ಗುರುವಾರ, ಜನವರಿ 22, 2026

ನಿಯಮ ಗಾಳಿಗೆ ತೂರಿದ ಅಂಗಡಿಗಳು.


ನಿಯಮ ಗಾಳಿಗೆ ತೂರಿದ ಅಂಗಡಿಗಳು. 
ಪರವಾನಿಗೆ ಇಲ್ಲಾ. ರಾಜಾರೋಷವಾಗಿ ವ್ಯಾಪಾರ.

-ಜಗದೇವ ಎಸ್ ಕುಂಬಾರ.
ಚಿತ್ತಾಪುರ: ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಇತ್ತೀಚಿನ ದಿನಗಳಲ್ಲಿ ನಬಾಯಿಯಂತೆ ಫಾಸ್ಟ್ ಫುಡ್ ಅಂಗಡಿಗಳು ಹಾಗೂ ಧಾಬಾಗಳು, ಖಾನಾವಳಿ, ಪಾನಿಪುರಿ, ಐಸ್ಕ್ರೀಮ್, ಚಹಾ, ಅಂಗಡಿಗಳು ತಲೆಎತ್ತಿವೆ. ಆದರೆ, ಇವುಗಳಲ್ಲಿ ಬಹುತೇಕ ಅಂಗಡಿಗಳು ಸ್ಥಳೀಯ ಪುರಸಭೆಯಿಂದ ಯಾವುದೇ ಅಧಿಕೃತ ಪರವಾನಿಗೆಯನ್ನು ಪಡೆಯದೆ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಕೆಲ ಮುಖ್ಯ ರಸ್ತೆಗಳ ಬದಿಯಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡು ಈ ಅಂಗಡಿಗಳನ್ನು ನಡೆಸಲಾಗುತ್ತಿದೆ. ಸಂಜೆ ವೇಳೆಯಾಗುತ್ತಿದ್ದಂತೆ ಗ್ರಾಹಕರ ವಾಹನಗಳು ರಸ್ತೆಯಲ್ಲೇ ನಿಲ್ಲುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಡಲು ಹರಸಾಹಸ ಪಡುವಂತಾಗಿದೆ.ಬುಧವಾರ ಸಂತೆಯಂದು ಜನರು ಪಡುವ ಕಷ್ಟ ಹೇಳತೀರದು.

ರಾಜಾಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ಬಿಹಾರ, ಹರಿಯಾಣ ಹೀಗೆ ನಾನಾ ರಾಜ್ಯಗಳ ಜನರು ಬಂದು ಇಲ್ಲಿ ವಿವಿಧ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಅಂಗಡಿಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಯಾರು ತಪಾಸಣೆ ಮಾಡುತ್ತಿಲ್ಲ. ತೆರೆದ ಜಾಗದಲ್ಲಿ ಅಡುಗೆ ಮಾಡುವುದು, ಬಳಸಿದ ನೀರನ್ನು ರಸ್ತೆಗೆ ಚೆಲ್ಲುವುದು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ರಾತ್ರಿಯಾದರೂ ಕೆಲ ಧಾಬಾಗಳು ಮತ್ತು ಕೆಲ ಹೋಟೆಲ್, ಪಾನ ಶಾಪ್, ಫಾಸ್ಟ್ ಫುಡ್ ಅಂಗಡಿಗಳು ತೆರೆದಿರುತ್ತವೆ, ಇದರಿಂದ ರಾತ್ರಿ ವೇಳೆ ಅಪರಿಚಿತರು ಯಾರು ಬೇಕಾದರು ಬರುತ್ತಿದ್ದು. ರಾತ್ರಿ ವೇಳೆ ಕಳ್ಳತನ ಕೂಡ ಜಾಸ್ತಿ ಆಗುತ್ತಿವೆ ಅಲ್ಲದೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಕನಿಷ್ಠ ಪರವಾನಿಗೆಯೂ ಇಲ್ಲದೆ ಇವರು ವ್ಯಾಪಾರ ಮಾಡುತ್ತಿದ್ದಾರೆ. ಇದು ಸ್ಥಳೀಯ ಆಡಳಿತದ ಕಣ್ಣಿಗೆ ಕಾಣಿಸುತ್ತಿಲ್ಲವೇ?" ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

"ಯಾವುದೇ ಹೊಸ ಉದ್ದಿಮೆ ಪ್ರಾರಂಭಿಸಲು ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ. ಆದರೆ ಚಿತ್ತಾಪುರ ಪಟ್ಟಣದಲ್ಲಿ ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ. ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ, ಅನಧಿಕೃತವಾಗಿ ನಡೆಯುತ್ತಿರುವ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು".

