ಶನಿವಾರ, ಡಿಸೆಂಬರ್ 17, 2022

ನಾಗಾವಿ ಕ್ಷೇತ್ರ ಶ್ರೀಮಂತವಾಗಬೇಕು: ಅಗಸರ್

ಚಿತ್ತಾಪುರ: ನಾಗಾವಿ ಘಟಿಕ ಸ್ಥಾನವು ಅಳಿವಿನಂಚಿನಲ್ಲಿದ್ದು ಅಲ್ಲಿರುವ ಅವಶೇಷಗಳು ಹಾಳಾಗಿ ಹೊಗುತ್ತಿದ್ದು ಅವುಗಳನ್ನು ಸಂರಕ್ಷಿಸುವದಲ್ಲದೇ ಮುಂದಿನ ಪೀಳಿಗೆಗೆ ಪೋಶಿಸಿ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶ್ರೀಮಂತಗೊಳಿಸಬೇಕಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಹೇಳಿದರು.
  ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಉದ್ಘಾಟನೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರಕೂಟರ ಕಾಲದಲ್ಲಿಯೇ ನಾಗಾವಿ ಕ್ಷೇತ್ರವು ವಿಶ್ವವಿದ್ಯಾಲಯ ಕೇಂದ್ರವಾಗಿ ಪ್ರಸಿದ್ದಿ ಪಡೆದು ವಿಶ್ವದಲ್ಲಿಯೇ ಪ್ರಸಿದ್ದ ಕ್ಷೇತ್ರವಾಗಿದೆ.ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಅಧ್ಯಯನ ಕೇಂದ್ರವಾಗಬೇಕು ಎನ್ನುವ ಬೇಡಿಕೆ ಈ ಭಾಗದಿಂದ ಕೇಳಿಬರುತ್ತಿದೆ ಗುಲಬರ್ಗಾ ವಿಶ್ವವಿದ್ಯಾಲಯವು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
 
  ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ,ಈ ಭಾಗದ ಐತಿಹಾಸಿಕ ನಾಗಾವಿ ಕ್ಷೇತ್ರದ ಇತಿಹಾಸ ನಾಡಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಹುಟ್ಟು ಹಾಕಿರುವ ಕಾರ್ಯ ಶ್ಲಾಘನೀಯ,ನಾಗಾವಿ ಉತ್ಸವ ಮಾಡುವುದು ಅವಶ್ಯಕವಾಗಿದ್ದು ಇದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಉತ್ಸವದ ಮೂಲಕ ಇತಿಹಾಸದ ಬೆಳೆಕು ಚೆಲ್ಲಿದಂತಾಗುತ್ತದೆ,ಈ ಭಾಗದ ನಾಗಾವಿ ಇತಿಹಾಸದ ಸಂಶೋಧನೆಯಾಗಬೇಕಾಗಿದೆ,ನಶಿಸಿ ಹೋಗುತ್ತಿರುವ ಶಿಲಾಶಾಸನಗಳ ಉತ್ಖನನ ಸರಕಾರ ಮಾಡಿ ಸಂರಕ್ಷಣೆ ಮಾಡಬೇಕು ಇದರ ಕುರಿತು ನಾನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿ ಒತ್ತಾಯಿಸುತ್ತೇನೆ ಎಂದು ಹೇಳಿದರು.
  ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದ ಅವರು, ನಾಗಾವಿ ಪ್ರಾಧೀಕಾರ ರಚನೆ ಆಗಬೇಕು ಮತ್ತು ನಾಗಾವಿ ಉತ್ಸವ ಜರುಗಬೇಕು ಎನ್ನುವ ಬೇಡಿಕೆ ಇದೆ. ಅದಕ್ಕಾಗಿ ನಾನು ಇಲ್ಲಿನ ಮುಖಂಡರ ಹಾಗೂ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ನಾಗಾವಿ ಕ್ಷೇತ್ರಕ್ಕೆ 5 ಕೋಟಿ ಹಾಗೂ ಸನ್ನತಿ ಅಭಿವೃದ್ದಿ ಪ್ರಾಧೀಕಾರ ರಚಿಸಿ ಇದಕ್ಕೆ 5ಕೋಟಿ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು.

  ಕರ್ನಾಟಕ ಅಲೆಮಾರಿ ಹಾಗೂ ಅರೆಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ  ದೇವಿಂದ್ರನಾಥ ನಾದ್ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನಲ್ಲಿ ರಾಷ್ಟ್ರಕೂಟದ ಅವಧಿಯಲ್ಲಿ ನಾಗಾವಿ,ಸನ್ನತಿ,ದಂಡೋತಿ, ಅಲ್ಲೂರ ಸೇರಿದಂತೆ ಇತಿಹಾಸ ಪ್ರಸಿದ್ದ ಕ್ಷೇತ್ರಗಳಿದ್ದು ಅವುಗಳ ಅಭಿವೃದ್ದಿಗೆ ಸರಕಾರದ ವತಿಯಿಂದ ಅನುದಾನ ಒದಗಿಸಿ ಅಭಿವೃದ್ದಿಪಡಿಸಿ ಇಲ್ಲಿನ ಗತವೈಭವವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
  ಸಾಹಿತಿಗಳಾದ ಡಾ.ಶಿವರಂಜನ್ ಸತ್ಯಂಪೇಟ್, ಮುಡುಬಿ ಗುಂಡೇರಾವ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿದರು. ಅಧ್ಯಾಪಕ ಡಾ.ಮಲ್ಲಿಕಾರ್ಜುನ ಭಾಗೋಡಿ ನಾಗಾವಿ ಸಾಂಸ್ಕೃತಿ ಪರಿಸರ ಕುರಿತು ಉಪನ್ಯಾಸ ನೀಡಿದರು. ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೆದಾರ ಪ್ರಾಸ್ತಾವಿಕ ಮಾತನಾಡಿದರು.

  ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಉಪಾಧ್ಯಕ್ಷೆ ಶೃತಿ ಪೂಜಾರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ ಪಾಟೀಲ ನರಬೋಳ, ಭೀಮಣ್ಣ ಸಾಲಿ, ಬಸವರಾಜ ಬೆಣ್ಣೂರಕರ್, ಸಿಪಿಐ ಪ್ರಕಾಶ ಯಾತನೂರ, ಬಸವರಾಜ ಬಳೂಂಡಗಿ, ಚಂದ್ರಶೇಖರ ಕಾಶಿ, ನಾಗರಾಜ ಬಂಕಲಗಿ, ಮುಕ್ತಾರ ಪಟೇಲ್ ವೇದಿಕೆಯಲ್ಲಿದ್ದರು. ಪದಾಧಿಕಾರಿಗಳಾದ ರವೀಂದ್ರ ಇವಣಿ, ಶಾಂತಕುಮಾರ ಮಳಖೇಡ, ರಾಜಶೇಖರ ಬಳ್ಳಾ,ದೇವಪ್ಪ ನಂದೂರಕರ್, ರವಿಶಂಕರ ಬುರ್ಲಿ, ಮಹ್ಮದ ಮಶಾಕ್, ಜಗದೇವ ಕುಂಬಾರ, ಭಾರತಿ ಸಿಂಪಿ, ಪ್ರದೀಪ ಕುಲಕರ್ಣಿ, ದೇವಿಂದ್ರಪ್ಪ ಇಮಾಡಪೂರ, ಮೋನಯ್ಯ ಪಂಚಾಳ, ನಟರಾಜ ಶಿಲ್ಪಿ, ಯಲ್ಲಯ್ಯ ಕಲಾಲ್, ವಿಷ್ಣುವರ್ಧನರೆಡ್ಡಿ ಇತರರು ಇದ್ದರು.
  ಇದೇ ಸಂದರ್ಭದಲ್ಲಿ 6 ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಸಾಹಿತ್ಯ ಕ್ಷೇತ್ರದ ವೀರಯ್ಯ ಸ್ವಾಮಿ ಸ್ಥಾವರಮಠ, ಶಿಕ್ಷಣ ಕ್ಷೇತ್ರದ ಬಸಪ್ಪ ಮುಗಳಖೋಡ,ಕೃಷಿ ಕ್ಷೇತ್ರದ ಡಿ.ನರಸಯ್ಯಗೌಡ, ರಂಗಭೂಮಿ ಕ್ಷೇತ್ರದ ಸಿದ್ದಲಿಂಗಯ್ಯಸ್ವಾಮಿ ಕೋಡಗಿಮಠ,ಕಲಾ ಕ್ಷೇತ್ರದ ನರಸೀಂಹ ಅಲಮೇಲಕರ್, ಸಮಾಜ ಸೇವಾ ಕ್ಷೇತ್ರದ ಮಹ್ಮದ ಇಬ್ರಾಹಿಂ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ರಾಜ್ಯೊತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ವಿರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು.

ಮಂಗಳವಾರ, ಡಿಸೆಂಬರ್ 13, 2022

ಭ್ರಷ್ಟಾಚಾರ-ನಿರುದ್ಯೋಗ ಬಗ್ಗೆ ಮಾತನಾಡಿದ್ದೇ ತಪ್ಪಾ?: ಪ್ರಿಯಾಂಕ್ ಖರ್ಗೆ

ಚಿತ್ತಾಪೂರ:ರಾಜ್ಯ ಸರ್ಕಾರದ ಬ್ರಹ್ಮಾಂಡದ ಭ್ರಷ್ಟಾಚಾರವನ್ನು ಬಯಲಿಗೇಳಿದ್ದೀದ್ದೇನೆ. ಉದ್ಯೋಗ ಸಿಗದೆ ನಮ್ಮ ಯುವಕರು ಬೀದಿ ಬೀದಿ ಅಲೆಯುತ್ತಿದ್ದಾರೆ. ಅವರಿಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದ್ದೇನೆ.ಇದು ಬಿಜೆಪಿಯವರಿಗೆ ಸರಿ ಕಾಣದೆ ನನ್ನನ್ನು ಹೇಗಾದರೂ ಮಾಡಿ ಚುನಾವಣೆಯಲ್ಲಿ ಸೋಲಿಸಲು ಷಡ್ಯಂತರ ಮಾಡುತ್ತಿದ್ದಾರೆ. ನಮ್ಮ ಚಿತ್ತಾಪುರದ ಜನರು ಪ್ರಜ್ಞಾವಂತರಿದ್ದ ಬಿಜೆಪಿಯವರ ಬೂಟಾಟಿಕೆಯ ಇಲ್ಲಿ ನಡೆಯುವುದಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಗುಡುಗಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಪುರಸಭೆ ಆಯೋಜಿಸಿದ್ದ, 2022-23ನೇ ಸಾಲಿನ 15ನೇ ಹಣಕಾಸಿನ ಲೋಕೋಪಯೋಗಿ ಇಲಾಖೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಇಲಾಖೆ ಯೋಜನೆಯಲ್ಲಿ 25.ಕೋಟಿ ಅನುದಾನದಡಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಬ್‌ಕಾ ಸಾತ್ ಸಬ್ ಕಾ ವಿಕಾಸ್ ಬರೀ ಬೊಗಳೆ ಘೋಷಣೆಯಾಗಿ ಉಳಿದುಕೊಂಡಿದೆ. ಅಲ್ಪಸಂಖ್ಯಾತರ ಮೇಲೆ ದಾಳಿ ಜಾಸ್ತಿಯಾಗಿದೆ. 58 ಪ್ರತಿಶತ ಬಜೆಟ್ ಜಾಹೀರಾತಿಗೆ ಬಳಸಲಾಗುತ್ತಿದೆ. ಮಕ್ಕಳು ಇಲ್ಲದೇ ಶಾಲೆಗಳು ಮುಚ್ಚುತ್ತಿವೆ. 100 ಸ್ಮಾರ್ಟ್ ಸಿಟಿ ಯೋಜನೆ ಎಲ್ಲಿ ಹೋಯಿತು. ರೈತರ ಆದಾಯ ಕುಸಿದು ಹೋಗುತ್ತಿದೆ. ಸ್ವಿಸ್ ಬ್ಯಾಂಕ್ ಹಣ ಯಾರಿಗೆ ಬಂದಿದೆ. 2 ಸಾವಿರ ಕೋಟಿ ಇದ್ದ ಹಣ ಬಿಜೆಪಿ ಬಂದ ಮೇಲೆ ವಿದೇಶಿ ಬ್ಯಾಂಕ್ ಗಳಲ್ಲಿ 38 ಸಾವಿರ ಕೋಟಿ ಕಪ್ಪುಹಣ ಹೆಚ್ಚಿಗೆ ಜಮಾ ಆಗಿದೆ.
 ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಗಳಲ್ಲಿ ಅನುದಾನ ಕೊರತೆ ಇದೆ. ಆಶ್ವಾಸನೆ ನೀಡಿದ್ದ ಅನುದಾನ ಬಂದಿಲ್ಲ. ನಮ್ಮ ಭಾಗದಲ್ಲಿ 
50 ಸಾವಿರ ಹುದ್ದೆಗಳು ಖಾಲಿ ಇವೆ. ಇಡೀ ದೇಶ ನಿರುದ್ಯೋಗದಿಂದ ಬಳಲುತ್ತಿದೆ. ಉದ್ಯೋಗ ನೀಡುವ ಮಾತು ಬಿಜೆಪಿ ಹಾಗೂ ನರೇಂದ್ರ ಮೋದಿ ಮಾತನಾಡುತ್ತಿಲ್ಲ. ಸತ್ಯ, ಪ್ರಾಮಾಣಿಕ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಲ್ಲವನ್ನು ಪರೀಕ್ಷಿಸಿ ಒಳ್ಳೆಯತನಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
 ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ ಬಿಜೆಪಿಯವರು ಜನಸಂಕಲ್ಪ ಯಾತ್ರೆ ನೆಪದಲ್ಲಿ ನೃತ್ಯ ಮಾಡುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನರೇಂದ್ರ ಮೋದಿ ಅವರು ದೇಶದ ಜನರನ್ನು ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಹೇಗೆ ಮೋಸ ಮಾಡಬಹುದು ಎನ್ನುವುದು ಚೆನ್ನಾಗಿ ಅರಿತುಕೊಂಡಿದ್ದಾರೆ. ಧರ್ಮಗಳ ನಡುವೆ ಕಿಚ್ಚು ಹಚ್ಚಿ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವಲ್ಲಿ ಬಿಜೆಪಿಯವರು ಜಾಣರಾಗಿದ್ದು ಜನರು ಅರಿತುಕೊಳ್ಳಬೇಕು ಎಂದರು.

