ಭಾನುವಾರ, ಅಕ್ಟೋಬರ್ 27, 2024

ಶಿಕ್ಷಕರ ಸ್ನೇಹಿ ಪೆನಲಗೆ ಬೆಂಬಲಿಸಲು ಮನವಿ.

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಗೆ 2024-29 ನೇ ಸಾಲಿನ ಅವಧಿಗಾಗಿ ಅ.28 ರಂದು ನಡೆಯಲಿರುವ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ಕೈಲಾಸ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಬಳೂಂಡಗಿ ನೇತೃತ್ವದ ಶಿಕ್ಷಕರ ಸ್ನೇಹಿ ಪೆನಲ್ ಹಾಗೂ ಇಂಗಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಗಣ್ಣಗೌಡ ಮಲ್ಯದ್ ರವರ ಪ್ರಜಾಸತ್ತಾತ್ಮಕ ಕ್ರಿಯಾಶೀಲ ಶಿಕ್ಷಕರ ಪೆನಲ್ ಅವರ ನಡುವೆ ಪೈಪೋಟಿ ನಡೆಯುತ್ತಿದೆ, 

ಬಸವರಾಜ ಬಳೂಂಡಗಿ ನೇತೃತ್ವದಲ್ಲಿ ಚಿತ್ತಾಪುರ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಾನಂದ ನಾಲವಾರ, ಚಾಮನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೌತಮಿ, ಗಂಡಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹ್ಮದ್ ಜಾವೀದ್, ಅಲ್ಲೂರ.ಬಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಾಬಣ್ಣ ಜಕಬೋ ಅವರು ತಮ್ಮ ಬೆಂಬಲಿಗರೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಬಳೂಂಡಗಿ ರವರು ಕ್ಷೇತ್ರದಲ್ಲಿ ಸುಮಾರು 7 ವರ್ಷಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿ ಈ ಕ್ಷೇತ್ರದಲ್ಲಿ ಸಾಕಷ್ಟು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹಾಗೂ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದಾರೆ. ಇನ್ನೂ ಸಹ ಕ್ಷೇತ್ರದಲ್ಲಿ ಶಿಕ್ಷಕ ಕುಂದು ಕೊರತೆಗಳ ಹಾಗೂ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ಸೇವೆ ಮಾಡಲು ಇಚ್ಛಿಸಿರುವೆ.
 ಇದರ ಜೊತೆಗೆ ತಾಲ್ಲೂಕಿನಲ್ಲಿ ನೌಕರರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಎಂಬತ್ತನಾಳ್ ರವರು ಸುಮಾರು 5 ವರ್ಷಗಳ ವರೆಗೆ ಸೇವೆ ಸಲ್ಲಿಸಿರುವ ಮತ್ತು ಗುಂಡಗುರ್ತಿ ಸೇರಿ ಬಿಇಓ ಇಲಾಖೆಯಲ್ಲಿ ಶಿಕ್ಷಣ ಸಂಯೋಜಕರಾಗಿ 6 ವರ್ಷ ಸೇವೆ ಸಲ್ಲಿಸಿದ ಸಂತೋಷಕುಮಾರ ಶಿರನಾಳ ರವರು ಸಹ ಪ್ರೌಢ ಶಾಲಾ ಶಿಕ್ಷಣ ವಿಭಾಗದಿಂದ ಸ್ಪರ್ಧಿಸಿದ್ದು ಅವರು ಸಹ ನಮ್ಮ ಪೆನಲ್ ನವರು ಇಗಿದ್ದು.

ನಾಳೆ ಅಕ್ಟೋಬರ 28/10/2024 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಚುನಾವಣೆಗೆ ಸ್ಪರ್ಧಿಸಿರುವ ಶಿಕ್ಷಕರ ಸ್ನೇಹಿ ಪೆನಲ್ ಬಸವರಾಜ ಬಳೂಂಡಗಿ ನೇತೃತ್ವದ ಪೆನಲಗೆ ಎಲ್ಲಾ ಶಿಕ್ಷಕ ವೃಂದದವರು ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಲು ವಿನಂತಿ.

ಪ್ರೌಢ ಶಾಲಾ ಶಿಕ್ಷಣ ವಿಭಾಗದಿಂದ ಬಸಪ್ಪ ಯಂಬತ್ನಾಳ್, ಸಂತೋಷಕುಮಾರ ಶಿರನಾಳ, ಇವರ ಪೆನಲ್ ಗೆ ಶಿಕ್ಷಕ ವೃಂದದವರು ಹಾಗೂ ಎಲ್ಲಾ ಸಿಬ್ಬಂದಿ ನೌಕರರು ಮತ ನೀಡಿ ಆರಿಸಿ ತರಬೇಕಾಗಿ ತಮ್ಮೇಲ್ಲರಲ್ಲಿ ಹೃದಯ ಪೂರ್ವಕ ವಿನಂತಿ.

ಮಣಿಕಂಠ ಮಾಡಿದ ಆರೋಪ ಸತ್ಯಕ್ಕೆ ದೂರ: ಮಲ್ಲಿಕಾರ್ಜುನ ಸ್ಪಷ್ಟನೆ.

ಚಿತ್ತಾಪುರ: ಬಜಾಜ್ ಕಲ್ಯಾಣ ಮಂಟಪದಲ್ಲಿ ಅ.25 ರಂದು ನಡೆದ ಜಿಲ್ಲಾ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಹಿಳೆಯರಿಗೆ ಹಣ ಹಂಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಸ್ಪಷ್ಟನೆ ನೀಡಿದ್ದಾರೆ.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರು ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲುವು ಸಾಧಿಸಿದ್ದ ಖುಷಿಯಿಂದ ಪುರಸಭೆ ಸದಸ್ಯರು ಸ್ವಇಚ್ಛೆಯಿಂದ ಮಹಿಳೆಯರಿಗೆ ದುಡ್ಡು ಕೊಟ್ಟಿದ್ದು ಸತ್ಯ, ಆದ್ರೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಹೇಳುವ ಮಣಿಕಂಠ ಸ್ವಲ್ಪ ಆ ದಿನ ಅಲ್ಲಿ ಏನೂ ನಡೆದಿದ್ದೆ ಎಂದು ಆಲೋಚನೆ ಮಾಡಲಿ ಅಂದು ಸರ್ಕಾರದ 63 ಕೋಟಿ ರೂಪಾಯಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು. ಅಭಿನಂದನಾ ಸಮಾರಂಭ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಮೊದಲು ಇದನ್ನು ಅರಿತುಕೊಂಡು ಆರೋಪ ಮಾಡಲಿ ಎಂದು ಕಿಡಿ ಕಾರಿದರು.

ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಾಕಷ್ಟು ಅಭಿವೃದ್ದಿ ಕೆಲಸಗಳು ಮಾಡುತ್ತಿದ್ದಾರೆ ವಿನಾಕಾರಣ ಅವರ ವಿರುದ್ಧ ಇಲ್ಲಸಲ್ಲದ ಮಾತನಾಡುವಾಗ ಸ್ವಲ್ಪ ನಾಲಿಗೆ ಹಿಡಿತದಲ್ಲಿರಲಿ, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ, ಸಚಿವರ ವಿರುದ್ಧ ಮಾತನಾಡುವ ನೀವು ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಏನು? ಎಂದು ಮಣಿಕಂಠ ರಾಠೋಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಖಾರವಾಗಿ ಪ್ರಶ್ನಿಸಿದರು.

ಮಣಿಕಂಠ ರಾಠೋಡ ಎನ್ನುವ ಮಾನಸಿಕ ವ್ಯಕ್ತಿ ಕ್ಷೇತ್ರಕ್ಕೆ ಆಗಮಿಸಿ ಸಚಿವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದೇ ಆತನ ಸಣ್ಣತನದ ಕೆಲಸವಾಗಿದೆ. ಮಹಿಳೆಯರಿಗೆ ಹಣ ನೀಡಿದ್ದೇವೆ ಅದು ದೀಪಾವಳಿ ಕಾಣಿಕೆಯಾಗಿ ಆದ್ರೇ ಬಿಜೆಪಿಯವರೇನು ಸಾಚಾನ ಎಂದು ಪ್ರಶ್ನಿಸಿದರು ಕಳೆದ ಚುನಾವಣೆಯಲ್ಲಿ ಅನ್ನ ಪ್ರಸಾದ, ದೇವಸ್ಥಾನ ಮತ್ತು ರಸ್ತೆಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಬರೀ ಶೋ ಪುಟ ಮಾಡುವ ಕೆಲಸ ಮಾಡಿದ್ದಾನೆ ಎಂದರು.

