ಬುಧವಾರ, ಅಕ್ಟೋಬರ್ 8, 2025

ಅನ್ನದಾಸೋಹ: ಶಂಕರಗೌಡ ಪಾಟೀಲ ಚಾಲನೆ.

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ
ಯಲ್ಲಮ್ಮ ಪಲ್ಲಕ್ಕಿ ಉತ್ಸವದ ಪ್ರಯುಕ್ತ ಅನ್ಮೋಲ್ ಹೋಟೆಲ್ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅನ್ನದಾಸೋಹಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಜಾತ್ರಾ ಮಹೋತ್ಸವದ ಅಂಗವಾಗಿ ಇಂತಹ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅನ್ಮೋಲ್ ಹೋಟೆಲ್  ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ್ ತಿಗಡೆ, ಅನ್ಮೋಲ್ ಹೋಟೆಲ್ ಶ್ರೀಮತಿ ಭಾಗಮ್ಮ ಕಲ್ಲಾಕ್, ಸುರಾಜ್ ಕಲ್ಲಾಕ್ ವಿಜಯ್ ಕಲ್ಲಾಕ್, ಅರುಣ್ ಕಲ್ಲಾಕ್, ವಿಜಯಕುಮಾರ್ ದೊಡ್ಮನಿ, ಜಗನ್ನಾಥ ಮುಡಬೂಳಕರ್, ಅಂಬರೀಶ್, ಪ್ರಕಾಶ್ ಸೇರಿದಂತೆ ಇತರರು ಇದ್ದರು.

ಭಾನುವಾರ, ಅಕ್ಟೋಬರ್ 5, 2025

ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ : ವಾರ್ಡನ್ ನಿರ್ಲಕ್ಷ.

ಹೈಟೆಕ್ ವಸತಿ ನಿಲಯ, ಒಳಗೆ ಹೋಗಲು ಮುಜುಗರ.

ಚಿತ್ತಾಪುರ: ಪಟ್ಟಣದ ಬಾಲಾಜಿ ಮಂದಿರದ ಮುಂದೆ ಇರುವ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ದಿನಗಳಿಂದ ಮಳೆ ನೀರು ನಿಂತು ಗಬ್ಬು ನಾರುತ್ತಿದರು ಸಹ ಆ ನೀರನ್ನು ಸ್ವಚ್ಛಗೊಳಿಸದೆ ಕ್ರಮ ಕೈಗೊಳ್ಳದೆ ವಸತಿ ನಿಲಯದ ವಾರ್ಡನ್ ನಿರ್ಲಕ್ಷತನ ತೋರುತ್ತಿರುವುದು ಎದ್ದು ಕಾಣುತ್ತಿದೆ.

ಪ್ರತಿನಿತ್ಯ ವಸತಿ ನಿಲಯದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ /ಬರುವಾಗ ಅದೇ ನೀರಿನಲ್ಲಿ ಮೂಗು ಮುಚ್ಚಿಕೊಂಡು ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಕೆಲ ವಿದ್ಯಾರ್ಥಿಗಳು ಆ ಗಬ್ಬು ನೀರಿನಲ್ಲಿ ನಡೆದುಕೊಂಡು ಹೋಗಲು ಹಿಂಜರಿದು ಕಾಂಪೌಂಡ ಹಾರಿ (ಜಿಗಿದು) ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನಿಲಯದ ಅಡುಗೆ ಸಿಬ್ಬಂದಿ ವರ್ಗ ವಾರ್ಡನ್ ಸಹ ಇದೇ ನೀರಿನಲ್ಲಿ ನಡೆದುಕೊಂಡು ಬರುತ್ತಿದ್ದಾರೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಇವರಿಗೆ ಆಗುತ್ತಿಲ್ಲ. 

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಚಿವ ಪ್ರಿಯಾಂಕ ಖರ್ಗೆ ಹೈಟೆಕ್ ವಸತಿ ನಿಲಯ ನಿರ್ಮಿಸಿದ್ದಾರೆ ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದ ಇಂತಹ ಸಣ್ಣ-ಪುಟ್ಟ ಸಮಸ್ಯೆಗಳು ಉದ್ಭವಿಸುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯರು.

ವಸತಿ ನಿಲಯದ ವಿದ್ಯಾರ್ಥಿಗಳು ಉದಯಕಾಲ ವರದಿಗಾರ ಜೊತೆ ಮಾತನಾಡಿ ಅವರು ಈ ನಿಂತ ನೀರಿನಿಂದ ಬೆಳಗ್ಗೆ ಸಾಯಂಕಾಲ ಗಬ್ಬು ವಾಸನೆ ಬರುತ್ತಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಈ ಕುರಿತು ವಾರ್ಡನ್ ಅವರಿಗೆ ಹೇಳಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಮ್ಮ ಗೋಳು ಹೇಳಿಕೊಂಡಿದ್ಜಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸುದ್ದಿಯನ್ನು ನೋಡಿ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಗೋಳನ್ನು ಆಲಿಸಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

ಗುರುವಾರ, ಸೆಪ್ಟೆಂಬರ್ 18, 2025

ದುಡ್ಡು ಕೊಟ್ರೆ ಮನೆ ನಿರ್ಮಾಣಕ್ಕೆ ಅನುಮತಿ ಪತ್ರ: ದಸಂಸ ಆರೋಪ.

ಚಿತ್ತಾಪುರ: ಮತ ಕ್ಷೇತ್ರದ ಮಾಲಗತ್ತಿ ಗ್ರಾಮ ಪಂಚಾಯತನ  ಅಧ್ಯಕ್ಷರು ಮತ್ತು ಪಿಡಿಓ ಸೇರಿಕೊಂಡು ದುಡ್ಡು ಕೊಟ್ಟವರಿಗೆ ಮಾತ್ರ ಮನೆ ನಿರ್ಮಾಣಕ್ಕೆ ಅನುಮತಿ ಪತ್ರ ನೀಡುವುದು ದುಡ್ಡು ಕೊಡದವರಿಗೆ ನೀಡದೆ ಅನ್ಯಾಯ ಮಾಡುತ್ತಿರುವುದು ಖಂಡನೀಯ ಎಂದು ಆರೋಪಿಸಿ ಪತ್ರಿಕಾ ಪ್ರಕಟಣೆ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಿವಮೂರ್ತಿ ಪಾಮನೋರ ತಿಳಿಸಿದ್ದಾರೆ.

