ಬುಧವಾರ, ಅಕ್ಟೋಬರ್ 9, 2024

28ಕ್ಕೆ ಸರಕಾರಿ ನೌಕರರ ಸಂಘದ ಚುನಾವಣೆ

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ನಿರ್ದೇಶಕರ ಚುನಾವಣೆ ಅಕ್ಟೋಬರ್ 28 ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ವಿಜಯಕುಮಾರ ಲೊಡ್ಡನೋರ ತಿಳಿಸಿದ್ದಾರೆ.

ಅ.9 ರಿಂದ 18 ವರೆಗೆ ಸರಕಾರಿ ನೌಕರರ ಭವನದಲ್ಲಿ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಅ.19 ರಂದು ನಾಮಪತ್ರ ಪರಿಶೀಲನೆ, ಅ.21 ರಂದು ಉಮೇದುವಾರಿಕೆ ವಾಪಸ್ಸು ಪಡೆಯಲು ಕೊನೆ ದಿನವಾಗಿದೆ. ಅಂದೇ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು. ಅ.28 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದ್ದು. ಅಂದೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನಾಗಾವಿಗೆ ಹೋಗುವ ರಸ್ತೆ ಸುಧಾರಣೆಗೆ ಆಗ್ರಹ.

ಚಿತ್ತಾಪೂರ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ನಾಗಾವಿ ಯಲ್ಲಮ್ಮ ದೇವಸ್ಥಾನದ ವರೆಗಿನ ರಸ್ತೆ ಸುಧಾರಣೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ರಾಷ್ಟ್ರಕೂಟರ ಮನೆತನದ ಕುಲದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಅಕ್ಟೋಬರ್ 17ರಂದು ನಡೆಯಲಿದ್ದು ಈ ಉತ್ಸವಕ್ಕೆ ವಿವಿಧ ರಾಜ್ಯಗಳಾದ ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ, ಸೇರಿದಂತೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ ಹಾಗೂ ಪಲ್ಲಕ್ಕಿ ಉತ್ಸವ ಕೊಡ ಇದೇ ರಸ್ತೆ ಮಾರ್ಗವಾಗಿ ಸಾಗುತ್ತದೆ ಹೀಗಾಗಿ ರಸ್ತೆ ಉದ್ದಕ್ಕೂ ಇರುವ ತಗ್ಗು ಗುಂಡಿಗಳು ಹಾಗೂ ಅಲ್ಲಲ್ಲಿ ಹಾಳ್ಳಾದ ರಸ್ತೆ ಸುಧಾರಣೆ ಮಾಡುವಂತೆ ಸ್ಥಳೀಯರು ಆಗ್ರಹವಾಗಿದೆ.

ಖಬರಸ್ಥಾನ್ ರಸ್ತೆಯ ಅಕ್ಕ-ಪಕ್ಕ ಸಾರ್ವಜನಿಕರು ಮಲವಿಸರ್ಜನೆ ಮಾಡುತ್ತಿದ್ದು ಇಂತಹ ಜಾತ್ರಾ ಮಹೋತ್ಸವ ಸಮಯದಲ್ಲಿ ಹೋರ ಜಿಲ್ಲಾ, ರಾಜ್ಯಗಳಿಂದ ಬರುವ ಭಕ್ತಾದಿಗಳು ನೋಡಿ ಪಟ್ಟಣದ ಅಸ್ವಚ್ಛತೆ ಕಾಣದೆ ಸ್ವಚ್ಛತಾ ಕಾರ್ಯ ಆಗಬೇಕು ಇದಕ್ಕೆ ಪುರಸಭೆ ಇಲಾಖೆ ಕಾಳಜಿ ವಹಿಸಿ ಕೆಲಸ ಮಾಡಬೇಕು

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುರಸಭೆ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಉತ್ಸವಕ್ಕೂ ಮುಂಚೆ ರಸ್ತೆ ಸುಧಾರಣೆ ಮಾಡಿ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ ಕಾದುನೋಡಬೇಕಾಗಿದೆ.

ಹರಿಯಾಣ ಗೆಲುವು: ಬಿಜೆಪಿ ವಿಜಯೋತ್ಸವ.

