ಮಂಗಳವಾರ, ಫೆಬ್ರವರಿ 4, 2025

ರಾಜಸ್ಥಾನಿಗಳಿಂದ ಹಣ ವಸೂಲಿ: ರೈತರ ಆಕ್ರೋಶ.

ಚಿತ್ತಾಪುರ: ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ಸಿಕ್ಕಾಪಟ್ಟೆ ದರ ಹೆಚ್ಚಳ ಮಾಡಿ ರೈತರ ಹತ್ತಿರ ಹೆಚ್ಚಿನ ದರದಲ್ಲಿ ಹಣ ವಸೂಲಿ ಮಾಡಿರುವ ಅವರ ಮೇಲೆ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮಂಗಳವಾರ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಸಾಲಿನಲ್ಲಿ ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ತೊಗರಿ 75 ಕೆ.ಜಿ ಒಂದು ಪಾಕೀಟ ರಾಶಿ ಮಾಡಲು ರೂ.150 ಕಡಲೆ ರಾಶಿಗೆ ರೂ.80 ತೆಗೆದುಕೊಂಡು ತಾಲೂಕಿನ ರೈತರ ಜಮೀನುಗಳನ್ನು ರಾಶಿ ಮಾಡಿರುತ್ತಾರೆ.

ಆದರೆ ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ತೊಗರಿ 75 ಕೆ.ಜಿ ಒಂದು ಪಾಕೇಟಿಗೆ 250 ಹಾಗೂ ಕಡಲೆ ರಾಶಿಗೆ 150 ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ರೈತರು, ಅವರಿಗೆ ತಕರಾರು ಮಾಡಿದರೆ ನಾವು ಮಾಡುವುದು ಹೀಗೆ ನೀವು ಮಾಡಿಕೊಳ್ಳಬೇಕಾದರೆ ಮಾಡಿಕೊಳ್ಳಿ ಇಲ್ಲವಾದರೆ ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ತೊಗರಿ, ಕಡಲೆ ಬೆಲೆ ಬಹಳ ಕಡಿಮೆ ಇದ್ದು ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಆದಕಾರಣ ರೈತರ ಹತ್ತಿರ ಹೆಚ್ಚಿನ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ರಾಜಸ್ಥಾನ ಮಶೀನಗಳ ಮಾಲಿಕರ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಲಿಂಗ ಬಾನರ್‌, ಸಿದ್ಧರಾಮೇಶ್ವರ ಸಜ್ಜನಶೆಟ್ಟಿ, ನಿಂಗಣ್ಣ ಹೆಗಲೇರಿ, ಬಸವರಾಜ ಲೋಕನಳ್ಳಿ, ಪ್ರಭು ಹಲಕಟ್ಟಿ, ಲಕ್ಷ್ಮೀಕಾಂತ ಸಾಲಿ, ಮೈಪಾಲ ಮೂಲಿಮನಿ, ಬಸವರಾಜ ಮೈನಾಳಕ‌ರ್, ಕರಿಗೂಳಿ ವಾರ್ಡ್, ಕರ್ಣಕುಮಾರ ಅಲ್ಲೂರ, ಇಬ್ರಾಹಿಂ ನೈಕೋಡಿ, ಮಾರುತಿ ಇವಣಿ, ಶಿವಾಜಿ ಸೇರಿದಂತೆ ಇತರರು ಇದ್ದರು.

ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಶ್ರೀ ಚಾಲನೆ

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ತುಕಾರಾಮ ಖೀರು ನಾಯಕ ಅವರ ಮನೆಯಿಂದ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ತಾಂಡಾದ ಎಲ್ಲ ಬೀದಿಗಳಲ್ಲಿ ಪಲ್ಲಕ್ಕಿಯ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ತಾಂಡಾದ ನಾಯಕರಾದ ತುಕಾರಾಮ ಖೀರು ನಾಯಕ, ಕನ್ನು ಯಂಕು ನಾಯಕ, ಚಂದ್ರಾಮ ಚವ್ಹಾಣ, ಡಾವ ಕಿಶನ, ಕಿಶನ ಕಾರಭಾರಿ, ಸರಪಂಚ ಭೋಜು ಪವಾರ, ಕಾಂತು ಚವ್ಹಾಣ, ಲಕ್ಷಣ ಪಾಂಡು, ಅನಿಲ, ಶಂಕರ, ನಾಗರಾಜ, ವಿಠಲ ರಾಠೋಡ, ಖುಬ್ಬು ರಾಠೋಡ, ವಿಕಾಸ ಪವಾರ, ಸುರೇಶ ರೂಪಲಾ, ರಮೇಶ್ ನಾಗು, ರವಿ ಹೀರು, ಆಕಾಶ ನಿಲು ಚವ್ಹಾಣ, ಖುಬ್ಬು ಚವ್ಹಾಣ, ಶಿವರಾಮ ಚವ್ಹಾಣ, ಅಶ್ವಥ ರಾಠೋಡ ಸೇರಿದಂತೆ ತಾಂಡಾದ ತಾಯಂದಿರು ಹಲವಾರು ಗಣ್ಯಮಾನ್ಯರು ಇದ್ದರು.