ಪಂಚಾಯತ ವ್ಯಾಪ್ತಿಯಲ್ಲಿರುವ ಯರಗಲ್ ಗ್ರಾಮದ 2024-25ನೇ ಸಾಲಿನ ಇಂದಿರಾ ಆವಾಜ ಯೋಜನೆ, ಮನೆಯಲ್ಲಿ ಫಲಾನುಭವುಗಳಿಗೆ ಆಯ್ಕೆಯಾದ ಮನೆಗಳಲ್ಲಿ 2012-13ನೇ ಸಾಲಿನಲ್ಲಿ ಆಯ್ಕೆಯಾದ ಹಲವಾರು ಫಲಾನುಭವಿಗಳಿಗೆ ಈಗಾಗಲೇ ಮನೆ ಕಟ್ಟಲು ಅನುಮತಿ ಪತ್ರ ಕೊಟ್ಟಿದ್ದು ತಮಗೆ ಯಾರು ಹಣ ಕೊಟ್ಟಿರುವರೋ ಅಂಥವರಿಗೆ ಮಾತ್ರ ಅನುಮತಿ ಪತ್ರ (ವರ್ಕ ಆರ್ಡರ) ಕೊಟ್ಟು ಮನೆ ಕಟ್ಟಲು ಅವಕಾಶ ಮಾಡಿ ಮೊದಲನೆ ಹಂತ ಬಿಲ್ ಸಹ ಮಾಡಿರುತ್ತಾರೆ. ಇನ್ನುಳಿದ ಫಲಾನುಭವಿಗಳು ವರ್ಕ ಆರ್ಡರ ಕೇಳಿದರೆ  ನಿಮ್ಮ ಮನೆಗಳು ಹಿಂದೆ 2012-13ನೇ ಸಾಲಿನಲ್ಲಿ ತೆಗೆದುಕೊಂಡಿರುವಿರಿ ಎಂದು ಹಣ ಕೊಡದವರಿಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಮಾಲಗತ್ತಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸೇರಿಕೊಂಡು ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಅನ್ಯಾಯಕೊಳಗಾದ ಫಲಾನುಭವಿಗಳಿಗೆ ನ್ಯಾಯ ಕೊಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಶನಿವಾರ, ಸೆಪ್ಟೆಂಬರ್ 13, 2025

ಬಿಸಿಯೂಟದ ಜವಾಬ್ದಾರಿಯಿಂದ ಶಿಕ್ಷಕರಿಗೆ ಬೇಡ: ಶಿವಾನಂದ ನಾಲವಾರ.


ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ. 

ಚಿತ್ತಾಪುರ: ಬಿಸಿಯೂಟ ಯೋಜನೆಯಲ್ಲಿ ಶಿಕ್ಷಕರ ಪಾಲ್ಗೊಳ್ಳುತ್ತಿರುವುದರಿಂದ ಬೋಧನೆಯಲ್ಲಿ ಏಕಾಗ್ರತೆ ಸಾಧಿಸುವಲ್ಲಿ ದುಷ್ಪರಿಣಾಮ ಬಿರುತ್ತಿದೆ ಹೀಗಾಗಿ ಬಿಸಿಯೂಟದ ಜವಾಬ್ದಾರಿಯಿಂದ ಶಿಕ್ಷಕರಿಗೆ ಬೇಡ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಸರಕಾರಿ, ಅನುದಾನಿತ.ಪ್ರಾಥಮಿಕ, ಪದವಿಧರ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮೊದಲಿಗಿಂತ ಶಿಕ್ಷಕರಿಗೆ ಗೌರವ ಕಡಿಮೆ ಆಗಲು ಕಾರಣವೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಬಿಸಿಯೂಟದ ಜವಾಬ್ದಾರಿಯಿಂದ ಶಿಕ್ಷಕರಿಗೆ ಮುಕ್ತಿ ಹಾಡಬೇಕು, ಶಿಕ್ಷಕರಿಗೆ ಬರೀ ಪಾಠ ಮಾಡಲು ಅವಕಾಶ ಮಾಡಬೇಕು ಎಂದು ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಹೀಗಾಗಿ ಅವರಿಗೆ ಶಿಕ್ಷಣ ಇಲಾಖೆ ಅಭಾರಿಯಿದೆ ಎಂದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ ದೇಶ ಕಟ್ಟುವ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಶಿಕ್ಷಕರ ತಮ್ಮ ಮನಃಪರಿವರ್ತನೆ ಮಾಡಿಕೊಂಡಾಗ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಲು ಸಾಧ್ಯ ಎಂದರು. ಶಿಕ್ಷಕರ ದಿನಾಚರಣೆಗೆ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆದರ್ಶ ವಿದ್ಯಾರ್ಥಿಗಳನ್ನು ತಯ್ಯಾರಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪಿಎಲ್‌'ಡಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ ಸಾವಿತ್ರಿ ಬಾಯಿ ಫುಲೆ ರವರ ಬಗ್ಗೆ ಮಾತನಾಡುತ್ತಾ ಶಿಲ್ಪಿಗಳು ಹೇಗೆ ಕಲ್ಲನ್ನು ಕಟಿದು ತಿದ್ದಿ ತೀಡಿ ಮೂರ್ತಿ ಮಾಡುತ್ತಾನೆ ಹಾಗೇ ಶಿಕ್ಷಕರು ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ತಿದ್ದಿ ತೀಡಿ ವಿದ್ಯಾ ಬುದ್ಧಿ ಕಲಿಸಿ ಉತ್ತಮ ಪ್ರಜೆಗಳಾಗಿ ಮಾಡುತ್ತಾನೆ ಇವರ ಕಾರ್ಯ ಮೆಚ್ಚುವಂತದು ಎಂದರು.

ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್‌, ಪದವಿಧರ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣಗೌಡ ಎಸ್‌.ಎಂ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಅರೆ ಸರ್ಕಾರಿ ಪ.ಜಾ./ಪ.ಪಂ. ನೌಕರರ ಸಂಘದ ಅಧ್ಯಕ್ಷ ಅರುಣಕುಮಾರ ಎಸ್. ಚೆಂಚನಸೂರ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೀಮರೆಡ್ಡಿ ಮಕಾಸಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ, ಕಾರ್ಯದರ್ಶಿ ಹೀರಾಲಾಲ ರಾಠೋಡ, ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಚಂದ್ರಾಮ ಅಮ್ಮನಗಡೆ, ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ರವೀಂದ್ರ ರೆಡ್ಡಿ ಎನ್. ಶಿಕಾರಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವಿಂದ್ರ ರೆಡ್ಡಿ ದುಗನೂರ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್‌, ಅನುದಾನಿತ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸಂತೋಷ ಕೋಮಟೆ, ಅಬ್ದುಲ್ ಸಲೀಂ ಪ್ಯಾರೆ, ಅಂಬಣ್ಣ ಘಂಟಿ, ರಮೇಶ ಬಟಗೇರಿ, ಅಪ್ಪಯ್ಯ ಎಸ್. ಹಿರೇಮಠ, ವೆಂಕಟೇಶ ಕೆ, ಬಸವರಾಜ ಹೊಸಮನಿ, ಮಲ್ಲಣ್ಣ ತಳವಾರ, ಜಗದೇವರೆಡ್ಡಿ ಪಾಟೀಲ, ಶರಣು ಡೋಣಗಾಂವ ವೇದಿಕೆಯಲ್ಲಿದ್ದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ್, ವಿನೋದ ಗೌಳಿ, ಆದಪ್ಪ ಬಗಲಿ, ಗಂಗಾಧರ್, ತಮ್ಮನ್ನಾ ಕೌಸರ್, ಸುಭಾಶ್ಚಂದ್ರ, ಸಾಬಣ್ಣ, ಗುರುಬಸಪ್ಪ, ದೇವಪ್ಪ ನಂದೂರಕರ್, ಮಲ್ಲಣ್ಣ ಮಾಸ್ಟ‌ರ್, ಬಿ.ಆರ್.ಪಿ, ಸಿ.ಆರ್.ಪಿ ಸೇರಿದಂತೆ ಇತರರು ಇದ್ದರು

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣ ಮತ್ತು ಸಾವಿತ್ರಿಬಾಯಿ ಫುಲೆ ರವರ ಆದರ್ಶಗಳು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು. ಶಿವಲೀಲಾ ಕಲಗುರ್ಕಿ ಪ್ರಾರ್ಥಿಸಿದರು, ಬಿಆ‌ರ್'ಸಿ ಮಲ್ಲಿಕಾರ್ಜುನ ಸೇಡಂ ಸ್ವಾಗತಿಸಿದರು, ಶರಣಪ್ಪ ಅಬ್ಬಿಗೇರಿ ನಿರೂಪಿಸಿದರು.

