ಶನಿವಾರ, ಅಕ್ಟೋಬರ್ 29, 2022

ಪುನೀತ್‌ ರಾಜ್​ಕುಮಾರ್​ ಪ್ರಥಮ ಪುಣ್ಯಸ್ಮರಣೆ: ಗುತ್ತೇದಾರ್ ಕುಟುಂಬದಿಂದ ಪೂಜೆ.

ಚಿತ್ತಾಪೂರ: ಚಲನಚಿತ್ರ ನಟ, ಪವರ್​​ಸ್ಟಾರ್​ ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಗುತ್ತೇದಾರ್ ಕುಟುಂಬದಿಂದ ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಥಮ ಪುಣ್ಯಸ್ಮರಣೆ ಆಚರಿಸಿದರು.

ಈ ಸಂದರ್ಭದಲ್ಲಿ ಫ್ರೌಢ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಕಸಾಪ ನಿಕಟಪೂರ್ವ ಅಧ್ಯಕ್ಷರು ಹಾಗೂ ವಿಜಯ ಕರ್ನಾಟಕ ಪತ್ರಕರ್ತರಾದ ಕಾಶಿನಾಥ ಗುತ್ತೇದಾರ್,  ಜಗದೇವ ಕುಂಬಾರ,  ಎಂ.ಡಿ ಮಶಾಖ್, ಹರೀಶ್, ಭವಾನಿ, ಕವಿತಾ,ವೆಂಕಟೇಶ, ಸೇರಿದಂತೆ ಇತರರು ಇದ್ದರು.

ಕದ್ದರ್ಗಿ ಶಾಲೆಯಲ್ಲಿ ಕೋಟಿ ಕಂಠ ಗಾಯನ.

ಚಿತ್ತಾಪೂರ: ಕನ್ನಡ ಹಬ್ಬ, ಕರುನಾಡ ರಾಜ್ಯೋತ್ಸವಕ್ಕೆ ಮೆರುಗು ನೀಡುವುದಕ್ಕೆ ಉತ್ಸಾಹ, ಲವಲವಿಕೆ ತುಂಬುವಂತೆ ಅದಕ್ಕೆ ಪೂರ್ವಭಾವಿಯಾಗಿ ಕದ್ದರ್ಗಿ ಶಾಲೆಯ ಕೋಟಿ ಕಂಠ ಗಾಯನ ನಡೆಯಿತ್ತು.

ತಾಲ್ಲೂಕಿನ ಕದ್ದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 
ಕೋಟಿ ಕಂಠ ಗಾಯನದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವೃಂದದವರು ಭಾಗವಹಿಸಿದರು.

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ,
ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಡಾ. ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಎಂಬ ಹಾಡುಗಳು ಹಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಚಂದ್ರಕಾಂತ ಐನಾಪೂರ, ಶಿಕ್ಷಕಿ ನಾಗಮ್ಮ ಕುಂಬಾರ, ಅತಿಥಿ ಶಿಕ್ಷಕ ಜಗದೇವ ಕುಂಬಾರ ಸೇರದಂತೆ ವಿದ್ಯಾರ್ಥಗಳು ಇದ್ದರು.

ಶನಿವಾರ, ಮಾರ್ಚ್ 5, 2022

ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಸಿದ್ಧ: ಪ್ರಿಯಾಂಕ ಖರ್ಗೆ.



 ಚಿತ್ತಾಪುರ: ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಸದಾ ಸಿದ್ದರಿರುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

  ಮತ ಕ್ಷೇತ್ರದ ಅಶೋಕ ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ನೆರವೇರಿಸಿ  ಮಾತನಾಡಿದ ಅವರು ರೂ. 15 ಲಕ್ಷ ವೆಚ್ಚದಲ್ಲಿ ಡಾ ಬಾಬು ಜಗಜೀವನರಾಂ ಭವನ, ರೂ 15 ಲಕ್ಷ ವೆಚ್ಚದಲ್ಲಿ ಸೇವಾಲಾಲ್ ಭವನ ಉದ್ಘಾಟನೆ ಹಾಗೂ ರೂ 25 ಲಕ್ಷ ವೆಚ್ಚದಲ್ಲಿ ಕೈಗತ್ತಿಕೊಳ್ಳಲಾಗುತ್ತಿರುವ ಆರ್.ಸಿ.ಬಿ ಮಖ್ಯ ಕ್ಯಾನೆಲ್ ನಿಂದ ಬೆಣ್ಣೂರು (ಕೆ) ಗ್ರಾಮದವರೆಗೆ ಆಣೆಕಟ್ಟು ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಾಯಿತು.

  ಬಿಜೆಪಿ ಸರ್ಕಾರದಲ್ಲಿ ಅಭಿವೃದ್ದಿಗೆ ಹಿನ್ನೆಡೆಯಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ ಸಿ ಪಿ / ಟಿ‌ಎಸ್ ಪಿ ಅಡಿಯಲ್ಲಿ 28,000 ಕೋಟಿ ನಿಗದಿಪಡಿಸಿ ಎಸ್ ಸಿ ಹಾಗೂ ಎಸ್ ಟಿ‌ ಜನಾಂಗದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ.  ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 150 ಬೋರ್ ವೆಲ್‌ ಮಂಜೂರಾಗಿದ್ದವು. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ‌ 5 ಬೋರ್ ವೆಲ್ ಮಾತ್ರ ಮಂಜೂರು ಮಾಡಿದ್ದಾರೆ. ಇದು ಸರ್ಕಾರದ ಬದ್ದತೆ ತೋರಿಸುತ್ತದೆ ಎಂದು ಟೀಕಿಸಿದರು.