-ಜಗದೀಶ್ ಚವ್ಹಾಣ್
ಪುರಸಭೆ ಸದಸ್ಯ ಚಿತ್ತಾಪುರ.

ಕಲಬುರ್ಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಖುಷಿಯಿಂದ ಪುರಸಭೆ ಸದಸ್ಯರು ಸ್ವಇಚ್ಛೆಯಿಂದ ನಮ್ಮ ಸ್ವಂತ ಹಣ ನೀಡಿದ್ದೇವೆ ಇದಕ್ಕೆ ನೀವ್ಯಾರು ಕೇಳೋರು ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

- ವಿನೋದ ಗುತ್ತೇದಾರ
ಪುರಸಭೆ ಸದಸ್ಯ ಚಿತ್ತಾಪುರ 

ಈ ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಚಂದ್ರಶೇಖರ ಕಾಶಿ, ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ್ ಬೆಣ್ಣೂರಕರ್, ಮುಖಂಡ ಸುಭಾಷ್‌ ಜಾಧವ, ಸೇರಿದಂತೆ ಇತರರು ಇದ್ದರು.

ಶುಕ್ರವಾರ, ಅಕ್ಟೋಬರ್ 25, 2024

ಮತದಾರರಿಗೆ ಧನ್ಯವಾದ ಅರ್ಪಿಸಿದ ರಾಧಾಕೃಷ್ಣ ದೊಡ್ಡಮನಿ.


ಚಿತ್ತಾಪುರ: ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಟಿಕೇಟು ನೀಡಿತ್ತು. ನೀವೆಲ್ಲ ಜೊತೆಯಾಗಿ ಕೆಲಸ ಮಾಡಿ ಮನೆ 
ಮನೆಗೆ ಹೋಗಿ ಪ್ರಚಾರ ಮಾಡಿ ನನ್ನ ಗೆಲ್ಲುವುಗೆ ಸಹಕಾರಿಯಾಗಿದ್ದೀರಿ, ನಿಮಗೆಲ್ಲ ನಾನು ಮನಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವೆ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ‌ ಹೇಳಿದರು.

 ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮತದಾರರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ನಾನು ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನೀವೆಲ್ಲ ವಿಶ್ವಾಸವಿಟ್ಟು ನನಗೆ ಗೆಲ್ಲಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ, ನಾನು ಹೆಚ್ಚಿಗೆ ಮಾತನಾಡುವುದಿಲ್ಲ ನಿಮ್ಮ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕ್ಷೇತ್ರದ ಅಭಿವೃದ್ದಿಯ ಚಿತ್ರಣವನ್ನೇ ಬದಲಿಸುವೆ.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಿಮ್ಮ ಅಭಿಮಾನದ ಅಕ್ಕರೆಗೆ ನನಗೆ ಮಾತು ಬರದಾಗಿದೆ ನೀವು ನಿಮ್ಮ ಪ್ರೀತಿ ತೋರಿಸಲು ಇಲ್ಲಿ ಸೇರಿದ್ದೀರಿ ನಿಮ್ಮ ವಿಶ್ವಾಸಕ್ಕೆ ನಮ್ಮ ಕುಟುಂಬದ ಪರವಾಗಿ ಕೋಟಿ ಕೋಟಿ ಧನ್ಯವಾದಗಳು.ನಾನು ನಿಮಗೆ ಹಲವಾರು ಸಲ ಮಾತು ಕೊಟ್ಟಿದ್ದೇನೆ. ನಮ್ಮ ಭಾಗದ ಅಭಿವೃದ್ದಿಯೇ ನನಗೆ ಮೂಲ ಮಂತ್ರ ಇಂದು ಕೂಡಾ 62 ಕೋಟಿ‌ ರೂಪಾಯಿ ವೆಚ್ಚದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಿದ್ದೇನೆ ಮಾತು ಕೊಟ್ಟಂತೆ 52,000 ಕೋಟಿ ರೂಪಾಯಿ ಖರ್ಚು ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಇದು ನಮ್ಮ ಸರ್ಕಾರದ ಬದ್ಧತೆ ಎಂದರು.

ಈಗಾಗಲೇ 900 ಇಂಜಿನಿಯರಗಳನ್ನು ಇಲಾಖೆಯಲ್ಲಿ ಭರ್ತಿ ಮಾಡಲಾಗಿದೆ. ಜೊತೆಗೆ ಖಾಲಿ ಇರುವ ವಿವಿಧ ಇಲಾಖೆಗಳ ಎರಡು ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಿದ್ದೇವೆ ನನಗೆ ಇನ್ನು ಒಂದು ವರ್ಷ ಸಮಯಾವಕಾಶ ನೀಡಿ ಕ್ಷೇತ್ರದ ಅಭಿವೃದ್ದಿಯ ಚಿತ್ರಣವನ್ನೇ ಬದಲಿಸಲಿದ್ದೇನೆ. ಕಲ್ಯಾಣ ಪಥ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ದಿಗೆ 1,000 ಕೋಟಿ ರೂಪಾಯಿ ಅನುದಾನ ತೆಗೆದಿರಿಸಲಾಗಿದೆ. ಸಾಮೂಹಿಕ ಮಹಿಳೆಯರ ಶೌಚಾಲಯ ನಿರ್ಮಾಣ ನನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಬೊಕ್ಕಸ‌ ಖಾಲಿಯಾಗಿದೆ ಎನ್ನುವ ಬಿಜೆಪಿ ನಾಯಕರಿಗೆ ತಿರುಗೇಟು‌ ನೀಡಿದ ಖರ್ಗೆ ಇತ್ತೀಚಿಗೆ ಕಲಬುರಗಿಯಲ್ಲಿ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 7,000 ಕೋಟಿ ರೂಪಾಯಿ ಹಾಗೂ ಚಿತ್ತಾಪುರಕ್ಕೆ 300 ಕೋಟಿ ರೂಪಾಯಿ ಯೋಜನೆಗಳ ಒಪ್ಪಿಗೆ ‌ಸಿಕ್ಕಿದೆ. ಈಗ ಸಾಧ್ಯಕ್ಕೆ ಮೂವತ್ತು ಗ್ರಾಮಗಳ ಅಭಿವೃದ್ದಿಯ ನೀಲಿ ನಕ್ಷೆ ಹಾಕಲಾಗಿದೆ. ಇದು ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ, ಮುಂದೆ ಚಿತ್ತಾಪುರ, ವಾಡಿ ಸಮಗ್ರ ಅಭಿವೃದ್ದಿಯ ನೀಲಿನಕ್ಷೆ ತಯಾರಾಗಲಿದೆ ಇದಕ್ಕೆ 25 ಕೋಟಿ ರೂಪಾಯಿ ತೆಗೆದಿರಸಲಾಗಿದೆ. ವಿಜ್ಞಾನ ಕೇಂದ್ರ , ಮೃಗಾಲಯ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದರು.