-ನರಹರಿ ಕುಲ್ಕರ್ಣಿ
ತಾಲೂಕಾಧ್ಯಕ್ಷ, ಕರವೇ (ಪ್ರವೀಣ್ ಶೆಟ್ಟಿ ಬಣ) ಚಿತ್ತಾಪುರ.


"ಪುರಸಭೆಯಿಂದ ಪರವಾನಿಗೆ ಪಡೆಯದ ಅಂಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು".

ಮನೋಜಕುಮಾರ್ ಗುರಿಕಾರ್
ಮುಖ್ಯಾಧಿಕಾರಿಗಳು, ಪುರಸಭೆ ಚಿತ್ತಾಪುರ.

ಮಂಗಳವಾರ, ಜನವರಿ 20, 2026

ಜನವರಿ 25ಕ್ಕೆ ‘ಸೇವಾರತ್ನ’ ಪ್ರಶಸ್ತಿ ಪ್ರಧಾನ ಹಾಗೂ ಪದಗ್ರಹಣ ಸಮಾರಂಭ.

ಚಿತ್ತಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸೇವಾ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭವು ಜನವರಿ 25ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಅರುಣಕುಮಾರ ಚಿಂಚನಸೂರ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ತದನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಅಣದೂರನ ಪೂಜ್ಯ ವರಜ್ಯೋತಿ ಬಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾಗೂ ಘನ ಉಪಸ್ಥಿತರಾಗಿ ರಾಜ್ಯಸಭಾ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಅವರ ಗೌರವ ಉಪಸ್ಥಿತಿ ಇರಲಿದ್ದು, ಸಂಘದ ಅಧ್ಯಕ್ಷರಾದ ಅರುಣಕುಮಾರ ಚಿಂಚನಸೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣಪ್ಪ ಕಮಕನೂರ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಸರ್ಕಾರಿ ಮತ್ತು ಅರೆ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ 'ಸೇವಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು.
"ನೌಕರರ ಒಕ್ಕೂಟದ ಶಕ್ತಿ ಪ್ರದರ್ಶನ ಮತ್ತು ಸಾಧಕರನ್ನು ಗುರುತಿಸುವ ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನತೆ ಹಾಗೂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು" ಎಂದು ಅರುಣಕುಮಾರ ಚಿಂಚನಸೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಶರಣಬಸವೇಶ್ವರ ದೇವಸ್ಥಾನದ ಹುಂಡಿ ಕಳವು.

ಚಿತ್ತಾಪುರ: ಪಟ್ಟಣದ ವರಣನಗರದಲ್ಲಿರುವ ಪುರಾತನ ಶರಣಬಸವೇಶ್ವರ ದೇವಸ್ಥಾನದಲ್ಲಿ ಜನೆವರಿ 19ರ ಸೋಮವಾರ ರಾತ್ರಿ ಕಳ್ಳರು ನುಗ್ಗಿ ದೇವಸ್ಥಾನದ ಹುಂಡಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಜನೆವರಿ 20ರ ಬೆಳಗಿನ ಜಾವ ಅರ್ಚಕರು ಎಂದಿನಂತೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಾಗ, ಹುಂಡಿಯ ಬೀಗ ಮುರಿದಿರುವುದು ಕಂಡುಬಂದಿದೆ. ಹುಂಡಿಯಲ್ಲಿದ್ದ ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಇದರಿಂದ ಆತಂಕಗೊಂಡ ಅರ್ಚಕರು ತಕ್ಷಣವೇ ದೇವಸ್ಥಾನದ ನಿರ್ವಹಣಾ ಸಮಿತಿಯ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ದೇವಸ್ಥಾನದ ಸಮಿತಿ ಸದಸ್ಯರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಎಸ್ಐ ಮಂಜುನಾಥ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಪೊಲೀಸ್ ಸಿಬ್ಬಂದಿಗಳಾದ ಅನಿಲ್ ಕುಮಾರ್, ರವಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯಿಂದ ಆಗಮಿಸಿದ ಜಿಲ್ಲಾ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳದಲ್ಲಿ ಲಭ್ಯವಿದ್ದ ಸುಳಿವುಗಳನ್ನು ಸಂಗ್ರಹಿಸಿದೆ. ಕಳ್ಳರ ಪತ್ತೆಗಾಗಿ ಪೊಲೀಸರು ದೇವಸ್ಥಾನದ ಸಿಸಿಟಿವಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ದೇವಸ್ಥಾನದಲ್ಲಿ ನಡೆದ ಈ ಕಳುವು ಘಟನೆಯಿಂದ ಭಕ್ತರಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಶರಣಬಸವೇಶ್ವರ ದೇವಸ್ಥಾನದ ಜೀವನೋದ್ಧಾರ ಹಾಗೂ ಸೇವಾ ಟ್ರಸ್ಟ್ ಖಜಾಂಚಿ ಕೊಟೇಶ್ವರ ರೇಷ್ಮೆ, ದೇವಸ್ಥಾನದ ನಿರ್ವಹಣಾ ಸಮಿತಿ ಸದಸ್ಯ ಮಹಾದೇವ ಅಂಗಡಿ 
 ಆಗ್ರಹಿಸಿದ್ದಾರೆ.

