ಚಿತ್ತಾಪೂರಲ್ಲಿ ಕಮಲ ಅರಳಿಸುವುದು ಬಿಜೆಪಿ ಮುಖ್ಯ ಉದ್ದೇಶ.
ಚಿತ್ತಾಪೂರ: ವಿಧಾನ ಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸಿ ಚಿತ್ತಾಪುರನಲ್ಲಿ ಕಮಲ ಅರಳಿಸುವುದು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಮುಕುಂದ ದೇಶಪಾಂಡೆ ಹೇಳಿದರು.
ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಬಿಜೆಪಿಯ ಎಲ್ಲಾ ಅಕ್ಷಾಂಕ್ಷಿಗಳನ್ನು ಕರೆದು ಎಲ್ಲಾರನ್ನು ಸಮಾಧಾನ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ ಈ ಚುನಾವಣೆಯಲ್ಲಿ ಶತಯಗತಯಾ ಬಿಜೆಪಿಯನ್ನು ಗೆಲ್ಲಲೇಬೇಕು ಹೀಗಾಗಿ ವಿಭಿನ್ನ ರೀತಿಯಾಗಿ ಪ್ರಚಾರವನ್ನು ಪಕ್ಷ ಸಂಘಟನೆ ಮಾಡಲು ಸಿದ್ಧವಾಗಿದೆ. ಭಾರತೀಯ ಜನತಾ ಪಕ್ಷ ಚುನಾವಣೆಗೆ ಅಷ್ಟೇ ಸಭೆ ಪ್ರಚಾರ ಮಾಡುವುದಿಲ್ಲ. ನಮ್ಮ ಬಿಜೆಪಿ ಸರ್ಕಾರದ ಉದ್ದೇಶ ಸಮಾಜದ ಕಟ್ಟಕಡೆಯ ಮನುಷ್ಯಗೂ ನಮ್ಮ ಸರ್ಕಾರದ ಯೋಜನೆಗಳನ್ನು ಕಲ್ಪಿಸುವ ಉದ್ದೇಶ ನಮ್ಮ ಪ್ರಧಾನಿ ಮತ್ತು ಪಕ್ಷದಾಗಿದೆ ಎಂದರು.
ನಮ್ಮ ತಾಲೂಕಿನಲ್ಲಿ ಬಂಡಾಯ ಅಂತ ಇಲ್ಲ. ಇದ್ದರೆ ಅವರನ್ನು ನಮ್ಮ ರಾಜ್ಯ ನಾಯಕರು ಅಸಮಾಧಾನ ಇರುವರರನ್ನು ಸಮಾಧಾನ ಪಡೆಸುವ ಕೆಲಸ ಮಾಡುತ್ತಾರೆ ಯಾರು ಸಹ ಪಕ್ಷವನ್ನು ತೊರೆಯುವ ಕೆಲಸ ಮಾಡಲ್ಲ ಎಂಬ ವಿಶ್ವಾಸವಿದೆ. ಹಾಗೂ ಝಾರ್ಖಂಡನ್ ರಾಜ್ಯ ಸಭೆ ಸದಸ್ಯ ಚಿತ್ತಾಪೂರಗೆ ಮತಕ್ಷೇತ್ರದ ಉಸ್ತುವಾರಿಯಾಗಿ ಅದಿತ್ಯ ಪ್ರಸಾದ ಸಾಹು ಬರುತ್ತಿದ್ದಾರೆ ಎಂದು ಹೇಳಿದರು.
ಏಪ್ರಿಲ್,೧೪ ಬೆಳಿಗ್ಗೆ ೧೧ ಗಂಟೆಗೆ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ವಿಧಾನ ಸಭೆ ಚುನಾವಣೆ ನಿಮಿತ್ಯ ತಾಲೂಕಿನ ೨೫೭ ಬೂತ್ ಗಳ ಬಿಜೆಪಿ ಕಾಯಕರ್ತರ ಸಭೆಯನ್ನು ಕರೆಯಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು
-ಮುಕುಂದ ದೇಶಪಾಂಡೆ.
ಬಿಜೆಪಿ ಚುನಾವಣೆ ಉಸ್ತುವಾರಿ ಚಿತ್ತಾಪುರ.
ಚಿತ್ತಾಪೂರ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿ ಮೊದಲು ನನ್ನನ್ನೂ ಅಭ್ಯರ್ಥಿಯಾಗಿ ಘೋಷಿಸಿದ ಬಿಜೆಪಿ ಕೇಂದ್ರ ಮತ್ತು ರಾಜ್ಯ ಮಟ್ಟದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಹೇಳಿ ನಂತರ ಮಾತನಾಡಿ ಬಿಜೆಪಿಯಲ್ಲಿ ಟಿಮ್ ವರ್ಕ್ ನಡೆದಿದೆ. ಪ್ರತಿಯೊಂದೂ ಬೂತ್ ಮಟ್ಟದಿಂದ ಹಿಡಿದು ಕಾರ್ಯಕರ್ತರ ಭರವಸೆಯಿದೆ ಈ ಬಾರಿ ನಾವು ೨೦ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲ ನಮ್ಮ ಪಕ್ಷದಲ್ಲಿ ನಾವು ಅಣ್ಣತಮ್ಮ ಹಾಗೆ ನಡೆದುಕೊಂಡಿದ್ದೇವೆ. ಮುಂದೆ ಸಹ ನಮ್ಮ ಗುರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವ ಗುರಿಯಾಗಿದೆ. ವಿವಿಧ ಗ್ರಾಮಗಳಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ನೀಲಕಂಠರಾವ್ ಪಾಟೀಲ್, ಮಲ್ಲಿಕಾರ್ಜುನ ಪೂಜಾರಿ, ಮಲ್ಲಿಕಾರ್ಜುನ ಎಮ್ಮೆನೋರ, ನಾಗರಾಜ ಹೂಗಾರ, ಆನಂದ ಪಾಟೀಲ, ಸುರೇಶ ರಾಠೋಡ್, ರಾಮದಾಸ ಚವ್ಹಾಣ್, ಮಹೇಶ ಬೆಟಗೇರಿ, ಮಹೇಂದ್ರ ಕೋರಿ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