ಪೋಸ್ಟ್‌ಗಳು

ಸೆಪ್ಟೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎರಡನೇ ಬಾರಿ ಅಧ್ಯಕ್ಷರಾಗಿ ರಮೇಶ್ ಹಡಪದ ಆಯ್ಕೆ

ಇಮೇಜ್
ಚಿತ್ತಾಪುರ: ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾಗಿ ರಮೇಶ್ ಕೊಲ್ಲೂರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಈರಣ್ಣಸಂಣ್ಣೂ‌ರ್ ತಿಳಿಸಿದ್ದಾರೆ.  ಪಟ್ಟಣದ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನದಲ್ಲಿ ನಡೆದ ಸಭೆ ಯಲ್ಲಿ ಸರ್ವಾನುಮತಿಯಿಂದ ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ರಾಜ್ಯ ಕಾನೂನು ಸಲಹೆಗಾರ ರಮೇಶ್ ಮಲ್ನೋಡ,ರಾಜ್ಯ ಸಂಘಟನೆ ಕಾರ್ಯದರ್ಶಿ ಬಸವರಾಜ ಹಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ್ ಸೂಗೂರು, ಜಿಲ್ಲಾ ನಗರ ಅಧ್ಯಕ್ಷ ಮಲ್ಲಿಕಾರ್ಜುನ್ ಸವಳಗಿ,ಸಮಾಜದ ಹಿರಿಯ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಅಶೋಕ್‌ ಚಿತ್ತಾಪುರ,ಅಶೋಕ್‌ ಚೌಕಿ, ಲಕ್ಷ್ಮಣ ವಾಡಿ, ಮಲ್ಲಿಕಾರ್ಜುನ್ ರಾಜೋಳಿ, ಶಿವಾನಂದ್ ವಾಡಿ, ಕಲ್ಯಾಣ್ ರಾವ್ ಗುಂಡಗುತ್ತಿ , ಶೇಖಣ್ಣ ದಂಡಗುಂಡ, ಶಿವಕುಮಾರ್ ನಾಲ್ವರ್, ಸಂತೋಷ್ ಕಟಂದೇವರಹಳ್ಳಿ, ಸೇರಿದಂತೆ ಸಮಾಜದ ಮುಖಂಡ ಯುವಕರು ಉಪಸ್ಥಿತರಿದ್ದರು.

ಕಿತ್ತು ಹೋದ ರಸ್ತೆ: ಸಂಚಾರಕ್ಕೆ ತೊಡಕು

ಇಮೇಜ್
ಚಿತ್ತಾಪೂರ: ತಾಲೂಕಿನ ಭಾಗೋಡಿ ಗ್ರಾಮದ ಮೂಲಕ ಡಿಗ್ರಿ ಕಾಲೇಜಿನ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಿತ್ತು ಹೋಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. 9 ಕಿಲೋಮೀಟರ್ ರಸ್ತೆಯು ಪ್ರತಿ ವರ್ಷ ಮಳೆಗೆ ಹಾಗೂ ಬಾರಿ ಗಾತ್ರದ ಮರಳು ತುಂಬಿದ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳ ಓಡಾಟದಿಂದ ಕಿತ್ತು ಹೋಗಿದೆ ಈಗ ಎರಡುಮೂರು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮತ್ತಷ್ಟು ರಸ್ತೆ ಕಿತ್ತು ಹೋಗಿದ್ದು ಸಂಬಂಧಿಸಿ ಅಕಾರಿಗಳು ಈ ರಸ್ತೆಯ ಕಡೆ ತಿರುಗಿ ನೋಡುತ್ತಿಲ್ಲ ಕನಿಷ್ಠ ಮರಂ ಹಾಕುವ ಕೆಲಸ ಕೂಡ ಮಾಡಿಲ್ಲ. ಅಕಾರಿಗಳ ನಿರ್ಲಕ್ಷ್ಯದಿಂದ ವಾಹನ ಸವಾರರು ರಾತ್ರಿ ವೇಳೆ ಜೀವಭಯ ದಲ್ಲೇ ಸಂಚರಿಸುವಂತಾಗಿದೆ. ಎನ್ನುತ್ತಾರೆ. ಈ ರಸ್ತೆಯಿಂದ ಚಿತ್ತಾಪೂರ ಪಟ್ಟಣಕ್ಕೆ ಹೋಗಿ ಬರಲು ತುಂಬಾ ಅನುಕೂಲಕರ ಏಕೆಂದರೆ ಬರಿ 9 ಕಿಲೋಮೀಟರ್ ಅಷ್ಟೇ ಆದ್ರೆ ಮುಡಬೂಳ ಮಾರ್ಗವಾಗಿ ಬಂದ್ರೆ 15 ಕಿಲೋಮೀಟರ್ ಆಗುತ್ತದೆ ಹೀಗಾಗಿ ಭಾಗೋಡಿ ಗ್ರಾಮದ ಮೂಲಕ ಡಿಗ್ರಿ ಕಾಲೇಜಿನ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ  ದುರಸ್ತಿ ಮಾಡಿ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಗ್ರಾಮ ಪಂಚಾಯತ್ ಇರುವ ಈ ಗ್ರಾಮದಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಇದ್ದು ಇರದಂತೆ ಆಗಿದೆ. ಈಗಾಗಲೇ ರಸ್...