  ಗ್ರಾಮಗಳ ಅಭಿವೃದ್ದಿಗೆ ನಾನು‌ ಸದಾ ಸಿದ್ದನಿದ್ದು ನಿಮ್ಮ ಸೇವೆಗೆ ಬದ್ಧನಾಗಿದ್ದೇನೆ. ಈ‌ ಸರ್ಕಾರದ‌‌ ನಿರ್ಲಕ್ಷ್ಯತನದ ನಡುವೆಯೂ ಅನುದಾನ ಮಂಜೂರು ಮಾಡಿಸಿಕೊಂಡು‌ ಭವನಗಳ ನಿರ್ಮಾಣ ಮಾಡುತ್ತಿದ್ದೇನೆ. ರಸ್ತೆ ನಿರ್ಮಾಣ ಹಾಗೂ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೂ ಆದ್ಯತೆ ನೀಡುತ್ತೇನೆ. ನಾನು ನಿಮ್ಮ ಕೆಲಸ ಮಾಡುತ್ತೇನೆ‌, ನೀವು ನನಗೆ ಅಶೀರ್ವಾದ ಮಾಡಿ. ಆದರೆ, ಜೂಜುಕೋರರು, ಅಕ್ರಮ ಮರುಳು  ಸಾಗಾಣಿಕೆ ಮಾಡುವವರನ್ನು ಮಾತ್ರ ಬೆಂಬಲಿಸಬೇಡಿ. ಅವರ ಕೈಗೆ ಅಧಿಕಾರ‌ ಕೊಡಬೇಡಿ, ಅವರಿಂದ ದೂರವಿರಿ ಎಂದು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ಸಿದ್ದುಗೌಡ ಪಾಟೀಲ್, ಶಿವರಾಜ್ ಪಾಟೀಲ್ ಕಲಗುರ್ತಿ, ಬಸವರಾಜ್ ಹೊಸಳ್ಳಿ, ಮಲ್ಲಪ್ಪ ಹೊಸಮನಿ, ಕೃಷ್ಣ ಕಟ್ಟಿಮನಿ, ರಾಕೇಶ್ ಕಟ್ಟಿಮನಿ, ಪ್ರವೀಣ್ ನಾಮದಾರ್ ಇತರರು ಇದ್ದರು.

ಗುರುವಾರ, ಫೆಬ್ರವರಿ 10, 2022

ರಾಯಚೂರು ಘಟನೆ: ಮೀಸಲು ಕ್ಷೇತ್ರದಿಂದ ಗೆದ್ದವರ ಮೌನ.

-ಜಗದೇವ ಎಸ್ ಕುಂಬಾರ.

ಚಿತ್ತಾಪುರ: 73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ. ಬಿಆರ್. ಅಂಬೇಡ್ಕರ್ ಅವರಿಗೆ ರಾಯಚೂರು ನ್ಯಾಯಾದೀಶರು ಅವಮಾನ ಮಾಡಿರುವ ಘಟನೆ ಖಂಡಿಸಿ ರಾಜ್ಯಾದ್ಯಂತಹ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಮೀಸಲು ಮತಕ್ಷೇತ್ರದಿಂದ ಗೆದ್ದು ಅಧಿಕಾರಕ್ಕೆ ಬಂದಿರುವ ಸಂಸದರು ಮತ್ತು ಶಾಸಕರು ಮೌನಕ್ಕೆ ಜಾರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ.

    ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಬಸವರಾಜ ಮತ್ತಿಮೂಡ, ಅವಿನಾಶ ಜಾಧವ್ ಅವರು ಮೀಸಲು ಮತಕ್ಷೇತ್ರಗಳಿಂದ ಗೆದ್ದು ಅಧಿಕಾರದಲ್ಲಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ಹಕ್ಕಿನಿಂದ ಗೆದ್ದವರು, ಡಾ. ಬಿಆರ್. ಅಂಬೇಡ್ಕರ್  ಅವರಿಗೆ ಮಾಡಿರುವ ಅಪಮಾನದ ಘಟನೆ ಖಂಡಿಸದೆ, ಮೌನಕ್ಕೆ ಶರಣಾಗಿರುವುದು ಎಷ್ಟರ ಮಟ್ಟಿಗೆ ಸರಿ.? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

     ಸಂಸದರು, ಶಾಸಕರ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದರೆ ಡಾ.ಅಂಬೇಡ್ಕರ್ ಅವರಿಗೆ ಆಗಿರುವ ಅವಮಾನದ ಘಟನೆ ಎಲ್ಲಿಯೂ ಸಹ ಖಂಡಿಸಿಲ್ಲ.  ಸಂಸದರು ಹಾಗೂ ಶಾಸಕರ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

    ಬಿಜೆಪಿ ಎಸ್ಸಿ ಮೋರ್ಚಾ ಸಹ ಡಾ.ಅಂಬೇಡ್ಕರ್ ಅವರ ಅವಮಾನದ ಘಟನೆ ಖಂಡಿಸದೇ, ಸಾರ್ವಜನಿಕರು ಹಾಗೂ ಸಂಘಟನೆಗಳು ಏರ್ಪಡಿಸಿದ ಪ್ರತಿಭಟನೆಗಳಲ್ಲಿ ಕಾಟಚಾರಕ್ಕೆ ಭಾಗಿಯಾಗುವ ಮೂಲಕ ಅಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ವರ್ತನೆ ತೋರಿದ್ದಾರೆ. ಆದರೆ, ಎಸ್ಸಿ ಮೋರ್ಚಾದ ಬಿಜೆಪಿ ಕಾರ್ಯಕರ್ತರು ತಾವು ಪ್ರತಿಭಟನೆಗಿಳಿಯದಿರುವುದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ

   ಅಂಬೇಡ್ಕರರಿಗೆ ಆದ ಅವಮಾನವನ್ನು ಖಂಡಿಸಿ ಮೀಸಲು ಮತಕ್ಷೇತ್ರದಲ್ಲಿನ ವಿವಿಧ ಸಂಘ ಸಂಘಟನೆಗಳಿಂದ ರಸ್ತೆಗಿಳಿದು ಪ್ರತಿಭಟನೆ ನಡೆಸಿದರೂ ಸಹ ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ವಿರುದ್ಧ ಇಲ್ಲಿವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಂಗಳವಾರ, ಜನವರಿ 25, 2022

ಯೋಗ ಮಾಡುವ ಮೂಲಕ ನಿರೋಗಿಯಾಗಿ:ಸಾಲಿಮಠ.