ಸೋಮವಾರ, ಸೆಪ್ಟೆಂಬರ್ 8, 2025

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ 

ಚಿತ್ತಾಪುರ: ಪಟ್ಟಣದ ನಾಗಾವಿ ಎಜುಕೇಷನ್ ಹಬ್‌ ಪ್ರದೇಶದಲ್ಲಿ ನಿರ್ಮಿಸಲಾದ 1000 ಜಿ+1 ಮನೆಗಳ ಹಂಚಿಕೆಯು ಮಂಗಳವಾರ ನಡೆಯಬೇಕಿದ್ದ ಪ್ರಕ್ರಿಯೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಕೊಳಚೆ ನಿರ್ಮೂಲನೆ ಮಂಡಳಿಯ ಎಇಇ ಶ್ರೀಧ‌ರ್ ಸಾರವಾಡ ತಿಳಿಸಿದ್ದಾರೆ.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ದಿನಾಂಕ 9 ಸೆಪ್ಟೆಂಬರ್ ಮಂಗಳವಾರ ಮಧ್ಯಾಹ್ನ 1ಕ್ಕೆ ನಡೆಯಲಿರುವ ಸಮಾರಂಭ ರದ್ದಾಗಿದ್ದು ಜಿಲ್ಲಾ ಅಧಿಕಾರಿಗಳ ಅನುಮತಿ ಮೆರೆಗೆ ಮುಂದೂಡಲಾಗಿದೆ ದಿನಾಂಕ 12 ಸೆಪ್ಟೆಂಬರ್ ರಂದು  ಫಲಾನುಭವಿಗಳಿಗೆ ಮನೆಗಳ ಅಂಕಿ ಸಂಖ್ಯೆಗಳನ್ನು ನೀಡುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಉಪಾಧ್ಯಕ್ಷರು, ಸರ್ವ ಸದಸ್ಯರು ರಾಜಕೀಯ ಧುರೀಣರು ಸಹಭಾಗಿತ್ವದಲ್ಲಿ ಈ ಸಮಾರಂಭನಡೆಯಲಿದೆ. ವಸತಿ ಪಡೆದುಕೊಳ್ಳುವ ಪಟ್ಟಣದ ಫಲಾನುಭವಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಶುಕ್ರವಾರ, ಜುಲೈ 4, 2025

ಸರ್ಕಾರದ ಕಛೇರಿಗಳು ಜನಸ್ನೇಹಿಯಾಗಲಿ: ಪ್ರಿಯಾಂಕ್ ಖರ್ಗೆ.


ಸರ್ಕಾರದ ಕಛೇರಿಗಳು ಜನಸ್ನೇಹಿಯಾಗಲಿ: ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ಒಳ್ಳೆಯ ಆಡಳಿತ ಜನರಿಗೆ ಕೊಡಬೇಕಾದರೆ ಸರ್ಕಾರದ ಕಛೇರಿಗಳು ಜನಸ್ನೇಹಿ ಆಗಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದಲ್ಲಿ 18.41 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಜಾಸೌಧ (ಮಿನಿ ವಿಧಾನಸೌಧ) ಉದ್ಘಾಟಿಸಿ ಮಾತನಾಡಿದ ಅವರು ಈ‌ ಹಿಂದೆ ಮಿನಿ ವಿಧಾನಸೌಧ ಎಂದು ಕರೆಯುತ್ತಿದ್ದ ಕಟ್ಟಡಗಳಿಗೆ ಪ್ರಜಾಸೌಧ ಎಂದು ಹೆಸರಿಸಲಾಗುತ್ತಿದೆ ಕಾರಣ ಸರ್ಕಾರದ ಆಡಳಿತ ಜನರಿಗೆ ಹತ್ತಿರವಾಗಬೇಕು ಸರ್ಕಾರ ಜನರಿಗೆ ಸೇರಿದ್ದು ಅವರ ಕೆಲಸಗಳು ನಿರಂತರವಾಗಿ ನಡೆಯಬೇಕು ಎನ್ನುವ ಉದ್ದೇಶವಾಗಿದೆ ಎಂದರು.

ಮುಂದಿನ ಮೂರು ವಾರದಲ್ಲಿ ಸಮೃದ್ಧಿ ಯೋಜನೆಯಡಿಯಲ್ಲಿ 150 ಕೋಟಿ ರೂಪಾಯಿ ಅನುದಾನವನ್ನು ಮತಕ್ಷೇತ್ರಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಜೊತೆಗೆ ಜುಲೈ ಅಂತ್ಯದ ಒಳಗೆ ಅಥವಾ ಅಗಸ್ಟ್ ಮೊದಲ ವಾರದಲ್ಲಿ ಗ್ರಾಮೀಣ ಮಟ್ಟದ ಅಕ್ರಮ ಜಾಗಗಳನ್ನು ಸಕ್ರಮ ಮಾಡಿ ಇ ಸ್ವತ್ತು ದಾಖಲೆ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.


 ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371(ಜೆ) ಜಾರಿಗೆ ಬಂದ ನಂತರ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಿದೆ ಪ್ರತಿವರ್ಷ5000 ಕೋಟಿ ರೂಪಾಯಿ ಅನುದಾನ ಮಂಡಳಿಗೆ ಬರುತ್ತಿದೆ.ಕಳೆದ ಒಂದು ದಶಕದಲ್ಲಿ 30,000 ಕಾಮಗಾರಿಗಳು ನಡೆದಿವೆ. 6,795 ಮೆಡಿಕಲ್ ಹಾಗೂ 22,219 ಇಂಜಿನೀಯರಿಂಗ್ ಸೀಟುಗಳು ಆರ್ಟಿಕಲ್ 371(ಜೆ) ಅಡಿಯಲ್ಲಿ ದೊರಕಿದರೆ, ಇದೂವರೆಗೆ 1.10 ಲಕ್ಷ ಜನರಿಗೆ ನೌಕರಿ ಹಾಗೂ 37,600 ನೌಕರರಿಗೆ ಪ್ರಮೋಷನ್ ಸಿಕ್ಕಿದೆ ಎಂದರು.

ಮನ್ ಕೀ ಬಾತ್ ನಲ್ಲಿ‌ ಮಾತನಾಡಿದ ಪ್ರಧಾನಿಗಳು ಕಲಬುರಗಿ ರೊಟ್ಟಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ
ಮಹಿಳೆಯರಿಗೆ ಸ್ವಾವಲಂಬಿ ಜೀವನದ‌ ಬಗ್ಗೆ ಕೊಂಡಾಡಿದ್ದಾರೆ. ಆದರೆ ಅನುದಾನ ಬಿಡುಗಡೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದ ಖರ್ಗೆ, ನಮ್ಮ ಕೆಲಸಗಳ ಬಿಜೆಪಿಯ ಸ್ಥಳೀಯ ನಾಯಕರು ಹೊಗಳದೆ ಟೀಕಿಸುತ್ತಿದ್ದಾರೆ. ಇತ್ತೀಚಿಗೆ ಬಿಜೆಪಿಯ ನಾಯಕರು ಪದೇ ಪದೇ ಕಲಬುರಗಿಗೆ ಬರುತ್ತಿದ್ದಾರೆ ಕಾರಣ ನನ್ನ ಬಗ್ಗೆ ವೈಯಕ್ತಿಕ‌ ಟೀಕೆ ಮಾಡಲು ಬರುತ್ತಿದ್ದಾರೆ. 

