ಶನಿವಾರ, ಫೆಬ್ರವರಿ 28, 2026

ಅದಾನಿ ಸಿಮೆಂಟ್ ಘಟಕದಿಂದ '5S' ಜಾಗೃತಿ ಅಭಿಯಾನ: ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ.

ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಸಮೀಪವಿರುವ ಅದಾನಿ ಸಿಮೆಂಟ್ ಚಿತ್ತಾಪುರ ಘಟಕದ ವತಿಯಿಂದ ಇತ್ತೀಚೆಗೆ 'AWMS 5S' ಜಾಗೃತಿ ಮೆರವಣಿಗೆ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ನಡೆದ ಈ ಅಭಿಯಾನವು ಶಿಸ್ತು, ಸ್ವಚ್ಛತೆ ಮತ್ತು ಸುರಕ್ಷತೆಯ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಯಿತು.

ವಿದ್ಯಾರ್ಥಿಗಳಿಗೆ ವಿಂಗಡಣೆ (Sort), ವ್ಯವಸ್ಥೆ (Set in Order) ,ಸ್ವಚ್ಛತೆ (Shine),ಪ್ರಮಾಣೀಕರಣ (Standardize),ಶಿಸ್ತು (Sustain) ಇವುಗಳ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಲಾಯಿತು. ದೃಶ್ಯಪ್ರದರ್ಶನ ಹಾಗೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಈ ತತ್ವಗಳನ್ನು ದೈನಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಪ್ರಾಯೋಗಿಕವಾಗಿ ವಿವರಿಸಲಾಯಿತು. ಶಾಲಾ ಮಕ್ಕಳು ತಮ್ಮ ಮನೆ ಹಾಗೂ ಶಾಲಾ ಪರಿಸರದಲ್ಲಿ 5S ಅಭ್ಯಾಸಗಳನ್ನು ಪಾಲಿಸುವುದಾಗಿ ಈ ಸಂದರ್ಭದಲ್ಲಿ ಸಂಕಲ್ಪ ಮಾಡಿದರು.
ಅಭಿಯಾನದ ಎರಡನೇ ದಿನವಾದ ಫೆಬ್ರವರಿ 25ರಂದು ಅದಾನಿ ಸಿಮೆಂಟ್ ಘಟಕದ ಆವರಣದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಘಟಕದ ಎಲ್ಲಾ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು, ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ಸುರಕ್ಷತೆಯನ್ನು ಕಾಪಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

"AWMS ಚೌಕಟ್ಟಿನಡಿ ಆಯೋಜಿಸಲಾದ ಈ ಕಾರ್ಯಕ್ರಮವು ಉದ್ಯಮದ ಎಲ್ಲಾ ವಿಭಾಗಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಕಾರ್ಯವಿಧಾನಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ಘಟಕದ ಕಾರ್ಯಾಚರಣೆಯ ಶ್ರೇಷ್ಠತೆ ಹಾಗೂ ನಿರಂತರ ಸುಧಾರಣೆಯತ್ತ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ" ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಸಮುದಾಯ ಮತ್ತು ಕೆಲಸದ ಸ್ಥಳ ಎರಡೂ ಕಡೆಗಳಲ್ಲಿ ಸ್ವಚ್ಛ ಹಾಗೂ ಕ್ರಮಬದ್ಧ ಪರಿಸರ ನಿರ್ಮಾಣಕ್ಕೆ ಮುಂದಾಗಿರುವ ಅದಾನಿ ಸಿಮೆಂಟ್ ಸಂಸ್ಥೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಶುಕ್ರವಾರ, ಫೆಬ್ರವರಿ 27, 2026

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ: ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪಿತೂರಿ - ಪರಶುರಾಮ ಅಪ್ಪಾಜಿ ಆಕ್ರೋಶ



ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಸತ್ಯಕ್ಕೆ ದೂರವಾಗಿದ್ದು, ಇದು ಕೇವಲ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ವ್ಯವಸ್ಥಿತ ಪಿತೂರಿಯಾಗಿದೆ ಎಂದು ಅವರ ಪರಮ ಶಿಷ್ಯರಾದ ಭಾಗೋಡಿಯ ಪರಶುರಾಮ ಅಪ್ಪಾಜಿ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವು ಮಲ್ಲಿಕಾರ್ಜುನ ಮುತ್ಯಾ ಅವರ ಹತ್ತಿರದ ಸಂಬಂಧಿ ಬಾಲಕಿಯದ್ದಾಗಿದ್ದು, ಅದು ಬಹಳ ಹಳೆಯದಾಗಿದೆ.