ವಾಡಿ: ಜೀವನದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದರ ಮೂಲಕ ನಿರೋಗಿಯಾಗಿ ಜೀವನ ನಡೆಸಲು ಸಾದ್ಯ ಎಂದು ಭಾರತ ಸ್ವಾಭಿಮಾನ ಟ್ರಸ್ಟನ ಜಿಲ್ಲಾ ಅದ್ಯಕ್ಷರ ಶಿವಾನಂದ ಸಾಲಿಮಠ ಹೇಳಿದರು.

ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾರತ ಸ್ವಾಭಿಮಾನ ಟ್ರಸ್ಟ, ಪತಾಂಜಲಿ ಯೋಗ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಯೋಗದಿಂದ ಆಜಾದಿಕೆ ಅಮೃತ ಮಹೋತ್ಸವದ ಅಂಗವಾಗಿ ಯೋಗದಿಂದ ಆರೋಗ್ಯ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕರೋನಾ ಬಂದ ಮೇಲೆ ಜನರಿಗೆ ಯೋಗದ ಮಹತ್ವ ಅರ್ಥವಾಗುತ್ತಿದೆ. ಇವತ್ತಿನ ಕಲುಷಿತ ಸಮಾಜದಲ್ಲಿ ದೀರ್ಘಕಾಲ ಆರೋಗ್ಯಯುತವಾಗಿ ಜೀವನ ಸಾಗಿಸಲು ಯೋಗ ಅತ್ಯಂತ ಅವಶ್ಯಕ. ಪಿಜ್ಜಾ, ಬರ್ಗರ್ ನಂತಹ ಜಂಕ್‌ಫುಡ್ ನಿಂದ ಚಿಕ್ಕ ವಯಸ್ಸಿನಲ್ಲೇ ಬರಬಾರದ ಖಾಯಿಲೆಗಳು ಬರುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಆಹಾರ ಪದ್ದತಿಯೂ ಬದಲಾಗಿರುವುದು ದುರಂತ.

ದೇಶಿಯ ಆಹಾರ ಪದ್ದತಿಯಲ್ಲಿ ರೊಟ್ಟಿ, ಚಪಾತಿ, ಕಾಳುಗಳು, ತರಕಾರಿ, ಮೊಸರು, ಹಣ್ಣುಗಳನ್ನು ಸೇವಿಸಿದರೆ ಖಾಯಿಲೆಗಳು ಬರುವುದಿಲ್ಲ. ಒಂದು ವೇಳೆ ಬಂದರೂ ನಾವು ನಿತ್ಯ ಮಾಡುವ ಯೋಗ, ಸೂರ್ಯ ನಮಸ್ಕಾರಗಳು, ಪ್ರಾಣಾಯಾಮಗಳು ನಮಗೆ ರೋಗ ಬರದಂತೆ ಮಾಡುತ್ತವೆ.ವಿದ್ಯಾರ್ಥಿಗಳು ಈಗಿನಿಂದಲೇ ಯೋಗಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ಆರೋಗ್ಯದ ಜೊತೆ ಜ್ಞಾಪಕ ಶಕ್ತಿಯು ವೃದ್ಧಿಸುವುದಲ್ಲದೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.

ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಯೋಗದ ಮೂಲಕ ಆರೋಗ್ಯದ ಅರಿವು ಮೂಡಿಸುವ ಅಗತ್ಯವಿದೆ. ಅನೇಕ ದುಶ್ಚಟಗಳಿಂದ ವಿದ್ಯಾರ್ಥಿಗಳು, ಯುವಕರು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯವಿಟ್ಟು ನಿಮ್ಮ ಮುಂದಿನ ಉತ್ತಮ ಆರೋಗ್ಯಯುತ ಬದುಕಿಗಾಗಿ ಯೋಗ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಂಚೂರು ಸವಿತಾ ಪೀಠದ ಶ್ರೀದರಾನಂದ ಸರಸ್ವತಿ ಸ್ವಾಮಿಗಳು,ಯೋಗ ಶಿಕ್ಷಕ ಮೋಹನ ಗಂಟಲಿ,ಶಿಕ್ಷಕ ಸಿದ್ಧಲಿಂಗ ಬಾಳಿ,ಶಿವಕುಮಾರ ಸರಡಗಿ, ಭೀಮಾಶಂಕರ ಬಮ್ಮನಳ್ಳಿ, ಸುಗುಣಾ ಕೋಳ್ಕೂರ, ಭುವನೇಶ್ವರಿ,ರಾಧಾ ರಾಠೋಡ, ಮಂಜುಳಾ ಪಾಟೀಲ, ವಿಜಯಲಕ್ಷ್ಮಿ ಬಮ್ಮನಳ್ಳಿ, ಇದ್ದರು.

ಸೋಮವಾರ, ಜನವರಿ 24, 2022

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.

