ಜನತೆಯ ಸುದ್ದಿ ವಾಹಿನಿ

ಗುರುವಾರ, ಸೆಪ್ಟೆಂಬರ್ 12, 2024

ಉದ್ದು ಬೆಳೆ ಹಾನಿ, ಪರಿಹಾರಕ್ಕೆ ರೈತ ಸಂಘ ಒತ್ತಾಯ.

ಚಿತ್ತಾಪುರ: ಸತತವಾಗಿ ಸುರಿದ ಮಳೆಯಿಂದಾಗಿ ಉದ್ದು ಬೆಳೆ ಸಂಪೂರ್ಣ ನೆಲಕಚ್ಚಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದರು.
ತಾಲೂಕಿನ ಬಂಕಲಗಿ ಗ್ರಾಮದ ಸಾಕಷ್ಟು ರೈತರು ಉದ್ದು ಹೆಸರು ಬೆಳೆ ಬೆಳೆದಿದ್ದು, ಈಗ ಸಾದ್ಯಕ್ಕೆ ಸತತವಾಗಿ ಸುರಿದ ಮಳೆಗೆ ಉದ್ದು ಬೆಳೆ ಸಂಪೂರ್ಣ ನೆಲಕಚ್ಚಿದ್ದು. ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ವಿಕ್ಷಣೆಗೆ ಬಂದಿಲ್ಲ ಎಂದು ನಿರೂಪಿಸಿ ಕೂಡಲೆ ಕೇಂದ್ರ ರಾಜ್ಯ ಸರ್ಕಾರ ರೈತರ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ನೀಡಬೇಕು ಎಂದರು.

ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಮಲಬೋ, ಸಣ್ಣ ಅಯ್ಯಪ್ಪ ಪೂಜಾರಿ, ಭೀಮರಾಯ ಚಿತ್ತಾಪುರ, ಮಲ್ಲಪ್ಪ ಸುಬೆದರ, ಅರಣಪ್ಪ ದೋಡ್ಡಮನಿ, ಹುಸೆನಪಾಷ, ಹಣಮಂತ ಮೂಲಿಮನಿ, ಸೇರಿದಂತೆ ಇತರರು ಇದ್ದರು.

ಮಕ್ಕಳ ಪ್ರತಿಭೆಗೆ ಪ್ರತಿಭಾ ಕಾರಂಜಿ ಸಹಾಯಕ.

ಚಿತ್ತಾಪುರ: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಾಯಕವಾಗಲಿದ್ದು ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವಿವಿದ ಪ್ರತಿಭೆಗಳನ್ನು ಕಾರಂಜಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸುತ್ತಿರುವದು ಶ್ಲಾಂಘನೀಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಹೇಳಿದರು

ಪಟ್ಟಣದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಿತ್ತಾಪುರ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪಶ್ಚಿಮ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವ ಹಾಗೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ 2002ರಲ್ಲಿ ಸರಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜಾರಿಗೆ ತಂದಿದೆ ಆದ್ದರಿಂದ ಮಕ್ಕಳು ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಗ್ರ ವ್ಯಕ್ತಿತ್ವ ವಿಕಸನವನ್ನು ಸಾಧಿಸುತ್ತಾರೆ ಎಂದು ಹೇಳಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕವಿತಾ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಹೀಗಾಗಿ ಮಕ್ಕಳು ಯಾವುದಕ್ಕೂ ಹೆದರಬಾರದು ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕಬೇಕು ಎಂದು ಹೇಳಿದರು.

ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು,ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಬಿಆರ್.ಪಿ ಜಾಫರ್, ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿದರು.

ಮುಖ್ಯಗುರುಗಳಾದ ಶರಣಬಸಪ್ಪ ಬೊಮ್ಮನಹಳ್ಳಿ ದೇವಿಂದ್ರಪ್ಪ ಇಮಡಾಪೂರ, ದೇವಿಂದ್ರಪ್ಪ ಶಹಾಬಾದಕರ್, ಎಲ್ಎಲ್ಎಫ್ ಸಂಯೋಜಕ ಸಂತೋಷ, ಮಲ್ಲಿನಾಥ, ಶೈಲಜಾ ಹಲಸೂರು, ದೇವಿಂದ್ರಪ್ಪ, ನರಸಪ್ಪ ಚಿನ್ನಾ ಕಟ್ಟಿ, ವಿಷ್ಣುವರ್ಧನ್ ರೆಡ್ಡಿ, ನಾಗರಾಜ ಕುಲಕರ್ಣಿ, ವಿರೇಶ ಕರದಾಳ, ಜಗದೇವ ಕುಂಬಾರ, ಸೇರಿದಂತೆ ಇತರರು ಇದ್ದರು. ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ಮುಖ್ಯಗುರು ಆದಪ್ಪ ಬಗಲಿ ನಿರೂಪಿಸಿ ವಂದಿಸಿದರು.

ಬುಧವಾರ, ಜನವರಿ 31, 2024

ಇಂದು ಮಡಿವಾಳ ಮಾಚಿದೇವರ ಜಯಂತಿ.




ಚಿತ್ತಾಪುರ: ರಾಜ್ಯಾದ್ಯಂತ ಇಂದು ಫೆಬ್ರವರಿ ೧,ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು  ಆಚರಿಸಲಾಗುತ್ತಿದೆ.