ತೋಟೇಂದ್ರ ಸ್ವಾಮೀಜಿ ಅಳಿಯ ಆತ್ಮಹತ್ಯೆ.

ಚಿತ್ತಾಪುರ: ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಭಕ್ತನೋರ್ವ ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಗುಂಡು ಹಿರೇಮಠ ಆತ್ಮಹತ್ಯೆಗೆ ಒಳಗಾದ ವ್ಯಕ್ತಿ (34) ಮಠದಲ್ಲಿನ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಮೃತ ಗುಂಡು ಮಠದ ಪೀಠಾಧಿಪತಿ ಪೂಜ್ಯ ಶ್ರೀ ತೋಟೇಂದ್ರ ಶಿವಾಚಾರ್ಯ ಅವರ ತಂಗಿಯ ಪುತ್ರ ಎನ್ನಲಾಗಿದ್ದು, ಒಂದು ವರ್ಷದ ಹಿಂದೆ ಇವರ ಮದುವೆಯಾಗಿತ್ತು. ಪೂಜ್ಯರ ಸೇವೆ ಮಾಡುತ್ತ ಮಠದಲ್ಲೇ ವಾಸವಿದ್ದರು ಎಂಬುದು ಸಾರ್ವಜನಿಕರ ಮೂಲಗಳಿಂದ ತಿಳಿದುಬಂದಿದೆ. ಇನ್ನೊಂದು ಕಡೆ ಶ್ರೀ ಕೋರಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಗಿದು ಒಂದು ವಾರ ಕಳೆದಿಲ್ಲ ಮಠದಲ್ಲಿ ಆತ್ಮಹತ್ಯೆ ಘಟನೆ ತಿಳಿದು ಭಕ್ತರಲ್ಲಿ ದು:ಖದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ವಾಡಿ ಠಾಣೆ ಪಿಎಸ್‌ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಬುಧವಾರ, ಜನವರಿ 29, 2025

ಭಾಗೋಡಿ- ಮುಡಬೂಳ ರಸ್ತೆ ದುರಸ್ತಿಗೆ ಆಗ್ರಹ.

ಚಿತ್ತಾಪುರ: ಭಾಗೋಡಿ ಮತ್ತು ಮುಡಬೂಳ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ತಕ್ಷಣ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ತಾಲೂಕಿನ ಭಾಗೋಡಿ ಗ್ರಾಮದಿಂದ ಮುಡಬೂಳ ಗ್ರಾಮ 8 ಕಿಲೋ ಮೀಟರ್ ರಸ್ತೆ ಡಾಂಬರೀಕರಣ ಮಾಡಿ ಎರಡು/ಮೂರು ವರ್ಷಗಳು ಕಳೆದಿಲ್ಲ ರಸ್ತೆಯ ಸ್ಥಿತಿಗತಿ ಬದಲಾಗಿ ರಸ್ತೆಯಲ್ಲಿ ಗುಂಡಿ, ತಗ್ಗುಗಳು ಬಿದ್ದಿರುವದರಿಂದ ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಅದಲ್ಲದೇ, ದಿನಾಲು ಒಂದಲ್ಲ ಒಂದು ಅಪಘಾತಗಳು ನಡೆಯುತ್ತಿರುವುದರಿಂದ ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದು ರಸ್ತೆ ದುರಸ್ತಿ ಮಾಡದಿರುವ ಬಗ್ಗೆ ಸಾರ್ವಜನಿಕರು ಇಲಾಖೆ ಆಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದ್ದಾರೆ. ಕೂಡಲೇ ಈ ರಸ್ತೆ ದುರಸ್ತಿ ಕೆಲಸ ಪ್ರಾರಂಭಿಸಿ ಸಾರ್ವಜನಿಕರಿಗೆ ಆನುಕೂಲ ಮಾಡಿಕೊಡುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭಾಗೋಡಿ-ಮುಡಬೂಳ ರಸ್ತೆಯ ಮೇಲೆ ದಿನನಿತ್ಯ ಮರಳು ತುಂಬಿದ ಬಾರಿ ಗಾತ್ರದ ಟಿಪ್ಪರ್, ಟ್ರಾಕ್ಟರ್ ಓಡಾಟದಿಂದ ರಸ್ತೆ ಹಾಳಾಗಿದೆ ಮರಳು ಗಾಡಿಗಳ ಓಡಾಟಕ್ಕೆ ಕಡಿವಾಣ ಹಾಕಿ ರಸ್ತೆ ಸುಧಾರಣೆ ಮಾಡಿ ಗ್ರಾಮಗಳ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದರು.