 

ಚಿತ್ತಾಪುರ: ಇತ್ತೀಚಿಗೆ ಕರ್ನಾಟಕ ಸರ್ಕಾರ ನೇಮಕ ಮಾಡಿಕೊಂಡ ಪಿಎಸ್ಐ ನೇಮಕಾತಿಯಲ್ಲಿ ಶಶಿಧರ್ 44ನೇ ರ್ಯಾಂಕ್ ಪಡೆದು ನೇಮಕವಾಗಿದ್ದು ಮಗನ ಸಾಧನೆ ಕಂಡು ತಂದೆ-ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ತಾಲೂಕಿನ ದಿಗ್ಗಾಂವ್ ಗ್ರಾಮದ ಸರ್ಕಾರಿ ಶಿಕ್ಷಕರಾದ ದೇವಿಂದ್ರಪ್ಪ ಶಹಾಬಾದಕರ್ ತಾಯಿ ಕವಿತಾ ಎಂಬುವರ ಮಗ ಶಶಿಧರ್ ಎನ್ನುವರು ತಾಲೂಕಿನ ಶಿಶು ವಿಹಾರ ಪ್ರಾಥಮಿಕ ಮತ್ತು ಬೆಂಥನಿ ಪ್ರೌಢಶಾಲೆ 1ನೇ ರಿಂದ 10ನೇ ತರಗತಿವರಿಗೆ ಓದಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಯ ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಓದಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ನಂತರ ಬಿಸಿಎ ಪದವಿಯನ್ನು ಶರಣಬಸವೇಶ್ವರ ಪದವಿ ಕಾಲೇಜಿನಲ್ಲಿ ಮುಗಿಸಿ ಅಲ್ಲಿಯೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಮುಂದಿನ ಓದನ್ನು ನಿಲ್ಲಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತಹರಿಸಿ. ದಾರವಾಡ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿ ಸತತವಾಗಿ ಮೂರು ವರ್ಷಗಳಿಂದ ಕೋಚಿಂಗ್ ಪಡೆದು ಪರಿಶ್ರಮದಿಂದ ಮೊದಲ ಹಂತದ ಪಿಎಸ್ಐ ನೇಮಕಾತಿಯಲ್ಲಿ ಸ್ವಲ್ಪದರಲ್ಲಿಯೇ ವಿಫಲರಾಗಿದ್ದರು. 

 ಸೋಲೆ ಗೆಲುವಿನ ಮೆಟ್ಟಲು ಎಂದು ತಿಳಿದು ಕೋಚಿಂಗ್ ಅನ್ನು ಮುಂದುವರೆಸಿ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ನಿಂತು ಪಿಎಸ್ಐ ಹುದ್ದೆ ಕನಸು ನನಸು ಮಾಡಿಕೊಂಡು ಯಶಸ್ವಿಯಾಗಿದ್ದಾರೆ.

 ಮಗನ ತಂದೆ ದೇವಿಂದ್ರಪ್ಪ ಶಹಾಬಾದಕರ್ ಅವರು ಸಂಜೆವಾಣಿ ಪತ್ರಿಕಾ ವರದಿಗಾರರ ಜೊತೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ನನ್ನ ಮಗ 44ನೇ ರ್ಯಾಂಕ್ ನೊಂದಿಗೆ ನೇಮಕಾತಿ ಹೊಂದಿದ್ದು ವರದಾನವಾಗಿದೆ. 23ನೇ ವಯಸ್ಸಿಗೆ ಮಗನ ಸಾಧನೆಗೆ ಗುರು-ಹಿರಿಯರು ಕುಟುಂಬಸ್ಥರು,  ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಭಾನುವಾರ, ಜನವರಿ 23, 2022

ನಾಮಫಲಕ ವಿಲ್ಲದ ಅಬಕಾರಿ ಇಲಾಖೆ.

ಚಿತ್ತಾಪುರ: ಅಬಕಾರಿ ಇಲಾಖೆಗೆ ನಾಮಫಲಕ ವಿಲ್ಲದ ಕಾರಣ ಜನರ ಗೊಂದಲಕ್ಕೆ ಕಾರಣವಾಗಿದೆ.

 ಪಟ್ಟಣದ ಬಸ್ ಘಟಕದ ಹತ್ತಿರ ಬಿಲ್ಡಿಂಗ್ ಒಂದರಲ್ಲಿ ಅಬಕಾರಿ ಇಲಾಖೆ ಇದ್ದು ಈ ಮುಂಚೆ ಚಿಕ್ಕದೊಂದು ಹಳೆಯ ನಾಮಫಲಕ ವಿತ್ತು ಆದರೆ ಈಗ ಆ ನಾಮಫಲಕ ಕೂಡ ಇಲ್ಲ ಆದ್ದರಿಂದ ಅಬಕಾರಿ ಇಲಾಖೆಗೆ ಬರುವ ಜನರಿಗೆ ಅಬಕಾರಿ ಇಲಾಖೆ ಕಚೇರಿ ಯಾವುದು ಎಂದು ರಸ್ತೆಯಲ್ಲಿ ನಿಂತು ಕೇಳುವ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಿದ್ದಾರೆ.

 ಈಗಲಾದರೂ ಅಬಕಾರಿ ಇಲಾಖೆಯವರು ಎಚ್ಚೆತ್ತುಕೊಂಡು ನಾಮಫಲಕ ಹಾಕುವಲ್ಲಿ ಮುಂದಾಗುತ್ತಾರೆ ಕಾದುನೋಡಬೇಕಾಗಿದೆ

ಗ್ರಾಪಂ ಅಧ್ಯಕ್ಷನಿಗೆ ಹೊಡೆದ ಅಬಕಾರಿ ಸಬ್ ಇನ್ಸ್ಪೆಕ್ಟರ್.

ಚಿತ್ತಾಪುರ: ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಸಂಬಂಧಿಸಿದಂತೆ ತಾಲೂಕಿನ ಬೀಮನಹಳ್ಳಿ ಗ್ರಾಮದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆಯಲು ಹೋಗಿದ್ದ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಜಟ್ಟೆಪ್ಪ ಎನ್ನುವರು ಭೀಮನಹಳ್ಳಿ ಗ್ರಾಪಂ, ಅಧ್ಯಕ್ಷ ಅಶೋಕ್ ಕಾಸಲ್ ಎಂಬುವರಿಗೆ ಹೊಡೆದಾಗ ಗ್ರಾಮಸ್ಥರು ಆಕ್ರೋಶ ಗೊಂಡಾಗ ಅಬಕಾರಿ ಇನ್ಸ್ಪೆಕ್ಟರ್ ಓಡಿಹೋದ ಘಟನೆ  ಶನಿವಾರ ನಡೆದಿದೆ.

