ್ಣತಮ್ಮ ಹಾಗೆ ನಡೆದುಕೊಂಡಿದ್ದೇವೆ. ಮುಂದೆ ಸಹ ನಮ್ಮ ಗುರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವ ಗುರಿಯಾಗಿದೆ. ವಿವಿಧ ಗ್ರಾಮಗಳಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ  ನೀಲಕಂಠರಾವ್ ಪಾಟೀಲ್, ಮಲ್ಲಿಕಾರ್ಜುನ ಪೂಜಾರಿ, ಮಲ್ಲಿಕಾರ್ಜುನ ಎಮ್ಮೆನೋರ, ನಾಗರಾಜ ಹೂಗಾರ, ಆನಂದ ಪಾಟೀಲ, ಸುರೇಶ ರಾಠೋಡ್, ರಾಮದಾಸ ಚವ್ಹಾಣ್, ಮಹೇಶ ಬೆಟಗೇರಿ, ಮಹೇಂದ್ರ ಕೋರಿ, ಸೇರಿದಂತೆ ಇತರರು ಇದ್ದರು.

ಭಾನುವಾರ, ಏಪ್ರಿಲ್ 9, 2023

ಪಾಶಾಮಿಯ್ಯಾ ಖುರೇಷಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ.

ಚಿತ್ತಾಪುರ: ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಾಶಾಮಿಯ್ಯಾ ಖುರೇಷಿ ಅವರು ಶನಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಮಾರು 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದು ಪಕ್ಷದ ಸಂಘಟನೆಯಲ್ಲಿ ನಮ್ಮ ಸಮಾಜದವರನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸಿದ್ದೇನೆ ಅದರಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಪ್ರಿಯಾಂಕ್ ಖರ್ಗೆ ಅವರನ್ನು ಗೆಲ್ಲಿಸಲು ನಮ್ಮ ಸಮಾಜದವರನ್ನು ಒಟ್ಟಾರೆಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಕೂಲಿ ಕಾರ್ಮಿಕತರಂತೆ ದುಡಿದು ಅಧಿಕಾರಕ್ಕೆ ತಂದಿದ್ದೇವೆ ಆದರೆ ನಮ್ಮನ್ನು ಹಾಗೂ ನಮ್ಮ ಮುಸ್ಲಿಂ ಸಮಾಜಕ್ಕೆ ಕಡೆಗಣಿಸುತ್ತಾ ಬಂದಿದ್ದಾರೆ ಹೀಗಾಗಿ ಕಾಂಗ್ರೆಸ್‌ನಲ್ಲಿ ದುಡಿದವರಿಗೆ ಬೆಲೆಯಿಲ್ಲ ಫೋಜು ಹೊಡೆಯುವವರಿಗೆ ಜಾಸ್ತಿ ಗೌರವವಿದೆ ಎಂದು ಹೇಳಿದರು.

ಕಳೆದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಪರವಾಗಿ ಪುರಸಭೆಯ ವ್ಯಾಪ್ತಿಯ ನನ್ನ 12ನೇ ವಾರ್ಡಿನಲ್ಲಿ ಒಂದು ಬಾರಿ 17೦೦ ಮತ್ತು ಇನ್ನೊಂದು ಬಾರಿ 15೦೦ ಹೆಚ್ಚಿನ ಮತಗಳನ್ನು ಪಡೆಯಲು ಶ್ರಮಿಸಿದ್ದೇನೆ, ಇಷ್ಟಾದರೂ ಸಹಿತ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ನನಗೆ ಮತ್ತು ನಮ್ಮ ಸಮಾಜಕ್ಕೆ ಯಾವುದೇ ಕೆಲಸ ಕಾರ್ಯಗಳು ನೀಡದೆ ಅನ್ಯಾಯ ಮಾಡಿದ್ದಾರೆ ಆ ಕಾರಣಕ್ಕಾಗಿ ಅಸಮಾಧಾನಗೊಂಡು ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೂ ಬೆಂಗಳೂರಿನಲ್ಲಿ ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ ಎಂದು ಪಾಶಾಮಿಯ್ಯಾ ಖುರೇಷಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ಸಮಾಜದ ಮತ್ತು ನನ್ನ ವಾರ್ಡಿನ ಜನರೊಂದಿಗೆ ಚರ್ಚಿಸಿ ಅವರ ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಬಿಜೆಪಿ, ಜೆಡಿಎಸ್ ಎನ್ನದೇ ನಮ್ಮ ಸಮಾಜದ ಅಭಿವೃದ್ದಿಗಾಗಿ ನಮ್ಮ ಸಮಾಜದ ಪರವಾಗಿ ಯಾವ ಪಕ್ಷ ನಮ್ಮ ಜೊತೆಗೆ ನಿಲ್ಲುತ್ತದೆಯೋ ಆ ಪಕ್ಷಕ್ಕೆ ನನ್ನ ಮತ್ತು ನಮ್ಮ ಸಮಾಜ ಬೆಂಬಲ ಸೂಚಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು ಜೊತೆಗೆ ಮಹಿಬೂಬ್ ಖುರೇಷಿ ಇದ್ದರು.

