ಸೋಮವಾರ, ನವೆಂಬರ್ 28, 2022

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಭೇಟಿ: ನಾದ್

ಚಿತ್ತಾಪುರ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮ ಹಾಗೂ ತಾಂಡಾಕ್ಕೆ ಭೇಟಿ ನೀಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಹಾಗೂ ಯೋಜನೆಗಳ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಿದ್ದೇನೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ಹೇಳಿದರು.
    
  ಮತಕ್ಷೇತ್ರದ ಅಲ್ಲೂರ.ಬಿ, ಅಳ್ಳೋಳ್ಳಿ, ಅಲ್ಲೂರ.ಕೆ, ರಾಮತೀರ್ಥ, ಭೀಮನಳ್ಳಿ, ಹಲಕಟ್ಟಿ, ರಾವೂರ, ರಾಂಪೂರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಉತ್ತಮ ಅಭಿಪ್ರಾಯ ಹಾಗೂ ಬೆಂಬಲ ವ್ಯಕ್ತವಾಗಿದೆ ಹಾಗೂ ಭಾರತೀಯ ಜನತಾ ಪಕ್ಷದ ಪರ ಉತ್ತಮ ವಾತಾವರಣವಿದೆ ಎಂದು ಹೇಳಿದರು.

  ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದಡಿ ಅರ್ಹ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದರು.
    
 ನಗರ ಯೋಜನಾ ಪ್ರಾಧಿಕಾರ ಸದಸ್ಯ ಶಾಂತಕುಮಾರ ಮಳಖೇಡ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕಡೇಸೂರ, ಹಂಪಣ್ಣ ಹುಳಾಗಡ್ಡಿ, ನಾಗಪ್ಪ ದೊಡ್ಡಮನಿ, ಈಶ್ವರ ಚಂದಣ್ಣನವರ್, ಭಾಸ್ಕರ್ ಭೀಮನಳ್ಳಿ, ಹಣಮಂತ ಹೆಡಗಿಮುದ್ರಿ, ಮಾರುತಿ ಮುಗುಳಕರ್, ಪರಶುರಾಮ ಭಾರ್ಗವ್ ಇತರರು ಇದ್ದರು.

ಭಾನುವಾರ, ನವೆಂಬರ್ 27, 2022

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಚಿತ್ತಾಪುರ: ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ನಾಗಾವಿ ಸಾಹಿತ್ಯ ಸಾಂಸ್ಕೃತಿ ಪರಿಷತ್ತ್ ವತಿಯಿಂದ  ಕೊಡಲ್ಪಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ವಿವಿಧ ಕ್ಷೇತ್ರದ ಏಳು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ತಿಳಿಸಿದ್ದಾರೆ.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯಲ್ಲಿದ್ದ ಎಲ್ಲ ಪದಾಧಿಕಾರಿಗಳ ಒಮ್ಮತದಿಂದ ಆಯಾ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ಗಣನೀಯ ಸೇವೆ ಸಲ್ಲಿಸಿದ್ದ ಸಾಧಕರನ್ನು ಗುರುತಿಸಿ ಯೋಗ್ಯ ಮತ್ತು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. 

ಬಸ್ಸಪ್ಪ ಮುಗುಳಖೋಡ (ಶಿಕ್ಷಣ ಕ್ಷೇತ್ರ), ವೀರಯ್ಯಸ್ವಾಮಿ ಸ್ಥಾವರಮಠ (ಸಾಹಿತ್ಯ ಕ್ಷೇತ್ರ), ಅಯ್ಯಣ್ಣ ಮಾಸ್ತರ ವಿಶ್ವಕರ್ಮ(ಸಂಗೀತ ಕ್ಷೇತ್ರ), ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ(ರಂಗಭೂಮಿ ಕ್ಷೇತ್ರ), ನರಸಿಂಹ ಆಲಮೇಲಕರ್ (ಚಿತ್ರಕಲೆ ಕ್ಷೇತ್ರ), ಮಹ್ಮದ ಇಬ್ರಾಹಿಂ (ಸಾಮಾಜಿಕ ಸೇವಾ ಕ್ಷೇತ್ರ), ಡಿ.ನರಸಯ್ಯಗೌಡ (ಕೃಷಿ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕವನ್ನು ಇಷ್ಟರಲ್ಲೇ ನಿಗದಿಪಡಿಸಿ ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಅತಿಥಿ ಗಣ್ಯಮಾನ್ಯರು ಹಾಗೂ ಸಾಹಿತಿಗಳನ್ನು ಅಹ್ವಾನಿಸಿ ಅರ್ಥಪೂರ್ಣವಾದ ಕಾರ್ಯಕ್ರಮ ಮಾಡಲು ನಿರ್ಧರಿಸಲಾಯಿತು.
 
ಈ ಸಂದರ್ಭದಲ್ಲಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವೀರಸಂಗಪ್ಪ ಸುಲೇಗಾಂವ, ಪದಾಧಿಕಾರಿಗಳಾದ ನರಸಪ್ಪ ಚಿನ್ನಕಟ್ಟಿ, ಶಾಂತಕುಮಾರ ಮಳಖೇಡ, ಭಾರತಿ ಸಿಂಪಿ, ರವಿಶಂಕರ ಬುರ್ಲಿ, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ಪ್ರದೀಪ ಕುಲಕರ್ಣಿ, ಜಗದೇವ ಕುಂಬಾರ, ಯಲ್ಲಯ್ಯ ಕಲಾಲ್ ಇದ್ದರು.





ಶುಕ್ರವಾರ, ನವೆಂಬರ್ 25, 2022

ಅಂಗನವಾಡಿ ಕೇಂದ್ರಕ್ಕೆ ಸಿಇಓ ಭೇಟಿ.