- ಬಸವರಾಜ ಪೋಲಿಸ್ ಪಾಟೀಲ ದಳಪತಿ 
ಗ್ರಾಮಸ್ಥರು ಭಾಗೋಡಿ.


ರಸ್ತೆ ದುರಸ್ತಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಎರಡು ಗ್ರಾಮಗಳ ಗ್ರಾಮಸ್ಥರು ಸೇರಿ ಕಲಬುರ್ಗಿ ಹೋಗುವ ಮುಡಬೂಳ ಹತ್ತಿರದ ಮುಖ್ಯ ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

- ಭಾಗಣ್ಣ ಮುಡಬೂಳ
ಜಿಲ್ಲಾ ಉಪಾಧ್ಯಕ್ಷರು, ಅಂಬೇಡ್ಕರ್ ಸೇವಾ ಸಮಿತಿ ಕಲಬುರ್ಗಿ.

ಭವ್ಯ ಮೆರವಣಿಗೆ, ಡಿಜೆ ಸೌಂಡಗೆ ಕುಣಿದು ಕುಪ್ಪಳಿಸಿದ ಯುವಕರು.

ಚಿತ್ತಾಪುರ: ನಿಜಶರಣ ಅಂಬಿಗರ ಚೌಡಯ್ಯ ನವರ 905 ನೇ ಜಯಂತ್ಯೋತ್ಸವ ನಿಮಿತ್ತ ತಾಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಿಂದ ಪ್ರಾರಂಭವಾಗದ ಮೆರವಣಿಗೆ ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕ‌ರ್ ವೃತ್ತ, ಬಸ್‌ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಡಿಂಗ್ ಕ್ರಾಸ್ ವರೆಗೆ ನಡೆಯಿತ್ತು.

ಈ ವೇಳೆ ತಾಲೂಕು ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿಯ ಶೋಭಾಯಾತ್ರೆ ಮಾಡುವುದಕ್ಕೆ ಎಷ್ಟೇ ಅಡೆತಡೆ ಹಾಗೂ ಯುವಕರ ಉತ್ಸಾಹ ಕುಗ್ಗಿಸುವ ಎಷ್ಟೇ ಪ್ರಯತ್ನ ಮಾಡಿದರೂ ಸಹ ಯುವಕರ ಒಗ್ಗಟ್ಟಿನಿಂದ ಮತ್ತು ಸಹಕಾರದಿಂದ ಯಶಸ್ವಿಯಾಗಿದೆ, ಇದರಿಂದ ಯುವಶಕ್ತಿ ಏನೆಂಬುದು ತೋರಿಸಿಕೊಟ್ಟಿದೆ. ಇದೊಂದು ಐತಿಹಾಸಿಕ ಶೋಭಾಯಾತ್ರೆ ಎಂದರೆ ತಪ್ಪಾಗಲಾರದು ಈ ನಿಟ್ಟಿನಲ್ಲಿ ಬಹಳ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ ಇದಕ್ಕೆ ಸಹಕರಿಸಿದ ಕೋಲಿ ಸಮಾಜದವರಿಗೂ ಹಾಗೂ ಇತರೆ ಸಮಾಜದ ಮುಖಂಡರಿಗೂ, ಯುವಕರಿಗೂ ಹಾಗೂ ರಕ್ಷಣೆ ನೀಡದ ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಸಲ್ಲಿಸಿದರು.

ಮೆರವಣಿಗೆಯಲ್ಲಿ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿ ಜೊತೆಗೆ ಬುದ್ಧ, ಬಸವ, ಅಂಬೇಡ್ಕ‌ರ್ ಸೇರಿದಂತೆ ಎಲ್ಲ ಸಮಾಜಗಳ ಗುರುಗಳ ಭಾವಚಿತ್ರದ ಮೆರವಣಿಗೆ ವಿಶೇಷವಾಗಿತ್ತು. ಡಿಜೆ ಸೌಂಡ್ ಗೆ ಯುವಕರು ಉತ್ಸಾಹ ಮತ್ತು ಹರ್ಷೋಲಾಸದಿಂದ ಕುಣಿದು ಹರ್ಷೋಲ್ಲಾಸದಿಂದ ಕುಣಿದು ಕುಪ್ಪಳಿಸಿದರು, ಸೋಲ್ಲಾಪುರದ ಡೊಳ್ಳು ಕುಣಿತ ವಿಶೇಷವಾಗಿ ಆಕರ್ಷಿಸಿತು, ಕುಂಬ ಹೊತ್ತ ಮಹಿಳೆಯರಿಂದ ಮೆರವಣಿಗೆಗೆ ಮೆರುಗು ನೀಡಿತು ಬ್ಯಾಂಜೋ ಮತ್ತು ಹಲಗೆ ವಾದನದ ಅಬ್ಬರ ಜೋರಾಗಿತ್ತು.