ಸೋಮವಾರ, ಮಾರ್ಚ್ 27, 2023

ಮೀಸಲಾತಿ ಜಾರಿ ಬಿಜೆಪಿ ಸರಕಾರದ ದೊಡ್ಡ ಸಾಧನೆ.


ಚಿತ್ತಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ಪ್ರಕಟಿಸಿರುವುದನ್ನು ಹಾಗೂ ವೀರಶೈವ ಲಿಂಗಾಯತ ಹಾಗೂ ಒಳಪಂಗಡಗಳು ಮತ್ತು ಒಕ್ಕಲಿಗರು ಹಾಗೂ ಒಳ ಪಂಗಡಗಳಿಗೆ ಮೀಸಲಾತಿ ಸೌಲಭ್ಯ ಘೋಷಣೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಬಿಜೆಪಿ ಸರಕಾರದ ದೊಡ್ಡ ಸಾಧನೆಯಾಗಿದೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರ ಮೂವತ್ತು ವರ್ಷಗಳಿಂದಲೂ ಇದೆ ಕಾಂಗ್ರೆಸ್ ಸರಕಾರ ಅಶ್ವಾಸನೆ ಕೊಡುತ್ತಾ ಮೂಗಿಗೆ ತುಪ್ಪ ಸವರಿಕೊಂಡು ಬಂದಿತ್ತು. ಆದರೆ ಇಂದು ಕಾಂಗ್ರೆಸ್ ಸರಕಾರದಿಂದ ಆಗಲಾರದ ಒಳ ಮೀಸಲಾತಿ ಜಾರಿಗೆ ತರುವ ಕೆಲಸ ಬಿಜೆಪಿ ಸರಕಾರ ಮಾಡಿ ತೋರಿಸಿದೆ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿಯ ಒಳಗಿರುವ ಅನೇಕ ಉಪಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯಿಲ್ಲದೇ ಎಲ್ಲರಿಗೂ ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ರಾಜ್ಯದಲ್ಲಿ ಜನಸಂಖ್ಯೆಗೆ ಆಧಾರವಾಗಿ ಪರಿಶಿಷ್ಟ ಜಾತಿಯಲ್ಲೇ ಇರುವ ಉಪ ಜಾತಿಗಳನ್ನು ವರ್ಗೀಕರಿಸಿ ಮೀಸಲಾತಿ ನೀಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದ್ದು ಅದಕ್ಕೆ ಸಂಬಂಧಿಸಿದಂತ  ತಕರಾರು ಚಳುವಳಿಗಳು, ಪ್ರತಿಭಟನೆಗಳು ಮತ್ತು ಸತ್ಯಾಗ್ರಹಗಳು ನಡೆದಿದ್ದವು ಎಂದರು.
 
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವುದು ಸವಾಲಿನ ಕೆಲಸವಾಗಿತ್ತು. ಸದಾಶಿವ ಆಯೋಗದ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವು ಸಮರ್ಥವಾಗಿ ಜಾರಿ ಮಾಡಿದ್ದು, ಪರಿಶಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಎಡಗೈ ಸಮುದಾಯಕ್ಕೆ ಶೇ.೬ ರಷ್ಟು, ಬಲಗೈ ಸಮುದಾಯಕ್ಕೆ ಶೇ.೫.೫ ರಷ್ಟು, ಭೋವಿ, ಬಂಜಾರಾ ಸಮುದಾಯಗಳಿಗೆ ಶೇ.೪.೫ ಹಾಗೂ ಅಲೆಮಾರಿ ಸಣ್ಣ ಸಮುದಾಯಗಳಿಗೆ ಶೇ.೧ ರಷ್ಟು ಮೀಸಲು ಜಾರಿ ಮಾಡಿರುವುದು ಶ್ಲಾಘನೀಯ ಎಂದರು