 ತಾಲೂಕಿನಲ್ಲಿ "ಕಾಯಕ ಗ್ರಾಮ" ಯೋಜನೆ ಜಾರಿಗೆ ತರಲು ಆಲೋಚಿಸಲಾಗಿದೆ. ಇದರಲ್ಲಿ ಸಂಸದರ ಅನುದಾನ ಕೂಡಾ ಬಳಕೆಯಾಗಲಿದೆ. ಇದರ ಹಿಂದೆ ಸಂಸದ ರಾಧಾಕೃಷ್ಣ ದೊಡ್ಡಮನಿ‌ ಅವರ ಕನಸಿದೆ.‌ ಈ ಯೋಜನೆಯಡಿಯಲ್ಲಿ ಕನಿಷ್ಠ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನೀವೆಲ್ಲ‌ ಆಶೀರ್ವಾದ ಮಾಡಿ ಅವರನ್ನು ಕ್ಷೇತ್ರದ ಜನರ ಸೇವೆಗೆ ಕಳಿಸಿದ್ದೀರಿ.ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ದೇಶದದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಜೊತೆಗೆ‌ ಜನರ‌ ಸಾಮಾಜಿಕ‌ ಕ್ಷೇತ್ರದಲ್ಲಿ, ಬದಲಾವಣೆ ನಡೆಯುತ್ತಿದೆ ಅದೆ ಬಿಜೆಪಿ ಜನರ ನಡುವೆ ಕಲಹ ಹುಟ್ಟು ಹಾಕುತ್ತಿದೆ ಎಂದು ದೂರಿದ ಅವರು ಜನಪರ ಕಾರ್ಯಕ್ರಮಗಳು ಯಾವುದಾದರೊಂದನ್ನು ಅವರು ಜಾರಿಗೆ ತರಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ ಎಂದರು.
ನಾಗಾವಿ ಯಲ್ಲಮ್ಮ ದೇವಿ,ಚಿತ್ತಾವಲಿ ದರ್ಶನ.
 ಪಟ್ಟಣದ ಹೊರವಲಯದ ನಾಗಾವಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ತದನಂತರ, ಚಿತಾವಲಿ ದರ್ಗಾಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ನಂತರ ಬಸವೇಶ್ವರ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಬಜಾಜ್ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು. ಈ ಸಂದರ್ಭದಲ್ಲಿ ಕಲಾ ತಂಡಗಳು ಹಾಗೂ ಸಾಂಸ್ಕೃತಿಕ ತಂಡಗಳು ಎಲ್ಲಾರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‌ಸಿ ಜಗದೇವ ಗುತ್ತೇದಾರ, ಶಾಸಕರಾದ ಎಂವೈ ಪಾಟೀಲ್, ಅಲ್ಲಮಪ್ರಭು ಪಾಟೀಲ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ದೇವೆಂದ್ರಪ್ಪ ಮರತೂರು, ಭಾಗನಗೌಡ ಸಂಕನೂರು,ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ಭೀಮಣ್ಣ ಸಾಲಿ, ಮಹೆಮೂದ್ ಸಾಹೇಬ್, ರೇವುನಾಯಕ ಬೆಳಮಗಿ, ಶಿವಾನಂದ ಪಾಟೀಲ, ರಮೇಶ ಮರಗೋಳ, ಅಜೀಜ್ ಸೇಟ್, ಶ್ರೀನಿವಾಸ ಸಗರ, ಶಿವರುದ್ರ ಭೀಣ್ಣಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ವೀರಣ್ಣಗೌಡ ಪರಸರೆಡ್ಡಿ, ವಿನೋದ ಗುತ್ತೇದಾರ, ಸಂಜಯ ಬುಳಕ‌ರ್, ಮಲ್ಲಿಕಾರ್ಜುನ ಬೆಣ್ಣೂರಕ‌ರ್, ಶಿವಾಜಿ ಕಾಶಿ, ಜಗದೀಶ್ ಚವ್ಹಾಣ, ಭೀಮಸಿಂಗ್ ಚವ್ಹಾಣ, ರವಿ ರಾಠೋಡ, ನಾಗಯ್ಯ ಗುತ್ತೇದಾರ್, ಶ್ರೀಮತಿ ಶೀಲಾ ಕಾಶಿ, ಸುನೀಲ ದೂಡ್ಡಮನಿ, ಮಲ್ಲಪ್ಪ ಹೊಸಮನಿ, ಶ್ರೀಮತಿ ಶ್ವೇತಾ ಪಾಟೀಲ್, ಜಗಣ್ಣಗೌಡ ಪಾಟೀಲ್, ಸುರೇಶ ಗುತ್ತೇದಾರ್, ಸಾಬಣ್ಣ ಹೋಳಿಕಟ್ಟಿ, ಗುಂಡು ಐನಾಪೂರ, ಸಂತೋಷ ಪೂಜಾರಿ, ಉದಯಕುಮಾರ ಸಾಗರ, ಸೇರಿದಂತೆ ಇತರರು ಇದ್ದರು.

ಗುರುವಾರ, ಅಕ್ಟೋಬರ್ 24, 2024

ಮಹಿಳಾ ಶೌಚಾಲಯ ದುರಸ್ತಿಗೆ ಆಗ್ರಹ.

ಚಿತ್ತಾಪುರ: ಪಟ್ಟಣದ ಪುರಸಭೆಯ ವಾರ್ಡ್ ಸಂಖ್ಯೆ 15ರ ವ್ಯಾಪ್ತಿಯಲ್ಲಿ ಬರುವ ಒಂಬತ್ತು ಕಮಾನ್ ಏರಿಯಾದ ಮಹಿಳಾ ಶೌಚಾಲಯ ಅವ್ಯವಸ್ಥೆಯಿಂದ ಮಹಿಳೆಯರು ಶೌಚಾಲಯಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಕೂಡಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಮಾಡಬೇಕು ಎಂದು ಪುರಸಭೆ ಸದಸ್ಯ ಶ್ಯಾಮ್ ಮೇಧಾ ಆಗ್ರಹಿಸಿದ್ದಾರೆ.

ಶೌಚಾಲಯದ ಬಾಗಿಲುಗಳು ಮುರಿದು ಬಿದ್ದು ಸುಮಾರು ತಿಂಗಳುಗಳಾದರೂ ಇನ್ನೂ ರಿಪೇರಿ ಆಗಿರುವುದಿಲ್ಲ. ಮತ್ತು ಶೌಚಾಲಯದ ಸುತ್ತಲೂ ಗಿಡ ಗಂಟಿಗಳು ಬೆಳೆದಿದ್ದರಿಂದ ಶೌಚಾಲಯಕ್ಕೆ ಹೋಗಲು ಪರದಾಡುವಂತಾಗಿದೆ. ಹೊಸ ಶೌಚಾಲಯದ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಆಗಿದ್ದರೂ ಇನ್ನೂ ಕೂಡ ಯಾವುದೇ ಕಾಮಗಾರಿ ಆರಂಭವಾಗಿರುವುದಿಲ್ಲ. ಶೌಚಾಲಯಕ್ಕೆ ಹೋಗುವ ರಸ್ತೆ ಹಾಗೂ ಸುತ್ತಮುತ್ತಲಿನ ಗಿಡಗಂಟಿಗಳು ಬೆಳೆದಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಹೀಗಾಗಿ ಮಹಿಳೆಯರು ಆತಂಕದಲ್ಲಿದ್ದಾರೆ. ಹೊಸ ಶೌಚಾಲಯ ನಿರ್ಮಾಣ ಆಗುವವರೆಗೆ ಈಗಿರುವ ಶೌಚಾಲಯದ ರಿಪೇರಿ ಮಾಡಿಸಿ ಬೆಳೆದಿರುವ ಗಿಡಗಂಟಿಗಳು ತೆರವುಗೊಳಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಅ,25ಕ್ಕೆ ಅಭಿನಂದನಾ ಸಮಾರಂಭ: ಸಾಲಿ.

ಚಿತ್ತಾಪುರ :  ಕಲಬುರಗಿಯ ನೂತನ ಸಂಸದ ಡಾ. ರಾಧಾಕೃಷ್ಣನ ದೊಡ್ಡಮನಿ ಅವರು ಸಂಸದರಾಗಿ ಪ್ರಪ್ರಥಮ ಬಾರಿ ಪಟ್ಟಣಕ್ಕೆ ಅ 25 ರಂದು ಆಗಮಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಅದ್ದೂರಿಯಾಗಿ ಅಭಿನಂದನಾ ಸಮಾರಂಭ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

 ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು. ನಂತರ ಅವರು  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ ಸಂಸದ ಡಾ. ರಾಧಾಕೃಷ್ಣ ದೊಡ್ಡಮನಿ ಅವರು ಪಟ್ಟಣದ ಸುಪ್ರಸಿದ್ಧ  ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಮತ್ತು ಹಜರತ್ ಚಿತ್ತಶಾವಲಿ ದರ್ಗಾಕ್ಕೆ ಭೇಟಿ ನೀಡಿ ನಂತರ  ಸಂವಿಧಾನ ಶಿಲ್ಪಿ ಡಾ‌. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಶ್ರೀ ಬಸವೇಶ್ವರ ಮೂರ್ತಿಗೆ ಮಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಸಕ ಡಾ. ಅಜಯಸಿಂಗ, ಶಾಸಕ ಎಂವೈ ಪಾಟೀಲ, ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು, ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 ಭವ್ಯ ಮೆರವಣಿಗೆ : ಪಟ್ಟಣದ ಚಿತ್ತಾಶವಲಿ ಚೌಕದಿಂದ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಆರಂಭವಾಗಿ , ಜನತಾ ಬಂಜಾರ, ಭುನೇಶ್ವರಿ ವೃತ್ತ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮೂಲಕ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಮುಖ್ಯ ವೇದಿಕೆಗೆ ತಲುಪುತ್ತದೆ ಎಂದು ತಿಳಿಸಿದರು.