ಚಿಂಚೋಳಿ ಅಬಕಾರಿಗೂ ನಮ್ಮ ಗ್ರಾಮಕ್ಕೂ ಏನು ಸಂಬಂಧ ಚಿತ್ತಾಪುರ ಅಬಕಾರಿ ಇಲಾಖೆಯವರು ಬಂದು ಕೇಳಲಿ. ಗ್ರಾಪಂ ಅಧ್ಯಕ್ಷರಿಗೆ ಅವರು ಯಾಕೆ ಹೊಡೆಯಬೇಕು ಎಂದು ಪ್ರಶ್ನಿಸಿದರು ಗ್ರಾಮಸ್ಥರ ಆಕ್ರೋಶಗೊಂಡ ಪರಿಣಾಮ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಓಡಿಹೋಗಿದರು ಉಳಿದ ಅಬಕಾರಿ ಸಿಬ್ಬಂದಿ ವರ್ಗದವರಿಗೆ ಹಾಗೂ ಅವರ ವಾಹನಗಳನ್ನು ಗ್ರಾಮದಿಂದ ಹೋಗದಂತೆ  ತಡೆದು ಮುಳ್ಳು ಕಂಟಿ ಹಚ್ಚಿ ವಾಹನಗಳಿಗೆ ಗಾಳಿ ಬಿಟ್ಟು ತಡೆದು ಗ್ರಾಮ ಪಂಚಾಯಿತಿಗೆ ಕರೆಸಿಕೊಂಡು ಗ್ರಾಮಸ್ಥರು ಓಡಿಹೋದ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬರಬೇಕೆಂದು ಪಟ್ಟು ಹಿಡಿದರು ಕೆಲವೊತ್ತು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ, ಹಾಗೂ ಅಬಕಾರಿ ಇಲಾಖೆಯ ಉಪ ಅಧೀಕ್ಷಕರು ವಿಜಯಕುಮಾರ್ ರಾಂಪುರೆ, ಅಬಕಾರಿ ಸಿಪಿಐ ಶರಣಗೌಡ ಬಿರಾದರ್, ಚಿತ್ತಾಪುರ ಅಬಕಾರಿ ಪಿಎಸ್ಐ ರಮೇಶ್ ಬಿರಾದರ್, ಆಗಮಿಸಿ ಪಂಚಾಯತ್ ಕಚೇರಿಯಲ್ಲಿ  ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಮ್ಮೆನೂರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್ ಸುಣಗಾರ್,   ಹಾಗೂ ಶಿವಾಜಿ ಭೂವಿ, ಬಸವರಾಜ್ ಹಾದಿಮನಿ, ಮೌನೇಶ್ ಹೊಸಳ್ಳಿ, ರಾಜಣ್ಣ ಕಂಬಾರ್, ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಚಿಂಚೋಳಿ ಸಬ್ ಇನ್ಸ್ಪೆಕ್ಟರ್ ಜಟ್ಟಪ್ಪ ಅವರಿಗೆ ಫೋನ್ ಮಾಡಿ ಭೀಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕಾಸಲ್ ಅವರಿಗೆ ಫೋನಿನಲ್ಲಿ ಕ್ಷಮೆ ಯಾಚಿಸಿ ಸಂಧಾನ ಮಾಡಿಸಿದರು.

 ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ  ಮಹಿಳೆಯನ್ನು ವಶಕ್ಕೆ ಪಡೆಯಲು ಅಬಕಾರಿ ಇಲಾಖೆ ಯವರು ಬಂದಿದ್ದರೆ ಮಹಿಳಾ ಅಬಕಾರಿ ಅಧಿಕಾರಿಯವರನ್ನು ಕರೆತಂದು ವಿಚಾರಣೆ ನಡೆಸಿ ವಶಕ್ಕೆ ಪಡೆಯಬೇಕಾಗಿತ್ತು ಅಥವಾ ಗ್ರಾಮ್ ಪಂಚಾಯತ್ ಪಿಡಿಓ, ಅಧ್ಯಕ್ಷರ ಮಾಹಿತಿ ಪಡೆಯಬೇಕಿತ್ತು ಆದರೆ ಏಕಾಏಕಿ ಗ್ರಾಮದ ಮಹಿಳೆಯ ಮನೆಗೆ ನುಗ್ಗಿ ಕಳ್ಳಬಟ್ಟಿ ಸಾರಾಯಿ ತುಂಬಿದ ಕೊಡಗಳನ್ನು ಚೆಲ್ಲಿ ಗಾಡಿಯಲ್ಲಿ ಕೂಡು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಇದು ಅವರು ಮಾಡಿದ ದೌರ್ಜನ್ಯ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

 ಈ ಗಲಾಟೆಗೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳಿಗೆ ಕೇಳಿದರೆ ಮಾಹಿತಿ ನೀಡಲಿಲ್ಲ ನಮಗೆ ಮಾಹಿತಿ ನೀಡುವ ಹಕ್ಕು ಇಲ್ಲ ಜಿಲ್ಲಾ ಅಬಕಾರಿ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆಯಿರಿ ಎಂದು ಹರುಕು ಉತ್ತರ ನೀಡಿದ್ದಾರೆ.

 ಇಂತಹ ಘಟನೆಗೆ ಸಂಬಂಧಿಸಿದಂತೆ ಒಂದು ಹೇಳಿಕೆ ನೀಡದ ಅಧಿಕಾರಿಗಳು ಇನ್ನು ಕರ್ತವ್ಯ ಹೇಗೆ ನಿರ್ವಹಿಸುತ್ತಾರೆ ಜನಸಾಮಾನ್ಯರ ಜೊತೆ ಹೀಗೆ ವರ್ತಿಸುತ್ತಾರೆ ಎಂಬುದೇ ಒಂದು ಸವಾಲಾಗಿದೆ.