ಪಟ್ಟಣದ ತಹಸೀಲ್ ಕಾರ್ಯಾಲಯದಲ್ಲಿ ನಡೆಯಲಿರುವ  ಮಡಿವಾಳ ಮಾಚಿದೇವರ ಜಯಂತಿಗೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಡಿವಾಳ ಸಮಾಜದ ಮುಖಂಡ ಮಲ್ಲಿನಾಥ ಮಡಿವಾಳ ವಿನಂತಿಕೊಂಡಿದ್ದಾರೆ.

ವಚನ ಸಾಹಿತ್ಯ ರಕ್ಷಣೆಯ ದಂಡನಾಯಕರೆಂದೇ ಮಾಚಿದೇವರನ್ನು ಕರೆಯುತ್ತಾರೆ. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅನುಪಮವಾದದ್ದು. ಶರಣ ಸಮೂಹವನ್ನು ರಕ್ಷಿಸಿ, ವಚನ ಸಾಹಿತ್ಯವನ್ನು ಉಳವಿಗೆ ತಲುಪಿಸಿದ ಮಹಾನ್ ದಂಡನಾಯಕನೇ ಮಾಚಿದೇವ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು. ಹೀಗಾಗಿ ಮುಂಬರುವ ದಿನಗಳಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಭವನ ನಿರ್ಮಾಣವಾಗಲಿ ಅವರ ಆದರ್ಶ ಪತ್ರಿಯೊಬ್ಬರಿಗೂ ಮುಟ್ಟುವ ಕೆಲಸ ಆಗಲಿ ಎಂಬುದು ನನ್ನ ಆಸೆ ನುಡಿದಿದ್ದಾರೆ.

ಶನಿವಾರ, ಜನವರಿ 20, 2024

ಅಸುರರು ಸಿನಿಮಾದ ಪೋಸ್ಟರ್ ಬಿಡುಗಡೆ.

ರಾಯಚೂರು:  ಮಕರ ಸಂಕ್ರಾಂತಿ ಹಬ್ಬದಂದು ಅಸುರರು ಸಿನಿಮಾದ ಪೋಸ್ಟರ್ ಅನ್ನು ಹಿರಿಯ ಕಲಾವಿದರಾದಂತಹ ಎಂ ಕೆ ಸುಂದರ್ ರಾಜ್ ಹಾಗೂ ಅವರ ಧರ್ಮಪತ್ನಿಯವರ ಸಾರಥ್ಯದಲ್ಲಿ ಬಿಡುಗಡೆ ಮಾಡಲಾಯಿತು.

ವಿಶೇಷ ಹಾಗೂ ವಿಸ್ಮಯ ಕಥಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ ಅಸುರರು ಸಿನಿಮಾ ಜನರಲ್ಲಿ ಕುತೂಹಲ ಮೂಡಿಸುವಂತಹ ನೈಜನತೆಯ ವಿಶೇಷತೆಯ ಕಥಾಂದರವನ್ನು ಹೊಂದಿದೆ ಎನ್ನಲಾಗಿದೆ  ಈ ಸಿನಿಮಾ ಪ್ರತಿ ಮನುಷ್ಯನಲ್ಲೂ ಇರುವಂತಹ ಸುರ ಅಸುರರ ಪ್ರತಿರೂಪವಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ಹಿರಿಯ ಕಲಾವಿದರಾದ ಎಂಕೆ ಸುಂದರ್ ರಾಜ್ ರವರು ಮಾತನಾಡಿ ವಿಶೇಷ ಕಥ ಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ ತಂಡಕ್ಕೆ ಅರಸಿ ಹಾರೈಸಿದ್ದಾರೆ ಸಿನಿ ಪ್ರೇಕ್ಷಕನ ಮನಗೆಲ್ಲಲು ತಯಾರಾಗಿರುವ ಅಸುರರು ಸಿನಿಮಾ ಅದ್ಭುತ ಯಶಸ್ಸು ಕಾಣುವುದಾಗಿ ಹಾಗೂ ಹೊಸ ಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬಂದು ಚಿತ್ರರಂಗದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ  ಬೆಳೆಸಲಿ ಮತ್ತು ಅಸುರರು ಸಿನಿಮಾ ಯಶಸ್ವಿ ಪ್ರದರ್ಶನಗೊಂಡು ಜಯಭೇರಿ ಬಾರಿಸಲಿ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜ್ ಬಹದ್ದೂರ್, ನಿರ್ಮಾಪಕರಾದ ರಾಜ್ ಬಹದ್ದೂರ್ ಫಿಲ್ಮ್ ಫ್ಯಾಕ್ಟರಿ, ಸಂಕಲನ ಸುರೇಶ್ ಅರಸ್, ಛಾಯಾಗ್ರಹಣ ನವೀನ್ ಸೂರ್ಯ, ಸಂಗೀತ ನಿರ್ದೇಶಕರಾದ ಸುಭಾಷ್,   ಕಲಾವಿದರಾದ ರಾಯ(ರಾಹುಲ್ ಗಾಯಕ್ವಾಡ್). ರಾಯಚೂರು ತಮ್ಮಣ್ಣ TK, ಶಕ್ತಿನಗರ ತಿಪ್ಪಣ್ಣ TS ,ಶಕ್ತಿನಗರ ಮಲ್ಲಿಕಾರ್ಜುನ್ ಮಿಮಿಕ್ರಿ, ಶಕ್ತಿನಗರ ಸುಪ್ರಿತರಾಜ್  ಬೆಂಗಳೂರು, ಮಂಜುಸ್ವಾಮಿ, ಮೈಸೂರು ಶಾಮ್ ಖಾನಾಪುರ, ಬಾಬುಖಾನ್ ತುಮಕೂರು, ಸೇರಿದಂತೆ ಇತರರು ಇದ್ದರು.

ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ.




ಚಿತ್ತಾಪುರ: ಶಾಲಾ-ಕಾಲೇಜಿಗೆ ತೆರಳುವ ವೇಳೆ ಬಸ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಬಸ್  ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಚಿತ್ತಾಪುರ ದಿಂದ ಕಲಬುರ್ಗಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ಸಿನ ಸೌಕರ್ಯ, ಸರಿಯಾದ ಸಮಯಕ್ಕೆ ಬಸ್ ಬರದೇ ಇರುವುದು. ಖಂಡಿಸಿ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಬಸ್ ಸಂಚಾರ ನಿಯಂತ್ರಣಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಇಲ್ಲಸಲ್ಲದ ಕಾರಣ ನೀಡಿದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಚಿತ್ತಾಪುರ ದಿಂದ ದಂಡೋತಿ ಮಾರ್ಗವಾಗಿ ಕಲಬುರ್ಗಿ ಹೋಗುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹೆಚ್ಚನೆಚ್ಚು ಬಸ್ಸುಗಳು ಚಿತ್ತಾಪುರ ದಿಂದ ರಾವೂರ ಮಾರ್ಗವಾಗಿ ಕಲಬುರ್ಗಿ ಹೋಗುತ್ತವೆ ಆದ್ರೆ ಆ ಬಸ್ಸುಗಳಿಗೆ ವಿದ್ಯಾರ್ಥಿಗಳು ಹತ್ತಿದರೆ ಮಾರ್ಗ ಮಧ್ಯದಲ್ಲಿ ಬಸ್ ಇಂದ ವಿದ್ಯಾರ್ಥಿಗಳನ್ನು ಇಳಿಸಲಾಗುತ್ತಿದೆ. ಕಾರಣ ಕೇಳಿದರೆ ನಿಮ್ಮ ಪಾಸ್ ದಂಡೋತಿ ಮಾರ್ಗವಾಗಿದೆ ರಾವೂರ ಮಾರ್ಗವಾಗಿ ಪಾಸ್ ನಡೆಯುವುದಿಲ್ಲ ಎಂದು ಹೇಳುತ್ತಾರೆ.

ಇಂತಹ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಬೇಸತ್ತು. ಬಸ್ ತಡೆದು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಸ್ ಘಟಕ ಸಿಬ್ಬಂದಿ ವರ್ಗ, ಪೊಲೀಸ್ ಸಿಬ್ಬಂದಿಗಳು ವಿದ್ಯಾರ್ಥಿಗಳ ಮನವೊಲಿಸಿ ಬಸ್ ಘಟಕ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ರಾವೂರ ಮಾರ್ಗವಾಗಿ ವಿಧ್ಯಾರ್ಥಿಗಳು ಹೋಗಲು ಅನುಕೂಲ ಮಾಡಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ ಶಾಲಾ ಕಾಲೇಜುಗಳಿಗೆ ತೆರಳಿದ ಸಂದರ್ಭ ನಡೆಯಿತ್ತು.

ಕೆಳಗೆ ಬಿದ್ದ ಬೋರ್ಡ್: ಕೃಷಿ ಇಲಾಖೆ ನಿರ್ಲಕ್ಷ್ಯ.

- ಜಗದೇವ ಎಸ್ ಕುಂಬಾರ 
ಚಿತ್ತಾಪುರ: ಪಟ್ಟಣದ ಕೃಷಿ ಇಲಾಖೆಗೆ ಹೋಗುವ ರಸ್ತೆಯ ಬದಿಯಲ್ಲಿ ರೈತ ಸಂಪರ್ಕ ಕೇಂದ್ರದ ಬೋರ್ಡ್ ಹಾಕಲಾಗಿತ್ತು ಒಂದು ವರ್ಷದಿಂದ ಈ ಬೋರ್ಡ್ ಕೆಳಗೆ ಬಿದ್ದು ಧೂಳ್ ಹಿಡಿದಿದೆ ಈ ಬೋರ್ಡ್ ಕಣ್ಣಿಗೆ ಕಂಡರೂ ಸಹ ಅದನ್ನು ದುರಸ್ತಿ ಮಾಡದೆ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷತನ ವಹಿಸುತ್ತಿದ್ದಾರೆ ಎಂಬುದು ಈ ದೃಶ್ಯ ಸಾಕ್ಷಿಯಾಗಿದೆ.

ತಾಲೂಕಿನ ಸುತ್ತಮುತ್ತಲಿನ ರೈತರು ಕೃಷಿ ಇಲಾಖೆಗೆ ಬರಬೇಕಾದರೆ ಈ ಮುಂಚೆ ಈ ಬೋರ್ಡ್  ನೋಡಿ ಇಲಾಖೆಗೆ ಹೋಗುತ್ತಿದ್ದರು ಈಗ ಸಾಧ್ಯ ಒಂದು ವರ್ಷದಿಂದ ಈ ಬೋರ್ಡ್ ಇಲ್ಲದರಿಂದ ರೈತರಿಗೆ ಇಲಾಖೆಗೆ ಹೋಗಲು ತೊಂದರೆಯಾಗುತ್ತಿದೆ. ಕೃಷಿ ಇಲಾಖೆ ಎಲ್ಲಿ ಬರುತ್ತದೆ ಎಂದು ಸಾರ್ವಜನಿಕರಿಗೆ ಕೇಳಿ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಸಾಕಷ್ಟು ಜನ ರೈತರು ಹೇಳುತ್ತಿದ್ದಾರೆ.