ಚಿತ್ತಾಪೂರ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದಕ್ಕೆ ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂದೆ ಕಾರ್ಯಕರ್ತರು ಬುಧವಾರ ಪಾಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಮುಖಂಡರು, ಕಾರ್ಯಕರ್ತರು, ಜಯಘೋಷ ಹಾಕುವ ಮೂಲಕ ವಿಜಯೋತ್ಸವ ಆಚರಿಸಿದರು.

ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ ಮಾತನಾಡಿ ಹರಿಯಾಣ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೋಮ್ಮೆ ದೇಶದ ಪ್ರಧಾನಿಯ ಕೈ ಬಲಪಡಿಸಿದೆ. ಇದು ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಸಿಕ್ಕ ಗೆಲುವು. ಇದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ’ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಆಡಳಿತ ಇರುವ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಮತ್ತು ಆಮಿಷಗಳಿಗೆ ಒಳಗಾಗದೆ, ಪ್ರಧಾನಿ ಮೋದಿಯವರು ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಿರುವ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳಿಗೆ ಹರಿಯಾಣ ಜನ ಆಶಿರ್ವಾದ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸಹ ಬಿಜೆಪಿ ಜಯ ಸಾಧಿಸಲಿದೆ ಎಂದ ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್,  ಮಂಡಳ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರೀಮತಿ ನಾಗುಬಾಯಿ ಜಿತುರೆ, ಶ್ರಿಮತಿ ಅಕ್ಕಮ್ಮ, ನಗರ ಅಧ್ಯಕ್ಷ ಆನಂದ ಪಾಟೀಲ್ ನರಬೂಳ್, ಕಾರ್ಯದರ್ಶಿ ಮೇಘರಾಜ ಗುತ್ತೇದಾರ್, ಸುರೇಶ ಬೆನಕನಳ್ಳಿ, ಕೋಟೇಶ್ವರ ರೇಶ್ಮಿ, ಮಹ್ಮದ್ ಯೂನುಸ್, ಶಾಮಮೇಧಾ, ಪ್ರಭು ಗಂಗಾಣಿ, ಪಂಕಜಾಗೌಡ ಗುತ್ತೇದಾರ್, ಸೇರಿದಂತೆ ಇತರರು ಇದ್ದರು.

ಶುಕ್ರವಾರ, ಸೆಪ್ಟೆಂಬರ್ 27, 2024

ಎರಡನೇ ಬಾರಿ ಅಧ್ಯಕ್ಷರಾಗಿ ರಮೇಶ್ ಹಡಪದ ಆಯ್ಕೆ

ಚಿತ್ತಾಪುರ: ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾಗಿ ರಮೇಶ್ ಕೊಲ್ಲೂರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಈರಣ್ಣಸಂಣ್ಣೂ‌ರ್ ತಿಳಿಸಿದ್ದಾರೆ.

 ಪಟ್ಟಣದ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತಿಯಿಂದ ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ರಾಜ್ಯ ಕಾನೂನು ಸಲಹೆಗಾರ ರಮೇಶ್ ಮಲ್ನೋಡ,ರಾಜ್ಯ ಸಂಘಟನೆ ಕಾರ್ಯದರ್ಶಿ ಬಸವರಾಜ ಹಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ್ ಸೂಗೂರು, ಜಿಲ್ಲಾ ನಗರ ಅಧ್ಯಕ್ಷ ಮಲ್ಲಿಕಾರ್ಜುನ್ ಸವಳಗಿ,ಸಮಾಜದ ಹಿರಿಯ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಅಶೋಕ್‌ ಚಿತ್ತಾಪುರ,ಅಶೋಕ್‌ ಚೌಕಿ, ಲಕ್ಷ್ಮಣ ವಾಡಿ, ಮಲ್ಲಿಕಾರ್ಜುನ್ ರಾಜೋಳಿ, ಶಿವಾನಂದ್ ವಾಡಿ, ಕಲ್ಯಾಣ್ ರಾವ್ ಗುಂಡಗುತ್ತಿ , ಶೇಖಣ್ಣ ದಂಡಗುಂಡ, ಶಿವಕುಮಾರ್ ನಾಲ್ವರ್, ಸಂತೋಷ್ ಕಟಂದೇವರಹಳ್ಳಿ, ಸೇರಿದಂತೆ ಸಮಾಜದ ಮುಖಂಡ ಯುವಕರು ಉಪಸ್ಥಿತರಿದ್ದರು.