ಸತತವಾಗಿ ಮೂರು ಬಾರಿ ಕಬ್ಬಡ್ಡಿ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

ಇಮೇಜ್
ಚಿತ್ತಾಪುರ: ಕಲಬುರ್ಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿತ್ತಾಪುರ ಕಬ್ಬಡ್ಡಿ ತಂಡ ಸತತವಾಗಿ ಮೂರನೇ ಬಾರಿಗೆ ಜಯಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಕಬ್ಬಡ್ಡಿ ತರಬೇತುದಾರರು ಹಾಗೂ ಚಿತ್ತಾಪೂರ ಕ್ರೀಡಾಂಗಣದ ವ್ಯವಸ್ಥಾಪಕ ಮರೇಪ್ಪ ಬೊಮ್ಮನಳ್ಳಿಕ‌ರ್ ತಿಳಿಸಿದ್ದಾರೆ. ಚಿತ್ತಾಪೂರ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಾಗಾವಿ ನಾಡಿನ ಕೀರ್ತಿ ತರುತ್ತಿರುವ ಎಲ್ಲಾ ಕಬ್ಬಡ್ಡಿ ತಂಡ ಆಟಗಾರರಿಗೆ ತುಂಬ ಧನ್ಯವಾದಗಳು ಸಲ್ಲಿಸಿ ಮುಂದೆ ರಾಜ್ಯ ಮಟ್ಟದಲ್ಲಿ ಗೆದ್ದು ಬರಲಿ ಎಂದು ಹೇಳಿದರು. ಕ್ರೀಡಾ ಪಟುಗಳಾದ ಶರಣು, ಭರತ್, ಮೌನೇಶ್‌, ಹಾಲಪ್ಪ, ಬಸವರಾಜ, ಆನಂದ, ರಾಜು, ದುರಾಜ್, ವಿಜಯ, ಭೀಮು, ಸದಾಶಿವ ಸೇರಿದಂತೆ ಇತರರು ಇದ್ದರು.

ಭಾರೀ ಮಳೆಗೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರು.

ಇಮೇಜ್
ಚಿತ್ತಾಪೂರ: ನಾಗಾವಿನಾಡಿನಲ್ಲಿ ಎರಡು ದಿನಗಳಿಂದ ರಾತ್ರಿವಿಡಿ ಭಾರೀ ಮಳೆಯಾಗಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಪಟ್ಟಣದಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ ಈ ವೇಳೆ ಮನೆಯಲ್ಲಿದ್ದ  ಕುಟುಂಬಸ್ಥರಿಗೆ ಯಾವುದೇ ಹಾನಿಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಸುಲೆಗಾವ್ ಗಲ್ಲಿಯಲ್ಲಿ ಮಲ್ಲಿಕಾರ್ಜುನ ಬಸವರಾಜ ವಾರದ್, ತನುಜಾ ಗಂಡ ಸುಭಾಷ್, ಮತ್ತು ಚೌಡಮ್ಮ ಗುಡಿಯ ಹತ್ತಿರದ ರಾಮಣ್ಣ ಭೀಮ್ ಸಿಂಗ್ ಇವರ ಮನೆಗಳಿಗೆ ಹಾನಿಯಾಗಿದ್ದು ಮನೆಗಳಿಗೆ ಗ್ರಾಮ ಲೆಕ್ಕಾಧಿಕಾರಿ ಮೈನೋದ್ದಿನ್ ಹಾಗೂ ಪುರಸಭೆ ಇಲಾಖೆಯ ಸಿಬ್ಬಂದಿ ವರ್ಗ ಭೇಟಿ ನೀಡಿ ಸರ್ಕಾರದಿಂದ ಬರುವ ಸೌಲಭ್ಯವನ್ನು ಕಲ್ಪಿಸಲಾಗುವ ಭರವಸೆ ನೀಡಿದ್ದಾರೆ. ಮಳೆಯಿಂದ ಮನೆಗಳು ಕುಸಿತದ ಮಾಹಿತಿ ಬಂದಿದೆ ಕೊಡಲೇ ಪರಿಶೀಲಿಸಿ ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಬರುವ ಸೌಲಭ್ಯ ಅತಿ ಶೀಘ್ರದಲ್ಲಿ ಕೂಡಿಸುವುದಾಗಿ ಹೇಳಿದರು ಹಾಗೂ ಇನ್ನೂ ಮಳೆ ಬರುವ ಸಂಭವವಿದೆ ತಾಲೂಕಿನ ಎಲ್ಲಾ ಗ್ರಾಮಸ್ಥರು ಎಚ್ಚರ ವಹಿಸಬೇಕು ಎಂದು ತಿಳಿಸಿದರು. - ನಾಗಯ್ಯ ಹೀರೆಮಠ. ತಹಸೀಲ್ದಾರರು ಚಿತ್ತಾಪೂರ 