೨ಸಿ ಅಡಿ ಒಕ್ಕಲಿಗರಿಗೆ ಶೇ.೬ ರಷ್ಟು ಮೀಸಲಾತಿ ಹಾಗೂ ೨ಡಿ ಅಡಿ ಲಿಂಗಾಯತ ಸಮುದಾಯಕ್ಕೆ ಶೇ.೭ ರಷ್ಟು ಮೀಸಲಾತಿ ನೀಡುವ ಮೂಲಕ ಈ ಸಮಾಜವು ಎರಡು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸರಕಾರ ತಾರ್ಕಿಕ ಅಂತ್ಯವನ್ನು ನೀಡಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಮೀಸಲಾತಿ ಸೌಲಭ್ಯವು ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.                                                                                                            “ಸುಮಾರು ೩೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ, ಬಹುದಿನಗಳ ಬೇಡಿಕೆ ಈಡೇರಿಸಿದ ರಾಜ್ಯ ಸರಕಾರಕ್ಕೆ ಧನ್ಯವಾದಗಳು”

-ದೀಪಕ್ ಹೊಸ್ಸುರಕರ್ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷರು.

  “ಪರಿಶಿಷ್ಟ ಜಾತಿಯ ಮೀಸಲಾತಿ ವಿಚಾರವನ್ನು ಚುನಾವಣೆ ಬಂದಾಗ ಮಾತ್ರ ಪ್ರಸ್ತಾಪಿಸಿ ನಂತರ ಮರೆತು ಬಿಡುತ್ತಿದ್ದ ಕಾಂಗ್ರೆಸ್ ದಶಕಗಳ ಕಾಲದಿಂದ ಮೀಸಲಾತಿ ಹೆಸರಿನಲ್ಲಿ ಮೋಸ ಮಾಡುತ್ತಲೇ ಬಂದಿತ್ತು. ಆದರೆ ಬಿಜೆಪಿ ಸರಕಾರ ದಿಟ್ಟ ಹೆಜ್ಜೆ ಇಡುವ ಮೂಲಕ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಜಾರಿ ಮಾಡುವ ಮೂಲಕ ನ್ಯಾಯ ದೊರಕಿಸಿ ಕೊಟ್ಟಿದೆ.”

-ಅಯ್ಯಪ್ಪ ರಾಮತೀರ್ಥ ಬಿಜೆಪಿ ಹಾಲು ಪ್ರಕೋಷ್ಠದ ಜಿಲ್ಲಾ ಸಂಚಾಲಕರು.

ಸರ್ಕಾರಿ ಕಾರ್ಯಕ್ರಮದಲ್ಲಿ ಸೀರೆ ವಿತರಣೆ: ಅರವಿಂದ್ ಆಕ್ರೋಶ.

ಚಿತ್ತಾಪುರ: ಮತಕ್ಷೇತ್ರದ ವಿವಿಧ ಇಲಾಖೆಯ ಕಾಮಗಾರಿಗಳ ಅಡಿಕಲ್ಲು ಉದ್ಘಾಟನೆ ಹಾಗೂ ಹಕ್ಕು ಪತ್ರ ವಿತರಣೆ ಈ ಸರ್ಕಾರಿ ಕಾರ್ಯಕ್ರಮದಲ್ಲಿ ಆಶಾ‌ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ವಿತರಣೆ ಮಾಡಿ ಶಾಸಕ ಪ್ರಿಯಾಂಕ್ ಖರ್ಗೆ  ನಿಯಮ ಉಲ್ಲಂಘಿಸಿದರೆ ಎಂದು ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್.19 ರಂದು ಪಟ್ಟಣದಲ್ಲಿ ದಿ. ವಾಲ್ಮೀಕಿ ನಾಯಕ ಅವರ ಪುಣ್ಯತಿಥಿ ಅಂಗವಾಗಿ ನಮ್ಮ ಸೋಹದರರಾದ ವಿಠ್ಠಲ್ ನಾಯಕ್ ಅವರು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದ್ರೆ ಚುನಾವಣೆ ಹತ್ತಿರ ಬರುತ್ತಿದೆ ಎಂದು ಕುಂಟು ನೆಪವೊಡ್ಡಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚಿತ್ತಾಪುರ ಆಗಮಿಸಿ ಬಿಜೆಪಿ ಮುಖಂಡರನ್ನು ಕರೆಸಿ ಉಡಿ ತುಂಬುವ ಕಾರ್ಯಕ್ರಮ ಮಾಡುವಂತಿಲ್ಲ ಎಂದು ತಡೆಹಿಡಿದ್ರು ನಾವು ಕಾರ್ಯಕ್ರಮ ರದ್ದು ಮಾಡಿವಿ ಆದ್ರೆ ನಿನ್ನೆ ಸರ್ಕಾರಿ ಕಾರ್ಯಕ್ರಮದಲ್ಲಿ ಮತದಾರರ ಮತಗಳನ್ನು ಸೆಳೆಯಲು ಸೀರೆ ವಿತರಣೆ ಮಾಡಿದ್ದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಇರಲಿಲ್ವ? ಹಾಗೂ ತಾಲೂಕಿನ ಅಧಿಕಾರಿಗಳು ಸಹ ಇದ್ದರೂ ಅವರ ಮುಂದೆ ಶಾಸಕರು ಸರಕಾರಿ ಕಾರ್ಯಕ್ರಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ಹಂಚಿಕೆ ಮಾಡಿರುವುದು ಖಂಡನೀಯ ಕೂಡಲೇ ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಪ್ರಿಯಾಂಕ ಖರ್ಗೆ ಸೀರೆ ವಿತರಣೆ.

