ಅಭಿವೃದ್ದಿ ನೋಡಿ ಮತ ಹಾಕಿ: ಪ್ರಿಯಾಂಕ್ ಖರ್ಗೆ.
ಚಿತ್ತಾಪೂರ: ನಮಗೆ ಅಭಿವೃದ್ದಿಯೇ ಮೂಲಮಂತ್ರ, ಚಿತ್ತಾಪುರದಲ್ಲಿ ಒಂದು ಪರಿಪೂರ್ಣ ಸಮಾಜ ನಿರ್ಮಾಣದ ಕನಸು ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಮುಖ್ಯವಾಹಿನಿಗೆ ತರುವ ತುಡಿತ ನಮಗಿದೆ. ಯಾವುದೇ ಧರ್ಮ ಹಾಗೂ ಜಾತಿಯ ರಾಜಕೀಯ ಬೇಕಿಲ್ಲ. ಹಾಗಾಗಿ ಸರ್ವಾಂಗೀಣ ಅಭಿವೃದ್ದಿ ನೋಡಿ ನನ್ನಗೆ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆಗೊಂಡ ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಅಭಿವೃದ್ದಿ ಪರ, ಯುವಕರ ಭವಿಷ್ಯದ ಕಾಳಜಿ ಇರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಹಾಗಾಗಿ ಅವರಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಈ ಸಲದ ಚುನಾವಣೆ ಚಿತ್ತಾಪುರದ ಭವಿಷ್ಯದ ಪ್ರಶ್ನೆಯಾಗಿದೆ. ಬಿಜೆಪಿ ಅಭ್ಯರ್ಥಿ ಪರ ಯಾವೊಬ್ಬ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಬಿಜೆಪಿಯಲ್ಲಿರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಇಲ್ಲವೇ ತಟಸ್ಥರಾಗಿದ್ದಾರೆ ಹಾಗಾಗಿ ಕೇವಲ ಎನ್ ರವಿಕುಮಾರ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದಾರೆ.
ಬಸವ ತತ್ವ, ಅಂಬಿಗರ ಚೌಡಯ್ಯನವರ ತತ್ವ ಆದರ್ಶ, ಸಂವಿಧಾನದ ಪರಿಪಾಲನೆ ಹಾಗೂ ಅಭಿವೃದ್ಧಿ ಪರ ಚಿಂತನೆ ಇರುವ ವ್ಯಕ್ತಿ ಚುನಾವಣೆಗೆ ನಿಂತಾಗ ಮಾತ್ರ ಅವರ ಪರ ಮಾತನಾಡಲು ಕಾರ್ಯಕರ್ತರಿಗೆ ಎದೆಗಾರಿಕೆ ಇರುತ್ತದೆ. ಆದರೆ, ಬೆಜೆಪಿ ಪರವಾಗಿ ಅಂತ ವಾತಾವರಣ ಇಲ್ಲ.
ಸಿಎಂ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಲು ಬರುತ್ತಿದ್ದಾರೆ. ಅವರ ಪರ ಏನು ಹೇಳಿ ಮತಯಾಚಿಸುತ್ತಾರೆ. ನಮ್ಮ ಅಭ್ಯರ್ಥಿ ಅಕ್ಕಿ ಹಾಗೂ ಹಾಲಿನಪುಡಿ ಕಳ್ಳ ಸಾಗಾಣಿಕೆ ಮಾಡುತ್ತಾರೆ ಅವರ ಮೇಲೆ 40 ಕೇಸು ದಾಖಲಾಗಿವೆ. ಒಂದು ಕೇಸಿನಲ್ಲಿ ಕೋರ್ಟ್ ಶಿಕ್ಷೆ ನೀಡಿದೆ ಅಂತ ಹೇಳಿ ಪ್ರಚಾರ ಮಾಡುತ್ತಾರೆಯೇ? ಎನ್ ರವಿಕುಮಾರ ಅವರು ಇಂತಹ ಅಭ್ಯರ್ಥಿಯನ್ನು ಸಮರ್ಥ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ನನ್ನ ಮೇಲೂ 9 ಕೇಸುಗಳಿವೆ ಅವೆಲ್ಲ ಸಮಾಜ ಕಲ್ಯಾಣಕ್ಕಾಗಿ ಹೋರಾಟ ನಡೆಸಿದಾಗ ಹಾಕಿದ ಕೇಸುಗಳು ಆದರೆ, ಮಣಿಕಂಠನ ವಿಚಾರನೆ ಬೇರೆ ಎಂದರು.
ಇಎಸ್ ಐಸಿ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯದ, ರೇಲ್ವೆ ಪ್ರತ್ಯೇಕ ವಲಯ ತರುವಲ್ಲಿ ವಿಫಲರಾದ, ವಾಡಿ ರೇಲ್ವೆ ಮೇಲ್ಸೇತುವೆ ಪೂರ್ಣಗೊಳಿಸದ ಸಂಸದರನ್ನು ಗುಲಬರ್ಗಾ ಸಂಸದ ಎನ್ನಲು ಹೇಗೆ ಸಾಧ್ಯ? ಅವರು ಕೇವಲ ಚಿಂಚೋಳಿ ಸಂಸದ ಎಂದು ಉಮೇಶ ಜಾಧವ ಅವರಿಗೆ ಕುಟುಕಿದರು.
ಈ ಸಂದರ್ಭದಲ್ಲಿ ಹೊಸರು ಗ್ರಾಮದ ಹಲವರು ಹಾಗೂ ಅಲ್ಲೂರು ( ಬಿ) ಗ್ರಾಮದ ಮಲ್ಲಯ್ಯ ಸ್ವಾಮಿ, ಯರಗಲ್ ಗ್ರಾಮದ ಮುಂತಾದವರು ಕಾಂಗ್ರೆಸ್ ಪಕ್ಷದ ತತ್ವ ಹಾಗೂ ಸಿದ್ದಾಂತವನ್ನು ಮತ್ತು ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ದಿಪರ ಚಿಂತನೆ ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಭಾಗಣ್ಣಗೌಡ ಸಂಕನೂರು, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ ಮರಗೋಳ, ಶಿವಾನಂದ ಪಾಟೀಲ, ಮಹೇಬೂಬ ಸಾಹೇಬ, ಮುಕ್ತಾರ್ ಪಟೇಲ್,ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ್, ಮಾಜಿ ಶಾಸಕರ ವಿಶ್ವನಾಥ ಪಾಟೀಲ ಹೆಬ್ಬಾಳ ಸೇರಿದಂತೆ ಹಲವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