ಚಿತ್ತಾಪೂರ: ತಾಲ್ಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-5ಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀರಿಶ ದಿಲೀಪ್ ಬದೋಲೆ ಭೇಟಿ ನೀಡಿ ಅಂಗನವಾಡಿಯ ಸ್ವಚ್ಛತೆ,ಶಿಸ್ತು ಕ್ರಮಬದ್ಧತೆ ನೋಡಿ ಹಾಗೂ ಖುಷಿಯಿಂದ ಮಕ್ಕಳ ಜೊತೆ ಮಾತನಾಡಿಸಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಪಂ ಇಓ ನೀಲಗಂಗಾ ಬಬಲಾದ, ಸಿಡಿಪಿಓ ರಾಜಕುಮಾರ್ ರಾಠೋಡ, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಸಿದ್ದಣ್ಣ ಅಣಬಿ, ಹಿರಿಯ ಮುಖಂಡರಾದ ರಾಜಶೇಖರ್ ತಿಮ್ಮನಾಯಕ್ , ಮುನಿಯಪ್ಪ ಕೊಳ್ಳಿ, ಶಂಕರ್ ಕೊಳ್ಳಿ, ರಮೇಶ ಕವಡೆ ಸೇರಿದಂತೆ ಇತರರು ಇದ್ದರು.

ಬುಧವಾರ, ನವೆಂಬರ್ 23, 2022

ಬಡ ಮಹಿಳೆಯರಿಗೆ ಸೀರೆ ವಿತರಣೆ.


ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರ 44ನೇ ಜನ್ಮದಿನದ ನಿಮಿತ್ಯ ಪಟ್ಟಣದ ದೇವದಾಸಿ ಕಾಲೋನಿಯಲ್ಲಿನ ವಿಮುಕ್ತ ದೇವದಾಸಿ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು.
 ನಂತರ ಕೇಕ್ ಕಟ್ ಮಾಡಿ ಪ್ರತಿಯೊಬ್ಬರಿಗೆ ಸಿಹಿ ತಿನಿಸಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಮಾತನಾಡಿ  ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ಹಗಲು-ಇರುಳು ಅನ್ನದೆ ಶ್ರಮಿಸುತ್ತಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ನಾವು ಬೆಂಬಲಿಸಿ ಗೆಲ್ಲಿಸುವ ಜೊತೆಗೆ ಅವರ ಸರಳ ಮನೋಭಾವನೆಯನ್ನು ನಾವೆಲ್ಲರೂ ಪಾಲಿಸೋಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ್ ಶಿಂಧೆ, ಜಗನ್ನಾಥ ಮುಡಬೂಳಕರ್, ಆನಂದ್ ಮೊಗಲಾ, ಸಂಜಯ ಬುಳಕರ್, ವಿಜಯ್ ಕುಮಾರ್ ಚವ್ಹಾಣ, ಮಲ್ಲಿಕಾರ್ಜುನ್ ಕಲ್ಮರಿ, ಶರಣಬಸ್ಸು ಮುತ್ತಾಗಿ, ಸಿದ್ದಾರ್ಥ್, ಬಸವರಾಜ್, ರವಿ, ಸೇರಿದಂತೆ ಇತರರಿದ್ದರು.

ಪ್ರಿಯಾಂಕ್ ಖರ್ಗೆ ಜನ್ಮದಿನ ನಿಮಿತ್ಯ ಅನ್ನದಾಸೋಹ.


ಚಿತ್ತಾಪುರ : ಶಾಸಕ ಪ್ರಿಯಾಂಕ್ ಖರ್ಗೇ ಅವರ 44ನೇ ಜನ್ಮದಿನದ ನಿಮಿತ್ಯ  ಪಟ್ಟಣದ ಬಸ್ ನಿಲ್ದಾಣ ಹತ್ತಿರ ಭೀಮು ಹೊಳಿಕಟ್ಟಿ ಅವರ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ ಮೂಲಕ  ಹುಟ್ಟು ಹಬ್ಬವನ್ನು ಆಚರಿಸಲಾಯಿತು. 
 
ಈ ವೇಳೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಪ್ರಿಯಾಂಕ್ ಅಪ್ಪಟ ಅಭಿಮಾನಿ ಭೀಮು ಹೊಳಿಕಟ್ಟಿ ಅವರು ಮಾತನಾಡಿ  ಜಿಲ್ಲೆಯಲ್ಲಿ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿ ಮಾಡುದ್ದಾರೆ. ಮುಂಬರುವ ಚುನಾವಣೆಯಲ್ಲಿ ಯುವ ಮತದಾರರು ಸೇರಿದಂತೆ ಮತಕ್ಷೇತ್ರದ ಎಲ್ಲಾ ಮತ ಪ್ರಭುಗಳು ಅವರನ್ನು ಪ್ರಚಂಡ ಬಹು ಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಭೀಮಣ್ಣ ಹೊತ್ತಿನಮಡಿ , ಗುಂಡು ಐನಾಪುರ, ಶೀಲಾ ಕಾಶಿ, ಸಾಬಣ್ಣ ಹೊಳಿಕಟ್ಟಿ, ರಾಮಲಿಂಗ ಬಾನರ್, ಹಣಮಂತ ಸಂಕನೂರ, ಬಸವರಾಜ ಚಿನಮಳ್ಳಿ, ಸೇರಿದಂತೆ ಇತರರು ಇದ್ದರು.

ನೇಟೆರೋಗ ತೊಗರಿ ಬೆಳೆ ನಾಶ, ಪರಿಹಾರಕ್ಕೆ ಆಗ್ರಹ.