ಪುರಸಭೆ ಸದಸ್ಯೆ ಶೀಲಾ ಕಾಶಿ
ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡ ನಾಗರೆಡ್ಡಿಗೌಡ ಪಾಟೀಲ, ಜಗದೀಶ ಚವ್ಹಾಣ, ಮುಕ್ತಾರ್ ಪಟೇಲ, ಮಾತನಾಡಿದರು.
    
ಪುರಸಭೆ ಉಪಾಧ್ಯಕ್ಷೆ ಶೃತಿ ಪೂಜಾರಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಯಯದ್ ಮಹೆಮೂದ್ ಸಾಹೇಬ್,  ರಾಜಶೇಖರ್ ತಿಮ್ಮನಾಯಕ್, ರಮೇಶ ಮರಗೋಳ, ಸಿದ್ದುಗೌಡ ಅಫಜಲ್‌ಪುರಕರ್, ಶಿವರುದ್ರ ಭೀಣಿ, ಶಾಂತಣ್ಣ ಚಾಳಿಕಾರ, ಜಗಣ್ಣಗೌಡ ರಾಮತೀರ್ಥ, ವಿನೋದ ಗುತ್ತೇದಾರ್,ಶ್ರೀನಿವಾಸ ಪಾಲಪ್, ಶಿವರಾಜ್ ಪಾಳೇದ್, ವೀರಣ್ಣಗೌಡ ಪರಸರೆಡ್ಡಿ, ಸಂತೋಷ ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೋಂಡಿದ್ದರು. 

ಪುರಸಭೆ ಮುಖ್ಯಧಿಕಾರಿ ಮನೋಜಕುಮಾರ ಗುರಿಕಾರ್ ಸ್ವಾಗತಿಸಿದರು. ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ ನಿರೂಪಿಸಿದರು.

ಶುಕ್ರವಾರ, ಡಿಸೆಂಬರ್ 9, 2022

ಆಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳು ಭಾಗಿ: ಪ್ರಿಯಾಂಕ ಖರ್ಗೆ.

ಚಿತ್ತಾಪೂರ: ಆಕ್ರಮ ಮರಳು ದಂಧೆ ಕೊರರ ಜೊತೆ ಕಂದಾಯ, ಗಣಿ ಮತ್ತು ಭೂ-ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ,ಸಾರಿಗೆ ಇಲಾಖೆ,ಗೃಹ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಪಿಡಿಓವರೆಗೆ ಎಲ್ಲ ಹಂತದ ಇಲಾಖೆಯ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿದರು 

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ತಾಲೂಕು ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ತನಾಡಿದ ಅವರು ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸಂಗ್ರಹವಾದ ಡಿಎಂಎಫ್ ಸುಂಕದ ಹಣವನ್ನು ಕಲಬುರಗಿಗೆ ವರ್ಗಾವಣೆ ಆಗುತ್ತಿದೆ.ಆದರೆ ಸಂಗ್ರಹವಾದ ಸುಂಕವನ್ನು ಚಿತ್ತಾಪುರಕ್ಕೆ ಮಾತ್ರ ಬಳಕೆಯಾಗಬೇಕು

