ಪೋಸ್ಟ್‌ಗಳು

ಮೇ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರೀಯಾಂಕ್ ಖರ್ಗೆ ಸಚಿವ ಸ್ಥಾನಕ್ಕಾಗಿ ಹರಕೆ ಈಡೇರಿಸಿದ ಅಭಿಮಾನಿ.

ಇಮೇಜ್
ಚಿತ್ತಾಪೂರ: ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಿಯಾಂಕ್ ಖರ್ಗೆ ಗೆಲುವಿಗೆ ಹಾಗೂ ಸಚಿವ ಸ್ಥಾನಕ್ಕೆ ಹೇಳವನಕೇರಿ ಗ್ರಾಮದ ಅಭಿಮಾನಿ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಲಹ ಸಮಿತಿ ಸದಸ್ಯ ತಿಪ್ಪಣ್ಣ ರಾಮಣ್ಣ ಹೆಳವ ಅವರು ಮಂಗಳವಾರ ದೇವರಿಗೆ ಹರಕೆ ತಿರಿಸಿದ್ದಾರೆ. ತೀವ್ರ ಜಿದ್ದಜಿದ್ದಿನ ಕ್ಷೇತ್ರವಾಗಿದ್ದ ಚಿತ್ತಾಪೂರ ಮತಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ಪಡೆದು ಗೆಲವು ಸಾಧಿಸಲೆಂದು ಹಾಗೂ ನೂತನ ಸರಕಾರದಲ್ಲಿ ಸಚಿವ ಸ್ಥಾನ ಸಿಗಲೆಂದು ಶ್ರೀ ನಾಗಾವಿ ಯಲ್ಲಮ್ಮ ದೇವಿ, ಯನಾಗುಂದಿ ಮಾತಾ ಮಣಿಕೇಶ್ವರಿ, ಯನಾಗುಂದಿ ಮೌಲಾಲಿ ಮುತ್ಯಾ, ಕಾನಕುರ್ತಿ ಶ್ರೀ ಯಲ್ಲಮ್ಮ ದೇವಿ, ಹಾಗೂ ಶ್ರೀ ಪರಶುರಾಮ ದೇವರಿಗೆ ಪ್ರತಿ ದೇವರಿಗೆ ಐದು ಟೆಂಗಿನಕಾಯಿ ಒಡಿಯುವ ಹರಿಕೆ ಮಾಡಿದ್ದರು. ನೂತನ ಸರಕಾರದಲ್ಲಿ ಗ್ರಾಮೀಣ ಪಂಚಾಯತ ರಾಜಾ ಇಲಾಖೆ ಸಚಿವರಾಗಿದ್ದಕ್ಕೆ ಅಭಿಮಾನಿಯು ಖುಷಿಯಿಂದ ಮಂಗಳವಾರ ಎಲ್ಲಾ ದೇವರಿಗೆ ಭೇಟಿ ನೀಡಿ ದೇವರ ಹರಿಕೆ ತಿರಿಸಿದ್ದರು.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಇಮೇಜ್
ಮುಂದಿನ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಬಿಜೆಪಿ ಗೆಲ್ಲಿಸುವೆ:ಮಣಿಕಂಠ     ಚಿತ್ತಾಪುರ: ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲು ಉಂಟಾಗಿದೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಗಲಿ ಅಥವಾ ಯಾರೇ ಅಭ್ಯರ್ಥಿಯಾಗಲಿ ಅವರ ಪರ ಶ್ರಮಿಸಿ 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.   ಪಟ್ಟಣದ ಬಾಪುರಾವ್ ಪಾಟೀಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವಿಧಾನಸಭೆ ಚುನಾವಣೆ ನಿಮಿತ್ತ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ನನಗೆ ಸ್ವಲ್ಪ ಮಾರ್ಗದರ್ಶನ ಕೊರತೆ ಇತ್ತು ನಾನು ಎಲ್ಲರನ್ನೂ ತೆಗೆದುಕೊಂಡು ಹೋಗಲು ಆಗಲಿಲ್ಲ, ಎಲ್ಲ ಮುಖಂಡರನ್ನು ಹಾಗೂ ಕಾರ್ಯಕರ್ತರ ಸಮೀಪ ಹೋಗುವುದಕ್ಕೆ ಆಗಲಿಲ್ಲ ಆದರೂ ಪಕ್ಷದ ಮೇಲೆ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಕಾರ್ಯಕರ್ತರು ಹಗರಲಿರಳು ಶ್ರಮಿಸಿದ್ದರಿಂದ ೬೭ ಸಾವಿರಕ್ಕೂ ಅಧಿಕ ಮತಗಳು ಬಂದಿವೆ ಇದೊಂದು ದೊಡ್ಡ ಸಾಧನೆ ಈ ಮೂಲಕ ಚಿತ್ತಾಪುರದಲ್ಲಿ ಕಾರ್ಯಕರ್ತರೇ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದಾರೆ ಎಂಬುದು ತೋರಿಸಿಕೊಟ್ಟಿದ್ದಾರೆ ಎಂದರು.   ಕಾರ್ಯಕರ್ತರು ಯಾರೂ ಎದೆಗುಂದದೇ ನಿಮ್ಮ ಜೊತೆ ನಾನು ಇದ್ದೇನೆ ಪಕ್ಷದ ಸಂಘಟನೆಯಲ್ಲಿ ...