ಕೃಷಿ ಇಲಾಖೆಗೆ ಅಧಿಕಾರಿಗಳು ಇದೇ ರಸ್ತೆಯಿಂದ ಹೋಗುತ್ತಾರೆ, ಬರುತ್ತಾರೆ, ಹಾಗೂ ಇಲಾಖೆ ಸಿಬ್ಬಂದಿ ವರ್ಗ ವರ್ಗ ಸಹ ಹೋಗಿ ಬರುತ್ತಾರೆ ಅವರಿಗೆ ಈ ಬೋರ್ಡ್ ಕಾಣುತ್ತಿಲ್ಲವೇ? ಎಂಬುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಒಂದು ಸಣ್ಣ ಕೆಲಸ ಅವರಿಂದ ಮಾಡಲು ಆಗುತ್ತಿಲ್ಲ ಎಂದರೆ ಇನ್ನು ಕಚೇರಿಯಲ್ಲಿನ ಪರಿಸ್ಥಿತಿ ಏನು ಎಂಬುದು ಇನ್ನೊಂದು ಕಡೆ ರೈತರು ಮಾತಾಡಿಕೊಳ್ಳುತ್ತಿದ್ದಾರೆ.

ಈ  ಸುದ್ದಿಯನ್ನಾದರೂ ನೋಡಿ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೋರ್ಡ್ ಎತ್ತಿ ಇಟ್ಟು  ದುರಸ್ತಿ ಮಾಡಿ ತಾಲೂಕಿನ ರೈತರಿಗೆ ಇಲಾಖೆಗೆ ಸರಳವಾಗಿ ಭೇಟಿ ನೀಡಲು ಅನುಕೂಲ ಮಾಡಿಕೊಡುತ್ತಾರೆ ಕಾದು ನೋಡಬೇಕು.

ಬುಧವಾರ, ಅಕ್ಟೋಬರ್ 4, 2023

ಸಂಕನೂರ, ಕೆಸರು ಗದ್ದೆಯಾದ ರಸ್ತೆ: ಜನ ಸಂಚಾರ ಅಸ್ತವ್ಯಸ್ತ.

ಸಂಕನೂರ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಕೆಸರು ಗದ್ದೆಯಾದ ರಸ್ತೆಯ ಚಿತ್ರಣ.

ಚಿತ್ತಾಪುರ: ಅಳ್ಳೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನೂರ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರದ ಮುಂದಿನ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು, ಜನಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಗ್ರಾಮದ ಮುಖ್ಯರಸ್ತೆಯಾಗಿದ್ದು. ಈ ರಸ್ತೆಯಲ್ಲಿ ಸಾಕಷ್ಟು ಜನರು ಶಾಲಾ ವಿದ್ಯಾರ್ಥಿಗಳು, ನಡೆದಾಡುತ್ತಾರೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಈ ರಸ್ತೆ ದುರಸ್ತೇಗೆ ಮನವಿ ಮಾಡಿದ್ರು ಪ್ರಯೋಜನವಾಗುತ್ತಿಲ್ಲ . ಈಗಾಗಲೇ ಈ ರಸ್ತೆಯಿಂದಾಗಿ ಬೈಕ್ ಸವಾರರಿಗೆ ಸಾಕಷ್ಟು ಸಣ್ಣ-ಪುಟ್ಟ ಅನಾಹುತಗಳು ಆಗಿದ್ದು. ಶಾಲಾ ವಿದ್ಯಾರ್ಥಿಗಳು ಬಿದ್ದು ಸಮವಸ್ತ್ರ ಗಲೀಜು ಮಾಡಿಕೊಂಡ ಸಂದರ್ಭಗಳು ಇವೆ.

ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಯನ್ನು ಕೈಯೆತ್ತಿಕೊಂಡು ಕೆಸರುಗದ್ದೆಯಾದ ರಸ್ತೆಯನ್ನು ಒಳ್ಳೆಯ ರಸ್ತೆಯನ್ನಾಗಿ ಮಾಡಿಕೊಡಬೇಕಾಗಿ ಗ್ರಾಮಸ್ಥರಾದ ಸಾಹೇಬ್ ಗೌಡ, ಮಂಜುನಾಥ್, ಮಹಾದೇವ್, ನಾಗಪ್ಪ, ಅಂಬರೀಶ್, ಒತ್ತಾಯಿಸಿದ್ದಾರೆ.

ಭಾನುವಾರ, ಅಕ್ಟೋಬರ್ 1, 2023

ಬೀದಿ ನಾಯಿಗಳ ಹಾವಳಿ

ಪಟ್ಟಣದ ಮಾರ್ಕೆಟ್ ನಲ್ಲಿ ಬೀದಿ ನಾಯಿಗಳ ಓಡಾಟ, ಜಗಳ, ಜನರಲ್ಲಿ ಭಯದ ವಾತಾವರಣ ನಿರ್ಮಾಣ.