ಕಾನೂನು ಬಾಹಿರವಾಗಿ 24 ತಾಸು ಕಾಲ ಗುತ್ತಿಗೆದಾರರು ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದಾರೆ. ಓವರ್ ಲೋಡ್ ಕೂಡಾ ಒಂದು ಸಮಸ್ಯೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಸರ್ಕಾರ ಈ ರಸ್ತೆಗಳನ್ನು ಕೂಡಾ ಮೇಲ್ದರ್ಜೆಗೆ ಏರಿಸುತ್ತಿಲ್ಲ. ಅಕ್ರಮ ಮರಳು ಸಾಗಾಣಿಕೆಯಿಂದ ಇಷ್ಟೆಲ್ಲ ಅನಾನೂಕೂಲ ಇದ್ದರೂ ಯಾಕೆ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಒಬ್ಬ ವ್ಯಕ್ತಿ ಗರಿಷ್ಠ 70 ವಾಹನಗಳನ್ನು ನೋಂದಣಿ ಮಾಡಿಸಬಹುದು. ಒಂದು ಲಾರಿಗೆ ಕನಿಷ್ಠ 16 ಟನ್ ಗಳಿಂದ 22 ಟನ್ ಮರಳು ಸಾಗಾಣಿಕೆ ಮಾಡಬಹುದಾಗಿದೆ.ಎಂದು ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಇದರಿಂದ ವಿಆರ್ ರಸ್ತೆ ಸಂಪೂರ್ಣ ಹಾಳಾಗಿವೆ.ಕೃಷಿ‌ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗುತ್ತಿದೆ. ನಾನು ಈ ಮೊದಲು ಹೇಳಿದಂತೆ ಅಂತಹ ಜಮೀನುಗಳನ್ನ ವಶಪಡಿಸಿಕೊಳ್ಳಲಾಗಿದೆಯಾ? ಹಾಗಾದರೆ ಎಷ್ಟು ಜಮೀನು ವಶಪಡಿಸಿಕೊಂಡಿದ್ದೀರಾ? ಎಂದು ಅಧಿಕಾರಿಗಳಿಗೆ ಕಿಡಿಕಾರಿದರು.

ಕಾಟಮದೇವರಹಳ್ಳಿ ಹಾಗೂ ಮುತ್ತಗಾ ಗ್ರಾಮಗಳಲ್ಲಿ ಅಕ್ರಮ ಜಾಸ್ತಿ ನಡೆಯುತ್ತಿದೆ.ನಾನು ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ ಅವರೊಂದಿಗೆ ಮಾತನಾಡುವವರೆಗೆ ಮರಳು ಸಾಗಾಣಿಕೆಗೆ ಬಂದ್ ಮಾಡಿಸಿ.ಜೊತೆಗೆ ಮರುಳು ಸಾಗಾಣಿಕೆ ನಡೆಯುವ ಗ್ರಾಮಗಳ ರಸ್ತೆಗಳ ಫೋಟೋ ತೆಗೆದುಕೊಂಡು ಬರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಇದೇ 12ರಂದು ಮತ್ತೊಮ್ಮೆ ಸಭೆ ಕರೆದು ಆ ಸಭೆಯಲ್ಲಿ ಗುತ್ತಿಗೆದಾರರನ್ನೂ ಕೂಡಾ ಕರೆಯಬೇಕು ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ತಹಸೀಲ್ದಾರ್ತಾ ಉಮಾಕಾಂತ ಹಳ್ಳೆ, ಇಓ ನೀಲಗಂಗಾ ಬಬಲಾದ,ಶಹಾಬಾದ ಇಓ ಬಸಲಿಂಗಪ್ಪ ಡಿಗ್ಗಿ, ಶಹಾಬಾದ್ ತಹಸೀಲ್ದಾರ ಸುರೇಶ ವರ್ಮಾ, ಶಹಾಬಾದ ಸಿಪಿಐ ರಾಘವೇಂದ್ರ, ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರು, ಹಾಗೂ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯ ಅಧಿಕಾರಿಗಳು ಭಾಗವಹಿಸಿದ್ದರು.

ಶನಿವಾರ, ಡಿಸೆಂಬರ್ 3, 2022

ವಿಠಲ್ ಹೇರೂರ ಹಾಕಿಕೊಟ್ಟ ಮಾರ್ಗದರ್ಶನ ಪಾಲಿಸೋಣ.

ಚಿತ್ತಾಪೂರ: ಕೂಲಿ ಸಮಾಜಕ್ಕೆ ವಿಠಲ್ ಹೇರೂರು ಅವರು ಹಾಕಿಕೊಟ್ಟ ಮಾರ್ಗದರ್ಶನ ನಾವೂ ಎಲ್ಲಾರು ಪಾಲಿಸೋಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಠಲ ಹೇರೂರು ಅವರ ಪುಣ್ಯಸ್ಮರಣೆ ನಿಮಿತ್ಯ ಹೇರೂರು ಅವರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಂಘದಲ್ಲಿ ಹಿರಿಯ ಮಾರ್ಗದರ್ಶನ ವಿಲ್ಲದೆ ಯಾವುದೇ ರೀತಿಯ ಮನವಿ, ಪ್ರತಿಭಟನೆ ಯಾವುದು ಮಾಡಬೇಡಿ ಸಮಾಜದ ಪ್ರತಿಯೊಬ್ಬರ ಮಾರ್ಗದರ್ಶನ ತೆಗೆದುಕೊಳ್ಳಿ ಅದರ ಜೊತೆಗೆ ಸಂಘದ ಸಲಹ ಸಮಿತಿಯ ಮಾರ್ಗದರ್ಶನ ಕೂಡ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಬಸವರಾಜ ಚಿಮ್ಮನ್ನಳ್ಳಿ ಮಾತನಾಡಿ ವಿಠಲ್ ಹೇರೂರು ಅವರು ನಮ್ಮನ್ನು ಅಗಲಿ 
9 ವರ್ಷಗಳು ಆಗುತ್ತಿದ್ದು ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೆವೆ. ಒಂದು ವೇಳೆ ವೀಠಲ್ ಹೇರೂರ ಸಾಹೇಬರು ಇದ್ದರೆ ಕೂಲಿ ಸಮಾಜ ಎಸ್‌ಟಿ ಸೇರ್ಪಡೆ ಆಗುತ್ತಿತ್ತು ಎಂದು ಹೇಳಿದರು.

ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ ಸಂಘಟನೆ ಎಂಬ ವಿಷಯ ಬಂದಾಗ ನಮಗೆ ವಿಠಲ್ ಹೇರೂರು ಹೆಸರು ನಮ್ಮ ಸಮಾಜದಲ್ಲಿ ನೆನಪು ಬರುತ್ತದೆ. ಆದರೆ ಇಂದು ಸಮಾಜದಲ್ಲಿ ಸಂಘಟನೆ ದಾರಿ ತಪ್ಪುತ್ತಿದೆ. ರಾಜಕೀಯ ಮಾಡಬೇಡಿ ಸಮಾಜದ ಹಿತದೃಷ್ಟಿ ಇರಲಿ, ಸಂಘಟನೆಗೆ ಒಂದು ದೃಢತೆ ಇರಲಿ, ಇಲ್ಲ ಅಂದ್ರೆ ಸಂಘಟನೆಗೆ ರಾಜೀನಾಮೆ ನೀಡಿ ಎಂದು ಸಮಾಜದ ಕುರಿತು ಕಳವಳ ವ್ಯಕ್ತಪಡಿಸಿ ಸಮಾಜದ ಏಳಿಗೆಗಾಗಿ ನಾವು ಪ್ರತಿಯೊಬ್ಬರು ಶ್ರಮಿಸೋಣ ಎಂದರು.

ಸಮಾಜದ ಯುವ ಘಟಕ ಅಧ್ಯಕ್ಷ ಗುಂಡು ಐನಾಪುರ ಮಾತನಾಡಿ ನಾವುಗಳು ಎಲ್ಲಾರೂ ಒಗ್ಗೂಡಿ ಒಂದಾಗಿ ಸಮಾಜದ ಅಭಿವೃದ್ಧಿ ಕಾಣೋಣ ಅದರ ಸಲುವಾಗಿ ವಿಠಲ ಹೇರೂರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.

ತಾಲೂಕ ಅಧ್ಯಕ್ಷ ರಾಮಲಿಂಗ ಬಾನರ್,ಹಣಮಂತ ಸಂಕನೂರ,ಸುರೇಶ ಬೆನಕನಳ್ಳಿ, ಮಾತನಾಡಿದರು.

ಈ ಸಂದರ್ಭದಲ್ಲಿ  ದೇವಿಂದ್ರ ಅರಣಕಲ್, ಶರಣು ಡೋಣಗಾಂವ, ಭೀಮಣ್ಣ ಹೊತ್ತಿನಮಡಿ, ನಾಗೇಂದ್ರ, ಭೀಮು ಹೊಳಿಕಟ್ಟಿ, ಮಲ್ಲಪ್ಪ ಹೋನಪ್ಪನೂರು, ಕಾಶಿನಾಥ ದೇವರಮನಿ ಕದ್ದರ್ಗಿ, ಆನಂದ ಯರಗಲ್, ಗೋಳಿ ಇಟಗಾ, ಸೆರಿದಂತೆ ಇತರರು ಇದ್ದರು.


ಶುಕ್ರವಾರ, ಡಿಸೆಂಬರ್ 2, 2022

ಶೈಕ್ಷಣಿಕ ಅವಧಿ ಪ್ರಾರಂಭದಲ್ಲಿಯೇ ಯೋಜನೆಗಳು ಅನುಷ್ಠಾನವಾಗಲಿ.

ಚಿತ್ತಾಪುರ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಅನೇಕ ಯೋಜನೆಗಳು ಜಾರಿಗೊಳಿಸಿದೆ ಆದರೆ ಅವುಗಳು ಶೈಕ್ಷಣಿಕ ಅವಧಿ ಪ್ರಾರಂಭದಲ್ಲಿಯೇ ಅನುಷ್ಠಾನಗೊಂಡು ವಿದ್ಯಾರ್ಥಿಗಳಿಗೆ ತಲುಪುವಂತೆ ಆಗಬೇಕು ಎಂದು ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹೇಳಿದರು.

 ಪಟ್ಟಣದ ನಾಗಾವಿ ಕ್ಯಾಂಪಸ್‌ನಲ್ಲಿನ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶೂ-ಸಾಕ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶೈಕ್ಷಣಿಕ ಅವಧಿ ಪ್ರಾರಂಭವಾಗಿ ಅರ್ಧ ವರ್ಷ ಕಳೆದ ನಂತರ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ-ಸಾಕ್ಸ್, ಪುಸ್ತಕಗಳು ವಿತರಿಸುತ್ತಿರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ ಹಾಗಾಗಿ ಸರಕಾರಗಳು ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ನಿಗದಿತ ಸಮಯದಲ್ಲಿ ಶಿಕ್ಷಣದ ಯೋಜನೆಗಳು ಮುಟ್ಟಿಸುವಂತದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಅನೇಕ ಯೋಜನೆಗಳು ಜಾರಿಗೊಳಿಸಿದೆ ಹೀಗಾಗಿ ವಿದ್ಯಾರ್ಥಿಗಳು ಸರಕಾರ ಸೌಲಭ್ಯಗಳನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸಬೇಕು 
 
 ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯ ಪರಿಪಾಲನೆ ಮತ್ತು ಏಕಾಗ್ರತೆ ಸಂಪಾದಿಸುವ ಮೂಲಕ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಹಾಗೂ ಮನೆಯಲ್ಲಿ ಪಾಲಕರ ಸಹಕಾರ ಮತ್ತು ಪ್ರೋತ್ಸಾಹವನ್ನು ಪಡೆದು ಸಾಧನೆಯ ಪಥದಲ್ಲಿ ಸಾಗಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಬೇಕಾದ ವಿಷಯಗಳ ಕಡೆ ಗಮನ ಹರಿಸಬೇಕು ಹೊರತು ಅನಗತ್ಯ ಸಂಬಂಧಪಡದ ವಿಷಯಗಳ ಕಡೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು.