ಕುಟುಂಬದೊಳಗಿನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬೀದಿಗೆ ತಂದು, ವಿಡಿಯೋವನ್ನು ತಪ್ಪಾಗಿ ಬಿಂಬಿಸಿ ವೈರಲ್ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ.

ಮುತ್ಯಾ ಅವರು ಯಾವುದೇ ಅಶಿಸ್ತಿನ ಅಥವಾ ಕಾನೂನು ಬಾಹಿರ ಕೃತ್ಯ ಎಸಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರ ಭಕ್ತ ಸಮೂಹ ದೊಡ್ಡದಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡಿ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಖಂಡನೀಯ. ಈ ಪಿತೂರಿಯ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ," ಎಂದು ಅವರು ಆಗ್ರಹಿಸಿದರು.

"ಭಕ್ತಾದಿಗಳು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಅಥವಾ ಆತಂಕಕ್ಕೆ ಒಳಗಾಗಬಾರದು. ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮ ಆದ್ಯತೆ. ಸತ್ಯಕ್ಕೆ ಜಯ ಸಿಗಲಿದೆ ಎಂಬ ನಂಬಿಕೆ ನಮಗಿದೆ. ಭಕ್ತರಲ್ಲಿ ಒಳ್ಳೆಯ ಸಂದೇಶವಿರಲಿ, ವದಂತಿಗಳಿಗೆ ಯಾರೂ ಕಿವಿಗೊಡಬೇಡಿ."

— ಪರಶುರಾಮ ಅಪ್ಪಾಜಿ, ಭಾಗೋಡಿ

ಗುರುವಾರ, ಫೆಬ್ರವರಿ 26, 2026

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ: ವ್ಯವಸ್ಥಿತ ಪಿತೂರಿ ಮತ್ತು ಕೌಟುಂಬಿಕ ದ್ವೇಷದ ಶಂಕೆ - ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ಆಕ್ರೋಶ.

ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಸತ್ಯಕ್ಕೆ ದೂರವಾಗಿದ್ದು, ಇದು ಕೇವಲ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಅವರ ದಶಕಗಳ ಭಕ್ತಿಯ ಪರಂಪರೆಯನ್ನು ಮಣ್ಣುಪಾಲು ಮಾಡುವ ಒಂದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಕೋಲಿ ಸಮಾಜದ ಯುವ ಅಧ್ಯಕ್ಷರಾದ ರಾಜೇಶ್ ಹೋಳಿಕಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಘಟನೆಯ ಸತ್ಯಾಸತ್ಯತೆಗಳನ್ನು ಸಮಾಜದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ​ಹಳೆಯ ವಿಡಿಯೋ ಬಳಸಿ ವ್ಯವಸ್ಥಿತ ಅಪಪ್ರಚಾರ ​ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ರಾಜೇಶ್ ಹೋಳಿಕಟ್ಟಿ, "ಆ ವಿಡಿಯೋ ಇತ್ತೀಚಿನದ್ದಲ್ಲ, ಅದು ಬಹಳ ಹಳೆಯದು. ವಿಡಿಯೋದಲ್ಲಿರುವ ಬಾಲಕಿ ಮಲ್ಲಿಕಾರ್ಜುನ ಮುತ್ಯಾ ಅವರ ಹತ್ತಿರದ ಸಂಬಂಧಿಯಾಗಿದ್ದಾಳೆ. ಕೇವಲ ಕೌಟುಂಬಿಕ ಭಿನ್ನಾಭಿಪ್ರಾಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆಲವರು ಈ ಹಳೆಯ ದೃಶ್ಯಗಳನ್ನು ಈಗ ವೈರಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಮೂಡಿಸಲು ಕೆಟ್ಟ ಪ್ರಯತ್ನ ನಡೆಸಿದ್ದಾರೆ," ಎಂದು ದೂರಿದ್ದಾರೆ.

​"ಮಲ್ಲಿಕಾರ್ಜುನ ಮುತ್ಯಾ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಕೌಟುಂಬಿಕ ಕಲಹಗಳು ಇರುವ ಸಾಧ್ಯತೆಯಿದ್ದು, ಕೇವಲ ವಿಡಿಯೋ ನೋಡಿ ಸತ್ಯಾಸತ್ಯತೆ ತಿಳಿಯುವ ಮೊದಲೇ ಅಪಪ್ರಚಾರ ಮಾಡುವುದು ಸರಿಯಲ್ಲ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಮತ್ತು ವಿಡಿಯೋ ಹಂಚಿದವರ ಉದ್ದೇಶವೇನು ಎಂಬುದರ ಕುರಿತು ಗೋಗಿ ಪೊಲೀಸ್ ಠಾಣೆಯ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು," ಎಂದು ಅವರು ಆಗ್ರಹಿಸಿದರು.