ಇಷ್ಟು ದಿನ ಬಿಜೆಪಿ ಸರ್ಕಾರ ಅನುದಾನವನ್ನೇ ಕೊಡ್ತಿಲ್ಲ ಅಂತ ಸುಳ್ಳು ಹೇಳುತ್ತಿದ್ದ ಶಾಸಕರು ಮೊನ್ನೆ ತಾನೆ ಚಿತ್ತಾಪುರಕ್ಕೆ ಆಗಮಿಸಿ 173 ಕೋಟಿ ರೂಪಾಯಿಯ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಶಾಸಕರಾಗಿ 10 ವರ್ಷ ಕಳೆದರೂ ತಾಲೂಕಿನ ಮಹಿಳೆಯರ ಘನತೆ ಹಾಗೂ ಗೌರವದ ನೆನಪಾಗಿರಲಿಲ್ಲ. ಈಗ ಎಲೆಕ್ಷನ್ ಹತ್ತಿರ ಬಂದ ಕೂಡಲೇ, ತಾಲೂಕಿನ ಹಳ್ಳಿಗಳಲ್ಲಿ ನೈರ್ಮಲ್ಯ ಶೌಚಾಲಯ ನಿರ್ಮಿಸುವ ಭರವಸೆ ನೀಡುತ್ತಿದ್ದಾರೆ ಇದಕ್ಕಾಗಿ ಶಂಕು ಸ್ಥಾಪನೆಯನ್ನು ನೆರವೇರಿಸಿರುವುದಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಇದು ಮಹಿಳೆಯರಿಗೆ ಮೋಸ ಮಾಡುವ ಕುತಂತ್ರವಾಗಿದೆಯೇ ಹೊರತು, ಬೇರೇನೂ ಅಲ್ಲ. ಇವರು ಘೋಷಿಸಿರುವ ನೈರ್ಮಲ್ಯ ಶೌಚಾಲಯ ಎಲ್ಲಿ ನಿರ್ಮಾಣವಾಗುತ್ತೆ? ಇದಕ್ಕಾಗಿ ಗ್ರಾ.ಪಂ ಯಾವ ಜಾಗ ಮೀಸಲಿರಿಸಿದೆ? ಎಂಬ ಯಾವ ಮಾಹಿತಿಯೂ ಆಯಾ ಗ್ರಾ.ಪಂ ಸದಸ್ಯರಿಗಾಗಲಿ ಅಥವಾ ಅಲ್ಲಿನ ಪಿಡಿಓ ಗಳಿಗಾಗಲಿ ಇಲ್ಲ ಎಂದು ಹೇಳಿದರು.

2014 ರಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಬಸವ ಭವನ ನಿರ್ಮಿಸುವುದಾಗಿ ಘೋಷಿಸಿದ್ರು 50 ಲಕ್ಷ ರೂ.ಗಳನ್ನು ಕಡಿತಗೊಳಿಸಿ, ಕೇವಲ 50 ಲಕ್ಷ ರೂ.ಗಳಲ್ಲಿ ಬಸವ ಭವನ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಹಾಗಾದ್ರೆ, ಇನ್ನು 50 ಲಕ್ಷ ರೂ. ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು.