ವಿಜಯೇಂದ್ರ ಸ್ಥಳೀಯ ಬಿಜೆಪಿ ನಾಯಕರನ್ನು‌ ನಂಬಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಅದನ್ನು‌ ನಾನು ಅವರಿಗೆ ನೇರವಾಗಿ ಹೇಳಿದ್ದೇನೆ.‌ ಇಲ್ಲಿನ ಒಬ್ಬ ವ್ಯಕ್ತಿಯನ್ನು‌ ನಂಬಿ ಅವರು ಬಂದಿದ್ದರು. ಈಗ ಅವನು ಎಲ್ಲಿದ್ದಾನೋ ಗೊತ್ತಿಲ್ಲ. ಹೆಣದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಬೀದರ್ ನಲ್ಲಿ ಯುವಕನೋರ್ವನ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಿದ್ದರು. ಮಂಗಳೂರು ಹಾಗೂ ಕರಾವಳಿ ಭಾಗವನ್ನು ಪ್ರಯೋಗ ಶಾಲೆ ಮಾಡಿದಂತೆ ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಿಲ್ಲ.‌ಇದು ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಬಿಜೆಪಿಯವರ ಯಾವ ಪ್ರಯೋಗ ನಡೆಯುವುದಿಲ್ಲ. ವಾಡಿಯಲ್ಲಿ ನಡೆದ ಒಂದು ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ‌ ಜಗಳವಾದರೆ ವಿರೋಧಪಕ್ಷದ ನಾಯಕರು ಬರುತ್ತಾರೆ ಎಂದರೆ ಅವರ ಭೌದ್ದಿಕ ದಿವಾಳಿತನ ತೋರಿಸುತ್ತದೆ ಎಂದರು.

ಬಿಜೆಪಿ ಹಾಳಾಗಲು ರವಿಕುಮಾರ್ ಕಾರಣ ಅವರ ಕಂಪನಿಗೆ ಸಂವಿಧಾನದಲ್ಲಿ ನಂಬಿಕೆಯ ಇಲ್ಲ‌ ಮನುಸ್ಮೃತಿಯ ಮೇಲೆ ನಂಬಿಕೆ ಇದೆ. ಮನುಸ್ಕೃತಿಯನ್ನು ನಿಮ್ಮ ಮನೆಯಲ್ಲಿ ಜಾರಿಗೆ ತನ್ನಿ ಎಂದು ನಾನು ಅವರಿಗೆ ಒಂದು ಸವಾಲ್ ಹಾಕುತ್ತೇನೆ. ಇದು ಸಾಧ್ಯನಾ? ಧರ್ಮದ‌ ಹೆಸರಲ್ಲಿ ಬಡವರ ಮಕ್ಕಳನ್ನು ದಾರಿ ತಪ್ಪಿಸುವ ಬಿಜೆಪಿ ನಾಯಕರು, ತಮ್ಮ ಮಕ್ಕಳನ್ನ ಧರ್ಮದ, ಗೋ ರಕ್ಷಣೆಗೆ ಕಳಿಸಿದ್ದಾರೆ? ನಿಮ್ಮ ಮಕ್ಕಳಿಗೆ ಬುದ್ದ, ಬಸವ, ಅಂಬೇಡ್ಕರ್, ನಾರಾಯಣಗುರು,‌ಕುವೆಂಪು ಅವರ ಆದರ್ಶದ ಬಗ್ಗೆ ತಿಳಿ ಹೇಳಿ ಎಂದು ಪೋಷಕರಿಗೆ ಮನವಿ ಮಾಡಿದರು.

ಮುಂದಿನ ಮೂರು ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಲಾಗಿದೆ. ಕಲಬುರಗಿ ಹಾಗೂ ಚಿತ್ತಾಪುರ ಮತ್ತು ವಾಡಿ ಪಟ್ಟಣಗಳ ಅಭಿವೃದ್ದಿಗೆ ಖಾಸಗಿ ಸಂಸ್ಥೆಯೊಂದಿಗೆ ಮಾತುಕತೆ ನಡದಿದೆ. ಇದಕ್ಕೆ ಸಂಸದರ ಅವರ ಆಶೀರ್ವಾದ ಬೇಕಾಗುತ್ತದೆ. ವಾಡಿ ಹಾಗೂ ಚಿತ್ತಾಪುರ‌ ಅಭಿವೃದ್ದಿಗೆ ತಲಾ‌100 ಕೋಟಿ‌ ಅನುದಾನ ಬಿಡುಗಡೆ ಮಾಡುವಂತೆ ವೇದಿಕೆಯ ಮೇಲಿದ್ದ ಅದಾನಿ ಸಿಮೆಂಟ್ಸ್ ಕಂಪನಿಯ ಅಧಿಕಾರಿಗಳಿಗೆ‌ ಮನವಿ ಮಾಡಿದರು.

 ಜಿಲ್ಲಾಧಿಕಾರಿ ಬಗ್ಗೆ ಎಂ‌ಎಲ್ ಸಿ ರವಿಕುಮಾರ್ ಏನೇನೋ ಮಾತನಾಡಿದ್ದರು. ಜಿಲ್ಲಾಧಿಕಾರಿಯವರ ಒಂದೊಂದು‌ ಕಣ್ಣೀರ ಹನಿ ಅವನ‌ ಒಂದೊಂದು ವರ್ಷ ಆಯಸ್ಸು ಕಮ್ಮಿ ಆಗುತ್ತದೆ. ಈಗ ಮತ್ತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಸಿಎಸ್) ಬಗ್ಗೆ ಮಾತನಾಡಿದ್ದಾನೆ. ಅವನು ಕುಡಿದು ಮಾತನಾಡುತ್ತಾನೋ ಏನೋ? ಹೀಗೆ ಮಾತನಾಡುವವನು ತಾನು ಹುಟ್ಟಿರುವ ಜಾತಿಗೂ ಕೂಡಾ ಅವಮಾನ. ತಕ್ಷಣ ಅವನು ರಾಜೀನಾಮೆ‌‌ ಕೊಡಬೇಕು ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

- ತಿಪ್ಪಣ್ಣಪ್ಪ ಕಮಕನೂರ.
ವಿಧಾನ ಪರಿಷತ್ತ ಸದಸ್ಯ ಕಲಬುರಗಿ.
====================================
 ಸಚಿವ ಪ್ರಿಯಾಂಕ್ ಖರ್ಗೆ ರವರ ಸೇವೆ ಈ ಕ್ಷೇತ್ರಕ್ಕೆ ಸೀಮಿತವಾಗಿದೆ ಜಿಲ್ಲೆಯ ಪ್ರತಿ ತಾಲ್ಲೂಕಿಗೂ ವ್ಯಾಪಿಸಿದೆ ಅದರಲ್ಲೂ ಅಫಜಲಪೂರ ಪಟ್ಟಣಕ್ಕೆ 120 ಕೋಟಿ ರೂಪಾಯಿ ವೆಚ್ಚದ‌ ಕುಡಿಯುವ ನೀರಿನ ಯೋಜನೆ ಮಂಜೂರಾತಿಗಾಗಿ ಸಚಿವರ ಕೊಡುಗೆ ಬಹಳಷ್ಟಿದೆ ಎಂದರು.