ಶುಕ್ರವಾರ, ಜನವರಿ 2, 2026

ಇಂದು ಪರಶುರಾಮ ಅಪ್ಪಾಜಿ ಜನ್ಮ ದಿನ ಆಚರಣೆ.

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಭಾಗೋಡಿ ಗ್ರಾಮದಲ್ಲಿ ಇಂದು ಪೂಜ್ಯ ಶ್ರೀ ಪರಶುರಾಮ ಅಪ್ಪಾಜಿ ರವರ 33ನೇ ಜನ್ಮ ದಿನಾಚರಣೆಯು ಅವರ ಅಭಿಮಾನಿಗಳು ಸಾಯಂಕಾಲ ಅಂಬಿಗರ ಚೌಡಯ್ಯ ಭವನದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಅಪ್ಪಾಜಿ ಅವರು ಬೇಡ ಕುಟುಂಬದಲ್ಲಿ ಜನಿಸಿದ ಅವರು ನೂರಾರು ಭಕ್ತರು ಅಭಿಮಾನಿಗಳು ಹೊಂದಿದು ಅವರ ಅಪೇಕ್ಷೆಯಂತೆ ಜನ್ಮದಿನ ಆಚರಣೆ ನಡೆಯುತ್ತಿದ್ದು ಹಾಗೂ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದು ಭಕ್ತರಾದ ಖಾಸಿಂ ಪಟೇಲ್ ತಿಳಿಸಿದ್ದಾರೆ.

ಬುಧವಾರ, ಡಿಸೆಂಬರ್ 3, 2025

ಆರ್‌ಎಸ್ಎಸ್, ಬಿಜೆಪಿ ನಕಲಿ ದೇಶಭಕ್ತರು: ಹೊಸಮನಿ.

✓ಭೀಮನಡೆ ಯಶಸ್ವಿ ಬಿಜೆಪಿ ಹತಾಶೆ,   ✓ಬಿಜೆಪಿಗರ ಆರೋಪ ಸತ್ಯಕ್ಕೆ ದೂರ.

ಚಿತ್ತಾಪುರ: ಆರ್‌ಎಸ್ಎಸ್ ನವರು ತ್ರಿವರ್ಣ ಧ್ವಜಗಳು ಹಿಡಿದಿಲ್ಲ ಕೈಯಲ್ಲಿ ಬಡಗಿ ಹಿಡಿದು ಪಥಸಂಚಲನ ಮಾಡಿದ್ದರೆ ನಾವು ತ್ರಿವರ್ಣ ಧ್ವಜಗಳು ಹಿಡಿದು ಹಾಗೂ ಸಂವಿಧಾನ ಪೀಠಕೆ ಜೊತೆಗೆ ಎಲ್ಲಾ ಸಮಾಜಗಳ ಗುರುಗಳ ಭಾವಚಿತ್ರಗಳೊಂದಿಗೆ ಮೆರವಣಿಗೆ ಮಾಡಿದ್ದೇವೆ ಹಾಗಾಗಿ ಆರ್‌ಎಸ್ಎಸ್ ಮತ್ತು ಬಿಜೆಪಿ ನವರು ನಕಲಿ ದೇಶಭಕ್ತರು ನಾವು ನಿಜವಾದ ದೇಶಭಕ್ತರು ಎಂದು ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು.