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ.

ಇಮೇಜ್
ಚಿತ್ತಾಪುರ: ಮೂಲಭೂತ ಸೌಕರ್ಯ, ಸೇವಾ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಿತ್ತಾಪುರ ತಾಲ್ಲೂಕು ಘಟಕದವರು ಪಟ್ಟಣದಲ್ಲಿ ಗುರುವಾರ ಮುಷ್ಕರ ನಡೆಸಿದರು. ಆನಂತರ ತಹಶೀಲ್ದಾ‌ರ್ ನಾಗಯ್ಯ ಹೀರೆಮಠ ರವರಿಗೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಮೋತಿಲಾಲ್ ಚವ್ಹಾಣ್ ಮಾತನಾಡಿ ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ 17ಕ್ಕೂ ಅಧಿಕ ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಿರುವ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್, ಸ್ಕ್ಯಾನ‌ರ್ ಒದಗಿಸಿಲ್ಲ. ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಅಲ್ಲದೆ, ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ ಎಂದರು. ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್ಟಾಪ್, ಗೂಗಲ್ ಕ್ರೋಮ್, ಬುಕ್, ಪ್ರಿಂಟರ್, ಇಂಟರ್ ನೆಟ್ ಸೌಲಭ್ಯ ನೀಡುವವರೆಗೆ ಮೊಬೈಲ್ ತಂತ್ರಾಂಶಗಳಾದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗ‌ರ್ ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ಕೆಲಸ ನಿರ್ವಹಿಸದಿರಲು ತೀರ್...

ತಾಲ್ಲೂಕಿನದ್ಯಂತ ಸೆ. 17ಕ್ಕೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಿ.

ಇಮೇಜ್
ಚಿತ್ತಾಪೂರ: ಸಪ್ಟೆಂಬರ್ 17ರಂದು ತಾಲ್ಲೂಕಿನದ್ಯಂತ ಎಲ್ಲಾ ಸರ್ಕಾರಿ,ಅರೆ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕೆಂದು ತಹಶೀಲ್ದಾರ್ ನಾಗಯ್ಯ ಹೀರೆಮಠ ತಿಳಿಸಿದ್ದಾರೆ.

ಗಣೇಶ ಹಬ್ಬ: ಬಾಂಧವ್ಯ ಗಟ್ಟಿಗೋಳಿಸುತ್ತದೆ.