ಚಿತ್ತಾಪೂರ: ತೊಗರಿ ಬೆಳೆಗೆ ನೇಟೆರೋಗ ಬಾದೆಯಿಂದ ಚಿತ್ತಾಪೂರ, ಕಾಳಗಿ, ಹಾಗೂ ಶಹಬಾದ ತಾಲೂಕಿನಾದ್ಯಂತ ತೊಗರಿ ಬೆಳೆ ಕಾಯಿ ಕಟ್ಟುವ ಹಂತದಲ್ಲಿ ನೇಟೆರೋಗ ಭಾದೆಯಿಂದ ತೊಗರಿ ಬೆಳೆ ನಾಶವಾಗಿವೆ ಹೀಗಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಅತ್ಯುತ್ತಮ ತೊಗರಿ ಬೆಳೆ ಬೆಳೆಯುವ 3 ತಾಲೂಕುಗಳಲ್ಲಿ ನೇಟೆರೋಗದಿಂದ ಸಂಪೂರ್ಣ ಬೆಳೆ ನಾಶವಾಗಿವೆ. ಈಗಾಗಲೇ ಅತಿವೃಷ್ಟಿಯಿಂದ ಅನೇಕ ಬೆಳೆಗಳು ನಾಶವಾಗಿವೆ. ಇನ್ನು ಅಳಿದು ಉಳಿದ ಬೆಳೆ ನೇಟೆರೋಗ ಬಾದೆಯಿಂದ ಸಂಪೂರ್ಣ ನಾಶವಾಗಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. 

ರೈತ ಪರ ಕಾಳಜಿ ವಹಿಸಿ ಜಿಲ್ಲಾದ್ಯಾದಂತ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಯಶಸ್ವಿ ಮಾಡಿರುವ ಕೀರ್ತಿ ನಿಮಗೆ ಸಲ್ಲುತ್ತದೆ. ರೈತ ಪರ ಕಾಳಜಿ ಹೊಂದಿರುವಂತ ತಾವು ಚಿತ್ತಾಪೂರ ಕಾಳಗಿ, ಹಾಗೂ ಶಹಬಾದ ತಾಲೂಕುಗಳಲ್ಲಿ ಕೃಷಿ ಅಧಿಕಾರಿಗಳ ಮುಖಾಂತರ ಸರ್ವೆ ಮಾಡಿಸಿ. ನೇಟೆರೋಗಕ್ಕೆ ತುತ್ತಾದ ಬೆಳೆಗೆ 25 ಸಾವಿರ ರೂಪಾಯಿ  ಪರಿಹಾರ ಒದಗಿಸಲು ಕೋರಿದ್ದಾರೆ.

ಶನಿವಾರ, ನವೆಂಬರ್ 19, 2022

ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಗುರಿ: ಗುತ್ತೇದಾರ್


ಚಿತ್ತಾಪುರ: ನಾಗಾವಿ ನಾಡು ಎಂದು ಖ್ಯಾತಿ ಪಡೆದ ಚಿತ್ತಾಪುರ ತಾಲೂಕಿನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಹೊಸದಾಗಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಹುಟ್ಟು ಹಾಕಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿನ ಐತಿಹಾಸಿಕ ನಾಗಾವಿ ಕ್ಷೇತ್ರದ ಇತಿಹಾಸದ ಕೈಪಿಡಿಯನ್ನು ಸಿದ್ದಪಡಿಸುವ ಮೂಲಕ ಮನೆ ಮನೆಗೆ ಮುಟ್ಟಿಸುವ ಗುರಿ ಹೊಂದಲಾಗಿದೆ ಈ ನಿಟ್ಟಿನಲ್ಲಿ ನಮ್ಮ ನೆಲದ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಲಾಗುವುದು ಎಂದರು.

   ಪ್ರತಿ ವರ್ಷ ನಾಗಾವಿ ಉತ್ಸವ ಹಾಗೂ ವಿವಿಧ ಸಾಧಕರನ್ನು ಗುರುತಿಸಿ ನಾಗಾವಿ ಪ್ರಶಸ್ತಿ ಪ್ರಧಾನ ಮಾಡುವುದು, ತಾಲೂಕಿನ ಸಾಹಿತಿಗಳನ್ನು ಒಂದಡೇ ಸೇರಿಸಿ ಸಾಹಿತಿಗಳ ಸಂಗಮ, ಶಿಕ್ಷಕರ ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಸಾಹಿತ್ಯ ವಿಚಾರ ಸಂಕೀರ್ಣ, ಕವಿ ಕಲಾವಿಧರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದು, ನಾಗಾವಿ ನೆಲದಲ್ಲಿ ಬೆಳದಿಂಗಳು ಊಟ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  ಇದೇ ನ.೨೯ ರಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

   ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಅಹ್ವಾನ: ಚಿತ್ತಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಂಗೀತ ಕ್ಷೇತ್ರ, ನಾಟಕ (ರಂಗಭೂಮಿ) ಕ್ಷೇತ್ರ, ಕೃಷಿ ಕ್ಷೇತ್ರ, ಕಲಾ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ರಾಜ್ಯೋತ್ಸವ ಪ್ರಶಸ್ತಿಗಾಗಿ ತಮ್ಮ ಸೂಕ್ತ ದಾಖಲೆಗಳೊಂದಿಗೆ ಸ್ವ ವಿವರ ಮಾಹಿತಿಯನ್ನು ನರಸಪ್ಪ ಚಿನ್ನಕಟ್ಟಿ ಶಿಕ್ಷಕರು ಅಣ್ಣೆಮ್ಮ ಗೊಬ್ಬುರ ಪ್ರೌಢ ಶಾಲೆ ಶಹಾಬಾದ ರಸ್ತೆ ಚಿತ್ತಾಪುರ ವಿಳಾಸಕ್ಕೆ ಇದೇ ನ.೨೫ರ ಒಳಗೆ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಮೋ.೯೮೮೦೬೩೭೪೧೮, ೯೯೭೨೮೯೫೭೭೧ ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

