ಪಾಶಾಮಿಯ್ಯಾ ಖುರೇಷಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ.

ಚಿತ್ತಾಪುರ: ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಾಶಾಮಿಯ್ಯಾ ಖುರೇಷಿ ಅವರು ಶನಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಮಾರು 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದು ಪಕ್ಷದ ಸಂಘಟನೆಯಲ್ಲಿ ನಮ್ಮ ಸಮಾಜದವರನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸಿದ್ದೇನೆ ಅದರಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಪ್ರಿಯಾಂಕ್ ಖರ್ಗೆ ಅವರನ್ನು ಗೆಲ್ಲಿಸಲು ನಮ್ಮ ಸಮಾಜದವರನ್ನು ಒಟ್ಟಾರೆಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಕೂಲಿ ಕಾರ್ಮಿಕತರಂತೆ ದುಡಿದು ಅಧಿಕಾರಕ್ಕೆ ತಂದಿದ್ದೇವೆ ಆದರೆ ನಮ್ಮನ್ನು ಹಾಗೂ ನಮ್ಮ ಮುಸ್ಲಿಂ ಸಮಾಜಕ್ಕೆ ಕಡೆಗಣಿಸುತ್ತಾ ಬಂದಿದ್ದಾರೆ ಹೀಗಾಗಿ ಕಾಂಗ್ರೆಸ್‌ನಲ್ಲಿ ದುಡಿದವರಿಗೆ ಬೆಲೆಯಿಲ್ಲ ಫೋಜು ಹೊಡೆಯುವವರಿಗೆ ಜಾಸ್ತಿ ಗೌರವವಿದೆ ಎಂದು ಹೇಳಿದರು.

ಕಳೆದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಪರವಾಗಿ ಪುರಸಭೆಯ ವ್ಯಾಪ್ತಿಯ ನನ್ನ 12ನೇ ವಾರ್ಡಿನಲ್ಲಿ ಒಂದು ಬಾರಿ 17೦೦ ಮತ್ತು ಇನ್ನೊಂದು ಬಾರಿ 15೦೦ ಹೆಚ್ಚಿನ ಮತಗಳನ್ನು ಪಡೆಯಲು ಶ್ರಮಿಸಿದ್ದೇನೆ, ಇಷ್ಟಾದರೂ ಸಹಿತ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ನನಗೆ ಮತ್ತು ನಮ್ಮ ಸಮಾಜಕ್ಕೆ ಯಾವುದೇ ಕೆಲಸ ಕಾರ್ಯಗಳು ನೀಡದೆ ಅನ್ಯಾಯ ಮಾಡಿದ್ದಾರೆ ಆ ಕಾರಣಕ್ಕಾಗಿ ಅಸಮಾಧಾನಗೊಂಡು ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೂ ಬೆಂಗಳೂರಿನಲ್ಲಿ ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ ಎಂದು ಪಾಶಾಮಿಯ್ಯಾ ಖುರೇಷಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ಸಮಾಜದ ಮತ್ತು ನನ್ನ ವಾರ್ಡಿನ ಜನರೊಂದಿಗೆ ಚರ್ಚಿಸಿ ಅವರ ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಬಿಜೆಪಿ, ಜೆಡಿಎಸ್ ಎನ್ನದೇ ನಮ್ಮ ಸಮಾಜದ ಅಭಿವೃದ್ದಿಗಾಗಿ ನಮ್ಮ ಸಮಾಜದ ಪರವಾಗಿ ಯಾವ ಪಕ್ಷ ನಮ್ಮ ಜೊತೆಗೆ ನಿಲ್ಲುತ್ತದೆಯೋ ಆ ಪಕ್ಷಕ್ಕೆ ನನ್ನ ಮತ್ತು ನಮ್ಮ ಸಮಾಜ ಬೆಂಬಲ ಸೂಚಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು ಜೊತೆಗೆ ಮಹಿಬೂಬ್ ಖುರೇಷಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.