​ಭಕ್ತ ಸಮೂಹಕ್ಕೆ ಧೈರ್ಯ ಮತ್ತು ಶಾಂತಿಯ ಸಂದೇಶ
​ಮಲ್ಲಿಕಾರ್ಜುನ ಮುತ್ಯಾ ಅವರ ಲಕ್ಷಾಂತರ ಭಕ್ತರಿಗೆ ಧೈರ್ಯ ತುಂಬಿದ ಅವರು, "ಮುತ್ಯಾ ಅವರ ಮೇಲಿನ ಭಕ್ತಿ ಅಚಲವಾಗಿರಲಿ. ಭಕ್ತಾದಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಅಥವಾ ವದಂತಿಗಳಿಗೆ ಕಿವಿಗೊಟ್ಟು ಧೃತಿಗೆಡಬಾರದು. ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಸತ್ಯವು ಎಂದಿಗೂ ಸಾಯುವುದಿಲ್ಲ, ಶೀಘ್ರದಲ್ಲೇ ತನಿಖೆಯಿಂದ ಮುತ್ಯಾ ಅವರು ನಿರ್ದೋಷಿಯಾಗಿ ಹೊರಬರಲಿದ್ದಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನದ ಹಳೆಯ ವಿಚಾರಗಳನ್ನು ಸಾರ್ವಜನಿಕವಾಗಿ ತಪ್ಪು ದಾರಿಯಲ್ಲಿ ಪ್ರಚೋದಿಸುವುದು ಕಾನೂನುಬಾಹಿರ. ಸತ್ಯ ತಿಳಿಯದೆ ಯಾರೂ ಕೂಡ ಈ ವಿಡಿಯೋಗಳನ್ನು ಹಂಚಬಾರದು ಮತ್ತು ಅಶಾಂತಿಗೆ ಕಾರಣವಾಗಬಾರದು," ಎಂದು ರಾಜೇಶ್ ಹೋಳಿಕಟ್ಟಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಮಲ್ಲಿಕಾರ್ಜುನ ಮುತ್ಯಾ ಮೇಲಿನ ಆರೋಪ: ಪಿತೂರಿ ವಿರುದ್ಧ ಆಕಾಶ ಬೆನಕನಳ್ಳಿ ಆಕ್ರೋಶ.

​ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಸತ್ಯಕ್ಕೆ ದೂರವಾಗಿದ್ದು, ಇದು ಕೇವಲ  ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪಿತೂರಿಯಾಗಿದೆ ಎಂದು ಮುತ್ಯಾ ರವರ ಭಕ್ತರು ಹಾಗೂ ಕೋಲಿ ಸಮಾಜದ ಯುವ ಮುಖಂಡರಾದ ಆಕಾಶ ಬೆನಕನಳ್ಳಿ ಹೇಳಿಕೆ ನೀಡಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು​ಸಂಬಂಧಿಕರ ವಿಡಿಯೋ ದುರುಪಯೋಗ
​ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾದ ವಿಡಿಯೋವು ಮಲ್ಲಿಕಾರ್ಜುನ ಮುತ್ಯಾ ಅವರ ಹತ್ತಿರದ ಸಂಬಂಧಿ ಬಾಲಕಿಯದ್ದಾಗಿದ್ದು, ಅದು ಬಹಳ ಹಳೆಯದಾಗಿದೆ. ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳನ್ನು ಬೀದಿಗೆ ತಂದು, ವಿಡಿಯೋವನ್ನು ತಪ್ಪಾಗಿ ಬಿಂಬಿಸಿ ವೈರಲ್ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ. ಮುತ್ಯಾ ಅವರು ಯಾವುದೇ ಅಶಿಸ್ತಿನ ಅಥವಾ ಕಾನೂನು ಬಾಹಿರ ಕೃತ್ಯ ಎಸಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

​ "ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರ ಭಕ್ತ ಸಮೂಹ ದೊಡ್ಡದಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡಿ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಖಂಡನೀಯ. ಈ ಪಿತೂರಿಯ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ," ಎಂದು ಆಗ್ರಹಿಸಿದರು.