ಈ ಸಮಾರಂಭ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತೆಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ವಾಡಿ ಬ್ಲಾಕ್ ಅಧ್ಯಕ್ಷ ಮಹಿಮೂದ ಸಾಹೇಬ್, ಪ್ರಮುಖರಾದ ವೀರಣ್ಣಗೌಡ ಪರಸರಡ್ಡಿ ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ ಪಟೇಲ್,  ಪ್ರಕಾಶ ಕಮಕನೂರ, ಚಂದ್ರಶೇಖರ ಕಾಶಿ, ಶಿವರುದ್ರ ಭೀಣಿ,  ಯಲ್ಲಾಲಿಂಗ ಪೂಜಾರಿ, ಬಸವರಾಜ ಚಿನಮಳ್ಳಿ, ಶಿವಾಜಿ ಕಾಶಿ, ನಜೀರ ಅಡಕಿ, ಸಲೀಂ ಸಾಬ್, ಜುಮಣ್ಣ ಪೂಜಾರಿ, ಬಸವರಾಜ ಹೊಸಳ್ಳಿ, ಶ್ರೀನಿವಾಸ ರಡ್ಡಿ ಪಾಲಪ್, ಸಂಜೆ ಬುಳ್ಳಕರ್, ಸೇರಿದಂತೆ ಇತರರು ಉಪಸ್ಥಿತದರು.

ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನಿಸಿದ ಯುವತಿಗೆ ಗೂಸಾ.

ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯ ಮಾಂಗಲ್ಯ ಸರ ಕಳ್ಳತನ ಮಾಡಲು ಯತ್ನಿಸಿದ ಯುವತಿಗೆ ಪ್ರಯಾಣಿಕರು ಥಳಿಸಿದ ಘಟನೆ ಬುಧವಾರ ನಡೆದಿದೆ.

ಬುಧವಾರ ಪಟ್ಟಣದಲ್ಲಿ ಸಂತೆ ಇರುವ ಕಾರಣ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರತಿ ಬುಧವಾರ ಒಂದಲ್ಲ ಒಂದು ಕಳ್ಳತನ ಆಗುತ್ತದೆ. ಇಂದು ಸಾಯಂಕಾಲ ಬಸ್ ನಿಲ್ದಾಣದಲ್ಲಿ ದಿಗ್ಗಾಂವ್ ಮತ್ತು ಅಲ್ಲೂರ ಗ್ರಾಮದ ಮಹಿಳೆಯರ ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನಿಸಿ ಓಡಿಹೋಗುವಾಗ ಯುವತಿಯನ್ನು ಹಿಡಿದು ಪೋಲಿಸ್‌ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ ಇಲಾಖೆಯು ಬುಧವಾರ ಸಂತೆಯಂದ್ದು ಕಳ್ಳತನ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಮಂಗಳವಾರ, ಅಕ್ಟೋಬರ್ 22, 2024

ನಾಳೆ ಕಾಂಗ್ರೆಸ್ ಪಕ್ಷದಿಂದ ಪೂರ್ವಭಾವಿ ಸಭೆ.


ಚಿತ್ತಾಪುರ: ಕಲಬುರ್ಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭ ನಿಮಿತ್ಯ ನಾಳೆ (ಅ.23 ರಂದು) ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಹೇಳಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭ ಇದೇ ಅ.25 ರಂದು ಪಟ್ಟಣದಲ್ಲಿ ಆಯೋಜಿಸಿದ್ದು, ಹೀಗಾಗಿ ಸಮಾರಂಭವನ್ನು ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ಮಾಡುವ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಪುರಸಭೆ ಸದಸ್ಯರು ಮತ್ತು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳು ನೀಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣಿ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಕಾಂಗ್ರೆಸ್ ಯುವ ಅಧ್ಯಕ್ಷ ಸಂಜಯ ಬುಳಕರ್‌, ಪ್ರಮುಖರಾದ ಸುನೀಲ್ ದೊಡ್ಡಮನಿ, ಮಲ್ಲಪ್ಪ ಹೊಸಮನಿ, ಶಿವಕಾಂತ್ ಬೆಣ್ಣೂರಕರ್, ರಾಮಲಿಂಗ ಬಾನರ್‌, ನಾಗು ಕಲ್ಲಕ ಇದ್ದರು.

ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸೋಣ.

ಚಿತ್ತಾಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸೋಣ ಎಂದು ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೆಂಬರ್ 1 ರಂದು ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬೆಳಿಗ್ಗೆ 8 ಗಂಟೆ ಅಧಿಕಾರಿಗಳು ಧ್ವಜಾರೋಹಣವನ್ನು ನೆರವೇರಿಸಿ ತಾಲೂಕು ಆಡಳಿತ ವತಿಯಿಂದ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲಾರೂ ಭಾಗವಹಿಸಬೇಕು ಎಂದು ಕೋರಿದ್ದಾರೆ. 

ಪಟ್ಟಣದ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ಮಾಡಬೇಕು ಎಂದು ಪುರಸಭೆಗೆ ಸೂಚಿಸಿದರು, ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ದೀಪಾಲಂಕಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಪಟ್ಟಣದ ಎಲ್ಲ ಅಂಗಡಿಗಳ ನಾಮಫಲಕ ಕನ್ನಡದಲ್ಲಿ ಇರುವಂತೆ ಮಾಡಬೇಕು, ಭುವನೇಶ್ವರಿ ವೃತ್ತ ಅಭಿವೃದ್ಧಿಗೊಳಿಸಿ ಆಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಬೇಕು, ಎಲ್ಲ ಅಂಗಡಿಗಳ ಮೇಲೆ ಕನ್ನಡ ಧ್ವಜ ಅಳವಡಿಸುವಂತೆ ಸೂಚಿಸಬೇಕು, ಉಪಹಾರದ ವ್ಯವಸ್ಥೆ ಮಾಡಬೇಕು, ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ವ್ಯವಸ್ಥೆ ಮಾಡಬೇಕು, ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಬೇಕು ಮತ್ತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಬೇಕು, ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಬೇಕು ಎಂಬ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು ಈ ಎಲ್ಲಾವು ಕುರಿತು ಮಹ್ಮದ್ ಇಬ್ರಾಹಿಂ,  ಕಾಶಿನಾಥ ಗುತ್ತೇದಾರ, ನರಹರಿ ಕುಲಕರ್ಣಿ, ಚಂದ್ರಶೇಖರ ಬಳ್ಳಾ,  ಜಗದೇವ ದಿಗ್ಗಾಂವಕರ್, ರವಿ ಇವಣಿ, ಪ್ರಹ್ಲಾದ ವಿಶ್ವಕರ್ಮ, ವೀರಣ್ಣ ಸುಲ್ತಾನಪೂ‌ರ್, ಮಾತನಾಡಿದರು.


ಪಟ್ಟಣದಲ್ಲಿ ಸೂಕ್ತವಾದ ವೃತ್ತದಲ್ಲಿ ಭುವನೇಶ್ವರಿ ದೇವಿ ಮೂರ್ತಿ ಕುಡಿಸಬೇಕು,ಅಂಗಡಿ ಮುಂಗಟ್ಟುಗಳ ಮೇಲಿನ ಹಾಕಿದ ಆಂಗ್ಲ ಭಾಷೆಯ ನಾಮಫಲಕ ತೆರುವುಗೋಳಿಸಬೇಕು, ಸರ್ಕಾರ ಜಾರಿಗೆ ತಂದಿರುವ ಸರ್ಕಾರಿ ನೌಕರರ ಕೆಂಪು ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಕಡ್ಡಾಯವಾಗಿ ಧರಿಸಬೇಕು, ಕ್ಷೇತ್ರದಲ್ಲಿ ಓರಿಯಂಟ್, ಎಸಿಸಿ, ಮತ್ತು ಶ್ರೀ ಸಿಮೆಂಟ್ ಕಂಪೆನಿಯಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ಸೂಚಿಸುವುದರ ಜೊತೆಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಬೇಕು ಕನ್ನಡ ಬಾವುಟಗಳು ತಾಲೂಕಿನಲ್ಲಿ ರಾರಾಜಿಸಬೇಕು ಎಂದರು.

- ಜಗದೇವ ಎಸ್ ಕುಂಬಾರ
ಕಸಾಪ ಸದಸ್ಯರು, ಪತ್ರಕರ್ತರು ಚಿತ್ತಾಪೂರ.

