ಮಂಗಳವಾರ, ಜನವರಿ 20, 2026

ಶರಣಬಸವೇಶ್ವರ ದೇವಸ್ಥಾನದ ಹುಂಡಿ ಕಳವು.

ಚಿತ್ತಾಪುರ: ಪಟ್ಟಣದ ವರಣನಗರದಲ್ಲಿರುವ ಪುರಾತನ ಶರಣಬಸವೇಶ್ವರ ದೇವಸ್ಥಾನದಲ್ಲಿ ಜನೆವರಿ 19ರ ಸೋಮವಾರ ರಾತ್ರಿ ಕಳ್ಳರು ನುಗ್ಗಿ ದೇವಸ್ಥಾನದ ಹುಂಡಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಜನೆವರಿ 20ರ ಬೆಳಗಿನ ಜಾವ ಅರ್ಚಕರು ಎಂದಿನಂತೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಾಗ, ಹುಂಡಿಯ ಬೀಗ ಮುರಿದಿರುವುದು ಕಂಡುಬಂದಿದೆ. ಹುಂಡಿಯಲ್ಲಿದ್ದ ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಇದರಿಂದ ಆತಂಕಗೊಂಡ ಅರ್ಚಕರು ತಕ್ಷಣವೇ ದೇವಸ್ಥಾನದ ನಿರ್ವಹಣಾ ಸಮಿತಿಯ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ದೇವಸ್ಥಾನದ ಸಮಿತಿ ಸದಸ್ಯರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಎಸ್ಐ ಮಂಜುನಾಥ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಪೊಲೀಸ್ ಸಿಬ್ಬಂದಿಗಳಾದ ಅನಿಲ್ ಕುಮಾರ್, ರವಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯಿಂದ ಆಗಮಿಸಿದ ಜಿಲ್ಲಾ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳದಲ್ಲಿ ಲಭ್ಯವಿದ್ದ ಸುಳಿವುಗಳನ್ನು ಸಂಗ್ರಹಿಸಿದೆ. ಕಳ್ಳರ ಪತ್ತೆಗಾಗಿ ಪೊಲೀಸರು ದೇವಸ್ಥಾನದ ಸಿಸಿಟಿವಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ದೇವಸ್ಥಾನದಲ್ಲಿ ನಡೆದ ಈ ಕಳುವು ಘಟನೆಯಿಂದ ಭಕ್ತರಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಶರಣಬಸವೇಶ್ವರ ದೇವಸ್ಥಾನದ ಜೀವನೋದ್ಧಾರ ಹಾಗೂ ಸೇವಾ ಟ್ರಸ್ಟ್ ಖಜಾಂಚಿ ಕೊಟೇಶ್ವರ ರೇಷ್ಮೆ, ದೇವಸ್ಥಾನದ ನಿರ್ವಹಣಾ ಸಮಿತಿ ಸದಸ್ಯ ಮಹಾದೇವ ಅಂಗಡಿ 
 ಆಗ್ರಹಿಸಿದ್ದಾರೆ.

ಶುಕ್ರವಾರ, ಜನವರಿ 2, 2026

ಇಂದು ಪರಶುರಾಮ ಅಪ್ಪಾಜಿ ಜನ್ಮ ದಿನ ಆಚರಣೆ.

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಭಾಗೋಡಿ ಗ್ರಾಮದಲ್ಲಿ ಇಂದು ಪೂಜ್ಯ ಶ್ರೀ ಪರಶುರಾಮ ಅಪ್ಪಾಜಿ ರವರ 33ನೇ ಜನ್ಮ ದಿನಾಚರಣೆಯು ಅವರ ಅಭಿಮಾನಿಗಳು ಸಾಯಂಕಾಲ ಅಂಬಿಗರ ಚೌಡಯ್ಯ ಭವನದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಅಪ್ಪಾಜಿ ಅವರು ಬೇಡ ಕುಟುಂಬದಲ್ಲಿ ಜನಿಸಿದ ಅವರು ನೂರಾರು ಭಕ್ತರು ಅಭಿಮಾನಿಗಳು ಹೊಂದಿದು ಅವರ ಅಪೇಕ್ಷೆಯಂತೆ ಜನ್ಮದಿನ ಆಚರಣೆ ನಡೆಯುತ್ತಿದ್ದು ಹಾಗೂ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದು ಭಕ್ತರಾದ ಖಾಸಿಂ ಪಟೇಲ್ ತಿಳಿಸಿದ್ದಾರೆ.

ಬುಧವಾರ, ಡಿಸೆಂಬರ್ 3, 2025

ಆರ್‌ಎಸ್ಎಸ್, ಬಿಜೆಪಿ ನಕಲಿ ದೇಶಭಕ್ತರು: ಹೊಸಮನಿ.