ಇಮೇಜ್
ಚಿತ್ತಾಪುರ: ಯುವಕರನ್ನು ಸಂಘಟಿಸುವ ಹಾಗೂ ಜನರ ನಡುವೆ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಬಾಂಧವ್ಯವನ್ನು ವೃದ್ಧಿಸುವ ಎಕೈಕ ಉತ್ಸವ ಅದುವೇ ಗಣೇಶ ಉತ್ಸವ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು. ಪಟ್ಟಣದ ನ್ಯೂ ಪೊಲೀಸ್‌ ವಸತಿಗೃಹದ ಏರಿಯಾದಲ್ಲಿ ಶ್ರೀ ಏಕದಂತ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಗಣೇಶ ಉತ್ಸವ ಜಾರಿಗೆ ತಂದವರು, ಬಾಲ್ ಗಂಗಾಧರ ತಿಲಕ್ ಅವರು, ಅಂದಿನಿಂದ ಇಲ್ಲಿಯವರೆಗೂ ಸಾರ್ವಜನಿಕರೆಲ್ಲರೂ ಎಲ್ಲ ಜಾತಿ ಜನಾಂಗದವರು ಒಗ್ಗೂಡಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಹೇಳಿದರು. ಈ ಏರಿಯಾದಲ್ಲಿ ಕಳೆದ 9 ವರ್ಷಗಳಿಂದ ಯುವಕರು ಒಗ್ಗೂಡಿ ಬಹಳ ಹುಮ್ಮಸ್ಸಿನಿಂದ ಗಣೇಶ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಿತ್ರ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಉಪ್ಪಾರ, ಪತ್ರಕರ್ತ ಜಗದೇವ ಕುಂಬಾರ, ಪ್ರಮುಖರಾದ ವಿಶ್ವನಾಥ ಸ್ವಾಮಿ, ಸಾಬಣ್ಣ ಹುಣಚೇರಿ, ಉಮೇಶ್ ಕಲಾಲ್, ಆಕಾಶ್ ಬಿರೇದಾರ್, ಕಿರಣ ಮಡಿವಾಳ, ನಾಗರಾಜ ಉಪ್ಪಾರ, ಮಲ್ಲಿಕಾರ್ಜುನ್ ಉಪ್ಪಾರ, ಪ್ರಶಾಂತ ಮಡಿವಾಳ, ಪ್ರೀತಮ್ ಮಡಿವಾಳ, ರಾಜು ಕಲಾಲ್‌, ಅಭಿಷೇಕ್ ಜಮಾದಾರ, ನಿತೀಶ ಕಲಾಲ್, ಸಿದ್ದಣ್ಣ ಗೌಡ, ಬಸ್ಸು ಸ್ವಾಮಿ, ವಿಶ್ವನಾಥ ...

ಅದ್ದೂರಿಯಾಗಿ ನಡೆದ ಈದ್ ಮಿಲಾದ್.

ಇಮೇಜ್
ಚಿತ್ತಾಪುರ: ಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸೋಮವಾರ ಮೆರವಣಿಗೆ ನಡೆಸುವ ಮೂಲಕ ಹಬ್ಬದವನ್ನು ಅದ್ದೂರಿಯಾಗಿ  ಆಚರಿಸಿದರು. ಪಟ್ಟಣದ ಐತಿಹಾಸಿಕ ಹಜರತ್ ಚಿತ್ತಷಹಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಚಿತ್ತಾವಲಿ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮೆರವಣಿಗೆಗೆ ಚಾಲನೆ ನೀಡಿದರು. ಚಿತ್ತಾವಲಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಹೋಳಿ ಕಟ್ಟಿ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜಿಂಗ್ ವೃತ್ತ, ತಹಸೀಲ್ ಕಚೇರಿ ರಸ್ತೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಕಪ್ಪಡಾ ಬಜಾರ್ ಮೂಲಕ ಪುನಃ ಚಿತ್ತಾವಲಿ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತ್ತು. ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಪೂಜಾರಿ, ನಾಗರೆಡ್ಡಿ ಗೋಪಸೇನ್, ಭೀಮಸಿಂಗ್ ಚವ್ಹಾಣ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಮಹ್ಮದ್ ಎಕ್ಸಾಲ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಡಿ.ಯುನುಸ್, ಮೋಸಿನ್ ಚೈನು, ಆಸೀಫ್ ಶೇಖ್, ಮನಾನ್ ನಾಗಾಯಿ, ಸದ್ದಾಮ್, ಇಮ್ರಾನ್ ಖುರೇಷಿ, ಬಾಬಾ ಎಂಐಎಂ, ಇಬ್ರಾಹಿಂ ಎ.ಟು.ಝಡ್ ...

ಗಣೇಶನ ಲಡ್ಡು 93 ಸಾವಿರಕ್ಕೆ ಹರಾಜು.