ಪಿಎಸ್‌ಐ ಶ್ರೀಶೈಲ್ ಅಂಬಾಟಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಯುವ ಅಧ್ಯಕ್ಷ ಬಸವರಾಜ್ ಮೈನಾಳಕರ, ಯುವ ಮುಖಂಡರಾದ ಸಾಬಣ್ಣ ಹೋಳಿಕಟ್ಟಿ, ಬಸವರಾಜ್‌ ರಾಜೋಳ್ಳಿ, ದೇವರಾಜ್ ತಳವಾರ, ಪರಮಾನಂದ ಕಲಗುರ್ಕಿ, ರೇವಣಸಿದ್ದು, ಜಗದೀಶ್ ಹಳ್ಳಿ, ಆಕಾಶ್ ಬೆನಕನಳ್ಳಿ, ಬಾಗೇಶ್ ಹಳ್ಳಿ, ಸಾಬಣ್ಣ ಹೋಳಿಕಟ್ಟಿ, ಅಭಿಷೇಕ್ ಯಾರಗಲ್, ಗೌತಮ್, ಮೈಲಾರಿ, ಜಗ್ಗು, ಸುನಿಲ್ ದಂಡೋತಿ, ನಾಗರಾಜ್ ಮೈನಾಳಕರ, ಭೀಮು ಹೋಳಿಕಟ್ಟಿ, ಭೀಮು ಹೋನಗೆರಿ, ಕಾಶಪ್ಪ ಬಾಗೋಡಿ, ಮುನಿಯಪ್ಪ ಬಾಗೋಡಿ, ದಶರಥ ಹೊತಿನಮಡಿ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.

ಮಂಗಳವಾರ, ಜನವರಿ 28, 2025

ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆ: ಚಿಂಚನಸೂರ.

ಚಿತ್ತಾಪುರ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದ ಹತ್ತಿರ ತಾಲೂಕು ಕೋಲಿ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ನವರ 905ನೇ ಜಯಂತ್ಯೋತ್ಸವ ನಿಮಿತ್ತ ಶೋಭಾಯಾತ್ರೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸಮಾಜಗಳು ಮುಂದೆ ಬಂದಿವೆ ಆದರೆ ಕೋಲಿ ಸಮಾಜ ಮಾತ್ರ ಹಿಂದುಳಿದಿದೆ ಅದಕ್ಕೆ ನಮ್ಮವರೇ ಕಾರಣ ಎಂದು ದೂರಿದರು.
ಗುರುಮಠಕಲ್ ಕ್ಷೇತ್ರದಿಂದ ನನ್ನ ಸೋಲಿಗೆ ನಮ್ಮವರೇ ಕಾರಣ ಒಂದು ವೇಳೆ ನಾನು ಗೆಲುವು ಸಾಧಿಸಿದ್ದರೆ ಪ್ರಭಾವಿ ಖಾತೆಯ ಪವರಫುಲ್ ಮಂತ್ರಿಯಾಗುತ್ತಿದ್ದೆ, ಹಾಗೂ ಕೋಲಿ ಸಮಾಜ ಎಸ್‌.ಟಿ ಮಾಡುವ ಸಲುವಾಗಿ ಪ್ರಧಾನಿ ಮೋದಿ ಮನೆ ಮುಂದೆ ಅಮರಣಾಂತ ಉಪವಾಸ ಮಾಡುತ್ತಿದ್ದೆ. ಈಗ ನಾನು ಸೋತರೂ ಅಧಿಕಾರದಲ್ಲಿ ಇದ್ದೇನೆ ಎಂದು ಹೇಳಿದರು.