  ಪದಾಧಿಕಾರಿಗಳ ಆಯ್ಕೆ: ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಾಶಿನಾಥ ಗುತ್ತೇದಾರ (ಅಧ್ಯಕ್ಷರು) ಸಾಯಬಣ್ಣಾ ಗುಡುಬಾ, ರವೀಂದ್ರ ಇವಣಿ, ನರಸಪ್ಪ ಚಿನ್ನಕಟ್ಟಿ (ಉಪಾಧ್ಯಕ್ಷರು), ವೀರಸಂಗಪ್ಪ ಸುಲೇಗಾಂವ (ಪ್ರಧಾನ ಕಾರ್ಯದರ್ಶಿ), ನಟರಾಜ ಶಿಲ್ಪಿ (ಸಹ ಕಾರ್ಯದರ್ಶಿ), ಶಾಂತಕುಮಾರ ಮಳಖೇಡ (ಸಂಘಟನಾ ಕಾರ್ಯದರ್ಶಿ), ರವಿಶಂಕರ ಬುರ್ಲಿ (ಖಜಾಂಚಿ), ಮಹ್ಮದ ಮಶಾಕ್, ಜಗದೇವ ಕುಂಬಾರ, ಯಲ್ಲಯ್ಯಾ ಕಲಾಲ್, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ಮುನಿಯಪ್ಪ ಕಡಬೂರ, ಮಲ್ಲಿಕಾರ್ಜುನ ಮದನಕರ್, ಶಿವಲೀಲಾ ಕಲಗುರ್ಕಿ, ಭಾರತಿ ಸಿಂಪಿ, ವಿಷ್ಣುವರ್ಧನರೆಡ್ಡಿ, ಮೋನಯ್ಯ ಪಂಚಾಳ, ದೇವಿಂದ್ರಪ್ಪ ಇಮಡಾಪೂರ, ಪ್ರದೀಪ ಕುಲಕರ್ಣಿ (ಸದಸ್ಯರು) ಆಯ್ಕೆಯಾಗಿದ್ದಾರೆ.

ಗುರುವಾರ, ನವೆಂಬರ್ 17, 2022

ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಬದ್ಧ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ಗ್ರಾಮೀಣ ಭಾಗಗಳ ಅಭಿವೃದ್ದಿ ನಾನು ಬದ್ಧತೆನಾಗಿದ್ದೆನೆ ಹಾಗೂ  ಇನ್ನೂ ಅಭಿವೃದ್ದಿ ಕೆಲಸ ಮಾಡುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ತಾಲ್ಲೂಕಿನ  ಹೊಸೂರ ಗ್ರಾಮದಲ್ಲಿ ಒಟ್ಟು ರೂ 68.05 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೋಣೆ ( ರೂ 52 ಲಕ್ಷ), ಮಾದಿಗ ಸಮಾಜದ ಏರಿಯಾದಲ್ಲಿ ಸಾಂಸ್ಕೃತಿಕ ಭವನ‌ ( ರೂ 6.05 ಲಕ್ಷ) ಹಾಗೂ ಕೋಲಿ ಸಮಾಜದ ಹತ್ತಿರ ಸಾಂಸ್ಕ್ರತಿಕ ಭವನ ( ರೂ 10 ಲಕ್ಷ) ಕ್ಕೆ ಅಡಿಗಲ್ಲು ನೆರವೇರಿಸಿ‌ ಮಾತನಾಡಿದ ಅವರು ನಾನು ಸಚಿವನಾಗಿದ್ದಾಗ ರೂ 80 ಕೋಟಿ ಕಲಬುರಗಿಗೆ ಕೊಟ್ಟಿದ್ದೇನೆ, ಸೇಡಂ, ಕಲಬುರಗಿ ಗ್ರಾಮೀಣ ಹಾಗೂ ಚಿಂಚೋಳಿ‌ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ ಈ‌ ಸರ್ಕಾರ ನನ್ನ ಕ್ಷೇತ್ರಕ್ಕೆ ಬಿಡುಗಡೆಯಾಗಬೇಕಿದ್ದ ರೂ. 200 ಕೋಟಿ ತಡೆ ಹಿಡಿಯಲಾಗಿದೆ ಇದು ದ್ವೇಷದ ರಾಜಕಾರಣದ ಫಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ ಬಾರಿ ಮೊದಲ ಹಂತದಲ್ಲಿ ಹೊಸೂರ ಗ್ರಾಮಕ್ಕೆ ರೂ 60 ಲಕ್ಷ ವೆಚ್ವದಲ್ಲಿ ಶಾಲೆಗಳಿಗೆ ಅನುದಾನ ನೀಡಿದ್ದೆ. ಈಗ ಎರಡನೆಯ ಹಂತದಲ್ಲಿ ಶಾಲೆಗಳ ನಿರ್ಮಾಣಕ್ಕಾಗಿ ರೂ‌ 60 ಲಕ್ಷ‌. ಹೀಗೆ ಒಟ್ಟು ರೂ 1ಕೋಟಿಗೂ ಅಧಿಕ‌ ಅನುದಾನವನ್ನು ಕೇವಲ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರ ವಿವೇಕ ಯೋಜನೆಯಡಿಯಲ್ಲಿ ನೂತನ ಶಾಲೆಗಳನ್ನು ಕಟ್ಟಿಸಿ ಅವುಗಳಿಗೆ ಕೇಸರಿ ಬಣ್ಣ ಬಳಿಯುತ್ತಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರದ ಆಧ್ಯತೆಯ ಬಗ್ಗೆ ತಕರಾರಿದೆ. ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಾಣ, ಶಿಕ್ಷಕರ ಕೊರತೆ ನೀಗಿಸುವುದು ಮುಖ್ಯವಾಗಬೇಕಿತ್ತು. ಅದನ್ನ ಬದಿಗಿಟ್ಟು ಧ್ಯಾನ ಮಾಡಿಸುವುದು ಪೋಷಕರಿಂದ ನೂರು ರೂಪಾಯಿ ಕಲೆಕ್ಟ್ ಮಾಡಲಾಗುತ್ತಿದೆ ಇದು ಸರಿಯಲ್ಲ. ನಮ್ಮ ಆದ್ಯತೆ ಶಾಲೆಯ ಶಿಕ್ಷಣ ಮೂಲ ಸೌಕರ್ಯವಾಗಿರಬೇಕೆ ಹೊರತು ಬಣ್ಣದಲ್ಲಲ್ಲ ಎಂದು ಟೀಕಿಸಿದರು.

ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ ಅವುಗಳನ್ನು ತುಂಬುವ ಆಸಕ್ತಿ ಇಲ್ಲ. ಆದರೆ ಕೆಪಿಟಿಸಿಎಲ್, ಪಿಎಸೈ, ಪಂಚಾಯತ ರಾಜ್ ನೇಮಕಾತಿ ನಡೆಸಿದ್ದರು ಆದರೆ ಅಲ್ಲಿ ಹಣದ ಅವ್ಯವಹಾರ ನಡೆದು ಇಂದು ಲಕ್ಷಾಂತರ ನಿರುದ್ಯೋಗಿ‌ ಯುವಕರ ಭವಿಷ್ಯ ಕತ್ತಲಲ್ಲಿ ಮುಳುಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲದ ವ್ಯಕ್ತಿಗಳು ಇತ್ತೀಚಿಗೆ ರಾಜಕಾರಣಕ್ಕೆ ಬರುತ್ತಿದ್ದಾರೆ‌. ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಠಿಸುತ್ತಿರುವವರನ್ನ ದೂರವಿಡಬೇಕು. ಅಭಿವೃದ್ದಿ ಪರವಿರುವ ಹಾಗೂ ಜನಪರ ಕಾಳಜಿ ಹೊಂದಿರುವವರನ್ನು ಗುರುತಿಸಬೇಕು. ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಗ್ರಾಪಂ ಅಧ್ಯಕ್ಷರಾದ ಮಹಿಪಾಲ ಮೂಲಿಮನಿ ಮಾತನಾಡಿ, ಗ್ರಾಮದಿಂದ ದಿಗ್ಗಾಂವ ಮುಖ್ಯ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು  ಮಾತನಾಡಿ ಗ್ರಾಮದಲ್ಲಿ ಎಲ್ಲ ಸಮೂದಾಯದವರಿಗೆ ಸ್ಮಶಾನ ಭೂಮಿ ಒದಗಿಸಬೇಕು. ಸಾಮೂಹಿಕ ವಿವಾಹ ಮಾಡಲು ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು. ಮುಸ್ಲಿಂರ ಖಬರಸ್ಥಾನಕ್ಕೆ ಕಂಪೌಂಡ್ ನಿರ್ಮಾಣ‌ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮಾಜಿ ಜಿಪಂ ಅಧ್ಯಕ್ಷ ರಮೇಶ ಮರಗೋಳ, ಮಾಜಿ ಜಿಪಂ ಸದಸ್ಯ ಶಿವರುದ್ರ ಬೀಣಿ, ಬಸವರಾಜ್ ಚಿಮ್ಮನ್ನಳ್ಳಿ ಸೇರಿದಂತೆ ಇತರರು ಇದ್ದರು.

ಮುಖ್ಯ ಶಿಕ್ಷಕರನ್ನು ಬದಲಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಚಿತ್ತಾಪೂರ: ನಾಗಾವಿ ಕ್ಯಾಂಪಸ್‌ ನಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಮುಖ್ಯ ಶಿಕ್ಷಕರನ್ನು ಬದಲಾಯಿಸಿ ಬೇರೆಯವರನ್ನು ನಿಯೋಜನೆ ಮಾಡಬೇಕು ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸಬೇಕು. ಇತರೆ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ನಾಗಾವಿ ಕ್ಯಾಂಪಸನ ಮುಖ್ಯ ರಸ್ತೆ,ಹಾಗೂ ಸಾತನೂರ ಮತ್ತು ಕರದಾಳ ಹೋಗುವ ರಸ್ತೆ ಬಂದ ಮಾಡಿ  ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಅವರು ಪ್ರತಿಭಟನೆ ಹಮ್ಮಿಕೊಂಡು ಗ್ರೇಡ್ 2 ತಹಸೀಲ್ದಾರ್ ಅಮಿತ ಕುಲ್ಕರ್ಣಿ, ಹಾಗೂ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯ ರುದ್ನೂರ ಅವರಿಗೆ ಪ್ರತಿಭಟನೆ ಮನವಿ ಪತ್ರವನ್ನು ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ್ ನೇತೃತ್ವದಲ್ಲಿ ಸಲ್ಲಿಸಿ ಮಾತನಾಡಿದ ಅವರು ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಶಾಲಾ ಆಡಳಿತದ ಮತ್ತು ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಅಸಮರ್ಥ, ಅಸಹಾಯಕ ದೃಷ್ಠಿಕೋನವಿರುವ ಮುಖ್ಯಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬದಲಾವಣೆ ಮಾಡುವ ಕ್ರಮ ಕೈಗೊಂಡು ಹೊಸದಾಗಿ ಮತ್ತು ನಕರಾತ್ಮಕ ಸಮರ್ಥವಿರುವ ಮುಖ್ಯಶಿಕ್ಷಕರನ್ನು ನಿಯೋಜಿಸಬೇಕು. 
6ನೇ ತರಗತಿಯಿಂದ 10ನೇ ತರಗತಿ ಇರುವ ಈ ಶಾಲೆಯಲ್ಲಿ 350 ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಈಗಿರುವ ಮುಖ್ಯಶಿಕ್ಷಕರು ಅಡಳಿತದ ಅನುಭವದ ಕೊರತೆಯಿಂದ ಶಾಲೆಯನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದರಿಂದ ಶಾಲೆಯ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದರಿಂದ ಬೇಸತ್ತಿದ್ದಾರೆ. ಇಂತಹ ಅಸಮರ್ಥ ಮುಖ್ಯಶಿಕ್ಷಕರಿಂದ ಶಾಲೆಯ ಶೈಕ್ಷಣಿಕ ವಾತಾವರಣ ಹಾಳಾಗಿದೆ ಈ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಅವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೆಳ್ಳದೇ ಇರುವುದರಿಂದ ಇಂದು ರಸ್ತೆತಡೆ ಮಾಡಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.

ಶಾಲಾಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಪಾತ್ರ ಬಹಳ ಪ್ರಮುಖವಾಗಿದೆ ಆದರೆ ಮುಖ್ಯಶಿಕ್ಷಕರು ಮಾತ್ರ ಎಸ್‌ಡಿಎಂಸಿ ಅವರ ಗಮನಕ್ಕೆ ಯಾವುದೇ ವಿಷಯ ಅಥವಾ ಸರಕಾರದ ಯೋಜನೆಗಳ ಬಗ್ಗೆ (ಉದಾ: ಶೂ, ಸಾಕ್ಸ್, ಬಟ್ಟೆ ಇತ್ಯಾದಿ) ಮಾಹಿತಿ ನೀಡದೇ ತಾವೇ ಎಲ್ಲ ಕೆಲಸ ಕಾರ್ಯಗಳು ಮಾಡುತ್ತಾರೆ, ಇಲ್ಲಿವರೆಗೆ ಶಾಲಾಭಿವೃದ್ಧಿಗೆ ಬಂದ ಅನುದಾನದ ಮಾಹಿತಿ ನೀಡಿಲ್ಲ ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ. ಅದರಲ್ಲೂ ಲೆಕ್ಕಪತ್ರದ ರೀಜಿಸ್ಟರ್ ನಿರ್ವಹಣೆ ಮಾಡಿಲ್ಲ ಹಾಗೂ ಇಲ್ಲಿ ಸಾಕಾಷ್ಟು ಅವ್ಯವಹಾರ ನಡೆದಿರುವುದು ಅನುಮಾನ ಮೂಡಿದೆ. ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಜೊತೆ ಅಸಭ್ಯ ರೀತಿಯಿಂದ ವರ್ತಿಸುತ್ತಾರೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ನೀಡುತಿಲ್ಲ. ಇಂತಹ ಅನಾನುಭವಿ ಮತ್ತು ಬೇಜವಾಬ್ದಾರಿ ಮುಖ್ಯಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬದಲಾಯಿಸಬೇಕು.

ಶಾಲೆಯಲ್ಲಿ ಮುಖ್ಯಶಿಕ್ಷಕರು, ಸಹಶಿಕ್ಷಕರು ಸೇರಿ 18 ಹುದ್ದೆಗಳಿವೆ ಆದರೆ ಈಗ ಮುಖ್ಯಶಿಕ್ಷಕರು ಸೇರಿ 7 ಜನ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ

ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರಿದೆ, ಕೂಡಲೇ ಅಗತ್ಯ. ಶಿಕ್ಷಕರ ನಿಯೋಜನೆ ಮಾಡಬೇಕು. ಶಿಕ್ಷಕರ ಸಮಸ್ಯೆಯ ನಡುವೆ 8 ಜನ ಅತಿಥಿ ಶಿಕ್ಷಕರ ಮೇಲೆಯೇ ಶಾಲೆ ನಡೆಯುತ್ತಿದೆ. ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣದಿಂದ ಮುಖ್ಯಶಿಕ್ಷಕಿಯನ್ನು ಬದಲಾಯಿಸಿ ಹೊಸದಾಗಿ ಮುಖ್ಯಶಿಕ್ಷಕರನ್ನು ನಿಯೋಜನೆ ಮಾಡುವ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈಗ ರಸ್ತೆತಡೆ ಪ್ರತಿಭಟನೆ ಮಾಡುತ್ತಿದ್ದೇವೆ ಬರುವ ದಿನಗಳಲ್ಲಿ ಶಾಲೆಗೆ ಬೀಗ ಹಾಕಿ ಪಾದಯತ್ರೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಮಾತನಾಡಿ ಶಾಲೆಯಲ್ಲಿನ ಶಿಕ್ಷಕರ ಕೊರತೆ ನಿಗಿಸಿ ಅಗತ್ಯ ಸಮಾಜ ವಿಜ್ಞಾನ, ಇಂಗ್ಲೀಷ್, ಗಣಿತ, ಕನ್ನಡ, ವಿಜ್ಞಾನ, ಹಿಂದಿ ವಿಷಯಗಳ ಶಿಕ್ಷಕರನ್ನು ಹಾಗೂ ಕ್ಲರ್ಕ್ ಮತ್ತು ಪ್ಯೂನ್, ವಾಚಮನ್ ನಿಯೋಜಿಸಬೇಕು.ಶಾಲೆಗೆ ಶುದ್ಧ ಕುಡಿಯುವ ನೀರು, ವಿದ್ಯುತ್‌, ಸ್ವಚ್ಛತೆ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು.