ಕಳೆದ 10 ವರ್ಷಗಳಿಂದ ಇಲ್ಲಿನ ಶಾಸಕರು ಎಂತಹ ಬೇಜವಾಬ್ದಾರಿ ಮನುಷ್ಯ ಎಂಬುದು ಚಿತ್ತಾಪುರದ ಜನತೆಗೆ ತಿಳಿದಿದೆ. ಎಲೆಕ್ಷನ್ ಸಮಯದಲ್ಲು ಬಂದು ಮೂಗಿಗೆ ತುಪ್ಪ ಸವರುವ ಇಂತಹ ಲೂಟಿಕೋರರನ್ನು ಇಲ್ಲಿನ ಜನರು ನಂಬುವುದಿಲ್ಲ.ನಿನ್ನೆ ಶಂಕುಸ್ಥಾಪನೆ ನಡೆಸಿದ ಎಲ್ಲಾ ಕಾಮಗಾರಿಗಳು ಶಾಸಕರ ಮತ್ತು ಅವರ ಚೇಲಾಗಳ ಜೇಬು ತುಂಬಿಸಿ, ಆ ಹಣದಲ್ಲಿ ಎಲೆಕ್ಷನ್ ಮಾಡುವುದಕ್ಕಾಗಿ ಮಾತ್ರವೇ ಎಂಬುದು ಜನರಿಗೆ ತಿಳಿದಿದೆ.

ಈ ಸದಾಶಿವ ನಗರದ ಶಾಸಕರಿಗೆ ಎಲೆಕ್ಷನ್ ಬಂದಾಗ ಮಾತ್ರ ಚಿತ್ತಾಪುರ ಹಾಗೂ ಚಿತ್ತಾಪುರದ ಅಭಿವೃದ್ಧಿ ನೆನಪಾಗುತ್ತೆ. ಇನ್ನುಳಿದ ಸಂದರ್ಭದಲ್ಲಿ ಚಿತ್ತಾಪುರಕ್ಕೆ ಬಂದ ಅನುದಾನವನ್ನು ಲೂಟಿ ಹೊಡೆಯುವುದೇ ಇವರ ಕಾಯಕವಾಗಿರುತ್ತೆ. ಈ ಕಮೀಷನ್ ಖರ್ಗೆಯ ಭ್ರಷ್ಟಾಚಾರದಿಂದ ಚಿತ್ತಾಪುರದ ರಸ್ತೆಗಳ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲೂರ್ ಬಿ ಹಾಗೂ ಇವಣಿ ರಸ್ತೆಗಳು ಇವರ ಕಮೀಷನ್ ದಾಹಕ್ಕೆ ನಿರ್ಮಾಣವಾದ ಕೆಲವೇ ತಿಂಗಳುಗಳಲ್ಲಿ ಕಿತ್ತು ಹೋಗಿವೆ.

ಇಂತಹ ಭ್ರಷ್ಟ ಹಾಗೂ ಕಮೀಷನ್ ದಾಹಿಯನ್ನು ಸೋಲಿಸುವುದೇ ಚಿತ್ತಾಪುರದ ಜನತೆಯ ಗುರಿಯಾಗಿದೆ. ಕೇವಲ ಅಭಿವೃದ್ಧಿ ಎಂಬುದನ್ನು ತಮ್ಮ ಸಾಮಾಜಿಕ ಜಾಲತಾಣಗಳಿಗೆ ಸೀಮಿತಗೊಳಿಸಿದ ಇಂತಹ ಭ್ರಷ್ಟರನ್ನು ಸೋಲಿಸಿ, ಚಿತ್ತಾಪುರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಗುರಿಯಾಗಿದೆ ಎಂದರು ತಿಳಿಸಿದ್ದಾರೆ.

ಶುಕ್ರವಾರ, ಮಾರ್ಚ್ 24, 2023

ಈಡಿಗ ಸಮಾಜದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ.

ಚಿತ್ತಾಪುರ:ತಾಲೂಕು ಆರ್ಯ ಈಡಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ವಇಚ್ಛೆಯಿಂದ ನಾನು ರಾಜೀನಾಮೆ ನೀಡಿದ್ದೇನೆ ಎಂದು ಕಾಶಿನಾಥ ಗುತ್ತೇದಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಮಾಜದ ಮುಖಂಡರಿಂದ ಕಾಶಿನಾಥ ಗುತ್ತೇದಾರ್ ಅವರಿಗೆ ಸನ್ಮಾನ.