ಕಿತ್ತು ಹೋದ ರಸ್ತೆ: ಸಂಚಾರಕ್ಕೆ ತೊಡಕು

ಚಿತ್ತಾಪೂರ: ತಾಲೂಕಿನ ಭಾಗೋಡಿ ಗ್ರಾಮದ ಮೂಲಕ ಡಿಗ್ರಿ ಕಾಲೇಜಿನ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಿತ್ತು ಹೋಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
9 ಕಿಲೋಮೀಟರ್ ರಸ್ತೆಯು ಪ್ರತಿ ವರ್ಷ ಮಳೆಗೆ ಹಾಗೂ ಬಾರಿ ಗಾತ್ರದ ಮರಳು ತುಂಬಿದ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳ ಓಡಾಟದಿಂದ ಕಿತ್ತು ಹೋಗಿದೆ ಈಗ ಎರಡುಮೂರು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮತ್ತಷ್ಟು ರಸ್ತೆ ಕಿತ್ತು ಹೋಗಿದ್ದು ಸಂಬಂಧಿಸಿ ಅಕಾರಿಗಳು ಈ ರಸ್ತೆಯ ಕಡೆ ತಿರುಗಿ ನೋಡುತ್ತಿಲ್ಲ ಕನಿಷ್ಠ ಮರಂ ಹಾಕುವ ಕೆಲಸ ಕೂಡ ಮಾಡಿಲ್ಲ. ಅಕಾರಿಗಳ ನಿರ್ಲಕ್ಷ್ಯದಿಂದ ವಾಹನ ಸವಾರರು ರಾತ್ರಿ ವೇಳೆ ಜೀವಭಯದಲ್ಲೇ ಸಂಚರಿಸುವಂತಾಗಿದೆ. ಎನ್ನುತ್ತಾರೆ.
ಈ ರಸ್ತೆಯಿಂದ ಚಿತ್ತಾಪೂರ ಪಟ್ಟಣಕ್ಕೆ ಹೋಗಿ ಬರಲು ತುಂಬಾ ಅನುಕೂಲಕರ ಏಕೆಂದರೆ ಬರಿ 9 ಕಿಲೋಮೀಟರ್ ಅಷ್ಟೇ ಆದ್ರೆ ಮುಡಬೂಳ ಮಾರ್ಗವಾಗಿ ಬಂದ್ರೆ 15 ಕಿಲೋಮೀಟರ್ ಆಗುತ್ತದೆ ಹೀಗಾಗಿ ಭಾಗೋಡಿ ಗ್ರಾಮದ ಮೂಲಕ ಡಿಗ್ರಿ ಕಾಲೇಜಿನ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ  ದುರಸ್ತಿ ಮಾಡಿ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ಗ್ರಾಮ ಪಂಚಾಯತ್ ಇರುವ ಈ ಗ್ರಾಮದಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಇದ್ದು ಇರದಂತೆ ಆಗಿದೆ. ಈಗಾಗಲೇ ರಸ್ತೆ ಅವ್ಯವಸ್ಥೆಯಿಂದ ಗ್ರಾಮಕ್ಕೆ ಖಾಸಗಿ ವಾಹನಗಳ ಸಂಚಾರ ಕಡಿಮೆಯಾಗುತ್ತಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಮಳೆಯಾಗಿರುವುದರಿಂದ ರಸ್ತೆಯ ಪಕ್ಕದ ರೈತರಿಗೆ  ತಮ್ಮ ಜಮೀನುಗಳನ್ನು ಉಳುಮೆ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ.
ಪಿಆರ್ ಇ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯು ಈ ಹಿಂದೆ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರು, ಮಳೆ ನೀರು ಹರಿದು ಹೋಗಲು ಸೇತುವೆಗಳು ಸರಿಯಾಗಿ  ಅಳವಡಿಸಿಲ್ಲ. ಇದರಿಂದ ರಸ್ತೆ ಕಿತ್ತು ಹೋಗಲು ಕಾರಣವಾಗಿದೆ.
ಕೂಡಲೇ ಇಂತಹ ಗುತ್ತಿಗೆದಾರರ ಪರವಾನಿಗೆ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕ್ಷೇತ್ರದ ಶಾಸಕರು ಪ್ರತಿ ವರ್ಷ ಕೋಟಿಗಟ್ಟಲೆ ಹಣ ತಂದು ತಾಲೂಕಿನ ವಿವಿಧ ಭಾಗದ ರಸ್ತೆಗಳ ಡಾಂಬರೀಕರಣ ಮಾಡುತ್ತಿದ್ದರೂ ಮಳೆಗಾಲ ಕಳೆಯುತ್ತಿದ್ದಂತೆ ರಸ್ತೆಗಳು ಅಧ್ವಾನದ ಸ್ಥಿತಿ ನಿರ್ಮಾಣವಾಗಿ ಅಭಿವೃದ್ಧಿ ದಶಕಗಳ ಹಿಂದೆ ಹೋಗಿದೆಯೇನೋ ಎನ್ನಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ.