ಪ್ರಿಯಾಂಕ್ ಖರ್ಗೆ ಹ್ಯಾಟ್ರಿಕ್ ಗೆಲುವು.

ಇಮೇಜ್
ಚಿತ್ತಾಪೂರ: ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಭರ್ಜರಿ ಜಯಭೇರಿಯೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.  ಪ್ರಿಯಾಂಕ್ ಖರ್ಗೆ ಅವರು 13640 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಮಣಿಸಿದ್ದಾರೆ. ಪ್ರಿಯಾಂಕ್ ಅವರಿಗೆ 81,323 ಮತಗಳು ದೊರಕಿದ್ದರೆ, ಅವರ ನೇರ ಎದುರಾಳಿ ಮಣಿಕಂಠ 67,683 ಮತಗಳನ್ನು ಪಡೆದಿದ್ದಾರೆ. ಇವರಿಬ್ಬರ ಮಧ್ಯೆಯೇ ತೀವ್ರ ಪೈಪೋಟಿ ನಡೆಸಿದ್ದು, ಕ್ಷೇತ್ರದಲ್ಲಿದ್ದ ಇತರೆ ಯಾವ ಅಭ್ಯರ್ಥಿಯೂ ಸಾವಿರ ಮತಗಳ ಗಡಿ ದಾಟುವುದಕ್ಕೂ ಸಾಧ್ಯವಾಗಿಲ್ಲ. ಒಟ್ಟು 1,53,195 ಮತಗಳು ಚಲಾವಣೆಯಾಗಿದೆ. 962 ಮತಗಳನ್ನು ಪಡೆದ ಆಮ್ ಆದ್ಮಿ ಪಕ್ಷದ ಜಗದೀಶ್ ಎಸ್ ಸಾಗರ್ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಶರಣು ಸೂಗುರ 878 ಮತಗಳು, ಜೆಡಿಎಸ್ ಅಭ್ಯರ್ಥಿ ಡಾ. ಸುಭಾಶ್ಚಂದ್ರ ರಾಠೋಡ್ 643 ಮತಗಳು, ಕೆಆರ್ ಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಪೂಜಾರಿ 485 ಮತಗಳು, ಸ್ವತಂತ್ರ ಅಭ್ಯರ್ಥಿ ರಾಜು ಹುದನೂರ 505 ಮತಗಳು ಪಡೆದಿದ್ದಾರೆ. ಇನ್ನು ನೋಟಾಕ್ಕೆ 816 ಮತಗಳು ಬಿದ್ದಿವೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೈ ಅನ್ನುವ ಜಯ ಘೋಷಗಳು ಕೇಳಿ ಬಂದವು. ಸರ್ವ ಕಾಂಗ್ರೆಸ್ ಕಾರ್ಯಕರ್ತರು ಜಯ ಘೋಷಗಳೊಂದಿಗೆ ಗುಲಾಲ್ ಎರಚಿ ಸಂತಸ  ಪಡುತ್ತಿದ್ದಾರೆ. ಬಿಜೆಪಿಯವರು ಚಿತ್ತಾಪುರ ಜನತೆಗೆ ಇಷ್ಟ ಇಲ್ಲದಿದ್ದರೂ ರೌಡಿಶ...