✓ಭೀಮನಡೆ ಯಶಸ್ವಿ ಬಿಜೆಪಿ ಹತಾಶೆ,   ✓ಬಿಜೆಪಿಗರ ಆರೋಪ ಸತ್ಯಕ್ಕೆ ದೂರ.

ಚಿತ್ತಾಪುರ: ಆರ್‌ಎಸ್ಎಸ್ ನವರು ತ್ರಿವರ್ಣ ಧ್ವಜಗಳು ಹಿಡಿದಿಲ್ಲ ಕೈಯಲ್ಲಿ ಬಡಗಿ ಹಿಡಿದು ಪಥಸಂಚಲನ ಮಾಡಿದ್ದರೆ ನಾವು ತ್ರಿವರ್ಣ ಧ್ವಜಗಳು ಹಿಡಿದು ಹಾಗೂ ಸಂವಿಧಾನ ಪೀಠಕೆ ಜೊತೆಗೆ ಎಲ್ಲಾ ಸಮಾಜಗಳ ಗುರುಗಳ ಭಾವಚಿತ್ರಗಳೊಂದಿಗೆ ಮೆರವಣಿಗೆ ಮಾಡಿದ್ದೇವೆ ಹಾಗಾಗಿ ಆರ್‌ಎಸ್ಎಸ್ ಮತ್ತು ಬಿಜೆಪಿ ನವರು ನಕಲಿ ದೇಶಭಕ್ತರು ನಾವು ನಿಜವಾದ ದೇಶಭಕ್ತರು ಎಂದು ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು.

ಪಟ್ಟಣದ ಬುದ್ಧ ಮಂದಿರದಲ್ಲಿ ಸಂವಿಧಾನ 
ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭೀಮ ನಡಿಗೆ ಪಥಸಂಚಲನದಲ್ಲಿ ಅಂಬೇಡ್ಕ‌ರ್ ಅನುಯಾಯಿಗಳು ಹಾಗೂ 22 ಸಮಾಜದ ಜನರು ಭಾಗವಹಿಸಿದ್ದರಿಂದ ಅಭೂತಪೂರ್ವ ಯಶಸ್ವಿಗೊಂಡಿದೆ, ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿ ಮುಖಂಡರು ಹತಾಶೆಗೊಂಡು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಆ‌ರ್.ಎಸ್.ಎಸ್ ನವರು ಕೈಯಲ್ಲಿ ಬಡಗಿ ಹಿಡಿದು ಪಥ ಸಂಚಲನ ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ, ಆದರೆ ನಾವು ಯಾವುದೇ ಮಾರಕಾಸ್ತ್ರ ಇಲ್ಲದೇ ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ಐತಿಹಾಸಿಕ ಭೀಮ ನಡಿಗೆ ಪಥ ಸಂಚಲನ ಮಾಡಿದ್ದೇವೆ, ಭೀಮ ನಡಿಗೆ ಪಥಸಂಚಲನದಲ್ಲಿ ಸ್ವಯಂಪ್ರೇರಿತವಾಗಿ ಜನ ಬಂದಿದ್ದಾರೆ ಯಾರನ್ನೂ ಹಣ ನೀಡಿ ಕರೆಯಿಸಿಲ್ಲ. ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಪರ ಇದ್ದಾರೆ ಹೀಗಾಗಿ ಅವರ ಪರ ಘೋಷಣೆ ಕೂಗಿದ್ದೇವೆ, ಸಂವಿಧಾನ ವಿಷಯದಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುವುದನ್ನು ಬಿಟ್ಟುಬಿಡಿಲ್ಲಿ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

ಮಾದಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಮಾತನಾಡಿ, ಸಂವಿಧಾನ ಪರವಾಗಿ ಯಾರು ಇರುತ್ತಾರೆ ಅವರ ಪರ ಘೋಷಣೆ ಕೂಗುತ್ತೇವೆ ಅಷ್ಟೇ ಅಲ್ಲ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಸಹ ಮಾಡುತ್ತೇವೆ. ಭೀಮ ನಡಿಗೆ ಪಥಸಂಚಲನದಲ್ಲಿ ಎಲ್ಲಾ ಸಮಾಜದವರು ಭಾಗವಹಿಸಿದ್ದರಿಂದ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಆಗಿದೆ ಹೀಗಾಗಿ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್, ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಬಂಜಾರ ಸಮಾಜದ ಅಧ್ಯಕ್ಷ ಭೀಮಸಿಂಗ ಚವ್ಹಾಣ, ಮುಸ್ಲಿಂ ಸಮಾಜದ ಅಧ್ಯಕ್ಷ ಎಂ.ಎ.ರಷೀದ್, ಮಹಾದೇವ ರಾಠೋಡ, ಮಲ್ಲಿಕಾರ್ಜುನ ಮುಡಬೂಳಕ‌ರ್, ಶರಣು ಡೋಣಗಾಂವ, ಜಗನ್ನಾಥ ಮುಡಬೂಳಕ‌ರ್, ಶರಣಪ್ಪ ಹೊನ್ನಪೂರ, ದೇವು ಯಾಬಾಳ ಇದ್ದರು.

ಸಚಿವರ ಕೈಗೊಂಬೆಯಾದ ತಹಸೀಲ್ದಾರ: ಸಜ್ಜನಶೆಟ್ಟಿ.

ಚಿತ್ತಾಪುರ: ಭೀಮ ನಡಿಗೆ ಪಥಸಂಚಲನಕ್ಕೆ
ಎರೆಡೆರಡು ಬಾರಿ ಅನುಮತಿ ನೀಡುವ ಮೂಲಕ ತಹಸೀಲ್ದಾರ್ ತಮ್ಮ ಮನಬಂದಂತೆ ವರ್ತಿಸಿದ್ದು, ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ  ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ‌ರ್ ಎಸ್ಎಸ್ ಪಥ ಸಂಚಲನಕ್ಕೆ ತಾಲೂಕು ಕಂದಾಯ ವ್ಯಾಪ್ತಿಯಲ್ಲಿ ಇರುವವರಿಗೆ ಹಾಗೂ 350 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು, ಸಂಚಲನಕ್ಕೆ ಬರುವವರ ಐಡಿ ಕಾರ್ಡ್ ಪರಿಶೀಲನೆ ನಡೆಸಿ ಬ್ಯಾರಿಕೇಡ್ ಹಾಕಿ ನಾಕಾಬಂಧ ಹಾಕಿ, ಪಥ ಸಂಚಲನ ಫೇಲ್ ಮಾಡುವ ಉದ್ದೇಶದಿಂದ ಪೊಲೀಸರು ತುಂಬಾ ತೊಂದರೆ ನೀಡಿದ್ದರು. ಆದರೆ ಭೀಮ ನಡಿಗೆ ಪಥಸಂಚಲನಕ್ಕೆ ಯಾವುದೇ ಬ್ಯಾರಿಕೇಡ್ ಹಾಕಿಲ್ಲ, ಯಾರನ್ನು ತಪಾಸಣೆ ನಡೆಸಲಿಲ್ಲ ಮತ್ತು ಇಂತಿಷ್ಟೇ ಜನರು ಭಾಗವಹಿಸಬೇಕು ಅಂತ ಹೇಳಿಲ್ಲ ಮತ್ತು ಸಮಯ ಪರಿಪಾಲನೆ ಮಾಡಿಲ್ಲ ಹೀಗಾಗಿ ಇಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿ ಕಾನೂನು ತಮಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಆರ್.ಎಸ್ಎಸ್ ಪಥ ಸಂಚಲನ ಸಮಯದಲ್ಲಿ ನಾವು ಪಥ ಸಂಚಲನ ಮಾಡುತ್ತೇವೆ ಎಂದು ಹೇಳಿದ ಸಂಘಟನೆಗಳೇ ಬೇರೆ, ಈಗ ಮಾಡಿದವರೇ ಬೇರೆನೇ ಎಂದು ಕುಟುಕಿದರು. ಶಾಂತಿಪ್ರಿಯ ಚಿತ್ತಾಪುರದಲ್ಲಿ ಇಷ್ಟೊಂದು ಗದ್ದಲ, ಅಶಾಂತಿ ವಾತಾವರಣ ನಿರ್ಮಾಣವಾಗುವುದಕ್ಕೆ ಕಾರಣ ಯಾರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕ‌ರ್ ಮಾತನಾಡಿ ಕಾನೂನು ಎಲ್ಲರಿಗೂ ಒಂದೇ ಇರುವಾಗ ಇಲ್ಲಿಯ ತಹಸೀಲ್ದಾ‌ರ್ ಸೇರಿದಂತೆ ತಾಲೂಕು ಆಡಳಿತ ಆರ್.ಎಸ್ಎಸ್ ಪಥ ಸಂಚಲನಕ್ಕೆ ಒಂದು ಕಾನೂನು, ಭೀಮ ನಡಿಗೆ ಪಥಸಂಚಲನಕ್ಕೆ ಇನ್ನೊಂದು ಕಾನೂನು ಮಾಡಿ ಕಾನೂನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ತಾಲೂಕಿನ ಕಂದಾಯ ವ್ಯಾಪ್ತಿಯಲ್ಲಿ ಇರುವವರಿಗೆ ಮಾತ್ರ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶ ಇದೆ ಎಂದು ಆದೇಶ ಹೊರಡಿಸಿದ್ದ ತಹಸೀಲ್ದಾರ್ ಬೆಳಿಗ್ಗೆ ಬೇರೆ ಜಿಲ್ಲೆಯವರಿಗೂ ಅವಕಾಶ ಇದೆ ಎಂದು ಮತ್ತೊಂದು ಆದೇಶ ಹೊರಡಿಸಿರುವುದು ಖಂಡನೀಯ ಎಂದರು.