ಚಿತ್ತಾಪುರ: ಮಾರ್ಕೆಟ್ ನಲ್ಲಿ  ಬೀದಿ ನಾಯಿಗಳದ್ದೇ ಕಾರುಬಾರು. ಪಟ್ಟಣದ ಬಹುತೇಕ ರಸ್ತೆಗಳನ್ನು ಆಕ್ರಮಿಸಿಕೊಂಡಿರುವ ಬೀದಿ ನಾಯಿಗಳಿಗೆ ರಸ್ತೆಗಳೇ ಆಶ್ರಯ ತಾಣಗಳಾಗಿವೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ರಸ್ತೆ ಮಧ್ಯೆದಲ್ಲಿಯೇ ದಿನನಿತ್ಯ ಅಡ್ಡಾಡುವ ನಾಯಿಗಳ ಹಾವಳಿಯಿಂದ ವಾಹನ ಸವಾರರು ನೆಮ್ಮದಿಯಿಂದ ವಾಹನ ಚಾಲನೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಪುರಸಭೆ ಮಾತ್ರ ಈ ವಿಷಯದಲ್ಲಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈಗಲಾದರೂ ಪುರಸಭೆ ಎಚ್ಚೆತ್ತುಕೊಂಡು ಪಟ್ಟಣದಲ್ಲಿನ ನಾಯಿಗಳ ಹಾವಳಿ ತಡೆಗಟ್ಟುವಂತೆ ಕ್ರಮವಹಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

ಮಾರ್ಕೆಟ್ ರಸ್ತೆಯಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕಾಗಿ ಹೋಗುವರಿಗೂ ಹಾಗೂ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಹ ವಾತಾವರಣ ನಿರ್ಮಾಣ ಆಗಿದೆ ಎನ್ನುತ್ತಾರೆ.

             -ಮಂಜುನಾಥ್ ಸ್ವಾಮಿ
ತಾಲೂಕಾಧ್ಯಕ್ಷ, ಕರವೇ ಕಾವಲು ಪಡೆ ಚಿತ್ತಾಪುರ.
==================================

ಪಟ್ಟಣದಲ್ಲಿ ಅನೇಕ ಕಡೆಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಚ್ಚಿಸಿಕೊಂಡು ತೊಂದರೆ ಅನುಭವಿಸಿದ್ದೇವೆ. ವಾಹನಕ್ಕೆ ಅಡ್ಡವಾದಾಗ ತಪ್ಪಿಸಲು ಹೋಗಿ ಕೈಕಾಲು ಪೆಟ್ಟು ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

                  - ವೀರಣ್ಣ ಸುಲ್ತಾನಪುರ್
 ಮಾಜಿ ಅಧ್ಯಕ್ಷ, ನೇತಾಜಿ ಯುವಕ ಸಂಘ ಚಿತ್ತಾಪುರ.

ಗುರುವಾರ, ಸೆಪ್ಟೆಂಬರ್ 28, 2023

ಸಾಹಿತ್ಯ ಬೆಳೆಸುವಲ್ಲಿ ಸಚಿವರ ಕೊಡುಗೆ ಅಪಾರ: ಡಾ.ಸಿದ್ದತೋಟೇಂದ್ರ.


ಚಿತ್ತಾಪೂರ: ಕ್ಷೇತ್ರದ ಶಾಸಕರು, ಸಚಿವರಾದ ಪ್ರಿಯಾಂಕ ಖರ್ಗೆ ಅವರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಹಾಗೂ ಸಾಹಿತ್ಯ ಜ್ಞಾನ ಬೆಳೆಸಿಕೊಳ್ಳುವ ಆಸಕ್ತಿ ಇದೆ. ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಎಜುಕೇಶನ್ ಹಬ್ ಮಾಡಿದ್ದಾರೆ ಹಾಗೂ ಈ ಭಾಗದಲ್ಲಿನ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಸಚಿವರ ಅಪಾರವಾದ ಕೊಡುಗೆಯಿದೆ ಎಂದು ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠ ನಾಲವಾರದ ಪೂಜ್ಯ ಶ್ರೀ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ್ ಮಂಟಪ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾಗಾವಿ ನಾಡು ಭವ್ಯ ಇತಿಹಾಸ ಹೊಂದಿದ್ದ ನಾಡಾಗಿದ್ದು ಇಲ್ಲಿನ 69 ಗುಡಿ ಅಂದಿನ ಪ್ರಾಚೀನ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ ದೇಶ ವಿದೇಶಗಳಿಂದ ಅಧ್ಯಯನ ಮಾಡಲು ಬರುತ್ತಿದ್ದರು ಇಂಥ ಪ್ರಾಚೀನ ಕಾಲದ ದತ್ತ ವೈಭವ ಮತ್ತೆ ಮರುಕಳಿಸಬೇಕಿದೆ ಎಂದು ಹೇಳಿ ಕನ್ನಡ ನಾನು ನುಡಿಯ ಬಗ್ಗೆ ಕೊಂಡಾಡಿದರು.


ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮಾತನಾಡಿ ಈ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಸಮಾಜಕ್ಕೆ ಒಂದು ವಿಶೇಷವಾದ ಸಂದೇಶವನ್ನು ನೀಡಲು ಬಯಸುತ್ತೇನೆ ನಾಗಾವಿ ನಾಡಿನಲ್ಲಿ ಐತಿಹಾಸಿಕ ಸ್ಮಾರಕಗಳು, ಶಾಸನಗಳು, ದೊರೆತಿವೆ ಈ ನೆಲದ ಶ್ರೀಮಂತಿಕೆ, ಪರಂಪರೆಯ ಇತಿಹಾಸವನ್ನು ಹೊಸ ಪೀಳಿಗೆಗೆ ತಿಳಿಸಬೇಕಾದರೆ ಈ ಭಾಗದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಬೇಲೂರು ಹಳೇಬೀಡಿನ ಇತಿಹಾಸ ನಮ್ಮ ಮಕ್ಕಳಿಗೆ ಬೇಕಾಗಿಲ್ಲ. ಅದಕ್ಕಿಂತ ಎರಡು ಪಟ್ಟು ಇತಿಹಾಸ ಈ ಭಾಗದಲ್ಲಿದೆ ಹೀಗಾಗಿ ನಮ್ಮ ಮಕ್ಕಳು ಓದುವ ಪಠ್ಯಪುಸ್ತಕದಲ್ಲಿ ಈ ಭಾಗದ ಇತಿಹಾಸ ಅಳವಡಿಸಬೇಕು ಎಂದು ಒತ್ತಾಯಿಸಿದರು.


