ಮುಸ್ಲಿಂರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ.

ಚಿತ್ತಾಪೂರ:  ಮುಸ್ಲಿಂ ಸಮುದಾಯದ ಹಿರಿಯರು ಮತ್ತು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಹಾಜಿ ಮಲನ್, ಖಸೀಂ ಸಾಹೇಬ್ ಬಾಬಾ ಅವರ ನೇತ್ರತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಸಾವಿರಾರು ಸಂಖ್ಯೆಯ ಮುಸ್ಲಿಂ ಜನರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಬಿಜೆಪಿ ಪಕ್ಷದ ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ
ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಮುಳುಗಿದೆ. ಮುಳುಗುವ ಹಡಗಿನಲ್ಲಿ ಪ್ರಯಾಣಿಕರು ಸಂಚಾರ ಮಾಡಿದರೇ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಚಿತ್ತಾಪುರ ಕ್ಷೇತ್ರದಲ್ಲಿ 2023ಕ್ಕೆ ಕಾಂಗ್ರೆಸ್‌ ಪಕ್ಷದ ಮುಳುಗಡೆ ಖಚಿತವಾಗಿದೆ ಎಂದರು.
ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಮಿಂಚಿನ ಸಂಚಾರ ನಡೆಸಿದ್ದಾರೆ. ಚಿತ್ತಾಪುರ ಕ್ಷೇತ್ರದ ಪ್ರತಿ ಹಳ್ಳಿಯ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಬೂತ್‌ ಮಟ್ಟದ ಸಭೆಗಳನ್ನ ಈಗಾಗಲೇ ನಡೆಸಿದ್ದಾರೆ. ಬೂತ್‌ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮೀಣ ಮತದಾರರ ವಿಶ್ವಾಸಗಳಿಸಲು ಹಗಲುರಾತ್ರಿ ಎನ್ನದೇ  ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮಾತನಾಡಿ ವಿಶೇಷವಾಗಿ ಮುಸ್ಲೀಂ ಯುವ ಕಾರ್ಯಕರ್ತರ, ಮತ್ತು ಮುಸ್ಲಿಂ ಸಮುದಾಯವರು ಇಷ್ಟೊಂದು ಸಾವಿರಾರು ಸಂಖ್ಯೆಯ ಪ್ರಮಾಣದಲ್ಲಿ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಹ ಆಗಿದೆ ಎಂದರು.ಇಷ್ಟೋಂದು ಪ್ರಮಾಣದಲ್ಲಿ ಜನರು  ಖಸೀಂ ಸಾಬ್  ಸಾಹೇಬ್  ಅವರ ರೂಪ್ ದಲ್ಲಿ ಬಂದು ನನಗೆ ದೇವರ ರೂಪದಲ್ಲಿ ಆರ್ಶೀವಾದ ಮಾಡಿದ್ದೀರಿ ಎಂದು ಅಂದುಕೊಂಡಿದ್ದೇನೆ. 

ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಏನು ಮಾಡಿದೆ. ನಾವು ಮನೆಯಲ್ಲಿ ಕುಳಿತುಗೊಂಡರು ನಾನು ಗೆಲುತ್ತೇವೆ ನಮಗೆ ಮುಸ್ಲೀಂ ಮತ ಬರುತ್ತೆ ಅಂದುಕೊಂಡಿದ್ದಾರೆ.  ಕಾಂಗ್ರೆಸ್ ಪಕ್ಷ ಭ್ರಮಯಲ್ಲಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಏನು ಮಾಡಿದ್ದಾರೆ ? ಎಲ್ಲಾ ಕಡೆ ವೇದಿಕೆಯಲ್ಲಿ ಹೇಳುತ್ತಾರೆ ಮುಸ್ಲಿಂ ಸಮುದಾಯದ ಓಟ್ ನಮಗೆ ಸಿಗುತ್ತೆ ಎಂದು ,ಇಂದು ಮುಸ್ಲಿಂ ಸಮುದಾಯ ಕೂಡ ಜಾಗೃತರಾಗಿದ್ದಾರೆ ಇವತ್ತು ಇಷ್ಟೋಂದು ಪ್ರಮಾಣದಲ್ಲಿ ನೀವು ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿದ್ದೆ ಕೆಡಿಸುತ್ತದೆ ಎಂದು ಹೇಳಿದರು. 

ಕೆಲ ಕಾಂಗ್ರೆಸ ಮುಂಖಡರು ನಿಮ್ಮ ಮನೆ ಬರುತ್ತಾರೆ, ದೊಡ್ಡ ದೊಡ್ಡ ಕನಸು ತೆಗದುಕೊಂಡು ಬರುತ್ತಾರೆ. ಹಣದ ಅಮಿಷ ತೊರಿಸುತ್ತಾರೆ, ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇವೆ ಎಂದು ಭರವಸೆ ನೀಡುತ್ತಾರೆ ಅದನ್ನು ನಂಬಬೇಡಿ ನಿಮ್ಮ ಮನೆಯನ್ನು ಹಾಳು ಮಾಡಿ, ಅವರು ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಅವರಿಗೆ ಸರಿಯಾಗಿ ಉತ್ತರ ನೀಡಿ ಇಷ್ಟು ದಿನಗಳು ನಮಗೆ ಏನೂ ಮಾಡಿರಿ ಎಂದು ಪ್ರಶ್ನಿಸಿ ಎಂದರು.

ಪಟ್ಟಣದಲ್ಲಿ ಬಹುದೊಡ್ಡ ಶಕ್ತಿ ಇರುವ ಹಾಜಿ ಮಾಲನ್ ಖಸೀಂ ಬಾಬಾ ಅವರು, ಬಿಜೆಪಿ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿಕೊಂಡು ಮತ್ತು ನನ್ನ ಸಮಾಜ ಸೇವೆಯನ್ನು ಮೆಚ್ಚಿಕೊಂಡು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ ನಮಗೆ ಚಿತ್ತಾಪುರ ಮತಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಕ್ಕಿದೆ ಅವರ ಅರ್ಶಿವಾದದಿಂದ ನಾವು 25 ಸಾವಿರ ಮತಗಳ ಅಂತರಗಳಿಂದ ಬಿಜೆಪಿ ಗೆಲವು ಸಾಧಿಸಲಿದ್ದೆವೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿನ ಬಿಜೆಪಿ ತಾಲೂಕ ಅಧ್ಯಕ್ಷ ನೀಲಕಂಠರಾವ ಪಾಟೀಲ, ನಿಂಗಾರೆಡ್ಢಿ ಪರಸರೆಡ್ಡಿ, ಶಶಿಧರ ಸುಗೂರ, ಮುಕುಂದ ದೇಶಪಾಂಡೆ,ನಾಗರಾಜ ಬಂಕಲಗಿ, ರವೀಂದ್ರ ಸಜ್ಜನಶೆಟ್ಟಿ, ಶಂಕರ ಚವ್ಹಾಣ, ಹಾಜಿ ಮಲಂಗ್ ಬಾಬಾ, ಶರಣು ಬಾಬಾ, ಪ್ರಭು ಗಂಗಾಣಿ, ಮಹ್ಮದ ಯುನುಸ್, ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.