ದಾದಾಗಿರಿಗೆ ಅಂಜುವ ಮೊಮ್ಮಗ ನಾನಲ್ಲ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ದಾದಾಗಿರಿ ಶುರು ಮಾಡಿದರೆ ಕಾಂಗ್ರೆಸ್ ನವರು ಹೊರಗಡೆ ಬರುವುದಕ್ಕೆ ಆಗುವುದಿಲ್ಲ ಅಂತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳುತ್ತಾನೆ.  ಎಂಎಲ್ಎ ಚುನಾವಣೆಗೆ ನಿಲ್ಲುವುದಕ್ಕೆ ಬಂದಿದ್ದಾನಾ? ಅಥವಾ ದಾದಾಗಿರಿ‌‌ ಮಾಡುವುದಕ್ಕೆ ಬಂದಿದ್ದಾನಾ? ಅವನು ದಾದಾಗಿರಿ ಮಾಡಿದರೆ ಚಿತ್ತಾಪುರದ ಮೊಮ್ಮಗ ನಾನು ಸುಮ್ಮನೆ ಕೂತಿರುತ್ತೇನಾ ? ಎಂದು ಕಾಂಗ್ರೆಸ್ ಅಭ್ಯರ್ಥಿ  ಪ್ರಿಯಾಂಕ್ ಖರ್ಗೆ ಮಾರುತ್ತರ ನೀಡಿದರು. ತಾಲ್ಲೂಕಿನ ಮಹಾನಗರ ತಾಂಡಾ, ಮುಗಳನಾಗಂವ್, ಬೆಣ್ಣೋರ, ಸಂಗಾವಿ, ಪೇಠಶಿರೂರು, ಕಾಟಮದೇವರ ಹಳ್ಳಿ, ಬೆಳಗುಂಪಾ, ಇವಣಿ,ಭಾಗೋಡಿ, ಕದ್ದರ್ಗಿ, ಜೀವಣಗಿ, ಗ್ರಾಮದಲ್ಲಿ ನಡೆದ‌ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು ನಾನು ಈ ತಾಲೂಕಿನ ಮೊಮ್ಮಗ ನಮ್ಮ ಜನರ ಕಷ್ಟ ಸುಖಗಳ ಅರಿವು ನನಗಿದೆ. ಎಲ್ಲಿಂದಲೋ ಬಂದವರು ದಾದಾಗಿರಿ ಮಾಡಿದರೆ ನಾನು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು. ಮಣಿಕಂಠ ಯಾರು ಅಂತ ನನಗೆ ಗೊತ್ತಿರಲಿಲ್ಲ. ಅವನು ನನಗೆ ಶೂಟ್ ಮಾಡುತ್ತೇನೆ ಎಂದು ಹೇಳಿದಾಗಲೇ ಅವನ ಬಗ್ಗೆ ಗೊತ್ತಾಗಿದ್ದು. " ಅಲ್ಲಪ್ಪ ನನಗೆ ಶೂಟ್ ಮಾಡುವುದಕ್ಕೆ ನಿಮ್ಮಪ್ಪನ ಗಂಟು ಏನಾದರೂ ತಿಂದಿದ್ದೇನಾ ? ಅಥವಾ ನಿನ್ನ ಗಂಟು ತಿಂದಿದ್ದೇನಾ? ಅಸಲಿಗೆ ನಿನ್ನ ಗಂಟು ಬೇಡ. ಯಾಕೆಂದರೆ ಅದು ಪಾಪದ‌ ದುಡ್ಡು ಎಂದು ತೀಕ್ಷ್ಣವಾಗಿ ಹೇಳಿದರು. ಮಣಿಕಂಠನನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ...

ಅಕ್ರಮದಲ್ಲಿ ತೊಡಗುವವರಿಗೆ ಜೈಲು‌ಭಾಗ್ಯ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ನಾನು ಗೆದ್ದು ಬಂದ ಮೇಲೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದವರಿಗೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗವವರಿಗೆ ಜೈಲ್ ಗೆ ಕಳಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಬ್ಬರಿಸಿದರು‌. ತಾಲ್ಲೂಕಿನ ಮಲಗಾಣ, ಕಣಸೂರ, ಅಶೋಕ ನಗರದಲ್ಲಿ ಚುನಾವಣೆಯ ಪ್ರಚಾರ ಸಭೆ ಕುರಿತು ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾನೆ. ನಿಮಗೆ ಶಿಕ್ಷಣ, ಉದ್ಯೋಗ ಹಾಗೂ ನೆಮ್ಮದಿಯ ಜೀವನ ಬೇಕಾದರೆ ನನಗೆ ಮತನೀಡಿ. ಢಾಬಾ, ಜೈಲು ಹಾಗೂ ಬೇಲು ಅಂತ ಅಲೆದಾಡಬೇಕಾದರೆ ಮಣಿಕಂಠನಿಗೆ ಮತ ಹಾಕಿ ಎಂದರು. ಖರ್ಗೆ ಹಾಗೂ ಕುಟುಂಬವನ್ನು ಸಾಫ್ ಮಾಡುತ್ತೇನೆ ಅಂತ ಅವನು ಹೇಳಿದ ಅಡಿಯೋ ವೈರಲ್ ಆಗಿದೆ. ನಮಗೆ ಸಾಫ್ ಮಾಡಲು ಬಂದರೆ ನನ್ನ ಕ್ಷೇತ್ರದ ಜನರು ಸುಮ್ಮನೆ ಇರುತ್ತೀರಾ ? ಎಂದು ಪ್ರಶ್ನಿಸಿದರು. ನಾನು ದಾದಾಗಿರಿ ಮಾಡಲು ಶುರು ಮಾಡಿದರೆ ಕಾಂಗ್ರೆಸ್ ನವರು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ ಅಂತ ಮರಗೋಳದಲ್ಲಿ ಹೇಳಿದ್ದಾನಂತೆ, ಆ ಪಾರನಿಗೆ ಗೊತ್ತಿರಲಿ ಚಿತ್ತಾಪುರದ ಈ ಮೊಮ್ಮಗ‌ ಇನ್ನೂ ‌ಜೀವಂತವಾಗಿದ್ದಾನೆ  ಎಂದು ಟಕ್ಕರ್ ಕೊಟ್ಟರು. ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ್, ಸುನೀಲ ದೊಡ್ಮನಿ, ಪ್ರವೀಣ ನಾಮದಾರ್, ಶಂಭುಲಿಂಗ ಗುಂಡಗುರ್ತಿ, ಶರಣಗೌಡ, ಸುಧಾಕರ ಪಾಟೀಲ್, ಆನಂದ ಹೊಸಮನಿ, ಪೃಥ್ವಿ ನಾಮದಾರ್, ಸೇರಿದಂತೆ ಇತರರು ಇದ್ದರು.