 -ಲಕ್ಷ್ಮಿಕಾಂತ್ ತಾಂಡೂರಕರ್.
ತಾಲೂಕಾಧ್ಯಕ್ಷ, ವೀರ ಕನ್ನಡಿಗ ಸೇನೆ ಚಿತ್ತಾಪುರ.

==================================

ಈ ರಸ್ತೆಯ ದುರಸ್ತಿ ಕುರಿತು ವರದಿಗಾರರು ಪಿಆರ್ ಇ ಇಲಾಖೆಯ ಪಿಡಬ್ಲ್ಯೂಡಿ ಬಾಲಕೃಷ್ಣ ಅಧಿಕಾರಿಗಳಿಗೆ ಫೋನ್ ಕರೆ ಮಾಡಿದ್ರೆ ಕರೆ ಸ್ವೀಕರಿಸುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಗುರುವಾರ, ಸೆಪ್ಟೆಂಬರ್ 26, 2024

ಸತತವಾಗಿ ಮೂರು ಬಾರಿ ಕಬ್ಬಡ್ಡಿ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

ಚಿತ್ತಾಪುರ: ಕಲಬುರ್ಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿತ್ತಾಪುರ ಕಬ್ಬಡ್ಡಿ ತಂಡ ಸತತವಾಗಿ ಮೂರನೇ ಬಾರಿಗೆ ಜಯಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಕಬ್ಬಡ್ಡಿ ತರಬೇತುದಾರರು ಹಾಗೂ ಚಿತ್ತಾಪೂರ ಕ್ರೀಡಾಂಗಣದ ವ್ಯವಸ್ಥಾಪಕ ಮರೇಪ್ಪ ಬೊಮ್ಮನಳ್ಳಿಕ‌ರ್ ತಿಳಿಸಿದ್ದಾರೆ.

ಚಿತ್ತಾಪೂರ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಾಗಾವಿ ನಾಡಿನ ಕೀರ್ತಿ ತರುತ್ತಿರುವ ಎಲ್ಲಾ ಕಬ್ಬಡ್ಡಿ ತಂಡ ಆಟಗಾರರಿಗೆ ತುಂಬ ಧನ್ಯವಾದಗಳು ಸಲ್ಲಿಸಿ ಮುಂದೆ ರಾಜ್ಯ ಮಟ್ಟದಲ್ಲಿ ಗೆದ್ದು ಬರಲಿ ಎಂದು ಹೇಳಿದರು.

ಕ್ರೀಡಾ ಪಟುಗಳಾದ ಶರಣು, ಭರತ್, ಮೌನೇಶ್‌, ಹಾಲಪ್ಪ, ಬಸವರಾಜ, ಆನಂದ, ರಾಜು, ದುರಾಜ್, ವಿಜಯ, ಭೀಮು, ಸದಾಶಿವ ಸೇರಿದಂತೆ ಇತರರು ಇದ್ದರು.

ಭಾರೀ ಮಳೆಗೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರು.

