ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಬಿರುಸಿನ ಪ್ರಚಾರ.
ಚಿತ್ತಾಪೂರ: ಈ ಬಾರಿ ಮತ್ತೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ ಸರ್ಕಾರದಿಂದ ಮತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಜೊತೆಗೆ ನಾನೂ ಸಹ ಇನ್ನೂ ಮುಂದೆ ಹೆಚ್ಚಿನ ಕೆಲಸಗಳು ಮಾಡುವೆ ಆದ್ದರಿಂದ ಬಿಜೆಪಿ ಅಭ್ಯರ್ಥಿಯಾದ ನನಗೆ ಮತ ನೀಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಮಣಿಕಂಠ ರಾಠೋಡ ಮನವಿ ಮಾಡಿದರು.
ತಾಲ್ಲೂಕಿನ ಚೌಕಂಡ್ಡಿ ತಾಂಡಾದ ಮತ ಯಾಚನೆಯಲ್ಲಿ ಮಾತನಾಡಿದ ಅವರು
ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನನಗೆ ಸೇವೆ ಮಾಡಲು ಅವಕಾಶ ನೀಡಿದೆ, ದೇಶದ ಪ್ರಧಾನಿ ಅವರು ಕಲಬುರಗಿ ಜಿಲ್ಲೆಗೆ ಬಂದಾಗ, ಬಂಜಾರ ಸಮಾಜದ ಒಬ್ಬ, ಮಗ ದೆಹಲಿಯಲ್ಲಿದ್ದಾರೆ. ನೀವು ಯಾವುದೇ ರೀತಿಯ ಚಿಂತೆ ಮಾಡುವ ಅಗತ್ಯವಿಲ್ಲ. ಎಂದು ಹೇಳಿದರು. ಈಗ ನನಗೆ ರಾಜ್ಯದಲ್ಲಿ ವಿಧಾನಸೌಧ ಪ್ರವೇಶ ಮಾಡಲು ಅವಕಾಶ ನೀಡುವ ಮೂಲಕ ಎಲ್ಲಾರೂ ನನಗೆ ಮತ ನೀಡಿ ಅರ್ಶಿವಾದ ಮಾಡಬೇಕು ಎಂದರು.
ನಾನು ಸೇವಲಾಲ್ ಮಹಾರಾಜರ ಆದರ್ಶ ಮತ್ತು ತತ್ವ ಸಿದ್ಧಾಂತಗಳ ಮೇಲೆ ನಡೆಯುತ್ತಿರುವೆ ನಮ್ಮ ಸಮುದಾಯದವರು ಕೆಲಸ ಮಾಡಲು ಮುಂಬಯಿ ಬೆಂಗಳೂರು, ಪುಣೆ, ಹೋಗುವ ಅಗತ್ಯವಿಲ್ಲ ನಾನು ನಮ್ಮ ಯುವಕರಿಗೆ ನಮ್ಮ ತಾಲೂಕಿನಲ್ಲಿ ಜನರಿಗೆ ಉದ್ಯೋಗ ದೊರೆಯುವ ಕೆಲಸ ಮಾಡುತ್ತೇನೆ . ನಿಮ್ಮ ಗ್ರಾಮಗಳಿಗೆ, ತಾಂಡಗಳಿಗೆ, ಕುಡಿಯುವ ನೀರು, ಶೌಚಾಲಯ, ಮೂಲಭೂತ ಸೌಕರ್ಯಗಳನ್ನು ನೀಡುವ ಪ್ರಮಾಣಿಕ ಕೆಲಸ ಮಾಡುತ್ತೇನೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ನನಗೆ ಒಂದು ಅವಕಾಶ ನೀಡಿ ಎಂದು ಹೇಳಿದರು.
ಮೇ, 6 ರಂದು ದೇಶದ ಪ್ರಧಾನಿಯವರು ನನಗೆ ಅಶೀವಾದ ನೀಡಲು ಚಿತ್ತಾಪುರ ಮತಕ್ಷೇತ್ರದ ರಾವೂರ ಗ್ರಾಮಕ್ಕೆ ಬರುತ್ತಿದ್ದಾರೆ. ನೀವು ಎಲ್ಲಾರೂ ಬಂದು ಕಾರ್ಯಕ್ರಮವನ್ನು ಯಶಸ್ವಿಗೋಳಿಸಿ, ನನ್ನ ಕೈ ಬಲ ಪಡಿಸಬೇಕು, ನಿಮ್ಮ ಮನೆಯ ಮಗನ್ನು ವಿಧಾನಸೌಧಗೆ ಕಳುಹಿಸುವ ಕೆಲಸ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ನಿಂಗಾರೆಡ್ಡಿ ಬಾಸರೆಡ್ಡಿ, ಭೀಮರಡ್ಡಿ ಕುರಾಳ, ಮಲ್ಲಿಕಾರ್ಜುನ ಎಮ್ಮೆನೋರ, ಸುರೇಶ ರಾಠೋಡ್ ಕವಿತಾ ಚವ್ಹಾಣ್, ಶಿವಕುಮಾರ ಸುಣಗಾರ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