- ಎಂ ವೈ ಪಾಟೀಲ್
ಶಾಸಕರು, ಅಫಜಲಪೂರ.

ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಗಣ್ಯರು 517 ಫಲಾನುಭವಿಗಳಿಗೆ ಸೌಲಭ್ಯ ಪತ್ರಗಳನ್ನು ನೀಡಲಾಯಿತು.

ವೇದಿಕೆ ಮೇಲೆ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಅಫಜಲಪುರ ಶಾಸಕ ಎಂ ವೈ ಪಾಟೀಲ್, ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೆದಾರ್, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್, ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಶ್ರೀಮತಿ ಅನ್ನಪೂರ್ಣ ಕಲ್ಲಕ್, ಶಿವಾನಂದ ಪಾಟೀಲ್ ಶ್ರೀನಿವಾಸ ಸಾಗರ, ಅಧಿಕಾರಿಗಳಾದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೊರು ಶ್ರೀನಿವಾಸುಲು, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ, ಶಹಾಬಾದ ತಹಸೀಲ್ದಾರ್ ಜಗದೀಶ್, ಸೇಡಂ ತಹಸೀಲ್ದಾರ್ ಶ್ರೀಯಾಂಕ್ ಧನುಶ್ರೀ, ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಬಿಇಓ ಶಶಿಧರ ಬಿರಾದಾರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ್ ಗುರಿಕಾರ್, ಕೃಷಿ ಇಲಾಖೆ ಅಧಿಕಾರಿ ಸಂಜೀವಕುಮಾರ್ ಮಾನಕರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್ ಗುರಿಕಾರ್, ಸಿಡಿಪಿಓ ಆರತಿ ತುಪ್ಪದ್, ಬಿಸಿಎಂ ಅಧಿಕಾರಿ ಸುನಿತಾ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಕರಗೌಡ ಪಾಟೀಲ, ತಾಪಂ ಇಓ ಆಕ್ರಂ ಪಾಷಾ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಸುನೀಲ್ ಚವ್ಹಾಣ, ಬಸ್ ಘಟಕ ಅಧಿಕಾರಿ ಗೋಲಾಳಪ್ಪ ಬೀರಾದಾರ್, ಮುಖಂಡರಾದ ಅಜೀಜ್ ಸೇಟ್, ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ಜಯಪ್ರಕಾಶ್‌ ಕಮಕನೂರ, ಸಿದ್ದುಗೌಡ ಅಫಜಲಪುರ, ಬಸವರಾಜ ಬಳೂಂಡಗಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ್ ಪಟೇಲ್, ಶೀಲಾ ಕಾಶಿ, ಮಹಿಮೂದ್ ಸಾಹೇಬ್, ವೀರಣ್ಣಗೌಡ ಪರಸರೆಡ್ಡಿ, ಸುನೀಲ್ ದೊಡ್ಡಮನಿ, ಮನ್ಸೂ‌ರ್ ಪಟೇಲ್, ನಾಗಯ್ಯ ಗುತ್ತೇದಾರ, ಶರಣಪ್ಪ ನಾಟೀಕಾರ, ಮಲ್ಲಪ್ಪ ಹೊಸಮನಿ, ಜಫಾರುಲ್ ಹಸನ್, ದೇವು ಯಾಬಾಳ, ಸಂಜಯ ಬುಳಕರ್‌ ಸೇರಿದಂತೆ ಮುಖಂಡರು ಮತ್ತು ತಾಲೂಕಿನ ಇತರೆ ಇಲಾಖೆಗಳ ಸಿಬ್ಬಂದಿಗಳು ಇದ್ದರು.

ಸೇಡಂ ಎಸಿ ಪ್ರಭು ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಶಂಕರ ಕಣ್ಣಿ ಸ್ವಾಗತಿಸಿದರು, ಸಂತೋಷ ಶಿರನಾಳ ನಿರೂಪಿಸಿದರು.

ಬುಧವಾರ, ಜೂನ್ 25, 2025

ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಲು ಒತ್ತಾಯ.


ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಲು ಒತ್ತಾಯ.

ಚಿತ್ತಾಪುರ: ನಿವೃತ್ತಿ ಸರ್ಕಾರಿ ನೌಕರರಿಗೆ ಪಿಂಚಣಿ
ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ನೇತೃತ್ವದಲ್ಲಿ ಬುಧವಾರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ನಿವೃತ್ತ ಹೊಂದಿದ ಸರಕಾರಿ ನೌಕರರು ಆರ್ಥಿಕ ಸೌಲಭ್ಯದಿಂದ ವಂಚಿತರಾಗದಿರಲಿ ಎಂದು ಕೇಂದ್ರ ಸರ್ಕಾರವು 2004 ರಲ್ಲಿ ಹೊಸ ಪಿಂಚಣಿಯನ್ನು ಜಾರಿ ತರಲಾಗಿದೆ ಹಾಗೂ ಎಲ್ಲಾ ರಾಜ್ಯಗಳು ಸಹ ಕೇಂದ್ರ ಸರ್ಕಾರದ ಮಾದರಿಯಲ್ಲಿ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸಾಕಷ್ಟು ಹೋರಾಟವೆ ನಡೆದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಹೊಸ ವೇತನ ಶ್ರೇಣಿ ಪರಿಷ್ಕರಿಸಲು 8ನೇ ವೇತನ ಆಯೋಗ ರಚನೆ ಮಾಡಲಾಗಿದೆ. ಆಯೋಗದ ವರದಿಯು ಪ್ರಗತಿ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕೇಂದ್ರ ಸರ್ಕಾರವು ಮಾರ್ಚ್ 25 ರಂದು ಲೋಕಸಭೆಯಲ್ಲಿ ಆರ್ಥಿಕ ಬಿಲ್ಲು ಮಂಡಿಸಿ 1 ಏಪ್ರಿಲ್ 2026 ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲವೆಂಬ ನಿರ್ಣಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಇದರಿಂದ ನಿವೃತ್ತ ಸರಕಾರಿ ನೌಕರ ಪಿಂಚಣಿದಾರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ 8ನೇ ವೇತನ ಆಯೋಗದಲ್ಲಿ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದ್ದಾರೆ. ಇದರಿಂದ ನಿವೃತ್ತ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಕುರಿತು ಈಗಾಗಲೇ ದೆಹಲಿಯಲ್ಲಿ ನಾಲ್ಕು ಬಲವಾದ ಸಂಘಟನೆಗಳು ಹೋರಾಟಕ್ಕಿಳಿದಿವೆ ನಮ್ಮ ಸಂಘವು ಸಹ ಅವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವಿಜಯಕುಮಾ‌ರ್ ಲೊಡ್ಡೆನೋರ, ಉಪಾಧ್ಯಕ್ಷ ಕಿಶನ್ ರಾಠೋಡ, ಮಹಾದೇವಪ್ಪ ಉಪ್ಪಾರ, ಖಜಾಂಚಿ ಮಲ್ಲಣ್ಣ ಮುಡಬೂಳ, ಪ್ರಧಾನ ಕಾರ್ಯದರ್ಶಿ ಶಶೀಧರ ಪಾಟೀಲ, ಸಹ ಕಾರ್ಯದರ್ಶಿ ಸುಭಾಷ್ ಮೇಗಂಜಿ, ಸಂಘಟನಾ ಕಾರ್ಯದರ್ಶಿಗಳಾದ ಮೋನಯ್ಯ ಪಂಚಾಳ, ಬಾಬು ಕರದಾಳ, ಶಮೀಮ್, ಕಾನೂನು ಸಲಹೆಗಾರ ಮೋತಿಲಾಲ್‌ ಚವ್ಹಾಣ, ಸಾಂಸ್ಕೃತಿಕ ಕಾರ್ಯದರ್ಶಿ ದೇವಪ್ಪ ನಂದೂರಕರ್, ಕ್ರೀಡಾ ಕಾರ್ಯದರ್ಶಿ ಶಿವನಾಗಪ್ಪ ಮುತ್ತಲಗಡ್ಡಿ, ಜಂಟಿ ಕಾರ್ಯದರ್ಶಿ ಹಾಜಪ್ಪ ಬಿಳಾರ್, ನಿರ್ದೇಶಕರಾದ ಬಸವರಾಜ ಕಲಬುರಗಿ, ತುಕಾರಾಮ ನಾಯಕ, ಶ್ರೀಮತಿ ಸರಳಬಾಯಿ, ಶಾಂತಬಾಯಿ, ಶಿವಲಿಂಗಪ್ಪ ದೊಡ್ಡಮನಿ, ಮಲ್ಲೇಶಪ್ಪ ದಂಡೋತಿ, ಸಿದ್ದಯ್ಯ ಸ್ಥಾವರಮಠ, ಲಿಂಗಣ್ಣ ಮಲಕನ್, ಮುನಿಯಪ್ಪ ಸೇರಿದಂತೆ ಇತರರು ಇದ್ದರು.