ಪಟ್ಟಣದ ಬುದ್ಧ ಮಂದಿರದಲ್ಲಿ ಸಂವಿಧಾನ 
ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭೀಮ ನಡಿಗೆ ಪಥಸಂಚಲನದಲ್ಲಿ ಅಂಬೇಡ್ಕ‌ರ್ ಅನುಯಾಯಿಗಳು ಹಾಗೂ 22 ಸಮಾಜದ ಜನರು ಭಾಗವಹಿಸಿದ್ದರಿಂದ ಅಭೂತಪೂರ್ವ ಯಶಸ್ವಿಗೊಂಡಿದೆ, ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿ ಮುಖಂಡರು ಹತಾಶೆಗೊಂಡು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಆ‌ರ್.ಎಸ್.ಎಸ್ ನವರು ಕೈಯಲ್ಲಿ ಬಡಗಿ ಹಿಡಿದು ಪಥ ಸಂಚಲನ ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ, ಆದರೆ ನಾವು ಯಾವುದೇ ಮಾರಕಾಸ್ತ್ರ ಇಲ್ಲದೇ ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ಐತಿಹಾಸಿಕ ಭೀಮ ನಡಿಗೆ ಪಥ ಸಂಚಲನ ಮಾಡಿದ್ದೇವೆ, ಭೀಮ ನಡಿಗೆ ಪಥಸಂಚಲನದಲ್ಲಿ ಸ್ವಯಂಪ್ರೇರಿತವಾಗಿ ಜನ ಬಂದಿದ್ದಾರೆ ಯಾರನ್ನೂ ಹಣ ನೀಡಿ ಕರೆಯಿಸಿಲ್ಲ. ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಪರ ಇದ್ದಾರೆ ಹೀಗಾಗಿ ಅವರ ಪರ ಘೋಷಣೆ ಕೂಗಿದ್ದೇವೆ, ಸಂವಿಧಾನ ವಿಷಯದಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುವುದನ್ನು ಬಿಟ್ಟುಬಿಡಿಲ್ಲಿ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

ಮಾದಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಮಾತನಾಡಿ, ಸಂವಿಧಾನ ಪರವಾಗಿ ಯಾರು ಇರುತ್ತಾರೆ ಅವರ ಪರ ಘೋಷಣೆ ಕೂಗುತ್ತೇವೆ ಅಷ್ಟೇ ಅಲ್ಲ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಸಹ ಮಾಡುತ್ತೇವೆ. ಭೀಮ ನಡಿಗೆ ಪಥಸಂಚಲನದಲ್ಲಿ ಎಲ್ಲಾ ಸಮಾಜದವರು ಭಾಗವಹಿಸಿದ್ದರಿಂದ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಆಗಿದೆ ಹೀಗಾಗಿ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್, ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಬಂಜಾರ ಸಮಾಜದ ಅಧ್ಯಕ್ಷ ಭೀಮಸಿಂಗ ಚವ್ಹಾಣ, ಮುಸ್ಲಿಂ ಸಮಾಜದ ಅಧ್ಯಕ್ಷ ಎಂ.ಎ.ರಷೀದ್, ಮಹಾದೇವ ರಾಠೋಡ, ಮಲ್ಲಿಕಾರ್ಜುನ ಮುಡಬೂಳಕ‌ರ್, ಶರಣು ಡೋಣಗಾಂವ, ಜಗನ್ನಾಥ ಮುಡಬೂಳಕ‌ರ್, ಶರಣಪ್ಪ ಹೊನ್ನಪೂರ, ದೇವು ಯಾಬಾಳ ಇದ್ದರು.

ಸಚಿವರ ಕೈಗೊಂಬೆಯಾದ ತಹಸೀಲ್ದಾರ: ಸಜ್ಜನಶೆಟ್ಟಿ.