ನಮಗೆ ಮದ್ಯಾಹ್ನದ ಬಿಸಿಯೂಟ ಸರಿಯಾಗಿ ನೀಡುತ್ತಿಲ್ಲ. ಪ್ರತಿ ಬಾರಿ ಗ್ಯಾಸ್‌ ಸಮಸ್ಯೆ ಹೇಳುತ್ತಾರೆ. ಸರಕಾರದ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ಮೊಟ್ಟೆ ಮತ್ತು ಹಾಲು ಸರಿಯಾಗಿ ನೀಡುತ್ತಿಲ್ಲ.ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಾಗಾವಿ ಕ್ಯಾಂಪಸ್‌ ಒಳಗಡೆ ಸಾರಿಗೆ ಬಸ್ಸುಗಳು ವಾಯ್ಡಾ ಮಾಡಿ ಹೋಗುವಂತೆ ಮಾಡಬೇಕು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀಮತಿ ಸುನಿತಾ ತಳವಾರ, ಸದಸ್ಯರಾದ ಸುಭಾಶ್ಚಂದ್ರ ಅವಂಟಿ, ಅನಂದ ಕುಮಾರ್, ಹುಸನಯ್ಯ ಗುತ್ತೇದಾರ್, ಮಲ್ಲಿಕಾರ್ಜುನ, ಮಲ್ಲಿನ್ನಾಥ ಕಡ್ಲಿ, ಚನ್ನಬಸಪ್ಪ ಸಾತನೂರಕರ್, ದೇವಸುಂದರ್ ಕರದಾಳ, ಸೇರಿದಂತೆ ಇತರರು ಇದ್ದರು.


ಬುಧವಾರ, ನವೆಂಬರ್ 16, 2022

ವಿದ್ಯಾರ್ಥಿಯ ಕಾಲು ಮುರಿತ: ಶಾಲಾ ಆಡಳಿತ ನಿರ್ಲಕ್ಷ್ಯ.

ಶಹಾಬಾದ:ಬಸವ ಸಮಿತಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಬಾಗೇಶ್ ತಂದೆ ವಿಶ್ವನಾಥ್ ಎಂಬ ವಿದ್ಯಾರ್ಥಿಯ ಕಾಲು ಮುರಿದಿದ್ದು ಶಾಲಾ ಆಡಳಿತ ವಿದ್ಯಾರ್ಥಿಯ ಚಿಕಿತ್ಸೆಗೆ ಮುಂದಾಗದೆ ಸಂಪೂರ್ಣವಾಗಿ ನಿರ್ಲಕ್ಷತನ ತೋರಿದೆ ಎಂದು ವಿದ್ಯಾರ್ಥಿಯ ಅಜ್ಜನಾದ ಮಲ್ಲಿಕಾರ್ಜುನ್ ತಳವಾರ್ ತಿಳಿಸಿದ್ದಾರೆ.
ತಾಲೂಕಿನ ಭಂಕೂರ ಗ್ರಾಮದ ಬಸವ ಸಮಿತಿ ಪ್ರಾಥಮಿಕ ಶಾಲೆಗೆ ಅಗಸ್ಟ್- 19, ವಿದ್ಯಾರ್ಥಿಯು ಶಾಲಾ ಸಮಯಕ್ಕೆ ಸರಿಯಾಗಿ  ಬೆಳಿಗ್ಗೆ, 9:20ಕ್ಕೆ ಬಂದು  ಶಾಲಾ ಆವರಣದಲ್ಲಿ  ವಿದ್ಯಾರ್ಥಿಗಳು ಆಟವಾಡುವಾಗ 5ನೇ ತರಗತಿಯ ರೀಯಾನ್ ಎಂಬ ವಿದ್ಯಾರ್ಥಿ ಗೋಡೆಯ ಮೇಲಿಂದ ಬಾಗೇಶ್ ಎಂಬ ವಿದ್ಯಾರ್ಥಿಯ ಮೇಲೆ ಹಾರಿದ್ದರಿಂದ ವಿದ್ಯಾರ್ಥಿ ನೋವು ತಾಳಲಾರದೆ ಅಳಲು ಆರಂಭಿಸಿದಾಗ ಶಿಕ್ಷಕರು ಫೋನ್ ಮಾಡಿ ತಿಳಿಸಿದ್ದಾರೆ.

ದಿಡೀರನೆ ನಮ್ಮ ಮೊಮ್ಮಗನನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಹೇಳಿಕೆ ಪ್ರಕಾರ ವಿದ್ಯಾರ್ಥಿಯ ಕಾಲು ಮುರಿತವಾಗಿ ಕಾಲಿಗೆ ರಾಡ್ ಹಾಕಬೇಕು ತುಂಬಾ ಹಣ ಖರ್ಚು ಆಗುತ್ತದೆ ಎಂದಾಗ ನಮಗೆ ದಿಕ್ಕು ತೋಚದಂತಾಯ್ತು. ಕೂಡಲೇ ಶಾಲಾ ಆಡಳಿತಕ್ಕೆ ತಿಳಿಸಿದಾಗ ನಮಗೆ ಅದು ಯಾವುದು ಗೊತ್ತಿಲ್ಲ. ನೋಡೋಣ, ಆ ವಿದ್ಯಾರ್ಥಿಯ ಪಾಲಕರ ಜೊತೆ ಮಾತನಾಡುವೆ ಎಂದರು, ಮತ್ತೆ ನಾವು ರಿಯಾನ್ ಎಂಬ ವಿದ್ಯಾರ್ಥಿಯ ಪಾಲಕರಿಗೆ ಈ ವಿಷಯ ತಿಳಿಸಿದಾಗ ಅವರು ಸಹ ಸ್ಪಂದನೆ ನೀಡಿಲ್ಲ. ವಿಧಿ ಇಲ್ಲದೆ ಬೇರೆಯವರ ಹತ್ತಿರ ಸಾಲ ಮಾಡಿ ಮೊಮ್ಮಗನ ಚಿಕಿತ್ಸೆಗೆ ಮುಂದಾದೇವು ಈಗ ಸದ್ಯ ಮೊಮ್ಮಗನ ಚಿಕಿತ್ಸೆಗೆ 1ಲಕ್ಷ, 50ಸಾವಿರ ರೂಪಾಯಿ ಖರ್ಚಾಗಿದೆ.