ಸೋಮವಾರ, ಜೂನ್ 16, 2025

ದೇವರಲ್ಲಿ ಶ್ರದ್ಧೆ, ಭಕ್ತಿ ಇರಲಿ: ಮರೆಪ್ಪ ಮುತ್ಯಾ.

       ದೇವರಲ್ಲಿ ಶ್ರದ್ಧೆ, ಭಕ್ತಿ ಇರಲಿ: ಮರೆಪ್ಪ ಮುತ್ಯಾ.

ಚಿತ್ತಾಪುರ: ಪ್ರತಿಯೊಬ್ಬರೂ ದೇವರಲ್ಲಿ ಶ್ರದ್ಧೆ, ಭಕ್ತಿ ಇಟ್ಟುಕೊಳ್ಳಬೇಕು ಎಂದು ಹೂಡಾ(ಬಿ) ಗ್ರಾಮದ ಹಯ್ಯಾಳಸಿದ್ದೇಶ್ವರ ದೇವಸ್ಥಾನದ ಶ್ರೀಗಳಾದ ಮರೆಪ್ಪ ಮುತ್ಯಾ ಹೇಳಿದರು.

ತಾಲೂಕಿನ ಮರಗೋಳ ಗ್ರಾಮದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಮಾಳಿಂಗೇಶ್ವರರ ನೂತನ ಮಂದಿರ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದಲ್ಲಿ ಹಾಲುಮತದ ಜನರು ಹಾಗೂ ಊರಿನವರ ಸಹಕಾರದಿಂದ ಕುರಿದೊಡ್ಡಿ ಇದ್ದ ಸ್ಥಳದಲ್ಲಿ ಇಂತಹ ಭವ್ಯ ಮಂದಿರ ನಿರ್ಮಾಣ ಮಾಡಿದ್ದು ಹೆಮ್ಮೆಯ ವಿಷಯ.ಜೀವನದಲ್ಲಿ ಏನನ್ನೂ ಸಾಧಿಸುವುದು ಸಾಧ್ಯವಿಲ್ಲವೆಂದು ಕೈಕಟ್ಟಿ ಕುಳಿತುಕೊಂಡರೆ, ಸಾಧನೆ ಮಾಡುವುದು ಅಸಾಧ್ಯ. ಗುರುವಿನ ಕೆಲಸದಲ್ಲಿ ಪ್ರಾಮಾಣಿಕ, ಶ್ರದ್ಧೆ, ಭಕ್ತಿ ಇದ್ದರೆ ಇಂತಹ ಕಾರ್ಯ ಕೆಲಸಗಳು ಆಗಲು ಸಾಧ್ಯ. ಸಮಾಜದ ಗುರುಗಳನ್ನು ಪೂಜಿಸುವುದರ ಜೊತೆಗೆ 
ಸಮಾಜದಲ್ಲಿ ಸತ್ಕಾರ್ಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. 

ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಸಾತನೂರ ಮಾತನಾಡಿ ಈ ಗ್ರಾಮದಲ್ಲಿ ಬೀರಲಿಂಗೇಶ್ವರ ಮತ್ತು ಮಾಳಿಂಗರಾಯ ದೇವಸ್ಥಾನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಅಲ್ಲದೇ ಇಲ್ಲಿನ ಜನರ ಸೌರ್ಹಾದತೆಯನ್ನು ಎತ್ತಿ ತೋರಿಸುತ್ತದೆ ಈ ಸಮಾಜವು ಸಧೃಡವಾಗಬೇಕಾದರೆ ನಾವುಗಳು ಎಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ನಮ್ಮ ಸಮಾಜ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ ಎಂದರು.
ದೇವಸ್ಥಾನದ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೊಂಡಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ದಿಗ್ಗಾಂವದ ಕಂಚಗಾರ ಹಳ್ಳಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಶ್ರೀ ಶರಣಯ್ಯ ಸ್ವಾಮಿ, ಬೀರಣ್ಣ ಸ್ವಾಮಿ ಕೋರವಾರ, ಹಿರಗಪ್ಪ ತಾತಾ ಸೂಗೂರ, ಮುಖಂಡರಾದ ನಾಗಣ್ಣಗೌಡ, ಬಸವರಾಜ ವಾರದ, ಶರಣಗೌಡ ಪೊಲೀಸ್ ಪಾಟೀಲ್, ಅಣ್ಣಾರಾವ ಸಣ್ಣೂರಕ‌ರ್, ಶರಣು ಸಾಹು, ಬಸವರಾಜ ಪೂಜಾರಿ ಮೊಗಲಾ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಈರಪ್ಪ ಭೋವಿ, ಯಲ್ಲಾಲಿಂಗ ಪೂಜಾರಿ, ಬೀರಪ್ಪ ಹೆಬ್ಬಾಳ, ಬೀರಪ್ಪ ಮುಗಟಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಉತ್ತಮ ಶಿಕ್ಷಣವನ್ನು ಪಡೆದ ಹಾಗೂ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಕಾಶಿರಾಯ ಕಲಾಲ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

ಗುರುವಾರ, ಜೂನ್ 5, 2025

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಕರಣ್ ಗುಜ್ಜರ್.


ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಕರಣ್ ಗುಜ್ಜರ್.

ಚಿತ್ತಾಪುರ: ಜೀವ ಸಂಕುಲದ ಉಳುವಿಗಾಗಿ ಪರಿಸರದಲ್ಲಿನ ಹಾಗೂ ನಮ್ಮ ಸುತ್ತಲಿನ ಮರ-ಗಿಡಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕರಣ್ ಗುಜ್ಜರ್ ಹೇಳಿದರು.