ವೇದಿಕೆಯ ಮೇಲೆ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪಗೇರೆ ಸೋಮಶೇಖರ್, ನೀಲಮ್ಮ ಕತ್ನಳ್ಳಿ, ಲಿಂಗಾರೆಡ್ಡಿ ಗೌಡ ಭಾಸ ರೆಡ್ಡಿ, ನಾಗರೆಡ್ಡಿ ಪಾಟೀಲ್, ಬಾಗನಗೌಡ ಸಂಕನೂರ್, ಭೀಮಣ್ಣ ಸಾಲಿ, ಸೋಮಶೇಖರ್ ಪಾಟೀಲ್, ಶಿವಾನಂದ್ ಪಾಟೀಲ್, ಮಲ್ಲಿಕಾರ್ಜುನ್ ಕಾಳಗಿ, ಮಲ್ಲಿನಾಥ್ ಇಂದೂರ, ಮುಕ್ತಾರ್ ಪಟೇಲ್, ಬಸವರಾಜ್ ಬಳೂಂಡಗಿ, ಶಂಭುಲಿಂಗ ಗುಂಡಗುರ್ತಿ, ಕಾಶಿನಾಥ್ ಗುತ್ತೇದಾರ್, ರಮೇಶ್ ಮರಗೂಳ, ವೇದಿಕೆ ಮೇಲೆ ಇದ್ದರು.
ವೀರಣ್ಣ ಸುಲ್ತಾನಪುರ, ಮಹಮ್ಮದ್ ಇಬ್ರಾಹಿಂ, ಮಲ್ಲಿಕಾರ್ಜುನ್ ಬೊಮ್ಮನಹಳ್ಳಿಕರ್, ವೆಂಕಟೇಶ್ ಬಳಿಚಕ್ರ, ಶ್ರೀಮತಿ ಪೂಜಾ ಬಂಕಲಗಿ, ನರಸಪ್ಪ ಚಿನ್ನಕಟ್ಟಿ, ಕಾಶಿರಾಯ್ ಕಲಾಲ್, ವೀರಭದ್ರಪ್ಪ ಹುಮನಾಬಾದ್, ನರಸಿಂಹ ಆಲ್ಮೇಲ್ಕರ್, ಮನೋಹರ್ ಹಡಪದ, ಕರಣಕುಮಾರ ಅಲ್ಲೂರ, ಸಾಬಣ್ಣ ಭರಾಟಿ, ಆನಂದ್ ಕಲ್ಲಕ್, ಇದ್ದರು. ನಾಡಗೀತೆ ಮತ್ತು ರೈತ ಗೀತೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಸಂಗೀತ ಪ್ರಾಧ್ಯಾಪಕರಾದ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ನಡೆಸಿಕೊಟ್ಟರು ಅದೇ ರೀತಿ ಜನಕಲಾ ಸಮಿತಿ ವಾಡಿ ವತಿಯಿಂದ ಸಂವಿಧಾನ ಪೀಠಿಕೆ ಗಾಯನ ನಡೆಯಿತು. ಮಲ್ಲಿಕಾರ್ಜುನ್ ಮುಡಬೂಳಕರ್ ನಿರೂಪಿಸಿದರು. ಜಗದೇವ್ ದಿಗ್ಗಾಂವಕರ್ ಸ್ವಾಗತಿಸಿದರು. ಬಸಪ್ಪ ಯಂಭತ್ನಾಳ ವಂದನಾರ್ಪಣೆ ನಡೆಸಿಕೊಟ್ಟರು.


ಮಾತೃಭಾಷೆಯಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು, ಪ್ರತಿಯೊಂದು ಇಲಾಖೆ ವಾಣಿಜ್ಯ ಮಾಳಿಗೆ ಹೆಸರಿನ ನಾಮ ಫಲಕಗಳು ಕನ್ನಡದಲ್ಲಿ ಬರೆದು ಕನ್ನಡಮಯವಾಗುವಂತೆ ಮನೋ ಧರ್ಮ ಬೆಳೆಸಿಕೊಳ್ಳಬೇಕು ಎಲ್ಲಿದ್ದರೇನು ಎಂತಿದ್ದರೇನು ಹೇಗಿದ್ದರೇನು? ನಾವು ಎಲ್ಲರೂ ಕನ್ನಡವ ಬಳಸಿ ಬೆಳೆಸಬೇಕು ಮಾತನಾಡಬೇಕು ಪ್ರತಿ ಕ್ಷೇತ್ರದಲ್ಲಿ ಬರವಣಿಗೆ ಕನ್ನಡ ಮಾಯವಾಗಬೇಕು ಎಂದರು

             - ನಿಂಗಪ್ಪ ಮಲ್ಕನ್ ಕೊಲ್ಲೂರ
      ಸಮ್ಮೇಳನ ಅಧ್ಯಕ್ಷರು. ಸಾಹಿತಿಗಳು ಚಿತ್ತಾಪುರ


ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವರ್ಷವಿಡಿ ತಾಲೂಕಿನ ಅತ್ಯಂತ ಕವಿಗೋಷ್ಠಿಗಳು ಕಾವ್ಯ ಸಮ್ಮೇಳನಗಳನ್ನು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಷತ್ತು ಕೆಲಸ ಮಾಡುತ್ತಿದೆ. ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ತೇರನ್ನು ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಎಳೆದಿದ್ದೇನೆ ಎಂದರು.