  ಮುಖ್ಯಶಿಕ್ಷಕಿ ಶ್ರೀಮತಿ ಸುನಂದಾ ಬಾರಡ್, ಶಿಕ್ಷಕ ಶಿವಬಸಪ್ಪ ಗುತ್ತೇಪ್ಪನವರ್ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಈರಪ್ಪ ಭೋವಿ,ಪತ್ರಕರ್ತ ಎಂ.ಡಿ.ಮಶಾಕ್, ಶಿಕ್ಷಕರಾದ ಸಂತೋಷಕುಮಾರ ಜಮಾದಾರ, ಶಿವಪುತ್ರ ವಿ, ವೀಣಾ ಕುಂಬಾರ, ಹಣಮಂತ, ಜನ್ನತುಲ್ ಫೀರ್ದೋಸ್, ಮಮತಾ, ರೇಣುಕಾ ರೋಣದ್, ಫಾತೀಮಾ ಅನ್ನೀಸಾ, ಮೇಘಾ, ಸಿದ್ದಮ್ಮ ಇತರರು ಇದ್ದರು. ಶಿಕ್ಷಕ ಸಂಗಾರೆಡ್ಡಿ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಪುರಸಭೆಯಿಂದ ಕಸದ ಡಬ್ಬಿಗಳನ್ನು ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಶಾಲೆಯ ಮುಖ್ಯಶಿಕ್ಷಕರಿಗೆ ಹಸ್ತಾಂತರ ಮಾಡಿದರು.

ಸೋಮವಾರ, ನವೆಂಬರ್ 28, 2022

ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಮಾಡಲು ಮನವಿ.

ಚಿತ್ತಾಪುರ: ತಾಲೂಕಿನ ಸನ್ನತಿ ಗ್ರಾಮ ದೇಶದ ಭೂಪಟದಲ್ಲಿ ಗಮನ ಸೆಳೆದಿದೆ. ನೂರಾರು ವರ್ಷಗಳ ಬೌದ್ಧ ಇತಿಹಾಸವಿರುವ ಗ್ರಾಮ ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಅಧ್ಯಕ್ಷರಾಗಿರಬೇಕೆಂಬ ನಿಯಮ ಬದಲಿಸಿ ಬೌದ್ಧ ಅನುಯಾಯಿಗಳಿಗೆ ಅಥವಾ ಬೌದ್ಧ ಭಿಕ್ಕು ಒಬ್ಬರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ. ಕಲಬುರರ್ಗಿ ಲೋಕಸಭೆ ಸದಸ್ಯ ಡಾ.ಉಮೇಶ ಜಾಧವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದರು.

  ಇಡೀ ದೇಶದಲ್ಲಿಯೇ ಅಶೋಕ ಸಾಮ್ರಾಟ ನಿರ್ಮಿಸಿದ ಬೌದ್ಧ ಇತಿಹಾಸ ಹೆಚ್ಚಿನ ಭಾಗ ಸನ್ನತಿ ಎಂಬ ಹೆಗ್ಗಳಿಕೆಗೆ ಹೆಸರಾಗಿದೆ. ಭಾರತೀಯ ಪುರತತ್ವ ಇಲಾಖೆ ವತಿಯಿಂದ ಹಲವು ವರ್ಷಗಳ ಹಿಂದೆ ಉತ್ಖನನ ಮಾಡುವ ಸಂದರ್ಭದಲ್ಲಿ ಇಲ್ಲಿ ಸಕ್ಕಿರುವ ಬೌದ್ಧ ಶಾಸನ ಮತ್ತು ಶಿಲ್ಪಕಲೆಗಳು ಈ ದೇಶದ ಮೂಲ ಧರ್ಮದ ಬೌದ್ಧರ ಅಸ್ಥಿತ್ವದ ಬಗ್ಗೆ ಹಲವಾರು ಕುರುಹುಗಳು ಸಿಕ್ಕಿವೆ. ಇವನ್ನು ಗಮನಿಸಿದ ಸರಕಾರ ಆ ಸ್ಥಳವನ್ನು ಅಭಿವೃದ್ದಿ ಪಡಿಸಲು ಮತ್ತು ಸಂಶೋಧನಾ ಕೇಂದ್ರವಾಗಿಸಲು ಸನ್ನತಿ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ಅದರ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಇರಬೇಕು ಎಂಬ ನಿಯಮ ಮಾಡಿದೆ. ಆದರೆ ಇಲ್ಲಿರುವ ಬಹುಸಂಖ್ಯಾತ ಬೌದ್ಧ ಅನುಯಾಯಿಗಳು ಇರುವುದರಿಂದ ಈ  ಕೇಂದ್ರದ ಅಭಿವೃದ್ದಿಯಾಗದೇ ಇರುವುದರಿಂದ ಬೇಸರಗೊಂಡಿದ್ದಾರೆ ಎಂಬ ವಿಷಯ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ.

  ಕಾರಣ ಜಿಲ್ಲಾ ಉಸ್ತುವಾರಿ ಮಂತ್ರಿಯವರು ಪ್ರಾಧಿಕಾರದ ಅಧ್ಯಕ್ಷರಾಗಿರಬೇಕೆಂಬ ನಿಯಮ ಬದಲಿಸಿ ಜಿಲ್ಲೆಯ ಬೌದ್ಧ ಅನುಯಾಯಿಗಳು ಅಥವಾ ಬೌದ್ಧ ಭಿಕ್ಕು ಒಬ್ಬರಿಗೆ ಅದರ ಜವಾಬ್ದಾರಿ ಎಂದರೆ ಅಧ್ಯಕ್ಷರಾಗಿ ನೇಮಿಸಿ ಈ ಕೇಂದ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅವರು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಂಡು ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ ಎಂದು ಬಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾಹಿತಿ ನೀಡಿದ್ದಾರೆ.