ಗ್ರೇಡ್ -2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರ, ಅಧಿಕಾರಿಗಳಾದ ಸಿಪಿಐ ಚಂದ್ರಶೇಖರ ತಿಗಡೆ, ಆರತಿ ತುಪ್ಪದ್, ಕರಣಕುಮಾರ ಸವಿತಾ ಗೋಣಿ, ಚೇತನ್ ಗುರಿಕಾರ, ಬಾಲಕೃಷ್ಣ, ಡಾ.ಶಂಕರ ಕಣ್ಣಿ, ಡಾ.ಸೃಯಾದ್ ರಜೀವುಲ್ಲಾ, ಶಿವಶರಣಪ್ಪ ಮಂಠಾಳೆ, ಬಸವರಾಜ ಜೆಇ ವಾಡಿ, ಲೋಹಿತ್ ಕಟ್ಟಿಮನಿ, ಅಮೃತ್ ಕ್ಷೀರಸಾಗರ, ಮಹ್ಮದ್ ಜಾವೀದ್, ವಿಜಯಲಕ್ಷ್ಮಿ, ಶ್ರೀಮತಿ ಸುನೀತಾ, ರಾಜಕುಮಾರ, ಚಂದ್ರಕಾಂತ ಮುಖಂಡರಾದ ಚಂದ್ರಶೇಖರ ಉಟಗೂರ, ಲಕ್ಷ್ಮೀಕಾಂತ ತಾಂಡೂರಕರ್, ಶರಣು ದಂಡೋತಿ, ವೆಂಕಟೇಶ್ ಬಳಿಚಕ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶುಕ್ರವಾರ, ಅಕ್ಟೋಬರ್ 18, 2024

ಸಂಘದ ಚುನಾವಣೆ: ಅರುಣಕುಮಾರ್‌ ನಾಮಪತ್ರ ಸಲ್ಲಿಕೆ.

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆಯ ಚುನಾವಣೆ ಇದೇ ಅ.28 ರಂದು ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅರುಣಕುಮಾರ್ ಚಿಂಚನಸೂರ ನಿರ್ದೇಶಕರ ಹುದ್ದೆಗೆ ಆಯ್ಕೆ ಬಯಿಸಿ ಇಲಾಖೆಯ ಸಿಬ್ಬಂದಿಗಳೊಂದಿಗೆ ತೆರಳಿ ಚುನಾವಣಾಧಿಕಾರಿ ವಿಜಯಕುಮಾರ ಲೊಡ್ಡೆನೋರ ಅವರಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಅರುಣಕುಮಾರ್ ಚಿಂಚನಸೂರ ಅವರು ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಜಮಾದಾರ, ಕೆಎಂಎಫ್ ಮಾಜಿ ನಿರ್ದೇಶಕ ತಿಪ್ಪಣ್ಣ ಆಳಂದ, ಇಲಾಖೆ ಸಿಬ್ಬಂದಿಗಳಾದ ಮಹ್ಮದ್ ಗೌಸೋದ್ದಿನ್, ಸಿದ್ದರಾಜ್, ಶರಣು, ಜಯಶ್ರೀ, ಸಿದ್ದಪ್ಪ, ರವಿಕುಮಾ‌ರ್, ಲಿಂಗರಾಜ್, ಪರಶುರಾಮ, ದೇವಿಂದ್ರಪ್ಪ ಭಾಲ್ಕಿ, ರವಿ ಬೆಳಮಗಿ ಸೇರಿದಂತೆ ಇತರರು ಇದ್ದರು.

ಅದ್ದೂರಿಯಾಗಿ ನಡೆದ ನಾಗಾವಿ ಪಲ್ಲಕ್ಕಿ ಉತ್ಸವ.

ದಾರಿ ಉದ್ದಕ್ಕೂ ಅನ್ನ ದಾಸೋಹ.  •ಪಲ್ಲಕ್ಕಿ ಉತ್ಸವಕ್ಕೆ ಹರಿದುಬಂದ ಭಕ್ತ ಸಾಗರ.

ಚಿತ್ತಾಪೂರ: ರಾಷ್ಟ್ರಕೂಟರ ಕುಲ ದೇವತೆಯಾದ ಸುಪ್ರಸಿದ್ಧ ಶ್ರೀ ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ತುಂಬಾ ವಿಜೃಂಭಣೆಯಿಂದ ಸಾವಿರಾರು ಭಕ್ತರ ಜೈಘೋಷದ ಮಧ್ಯ ಗುರುವಾರ ಅದ್ದೂರಿಯಾಗಿ ಜರಗಿತ್ತು.

ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ನಿವಾಸದಲ್ಲಿ ಮಧ್ಯಾಹ್ನ 2ಗಂಟೆ ಸುಮಾರಿಗೆ ವಿಘ್ನೇಶ್ವರ ಗುರು ಹಾಗೂ ಯಲ್ಲಮ್ಮ ದೇವಿ ಪಲ್ಲಕ್ಕಿಗೆ ತಹಸಿಲ್ದಾರ್ ನಾಗಯ್ಯ ಹೀರೆಮಠ, ಕಚೇರಿಯ ಸಿರಸ್ತೇದಾರ್ ಅಶ್ವಥ್ ನಾರಾಯಣ್, ಕಣ್ವ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪ್ರಭುರಾಜ ಕಾಂತಾ,ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತ್ತು ನಂತರ ಸಕಲ ವಾದ್ಯಗಳೊಂದಿಗೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಮೂರ್ತಿ ಹೊತ್ತ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಚಿತಾವಲಿ ಚೌಕ, ಕಪಡಾ ಕಿರಾಣಾ ಬಜಾರ್, ಜನತಾ ಚೌಕ್, ನಾಗಾವಿ ಚೌಕ್, ಹಾಗೂ ಒಂಟಿ ಕಮಾನ್ ಸೇರಿ ವಿವಿಧ ಬೀದಿಗಳ ಮೂಲಕ ರಾತ್ರಿ 8 ಗಂಟೆಗೆ ಶ್ರೀ ನಾಗಾವಿ ಯಲ್ಲಮ್ಮ ದೇವಿ ದೇಗುಲ ತಲುಪಿತ್ತು. ಮೆರವಣಿಗೆಯಲ್ಲಿ ಭಾಜಾ ಭಜಂತ್ರಿ, ಡೊಳ್ಳು ಕುಣಿತ, ಕೋಲಾಟ ಬಣ್ಣ ಬಣ್ಣದ ಧ್ವಜಗಳು ಗಮನ ಸೆಳೆದವು. ಸುಮಂಗಲಿಯರು ಕಳಸ ಕುಂಭ ಹೊತ್ತು ಹೆಜ್ಜೆ ಹಾಕಿದರು. ಸುಮಾರು 7 ಗಂಟೆಗಳ ಕಾಲದವರೆಗೆ ದೇವಿಯ ಉತ್ಸಾಹ ನಡೆಯಿತು. ದೇವಾಲಯದ ಸುತ್ತ 5 ಪ್ರದಕ್ಷಣೆ ಹಾಕಿದ ನಂತರ ದೇವಿಗೆ ವಿಶೇಷ ಪೂಜೆ ಅಭಿಷೇಕ ಕುಂಕುಮಾರ್ಚನೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು .

 ವಿವಿಧ ರಾಜ್ಯ ಸೇರಿ ಆಂಧ್ರಪ್ರದೇಶ ತೆಲಂಗಾಣ ಮಹಾರಾಷ್ಟ್ರ ತಮಿಳುನಾಡಿನಿಂದ ಆಗಮಿಸಿದ ಭಕ್ತರು ಯಲ್ಲಮ್ಮ ದೇವಿ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹೀರೆಮಠ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡೆ, ಜಗದೇವಪ್ಪ ಪಾಳಾ,ಶಿರಸ್ತೇದಾರ ಅಶ್ವಥ್ ನಾರಾಯಣ್,  ಕಣ್ವ ನಾಯಕ, ಕೃಷ್ಣ ನಾಯಕ್, ನರಹರಿ ಕುಲಕರ್ಣಿ, ಅಂಬರೀಶ್ ಸುಲೇಗಾವ್, ಸುರೇಶ್ ಗುತ್ತೇದಾರ್, ನಾಗಯ್ಯ ಗುತ್ತೇದಾರ್, ಚಂದ್ರಶೇಖರ ಅವಾಂಟಿ, ಕೋಟೇಶ್ವರ ರೇಶ್ಮಿ, ಲಕ್ಷ್ಮೀಕಾಂತ ತಾಂಡೂರಕರ್, ಅಂಬರೀಶ್ ಬೋವಿ, ಆನಂದ ಗುತ್ತೇದಾರ್, ಭೀಮು ಹೋಳಿಕಟ್ಟಿ, ಮಾರುತಿ ತಾಂಡೂರಕರ್, ನಾಗಾವಿ ದೇವಸ್ಥಾನ, ಮತ್ತು ತಹಸಿಲ್  ಸಿಬ್ಬಂದಿ ವರ್ಗ, ಪಿಎಸಐ ಶ್ರೀಶೈಲ್ ಅಬಂಟಿ, ತಿರುಮಲೇಶ್ ಕುಂಬಾರ, ಸೇರಿದಂತೆ ಇತರರು ಇದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದರು.