ಕ್ಷೇತ್ರವ್ಯಾಪ್ತಿಯಲ್ಲಿ ಮಣಿಕಂಠ ರಾಠೋಡ ಬಿರುಸಿನ ಪ್ರಚಾರ.

ಇಮೇಜ್
ಚಿತ್ತಾಪೂರ: ಮೀಸಲು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅಇವರು  ಪಟ್ಟಣದ 23 ವಾರ್ಡ್ ಗಳ ಮನೆ ಮನೆಗೆ ಹೋಗಿ ಮತ ಕೇಳುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ತಾಲೂಕಿನಲ್ಲಿ ಸಾಕಾಷ್ಟು ಅಭಿವೃದ್ಧಿಗೆ ಸಾದ್ಯವಾಗುತ್ತದೆ. ನಾನು ನಿಮ್ಮ ಮನೆಯ ಮಗನಾಗಿ ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ನನ್ನಗೆ ಒದಗಿ ಬಂದಿದೆ. ಹೀಗಾಗಿ ಮೇ,10ಕ್ಕೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ನನ್ನಗೆ ಗೆಲ್ಲಿಸಿ ಎಂದು ಮತದಾರರಲ್ಲಿ ಕೈ ಮುಗಿದು ಬೇಡಿಕೊಂಡರು. ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ಕಾರ್ಯಕರ್ತರು ಪಣತೊಟ್ಟು ಮನೆಮನೆಗೂ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಯಕರ್ತರ ಪ್ರೀತಿಗೆ ಚಿರಋಣಿ ಎಂದು ಹೇಳಿದರು. ಕೇಂದ್ರದಿಂದ ಬಿಡುಗಡೆಯಾಗುವ ಒಂದು ಪೈಸೆ ಹಣವೂ ನಿರ್ದಿಷ್ಟ ಫಲಾನುಭವಿ ಯನ್ನು ತಲುಪಲು ಹಾಗೂ ನಿರ್ದಿಷ್ಟ ಯೋಜನೆಗೆ ಬಳಕೆ ಯಾಗಲು ಡಬಲ್‌ ಎಂಜಿನ್ ಸರ್ಕಾರ ಮುಖ್ಯ. ನಾಲ್ಕು ವರ್ಷಗಳ ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಇದು ಸಾಬೀತಾಗಿದೆ ಬಿಜೆಪಿಯ ಜನಕಲ್ಯಾಣ ಕಾರ್ಯಕ್ರಮಗಳೇ ಗೆಲುವಿಗೆ ಸ್ಪೂರ್ತಿಯಾಗಿದ್ದು, ಜನರ ಬದುಕು ಸುಧಾರಣೆಯತ್ತ ಸಾಗುತ್ತಿದೆ. ಸಮೃದ್ಧ ಕರ್ನಾಟಕ ಪ್ರತಿ ನಿರ್ಮಾಣಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಾಗರಾಜ ಬಂಕಲಗಿ, ಮಲ್ಲಿಕಾರ್ಜುನ ಎಮ್ಮೆನೋರ, ಪ್ರಭು ಗಂಗಾಣಿ, ಕೋಟೇಶ್ವರ ರೇಷ್ಮೆ, ನಾಗರ...