  ರಾಜ್ಯದಲ್ಲಿ ಅನೇಕ ಪ್ರಾಧಿಕಾರಗಳು ಅಸ್ತಿತ್ವದಲ್ಲಿವೇ ಆದರೆ ಆಯಾ ಸಮುದಾಯದ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಅನುದಾನ ನೀಡಿ ಅಭಿವೃದ್ದಿ ಮಾಡಿದ್ದಾರೆ ಹೀಗಿರುವಾಗ ಇಲ್ಲಿನ ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಮಾತ್ರ ಬೌದ್ಧ ಅನುಯಾಯಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿದೆ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಯಾವ ನ್ಯಾಯ ಇದು ಹಿಂದಿನ ಸರಕಾರ ತಪ್ಪು ಮಾಡಿದ್ದರಿಂದ ಅಲ್ಲಿನ ಅಭಿವೃದ್ದಿ ಕುಸಿತಗೊಂಡಿದೆ ಆದ್ದರಿಂದ ಕೂಡಲೇ ನಿಯಮ ಬದಲಿಸಿ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಬೆಣ್ಣೂರಕರ್ ತಿಳಿಸಿದ್ದಾರೆ.

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಭೇಟಿ: ನಾದ್

ಚಿತ್ತಾಪುರ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮ ಹಾಗೂ ತಾಂಡಾಕ್ಕೆ ಭೇಟಿ ನೀಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಹಾಗೂ ಯೋಜನೆಗಳ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಿದ್ದೇನೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ಹೇಳಿದರು.
    
  ಮತಕ್ಷೇತ್ರದ ಅಲ್ಲೂರ.ಬಿ, ಅಳ್ಳೋಳ್ಳಿ, ಅಲ್ಲೂರ.ಕೆ, ರಾಮತೀರ್ಥ, ಭೀಮನಳ್ಳಿ, ಹಲಕಟ್ಟಿ, ರಾವೂರ, ರಾಂಪೂರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಉತ್ತಮ ಅಭಿಪ್ರಾಯ ಹಾಗೂ ಬೆಂಬಲ ವ್ಯಕ್ತವಾಗಿದೆ ಹಾಗೂ ಭಾರತೀಯ ಜನತಾ ಪಕ್ಷದ ಪರ ಉತ್ತಮ ವಾತಾವರಣವಿದೆ ಎಂದು ಹೇಳಿದರು.

  ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದಡಿ ಅರ್ಹ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದರು.
    
 ನಗರ ಯೋಜನಾ ಪ್ರಾಧಿಕಾರ ಸದಸ್ಯ ಶಾಂತಕುಮಾರ ಮಳಖೇಡ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕಡೇಸೂರ, ಹಂಪಣ್ಣ ಹುಳಾಗಡ್ಡಿ, ನಾಗಪ್ಪ ದೊಡ್ಡಮನಿ, ಈಶ್ವರ ಚಂದಣ್ಣನವರ್, ಭಾಸ್ಕರ್ ಭೀಮನಳ್ಳಿ, ಹಣಮಂತ ಹೆಡಗಿಮುದ್ರಿ, ಮಾರುತಿ ಮುಗುಳಕರ್, ಪರಶುರಾಮ ಭಾರ್ಗವ್ ಇತರರು ಇದ್ದರು.

ಭಾನುವಾರ, ನವೆಂಬರ್ 27, 2022

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಚಿತ್ತಾಪುರ: ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ನಾಗಾವಿ ಸಾಹಿತ್ಯ ಸಾಂಸ್ಕೃತಿ ಪರಿಷತ್ತ್ ವತಿಯಿಂದ  ಕೊಡಲ್ಪಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ವಿವಿಧ ಕ್ಷೇತ್ರದ ಏಳು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ತಿಳಿಸಿದ್ದಾರೆ.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯಲ್ಲಿದ್ದ ಎಲ್ಲ ಪದಾಧಿಕಾರಿಗಳ ಒಮ್ಮತದಿಂದ ಆಯಾ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ಗಣನೀಯ ಸೇವೆ ಸಲ್ಲಿಸಿದ್ದ ಸಾಧಕರನ್ನು ಗುರುತಿಸಿ ಯೋಗ್ಯ ಮತ್ತು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. 

ಬಸ್ಸಪ್ಪ ಮುಗುಳಖೋಡ (ಶಿಕ್ಷಣ ಕ್ಷೇತ್ರ), ವೀರಯ್ಯಸ್ವಾಮಿ ಸ್ಥಾವರಮಠ (ಸಾಹಿತ್ಯ ಕ್ಷೇತ್ರ), ಅಯ್ಯಣ್ಣ ಮಾಸ್ತರ ವಿಶ್ವಕರ್ಮ(ಸಂಗೀತ ಕ್ಷೇತ್ರ), ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ(ರಂಗಭೂಮಿ ಕ್ಷೇತ್ರ), ನರಸಿಂಹ ಆಲಮೇಲಕರ್ (ಚಿತ್ರಕಲೆ ಕ್ಷೇತ್ರ), ಮಹ್ಮದ ಇಬ್ರಾಹಿಂ (ಸಾಮಾಜಿಕ ಸೇವಾ ಕ್ಷೇತ್ರ), ಡಿ.ನರಸಯ್ಯಗೌಡ (ಕೃಷಿ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕವನ್ನು ಇಷ್ಟರಲ್ಲೇ ನಿಗದಿಪಡಿಸಿ ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಅತಿಥಿ ಗಣ್ಯಮಾನ್ಯರು ಹಾಗೂ ಸಾಹಿತಿಗಳನ್ನು ಅಹ್ವಾನಿಸಿ ಅರ್ಥಪೂರ್ಣವಾದ ಕಾರ್ಯಕ್ರಮ ಮಾಡಲು ನಿರ್ಧರಿಸಲಾಯಿತು.
 