ಚಿತ್ತಾಪೂರ: ನಾಗಾವಿನಾಡಿನಲ್ಲಿ ಎರಡು ದಿನಗಳಿಂದ ರಾತ್ರಿವಿಡಿ ಭಾರೀ ಮಳೆಯಾಗಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಪಟ್ಟಣದಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ ಈ ವೇಳೆ ಮನೆಯಲ್ಲಿದ್ದ  ಕುಟುಂಬಸ್ಥರಿಗೆ ಯಾವುದೇ ಹಾನಿಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಟ್ಟಣದ ಸುಲೆಗಾವ್ ಗಲ್ಲಿಯಲ್ಲಿ ಮಲ್ಲಿಕಾರ್ಜುನ ಬಸವರಾಜ ವಾರದ್, ತನುಜಾ ಗಂಡ ಸುಭಾಷ್, ಮತ್ತು ಚೌಡಮ್ಮ ಗುಡಿಯ ಹತ್ತಿರದ ರಾಮಣ್ಣ ಭೀಮ್ ಸಿಂಗ್ ಇವರ ಮನೆಗಳಿಗೆ ಹಾನಿಯಾಗಿದ್ದು ಮನೆಗಳಿಗೆ ಗ್ರಾಮ ಲೆಕ್ಕಾಧಿಕಾರಿ ಮೈನೋದ್ದಿನ್ ಹಾಗೂ ಪುರಸಭೆ ಇಲಾಖೆಯ ಸಿಬ್ಬಂದಿ ವರ್ಗ ಭೇಟಿ ನೀಡಿ ಸರ್ಕಾರದಿಂದ ಬರುವ ಸೌಲಭ್ಯವನ್ನು ಕಲ್ಪಿಸಲಾಗುವ ಭರವಸೆ ನೀಡಿದ್ದಾರೆ.

ಮಳೆಯಿಂದ ಮನೆಗಳು ಕುಸಿತದ ಮಾಹಿತಿ ಬಂದಿದೆ ಕೊಡಲೇ ಪರಿಶೀಲಿಸಿ ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಬರುವ ಸೌಲಭ್ಯ ಅತಿ ಶೀಘ್ರದಲ್ಲಿ ಕೂಡಿಸುವುದಾಗಿ ಹೇಳಿದರು ಹಾಗೂ ಇನ್ನೂ ಮಳೆ ಬರುವ ಸಂಭವವಿದೆ ತಾಲೂಕಿನ ಎಲ್ಲಾ ಗ್ರಾಮಸ್ಥರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

- ನಾಗಯ್ಯ ಹೀರೆಮಠ.
ತಹಸೀಲ್ದಾರರು ಚಿತ್ತಾಪೂರ 

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ.

ಚಿತ್ತಾಪುರ: ಮೂಲಭೂತ ಸೌಕರ್ಯ, ಸೇವಾ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಿತ್ತಾಪುರ ತಾಲ್ಲೂಕು ಘಟಕದವರು ಪಟ್ಟಣದಲ್ಲಿ ಗುರುವಾರ ಮುಷ್ಕರ ನಡೆಸಿದರು.

ಆನಂತರ ತಹಶೀಲ್ದಾ‌ರ್ ನಾಗಯ್ಯ ಹೀರೆಮಠ ರವರಿಗೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಮೋತಿಲಾಲ್ ಚವ್ಹಾಣ್ ಮಾತನಾಡಿ ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ 17ಕ್ಕೂ ಅಧಿಕ ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಿರುವ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್, ಸ್ಕ್ಯಾನ‌ರ್ ಒದಗಿಸಿಲ್ಲ. ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಅಲ್ಲದೆ, ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ ಎಂದರು.

ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್ಟಾಪ್, ಗೂಗಲ್ ಕ್ರೋಮ್, ಬುಕ್, ಪ್ರಿಂಟರ್, ಇಂಟರ್ ನೆಟ್ ಸೌಲಭ್ಯ ನೀಡುವವರೆಗೆ ಮೊಬೈಲ್ ತಂತ್ರಾಂಶಗಳಾದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗ‌ರ್ ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ಕೆಲಸ ನಿರ್ವಹಿಸದಿರಲು ತೀರ್ಮಾನಿಸಲಾಗಿದೆ ಎಂದು ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಸಂಘ ಅಧ್ಯಕ್ಷ ಬಸವರಾಜ ಬಳೊಂಡಗಿ, ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಚಂದ್ರಶ್ ಹಾಗೂ ಇತರರು ಮುಷ್ಕರಕ್ಕೆ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಮೋತಿಲಾಲ್ ಚವ್ಹಾಣ್, ತಾಲೂಕು ಅಧ್ಯಕ್ಷ ಸುನೀಲ್ ಚವ್ಹಾಣ್, ಉಪಾಧ್ಯಕ್ಷ ಗ್ರಾಮ ಅಧಿಕಾರಿಗಳಾದ ಮೈನೋದ್ದಿನ್, ಸಂಗಮೇಶ, ರಾಜು, ಮಹಾಂತೇಶ ಅನೀಲಕುಮಾರ, ವೆಂಕಟಪ್ಪ, ಪರಶುರಾಮ, ಬಸವರಾಜ, ಸಂಜೀವಕುಮಾರ, ಮಲ್ಲಿಕಾರ್ಜುನ, ಪೂಜಾ, ಭುವನೇಶ್ವರಿ, ಮಲ್ಲವ್ವ, ಪರಿಮಳ, ಹಾಲಮ್ಮ, ಜ್ಯೋತಿ, ಸಿದ್ದಮ್ಮ, ಶ್ವೇತಾ, ನರಸರೆಡ್ಡಿ, ಸತೀಶ್, ನಾಗಣ್ಣ, ಶೇಖಪ್ಪ, ಮಾರುತಿ, ಸೇರಿದಂತೆ ಇತರರು ಇದ್ದರು.

ಪದೋನ್ನತ್ತಿಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಅನೇಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಆದರೆ, ಪದೋನ್ನತ್ತಿ ಕೊಟ್ಟಿಲ್ಲ. ಇದನ್ನು ಸರಿಪಡಿಸಬೇಕು. ಪತಿ-ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಕೆಲಸದ ಅವಧಿ ನಂತರ ವರ್ಚುವಲ್‌ ಸಭೆಗಳನ್ನು ನಡೆಸದಂತೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

 -ಸುನೀಲ್ ಚವ್ಹಾಣ್,
ತಾಲೂಕು ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಿತ್ತಾಪೂರ.

ಸೋಮವಾರ, ಸೆಪ್ಟೆಂಬರ್ 16, 2024

ತಾಲ್ಲೂಕಿನದ್ಯಂತ ಸೆ. 17ಕ್ಕೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಿ.

ಚಿತ್ತಾಪೂರ: ಸಪ್ಟೆಂಬರ್ 17ರಂದು ತಾಲ್ಲೂಕಿನದ್ಯಂತ ಎಲ್ಲಾ ಸರ್ಕಾರಿ,ಅರೆ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕೆಂದು ತಹಶೀಲ್ದಾರ್
ನಾಗಯ್ಯ ಹೀರೆಮಠ ತಿಳಿಸಿದ್ದಾರೆ.

ಗಣೇಶ ಹಬ್ಬ: ಬಾಂಧವ್ಯ ಗಟ್ಟಿಗೋಳಿಸುತ್ತದೆ.

ಚಿತ್ತಾಪುರ: ಯುವಕರನ್ನು ಸಂಘಟಿಸುವ ಹಾಗೂ ಜನರ ನಡುವೆ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಬಾಂಧವ್ಯವನ್ನು ವೃದ್ಧಿಸುವ ಎಕೈಕ ಉತ್ಸವ ಅದುವೇ ಗಣೇಶ ಉತ್ಸವ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ನ್ಯೂ ಪೊಲೀಸ್‌ ವಸತಿಗೃಹದ ಏರಿಯಾದಲ್ಲಿ ಶ್ರೀ ಏಕದಂತ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಗಣೇಶ ಉತ್ಸವ ಜಾರಿಗೆ ತಂದವರು, ಬಾಲ್ ಗಂಗಾಧರ ತಿಲಕ್ ಅವರು, ಅಂದಿನಿಂದ ಇಲ್ಲಿಯವರೆಗೂ ಸಾರ್ವಜನಿಕರೆಲ್ಲರೂ ಎಲ್ಲ ಜಾತಿ ಜನಾಂಗದವರು ಒಗ್ಗೂಡಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಹೇಳಿದರು.