            - ವೀರೇಂದ್ರಕುಮಾರ ಕೊಲ್ಲೂರು
         ಅಧ್ಯಕ್ಷರು ತಾಲೂಕು ಕಸಾಪ ಚಿತ್ತಾಪುರ

ನಿರ್ಣಯಗಳು ಕೈಗೊಳ್ಳದೆ ಮುಕ್ತಾಯಗೊಂಡ ೪ನೇ ಸಾಹಿತ್ಯ ಸಮ್ಮೇಳನ.

   4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆಯ ಸಾರೋಟಿನಲ್ಲಿ ಯಾರು ಇಲ್ಲದ ದೃಶ್ಯ.

ಚಿತ್ತಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹಿರಂಗ ಅಧಿವೇಶನ ಮಾಡದೇ ನಿರ್ಣಯಗಳನ್ನು ಕೈಗೊಳ್ಳದೇ ಮುಕ್ತಾಯಗೊಂಡಿರುವುದು ಸಾಹಿತ್ಯಾಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಜನರಲ್ಲಿ ಕನ್ನಡ ನಾಡು ನುಡಿ,ನೆಲ,ಜಲ ಭಾಷೆಯ ಬಗ್ಗೆ ಜಾಗೃತಿ ಉಂಟು ಮಾಡುವುದು ಹಾಗೂ ಕನ್ನಡಾಭಿಮಾನ ಮೂಡಿಸುವುದು ಜೊತೆಗೆ ಕನ್ನಡ ನಾಡಿನ ಶ್ರೀಮಂತಿಗೆ ಮತ್ತು ಇತಿಹಾಸ ಬಗ್ಗೆ ಪರಿಚಯಿಸುವ ಕೆಲಸ ಮಾಡುವ ಮೂಲಕ ಸಮ್ಮೇಳನದ ಕೊನೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಂಡು ಅವುಗಳ ಅನುಷ್ಠಾನಕ್ಕೆ ಸರಕಾರಕ್ಕೆ ವರದಿ ಸಲ್ಲಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿಯಾಗಿದೆ, ಆದರೆ ತಾಲೂಕು ಕಸಾಪ ಅಧ್ಯಕ್ಷರು ಪರಿಷತ್ತಿನ ನಿಯಮಗಳನ್ನೇ ಉಲ್ಲಂಘಿಸಿ ತಮ್ಮ ಮನ ಬಂದಂತೆ ವರ್ತಿಸಿರುವುದು ಕಂಡುಬಂದಿದೆ.

4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜವಿದ್ದು ಪರಿಷತ್ತಿನ ಧ್ವಜ ಇಲ್ಲದೇ ಇರುವುದು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್ತಿನ ದ್ವಜಾರೋಹಣ ಮಾಡುವುದು ನಿಯಮವಿದೆ ಆದರೆ ಇಲ್ಲಿನ ಕಸಾಪ ಅಧ್ಯಕ್ಷರು ಕೇವಲ ರಾಷ್ಟ್ರದ್ವಜಾರೋಹಣ ಮತ್ತು ನಾಡ ದ್ಜಜಾರೋಹಣ ನೆರವೇರಿಸಿ ಪರಿಷತ್ತಿನ ದ್ವಜಾರೋಹಣ ಮಾಡದೇ ಪರಿಷತ್ತಿನ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಮೂಲಕ ಪರಿಷತ್ತಿನ ಘನತೆ ಗೌರವಕ್ಕೆ ದಕ್ಕೆ ತಂದಿದ್ದಾರೆ.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಕಸಾಪ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಸಾರೋಟಿನಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಮ್ಮೇಳನದ ಸ್ಥಳಕ್ಕೆ ಕರೆತರುವುದು ಸಂಪ್ರದಾಯ, ಆದರೆ ಬಜಾಜ್ ಕಲ್ಯಾಣ ಮಂಟಪದ ಆವರಣ ಇನ್ನೂ ದೂರ ಇರುವಾಗಲೇ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ರಥದಿಂದ ಇಳಿದು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಗೂ ನಾ ಡ್ರೈವರ್ ಹಾಡಿಗೆ ನೃತ್ಯ ಮಾಡಿದರು. ರಥದಲ್ಲಿದ್ದ ಸರ್ವಾಧ್ಯಕ್ಷರು ಅವರು ಇಳಿದು ನೃತ್ಯದಲ್ಲಿ ಭಾಗಿಯಾದರು.ಸರ್ವಾಧ್ಯಕ್ಷರನ್ನು ಸಮ್ಮೇಳನ ಸ್ಥಳದವರೆಗೂ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಗೌರವಯುತದಿಂದ ವೇದಿಕೆ ಕರೆತರುವ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ.

ಭಾನುವಾರ, ಸೆಪ್ಟೆಂಬರ್ 24, 2023

ಸಮ್ಮೇಳನ ಆಯೋಜನೆಯ ಸ್ವಷ್ಟನೆ ನೀಡಲಿ: ನಾಲವಾರಕರ್ ಆಗ್ರಹ.