ಚಿತ್ತಾಪುರ: ಭೀಮ ನಡಿಗೆ ಪಥಸಂಚಲನಕ್ಕೆ
ಎರೆಡೆರಡು ಬಾರಿ ಅನುಮತಿ ನೀಡುವ ಮೂಲಕ ತಹಸೀಲ್ದಾರ್ ತಮ್ಮ ಮನಬಂದಂತೆ ವರ್ತಿಸಿದ್ದು, ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ  ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ‌ರ್ ಎಸ್ಎಸ್ ಪಥ ಸಂಚಲನಕ್ಕೆ ತಾಲೂಕು ಕಂದಾಯ ವ್ಯಾಪ್ತಿಯಲ್ಲಿ ಇರುವವರಿಗೆ ಹಾಗೂ 350 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು, ಸಂಚಲನಕ್ಕೆ ಬರುವವರ ಐಡಿ ಕಾರ್ಡ್ ಪರಿಶೀಲನೆ ನಡೆಸಿ ಬ್ಯಾರಿಕೇಡ್ ಹಾಕಿ ನಾಕಾಬಂಧ ಹಾಕಿ, ಪಥ ಸಂಚಲನ ಫೇಲ್ ಮಾಡುವ ಉದ್ದೇಶದಿಂದ ಪೊಲೀಸರು ತುಂಬಾ ತೊಂದರೆ ನೀಡಿದ್ದರು. ಆದರೆ ಭೀಮ ನಡಿಗೆ ಪಥಸಂಚಲನಕ್ಕೆ ಯಾವುದೇ ಬ್ಯಾರಿಕೇಡ್ ಹಾಕಿಲ್ಲ, ಯಾರನ್ನು ತಪಾಸಣೆ ನಡೆಸಲಿಲ್ಲ ಮತ್ತು ಇಂತಿಷ್ಟೇ ಜನರು ಭಾಗವಹಿಸಬೇಕು ಅಂತ ಹೇಳಿಲ್ಲ ಮತ್ತು ಸಮಯ ಪರಿಪಾಲನೆ ಮಾಡಿಲ್ಲ ಹೀಗಾಗಿ ಇಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿ ಕಾನೂನು ತಮಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಆರ್.ಎಸ್ಎಸ್ ಪಥ ಸಂಚಲನ ಸಮಯದಲ್ಲಿ ನಾವು ಪಥ ಸಂಚಲನ ಮಾಡುತ್ತೇವೆ ಎಂದು ಹೇಳಿದ ಸಂಘಟನೆಗಳೇ ಬೇರೆ, ಈಗ ಮಾಡಿದವರೇ ಬೇರೆನೇ ಎಂದು ಕುಟುಕಿದರು. ಶಾಂತಿಪ್ರಿಯ ಚಿತ್ತಾಪುರದಲ್ಲಿ ಇಷ್ಟೊಂದು ಗದ್ದಲ, ಅಶಾಂತಿ ವಾತಾವರಣ ನಿರ್ಮಾಣವಾಗುವುದಕ್ಕೆ ಕಾರಣ ಯಾರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕ‌ರ್ ಮಾತನಾಡಿ ಕಾನೂನು ಎಲ್ಲರಿಗೂ ಒಂದೇ ಇರುವಾಗ ಇಲ್ಲಿಯ ತಹಸೀಲ್ದಾ‌ರ್ ಸೇರಿದಂತೆ ತಾಲೂಕು ಆಡಳಿತ ಆರ್.ಎಸ್ಎಸ್ ಪಥ ಸಂಚಲನಕ್ಕೆ ಒಂದು ಕಾನೂನು, ಭೀಮ ನಡಿಗೆ ಪಥಸಂಚಲನಕ್ಕೆ ಇನ್ನೊಂದು ಕಾನೂನು ಮಾಡಿ ಕಾನೂನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ತಾಲೂಕಿನ ಕಂದಾಯ ವ್ಯಾಪ್ತಿಯಲ್ಲಿ ಇರುವವರಿಗೆ ಮಾತ್ರ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶ ಇದೆ ಎಂದು ಆದೇಶ ಹೊರಡಿಸಿದ್ದ ತಹಸೀಲ್ದಾರ್ ಬೆಳಿಗ್ಗೆ ಬೇರೆ ಜಿಲ್ಲೆಯವರಿಗೂ ಅವಕಾಶ ಇದೆ ಎಂದು ಮತ್ತೊಂದು ಆದೇಶ ಹೊರಡಿಸಿರುವುದು ಖಂಡನೀಯ ಎಂದರು.

2015 ರಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ ಜಾರಿಗೆ ತಂದಿದ್ದೇ ಪ್ರಧಾನಿ ಮೋದಿ. ಅಂಬೇಡ್ಕ‌ರ್ ಅವರಿಗೆ ಕಾಂಗ್ರೆಸ್ ಅವಮಾನಿಸಿದೆ ಆದರೆ ಬಿಜೆಪಿ ಗೌರವಿಸಿದೆ ಎಂದರು. ಸಂವಿಧಾನದ 108 ತಿದ್ದುಪಡಿಗಳಲ್ಲಿ ಕಾಂಗ್ರೆಸ್ 100 ತಿದ್ದುಪಡಿ ಮಾಡಿದೆ ಆದರೆ ಬಿಜೆಪಿ ಬರೀ 8 ತಿದ್ದುಪಡಿ ಮಾಡಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ ಹೀಗಾಗಿ ನಮ್ಮದು ಭೀಮ ನಡಿಗೆ ಪಥಸಂಚಲನಕ್ಕೆ ವಿರೋಧ ಇರಲಿಲ್ಲ, ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಪಥ ಸಂಚಲನ ಮಾಡಿರುವುದಕ್ಕೆ ನಾವು ಸ್ವಾಗತಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಸದಸ್ಯರಾದ ನಾಗರಾಜ ಭಂಕಲಗಿ, ಸುರೇಶ್ ಬೆನಕನಳ್ಳಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೂಗಾರ, ಶಿವರಾಮ್ ಚವ್ಹಾಣ, ರಾಜು ದೊರೆ ಇದ್ದರು.