ನಾನು ಅಧಿಕಾರಕ್ಕೆ ಬಂದಾಗೆಲ್ಲ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ ಆಗಿನ ಮುಖ್ಯಮಂತ್ರಿ ಈರಪ್ಪ ಮೊಯ್ಲಿ ಅವರ ಮೇಲೆ ಒತ್ತಡ ಹೇರಿ ಕೋಲಿ ಸಮಾಜವನ್ನು ಪ್ರವರ್ಗ 1 ಕ್ಕೆ ಸೇರಿಸಿದ್ದೇನೆ, ಕೋಲಿ ಸಮಾಜದ ದೇವಸ್ಥಾನಗಳಿಗೆ 33 ಕೋಟಿ ಅನುದಾನ ನೀಡಿದ್ದೇನೆ, ಎಸ್.ಟಿ ಸೇರಿಸುವ ಸಲುವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ ಹೀಗಾಗಿ ನಾನು ಸುಮ್ಮನೆ ಸಾಯುವುದಿಲ್ಲ ಕೋಲಿ ಸಮಾಜವನ್ನು ಎಸ್‌.ಟಿ ಮಾಡಿಯೇ ಸಾಯುತ್ತೇನೆ ಇದು ಶತಸಿದ್ಧ ಎಂದು ವಾಗ್ದಾನ ಮಾಡಿದರು. ಕೋಲಿ ಸಮಾಜ ಎಸ್.ಟಿ ಆದಾಗ ಮಾತ್ರ ಅಭಿವೃದ್ಧಿ ಆಗಲಿದೆ ಹೀಗಾಗಿ ನಮ್ಮ ಕೂಗು ದೆಹಲಿ ಗೆ ಮುಟ್ಟುವ ಹಾಗೆ ಹೋರಾಟ ಮಾಡಬೇಕು ಇದಕ್ಕಾಗಿ ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.
ಈ ಭಾಗದ ಶಾಸಕರು ಸಚಿವರಾದ ಪ್ರಿಯಾಂಕ್ ಖರ್ಗೆ ಪ್ರಭಾವಿ ನಾಯಕರು, ಅಭಿವೃದ್ಧಿ ಹರಿಕಾರರು ಆಗಿದ್ದು ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಹೀಗಾಗಿ ಭವಿಷ್ಯದಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ನಾನು ಸಹ ಮುಂದಿನ ಚುನಾವಣೆಯಲ್ಲಿ ಗೆದ್ದು ರಾಜ್ಯದ ಉಪ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ತೋನಸನಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಮಾತನಾಡಿ, ಚಿತ್ತಾಪುರ ಕ್ಷೇತ್ರದಲ್ಲಿ ಕೋಲಿ ಸಮಾಜದ ಬಹುದೊಡ್ಡ ಶಕ್ತಿ ಇದೆ.ಚುನಾವಣೆಗಳಲ್ಲಿ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಇದೆ ಈ ಕ್ಷೇತ್ರದಿಂದಲೇ ಬಾಬುರಾವ್‌ ಚಿಂಚನಸೂರ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೋಲಿ ಸಮಾಜದ ಶಕ್ತಿ ಇಡೀ ರಾಜ್ಯಕ್ಕೆ ತೋರಿಸಿದ್ದಾರೆ ಅಲ್ಲದೇ ಪ್ರಿಯಾಂಕ್ ಖರ್ಗೆ ಶಾಸಕರಾಗಿ ಸಚಿವರಾಗಿ
ಆಗಿದ್ದಾರೆ ಹೀಗಾಗಿ ಕೋಲಿ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕೋಲಿ ಸಮಾಜದ ಮುಖಂಡರಾದ ಲಚ್ಚಪ್ಪ ಜಮಾದಾರ, ಭೀಮಣ್ಣ ಸಾಲಿ ಮಾತನಾಡಿದರು. ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನ‌ರ್, ನಗರಾಧ್ಯಕ್ಷ ಪ್ರಭು ಹಲಕಟ್ಟಿ, ಯುವ ಅಧ್ಯಕ್ಷ ಬಸವರಾಜ ಮೈನಾಳಕ‌ರ್, ಮುಖಂಡರಾದ ಹಣಮಂತ ಸಂಕನೂರ, ಬಸವರಾಜ ಚಿನ್ನಮಳ್ಳಿ, ರೇಖಾ ತಳವಾರ, ಭೀಮರಾಯ ಹೊತಿನಮಡಿ, ಮಹೇಶ್ ಮುಕೆ, ಶರಣಪ್ಪ ನಾಶಿ, ಪಿಂಟು ಜಮಾದಾರ, ದತ್ತು ಬಸವಕಲ್ಯಾಣ, ಮುನಿಯಪ್ಪ ಕೊಳ್ಳಿ, ಸಿದ್ದು ಸಂಗಾವಿ, ದೇವಿಂದ್ರ ಕೆರಳ್ಳಿ, ಸುರೇಶ್ ಬೆನಕನಳ್ಳಿ, ಸತೀಶ್ ಜಮಾದಾರ, ಸಂತೋಷ ಮಳಬಾ, ಮಲ್ಲಿಕಾರ್ಜುನ ಸಂಗಾವಿ, ಕರಣಕುಮಾ‌ರ್ ಅಲ್ಲೂರು, ಶರಣು ಡೋಣಗಾಂವ, ಚಂದ್ರು ಕಾಳಗಿ, ಮೈಪಾಲ್ ಮೂಲಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಎಮ್ಮೆನೋ‌ರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ. ಅರಣಕಲ್ ನಿರೂಪಿಸಿದರು.