ಶಿಕ್ಷಣ,ಉದ್ಯೋಗಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ಕ್ಷೇತ್ರದ ಜನತೆಗೆ ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಸೀಗಬೇಕಾದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು. ತಾಲ್ಲೂಕಿನ ತೋನಸನಳ್ಳಿ, ಮಲಕೂಡ, ಮರಗೋಳ, ಮುಡಬೂಳ, ಮೋಗಲಿ, ದಂಡೋತಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಿಂದೆ ಹೋದರೆ‌ ಜೈಲು‌ ಹಾಗೂ ಬೇಲು ಗ್ಯಾರಂಟಿ ಜನರಿಗೆ ತಿಳಿ ಹೇಳಿದರು. ಬಿಜೆಪಿಗರು ಮೋದಿ ಫೋಟೋ ತೋರಿಸಿ ಕಳ್ಳನಿಗೆ ಟಿಕೆಟ್ ಕೊಟ್ಟರೆ ಆರಿಸಿ ಕಳಿಸಲು ಚಿತ್ತಾಪುರದ ಪ್ರಬುದ್ಧ ಮತದಾರರು ಮತ ಹಾಕುತ್ತಾರೆಯೇ? ಎಂದು ಪ್ರಶ್ನಿಸಿದರು. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನಿಗೆ ಚುನಾವಣೆಯಲ್ಲಿ ಅಪ್ಪಿತಪ್ಪಿ ಗೆಲ್ಲಿಸಿದರೆ ಅಂಗನವಾಡಿಗೆ ಹೋಗುವ ಮಕ್ಕಳಿಗೆ ಹಾಲು ಸಿಗಲ್ಲ. ಯಾಕೆಂದರೆ, ಅವನು ಅಕ್ರಮವಾಗಿ ಹಾಲಿನಪುಡಿ ಸಾಗಾಣಿಕೆ ಮಾಡಿದ್ದಕ್ಕೆ ಯಾದಗಿರಿ ಕೋರ್ಟ್ ಶಿಕ್ಷೆ ನೀಡಿದೆ. ಅವನ ವಿರುದ್ದ ತೆಲಂಗಾಣ, ಆಂಧ್ರ,‌ಕರ್ನಾಟಕ ಹಾಗೂ ಮಹಾರಾಷ್ಟ್ರ ಹೀಗೆ ನಾಲ್ಕು ರಾಜ್ಯದ ಆರು ಜಿಲ್ಲೆಗಳಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡಿದಕ್ಕೆ ಒಟ್ಟು 40 ಕೇಸುಗಳಿವೆ. ಹೀಗಾಗಿ ಅವನು ಕೇವಲ ರಾಜ್ಯದ ಫಿಗರ್ ಅಲ್ಲ ದಕ್ಷಿಣ ಭಾರತದ ಫಿಗರ್ ಆಗಿದ್ದಾನೆ ಎಂದು ವ್ಯಂಗ್ಯಮಾಡಿದರು. ನನಗೆ ನೀವು ಹೇಗೆ ಆಶೀರ್ವಾದ ಮಾಡಬೇಕೆಂದರೆ ಮತ್ತೊಮ್ಮೆ ಬಿಜೆಪಿಗೆ ಚಿತ್ತಾಪುರದಲ್ಲಿ ಅಭ್ಯರ್ಥಿಗೆ ಮತ ಹಾಕಿರಬ...

ಸಮಾಜ ಸೇವೆ ನೋಡಿ ಮತ ಹಾಕಿ.

ಇಮೇಜ್
ಚಿತ್ತಾಪೂರ: ಕ್ಷೇತ್ರದಲ್ಲಿ ಒಂದು ವರ್ಷದಿಂದ ಸಮಾಜ ಸೇವೆ ಮಾಡುತ್ತಾ ಇರುವೆ ಈ ಸಮಾಜ ಸೇವೆ ನೋಡಿ ನನ್ನಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು. ತಾಲ್ಲೂಕಿನ ಚಾಮನೂರ, ಕಡಬೂರ್, ಕುಲಕಂದ, ಮಳಗ, ತುನ್ನೂರ, ಬನ್ನಟ್ಟಿ, ಕುಂಬಾರ ಹಳ್ಳಿ, ನಾಲವಾರ ಸ್ಟೇಷನ್, ಸ್ಟೇಷನ್ ತಾಂಡಾ, ಸೂಗುರ, ಸೂಗುರ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಯಾವುದೇ ಉನ್ನತ ಹುದ್ದೆಯಲ್ಲಿ ಇಲ್ಲಾ ಶಾಸಕನು ಇಲ್ಲಾ ಆದರೂ ನಾನು ಕ್ಷೇತ್ರದಲ್ಲಿ ನನ್ನ ವೈಯಕ್ತಿಕ ಹಣದಿಂದ ನಿಮ್ಮೆಲ್ಲರ ಸೇವೆ ಮಾಡುತ್ತಿರುವೆ ಮುಂದೆಯೂ ಮಾಡುವೇ ಎಂದರು. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದರೆ ಅದು ಸತ್ಯಕ್ಕೆ ದೂರವಾಗಿದೆ. ನಾನು ಒಂದು ವೇಳೆ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥ ಆಗಿದ್ದಾರೆ ಕಾನೂನು ಈಗಾಗಲೇ ನನ್ನ ಶಿಕ್ಷೇ ನೀಡುತ್ತಿತ್ತು ಅವರು ಹೇಳುವ ಮಾತ್ತು ಯಾರು ನಂಬಬೇಡಿ ಮತಗಳು ಸೆಳೆಯಲು ಇದು ಒಂದು ಕುತುಂತ್ರವಾಗಿದೆ ಎಂದರು. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡದೆ ಬಿಜೆಪಿ ಪಕ್ಷಕ್ಕೆ ಬೆಂಬಲಸಿ ನನ್ನಗೆ ಗೆಲ್ಲಿಸಿ, ನಾವು ಹಿಂದು ಧರ್ಮದ ಪರವಾಗಿದ್ದೆವೆ ಅವರು ಜಾತಿ-ಜಾತಿಗಳ ಮಧ್ಯ ಜಗಳ ಹಚ್ಚುವರು ಇದ್ದರೆ ಎಂದು ಹೇಳಿದರು. ಇದೇ ವೇಳೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಇತರ ಪಕ್ಷವನ್ನು ತೊರೆದು ಬಿಜೆಪಿ ಪಕ್ಷದ ತತ್ವ ಸಿದ...

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಇಮೇಜ್
ಚಿತ್ತಾಪೂರ: ಚುನಾವಣೆಯ ಭದ್ರತೆಯ ಸಲುವಾಗಿ ಪಟ್ಟಣದ ತಹಸೀಲ್ ಕಛೇರಿಯಲ್ಲಿ  ಕರ್ತವ್ಯದಲ್ಲಿ ಇದ್ದ ಪೋಲೀಸ ಪೇದೆ ಸಾವನ್ನಪ್ಪಿದ ಘಟನೆ ನಡೆದಿದೆ. ಮಲ್ಲಿಕಾರ್ಜುನ ಪೋತೆಪೂರ (38) ಎಂಬ ಪೋಲೀಸ ಪೇದೆ ಬುಧವಾರ ರಾತ್ರಿ ತಹಸೀಲ್ ಕಛೇರಿಯ ಭದ್ರತೆಯ ಕರ್ತವ್ಯದಲ್ಲಿದ್ದ ಪೋಲೀಸ ಪೇದೆ 303 ಬಂದೂಕನಿಂದ ತಾನೇ ಪೈರಿಂಗ್, ಅಥವಾ ಆಕಸ್ಮಿಕವಾಗಿ ಮಾಡಿಕೊಂಡಿರಬಹುದು ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಪೋಲೀಸ ಪೇದೆಯ ಚಲನ ವಲನದ ಕುರಿತು ತಹಸೀಲ್ ಕಛೇರಿಯಲ್ಲಿನ ಸಿಸಿ ಟಿವಿ ಪರಿಶೀಲನೆಯ ನಡೆಯುತ್ತಿದೆ. ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ಕೈಗೊಂಡು ಸಾವಿನ ನಿಖರತೆ ತಿಳಿಸಲಾಗುವುದು ಎಂದು ಪೋಲೀಸ ಮೂಲಗಳಿಂದ ತಿಳಿದು ಬಂದಿದೆ.

ಕೆಟ್ಬ ಹಾಗೂ ಭ್ರಷ್ಟ ಸರ್ಕಾರ‌ ರಾಜ್ಯದಲ್ಲಿದೆ: ಖರ್ಗೆ ಆರೋಪ.