ಶುಕ್ರವಾರ, ನವೆಂಬರ್ 28, 2025

ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕ್ರಮ ಆಂಗ್ಲ ಶಾಲೆಯಲ್ಲಿ : ಇಂದೂರು ಆಕ್ಷೇಪ.


ಚಿತ್ತಾಪುರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದಲ್ಲಿ ಸಿರಿನುಡಿ ಸಂಭ್ರಮ ಎಂಬ ಕಾರ್ಯಕ್ರಮ ಇಂದು ಶನಿವಾರ ಹಮ್ಮಿಕೊಂಡಿರುವ ಶೇಷಗಿರಿರಾವ್ ಹಿರಿಯ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡಲಾಗುತ್ತಿದೆ ಎಂದು ತಾಲೂಕಾ ಜೈ ಕರ್ನಾಟಕ ಮಾಜಿ ಅಧ್ಯಕ್ಷ ಮಲ್ಲಿನಾಥ ಇಂದೂರು ಅವರು ಉದಯಕಾಲ ಪತ್ರಿಕೆ ಜೊತೆಗೆ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ

ಕನ್ನಡ ನಾಡು, ನುಡಿ, ನೆಲ,ಜಲ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಕೊಡುಗೆ ನೀಡಿರುವ ಮತ್ತು ಶ್ರಮಿಸುತ್ತಿರುವವರನ್ನು ಗುರುತಿಸಿ ಪರಿಷತ್ತಿನಿಂದ ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸುವುದು ಪರಿಷತ್ತಿನ ಸಂಪ್ರದಾಯ. ಅದನ್ನು ಮೀರಿ ಆಂಗ್ಲ ಭಾಷೆಯಲ್ಲಿ ಬೋಧನೆ ಮಾಡುವ ಉಪನ್ಯಾಸಕರಿಗೆ ಪ್ರಶಸ್ತಿಗೆ ಆಯ್ಕೆ ಮಾಡುವುದು ಅಲ್ಲದೇ ಮಾಧ್ಯಮ ಕ್ಷೇತ್ರವನ್ನು ಕಡೆಗಣಿಸುವ ಮೂಲಕ ಕನ್ನಡ ಭಾಷೆ ಬೋಧಿಸುವ ಶಿಕ್ಷಕ, ಉಪನ್ಯಾಸಕರಿಗೆ, ಹಾಗೂ ನಾಲ್ಕನೆ ಅಂಗವಾದ ಪತ್ರಿಕಾ ರಂಗವನ್ನು ಅವಮಾನ ಮಾಡಿದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಕೇಳಿದಾಗ ತಾಲೂಕಾ ಅಧ್ಯಕ್ಷರಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ತಾಲೂಕಾ ಅಧ್ಯಕ್ಷರಿಗೆ ಕೇಳಿದರೆ ಆಗಿರುವ ತಪ್ಪು ಮುಂದಿನ ಕಾರ್ಯಕ್ರಮದಲ್ಲಿ ಸರಿಪಡಿಸಿಕೊಳ್ಳೋಣ ಎಂದು ಹೇಳುವ ಮೂಲಕ ತಪ್ಪು ಒಪ್ಪಿಕೊಂಡು ಕನ್ನಡ ಭಾಷೆಗೆ ಮಾಡಿರುವ ಅವಮಾನ ಸಮರ್ಥಸಿಕೊಂಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಬುಧವಾರ, ಅಕ್ಟೋಬರ್ 8, 2025