2015 ರಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ ಜಾರಿಗೆ ತಂದಿದ್ದೇ ಪ್ರಧಾನಿ ಮೋದಿ. ಅಂಬೇಡ್ಕ‌ರ್ ಅವರಿಗೆ ಕಾಂಗ್ರೆಸ್ ಅವಮಾನಿಸಿದೆ ಆದರೆ ಬಿಜೆಪಿ ಗೌರವಿಸಿದೆ ಎಂದರು. ಸಂವಿಧಾನದ 108 ತಿದ್ದುಪಡಿಗಳಲ್ಲಿ ಕಾಂಗ್ರೆಸ್ 100 ತಿದ್ದುಪಡಿ ಮಾಡಿದೆ ಆದರೆ ಬಿಜೆಪಿ ಬರೀ 8 ತಿದ್ದುಪಡಿ ಮಾಡಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ ಹೀಗಾಗಿ ನಮ್ಮದು ಭೀಮ ನಡಿಗೆ ಪಥಸಂಚಲನಕ್ಕೆ ವಿರೋಧ ಇರಲಿಲ್ಲ, ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಪಥ ಸಂಚಲನ ಮಾಡಿರುವುದಕ್ಕೆ ನಾವು ಸ್ವಾಗತಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಸದಸ್ಯರಾದ ನಾಗರಾಜ ಭಂಕಲಗಿ, ಸುರೇಶ್ ಬೆನಕನಳ್ಳಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೂಗಾರ, ಶಿವರಾಮ್ ಚವ್ಹಾಣ, ರಾಜು ದೊರೆ ಇದ್ದರು.

ಶುಕ್ರವಾರ, ನವೆಂಬರ್ 28, 2025

ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕ್ರಮ ಆಂಗ್ಲ ಶಾಲೆಯಲ್ಲಿ : ಇಂದೂರು ಆಕ್ಷೇಪ.


ಚಿತ್ತಾಪುರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದಲ್ಲಿ ಸಿರಿನುಡಿ ಸಂಭ್ರಮ ಎಂಬ ಕಾರ್ಯಕ್ರಮ ಇಂದು ಶನಿವಾರ ಹಮ್ಮಿಕೊಂಡಿರುವ ಶೇಷಗಿರಿರಾವ್ ಹಿರಿಯ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡಲಾಗುತ್ತಿದೆ ಎಂದು ತಾಲೂಕಾ ಜೈ ಕರ್ನಾಟಕ ಮಾಜಿ ಅಧ್ಯಕ್ಷ ಮಲ್ಲಿನಾಥ ಇಂದೂರು ಅವರು ಉದಯಕಾಲ ಪತ್ರಿಕೆ ಜೊತೆಗೆ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ

ಕನ್ನಡ ನಾಡು, ನುಡಿ, ನೆಲ,ಜಲ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಕೊಡುಗೆ ನೀಡಿರುವ ಮತ್ತು ಶ್ರಮಿಸುತ್ತಿರುವವರನ್ನು ಗುರುತಿಸಿ ಪರಿಷತ್ತಿನಿಂದ ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸುವುದು ಪರಿಷತ್ತಿನ ಸಂಪ್ರದಾಯ. ಅದನ್ನು ಮೀರಿ ಆಂಗ್ಲ ಭಾಷೆಯಲ್ಲಿ ಬೋಧನೆ ಮಾಡುವ ಉಪನ್ಯಾಸಕರಿಗೆ ಪ್ರಶಸ್ತಿಗೆ ಆಯ್ಕೆ ಮಾಡುವುದು ಅಲ್ಲದೇ ಮಾಧ್ಯಮ ಕ್ಷೇತ್ರವನ್ನು ಕಡೆಗಣಿಸುವ ಮೂಲಕ ಕನ್ನಡ ಭಾಷೆ ಬೋಧಿಸುವ ಶಿಕ್ಷಕ, ಉಪನ್ಯಾಸಕರಿಗೆ, ಹಾಗೂ ನಾಲ್ಕನೆ ಅಂಗವಾದ ಪತ್ರಿಕಾ ರಂಗವನ್ನು ಅವಮಾನ ಮಾಡಿದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಕೇಳಿದಾಗ ತಾಲೂಕಾ ಅಧ್ಯಕ್ಷರಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ತಾಲೂಕಾ ಅಧ್ಯಕ್ಷರಿಗೆ ಕೇಳಿದರೆ ಆಗಿರುವ ತಪ್ಪು ಮುಂದಿನ ಕಾರ್ಯಕ್ರಮದಲ್ಲಿ ಸರಿಪಡಿಸಿಕೊಳ್ಳೋಣ ಎಂದು ಹೇಳುವ ಮೂಲಕ ತಪ್ಪು ಒಪ್ಪಿಕೊಂಡು ಕನ್ನಡ ಭಾಷೆಗೆ ಮಾಡಿರುವ ಅವಮಾನ ಸಮರ್ಥಸಿಕೊಂಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಬುಧವಾರ, ಅಕ್ಟೋಬರ್ 8, 2025