-ಅಶೋಕ್ ಕಾಸಲ್ ಗ್ರಾಪಂ, ಅಧ್ಯಕ್ಷರು ಭೀಮನಹಳ್ಳಿ

ಮಂಗಳವಾರ, ಜನವರಿ 18, 2022

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಜೆ,ಟಿವಿ ಕನ್ನಡ ಸುದ್ದಿ(ಜ,18)

ಚಿತ್ತಾಪುರ: ತಾಲ್ಲೂಕಿನಿಂದ ರಾವೂರ ಗ್ರಾಮಕ್ಕೆ ಹೋಗುವ ನಾಗಾವಿ ನಾಡಿಗೆ ಸ್ವಾಗತ ಕೋರುವ ಕಮನ ಹತ್ತಿರ ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಾಯಂಕಾಲ ವೇಳೆ ಸಂಭವಿಸಿದೆ.

  ಪಾಳೆದಾರ್ ಹೊಲದಲ್ಲಿ ತೊಗರಿ ಹೊರಿಕಟ್ಟಲು ಹೋಗಿದ್ದ ಕೂಲಿಕಾರರು ಕೆಲಸ ಮುಗಿಸಿಕೊಂಡು ಎತ್ತಿನ ಗಾಡಿಯಲ್ಲಿ ಚಿತ್ತಾಪುರ ಕಡೆ ಬರುವಾಗ ಹಿಂಬದಿಯಿಂದ ಪಿಕಪ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿಯು ರಸ್ತೆಯ ಪಕ್ಕಕ್ಕೆ ಉರುಳಿಬಿದ್ದ ರಿಂದ  8 ಜನರು ಗಾಯಗೊಂಡಿದ್ದಾರೆ.

  ಪಿಕಪ್ ಗಾಡಿಯ ಡ್ರೈವರ್ ಪರಾರಿಯಾಗಿದ್ದಾನೆ.ಸ್ಥಳೀಯರು ಕೂಡಲೇ ಗಾಯಗೊಂಡ ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಎತ್ತಿನ ಬಂಡಿ ಓಡಿಸುತ್ತಿದ್ದ ಬಸವರಾಜ್ ಡೆಂಗಿ, ಬಿಸಾಬಿ ಮುಜಾರ್, ಲಲಿತಾ ಬೀರಪ್ಪ ಪೂಜಾರಿ, ಅಬ್ದುಲ್ಲಾಬಿ ಗುಡಸಾಬ, ರವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

  ರಜಿಯಾಬಿ ಇಸ್ಮಾಯಿಲ್, ಕುತೀಜಾ ಬೇಗಂ ಮಹೇಬೂಬ ಸಾಬ್, ಶಕೀಲಾ ಸಲಿಂಮೀಯಾ, ಮೀನಾಕ್ಷಿ ಮಲ್ಲಿಕಾರ್ಜುನ ತೆಂಗಳೇರ ಎಂಬ ಕೂಲಿಕಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಬುಧವಾರ, ಡಿಸೆಂಬರ್ 8, 2021

ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.


ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ ರಾಜ್ ಇಲಾಖೆಗಳ ನಿರ್ಲಕ್ಷತನ.


-ಜಗದೇವ ಎಸ್ ಕುಂಬಾರ

ವಾಡಿ: ಶತ್ರು ಸೈನಿಕರು ಒಳ ನುಗ್ಗುವುದನ್ನು ಹಾಗೂ ದಾಳಿಗೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಗ್ರಾಮದ, ಜನರ ರಕ್ಷಣೆಗಾಗಿ ಗ್ರಾಮದಲ್ಲಿ ಹುಡೆ ಮತ್ತು ಊರ ಮುಂದೆ ಅಗಸಿನಿ ರ್ಮಿಸಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತಿದೆ ಆದರೆ ಅಂದು ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.

ಲಕ್ಷ್ಮಿಪುರವಾಡಿ ಈಗಿನ (ಗಾಂಧಿನಗರ) ಗ್ರಾಮದಲ್ಲಿ ಸುಮಾರು ವರ್ಷಗಳ ಹಳೆಯ ಹುಡೆ, ಅಗಸಿ ಇದ್ದು ಈಗ ಅವು ಅಳಿವಿನ ಅಂಚಿನಲ್ಲಿ ಇವೆ ಎಂದರೆ ಇದಕ್ಕೆಲ್ಲ ಕಾರಣ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳ ನಿರ್ಲಕ್ಷ್ಯತನವೇ ಎಂಬುವುದು ತೋರುತ್ತಿದೆ.


ಈ ಭಾಗದಲ್ಲಿ ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು, ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ರಾಷ್ಟ್ರಕೂಟರು ಈಗಿನ ಮಳಖೇಡ (ಮಾನ್ಯಖೇಟ) ತಮ್ಮ ರಾಜಧಾನಿಯನ್ನಾಗಿ ಸಿಕೊಂಡಿದ್ದ ಸಮಯದಲ್ಲಿ ತಾಲೂಕು ಕೇಂದ್ರ ಸೇಡಂನಲ್ಲಿ ರಾಣಿವಾಸ, ಸಮೀಪದ ನೀಲಹಳ್ಳಿಯಲ್ಲಿ ಖಜಾನೆಯು ಇತ್ತು. ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಟಂಕಣಶಾಲೆ ದಂಡೋತಿಯಲ್ಲಿ ಸೈನ್ಯದ ವಾಸಸ್ಥಳವಿತ್ತು. ಅಷ್ಟೇ ಅಲ್ಲದೆ ನಾಗವಿ ಎಲ್ಲಮ್ಮ ದೇವಾಲಯ ಹಾಗೂ ಹೊನಗುಂಟಾ ಚಂದ್ರಲಾ ಪರಮೇಶ್ವರಿ ದೇವಾಲಯ, ಮಹಬೂಬ್ ಸುಭಾನಿ ದರ್ಗಾ, ಚರ್ಚ್ ಗಳು ಸೇರಿದಂತೆ ಅನೇಕ ದೇವಾಲಯಗಳು ಒಳಗೊಂಡು ಶಕ್ತಿಪೀಠಗಳಾಗಿದ್ದವು.