ಪ್ರಜಾ ಸೌಧದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

ಚಿತ್ತಾಪುರ: ಪಟ್ಟಣದ ಪ್ರಜಾ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾ‌ರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ವಾಲ್ಮೀಕಿ ಸಮಾಜ ತಾಲೂಕು ಅಧ್ಯಕ್ಷ ಭೀಮರಾಯ ದೋರಿ, ಯುವ ಅಧ್ಯಕ್ಷ ರಾಜು ದೋರಿ, ಮುಖಂಡರಾದ ಸಾಬಣ್ಣ ಮುಸ್ಲಾ, ಅಂಬಣ್ಣ ಬೊಮ್ಮನಹಳ್ಳಿ, ಹಣಮಂತ ಬೊಮ್ಮನಹಳ್ಳಿ, ಮೌನೇಶ್ ಲಾಡ್ಲಾಪೂರ, ಸಾಬಣ್ಣ ಲಾಡ್ಲಾಪೂರ, ರಾಮು ಮುಸ್ಲಾ, ಭೀಮರಾಯ ಲಾಡ್ಡಾಪೂರ, ಸಾಬಣ್ಣ ಕುಂಬಾರಹಳ್ಳಿ, ಹಣಮಂತ ಗಲಿಗಿನ್, ಅಮೃತ್ ಶಾಮನೂರ, ಮಹಾದೇವ ಬೊಮ್ಮನಹಳ್ಳಿ, ಉಮೇಶ್ ದೋರಿ, ವೆಂಕಟೇಶ್ ಬಳಿಚಕ್ರ, ಜಗದೇವ ಚಾಮನೂರ, ಚಂದ್ರು ಇಟಗಾ, ಭಾಗಣ್ಣ ದೋರಿ, ಸಾಯಬಣ್ಣ ವಾಡಿ, ದೇವಪ್ಪ ಕುಂಬಾರಹಳ್ಳಿ, ನಿಂಗಣ್ಣ ಚಾಮನೂರ, ಹಣಮಂತ ದಿಗ್ಗಾಂವ, ಶರಣು ವಾಡಿ, ಭೀಮಾಶಂಕರ ದಿಗ್ಗಾಂವ ಸೇರಿದಂತೆ ಇತರರು ಇದ್ದರು.

ನ್ಯಾ.ಬಿ.ಆರ್ ಗವಾಯಿ ಮೇಲೆ ಶೂ ಎಸೆತಕ್ಕೆ ಖಂಡನೆ

ಚಿತ್ತಾಪುರ : ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯದ ಘನತೆವೆತ್ತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರನ್ನು ಅಪಮಾನಿಸಲು ಶೂ ಎಸೆಯಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯ ಎಂದು ಬೌದ್ಧ ಮಹಾಸಭಾ ತಾಲೂಕಾಧ್ಯಕ್ಷ ಜಗನ್ನಾಥ ಮುಡಬೂಳಕ‌ರ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಈ ಸಂವಿಧಾನದ ಘಟನೆ ಸಾರ್ವಭೌಮತ್ವವನ್ನು ಅಪಮಾನಿಸಲು ಯತ್ನಿಸಿದ ನೀಚ ಹಾಗೂ ಅನಾಗರೀಕ ವರ್ತನೆಯಾಗಿದ್ದು, ಕೃತ್ಯ ಎಸಗಿದ ವಕೀಲನ ವರ್ತನೆ ಯಾರೂ ಕ್ಷಮಿಸಲಾರದ ದುಷ್ಕೃತ್ಯವಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹಾಗೂ ಅಗೌರವ ತೋರುವ ವರ್ತನೆ ಹಾಗೂ ಕೃತ್ಯಗಳು ವಿದ್ರೋಹಿತನದ ಪರಮಾವಧಿಯಾಗಿದೆ. ದೇಶದ ಕಾನೂನಿನ ಅನ್ವಯ ಪೊಲೀಸರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಉತ್ಸವ ಯಶಸ್ಸು: ಕೃತಜ್ಞತೆ ಸಲ್ಲಿಸಿದ ಹಿರೇಮಠ

ಚಿತ್ತಾಪುರ: ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ಯಶಸ್ಸಿಗೆ ಶ್ರಮಿಸಿದ ಮತ್ತು ಸಹಕರಿಸಿದ ಎಲ್ಲರಿಗೂ ದೇವಸ್ಥಾನ ಸಮಿತಿ ಅಧ್ಯಕ್ಷರು/ತಹಸೀಲ್ದಾರ್ ನಾಗಯ್ಯ ಹಿರೇಮಠ ರವರು ತಾಲೂಕು ಆಡಳಿತದಿಂದ ಹೃದಯ ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಮಾರ್ಗದರ್ಶನದಿಂದ ಯಾವುದೇ ಲೋಪವಿಲ್ಲದೆ ಪಲ್ಲಕ್ಕಿ ಉತ್ಸವ ಶಾಂತಿಯುತವಾಗಿ ನಡೆಯಿತ್ತು. ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಮತ್ತು ಜಾತ್ರೆಯು ಸುಗಮವಾಗಿ ನಡೆಯುವಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪುರಸಭೆ ಕಾರ್ಯಲಯದ ಸಿಬ್ಬಂದಿ ವರ್ಗ, ಪದವಿ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಮಾಡಿದ ಶಿಸ್ತುಬದ್ಧ ಸೇವೆ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ದೀಪಾಲಂಕಾರ ಸಮಿತಿ ಸದಸ್ಯರು ಸದಸ್ಯರು, ಪತ್ರಕರ್ತರಿಗೂ ಮತ್ತೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡದ ಭಕ್ತಾದಿಗಳ ಜೊತೆಗೆ ಎಲ್ಲರ ಸಾಮೂಹಿಕ ಪ್ರಯತ್ನದಿಂದಾಗಿ ಜಾತ್ರೆಯು ವಿಜ್ರಂಭಣೆಯಿಂದ ನೆರವೇರಿತು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದ್ದಾರೆ.