ಚಿತ್ತಾಪುರ: ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆವಾಗಿರುವುದಿಲ್ಲ. ಆದರೆ ಯಾವ ಕಾರಣಕ್ಕಾಗಿ ಚಿತ್ತಾಪುರ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವ ಬಗ್ಗೆ ಸ್ವಷ್ಟನೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ರಾಜ್ಯ ವಕ್ತಾರ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದ್ದಾರೆ.

 ಪಟ್ಟಣದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಹಂಪಿ ಉತ್ಸವ, ಮೈಸೂರು ದಸರಾ ಉತ್ಸವಗಳನ್ನು ಸರಳ ರೀತಿಯಲ್ಲಿ ಆಚರಣೆಗೆ ರಾಜ್ಯ ಸರಕಾರ ಬದ್ಧವಾಗಿದ್ದು ಅಲ್ಲದೇ ಮಂಡ್ಯ ಜಿಲ್ಲೆಯಲ್ಲಿ ನಡೆಯಬೇಕಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರದ್ದು ಮಾಡಿರುವ ಮಾದರಿಯಲ್ಲಿ ಚಿತ್ತಾಪುರ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕೂಡಾ ಮುಂದೂಡಬೇಕು ಎಂದರು 

 ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಿಗೆ ಮಾಹಿತಿ ನೀಡದೇ, ಕನ್ನಡಪರ ಹೋರಾಟಗಾರರನ್ನು ಹಾಗೂ ಸಾಹಿತಿಗಳನ್ನು ಹೊರಗಿಟ್ಟು ಏಕ ಪಕ್ಷೀಯವಾಗಿ ನಡೆದುಕೊಂಡು ಬರೀ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅಹ್ವಾನಿಸಿದ್ದರಿಂದ ಇದು ಸಾಹಿತ್ಯ ಸಮ್ಮೇಳನವಲ್ಲ ಕಾಂಗ್ರೆಸ್ ಸಮ್ಮೇಳನವಾಗಿದೆ ಎಂದು ಆರೋಪಿಸಿದರು.

  ಉತ್ಸವಗಳಿಗೆ ಬಳಸುವ ಹಣವನ್ನು ರೈತರ ಸಂಕಷ್ಟಕ್ಕೆ ಬಳಸಲಾಗುವುದು ಎಂದು ಸರಕಾರ ಹೇಳಿದೆ ಹೀಗಿರುವಾಗ ಚಿತ್ತಾಪುರ ಸಮ್ಮೇಳನಕ್ಕೆ ಹಣ ಎಲ್ಲಿಂದ ಬಂದಿದೆ ಎಂಬುದನ್ನು ಹಾಗೂ ಕನ್ನಡ ಭವನ ಯಾಕೆ ನೆನಗುದಿಯಲ್ಲಿದೆ ಎಂಬುದು ಸಚಿವ ಪ್ರಿಯಾಂಕ್ ಖರ್ಗೆ ಸ್ವಷ್ಟಪಡಿಸಬೇಕು. ಕಸಾಪ ಅಧ್ಯಕ್ಷರು ಸಮ್ಮೇಳನದ ಅಮಂತ್ರಣ ಪತ್ರಿಕೆಯಲ್ಲಿ ಪರಿಷತ್ತಿನ ದ್ಜಜಾರೋಹಣ ಕೈ ಬಿಟ್ಟು ಪರಿಷತ್ತಿನ ನಿಯಮಕ್ಕೆ ದಕ್ಕೆ ತಂದಿದ್ದಾರೆ, ಅಲ್ಲದೇ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರ ಹೆಸರು ಕೈ ಬಿಟ್ಟಿದ್ದಾರೆ ಹಾಗೂ ನಾಗಾವಿ ನಾಡಿನ ಅಕ್ಷರ ಜಾತ್ರೆಗೆ ಬನ್ನಿ ಎಂದು ಹೇಳಿ ನಾಗಾವಿ ಯಲ್ಲಮ್ಮ ದೇವಿಯ ಚಿತ್ರ ಹಾಕದೇ ಅವಮಾನಿಸಿರುವುದು ಖಂಡನೀಯ ಎಂದರು.

  ಮಂಡ್ಯ ಜಿಲ್ಲೆಯಲ್ಲಿ ನಡೆಯಬೇಕಾದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ರದ್ದು ಮಾಡಿದ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಅವರು ಯಾವ ಮುಖ ಇಟ್ಟುಕೊಂಡು, ಯಾವ ಉದ್ದೇಶಕ್ಕಾಗಿ ಚಿತ್ತಾಪುರ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ ಇದೆಂಥ ವಿಪರ್ಯಸ ಸಂಗತಿ, ಇದರಿಂದ ರಾಜ್ಯಕ್ಕೆ ಯಾವ ಸಂದೇಶ ನೀಡುವಿರಿ ರಾಜ್ಯಾಧ್ಯಕ್ಷರೇ ಉತ್ತರ ನೀಡಿ ಎಂದು ಆಗ್ರಹಿಸಿದರು.

  ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ರವಿ ವಾಲಿ, ತಾಲೂಕು ಅಧ್ಯಕ್ಷ ಮಂಜುನಾಥ ಸ್ವಾಮಿ,ಮುಖಂಡ ಚಂದ್ರಕಾಂತ ನಾಟೀಕಾರ ಇದ್ದರು.
      

ಮೋದಿ-ಷಾ ಅಬ್ಬರಕ್ಕೆ ಬಂಗಾಳದ ಸರ್ವಾಧಿಕಾರಿ ಸರ್ಕಾರ ಧೂಳಿಪಟ; ಮಣಿಕಂಠ ರಾಠೋಡ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ನಾಯಕತ್ವದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ...