ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಲು ಒತ್ತಾಯ.
ಚಿತ್ತಾಪುರ: ನಿವೃತ್ತಿ ಸರ್ಕಾರಿ ನೌಕರರಿಗೆ ಪಿಂಚಣಿ
ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ನೇತೃತ್ವದಲ್ಲಿ ಬುಧವಾರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ನಿವೃತ್ತ ಹೊಂದಿದ ಸರಕಾರಿ ನೌಕರರು ಆರ್ಥಿಕ ಸೌಲಭ್ಯದಿಂದ ವಂಚಿತರಾಗದಿರಲಿ ಎಂದು ಕೇಂದ್ರ ಸರ್ಕಾರವು 2004 ರಲ್ಲಿ ಹೊಸ ಪಿಂಚಣಿಯನ್ನು ಜಾರಿ ತರಲಾಗಿದೆ ಹಾಗೂ ಎಲ್ಲಾ ರಾಜ್ಯಗಳು ಸಹ ಕೇಂದ್ರ ಸರ್ಕಾರದ ಮಾದರಿಯಲ್ಲಿ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸಾಕಷ್ಟು ಹೋರಾಟವೆ ನಡೆದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಹೊಸ ವೇತನ ಶ್ರೇಣಿ ಪರಿಷ್ಕರಿಸಲು 8ನೇ ವೇತನ ಆಯೋಗ ರಚನೆ ಮಾಡಲಾಗಿದೆ. ಆಯೋಗದ ವರದಿಯು ಪ್ರಗತಿ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕೇಂದ್ರ ಸರ್ಕಾರವು ಮಾರ್ಚ್ 25 ರಂದು ಲೋಕಸಭೆಯಲ್ಲಿ ಆರ್ಥಿಕ ಬಿಲ್ಲು ಮಂಡಿಸಿ 1 ಏಪ್ರಿಲ್ 2026 ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲವೆಂಬ ನಿರ್ಣಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಇದರಿಂದ ನಿವೃತ್ತ ಸರಕಾರಿ ನೌಕರ ಪಿಂಚಣಿದಾರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ 8ನೇ ವೇತನ ಆಯೋಗದಲ್ಲಿ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದ್ದಾರೆ. ಇದರಿಂದ ನಿವೃತ್ತ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಕುರಿತು ಈಗಾಗಲೇ ದೆಹಲಿಯಲ್ಲಿ ನಾಲ್ಕು ಬಲವಾದ ಸಂಘಟನೆಗಳು ಹೋರಾಟಕ್ಕಿಳಿದಿವೆ ನಮ್ಮ ಸಂಘವು ಸಹ ಅವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವಿಜಯಕುಮಾರ್ ಲೊಡ್ಡೆನೋರ, ಉಪಾಧ್ಯಕ್ಷ ಕಿಶನ್ ರಾಠೋಡ, ಮಹಾದೇವಪ್ಪ ಉಪ್ಪಾರ, ಖಜಾಂಚಿ ಮಲ್ಲಣ್ಣ ಮುಡಬೂಳ, ಪ್ರಧಾನ ಕಾರ್ಯದರ್ಶಿ ಶಶೀಧರ ಪಾಟೀಲ, ಸಹ ಕಾರ್ಯದರ್ಶಿ ಸುಭಾಷ್ ಮೇಗಂಜಿ, ಸಂಘಟನಾ ಕಾರ್ಯದರ್ಶಿಗಳಾದ ಮೋನಯ್ಯ ಪಂಚಾಳ, ಬಾಬು ಕರದಾಳ, ಶಮೀಮ್, ಕಾನೂನು ಸಲಹೆಗಾರ ಮೋತಿಲಾಲ್ ಚವ್ಹಾಣ, ಸಾಂಸ್ಕೃತಿಕ ಕಾರ್ಯದರ್ಶಿ ದೇವಪ್ಪ ನಂದೂರಕರ್, ಕ್ರೀಡಾ ಕಾರ್ಯದರ್ಶಿ ಶಿವನಾಗಪ್ಪ ಮುತ್ತಲಗಡ್ಡಿ, ಜಂಟಿ ಕಾರ್ಯದರ್ಶಿ ಹಾಜಪ್ಪ ಬಿಳಾರ್, ನಿರ್ದೇಶಕರಾದ ಬಸವರಾಜ ಕಲಬುರಗಿ, ತುಕಾರಾಮ ನಾಯಕ, ಶ್ರೀಮತಿ ಸರಳಬಾಯಿ, ಶಾಂತಬಾಯಿ, ಶಿವಲಿಂಗಪ್ಪ ದೊಡ್ಡಮನಿ, ಮಲ್ಲೇಶಪ್ಪ ದಂಡೋತಿ, ಸಿದ್ದಯ್ಯ ಸ್ಥಾವರಮಠ, ಲಿಂಗಣ್ಣ ಮಲಕನ್, ಮುನಿಯಪ್ಪ ಸೇರಿದಂತೆ ಇತರರು ಇದ್ದರು.