ನಮ್ಮ ಭಾಗದ ಸಂಪತ್ತನ್ನು ಕೊಳ್ಳೆ ಹೊಡೆಯಬಾರದು ನಮ್ಮ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶದಿಂದ ಹುಡೆ ನಿರ್ಮಿಸುತ್ತಿದ್ದರು

ಇವುಗಳ ಎತ್ತರ 60 ಅಡಿವೆರೆಗೆ ಇದ್ದು, ನಾಲ್ಕು ದಿಕ್ಕುಗಳಿಗೂ ಅಥವಾ ಊರಿಗೆ ಒಂದು ನಿರ್ಮಿಸಿ. ಆಳೆತ್ತರ ಬಿಟ್ಟು ಕೆಳಗೆ ಮಣ್ಣು ತುಂಬಿರುತ್ತಿದ್ದರು. ವೀಕ್ಷಿಸುವುದಕ್ಕಾಗಿ ಸುತ್ತ ನಾಲ್ಕೂ ಗೋಡೆಗಳಿಗೆ ಸಣ್ಣ ಕಿಂಡಿಗಳನ್ನು ಬಿಟ್ಟಿರುತ್ತಿದ್ದರು. ಇದರ ಮೇಲೆ ಕಾವಲುಗಾರರು ಇರುತ್ತಿದ್ದರು. ಇವರ ಕಾಯಕವಿಷ್ಟೇ; ನಾಲ್ಕು ದಿಕ್ಕುಗಳನ್ನು ಸದಾ ಗಮನಿಸುವುದು. ದಾಳಿಗೆಂದು ಬರುವ ಶತ್ರು ಸೈನಿಕರನ್ನು ಸದೆ ಬಡೆಯಲು ರಾಜನಿಗೆ ಮಾಹಿತಿ ರವಾನಿಸುವುದಾಗಿತ್ತು.

ಇಂತಹ ಇತಿಹಾಸ ಸಾರುವ, ನಮ್ಮನ್ನು ರಕ್ಷಿಸುತ್ತಿದ್ದ ಹುಡೆಗಳು ಇಂದು ಮಾಯವಾಗುತ್ತಿವೆ. ಲಕ್ಷ್ಮಿಪುರವಾಡಿ ಗ್ರಾಮದಲ್ಲಿ ಹುಡೆ, ಅಗಸಿ ಅವಶೇಷಗಳು ಉಳಿದಿದ್ದು, ಹಾಳು ಬಿದ್ದ ಮನೆಯಂತೆ ಗೋಚರಿಸುತ್ತಿವೆ. ಹುಡೆ ಸುತ್ತಮುತ್ತ ಮನೆಗಳು ನಿರ್ಮಾಣವಾಗಿದ್ದು ಈಗ ಹುಡುಗಿ ಶಿಥಿಲಗೊಂಡು ಬೀಳುವ ಪರಿಸ್ಥಿತಿ ಬಂದೊದಗಿದೆ ಅಲ್ಲಿಯ ಸುತ್ತಮುತ್ತಲಿನ ಮನೆಯ ಜನರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಒಡೆಯ ಸುತ್ತಮುತ್ತ ಹಾಗೂ ಅಗಸಿ ಪಕ್ಕದಲ್ಲಿ ಸಣ್ಣ ಮಕ್ಕಳು ಆಟ ಆಡುತ್ತಾರೆ ಹೀಗಾಗಿ ಅನಾಹುತಗಳಿಗೆ ಹುಡೆ ಹಾಗೂ ಅಗಸಿ ಕಾರಣವಾಗುವುದೇ ಯಾವುದೇ ರೀತಿಯ ಸಂದೇಹವಿಲ್ಲ ಹೀಗಿದ್ದರೂ ಸಹ  ಅಭಿವೃದ್ಧಿ ಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಮುಂದಿನ ಸಮುದಾಯಕ್ಕೆ ಇದರ ಮಹತ್ವ ತಿಳಿಸುವ ಕೆಲಸಕ್ಕೆ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳು ಮುಂದೆ ಬಾರದೇ ಇರುವುದು ವಿಷಾದ ಮೂಡಿಸಿದೆ.


ಪ್ರಾಚೀನ ಕಾಲದದಲ್ಲಿ ನಿರ್ಮಾಣಗೊಂಡ ಕೋಟೆ, ದೇವಸ್ಥಾನ, ಊರ ಅಗಸಿಗಳು ಹಾಗೂ ಹುಡೆಗಳ  ರಕ್ಷಣೆ ಅಗಬೇಕು. ನಮ್ಮ ಇತಿಹಾಸ ತಿಳಿಯಲು ಇದರಿಂದ ಸಾಧ್ಯವಾಗುತ್ತದೆ. ಇದೇ ರೀತಿ ಅವಸಾನದತ್ತ ಸಾಗಿದರೆ ಮುಂದಿನ ಸಮುದಾಯಕ್ಕೆ ಇತಿಹಾಸ ಅರಿಯಲು ಸಾಧ್ಯವಾಗದು. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಇಂತಹ ಹುಡೆಗಳನ್ನು ಸಮೀಕ್ಷೆ ಮಾಡಿ, ರಕ್ಷಿಸಬೇಕು ಎಂದರು.

-ಡಾ.ಮಲ್ಲಿನಾಥ ತಳವಾರ್, ಸಾಹಿತಿಗಳು ರಾವೂರ್.