ಪ್ರಜಾ ಸೌಧದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

ಚಿತ್ತಾಪುರ: ಪಟ್ಟಣದ ಪ್ರಜಾ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾ‌ರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ವಾಲ್ಮೀಕಿ ಸಮಾಜ ತಾಲೂಕು ಅಧ್ಯಕ್ಷ ಭೀಮರಾಯ ದೋರಿ, ಯುವ ಅಧ್ಯಕ್ಷ ರಾಜು ದೋರಿ, ಮುಖಂಡರಾದ ಸಾಬಣ್ಣ ಮುಸ್ಲಾ, ಅಂಬಣ್ಣ ಬೊಮ್ಮನಹಳ್ಳಿ, ಹಣಮಂತ ಬೊಮ್ಮನಹಳ್ಳಿ, ಮೌನೇಶ್ ಲಾಡ್ಲಾಪೂರ, ಸಾಬಣ್ಣ ಲಾಡ್ಲಾಪೂರ, ರಾಮು ಮುಸ್ಲಾ, ಭೀಮರಾಯ ಲಾಡ್ಡಾಪೂರ, ಸಾಬಣ್ಣ ಕುಂಬಾರಹಳ್ಳಿ, ಹಣಮಂತ ಗಲಿಗಿನ್, ಅಮೃತ್ ಶಾಮನೂರ, ಮಹಾದೇವ ಬೊಮ್ಮನಹಳ್ಳಿ, ಉಮೇಶ್ ದೋರಿ, ವೆಂಕಟೇಶ್ ಬಳಿಚಕ್ರ, ಜಗದೇವ ಚಾಮನೂರ, ಚಂದ್ರು ಇಟಗಾ, ಭಾಗಣ್ಣ ದೋರಿ, ಸಾಯಬಣ್ಣ ವಾಡಿ, ದೇವಪ್ಪ ಕುಂಬಾರಹಳ್ಳಿ, ನಿಂಗಣ್ಣ ಚಾಮನೂರ, ಹಣಮಂತ ದಿಗ್ಗಾಂವ, ಶರಣು ವಾಡಿ, ಭೀಮಾಶಂಕರ ದಿಗ್ಗಾಂವ ಸೇರಿದಂತೆ ಇತರರು ಇದ್ದರು.

ನ್ಯಾ.ಬಿ.ಆರ್ ಗವಾಯಿ ಮೇಲೆ ಶೂ ಎಸೆತಕ್ಕೆ ಖಂಡನೆ

ಚಿತ್ತಾಪುರ : ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯದ ಘನತೆವೆತ್ತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರನ್ನು ಅಪಮಾನಿಸಲು ಶೂ ಎಸೆಯಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯ ಎಂದು ಬೌದ್ಧ ಮಹಾಸಭಾ ತಾಲೂಕಾಧ್ಯಕ್ಷ ಜಗನ್ನಾಥ ಮುಡಬೂಳಕ‌ರ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಈ ಸಂವಿಧಾನದ ಘಟನೆ ಸಾರ್ವಭೌಮತ್ವವನ್ನು ಅಪಮಾನಿಸಲು ಯತ್ನಿಸಿದ ನೀಚ ಹಾಗೂ ಅನಾಗರೀಕ ವರ್ತನೆಯಾಗಿದ್ದು, ಕೃತ್ಯ ಎಸಗಿದ ವಕೀಲನ ವರ್ತನೆ ಯಾರೂ ಕ್ಷಮಿಸಲಾರದ ದುಷ್ಕೃತ್ಯವಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹಾಗೂ ಅಗೌರವ ತೋರುವ ವರ್ತನೆ ಹಾಗೂ ಕೃತ್ಯಗಳು ವಿದ್ರೋಹಿತನದ ಪರಮಾವಧಿಯಾಗಿದೆ. ದೇಶದ ಕಾನೂನಿನ ಅನ್ವಯ ಪೊಲೀಸರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಉತ್ಸವ ಯಶಸ್ಸು: ಕೃತಜ್ಞತೆ ಸಲ್ಲಿಸಿದ ಹಿರೇಮಠ