ಪಟ್ಟಣದ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪ್ರಾದೇಶಿಕ ಅರಣ್ಯ ವಲಯ ಮತ್ತು ಶಿಶುವಿಹಾರ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ "ವಿಶ್ವ ಪರಿಸರ ದಿನ" ಕಾನೂನು ಅರಿವು ಕಾರ್ಯಕ್ರಮ ನಿಮಿತ್ಯ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಹಿಂದಿನ ಕಾಲದ ಜನರು ಗಿಡ-ಮರಗಳನ್ನು ಹೆಚ್ಚೆಚ್ಚು ಸಂರಕ್ಷಿಸುತ್ತಿದ್ದರು ಆದ್ರೆ ಇಂದಿನ ಕಾಲದಲ್ಲಿ ಗಿಡ-ಮರಗಳು ನಾಶ ಮಾಡುವುದು ನೋಡುತ್ತಿದ್ದೇವೆ ನಗರೀಕರಣ ಬೆಳೆದಂತೆ ಗಿಡಮರಗಳು ಸಂಖ್ಯೆ ಕಡಿಮೆ ಆಗುತ್ತಿದೆ ಮುಂದೊಂದಿನ ಆಮ್ಲಜನಕ ಬೆನ್ನಿಗೆ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಬರಬಹುದು ಹೀಗಾಗಿ ಪರಿಸರದಲ್ಲಿನ ಗಿಡಮರಗಳು ಬೆಳೆಸುವ ಮನೋಭಾವ ಕಲಿಯಬೇಕು ಪ್ರತಿದಿನ ಪರಿಸರ ದಿವಾಗಿರಲ್ಲಿ ಎಂದು ಹೇಳಿದರು.

ಶಾಲಾ ಆವರಣದಲ್ಲಿ ಕೆಲ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರ ದಿನದ ನಿಮಿತ್ಯ ಸಸಿಗಳನ್ನು ವಿತರಿಸಲಾಗುತ್ತದೆ ಯಾವ ವಿದ್ಯಾರ್ಥಿ ದಿನನಿತ್ಯ ಸಸಿಗೆ ನೀರು ಹಾಕುವುದರ ಜೊತೆಗೆ ಸಂರಕ್ಷಿಸಿ ಚೆನ್ನಾಗಿ ಬೆಳೆಸುತ್ತಾರೆ ಆ ವಿದ್ಯಾರ್ಥಿಗೆ ಮುಂದಿನ ವರ್ಷ ನಮ್ಮ ಕೋರ್ಟ್ ವತಿಯಿಂದ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.

- ಅಭಿಷೇಕ್ ಆರ್ ಜೋಶಿ
ಸಿವಿಲ್ ನ್ಯಾಯಾಧೀಶರು ಚಿತ್ತಾಪುರ.
==================================

ಶಾಲಾ ಆವರಣದಲ್ಲಿ ವಿಧ್ಯಾರ್ಥಿಗಳು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅವಕಾಶ ಮಾಡಿಕೊಡಬೇಡಿ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬಿಳುವ ಸಾಧ್ಯತೆ ಇರುತ್ತದೆ ಇದರಿಂದ ಬಳಕೆ ಬೇಡ ಎಂದು ಕಿವಿ ಮಾತು ಹೇಳಿದರು.

- ಸಿಸ್ಟರ್ ಸಿಂಪ್ರೊಸ್
ಮುಖ್ಯಗುರುಗಳು, ಶಿಶುವಿಹಾರ ಹಿ.ಪ್ರಾ.ಶಾಲೆ ಚಿತ್ತಾಪೂರ

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿಶನ್ ಮಾಡಲಗಿ, ವಕೀಲರ ಸಂಘದ ಅಧ್ಯಕ್ಷ ನಾಗರಾಜ ಕಡಬೂರ, ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್,  ಭೆಂಥನಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕವಿತಾ ಬಿಎಸ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಅಂಜನಾದೇವಿ, ವಕೀಲರಾದ ಎಸ್ಎಂ ಪಾಟೀಲ್, ಎಸ್ಎಂ ನಂದೂರಕರ್, ಶಿಕ್ಷಕರಾದ ಶೆಶಪ್ಪ ಬಡಿಗೇರ್, ಸತೀಶ್, ಸುಜಾತಾ, ಮಲ್ಲಪ್ಪ, ಕಲ್ಪನಾ, ಅರುಣಕುಮಾರ, ಸೇರಿದಂತೆ ಇತರರು ಇದ್ದರು ನಿರೂಪಣೆ ಸುಮಲತಾ ನಾಡಗೌಡ ನೆರವೇರಿಸಿದರು ವಿಶ್ವನಾಥ ಟೋನಿ ಸ್ವಾಗತಿಸಿಕೊಂಡರು ವಿಶ್ವನಾಥ ಕುಂಬಾರ ವಂದಿಸಿದರು.

ಭಾನುವಾರ, ಜೂನ್ 1, 2025

ಜನ್ಮದಿನದ ಆಚರಿಸಿದ ಅಭೀಮಾನಿಗಳು.

ಜನ್ಮದಿನದ ಆಚರಿಸಿದ ಅಭೀಮಾನಿಗಳು.

ಚಿತ್ತಾಪುರ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಾಂಗ್ರೆಸ್ ಹಿರಿಯ ಮುಖಂಡರಾದ ಶಿವರುದ್ರ ಭೀಣಿ ರವರ 56ನೇ ಜನ್ಮದಿನದ ನಿಮಿತ್ಯ ಅವರ ಅಭಿಮಾನಿ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿ ಸಂಭ್ರಮಿಸಿದರು.
ಈ ವೇಳೆಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಚನ್ನವೀರ ಬಿ ಕಣ್ಣಿಗಿ,ಕಾಂಗ್ರೆಸ್ ಯುವ ಘಟಕ ಮಾಜಿ ಅಧ್ಯಕ್ಷ ಸಂಜಯ ಬುಳಕರ, ಶಿಕ್ಷಕರಾದ ಸದಾಶಿವ, ರೇವಣಸಿದ್ಧಪ್ಪ ರೋಣದ, ದಿಗ್ಗಾಂವ ಗ್ರಾಪಂ ಸದಸ್ಯರಾದ ಗುರುಶಾಂತ ಭಾಗೋಡಿ, ಸುರೇಶ ಅಚ್ಚೆಲಿ, ವಿವಿಎಸ್ಎಸ್ಎನ್ ಸದಸ್ಯ ಸಿದ್ದಣ್ಣ ಸಜ್ಜನ, ಗುರುಲಿಂಗ ಬಂದಳ್ಳಿ, ಭೀಮರಾಯ ದೇವರ, ಹಣಮಂತ ಭೀಮನಹಳ್ಳಿ, ಉದಯ ಕುಮಾರ ದಿಗಾಂವ್, ಶ್ರೀಧರ ಬಡಿಗೇರ್, ಬಸಪ್ಪ ದೊಡ್ಡಮನಿ, ಸಂಜಯ ಬುಳಕರ ಸೇರಿದಂತೆ ಇತರರು ಇದ್ದರು.

ಶುಕ್ರವಾರ, ಮೇ 30, 2025

ಪೌರ ಕಾರ್ಮಿಕರ ಮುಷ್ಕರದ ಎಫೆಕ್ಟ್: ಎಲ್ಲಿ ನೋಡಿದರು ಕಸವೋ ಕಸ, ಗಬ್ಬೆದ್ದು ನಾರುತ್ತಿದೆ ನಾಗಾವಿ ನಾಡು.