ಈ ಸಂದರ್ಭದಲ್ಲಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವೀರಸಂಗಪ್ಪ ಸುಲೇಗಾಂವ, ಪದಾಧಿಕಾರಿಗಳಾದ ನರಸಪ್ಪ ಚಿನ್ನಕಟ್ಟಿ, ಶಾಂತಕುಮಾರ ಮಳಖೇಡ, ಭಾರತಿ ಸಿಂಪಿ, ರವಿಶಂಕರ ಬುರ್ಲಿ, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ಪ್ರದೀಪ ಕುಲಕರ್ಣಿ, ಜಗದೇವ ಕುಂಬಾರ, ಯಲ್ಲಯ್ಯ ಕಲಾಲ್ ಇದ್ದರು.





ಶುಕ್ರವಾರ, ನವೆಂಬರ್ 25, 2022

ಅಂಗನವಾಡಿ ಕೇಂದ್ರಕ್ಕೆ ಸಿಇಓ ಭೇಟಿ.

ಚಿತ್ತಾಪೂರ: ತಾಲ್ಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-5ಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀರಿಶ ದಿಲೀಪ್ ಬದೋಲೆ ಭೇಟಿ ನೀಡಿ ಅಂಗನವಾಡಿಯ ಸ್ವಚ್ಛತೆ,ಶಿಸ್ತು ಕ್ರಮಬದ್ಧತೆ ನೋಡಿ ಹಾಗೂ ಖುಷಿಯಿಂದ ಮಕ್ಕಳ ಜೊತೆ ಮಾತನಾಡಿಸಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಪಂ ಇಓ ನೀಲಗಂಗಾ ಬಬಲಾದ, ಸಿಡಿಪಿಓ ರಾಜಕುಮಾರ್ ರಾಠೋಡ, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಸಿದ್ದಣ್ಣ ಅಣಬಿ, ಹಿರಿಯ ಮುಖಂಡರಾದ ರಾಜಶೇಖರ್ ತಿಮ್ಮನಾಯಕ್ , ಮುನಿಯಪ್ಪ ಕೊಳ್ಳಿ, ಶಂಕರ್ ಕೊಳ್ಳಿ, ರಮೇಶ ಕವಡೆ ಸೇರಿದಂತೆ ಇತರರು ಇದ್ದರು.

ಬುಧವಾರ, ನವೆಂಬರ್ 23, 2022

ಬಡ ಮಹಿಳೆಯರಿಗೆ ಸೀರೆ ವಿತರಣೆ.


ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರ 44ನೇ ಜನ್ಮದಿನದ ನಿಮಿತ್ಯ ಪಟ್ಟಣದ ದೇವದಾಸಿ ಕಾಲೋನಿಯಲ್ಲಿನ ವಿಮುಕ್ತ ದೇವದಾಸಿ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು.
 ನಂತರ ಕೇಕ್ ಕಟ್ ಮಾಡಿ ಪ್ರತಿಯೊಬ್ಬರಿಗೆ ಸಿಹಿ ತಿನಿಸಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಮಾತನಾಡಿ  ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ಹಗಲು-ಇರುಳು ಅನ್ನದೆ ಶ್ರಮಿಸುತ್ತಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ನಾವು ಬೆಂಬಲಿಸಿ ಗೆಲ್ಲಿಸುವ ಜೊತೆಗೆ ಅವರ ಸರಳ ಮನೋಭಾವನೆಯನ್ನು ನಾವೆಲ್ಲರೂ ಪಾಲಿಸೋಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ್ ಶಿಂಧೆ, ಜಗನ್ನಾಥ ಮುಡಬೂಳಕರ್, ಆನಂದ್ ಮೊಗಲಾ, ಸಂಜಯ ಬುಳಕರ್, ವಿಜಯ್ ಕುಮಾರ್ ಚವ್ಹಾಣ, ಮಲ್ಲಿಕಾರ್ಜುನ್ ಕಲ್ಮರಿ, ಶರಣಬಸ್ಸು ಮುತ್ತಾಗಿ, ಸಿದ್ದಾರ್ಥ್, ಬಸವರಾಜ್, ರವಿ, ಸೇರಿದಂತೆ ಇತರರಿದ್ದರು.

ಪ್ರಿಯಾಂಕ್ ಖರ್ಗೆ ಜನ್ಮದಿನ ನಿಮಿತ್ಯ ಅನ್ನದಾಸೋಹ.


ಚಿತ್ತಾಪುರ : ಶಾಸಕ ಪ್ರಿಯಾಂಕ್ ಖರ್ಗೇ ಅವರ 44ನೇ ಜನ್ಮದಿನದ ನಿಮಿತ್ಯ  ಪಟ್ಟಣದ ಬಸ್ ನಿಲ್ದಾಣ ಹತ್ತಿರ ಭೀಮು ಹೊಳಿಕಟ್ಟಿ ಅವರ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ ಮೂಲಕ  ಹುಟ್ಟು ಹಬ್ಬವನ್ನು ಆಚರಿಸಲಾಯಿತು. 
 
ಈ ವೇಳೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಪ್ರಿಯಾಂಕ್ ಅಪ್ಪಟ ಅಭಿಮಾನಿ ಭೀಮು ಹೊಳಿಕಟ್ಟಿ ಅವರು ಮಾತನಾಡಿ  ಜಿಲ್ಲೆಯಲ್ಲಿ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿ ಮಾಡುದ್ದಾರೆ. ಮುಂಬರುವ ಚುನಾವಣೆಯಲ್ಲಿ ಯುವ ಮತದಾರರು ಸೇರಿದಂತೆ ಮತಕ್ಷೇತ್ರದ ಎಲ್ಲಾ ಮತ ಪ್ರಭುಗಳು ಅವರನ್ನು ಪ್ರಚಂಡ ಬಹು ಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಭೀಮಣ್ಣ ಹೊತ್ತಿನಮಡಿ , ಗುಂಡು ಐನಾಪುರ, ಶೀಲಾ ಕಾಶಿ, ಸಾಬಣ್ಣ ಹೊಳಿಕಟ್ಟಿ, ರಾಮಲಿಂಗ ಬಾನರ್, ಹಣಮಂತ ಸಂಕನೂರ, ಬಸವರಾಜ ಚಿನಮಳ್ಳಿ, ಸೇರಿದಂತೆ ಇತರರು ಇದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...