ಇಮೇಜ್
ಚಿತ್ತಾಪುರ: ಪಟ್ಟಣದ ಇಂದಿರಾನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ಯುಥ್ ಕ್ಲಾಬ್ ಯುವಕರು ಸಂಘ ನೇತೃತ್ವದಲ್ಲಿ 9ದಿನ ಗಣೇಶ ಕೂಡಿಸಲಾಗಿತ್ತು. 5ಕೆಜಿ ಲಡ್ಡುಗೆ 11ನೂರಕ್ಕೆ ತರಲಾಗಿತ್ತು. ಕೊನೆಯ ದಿನಕ್ಕೆ ಗಣೇಶ ಲಡ್ಡು ಹರಾಜು ಪ್ರಕ್ರಿಯೆ ಆರಂಭವಾಗಿ 93 ಸಾವಿರಕ್ಕೆ ಸಿದ್ದು ತಂದೆ ಹಣಮಂತ ಬೆನಕನಹಳ್ಳಿ ಎಂಬುವರು ಲಡ್ಡು ಪಡೆದರು ಎಂದು ಗಣೇಶ ಮಂಡಳಿಯವರು ತಿಳಿಸಿದ್ದಾರೆ.

ಅಕ್ರಮ ಮರಳು ದಂಧೆ: ತಾಲೂಕು ಆಡಳಿತ ಮೌನ.

ಇಮೇಜ್
-ಜಗದೇವ ಎಸ್ ಕುಂಬಾರ ಚಿತ್ತಾಪುರ: ಕಾಗಿಣಾ ನದಿಯಲ್ಲಿ ಅಕ್ರಮ ಮರಳು ದಂಧೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದರು ತಾಲೂಕು ಆಡಳಿತ ಮೌನವಾಗಿದೆ ಎಂದು ಸಾರ್ವಜನಿಕರು ಆರೂಪಿಸುತ್ತಿದ್ದಾರೆ. ತಾಲೂಕಿನ ದಂಡೋತಿ, ಮುಡಬೂಳ, ಭಾಗೋಡಿ, ಕದ್ದರ್ಗಿ, ಮುತ್ತಗಿ, ಕಾಟಮದೇವರ ಹಳ್ಳಿ, ಈ ಗ್ರಾಮಗಳಲ್ಲಿ  ಟ್ರ್ಯಾಕ್ಟರ್ ಮೂಲಕ ಮರಳು ತುಂಬಿಕೊಂಡು ಸಾಗುತ್ತಿವೆ. ರಾಯಲ್ಟಿ ಇಲ್ಲದೆ, ಯಾರ ಭಯವಿಲ್ಲದೆ ಮರಳು ದಂಧೆಯಲ್ಲಿ ತೋಡಗಿದ್ದಾರೆ. ಸರಕಾರದ ಆದೇಶ ಗಾಳಿಗೆ ತೂರಿ ಅಕ್ರಮ ಮರಳು ದಂಧೆ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕಿದ್ದ,  ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸೇರಿದಂತೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೂ ಅಕ್ರಮ ಮರಳು ಸಾಗಣೆ ಜಾಲದ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ಇದೆ. ಆದರೂ ಈ ಅಕ್ರಮ ದಂಧೆಗೆ ಕಡಿವಾಣ ಹಾಕುವಲ್ಲಿ ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮರಳು ದಂಧೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ ಇದರಿಂದ ಪ್ರಯಾಣಿಕರ ಸಂಚಾರಕ್ಕೆ ಅಡೆತಡೆಗಳು ಆಗುತ್ತಿವೆ. ಇನ್ನೂಂದು ಕಡೆ ಕಾಗಿಣಾ ನದಿಯ ನೀರು ಮಾಲಿನ್ಯವಾಗುತ್ತಿದೆ.  ನದಿಯಲ್ಲಿ ಮರಳು ಬಗೆದು ಚಿತ್ತಾಪೂರ ಪಟ್ಟಣದಲ್ಲಿ ಸಾಗಾಟ ಮಾಡುತ್ತಿದ್ದರು ತಾಲೂಕ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತ...

ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಮಹಾಪಾಪ: ದಳಪತಿ.