ಚಿತ್ತಾಪುರ: ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ಯಶಸ್ಸಿಗೆ ಶ್ರಮಿಸಿದ ಮತ್ತು ಸಹಕರಿಸಿದ ಎಲ್ಲರಿಗೂ ದೇವಸ್ಥಾನ ಸಮಿತಿ ಅಧ್ಯಕ್ಷರು/ತಹಸೀಲ್ದಾರ್ ನಾಗಯ್ಯ ಹಿರೇಮಠ ರವರು ತಾಲೂಕು ಆಡಳಿತದಿಂದ ಹೃದಯ ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಮಾರ್ಗದರ್ಶನದಿಂದ ಯಾವುದೇ ಲೋಪವಿಲ್ಲದೆ ಪಲ್ಲಕ್ಕಿ ಉತ್ಸವ ಶಾಂತಿಯುತವಾಗಿ ನಡೆಯಿತ್ತು. ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಮತ್ತು ಜಾತ್ರೆಯು ಸುಗಮವಾಗಿ ನಡೆಯುವಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪುರಸಭೆ ಕಾರ್ಯಲಯದ ಸಿಬ್ಬಂದಿ ವರ್ಗ, ಪದವಿ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಮಾಡಿದ ಶಿಸ್ತುಬದ್ಧ ಸೇವೆ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ದೀಪಾಲಂಕಾರ ಸಮಿತಿ ಸದಸ್ಯರು ಸದಸ್ಯರು, ಪತ್ರಕರ್ತರಿಗೂ ಮತ್ತೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡದ ಭಕ್ತಾದಿಗಳ ಜೊತೆಗೆ ಎಲ್ಲರ ಸಾಮೂಹಿಕ ಪ್ರಯತ್ನದಿಂದಾಗಿ ಜಾತ್ರೆಯು ವಿಜ್ರಂಭಣೆಯಿಂದ ನೆರವೇರಿತು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದ್ದಾರೆ.

ಶೂ ಎಸೆಯುವ ಯತ್ನ ಭಯೋತ್ಪಾದಕ ಕೃತ್ಯ: ಬುಳಕರ ಆಗ್ರಹ

ಚಿತ್ತಾಪುರ: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ವಕೀಲನೊಬ್ಬ ಶೂ ಎಸೆಯುವ ಪ್ರಯತ್ನ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಯುವ ಮುಖಂಡ ಸಂಜಯ ಬುಳಕರ ಹೇಳಿದರು. 

ಬುಧವಾರ ತಹಸೀಲ್ ಕಾರ್ಯಾಲಯಕ್ಕೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ತದನಂತರ ಮಾತನಾಡದ ಅವರು ಈ ದೇಶದ ಸರ್ವೋಚ್ಚ ನ್ಯಾಯಮೂರ್ತಿಗಳ ಮೇಲೆಯೇ ಕೋರ್ಟ್ ಹಾಲ್ ನಲ್ಲೇ ಈ ಕೃತ್ಯ ನಡೆದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದರು.

ಇದೊಂದು ಭಯೋತ್ಪಾದಕ ಕೃತ್ಯ, ಇದು ಈ ದೇಶದ ಸಂವಿಧಾನವನ್ನು ಒಪ್ಪದ ಸಮುದಾಯದವರ ಮನೋ ಸ್ಥಿತಿಯಾಗಿದೆ.ದಲಿತರೊಬ್ಬರು ಈ ಸ್ಥಾನಕ್ಕೆ ಬಂದಿರುವುದನ್ನೆ ಸಹಿಸಲಾಗದ ದುಷ್ಟ-ಮನಸುಗಳು ಈ ರೀತಿಯ ಕೃತ್ಯವನ್ನು ಬೆಂಬಲಿಸುತ್ತವೆ, ಮತ್ತು ಇಂತಹ ಕೃತ್ಯದಲ್ಲಿ ತೊಡಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ನ್ಯಾಯಮೂರ್ತಿಗಳು ದಲಿತರು, ಬೌದ್ಧ ಧರ್ಮದ ಉಪಾಸಕರು ಆಗಿದ್ದು. ಅದೇ ಮುಖ್ಯ ಕಾರಣವನ್ನಾಗಿಸಿಕೊಂಡು ಸನಾತನ ಧರ್ಮದ ಹೆಸರಲ್ಲಿ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆಯುವ ದುಷ್ಟ ಪ್ರಯತ್ನ ನಡೆಸಿರುವಾಗ ಈ ದೇಶದ ಸಾಮಾನ್ಯ ದಲಿತರ ಪಾಡೇನು ಎಂಬುದನ್ನು ಯೋಚಿಸಬೇಕಾಗಿದೆ. 