ಇಮೇಜ್
ಚಿತ್ತಾಪೂರ: ರಾಜ್ಯದ ಇತಿಹಾಸದಲ್ಲಿಯೇ ಬಿಜೆಪಿ ಸರ್ಕಾರವು ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ತಾಲ್ಲೂಕಿನ ದಿಗ್ಗಾಂವ, ಅಲ್ಲೂರು(ಬಿ), ಅಲ್ಲೂರ(ಕೆ), ಇಟಗಿ  ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಇದೆ ಎನಿಸುವುದಿಲ್ಲ. 40% ಸರ್ಕಾರ ಇದೆ ಎನ್ನುವುದು ಜನರ ಅಭಿಪ್ರಾಯವಾಗಿದೆ. ಈ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಿಕೊಂಡು ನಿರುದ್ಯೋಗಿ ಯುವಕರ ಪಾಲಿಗೆ ಕರಾಳವಾಗಿ ಪರಿಣಮಿಸಿದೆ.  ತಾಲೂಕಿನಲ್ಲಿ ರಾಜಕೀಯ ವಾತಾವರಣ ಕಲುಷಿತಗೊಳ್ಳುತ್ತಿದೆ. ತತ್ವ ಸಿದ್ದಾಂತದ ಬಗ್ಗೆ ಮಾತನಾಡುವ ಬಿಜೆಪಿ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗೆ ಟಿಕೇಟ್ ನೀಡಿದೆ. ಅಕ್ರಮ ಅಕ್ಕಿ ಹಾಗೂ ಹಾಲಿನ‌ಪುಡಿ‌ ಕಳ್ಳತನ ಮಾಡಿ ಮಾರಾಟ‌ ಮಾಡಿದ ಆರೋಪದ ಮೇಲೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ 40 ಕೇಸುಗಳು ದಾಖಲಾಗಿವೆ. ಇದನ್ನೆಲ್ಲ ನಾನು ಹೇಳುತ್ತಿಲ್ಲ. ಚುನಾವಣೆ ನಾಮ ಪತ್ರದ ಜೊತೆಗೆ ಅವನು ತಹಸೀಲ್ದಾರರಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ವಿವರವಾಗಿ ಹೇಳಿಕೊಂಡಿದ್ದಾನೆ. ಅಂತವನಿಗೆ ಟಿಕೇಟ್ ನೀಡಿರುವ ಬಿಜೆಪಿಗರು ಚಿತ್ತಾಪುರದ ಘನತೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ ಎಂದರು. ಈ ಸಲದ ಚುನಾವಣೆ ಯುವಕರ ಭವಿಷ್ಯದ ಮಹಿಳೆಯ...

ಭಜರಂಗದಳ, ಹಿಂದೂ ಸಮಾಜದ ಕವಚ: ಮಣಿಕಂಠ ರಾಠೋಡ.

ಇಮೇಜ್
ಚಿತ್ತಾಪೂರ: ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ದವಾಗಿರುವ ಕಾರ್ಯಕರ್ತರ ಪಡೆ, ಹಿಂದೂ ಸಮಾಜದ ಕವಚವಿದ್ದಂತೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು. ತಾಲ್ಲೂಕಿನ ಯರಗಲ್, ಮರಗೋಳ, ದಂಡೋತಿ, ತನಸನಹಳ್ಳಿ (ಟಿ), ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಹಿಂದೂ ವಿರೋಧಿ ನಿಲುವಿಗೆ ಧಿಕ್ಕಾರ. ಬಜರಂಗ ದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳುತ್ತದೆ ಈ ನಿಲುವು  ನೋಡಿದ್ರೆ ನೀವು ಹಿಂದೂ ದ್ರೋಹಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದರು. ನಾನು ಗೆಲ್ಲಲಿ ಬಿಡಲಿ ನಾನು ನಿಮ್ಮ ಕ್ಷೇತ್ರದ ಸಲುವಾಗಿ ಸೇವೆ ಸಲ್ಲಿಸುವೆ. ಮರಗೋಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ ಜಾಸ್ತಿಯಾಗಿದೆ ನಾನು ಗಣೇಶನ ದೇವಸ್ಥಾನಕ್ಕೆ ಆಶೀರ್ವಾದ ಪಡೆಯಲು ಬರುವೆ ಎಂದರೆ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಮಣಿಕಂಠಗೆ ಕರಿಸಬೇಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಈ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಮಾತ್ತು ಹೇಳುವೇ ನಮ್ಮ ಬಿಜೆಪಿ ಪಕ್ಷ ಚಿತ್ತಾಪುರನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಆಗ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ತಿರುಗೇಟು ನೀಡಿದರು. ಕ್ಷೇತ್ರದ ಯಾವುದೇ ಗ್ರಾಮದ ಸಮಸ್ಯೆ ಇರಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿಮ್ಮ ಗ್ರಾಮಕ್ಕೆ ಕರೆಸಿ ಸಮಸ್ಯೆಗೆ ಪರಿಹಾರ ಕೋಡಿಸುವ ಪ್ರ...

ನಿಮ್ಮ ಮಗನಾಗಿ ಸೇವೆ ಮಾಡುವೆ: ಮಣಿಕಂಠ ರಾಠೋಡ.