ಇಮೇಜ್
ಚಿತ್ತಾಪುರ: ತಾಲೂಕಿನ ದಿಗ್ಗಾಂವ್ ಗ್ರಾಮದ ಸಿದ್ದವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಮಹಾಪಾಪ ಎಂದು  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಕಾರ್ಯದರ್ಶಿ, ಬಸವರಾಜ ಪೊಲೀಸ್ ಪಾಟೀಲ್ ದಳಪತಿ ಭಾಗೋಡಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ಇದಕ್ಕೂ ಮೊದಲು ಮೋಟ್ನಳ್ಳಿ ಗ್ರಾಮದಲ್ಲಿ ಹೆಣ್ಣು ದೇವತೆಯ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ರು ಈಗ ಮತ್ತೆ ಸೇಡಂ ತಾಲೂಕಿನ ಕಲಕಂಬ ಗ್ರಾಮದಲ್ಲಿ ಶಿವಲಿಂಗ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ದು ಮಹಾ ಅಪರಾಧವಾಗಿದೆ ಕೂಡಲೇ ಶಿವಭಕ್ತರಲ್ಲಿ ಕ್ಷಮೆ ಯಾಚಿಸಬೇಕು ಎಂದರು. ಸುಮಾರು 20 ವರ್ಷಗಳ ಹಿಂದೆ ಸ್ವಾಮೀಜಿ ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ ತಪಸ್ಸು ಮಾಡಿದ್ರು, ನಂತರ 3/4 ವರ್ಷಗಳ ಹಿಂದೆ ತಾಲೂಕಿನ ಲಕ್ಷ ದೀಪೋತ್ಸವ ಮಾಡಿ ಹೇಸರು ಪಡೆದಿದ್ದರು. ಈ ಕಾರ್ಯಕ್ರಮಕ್ಕೆ ಪ್ರತಿ ಗ್ರಾಮಗಳಿಂದ ಪಟ್ಟಿ ಮಾಡಲಾಗಿತ್ತು. ಭಕ್ತರಿಂದ ಹೆಸರು ಪ್ರಚಾರ ಪಡೆದು ಈಗ ನಾನೇ ಶಿವನಿಗಿಂತ ದೊಡ್ಡವ ಎನ್ನುವಂತೆ ಸಮರ್ಥನೆ ಮಾಡಿಕೊಂಡಿದ್ದಾರೆ. ಎಡಗೈನಲ್ಲಿ ಲಿಂಗ ಹಿಡಿದು ಪೂಜೆ ಮಾಡಿಕೋಳ್ಳುವ ಸ್ವಾಮೀಜಿ ಸ್ವಲ್ಪ ವಿಚಾರ ಮಾಡಬೇಕಿತ್ತು ಮಾಡಿಲ್ಲ ಆದ್ರೆ ಸಾಕಷ್ಟು ಸ್ವಾಮೀಜಿ, ಶಿವಾಚಾರ್ಯರು ಪಟ್ಟಾಭಿಷೇಕ ಆಗಿರುವುದು ನೋಡಿರುವೆ ಆದ್ರೆ ಈ ಸಿದ್ದವೀರ ಶಿವಾಚಾರ್ಯರು ಪಟ್ಟಾಭಿಷೇಕ ಆಗಿದ್ದೇನಾ ಎಂಬುದು ಅನುಮಾನವಿದೆ. ಏಕೆಂದರೆ ಪಟ್ಟಾಭಿಷೇಕ ಆ...

ಅಪೌಷ್ಟಿಕತೆ ನಿವಾರಣೆಗೆ ಪೋಷಣ್ ಮಾಸಾಚರಣೆ ಅಗತ್ಯ.

ಇಮೇಜ್
ಚಿತ್ತಾಪುರ: ಮಹಿಳೆ ಹಾಗೂ ಮಕ್ಕಳನ್ನು ಅಪೌಷ್ಟಿಕತೆಯಿಂದ  ಮುಕ್ತಗೊಳಿಸಿ ಆರೋಗ್ಯವಂತರಾಗಿ ಮಾಡುವಲ್ಲಿ ಪೋಷಣ್ ಮಾಸಾಚರಣೆ ಅಗತ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಆರತಿ ತುಪ್ಪದ್ ಹೇಳಿದರು.   ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಆಡಳಿತ ಮತ್ತು ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಷೋಷಣ ಮಾಸಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಮಕ್ಕಳಿಗೆ ಅನ್ನಪ್ರಾಸನ, ಮೊದಲ ಗರ್ಬಿಣಿಗೆ ಸಿಮ್ಮಂತ, ಹಾಗೂ ಸ್ವಚ್ಛತಾ ಕುರಿತು ಮಾತನಾಡಿದ ಅವರು ಪೋಷಣ್ ಅಭಿಯಾನ ಮಾಸಾಚರಣೆ ಮೂಲಕ ಗ್ರಾಮೀಣ ಭಾಗಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು ಹಾಗೂ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆಯನ್ನು  ಕಲ್ಪಿಸುವುದರ ಜೊತೆಗೆ ಆರೋಗ್ಯ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.    ಗ್ರಾಮೀಣ ಭಾಗದ ಮಹಿಳೆಯರು ಪೌಷ್ಠಿಕ ಆಹಾರ ಪದ್ಧತಿಗೆ ಹೆಚ್ಚಿನ ಒತ್ತು ನೀಡಬೇಕು, ಮಾತೃವಂದನಾ ಯೋಜನೆ ಅಡಿಯಲ್ಲಿ ಮೊದಲ ಗಂಡು ಮಗುವಿಗೆ 5 ಸಾವಿರ, ಹಾಗೂ ಎರಡನೇ ಮಗು ಹೆಣ್ಣು ಹುಟ್ಟಿದರೆ 6 ಸಾವಿರ ರೂಪಾಯಿ ನೀಡಲಾಗುತ್ತಿದೆ. ಹೀಗೆ ಅನೇಕ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.  ಈ ಸಂದರ್ಭದಲ್ಲಿ ತಾಪಂ ಇಓ ಆಕ್ರಂ ಮಹ್ಮದ್ ಪಾಶಾ,...