ಈ ಕೃತ್ಯ ಸಂವಿಧಾನದ ಮೇಲೆ ನಡೆದ ತೀವ್ರ ಹಲ್ಲೆಯಾಗಿದೆ. ಇಂಥ ವ್ಯಕ್ತಿಗಳ ಹಿಂದಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಾಶಿ ವಡ್ಡರ ಸಮಾಜದ ಸರಪಂಚ್ ವಿಠ್ಠಲ್ ಕಾಶಿಯವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ದಿಗ್ಗಾoವ ಗ್ರಾಮ ಅಧ್ಯಕ್ಷರಾದ ಹರಾಳಯ್ಯ ಬಡಿಗೇರ,ಸಾಬಣ್ಣ ಕಲಬುರಗಿ, ಚಂದ್ರಕಾಂತ್ ಕಾಶಿ,ದೇವಪ್ಪ ತಳವಾರ, ನರೇಂದ್ರ ರೆಡ್ಡಿ ಬಂಕಲಗಿ, ಬಸವರಾಜ್ ಮೈನಾಳಕರ,ಗುರು ಪಾಟೀಲ್, ಭೀಮು ಉಪಾರ, ಹುಸನಪ್ಪ, ರಾಹುಲ್, ಮಹೇಶ್ ದೇವರ ಸೇರಿದಂತೆ ಇತರರಿದ್ದರು.

ವನ್ಯಜೀವಿಗಳಿಂದ ಜಗದ ಉಳಿವು : ಬಡಿಗೇರ್.

ಚಿತ್ತಾಪುರ: ಜಗದ ಉಳಿವು ವನ್ಯಜೀವಿಗಳನ್ನು ಅವಲಂಬಿಸಿವೆ. ಅವುಗಳ ನಾಶವಾದರೆ ನಮಗೆ ಉಳಿಗಾಲವಿಲ್ಲ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಹೇಳಿದರು. 

ಜಿಲ್ಲಾ ಪ್ರಾದೇಶಿಕ ಅರಣ್ಯ ವಿಭಾಗ, ತಾಲ್ಲೂಕ ವಲಯ ಅರಣ್ಯ ವಿಭಾಗ ಹಾಗೂ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ವತಿಯಿಂದ ಲುಂಬಿನಿ ಟ್ರಿ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಕೃತಿ ಒಂದು ಅದ್ಭುತ ಸೃಷ್ಟಿ ಅದರಲ್ಲಿ ಅರಣ್ಯಗಳು ಹಾಗೂ ವನ್ಯಜೀವಿಗಳ ಪಾತ್ರ ಪ್ರಮುಖವಾದದ್ದು. ಆದರೆ ಅನೇಕ ಕಾರಣಗಳಿಂದ ಅರಣ್ಯಗಳಲ್ಲಿರುವ ವನ್ಯಜೀವಿಗಳಿಗೆ ಆತಂಕ ಎದುರಾಗಿವೆ. ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿಗಳು ಆಹಾರ ಸರಪಳಿಯಲ್ಲಿ ಒಂದು ಇನ್ನೊಂದನ್ನು ಆಶ್ರಯಿಸಿ ಬದುಕುತ್ತಿವೆ ಹೀಗಿರುವಾಗ ಪ್ರತಿಯೊಬ್ಬರೂ ಕಾಡು ಪ್ರಾಣಿಗಳನ್ನು ರಕ್ಷಿಸುವ ಸಂಕಲ್ಪ ಮಾಡಬೇಕು. ಅವುಗಳ ರಕ್ಷಣೆಯೇ ನಮ್ಮೇಲ್ಲರ ರಕ್ಷಣೆಯಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ ಪ್ರತಿವರ್ಷ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸಲು ಭಾರತೀಯ ವನ್ಯಜೀವಿ ಮಂಡಳಿಯು ದೇಶದಾದ್ಯoತ ಅಕ್ಟೊಬರ್ 2 ರಿಂದ 8 ರವರೆಗೆ ವನ್ಯಜೀವಿ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಪರಿಸರದ ಜೊತೆಗೆ ವನ್ಯಜೀವಿಗಳ ರಕ್ಷಣೆ ನಮ್ಮೇಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಅರಣ್ಯ ಅಧಿಕಾರಿ ವಿಶ್ವನಾಥ ಪಾಟೀಲ್, ಏನ್. ಸಿ. ಸಿ ಅಧಿಕಾರಿ ಶರಣು ಸಜ್ಜನ್. ಟ್ರಿ ಪಾರ್ಕ್ ಸಿಬ್ಬಂದಿಗಳಾದ ಶ್ರೀಕಾಂತ, ನಾಗೇಶ್, ಜಾಫರ್ ಇದ್ದರು.ಮಕ್ಕಳಿಗೆ ಅರಣ್ಯ, ವನ್ಯಜೀವಿ ಧಾಮಗಳ ಮಹತ್ವವನ್ನು ಹೇಳಿ ಕೊಡುವುದರ ಜೊತೆಗೆ ಅಲ್ಲಿರುವ ಚಿಟ್ಟೆ ಪಾರ್ಕ ಸೇರಿದಂತೆ ವಿವಿಧ ಸಸ್ಯಗಳ ಪ್ರಭೇಧಗಳು, ಪ್ರಾಣಿ ಪ್ರಭೇಧಗಳ ಬಗ್ಗೆ ಅರಣ್ಯಧಿಕಾರಿಗಳು ಮಾರ್ಗದರ್ಶನ ಮಾಡಿದರು. ಮಕ್ಕಳು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಮನೋರಂಜನೆ ಜೊತೆಗೆ ಪರಿಸರದ ಅನೇಕ ವಿಷಯಗಳನ್ನು ಕೇಳಿ ತಿಳಿದುಕೊಂಡರು.

