ಅಭಿವೃದ್ದಿ ನೋಡಿ ಮತ ಹಾಕಿ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ನಮಗೆ ಅಭಿವೃದ್ದಿಯೇ ಮೂಲಮಂತ್ರ, ಚಿತ್ತಾಪುರದಲ್ಲಿ ಒಂದು ಪರಿಪೂರ್ಣ ಸಮಾಜ ನಿರ್ಮಾಣದ ಕನಸು ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಮುಖ್ಯವಾಹಿನಿಗೆ ತರುವ ತುಡಿತ ನಮಗಿದೆ. ಯಾವುದೇ ಧರ್ಮ ಹಾಗೂ ಜಾತಿಯ ರಾಜಕೀಯ ಬೇಕಿಲ್ಲ. ಹಾಗಾಗಿ ಸರ್ವಾಂಗೀಣ ಅಭಿವೃದ್ದಿ ನೋಡಿ ನನ್ನಗೆ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆಗೊಂಡ ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಅಭಿವೃದ್ದಿ ಪರ, ಯುವಕರ ಭವಿಷ್ಯದ ಕಾಳಜಿ ಇರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಹಾಗಾಗಿ ಅವರಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ಈ ಸಲದ ಚುನಾವಣೆ ಚಿತ್ತಾಪುರದ ಭವಿಷ್ಯದ ಪ್ರಶ್ನೆಯಾಗಿದೆ. ಬಿಜೆಪಿ ಅಭ್ಯರ್ಥಿ ಪರ ಯಾವೊಬ್ಬ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಬಿಜೆಪಿಯಲ್ಲಿರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಇಲ್ಲವೇ ತಟಸ್ಥರಾಗಿದ್ದಾರೆ ಹಾಗಾಗಿ ಕೇವಲ ಎನ್ ರವಿಕುಮಾರ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಬಸವ ತತ್ವ, ಅಂಬಿಗರ ಚೌಡಯ್ಯನವರ ತತ್ವ ಆದರ್ಶ, ಸಂವಿಧಾನದ ಪರಿಪಾಲನೆ ಹಾಗೂ ಅಭಿವೃದ್ಧಿ ಪರ ಚಿಂತನೆ ಇರುವ ವ್ಯಕ್ತಿ ಚುನಾವ...