ಸಂಘದ ಚುನಾವಣೆಗೆ ಪಿಡಿಓ ನಾಮಪತ್ರ ಸಲ್ಲಿಕೆ

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆಯ ಚುನಾವಣೆ ಇದೇ ಅ.28 ರಂದು ನಡೆಯಲಿದ್ದು, ನಿರ್ದೇಶಕರ ಹುದ್ದೆಗೆ ಆಯ್ಕೆ ಬಯಿಸಿ ಅಳ್ಳೋಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಭಾಲ್ಕೆ ಅವರು ಇಲಾಖೆಯ ಸಿಬ್ಬಂದಿಗಳೊಂದಿಗೆ ತೆರಳಿ ಚುನಾವಣಾಧಿಕಾರಿ ವಿಜಯಕುಮಾರ ಲೊಡ್ಡೆನೋರ ಅವರಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ತಾಲೂಕು ಪಂಚಾಯತ್ ಕಚೇರಿ ವತಿಯಿಂದ ದೇವಿಂದ್ರಪ್ಪ ಭಾಲ್ಕೆ ಅವರು ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ತಾಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ಅಮೃತ್ ಕ್ಷೀರಸಾಗರ, ಹರೀಶ್ ಶಿಂಧೆ, ಓಂಕಾರ, ಶ್ರಾವಣ,ಅನೀಲಕುಮಾರ, ರೇಷ್ಮಾ, ಅನೀತಾ, ಜಕ್ಕಪ್ಪ, ಜುಬೇರ್, ಸಂದೇಶ, ಪ್ರಕಾಶ್ ಸೇರಿದಂತೆ ಇತರರು ಇದ್ದರು.

ಸ್ವಚ್ಛತೆಯಿಂದ ಉತ್ತಮ ಆರೋಗ್ಯ: ಗ್ರಾಪಂ ಅಧ್ಯಕ್ಷ.


ಚಿತ್ತಾಪುರ: ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಉತ್ತಮ ಆರೋಗ್ಯ ದೊರೆಯಲು ಸಾಧ್ಯ ಎಂದು ಭಾಗೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ಪಾಟೀಲ್ ಹೇಳಿದರು.

ತಾಲೂಕಿನ ಭಾಗೋಡಿ ಗ್ರಾಮದ ಪಂಚಾಯತ್ ಸಭಾಂಗಣದಲ್ಲಿ ಅಶೋಕ್ ಲೇಲ್ಯಾಂಡ್ ಹಾಗೂ ಲರ್ನಿಂಗ್ ಲಿಂಕ್ ಫೌಂಡೇಶನ್ ಮತ್ತು ರೋಟು ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲಿ ಪರಿಸರದ ಬಗ್ಗೆ ಕಾಳಜಿ ಇರಬೇಕು. ನಮ್ಮೆಲ್ಲರ ಜೀವನದಲ್ಲಿ ಇಂತಹ ಮನೋಭಾವನೆ ಮೂಡಿದಾಗ ಸ್ವಚ್ಛ ಊರು, ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯವಾಗುತ್ತದೆ. ಸ್ವಸ್ಥ ಆರೋಗ್ಯ, ವಾತಾವರಣ, ಸಮಾಜದ ನಿರ್ಮಾಣದ ದಿಶೆಯಲ್ಲಿ  ಸ್ವಚ್ಛತೆ ಬಹುಮುಖ್ಯವಾಗಿದೆ ಎಂದರು.
ಎಲ್ಎಲ್ಎಫ್ ತಾಲೂಕು ಬ್ಲಾಕ್ ಮ್ಯಾನೇಜರ್ ಸಂತೋಷ ಕುಮಾರ್ ಮಾತನಾಡಿ ತಮ್ಮ ಊರಿನ  ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಣೆ ಕಡೆ ಗಮನ ಹರಿಸಬೇಕು, ಅಶುದ್ಧ ವಾತಾವರಣ ನಿರ್ಮಾಣವಾದಲ್ಲಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತೆದೆ ಹೀಗಾಗಲೇ ತಾಲೂಕಿನಲ್ಲಿ 597 ವೀಕಲ ಚೇತನ್ ಮಕ್ಕಳು ಇದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದಿದೆ. ಆದ್ದರಿಂದ ನಮ್ಮ ನಮ್ಮ ಸ್ವಚ್ಛತೆ ನಾವೇ ಮಾಡಿಕೊಳ್ಳಬೇಕು ಎಂದರು.

ವಾರಕ್ಕೆ ಒಂದು ದಿನದಂತೆ ನಮ್ಮ ಮನೆಯ ಅಕ್ಕ ಪಕ್ಕದ ಸ್ವಚ್ಛತೆ ಮತ್ತಿತರ ಕೆಲಸಗಳನ್ನು ನಾವೆ ಮಾಡಬೇಕು ಇದರ ಬಗ್ಗೆ ಇತರರಿಗೆ ಅರಿವು ಮೂಡಿದರೆ ಮಾತ್ರ ಸ್ವಾವಲಂಬನೆ ಮೂಡಲು ಸಾಧ್ಯ. ಮನೆಯಿಂದ ಹಿಡಿದು ದೇಶದ ಸ್ವಚ್ಛತಾ ಗುರಿ ನಿಮ್ಮದಾಗಲಿ ಎಂದರು.

   - ಕುಮಾರಿ ರೇಷ್ಮಾ,
 ಹಿರಿಯ ಸಂಪನ್ಮೂಲ ಶಿಕ್ಷಕಿ ಎಲ್ಎಲ್ಎಫ್ ಸಂಸ್ಥೆ
 
ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ ಓಂಕಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಎಸ್ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ, ರಾಜಶೇಖರ್ ಬಾಳಿ, ಚಂದ್ರಕಾಂತ ಐನಾಪುರ, ಈಶ್ವರ್ ಶಂಕರವಾಡಿ, ಮಹಾದೇವಪ್ಪ ಜಲವಾದಿ, ಪತ್ರಕರ್ತ ಜಗದೇವ ಕುಂಬಾರ, ತಮಿಳುನಾಡಿನ ಸಂಸ್ಥೆಯ ಮ್ಯಾನೇಜರ್ ವಿಜ್ಞೇನೇಶ್ವರ, ಸಂಸ್ಥೆಯ ಬಾಬು,  ಶ್ರೀಮತಿ ಶೃತಿ, ಮಸ್ತಾಪ್, ಸುರೇಶ ಸೇರಿದಂತೆ ಇತರರು ಇದ್ದರು.ಕಾರ್ಯಕ್ರಮದಲ್ಲಿ ಪ್ರಾರ್ಥನೆಯು ರವಿಕುಮಾರ್ ನಡೆಸಿಕೊಟ್ಟರು,ಮಲ್ಲಮ್ಮ ಸ್ವಾಗತಿಸಿದರು,ಹಣಮಂತ ಕುಂಬಾರ ನಿರೂಪಿಸಿ ವಂದಿಸಿದರು.

ಬುಧವಾರ, ಅಕ್ಟೋಬರ್ 9, 2024

ರೈತರ ಅಹವಾಲು ಸ್ವೀಕರಿಸಲು ಕಾಲಾವಕಾಶ: ಡಿಸಿ.