ಇನ್ನು ಮೊಮ್ಮಗನ ಚಿಕಿತ್ಸೆಗೆ ಹಣ ಬೇಕಾಗಿದೆ. ಹಾಗೂ ಮೊಮ್ಮಗನ ಚಿಕಿತ್ಸೆಗೆ ಸಾಲ ಕೊಟ್ಟವರು ಹಣ ಕೇಳುತ್ತಿದ್ದಾರೆ. ಈಗ ನಮಗೆ ಏನು ಮಾಡಬೇಕು ಎಂದು ತಿಳಿಯದಾಗಿದೆ. ಕೂಡಲೇ ಬಸವ ಸಮಿತಿ ಶಾಲಾ ಆಡಳಿತ ಹಾಗೂ ರಿಯಾನ್ ಪಾಲಕರು ಕೂಡಲೇ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ನಾವು ಬಸವ ಸಮಿತಿ ಶಾಲಾ ಆಡಳಿತದ ವಿರುದ್ಧ ಹಾಗೂ ರಿಯಾನ್ ಪಾಲಕರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಅವರ ವಿರುದ್ಧ ದೂರ ದಾಖಲಿಸುವೆ, ಹಾಗೂ ನ್ಯಾಯಾಲಯದ ಮರೆ ಹೋಗುವುದಾಗಿ ತಿಳಿಸಿದ್ದಾರೆ.

ಮಂಗಳವಾರ, ನವೆಂಬರ್ 15, 2022

ಪ್ರಿಯಾಂಕ್ ಖರ್ಗೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ:ಬೆಣ್ಣೂರಕರ್.

ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದಲ್ಲಿ ಪುರಸಭೆ ವತಿಯಿಂದ ನಡೆದ ವಿವಿಧ ಅಭಿವೃದ್ದಿ ಅಡಿಗಲ್ಲು ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ ನಾವು ಮನಸ್ಸು ಮಾಡಿದ್ದರೆ ಒಬ್ಬ ಬಿಜೆಪಿ ಲೀಡರ್ ಚಿತ್ತಾಪುರದಲ್ಲಿ ಅಷ್ಟೇ ಅಲ್ಲ ಕಲಬುರಗಿ ಜಿಲ್ಲೆಯಲ್ಲಿ ಓಡಾಡುವುದಿಲ್ಲ ಆ ರೀತಿ ಮಾಡುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ಸರ್ಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಹೇಳಿದರು.

  ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಡಿ ಪಟ್ಟಣದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ರಾಜಕೀಯ ಭಾಷಣ ಮಾಡುವ ಮೂಲಕ ಸರಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಯುತ ಟೀಕೆ ಟಿಪ್ಪಣೆ ಮಾಡಲಿ ಆದರೆ ನಾಲಿಗೆ ಹರಿಬಿಟ್ಟು ಮಾತನಾಡುವ ಮೂಲಕ ಚಿತ್ತಾಪುರ ಕ್ಷೇತ್ರದ ರಾಜಕೀಯಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ ಎಂದರು.

  ಪ್ರತಿ ಕಾರ್ಯಕ್ರಮದಲ್ಲಿ ಪ್ರಬುದ್ದ ಸಮಾಜ ಮತ್ತು ಸಮೃದ್ದ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳುವ ಶಾಸಕರು, ಇದೇನಾ ನಿಮ್ಮ ಪ್ರಬುದ್ದ ರಾಜಕಾರಣ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಒಬ್ಬ ಲೀಡರ್ ರಸ್ತೆಯಲ್ಲಿ ಓಡಾಡುವಂತಿಲ್ಲ ಹಾಗೆ ಮಾಡುತ್ತೇನೆ ಎಂದು ಹೇಳುವ ಮೂಲಕ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಪ್ರಚೋದನಾತ್ಮಕವಾಗಿದ್ದು ಸಮಾಜದಲ್ಲಿ ಅಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆ ತಂದAತಾಗಿದೆ. ಆದ್ದರಿಂದ ಕೂಡಲೇ ಇವರ ಮೇಲೆ ಪೊಲೀಸ್ ಇಲಾಖೆ ಸ್ಪಯಂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

  ಚಿತ್ತಾಪುರ ಕ್ಷೇತ್ರವು ಜಿಲ್ಲೆಯಲ್ಲಿಯೇ ಶಾಂತಿಗೆ ಹೆಸರಾದ ತಾಲೂಕಾಗಿದೆ, ಇಲ್ಲಿವರೆಗೆ ಶಾಂತಿಗೆ ಭಂಗ ತರುವ ಕೆಲಸಗಳು ಯಾವ ರಾಜಕಾರಣಿಗಳು ಮಾಡಿಲ್ಲ, ಮತ್ತು ದ್ವೇಷದ ರಾಜಕಾರಣ ಮಾಡಿಲ, ಆದರೆ ಈಗ ಕ್ಷೇತ್ರದಲ್ಲಿ ಬೇರೆಯವರು ಮುಗ್ದ ಜನರಲ್ಲಿ ದ್ವೇಷದ ಬೀಜಗಳು ಬಿತ್ತಿ ರಾಜಕೀಯ ವಾತಾವರಣ ಕಲುಷಿತಗೊಳಿಸುತ್ತಿರುವ ಅವರ ನಡೆ ಖಂಡನಾರ್ಹವಾಗಿದೆ ಹಾಗೂ ಅಂತಹವರಿಗೆ ಮತದಾರರ ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.

  ಶಾಸಕ ಪ್ರಿಯಾಂಕ್ ಖರ್ಗೆ ಅವರ ಮಾತುಗಳಿಂದ ಬಿಜೆಪಿ ಕಾರ್ಯಕರ್ತರಾರು ಭಯ ಪಡುವ ಅವಶ್ಯಕತೆಯಿಲ್ಲ, ದೈರ್ಯದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿ ನಿಮ್ಮ ಹಿಂದೆ ಪಕ್ಷದ ನಾಯಕರು ಇದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಶತಸಿದ್ದ ಹೀಗಾಗಿ ಪ್ರಿಯಾಂಕ್ ಖರ್ಗೆ ಸೋಲುವ ಬೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...