ಯುವ ಘಟಕ ವತಿಯಿಂದ ಬೃಹತ್ ಶೋಭಾಯಾತ್ರೆ.

ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದ ಯುವ ಘಟಕ ಅಧ್ಯಕ್ಷ ರಾಜು ಹೋಳಿಕಟ್ಟಿ, ನಗರ ಅಧ್ಯಕ್ಷ ಬಸವರಾಜ ಮೈನಾಳಕರ್, ಬಸವರಾಜ ರಾಜೋಳ್ಳಿ , ಪ್ರಕಾಶ ಯಾಡಗೂಟ್ಟಿ, ಭಾಗಣ್ಣ ಹಳ್ಳಿ, ಜಗ್ಗು ಹಳ್ಳಿ, ನಾಗು ದಂಡಗುಂಡ, ಗೂಳಿ ಡಿಗ್ಗಿ, ಶಿವು ದಿಗ್ಗಾಂವ್ , ನಾಗು, ಗೌತಮ ಇತರರ ನೆತೃತ್ವದಲ್ಲಿ ಜ.28 ಇಂದು ಸಾಯಂಕಾಲ 4:30ಕ್ಕೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಅವರು ಬೃಹತ್‌ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಜೊತೆಗೆ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಸೇರಿದಂತೆ ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ.

ಬೃಹತ್‌ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಕಳಸ, ಡೊಳ್ಳು ಕುಣಿತ, ಹಲಿಗೆ ವಾದನ ಶೋಭಾಯಾತ್ರೆಗೆ ಮೆರಗು ನೀಡಲಿದೆ. ಅಂಬಿಗರ ಚೌಡಯ್ಯನವರ ಮೂರ್ತಿ, ಮಾತೆ ಮಾಣಿಕೇಶ್ವರಿ, ಕೋಲಿ ಸಮಾಜದ ಧೀಮಂತ ಹೋರಾಟಗಾರ ದಿ.ವಿಠಲ್ ಹೇರೂರ ಭಾವಿಚಿತ್ರದ ಜೊತೆಗೆ ಅನೇಕ ಶರಣರ ಭಾವಚಿತ್ರವು ಅದ್ಧೂರಿಯಾಗಿ ಬೃಹತ್‌ ಶೋಭಾಯಾತ್ರೆ ಮೆರವಣಿಗೆ ನಡೆಯಲಿದ್ದು ಕೋಲಿ ಸಮಾಜದ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ತಿಳಿಸಿದ್ದಾರೆ.

ಸೋಮವಾರ, ಜನವರಿ 27, 2025

ರೋಣದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

ಚಿತ್ತಾಪುರ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ರೋಣದ ಆವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನಿವೃತ್ತ ನೌಕರರ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಅಧ್ಯಕ್ಷರ ಆಯ್ಕೆ ಮಾಡಿದ್ದು ತಾಲೂಕು ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಕಿಶನ್ ರಾಠೋಡ ಸೂಚಿಸಿದರು ಮೋನಯ್ಯ ಪಂಚಾಳ ಅನುಮೋದನೆ ಮಾಡಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರ ವಿಜಯಕುಮಾರ ಲೊಡ್ಡೆನೋರ ಖಜಾಂಚಿ ಮಲ್ಲಣ್ಣ ಮಾಡಬೂಳ, ಮಲ್ಲಿಕಾರ್ಜುನ ಮಲಕೂಡ, ಸುಭಾಷ್ ಮೆಂಗಜೀ ಆರೋಗ್ಯ ಇಲಾಖೆಯ ನಿಜಾಮೋದಿನ್, ಶಿವಾಜಿ ನಿಂಬೆಳಕರ, ಬಸವರಾಜ ಕಲಬುರ್ಗಿ ಬಾಗೋಡಿ, ಹಾಜಪ್ಪ ಶಹಾಬಾದ್, ಶಶಿಧರ, ಮಹ್ಮದ್ ಅಬ್ದುಲ್ ನಬಿ ರವಿ ಪೊತ್ದಾರ, ಇದ್ದರು.ಮಹಾದೇವಪ್ಪ ಉಪ್ಪಾರ ನಿರೂಪಿಸಿ, ಕಿಶನ್ ರಾಠೋಡ ವಂದಿಸಿದರು.