ಉದ್ದು ಬೆಳೆ ಹಾನಿ, ಪರಿಹಾರಕ್ಕೆ ರೈತ ಸಂಘ ಒತ್ತಾಯ.

ಇಮೇಜ್
ಚಿತ್ತಾಪುರ: ಸತತವಾಗಿ ಸುರಿದ ಮಳೆಯಿಂದಾಗಿ ಉದ್ದು ಬೆಳೆ ಸಂಪೂರ್ಣ ನೆಲಕಚ್ಚಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದರು. ತಾಲೂಕಿನ ಬಂಕಲಗಿ ಗ್ರಾಮದ ಸಾಕಷ್ಟು ರೈತರು ಉದ್ದು ಹೆಸರು ಬೆಳೆ ಬೆಳೆದಿದ್ದು, ಈಗ ಸಾದ್ಯಕ್ಕೆ ಸತತವಾಗಿ ಸುರಿದ ಮಳೆಗೆ ಉದ್ದು ಬೆಳೆ ಸಂಪೂರ್ಣ ನೆಲಕಚ್ಚಿದ್ದು. ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ವಿಕ್ಷಣೆಗೆ ಬಂದಿಲ್ಲ ಎಂದು ನಿರೂಪಿಸಿ ಕೂಡಲೆ ಕೇಂದ್ರ ರಾಜ್ಯ ಸರ್ಕಾರ ರೈತರ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ನೀಡಬೇಕು ಎಂದರು. ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಮಲಬೋ, ಸಣ್ಣ ಅಯ್ಯಪ್ಪ ಪೂಜಾರಿ, ಭೀಮರಾಯ ಚಿತ್ತಾಪುರ, ಮಲ್ಲಪ್ಪ ಸುಬೆದರ, ಅರಣಪ್ಪ ದೋಡ್ಡಮನಿ, ಹುಸೆನಪಾಷ, ಹಣಮಂತ ಮೂಲಿಮನಿ, ಸೇರಿದಂತೆ ಇತರರು ಇದ್ದರು.

ಮಕ್ಕಳ ಪ್ರತಿಭೆಗೆ ಪ್ರತಿಭಾ ಕಾರಂಜಿ ಸಹಾಯಕ.

ಇಮೇಜ್
ಚಿತ್ತಾಪುರ: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಾಯಕವಾಗಲಿದ್ದು ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವಿವಿದ ಪ್ರತಿಭೆಗಳನ್ನು ಕಾರಂಜಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸುತ್ತಿರುವದು ಶ್ಲಾಂಘನೀಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಹೇಳಿದರು ಪಟ್ಟಣದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಿತ್ತಾಪುರ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪಶ್ಚಿಮ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವ ಹಾಗೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ 2002ರಲ್ಲಿ ಸರಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜಾರಿಗೆ ತಂದಿದೆ ಆದ್ದರಿಂದ ಮಕ್ಕಳು ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಗ್ರ ವ್ಯಕ್ತಿತ್ವ ವಿಕಸನವನ್ನು ಸಾಧಿಸುತ್ತಾರೆ ಎಂದು ಹೇಳಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕವಿತಾ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಹೀಗಾಗಿ ಮಕ್ಕಳು ಯಾ...