ತಾಲೂಕಿನಲ್ಲಿ ಕಳೆದ ೨೦೦೬ ರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಮಾಡುತ್ತಾ ಈ ಭಾಗದ ಜನರಲ್ಲಿ ಗುರುಗಳ ವಿಚಾರಗಳನ್ನು ಪರಿಚಯಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ. ಆಗಿನ ಸೋಲೂರಿನ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಳೆದ ೨೦೧೦ ರಲ್ಲಿ ಈಡಿಗ ಸಮಾಜದ ಸಂಘಟನೆಗಾಗಿ ತಾಲೂಕು ಪದಾಧಿಕಾರಿಗಳಾಗಿ ಆಯ್ಕೆ ಮಾಡಿದ್ದರು. ನನ್ನ ಸಂಘಟನಾ ಕಾರ್ಯಚಟುವಿಕೆ ಗಮನಿಸಿ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ವಹಿಸಿದ್ದರು. ಅಂದಿನಿಂದ ಇಲ್ಲಿವರೆಗೆ ತಾಲೂಕಿನಲ್ಲಿ ಈಡಿಗ ಸಮಾಜದ ಸಂಘಟನೆ ಬಲ ಪಡಿಸುವಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ ಎಂದರು.

ಸಮಾಜದ ಸೋಲೂರ ಮಠದ ಆರ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳು ಕಾಶಿನಾಥ ಗುತ್ತೇದಾರ ಅವರ ಮನೆಗೆ ಭೇಟಿ ನೀಡಿದ ಸಂದರ್ಭ.
 
ತಾಲೂಕಿನಲ್ಲಿ ಸಮಾಜದ ಸಂಘಟನೆ ಹಾಗೂ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮಕ್ಕಾಗಿ ಹಗಲಿರಳು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ೧೩ ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿದ್ದುಕೊಂಡು ಸಮಾಜದ ಸಂಘಟನೆ ಮಾಡುವುದಕ್ಕೆ ಸಹಕರಿಸಿದ ಸಮಾಜದ ಮುಖಂಡರಿಗೂ,ಯುವಕರಿಗೂ ಹಾಗೂ ನನ್ನ ಅಭಿಮಾನಿಗಳಿಗೂ ಕೃತಜ್ಞತೆಗಳು ಸಲ್ಲಿಸುತ್ತೇನೆ.ಇನ್ನೂ ಮುಂದೆ ಸಮಾಜದ ಯಾವುದೇ ಜವಾಬ್ದಾರಿ ವಹಿಸುವುದಿಲ್ಲ ಕೇವಲ ಸಾಮಾನ್ಯ ಕಾರ್ಯಕರ್ತನಾಗಿರುವೆ, ಕಾಲಕಾಲಕ್ಕೆ ಸೂಕ್ತ ಸಲಹೆ ಸೂಚನೆಗಳು ಹಾಗೂ ಮಾರ್ಗದರ್ಶನ ನೀಡುವುದಾಗಿ ತಿಳಿಸಿದ್ದಾರೆ.

ಭಾನುವಾರ, ಮಾರ್ಚ್ 19, 2023

ಕುಂಬಾರ ಅಭಿವೃದ್ಧಿ ನಿಗಮ ಘೋಷಣೆ : ಜಗದೇವ ಕುಂಬಾರ ಸ್ವಾಗತ.