ಈ ಏರಿಯಾದಲ್ಲಿ ಕಳೆದ 9 ವರ್ಷಗಳಿಂದ ಯುವಕರು ಒಗ್ಗೂಡಿ ಬಹಳ ಹುಮ್ಮಸ್ಸಿನಿಂದ ಗಣೇಶ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಿತ್ರ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಉಪ್ಪಾರ, ಪತ್ರಕರ್ತ ಜಗದೇವ ಕುಂಬಾರ, ಪ್ರಮುಖರಾದ ವಿಶ್ವನಾಥ ಸ್ವಾಮಿ, ಸಾಬಣ್ಣ ಹುಣಚೇರಿ, ಉಮೇಶ್ ಕಲಾಲ್, ಆಕಾಶ್ ಬಿರೇದಾರ್, ಕಿರಣ ಮಡಿವಾಳ, ನಾಗರಾಜ ಉಪ್ಪಾರ, ಮಲ್ಲಿಕಾರ್ಜುನ್ ಉಪ್ಪಾರ, ಪ್ರಶಾಂತ ಮಡಿವಾಳ, ಪ್ರೀತಮ್ ಮಡಿವಾಳ, ರಾಜು ಕಲಾಲ್‌, ಅಭಿಷೇಕ್ ಜಮಾದಾರ, ನಿತೀಶ ಕಲಾಲ್, ಸಿದ್ದಣ್ಣ ಗೌಡ, ಬಸ್ಸು ಸ್ವಾಮಿ, ವಿಶ್ವನಾಥ ಬಿರೇದಾ‌ರ್, ನಿಂಗೇಶ್ ಉಪ್ಪಾರ, ಮಂಜುನಾಥ ಸ್ವಾಮಿ, ಬಸವರಾಜ ಉಪ್ಪಾರ, ಸಚೀನ್ ಹುಣಚೇರಿ, ಅಭಿಷೇಕ್ ಪಾಲ್‌ ಸೇರಿದಂತೆ ಯುವಕರು, ಮಹಿಳೆಯರು ಉಪಸ್ಥಿತರಿದ್ದರು.

ಸಪ್ನಾ ಸ್ವಾಗತಿಸಿದರು, ಯಲ್ಲಯ್ಯ ಕಲಾಲ್ ನಿರೂಪಿಸಿದರು, ಕಿರಣ್ ಮಡಿವಾಳ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ, ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು, ನಂತರ ಅನ್ನ ಪ್ರಸಾದ ವಿತರಣೆ ನಡೆಯಿತು.

ಅದ್ದೂರಿಯಾಗಿ ನಡೆದ ಈದ್ ಮಿಲಾದ್.


ಚಿತ್ತಾಪುರ: ಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸೋಮವಾರ ಮೆರವಣಿಗೆ ನಡೆಸುವ ಮೂಲಕ ಹಬ್ಬದವನ್ನು ಅದ್ದೂರಿಯಾಗಿ  ಆಚರಿಸಿದರು.

ಪಟ್ಟಣದ ಐತಿಹಾಸಿಕ ಹಜರತ್ ಚಿತ್ತಷಹಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಚಿತ್ತಾವಲಿ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮೆರವಣಿಗೆಗೆ ಚಾಲನೆ ನೀಡಿದರು. ಚಿತ್ತಾವಲಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಹೋಳಿ ಕಟ್ಟಿ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜಿಂಗ್ ವೃತ್ತ, ತಹಸೀಲ್ ಕಚೇರಿ ರಸ್ತೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಕಪ್ಪಡಾ ಬಜಾರ್ ಮೂಲಕ ಪುನಃ ಚಿತ್ತಾವಲಿ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತ್ತು.

ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಪೂಜಾರಿ, ನಾಗರೆಡ್ಡಿ ಗೋಪಸೇನ್, ಭೀಮಸಿಂಗ್ ಚವ್ಹಾಣ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಮಹ್ಮದ್ ಎಕ್ಸಾಲ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಡಿ.ಯುನುಸ್, ಮೋಸಿನ್ ಚೈನು, ಆಸೀಫ್ ಶೇಖ್, ಮನಾನ್ ನಾಗಾಯಿ, ಸದ್ದಾಮ್, ಇಮ್ರಾನ್ ಖುರೇಷಿ, ಬಾಬಾ ಎಂಐಎಂ, ಇಬ್ರಾಹಿಂ ಎ.ಟು.ಝಡ್ ಹುಸೇನ್, ಇಮಾಮ್ ಅಲಿ ಸೇರಿದಂತೆ ನೂರಾರು ಯುವಕರು, ಮುಸ್ಲಿಂ ಬಾಂಧವರು ಇದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...