ಪೌರ ಕಾರ್ಮಿಕರ ಮುಷ್ಕರದ ಎಫೆಕ್ಟ್: ಎಲ್ಲಿ ನೋಡಿದರು ಕಸವೋ ಕಸ, ಗಬ್ಬೆದ್ದು ನಾರುತ್ತಿದೆ ನಾಗಾವಿ ನಾಡು.

ಚಿತ್ತಾಪುರ: ನಾಗಾವಿ ನಾಡು ಎಂದೆ ಪ್ರಸಿದ್ಧಿ ಪಡೆದ ಚಿತ್ತಾಪುರ ಪಟ್ಟಣದಲ್ಲಿ ಪುರಸಭೆ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪೌರಕಾರ್ಮಿಕರು ನಡೆಸ್ತಿರೋ ಮುಷ್ಕರದಿಂದ ಪಟಣವೆಲ್ಲಾ ಗಬ್ಬೆದ್ದು ನಾರುತ್ತಿದೆ. ರಸ್ತೆ ಗುಡಿಸೋರಿಲ್ಲ, ಮನೆ ಮನೆಯಲ್ಲಿ ಸಂಗ್ರಹವಾಗಿರುವ ಕಸ ಕೇಳೋರಿಲ್ಲ. ಕಟ್ಟಿರುವ ಒಳ ಚರಂಡಿಗಳು ಸರಿಪಡಿಸುವವರಿಲ್ಲ. ಸ್ವಚ್ಛತಾ ವಾಹನಕ್ಕೆ ಚಾಲಕರೇ ಇಲ್ಲದೆ ನಗರವೆಲ್ಲಾ ದುರ್ನಾತ ಬೀರುತ್ತಿದೆ.

ಪಟ್ಟಣದ ಹೃದಯ ಭಾಗ ಸೇರಿದಂತೆ ಇಡೀ ಪ್ರಮುಖ ಮುಖ್ಯ ವೃತ್ತಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದೇ ಇಡೀ ಪಟ್ಟಣ ಗಬ್ಬೆದ್ದು ನಾರುತ್ತಿದೆ. ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ಪಾರ್ಶ್ವವಾಯು ಹೊಡೆದಂತಾಗಿದೆ. ನಿತ್ಯ 7 ಟನ್ ವಿಲೇವಾರಿಯಾಗುತ್ತಿದ್ದ ಕಸ, ಈಗ ನಗರದಲ್ಲಿಯೇ ಬಿದ್ದಿದ್ದು, ಕಳೆದ ಮೂರು ದಿನಗಳಲ್ಲಿ 21ಕ್ಕೂ ಹೆಚ್ಚು ಟನ್ ಕಸ ಸಂಗ್ರಹವಾಗಿ ವಿಲೇವಾರಿಯಾಗದೇ ಎಲ್ಲರ ಮನೆ, ರಸ್ತೆಯಲ್ಲಿಯೇ ಕೊಳೆತು, ಇಡೀ ನಗರ ದುರ್ವಾಸನೆ ಬೀರುತ್ತಿದೆ.
ಪುರಸಭೆ ಕಾರ್ಯಲಯದ ಪೌರ ಕಾರ್ಮಿಕರು,ನೀರು ಸರಬರಾಜುಗಾರರು,ವಾಹನ ಚಾಲಕರು, ಲೋಡರ್ಸ್, ಇಲಾಖೆಯ ಖಾಯಂ ಸಿಬ್ಬಂದಿ ಮತ್ತು ಹೊರ ಗುತ್ತಿಗೆ ಸಿಬ್ಬಂದಿ ವರ್ಗ ಸೇರಿ ಒಟ್ಟು 95 ಮಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದರಿಂದ ತರಕಾರಿ ಮಾರುಕಟ್ಟೆ, ಒಂಟ್ ಕಮಾನ್, ಸುಪ್ರಸಿದ್ಧ  ಶ್ರೀ ನಾಗಾವಿ ದೇವಸ್ಥಾನ, ಚಿತ್ತಾವಲಿ ದರ್ಗಾ, ಬಸ್ ನಿಲ್ದಾಣ, ತಹಸೀಲ್ ಕಾರ್ಯಲಯ ಸುತ್ತ ಮುತ್ತಲು, ಮತ್ತು ಲಾಡ್ಜಿಂಗ್ ಕ್ರಾಸ್ನಾ ಪರಿಸ್ಥಿತಿ ಶೋಚನೀಯವಾಗಿದೆ.
ಹೋಟೆಲ್‌ಗಳಲ್ಲಿ ಸಂಗ್ರಹವಾಗುತ್ತಿರುವ ಭಾರೀ ಪ್ರಮಾಣದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕೆಲವರು ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುತ್ತಿದ್ದು, ಈಗ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಕೊಡಲೇ ಪುರಸಭೆ ಇಲಾಖೆ ಅಥವಾ ತಾಲೂಕು ಆಡಳಿತ ಈ ಸಮಸ್ಯೆ ಬಗೆಹರಿಸುವಲ್ಲಿ ಕ್ರಮಕ್ಕೆ ಮುಂದಾಗಬೇಕು.ಇಲ್ಲವಾದಲ್ಲಿ ಚಿತ್ತಾಪೂರ ಪಟ್ಟಣ ಒಂದು ವಾರದಲ್ಲಿ ಗಬ್ಬು ನಾರುವ ಮೂಲಕ ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವ ಪರಿಸ್ಥಿತಿ ಬಂದ್ರೂ ಬರಬಹುದಾಗಿದೆ.

"ಎಲ್ಲಾ ನಗರ ಸ್ಥಳಿಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರ ನೌಕರರೆಂದು ಪರಿಗಣಿಸಿ ಮತ್ತು ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯವನ್ನು ನೀಡಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಈ ಸಮಸ್ಯೆ ಪಟ್ಟಣದಲ್ಲಿ ಆಗುತ್ತಿದೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ ಎರಡು ದಿನಗಳಲ್ಲಿ ಸಮಸ್ಯೆ ಇತ್ಯರ್ಥ ಆದ್ರೇ ಎಲ್ಲಾ ಸರಿ ಆಗುತ್ತದೆ ಎಂದರು ಒಂದು ವೇಳೆ ಆಗದಿದ್ದರೆ ಮೇಲಾಧಿಕಾರಿಗೆ ಸೂಚನೆಯಂತೆ ನಡೆಯುವುದಾಗಿ ತಿಳಿಸಿದ್ದಾರೆ".

- ಮನೋಜಕುಮಾರ ಗುರಿಕಾರ
ಪುರಸಭೆ ಮುಖ್ಯಾಧಿಕಾರಿ ಚಿತ್ತಾಪುರ.

=====================================

"ಪಟ್ಟಣದಲ್ಲಿ ಕರ್ತವ್ಯಕ್ಕೆ ಪೌರ ನೌಕರರು ಗೈರಾಗುವ ಮೂಲಕ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು. ಸಂಘದ ಬೇಡಿಕೆಗಳನ್ನು ಈಡೇರಿಸುವವರಿಗೆ  ಮುಷ್ಕರ ನಿಲ್ಲಿಸಲು ಸಾಧ್ಯವಿಲ್ಲ ಎಂದರು".

- ಸಾಬಣ್ಣ ಸಿ.ಕಾಶಿ
ತಾಲ್ಲೂಕು ಅಧ್ಯಕ್ಷರು, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಚಿತ್ತಾಪೂರ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...