ಚಿತ್ತಾಪುರ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಉದ್ದೇಶಿತ ರಾಮ್ಕೊ ಸಿಮೆಂಟ್ ಕಂಪೆನಿಯ ಯೋಜನಾ ಸ್ಥಳದಲ್ಲಿ ವಾಸವಾಗಿರುವ ಆಸಕ್ತ ನಿವಾಸಿಗಳು, ಪರಿಸರಾಸಕ್ತ ಗುಂಪುಗಳು ಮತ್ತು ಈ ಯೋಜನೆಯಿಂದ ತೊಂದರೆಗೊಳಗಾಗಬಹುದಾದ ಸಾರ್ವಜನಿಕರು ತಮ್ಮ ಸಲಹೆಗಳು, ಅನಿಸಿಕೆಗಳು, ಟೀಕೆ-ಟಿಪ್ಪಣಿಗಳು ಹಾಗೂ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಸೇಡಂ ಸಹಾಯಕ ಆಯುಕ್ತರಿಗೆ ಅಥವಾ ಚಿತ್ತಾಪುರ ತಹಸೀಲ್ದಾ‌ರ್ ಅವರಿಗೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಹೇಳಿದರು.
ದಿ ರಾಮ್ಮೊ ಸಿಮೆಂಟ್ಸ್ ಲಿಮಿಟೆಡ್ ರವರು ಚಿತ್ತಾಪುರ ತಾಲೂಕಿನ ಬೊಮ್ಮನಹಳ್ಳಿ ಸುಣ್ಣದಕಲ್ಲು ಗಣಿ ಬ್ಲಾಕ್ (ಇ-ಹರಾಜು ಮಾಡಿದ ಗಣಿ ಬ್ಲಾಕ್) ನಿಂದ 4.0 MTPA ಉತ್ಪಾದನಾ ಸಾಮರ್ಥ್ಯದ ಸುಣ್ಣದ ಕಲ್ಲು, ಮೇಲಿನ ಮಣ್ಣು 2,14321 M', ಅಧಿಕ ಭಾರ (Over Burden) 0.46 ΜΤΡΑ ಜೊತೆಗೆ 1000 TPH ಸಾಮರ್ಥ್ಯದ ಕ್ರಷರ್ 500 TPH ಸಾಮರ್ಥ್ಯದ ವೊಟ್ಲ‌ರ್ ಮತ್ತು ಸ್ಟ್ರೀನ್, 1200 TPH ಸಾಮರ್ಥ್ಯದ ಬೆಲ್ಟ್ ಕನ್ವೆಯರ್‌ಗಳನ್ನು ಒಟ್ಟು 500 ಹೇಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಲಬುರ್ಗಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ದೇಶಿತ ಯೋಜನೆಯ ಪರಿಸರ ಸಾರ್ವಜನಿಕ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅವರು ಜಮೀನು ಕಳೆದುಕೊಂಡವರಿಗೆ ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡುವುದು, ಸಿಎಸ್ಆರ್ ಅನುದಾನ ಹೆಚ್ಚಳ ಮಾಡಬೇಕು, ಶಾಲೆ, ಆಸ್ಪತ್ರೆ, ಅಂಗನವಾಡಿ ನಿರ್ಮಾಣ, ಈಗಿರುವ ಎರಡು ರಸ್ತೆಗಳಲ್ಲಿ ಓಡಾಡಲು ತೊಂದರೆ ಆಗದಂತೆ ನೋಡಿಕೊಳ್ಳುವುದು, ಜಮೀನನ ಬೆಲೆ ಹೆಚ್ಚಿಸುವುದು ಸೇರಿದಂತೆ ಸರ್ಕಾರದ ನಿಯಮದ ಪ್ರಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವ ಚರ್ಚಿತ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕಂಪನಿಗೆ ಜಾಮೀನು ನೀಡಿದ ರೈತರ ಅಭಿಪ್ರಾಯಗಳು:
 
ರಾಜು ಗುತ್ತೇದಾರ: ರಾಮ್ಕೊ ಸಿಮೆಂಟ್ ಕಂಪೆನಿಯಿಂದ ರೈತರಿಗೆ ಹಾಗೂ ಸ್ಥಳೀಯರಿಗೆ ಸಾಕಷ್ಟು ಅನುಕೂಲಗಳು ಆಗಲಿದ್ದು ಬಹುಬೇಗನೆ ಕಂಪನಿ ಆರಂಭವಾಗಬೇಕು ಎಂದರು.

ವಿರೇಶ್ ಕರದಾಳ: ಶಿಕ್ಷಣಕ್ಕೆ ಆದ್ಯತೆ ನೀಡುವ ಭರವಸೆ ನೀಡಿದ್ದು ತುಂಬಾ ಖುಷಿಯ ವಿಚಾರ ಅದರ ಜೊತೆಗೆ
ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು. ಹಾಗೂ ಭೌತಿಕ ಮೂಲಸೌಕರ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿದರು.

ಅಯ್ಯಪ್ಪ ಬೊಮ್ಮನಹಳ್ಳಿ: ಈಗಾಗಲೇ ಪ್ರತಿ ಎಕರೆಗೆ 19 ಲಕ್ಷದಂತೆ ಕಂಪೆನಿಯವರು ಖರೀದಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಕೊರೋನ್ ವೇಳೆ ಜನರಿಗೆ ಹಣದ ಅವಶ್ಯಕತೆ ಇತ್ತು ಈಗ ರೈತರಿಗೆ ಆ ತಪ್ಪು ಅರಿವು ಆಗಿದೆ ಆದ್ದರಿಂದ ಪ್ರತಿ ಎಕರೆಗೆ 35/40 ಲಕ್ಷ ನೀಡಬೇಕು ಮತ್ತು ಗ್ರಾಮದಲ್ಲಿ 40 ಎಕರೆ ಗೈರಾಣಿ ಜಮೀನು ಇದೆ ಇದು ಕಂಪೆನಿಯವರು ಖರೀದಿ ಮಾಡದೇ ದನಕರುಗಳಿಗೆ ಮೇಯಿಸಲು ಬೀಡಬೇಕು.

ನಾಗರೆಡ್ಡಿ ಪಾಟೀಲ ಕರದಾಳ: ರೈತರು ಗುಳೆ ಹೋಗದಂತೆ ತಡೆಯುವುದರ ಜೊತೆಗೆ ಜಮೀನು ನೀಡಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕು, ಗ್ರಾಮದಲ್ಲಿ ಈಗಿರುವ ಎರಡು ರಸ್ತೆಗಳನ್ನು ಬದಲಾವಣೆ ಮಾಡದೆ ಯಥಾಪ್ರಕಾರ ರಸ್ತೆಗಳನ್ನು ಹೊಂದಿಸಿಕೊಂಡು ಅಭಿವೃದ್ಧಿಪಡಿಸಬೇಕು, ಮಾಲಿನ್ಯ ನಿಯಂತ್ರಣ ಮಾಡುವುದನ್ನು ಪರಿಸರ ಇಲಾಖೆ ಗಮನ ಹರಿಸಬೇಕು ಎಂದರು.

ರೈತರಾದ ರೇವಣಸಿದ್ದಪ್ಪ ತಳವಾರ, ರಫೀಕ್ ಲಿಂಕ್, ತೋಟಪ್ಪ ಪೂಜಾರಿ,ಸಂಗಮೇಶ ಕರದಾಳ, ಮಲ್ಲಣ್ಣ, ಮಾಳಪ್ಪ, ಚಂದ್ರಪ್ಪ ಪೂಜಾರಿ, ನಾಗರಾಜ ತಳವಾರ, ದೂಳಪ್ಪ ಬೊಮ್ಮನಹಳ್ಳಿ, ಚಂದ್ರಕಾಂತ ಚೂರಿ, ದೊಡ್ಡಪ್ಪಗೌಡ ಮಳಖೇಡ, ಮೌನೇಶ್‌ ಬೊಮ್ಮನಹಳ್ಳಿ, ಬಸವರಾಜ ಕರದಾಳ, ಅವರು ಸಹ ಅನಿಸಿಕೆ ವ್ಯಕ್ತಪಡಿಸಿದರು.

ಪರಿಸರ ಹಿರಿಯ ಅಧಿಕಾರಿ ರೇಖಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾ‌ರ್ ನಾಗಯ್ಯ ಹಿರೇಮಠ, ರಾಮ್ಮೊ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಶ್ರೀನಿವಾಸ್‌, ಎಜಿಎಂ ಟೀ.ಮದ್ದಿ ವನ್ನನ್‌, ಜಿಎಂ ವಿ.ಎಸ್.ಸಾಂಬಾಶೀವ, ಅಧಿಕಾರಿ ಸೋಮಶೇಖರ ರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಜಗದೇವಪ್ಪ ಪಾಳಾ, ನಟರಾಜ್ ಲಾಡೆ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ತಿರುಮಲೇಶ್ ಕುಂಬಾರ, ಚಂದ್ರಾಮಪ್ಪ ಸೇರಿದಂತೆ ಕರದಾಳ, ಬೊಮ್ಮನಹಳ್ಳಿ, ಸೂಲಹಳ್ಳಿ, ಕಮರವಾಡಿ ಗ್ರಾಮಗಳ ಮುಖಂಡರು, ರೈತರು ಭಾಗವಹಿಸಿದ್ದರು.

ಕಂಪೆನಿ ಅಧಿಕಾರಿ ಮುರುಳಿ ಮನೋಜ್ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ನೀಡಿದರು, ಪರಿಸರ ಅಧಿಕಾರಿ ಸೋಮಶೇಖರ ಸ್ವಾಗತಿಸಿದರು, ಕಂಪೆನಿ ಅಧಿಕಾರಿ ಸಣ್ಣ ವೆಂಕಟೇಶ್ ನಿರೂಪಿಸಿದರು.