ಬೆಂಗಳೂರ: ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ ಹೀಗಾಗಿ ಸರ್ಕಾರದ ಆದೇಶವನ್ನು ತುಂಬು ಹೃದಯದಿಂದ ಸ್ವಾಗತಿಸುವುದಾಗಿ ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಕುಂಬಾರ ತಿಳಿಸಿದ್ದಾರೆ.
ಹಿಂದುಳಿದ ಪ್ರವರ್ಗ -2(ಎ) ಅಡಿಯಲ್ಲಿ ಬರುವ ಕುಂಬಾರ, ಚಕ್ರಸಾಲಿ, ಗುಣಗ, ಗಣಗಿ, ನಿಗಮ ಕೊಯವ, ಕುಲ, ಕುಲಾಲ, ಕುಂಬಾರ್, ಕುಂಬಾರ್ಡ್, ಕುಮ್ಮಾರ, ಕಸವನ್, ಮೂಲ, ಸಜ್ಜನ ಕುಂಬಾರ, ಖುಮಾರ, ಕುಂಭಾರ, ಖುಂಭಾರ ಮತ್ತು ಕುಲಾಲ‌್ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ನಿಗಮ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ರಾಜ್ಯದ ಇನ್ನುಳಿದ ಸಚಿವರಿಗೂ ,ಶಾಸಕರಿಗೂ ವಿಶೇಷವಾಗಿ ಅಧೀವೇಶನದಲ್ಲಿ ಕುಂಬಾರ ಸಮಾಜದ ನಿಗಮ ಕುರಿತು ವಿಷಯ ಮಂಡಿಸಿದ ಶಾಸಕರು, ಹಾಗೂ ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ ಅವರಿಗೂ ಹೀಗೆ ಎಲ್ಲಾರಿಗೂ ರಾಜ್ಯ ಕುಂಬಾರರ ಯುವ ಸೈನ್ಯ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಭಾನುವಾರ, ಮಾರ್ಚ್ 12, 2023

ಮಾರ್ಚ್. 20ಕ್ಕೆ ಕಲಬುರಗಿ ಚಲೋ ಬೃಹತ ಪ್ರತಿಭಟನೆ.

ಚಿತ್ತಾಪೂರ: ಸುಮಾರು 40 ವರ್ಷಗಳಿಂದ ಕೋಲಿ ಕಬ್ಬಲಿಗ ಸಮಾಜದ ಬೇಡಿಕೆಗಳು ಈಡೇರಿಸದ ಕೇಂದ್ರ ಸರ್ಕಾರ ವಿರುದ್ಧ ಮಾರ್ಚ.20 ರಂದು ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಎಸ್ ಟಿ ಹೋರಾಟ ಸಮಿತಿ ವತಿಯಿಂದ ಕೋಲಿ ಕಬ್ಬಲಿಗ ಜಾತಿಗಳಿಗೆ ಎಸ್ ಟಿ ಯಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ  "ಕಲಬುರಗಿ ಚಲೋ" ಬೃಹತ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಸಮಾಜದ ಕುಲ ಶಾಸ್ತ್ರೀಯ ಅಧ್ಯಯನ ಮುಗಿದರೂ ಅದನ್ನು ಇನ್ನೂ ಸಮಾಜವನ್ನು ಎಸ್ ಟಿಗೆ ಸೇರ್ಪಡೆಯಾಗಿಲ್ಲ ಕೇಂದ್ರ ಸರ್ಕಾರ ಗಣ್ಯರು ಬರಿ ಹರಕೆ ಉತ್ತರ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ 20ರಂದು ಜಗತ್ ವೃತ್ತದಿಂದ ತಿಮ್ಮಪುರ ವೃತ್ತದಿಂದ ಡಿಸಿ ಕಛೇರಿಯ ವರೆಗೆ ನಡೆಯಲಿರುವ ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆಗೆ ಕೋಲಿ ಕಬ್ಬಲಿಗ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ,ರಾಮಲಿಂಗ ಬಾನರ್, ಹಣಮಂತ ಸಂಕನೂರ, ರಾಮಲಿಂಗ, ದೇವಿಂದ್ರ ಅರಣಕಲ್, ಭೀಮಣ್ಣ ಹೊತ್ತಿನಮಡಿ, ಚಂದ್ರು ಕಾಳಗಿ, ಶಿವಪ್ಪ, ನಾಗೇಂದ್ರ ಜೈಗಾಂಗ, ಮಹಾದೇವಪ್ಪ ಇಟಗಾ, ದೇವಿಂದ್ರ, ವಿಜಯಕುಮಾರ ಸಣ್ಣೂರ್, ಸೆರಿದಂತೆ ಇತರರು ಇದ್ದರು.

ಬೇಣ್ಣೂರಕರಗೆ ಬಿಜೆಪಿ ಟಿಕೆಟ್ ನೀಡಲು ಸ್ಥಳೀಯರ ಒತ್ತಾಯ.

ಚಿತ್ತಾಪೂರ:  ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಹಾಗೂ ಚಿತ್ತಾಪೂರ ಮೀಸಲು ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಬಸವರಾಜ ಬೆಣ್ಣೂರಕರ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಸ್ಥಳೀಯರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದರು.