ನಮ್ಮ ಗ್ರಾಮದಲ್ಲಿರುವ ಹಳೆಯ ಕಾಲದ ಹುಡೆ ಮತ್ತು ಅಗಸಿ ಶಿಥಿಲಗೊಂಡು ಬಿದ್ದಿವೆ, ಅವುಗಳ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಮುಂದಾಗಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಭಾಗರಾಜ್, ತಿಮ್ಮಯ್ಯ ಶಿರವಾಳ್, ತಿಮ್ಮಯ್ಯ ಸೇಡಂ, ಮತ್ತು ಯುವ ಮುಖಂಡ ಯುವರಾಜ್ ರಾಠೋಡ್ ಆಗ್ರಹಿಸಿದ್ದಾರೆ.


ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು 3 ವರ್ಷದ ಹಿಂದೆಯೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿರುವೇ, ಹಾಗೂ ಇದು ಪುರಾತನ ಇಲಾಖೆಗೆ ಸಂಬಂಧಿಸಿದ್ದು ಆಗಿದ್ದು ಆದರೂ ಸಹ ಅದೇ ರೀತಿಯ ಅನಾಹುತ ಆಗದೇ ಇರಲಿ ಎಂದು ಮುನ್ನೆಚ್ಚರಿಕೆಗಾಗಿ ಪಂಚಾಯತ್ ವತಿಯಿಂದ ಸುತ್ತಮುತ್ತಲಿನ ಮನೆಗಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ಪಂಚಾಯತ್ ವತಿಯಿಂದ ಮಾಡಬಹುದಾದ ಕೆಲಸ ಮಾಡುತ್ತೇವೆ ಎಂದರು

- ಕಾವೇರಿ ರಾಠೋಡ್. ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ರಾವೂರ.

ಭಾನುವಾರ, ನವೆಂಬರ್ 21, 2021

ಕಸಾಪ ಚುನಾವಣೆ: ಬಿರುಸಿನಿಂದ ನಡೆದ ಮತದಾನ.

ಚಿತ್ತಾಪುರ: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಬೆಳಗ್ಗೆ 8 ಗಂಟೆಯಿಂದಲೇ ಬಿರುಸಿನಿಂದ ಮತದಾನ ಆರಂಭಗೊಂಡಿದೆ.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ನಡೆಯುತ್ತಿರುವ ಕಸಾಪ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು.ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಪರಿಷತ್ತು ಕೊಟ್ಟಿರುವ ಗುರುತಿನ ಚೀಟಿ, ಆಧಾರ್‌ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸರ್ಕಾರದ ಮಾನ್ಯತೆ ಹೊಂದಿರುವ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಲೂಕಿನಲ್ಲಿ ಒಟ್ಟು 439 ಮತದಾರರಲ್ಲಿ 12 ಗಂಟೆ ಸಮಯದವರೆಗೆ 124 ರಷ್ಟು ಮತದಾನ ಆಗಿದೆ ಎಂದು ಕಸಾಪ ತಾಲೂಕು ಚುನಾವಣಾ ಅಧಿಕಾರಿ ಮೋಹನ್ ರೆಡ್ಡಿ ತಿಳಿಸಿದ್ದಾರೆ.

11ಗಂಟೆಯಿಂದ ಕೆಲವೊತ್ತು ಮಳೆಸುರಿದರಿಂದ ಮತದಾನಕ್ಕೆ ಅಡ್ಡಿ ಉಂಟಾಗಿತ್ತು ಆದರೂ ಸಹ ಮತದಾರರು ಕ್ರುಷರ್ ನಲ್ಲಿ ಬಂದು ಮತದಾನ ಮಾಡಿದರು.

ಈ ಚುನಾವಣೆಯಲ್ಲಿ ರಾಜ್ಯಾದ್ಯಂತ 3 ಲಕ್ಷಕ್ಕೂ ಅಧಿಕ ಮಂದಿ ಮತದಾರರಿದ್ದಾರೆ. ಸುಮಾರು 410 ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಮಹೇಶ್ ಜೋಶಿ, ಮ.ಚಿ ಕೃಷ್ಣ, ವ.ಚ ಚನ್ನೇಗೌಡ, ಸಿ.ಕೆ ರಾಮೇಗೌಡ, ಸಂಗಮೇಶ ಬಾದವಾಡಗಿ, ರಾಜಶೇಖರ ಮುಲಾಲಿ, ಬಾಡದ ಭದ್ರಿನಾಥ್, ಬಸವರಾಜ ಶಿ. ಹಳ್ಳೂರ, ಶಿವರಾಜ ಪಾಟೀಲ, ಸರಸ್ವತಿ ಶಿವಪ್ಪ, ವೈ ರೇಣುಕಾ,ಕೆ. ರತ್ನಾಕರ ಶೆಟ್ಟಿ, ಪ್ರಮೋದ್ ಹಳಕಟ್ಟಿ, ಕೆ. ರವಿ ಅಂಬೇಕರ, ಮಾಯಣ್ಣ, ಸುಧೀಂದ್ರರಾವ್, ಸೇರಿದಂತೆ ರಾಜ್ಯಾದ್ಯಕ್ಷ ಸ್ಥಾನಕ್ಕಾಗಿ 21 ಮಂದಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಮಲಪ್ಪ ಹೊಸಮನಿ, ಬಿ.ಎಚ್ ನಿರಗುಡಿ, ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ವಿಶ್ವನಾಥ್ ಭಕರೆ, ವೀರಭದ್ರ ಸಿಂಪಿ 5 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ಭಾನುವಾರ ಸಂಜೆ ಘೋಷಣೆ ಆಗಲಿದೆ. ರಾಜ್ಯಾಧ್ಯಕ್ಷ ಸ್ಥಾನದ ಫಲಿತಾಂಶ 24 ಕ್ಕೆ ಘೋಷಣೆ ಆಗಲಿದೆ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...