ಲುಂಬಿನಿ ಗಾರ್ಡನ್ ಲೋಕಾರ್ಪಣೆಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ ಅದರಲ್ಲೂ ಚಿತ್ತಾಪುರ ತಾಲೂಕಿನ ಜನರ ಮನೋರಂಜನೆಗಾಗಿ ಹಾಗೂ ವಾರದ ಕೊನೆ ದಿನದಲ್ಲಿ ಮಕ್ಕಳ ಆಟೋಪೋಹಾರಕ್ಕಾಗಿ ಒಂದು ಸುಸಜ್ಜಿತ ಉದ್ಯಾನವನದ ಸ್ಥಾಪನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ತಾಲೂಕಿನ ಗುಂಡಗುರ್ತಿ ಗ್ರಾಮದ ಬಳಿ ಜನಾಕರ್ಷಕ ಲುಂಬಿನಿ ಉದ್ಯಾನವನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಸುಮಾರು 10 ಎಕರೆ ವಿಸ್ತಾರ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಡಿಎಂಎಫ್ ಅನುದಾನ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ವಿವಿಧ ಬಗೆಯ ಸೌಲಭ್ಯಗಳಿಂದ ಜನರನ್ನು ಆಕರ್ಷಿಸುವುದರ ಜೊತೆಗೆ ವಿಭಿನ್ನ ಪ್ರಬೇಧದ ಚಿಟ್ಟೆಗಳು ಹಾಗೂ ಮರಗಿಡಗಳು ಹಾಗೂ ಹಚ್ಚ ಹಸಿರಿನ ಹುಲ್ಲು ಮನಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ ಮತ್ತು ಮಿಯಾವಾಕಿ ಅರಣ್ಯ ಚಿಟ್ಟೆ ಪಾರ್ಕ್, ಮರದ ಸೇತುವೆ, ಕಾರಂಜಿ, ವಿವಿಧ ಬಗೆಯ ಗಿಡಗಳು, ಹಸಿರು ಹುಲ್ಲಿನ ಹೊದಿಕೆ, ಮಕ್ಕಳ ಆಟದ ಸಾಮಾಗ್ರಿಗಳು, ವಾಟರ್ ಫಾಲ್ಸ್ ಇತ್ಯಾದಿ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿವೆ ಎಂದರು.

ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರು,ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿಪಂ ಸಿಇಒ ಭಂವ‌ರ್ ಸಿಂಗ್ ಮೀನಾ, ಎಸ್.ಪಿ ಅಡ್ಡರು ಶ್ರೀನಿವಾಸಲು, ಸೇಡಂ ಸಹಾಯಕ ಆಯುಕ್ತ
ಪ್ರಭು ರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಸಿಸಿಎಫ್‌'ಗಳಾದ ಸುಮೀತ್ ಕುಮಾರ ಪಾಟೀಲ್, ಚೇತನ್ ಗಸ್ತಿ, ಸಾಗರ ತವಡೆ, ಎಸಿಎಫ್ ಮುನೀರ್ ಅಹ್ಮದ್, ಆರ್‌'ಎಫ್‌'ಒ ವಿಜಯಕುಮಾರ್ ಬಡಿಗೇ‌ರ್, ಚಂದ್ರಶೇಖರ ಹೇಮಾ, ಜಗನ್ನಾಥ ಕೊರಳ್ಳಿ ವಿಶ್ವನಾಥ ಪಾಟೀಲ್‌, ಗ್ರಾಪಂ ಅಧ್ಯಕ್ಷೆ ಸಂಪೂರ್ಣ ಬಣ್ಣಕ್ಕಿ ಪ್ರಮುಖರಾದ ಭೀಮಣ್ಣ ಸಾಲಿ, ರಮೇಶ ಮರಗೋಳ, ಶಿವಾನಂದ ಪಾಟೀಲ್‌, ಸುನೀಲ ದೊಡ್ಡಮನಿ, ಮುಕ್ತಾರ ಪಟೇಲ್, ಮನ್ಸೂ‌ರ್ ಪಟೇಲ್‌, ಬಸವರಾಜ ಹೊಸಳ್ಳಿ, ಯಲ್ಲಾಲಿಂಗ ಮುಗಟಿ, ಅಶೋಕ ವೀರನಾಯಕ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ರಾಮಲಿಂಗ ಬಾನಾರ್, ಹಣಮಂತ ಸಂಕನೂರ, ನಯಿಮ್, ಶೇಖ ಬಬ್ಲು ಮಹ್ಮದ್ ಇಬ್ರಾಹಿಂ, ಕರಣ ಅಲ್ಲೂರ್, ಸುನೀಲ್‌ ಅಮಗೋಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ವಿದ್ಯಾರ್ಥಿಗಳು ಪರೀಕ್ಷೆ ಅನುಕೂಲ ಪಡೆಯಲಿ : ನಾಗರೆಡ್ಡಿ ಪಾಟೀಲ.