ದಕ್ಷ ಅಧಿಕಾರಿಗಳಿಗೆ ಬಿಜೆಪಿ ಅಭ್ಯರ್ಥಿಯಿಂದ ಕಿರುಕುಳ: ಹೊಸ್ಮನಿ.


ಚಿತ್ತಾಪುರ: ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ವಿಧಾನಸಭೆ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಕಿರುಕುಳ ನೀಡುತ್ತಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥ‌ರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಬಾದ ಸಿಪಿಐ ನಟರಾಜ ಲಾಡೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಅವರ ವೃತ್ತಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲ. ಆದರೆ ಮಣಿಕಂಠ ರಾಠೋಡ ಸುಳ್ಳು ಆರೋಪ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮಣಿಕಂಠ ಒಬ್ಬ ರೌಡಿಶೀಟರ್‌ಯಾಗಿದ್ದು, ಗಡಿಪಾರಾದ ಈತ ಗುಂಡಾಗಳ ಪಡೆಕಟ್ಟಿಕೊಂಡು ಅಶಾಂತಿ ವಾತಾವರಣ ಮೂಡಿಸುತ್ತಿದ್ದಾರೆ.

ಚಿತ್ತಾಪುರ ಯಾವತ್ತು ಶಾಂತಿ ತಾಲೂಕಾಗಿದ್ದು,
ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ.ಹಿಂದೆ ಪೋಲಿಸ್ ಕಮಿಷನ‌ರ್ ಸೇರಿದಂತೆ ಅನೇಕ ಪೋಲಿಸ್‌ರ ವಿರುದ್ದವೂ ಸುಳ್ಳು ಆರೋಪ ಮಾಡಿದ ಉದಾಹರಣೆಗಳಿವೆ. ಆದ್ದರಿಂದ ದಕ್ಷ ಅಧಿಕಾರಿ ಸಿಪಿಐ ನಟರಾಜ ಲಾಡೆ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಜನರು ನಂಬುದಿಲ್ಲ. ಸುಳ್ಳು ಆರೋಪ ಮಾಡಿರುವ ಮಣಿಕಂಠ ರಾಠೋಡ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

28ಕ್ಕೆ ಸರಕಾರಿ ನೌಕರರ ಸಂಘದ ಚುನಾವಣೆ

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ನಿರ್ದೇಶಕರ ಚುನಾವಣೆ ಅಕ್ಟೋಬರ್ 28 ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ವಿಜಯಕುಮಾರ ಲೊಡ್ಡನೋರ ತಿಳಿಸಿದ್ದಾರೆ.

ಅ.9 ರಿಂದ 18 ವರೆಗೆ ಸರಕಾರಿ ನೌಕರರ ಭವನದಲ್ಲಿ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಅ.19 ರಂದು ನಾಮಪತ್ರ ಪರಿಶೀಲನೆ, ಅ.21 ರಂದು ಉಮೇದುವಾರಿಕೆ ವಾಪಸ್ಸು ಪಡೆಯಲು ಕೊನೆ ದಿನವಾಗಿದೆ. ಅಂದೇ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು. ಅ.28 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದ್ದು. ಅಂದೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನಾಗಾವಿಗೆ ಹೋಗುವ ರಸ್ತೆ ಸುಧಾರಣೆಗೆ ಆಗ್ರಹ.

ಚಿತ್ತಾಪೂರ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ನಾಗಾವಿ ಯಲ್ಲಮ್ಮ ದೇವಸ್ಥಾನದ ವರೆಗಿನ ರಸ್ತೆ ಸುಧಾರಣೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ರಾಷ್ಟ್ರಕೂಟರ ಮನೆತನದ ಕುಲದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಅಕ್ಟೋಬರ್ 17ರಂದು ನಡೆಯಲಿದ್ದು ಈ ಉತ್ಸವಕ್ಕೆ ವಿವಿಧ ರಾಜ್ಯಗಳಾದ ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ, ಸೇರಿದಂತೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ ಹಾಗೂ ಪಲ್ಲಕ್ಕಿ ಉತ್ಸವ ಕೊಡ ಇದೇ ರಸ್ತೆ ಮಾರ್ಗವಾಗಿ ಸಾಗುತ್ತದೆ ಹೀಗಾಗಿ ರಸ್ತೆ ಉದ್ದಕ್ಕೂ ಇರುವ ತಗ್ಗು ಗುಂಡಿಗಳು ಹಾಗೂ ಅಲ್ಲಲ್ಲಿ ಹಾಳ್ಳಾದ ರಸ್ತೆ ಸುಧಾರಣೆ ಮಾಡುವಂತೆ ಸ್ಥಳೀಯರು ಆಗ್ರಹವಾಗಿದೆ.

ಖಬರಸ್ಥಾನ್ ರಸ್ತೆಯ ಅಕ್ಕ-ಪಕ್ಕ ಸಾರ್ವಜನಿಕರು ಮಲವಿಸರ್ಜನೆ ಮಾಡುತ್ತಿದ್ದು ಇಂತಹ ಜಾತ್ರಾ ಮಹೋತ್ಸವ ಸಮಯದಲ್ಲಿ ಹೋರ ಜಿಲ್ಲಾ, ರಾಜ್ಯಗಳಿಂದ ಬರುವ ಭಕ್ತಾದಿಗಳು ನೋಡಿ ಪಟ್ಟಣದ ಅಸ್ವಚ್ಛತೆ ಕಾಣದೆ ಸ್ವಚ್ಛತಾ ಕಾರ್ಯ ಆಗಬೇಕು ಇದಕ್ಕೆ ಪುರಸಭೆ ಇಲಾಖೆ ಕಾಳಜಿ ವಹಿಸಿ ಕೆಲಸ ಮಾಡಬೇಕು

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುರಸಭೆ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಉತ್ಸವಕ್ಕೂ ಮುಂಚೆ ರಸ್ತೆ ಸುಧಾರಣೆ ಮಾಡಿ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ ಕಾದುನೋಡಬೇಕಾಗಿದೆ.

ಹರಿಯಾಣ ಗೆಲುವು: ಬಿಜೆಪಿ ವಿಜಯೋತ್ಸವ.

ಚಿತ್ತಾಪೂರ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದಕ್ಕೆ ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂದೆ ಕಾರ್ಯಕರ್ತರು ಬುಧವಾರ ಪಾಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಮುಖಂಡರು, ಕಾರ್ಯಕರ್ತರು, ಜಯಘೋಷ ಹಾಕುವ ಮೂಲಕ ವಿಜಯೋತ್ಸವ ಆಚರಿಸಿದರು.

ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ ಮಾತನಾಡಿ ಹರಿಯಾಣ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೋಮ್ಮೆ ದೇಶದ ಪ್ರಧಾನಿಯ ಕೈ ಬಲಪಡಿಸಿದೆ. ಇದು ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಸಿಕ್ಕ ಗೆಲುವು. ಇದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ’ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಆಡಳಿತ ಇರುವ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಮತ್ತು ಆಮಿಷಗಳಿಗೆ ಒಳಗಾಗದೆ, ಪ್ರಧಾನಿ ಮೋದಿಯವರು ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಿರುವ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳಿಗೆ ಹರಿಯಾಣ ಜನ ಆಶಿರ್ವಾದ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸಹ ಬಿಜೆಪಿ ಜಯ ಸಾಧಿಸಲಿದೆ ಎಂದ ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್,  ಮಂಡಳ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರೀಮತಿ ನಾಗುಬಾಯಿ ಜಿತುರೆ, ಶ್ರಿಮತಿ ಅಕ್ಕಮ್ಮ, ನಗರ ಅಧ್ಯಕ್ಷ ಆನಂದ ಪಾಟೀಲ್ ನರಬೂಳ್, ಕಾರ್ಯದರ್ಶಿ ಮೇಘರಾಜ ಗುತ್ತೇದಾರ್, ಸುರೇಶ ಬೆನಕನಳ್ಳಿ, ಕೋಟೇಶ್ವರ ರೇಶ್ಮಿ, ಮಹ್ಮದ್ ಯೂನುಸ್, ಶಾಮಮೇಧಾ, ಪ್ರಭು ಗಂಗಾಣಿ, ಪಂಕಜಾಗೌಡ ಗುತ್ತೇದಾರ್, ಸೇರಿದಂತೆ ಇತರರು ಇದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...