ಇಮೇಜ್
ಚಿತ್ತಾಪೂರ: ಮೇ,೧೦ಕ್ಕೆ ನಡೆಯಲ್ಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನಗೆ ಗೆಲ್ಲಿಸಿ ನಾ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು.   ತಾಲ್ಲೂಕಿನ ಸಾತನೂರ, ಹೊಸೂರ, ಭಂಕಲಗಾ, ಅಣೀಕೇರ ತಾಂಡಾ, ಭೀಮನಹಳ್ಳಿ, ಆಲೂರ, ಸೂಲಹಳ್ಳಿ, ಕಮರವಾಡಿ, ಕಮರವಾಡಿ ತಾಂಡಾ, ಡಿಗ್ಗಿ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಕುರಿತು ಮಾತನಾಡಿದ ಅವರು. ನಾನು ಕ್ಷೇತ್ರದಲ್ಲಿ ಸಾಕಾಷ್ಟು ಸಮಾಜ ಸೇವೆ ಮಾಡಿರುವೆ. ಅದು ನಾ ಏನೂ ಹೇಳಬೇಕಿಲ್ಲ. ಅದು ನಿಮ್ಮೆಲ್ಲರಿಗೆ ಗೊತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಬೇಜವಾಬ್ದಾರಿಯಿಂದ ಕೆಲ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ ಹೀಗಾಗಿ ಮುಂಬರುವ ದಿನಗಳಲ್ಲಿ ನನ್ನಗೆ ಒಂದು ಬಾರಿ ಅವಕಾಶ ಕೋಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ನಾನು ನಿಷ್ಠೆಯಿಂದ ಮಾಡಿ ತೋರಿಸುವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂದು ಹೇಳಿ ದೇಶದ ಪ್ರಧಾನಿಗೆ ಅಪಮಾನ ಮಾಡಿದ್ರೆ ಇಲ್ಲಿ ಪ್ರಿಯಾಂಕ್ ಖರ್ಗೆ ಕೊಡ ಮೋದಿಗೆ ನಾಲಾಯಕ ಅನ್ನುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಅವರು ಮಾಡುವ ಅಪಮಾನ ಬರಿ ನರೇಂದ್ರ ಮೋದಿಗಷ್ಟೇ ಅಲ್ಲಾ ದೇಶದ ಪ್ರತಿಯೊಬ್ಬ ಪ್ರಜೆಗೆ ಅಪಮಾನ ಮಾಡಿದಂತೆ ಹೀಗಾಗಿ ಅವರಿಗೆ ಮೇ,೧೦...

ಬಿಜೆಪಿಯಿಂದ ಕೋಲಿ,ಕಬ್ಬಲಿಗ ಸಮಾಜಕ್ಕೆ ಅನ್ಯಾಯ: ಕಮಕನೂರ.

ಇಮೇಜ್
ಚಿತ್ತಾಪೂರ: ಕೋಲಿ,ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಮಾತು ಕೊಟ್ಟಿತ್ತು ಅದನ್ನು ತಪ್ಪಿದ್ದಾರೆ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿಗೆ ಸೇರಿಸದೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು. ತಾಲ್ಲೂಕಿನ ಮತಕ್ಷೇತ್ರದ ಹೊಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೇ ಅವರ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು ಕೇಂದ್ರ,ರಾಜ್ಯ ಸರ್ಕಾರ ಪತನ ಆಗಬೇಕು ಆಗ ನಮ್ಮ ಕೋಲಿ, ಕಬ್ಬಲಿಗ ಸಮಾಜಕ್ಕೆ ಎಸ್ ಟಿ ಮಿಸಲಾತಿ ಸಿಗುತ್ತದೆ.ಇಡಿ ಕರ್ನಾಟಕ ಸರ್ಕಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಸೋಲಿಸುವ ಹುನ್ನಾರ ನಡೆಸುತ್ತಿದ್ದಾರೆ ಹೀಗಾಗಿ ಅವರಿಗೆ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅವರ ಕೈ ಬಲಿಷ್ಠ ಪಡಿಸೋಣ ಎಂದರು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ಬಂದೆ ಬರುತ್ತೆ, ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆ ಆಗುತ್ತೆ ಎಂದು ಭವಿಷ್ಯ ನುಡಿದರು.  ಈ ಸಂದರ್ಭದಲ್ಲಿ ವಿಶ್ವನಾಥ ಪಾಟೀಲ ಹೆಬ್ಬಾಳ, ಜಗಣ್ಣಗೌಡ ರಾಮತೀರ್ಥ, ಪ್ರಭುರಾಜ ಕಾಂತಾ, ಶಾಂತಣ್ಣ ಚಾಳಿಕಾರ, ಶರಣಪ್ಪ ನಾಟೀಕಾರ್, ರಾಮಲಿಂಗ ಬಾನರ್, ಶಿವೂ ಸುಲ್ತನಪೂರ, ಭೀಮಣ್ಣ ಶಿಭಾ, ಸಾಬಣ್ಣ ಇಟಗಾ, ಭೀಮಣ್ಣ ಹೋತಿನಮಡಿ, ಸಾಯಬಗೌಡ, ಶಾಂತಪ್ಫ, ಸೇರಿದಂತೆ ಅನೇ...