ಚಿತ್ತಾಪುರ: ವಿಶ್ವಗುರು ಶಿಕ್ಷಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ವತಿಯಿಂದ 10 ನೇ ತರಗತಿಯಿಂದ ಹೊರಹೊಮ್ಮುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತಿಭೆ ಗುರುತಿಸುವ ಪರೀಕ್ಷೆಗಳನ್ನು (Talent Search Exam) ದಿನಾಂಕ ಫೆಬ್ರವರಿ 2 ಹಾಗೂ 9 ರಂದು ಕಾಲೇಜು ಆವರಣದಲ್ಲಿ ನಡೆಸಲು ತೀರ್ಮಾನಿಸಿದ್ದು ಆಸಕ್ತಿವುಳ್ಳ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಭಾಗಿಯಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಕೋರಿದ್ದಾರೆ.

ಫೆಬ್ರವರಿ 16 ರಂದು 10 ನೇ ತರಗತಿಯಿಂದ ಹೊರಹೊಮ್ಮುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ರಸಪ್ರಶ್ನೆವುಳ್ಳ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಂಡಿದ್ದು ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೊದಲನೆ ಬಹುಮಾನ 10,100, ಎರಡನೆ ಬಹುಮಾನ 5,100, ಮೂರನೇ ಬಹುಮಾನ 2,500 ಬಹುಮಾನ ವಿತರಿಸಲಾಗುವುದು. ತಾಲೂಕಿನ ಎಲ್ಲಾ ಪ್ರೌಢ ಶಾಲೆ ಕೇಂದ್ರಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸೂಚನೆ: ಮೊದಲನೇ ಐದು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು. ಉಳಿದ 20 ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರನ್ನು ಹಾಗೂ ಉಪನ್ಯಾಸಕರನ್ನು 7406620055, 9591450303, 9663542019 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ನಾಳೆ ಅಂಬಿಗರ ಚೌಡಯ್ಯನ ಮೂರ್ತಿ ಬೃಹತ್ ಶೋಭಾಯಾತ್ರೆ.

ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದಿಂದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ನೇತೃತ್ವದಲ್ಲಿ ಜ.28 ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ನಗರ ಅಧ್ಯಕ್ಷ ಬಸವರಾಜ ಮೈನಾಳಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಅಂಬಿಗರ ಚೌಡಯ್ಯ ಭವನದ ಸಮೀಪ ಜ.28 ರಂದು ಮಧ್ಯಾಹ್ನ 1 ಗಂಟೆಗೆ ಶೋಭಾಯಾತ್ರೆಯಲ್ಲಿ ತೊನಸನಹಳ್ಳಿ (ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನದ ಮಲ್ಲಣಪ್ಪ ಮಹಾಸ್ವಾಮಿ, ಶಹಾಪೂರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ಸಾನಿಧ್ಯದಲ್ಲಿ ನಡೆಯಲಿದೆ. ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಅವರು ಬೃಹತ್‌ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಜೊತೆಗೆ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಸೇರಿದಂತೆ ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ.

ಬೃಹತ್‌ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಕಳಸ, ಡೊಳ್ಳು ಕುಣಿತ, ಹಲಿಗೆ ವಾದನ ಶೋಭಾಯಾತ್ರೆಗೆ ಮೆರಗು ನೀಡಲಿದೆ. ಅಂಬಿಗರ ಚೌಡಯ್ಯನವರ ಮೂರ್ತಿ, ಮಾತೆ ಮಾಣಿಕೇಶ್ವರಿ, ಕೋಲಿ ಸಮಾಜದ ಧೀಮಂತ ಹೋರಾಟಗಾರ ದಿ.ವಿಠಲ್ ಹೇರೂರ ಭಾವಿಚಿತ್ರದ ಜೊತೆಗೆ ಅನೇಕ ಶರಣರ ಭಾವಚಿತ್ರವು ಅದ್ಧೂರಿಯಾಗಿ ಬೃಹತ್‌ ಶೋಭಾಯಾತ್ರೆ ಮೆರವಣಿಗೆ ನಡೆಯಲಿದ್ದು ನಗರದ ಕೋಲಿ ಸಮಾಜದ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...