ನಾಳೆ ಜಮೀನು ಹರಾಜು ಪ್ರಕ್ರಿಯೆ: ತಹಸೀಲ್ದಾ‌ರ್

ಚಿತ್ತಾಪುರ: ನ್ಯಾಯಾಲಯದ ಆದೇಶದಂತೆ ಬಾಂಡ್ ಮೊತ್ತ ಭರಿಸದೆ ಇರುವುದರಿಂದ ತಾಲೂಕಿನ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

Crl Misc No:453/2020, Cr NO:14/2019(RG Nagar PS V/s Jakeer &Ors) reg : ಆದೇಶದಂತೆ ಬಾಂಡ್ ಮೊತ್ತ ಭರಿಸುವಂತೆ ನೋಟಿಸ್-37 ಮತ್ತು ನೋಟಿಸ್‌-38 ನೀಡಲಾಗಿರುತ್ತದೆ ಆದರೆ ಕಂದಾಯ ನಿರೀಕ್ಷಕರು ಚಿತ್ತಾಪುರ ರವರು ಅರ್ಜುನ ತಂದೆ ಮರೆಪ್ಪಾ ರವರು ಯರಗಲ್ ಗ್ರಾಮದಲ್ಲಿ ಹಾಗೂ ಶಹಾಬಾದ ಪಟ್ಟಣದಲ್ಲಿ ವಾಸವಿರುವುದಿಲ್ಲ ಎಂದು ವರದಿ ಸಲ್ಲಿಸಿರುತ್ತಾರೆ. ವಿಚಾರಣೆ ಮುಂದುವರೆದು ಸೆ.24 ರಂದು ದಿನದಂದು ಮಾನ್ಯ ನ್ಯಾಯಾಧಿಶರು ಬಾಂಡ್ ಮೊತ್ತ ಭರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿರುತ್ತಾರೆ ಹಾಗೂ ಆರಕ್ಷಕರು ಉಪನಿರೀಕ್ಷಕರು ಪೋಲಿಸ್ ಠಾಣೆ ಚಿತ್ತಾಪುರ ರವರಿಗೆ ಪತ್ರ ಬರೆಯಲಾಗಿದ್ದು ಅರ್ಜುನ ಮರೆಪ್ಪಾ ರವರನ್ನು ಬಂಧಿಸಿ ಹಾಜರಪಡಿಸುವಂತೆ ಸೂಚಿಸಲಾಗಿರುತ್ತದೆ.

ಪ್ರಯುಕ್ತ ಪಹಣಿ ಮಾಲಿಕರಾದ ಅರ್ಜುನ ತಂ ಮರೆಪ್ಪಾ ರವರ ಯರಗಲ್ ಗ್ರಾಮದಲ್ಲಿ ವಾಸವಿರದೆ ಇರುವುದರಿಂದ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11.00 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಯರಗಲ್ ಗ್ರಾಮದ ಸ.ನಂ:4/*/1 2:3-302. ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...