ಡಿ.ಎಸ್ ನಾಮದಾರ್ ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಸ್ಥಳೀಯವಾಗಿ ಶಾಸಕರಾದವರು ವಿಶ್ವನಾಥ್ ಪಾಟೀಲ್, ವಾಲ್ಮೀಕಿ ನಾಯಕ್ ಬಿಟ್ರು ಉಳಿದ ಬೇರೆಯವರೇ ಶಾಸಕರಾಗಿದ್ದಾರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇರೆಯವರಿಗೆ ಮಣೆ ಹಾಕುವುದು ಬಹುಶಃ ಅಷ್ಟು ಸಮಂಜಸವಲ್ಲ ಹೀಗಾಗಿ ಸ್ಥಳೀಯವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬುದು ಈ ನಮ್ಮ ಸ್ಥಳೀಯರ ಒತ್ತಾಯವಾಗಿದೆ.
ಈಗಾಗಲೇ ಬಸವರಾಜ್ ಬೆಣ್ಣೊರಕರ್ ಅವರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರು ಆಗಿದ್ದಾರೆ  ಹಾಗೂ ಈ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಘಟನೆಗಳಲ್ಲಿ ನೇತೃತ್ವ ವಹಿಸಿ ಪ್ರತಿ ಸಮಾಜದವರ ಜೊತೆ ಪ್ರೀತಿ ಸಹ ಬಾಳ್ವೆಯಿಂದ ನಡೆದುಕೊಂಡು ಬಂದವರು ಹೀಗಾಗಿ ಸ್ಥಳೀಯವಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸೂಕ್ತವಾದ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಬಿಜೆಪಿ ಕೇಂದ್ರ ರಾಜ್ಯದ ಪ್ರಭಾವಿ ನಾಯಕರಿಗೆ ಭೆಟ್ಟಿಯಾಗಿ ಬಸವರಾಜ ಬೆಣ್ಣೊರಕರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು ಈಗಾಗಲೇ ನಮ್ಮ ಪಕ್ಷದಲ್ಲಿ ಸುಮಾರು ಜನ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು ನಾವ್ಯಾರು ಅವರನ್ನು ಟಿಕೆಟ್ ನೀಡಬಾರದು ಎಂದು ಬಯಸುತ್ತಿಲ್ಲ. ಸ್ಥಳೀಯರನ್ನು ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಪಕ್ಷಿ ಯಾರಿಗೆ ಟಿಕೆಟ್ ನೀಡಿದರೂ ಸಹ ನಾವು ಒಗ್ಗಟ್ಟಿನಿಂದ ಚುನಾವಣೆ ಮಾಡುವುದಾಗಿ ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಬಸವರಾಜ್ ಸಾಹುಕಾರ್, ಮಲ್ಲಿನಾಥ ಇಂದನೂರ್ ಬಾಬುಮಿಯ ಕಲಗುರ್ತಿ, ಶರಣಗೌಡ ಪಾಟೀಲ್ ಸಂಗನಗೌಡ ಅಳ್ಳೊಳ್ಳಿ, ಅಪ್ಪಾರಾವ್ ಮುಗಳನಾಗಂವ್, ಹಣಮಂತ ಪೂಜಾರಿ, ಬಾಲಕೃಷ್ಣ ಜೋಶಿ ಮಲಗತ್ತಿ, ಸಂಗಣ್ಣ ನಾಗ್ ಶೆಟ್ಟಿ, ಖಾಜಾ ಹುಸೇನ್ ದಿಗ್ಗಾಂವ್, ಮಲ್ಲಿಕಾರ್ಜುನ್ ಪೂಜಾರಿ ಶಿವಯ್ಯ ಗುತ್ತೇದಾರ್, ಮಲ್ಲಿಕಾರ್ಜುನ್ ಇಟಗಾ, ಅನಿಲ್ ಕುಮಾರ್ ಇಂಗೇನ್ಕಲ್, ಕಾರಣ ಕುಮಾರ್ ಅಲ್ಲೂರ್, ಮಂಜು ಪೂಜಾರಿ ಜೀವಣಗಿ, ಮುನಿಯಪ್ಪ ದೇಸಾಯಿ ಕದ್ದರಗಿ, ಶರಣು, ಕಾಶೀನಾಥ್ ಮಾಲಗತ್ತಿ, ದಿಲೀಪ್ ದೊಡ್ಮನಿ, ಭರತ್ ಮುತ್ತಗಾ, ಗುರುರಾಜ್ ಗುಂಡಗುರ್ತಿ, ಸೇರಿದಂತೆ ಇತರರಿದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...