ಶೂ ಎಸೆಯುವ ಯತ್ನ ಭಯೋತ್ಪಾದಕ ಕೃತ್ಯ: ಬುಳಕರ ಆಗ್ರಹ

ಚಿತ್ತಾಪುರ: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ವಕೀಲನೊಬ್ಬ ಶೂ ಎಸೆಯುವ ಪ್ರಯತ್ನ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಯುವ ಮುಖಂಡ ಸಂಜಯ ಬುಳಕರ ಹೇಳಿದರು. 

ಬುಧವಾರ ತಹಸೀಲ್ ಕಾರ್ಯಾಲಯಕ್ಕೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ತದನಂತರ ಮಾತನಾಡದ ಅವರು ಈ ದೇಶದ ಸರ್ವೋಚ್ಚ ನ್ಯಾಯಮೂರ್ತಿಗಳ ಮೇಲೆಯೇ ಕೋರ್ಟ್ ಹಾಲ್ ನಲ್ಲೇ ಈ ಕೃತ್ಯ ನಡೆದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದರು.

ಇದೊಂದು ಭಯೋತ್ಪಾದಕ ಕೃತ್ಯ, ಇದು ಈ ದೇಶದ ಸಂವಿಧಾನವನ್ನು ಒಪ್ಪದ ಸಮುದಾಯದವರ ಮನೋ ಸ್ಥಿತಿಯಾಗಿದೆ.ದಲಿತರೊಬ್ಬರು ಈ ಸ್ಥಾನಕ್ಕೆ ಬಂದಿರುವುದನ್ನೆ ಸಹಿಸಲಾಗದ ದುಷ್ಟ-ಮನಸುಗಳು ಈ ರೀತಿಯ ಕೃತ್ಯವನ್ನು ಬೆಂಬಲಿಸುತ್ತವೆ, ಮತ್ತು ಇಂತಹ ಕೃತ್ಯದಲ್ಲಿ ತೊಡಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ನ್ಯಾಯಮೂರ್ತಿಗಳು ದಲಿತರು, ಬೌದ್ಧ ಧರ್ಮದ ಉಪಾಸಕರು ಆಗಿದ್ದು. ಅದೇ ಮುಖ್ಯ ಕಾರಣವನ್ನಾಗಿಸಿಕೊಂಡು ಸನಾತನ ಧರ್ಮದ ಹೆಸರಲ್ಲಿ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆಯುವ ದುಷ್ಟ ಪ್ರಯತ್ನ ನಡೆಸಿರುವಾಗ ಈ ದೇಶದ ಸಾಮಾನ್ಯ ದಲಿತರ ಪಾಡೇನು ಎಂಬುದನ್ನು ಯೋಚಿಸಬೇಕಾಗಿದೆ. 

ಈ ಕೃತ್ಯ ಸಂವಿಧಾನದ ಮೇಲೆ ನಡೆದ ತೀವ್ರ ಹಲ್ಲೆಯಾಗಿದೆ. ಇಂಥ ವ್ಯಕ್ತಿಗಳ ಹಿಂದಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಾಶಿ ವಡ್ಡರ ಸಮಾಜದ ಸರಪಂಚ್ ವಿಠ್ಠಲ್ ಕಾಶಿಯವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ದಿಗ್ಗಾoವ ಗ್ರಾಮ ಅಧ್ಯಕ್ಷರಾದ ಹರಾಳಯ್ಯ ಬಡಿಗೇರ,ಸಾಬಣ್ಣ ಕಲಬುರಗಿ, ಚಂದ್ರಕಾಂತ್ ಕಾಶಿ,ದೇವಪ್ಪ ತಳವಾರ, ನರೇಂದ್ರ ರೆಡ್ಡಿ ಬಂಕಲಗಿ, ಬಸವರಾಜ್ ಮೈನಾಳಕರ,ಗುರು ಪಾಟೀಲ್, ಭೀಮು ಉಪಾರ, ಹುಸನಪ್ಪ, ರಾಹುಲ್, ಮಹೇಶ್ ದೇವರ ಸೇರಿದಂತೆ ಇತರರಿದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...