​"ಭಕ್ತಾದಿಗಳು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಅಥವಾ ಆತಂಕಕ್ಕೆ ಒಳಗಾಗಬಾರದು. ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮ ಆದ್ಯತೆ. ಸತ್ಯಕ್ಕೆ ಜಯ ಸಿಗಲಿದೆ ಎಂಬ ನಂಬಿಕೆ ನಮಗಿದೆ. ಭಕ್ತರಲ್ಲಿ ಒಳ್ಳೆಯ ಸಂದೇಶವಿರಲಿ, ವದಂತಿಗಳಿಗೆ ಯಾರೂ ಕಿವಿಗೊಡಬೇಡಿ," ಎಂದು ಆಕಾಶ ಬೆನಕನಳ್ಳಿ ಮನವಿ ಮಾಡಿದ್ದಾರೆ.

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ: ಪಿತೂರಿಯ ಶಂಕೆ ವ್ಯಕ್ತಪಡಿಸಿದ ಬಸವರಾಜ ಮೈನಾಳಕರ್.

ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಒಂದು ವ್ಯವಸ್ಥಿತ ಪಿತೂರಿಯ ಭಾಗವಾಗಿದೆ ಎಂದು ಕೋಲಿ ಸಮಾಜದ ನಗರ ಅಧ್ಯಕ್ಷರು ಹಾಗೂ ಮುತ್ಯಾ ಅವರ ಪರಮ ಭಕ್ತರಾದ ಬಸವರಾಜ ಮೈನಾಳಕರ್ ತಿಳಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ​ವೈರಲ್ ವಿಡಿಯೋ ಹಳೆಯದು ಮತ್ತು ಕೌಟುಂಬಿಕ ​ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ, ಅದು ಹಳೆಯ ವಿಡಿಯೋ ಆಗಿದೆ. ಆ ವಿಡಿಯೋದಲ್ಲಿರುವ ಬಾಲಕಿ ಮುತ್ಯಾ ಅವರ ಹತ್ತಿರದ ಸಂಬಂಧಿಯಾಗಿದ್ದಾಳೆ. ಕೇವಲ ಕೌಟುಂಬಿಕ ಭಿನ್ನಾಭಿಪ್ರಾಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆಲವರು ಈ ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ವೈರಲ್ ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಈ ರೀತಿ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

​"ಮಲ್ಲಿಕಾರ್ಜುನ ಮುತ್ಯಾ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಕೌಟುಂಬಿಕ ಕಲಹಗಳು ಇರುವ ಸಾಧ್ಯತೆಯಿದ್ದು, ಸತ್ಯಾಸತ್ಯತೆ ತಿಳಿಯುವ ಮೊದಲೇ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ," ಎಂದು ಮೈನಾಳಕರ್ ಅಭಿಪ್ರಾಯಪಟ್ಟಿದ್ದಾರೆ.

​ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು. ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಾನೂನಿನ ಮೇಲೆ ನಂಬಿಕೆಯಿರಲಿ, ಸತ್ಯವು ಶೀಘ್ರದಲ್ಲೇ ಹೊರಬರಲಿದೆ ಎಂದು ಅವರು ಭಕ್ತ ಸಮೂಹಕ್ಕೆ ಧೈರ್ಯ ತುಂಬಿದ್ದಾರೆ.

​"ಮುತ್ಯಾ ಅವರ ಮೇಲಿನ ಭಕ್ತಿ ಅಚಲವಾಗಿರಲಿ. ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಶಾಂತಿಯಿಂದ ಇರೋಣ. ಒಳ್ಳೆಯ ಸಂದೇಶ ಸಮಾಜಕ್ಕೆ ತಲುಪಲಿ ಎಂಬುದು ನಮ್ಮ ಆಶಯ."

— ಬಸವರಾಜ ಮೈನಾಳಕರ್, ನಗರ ಅಧ್ಯಕ್ಷರು, ಕೋಲಿ ಸಮಾಜ ಚಿತ್ತಾಪುರ.

ಶನಿವಾರ, ಫೆಬ್ರವರಿ 21, 2026

ಸೂಲಹಳ್ಳಿಯಲ್ಲಿ ಅಕ್ರಮ ಡ್ರಿಲಿಂಗ್: ಜಗದೀಶ್ ಸಾಗರ ಆಕ್ರೋಶ.

ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅವರಿಗೆ ಯಾವುದೇ ಮಾಹಿತಿ ನೀಡದೆ, ರಾತೋರಾತ್ರಿ ಅಕ್ರಮವಾಗಿ ಸುಣ್ಣದ ಕಲ್ಲು ಪತ್ತೆಗಾಗಿ ಡ್ರಿಲಿಂಗ್ ನಡೆಸುತ್ತಿರುವ RP GEO MINING SOLUTIONS ಕಂಪನಿಯ ವಿರುದ್ಧ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಾರ್ಮಿಕ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಸಾಗರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳು ಅಥವಾ ತಹಸೀಲ್ದಾರರಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಂಪನಿಯು ಸುಣ್ಣದ ಕಲ್ಲಿನ ಡ್ರಿಲಿಂಗ್ ನಡೆಸುತ್ತಿದೆ, 2022ರಲ್ಲಿಯೇ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರೈತರ ಗಮನಕ್ಕೆ ತರದೆ ಜಮೀನುಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿದೆ. ಈ ಹರಾಜನ್ನು ಅಂಬುಜಾ ಸಿಮೆಂಟ್ ಕಂಪನಿ ಪಡೆದುಕೊಂಡಿದೆ, ಬೋರ್‌ವೆಲ್‌ಗಳಿಂದ ಕೇವಲ 100 ಮೀಟರ್ ಅಂತರದಲ್ಲಿ ಆಳವಾಗಿ ಕೊರೆಯುವ ಮೂಲಕ ಅಂತರ್ಜಲ ಹಾಗೂ ಕೃಷಿ ಭೂಮಿಗೆ ಹಾನಿ ಮಾಡಲಾಗುತ್ತಿದೆ. ಜಮೀನಿನಿಂದ ತೆಗೆದ ಸುಣ್ಣದ ಕಲ್ಲಿನ ಮಾದರಿಗಳನ್ನು ರೈತರಿಗೆ ತಿಳಿಯದಂತೆ ಬೆಂಗಳೂರಿನ ಐ.ಬಿ.ಎಂ (IBM) ಗೆ ಸಲ್ಲಿಸಿ, ಇಡೀ ಗ್ರಾಮದ ಜಮೀನುಗಳನ್ನು ಹರಾಜು ಪ್ರಕ್ರಿಯೆಯಡಿ ವಶಪಡಿಸಿಕೊಳ್ಳುವ ಸಂಚು ರೂಪಿಸಲಾಗಿದೆ ಎಂದರು.

 ನವ ಕರ್ನಾಟಕ ರೈತ ಸಂಘ ಸೇಡಂ ತಾಲ್ಲೂಕು ಅಧ್ಯಕ್ಷ ದೊಡ್ಡಪ್ಪ ಮಳಖೇಡ ಮಾತನಾಡಿ "ರೈತರ ಬದುಕಿನ ಆಧಾರವಾಗಿರುವ ಜಮೀನುಗಳನ್ನು ಅವರಿಗೆ ತಿಳಿಯದಂತೆ ಕಂಪನಿಗಳಿಗೆ ಧಾರೆ ಎರೆಯುತ್ತಿರುವುದು ಖಂಡನೀಯ. ಕೂಡಲೇ ಈ ಅಕ್ರಮ ಡ್ರಿಲಿಂಗ್ ಕಾರ್ಯವನ್ನು ತಡೆಹಿಡಿಯಬೇಕು. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ RP GEO MINING SOLUTIONS ಕಂಪನಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಜಗದೀಶ್ ಸಾಗರ ಒತ್ತಾಯಿಸಿದ್ದಾರೆ.
ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಸೂಲಹಳ್ಳಿ ಗ್ರಾಮದ ರೈತರೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಾರ್ಮಿಕ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಜಳಕಿ ಇದ್ದರು.

ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ: 14.73 ಲಕ್ಷಕ್ಕೂ ಅಧಿಕ ಸಂಗ್ರಹ.

ಚಿತ್ತಾಪುರ: ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶನಿವಾರ ಭಕ್ತಿ ಮತ್ತು ಪಾರದರ್ಶಕತೆಯ ನಡುವೆ ಜರುಗಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಎಣಿಕೆ ಪ್ರಕ್ರಿಯೆಯು ಸತತವಾಗಿ ಸಂಜೆ 5 ಗಂಟೆಯವರೆಗೆ ನಡೆಯಿತು.

2025ರ ಆಗಸ್ಟ್ 4ರಿಂದ 2026ರ ಫೆಬ್ರವರಿ 21ರ ವರೆಗಿನ ಅವಧಿಯಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆಯಿಂದ ಒಟ್ಟು 14,73,160 ರೂಪಾಯಿ ಸಂಗ್ರಹವಾಗಿದೆ ಎಂದು ದೇವಸ್ಥಾನದ ಅಧ್ಯಕ್ಷರು ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ವಿದೇಶಿ ಕರೆನ್ಸಿ ಆಕರ್ಷಣೆ:
ಈ ಬಾರಿಯ ಹುಂಡಿ ಎಣಿಕೆಯಲ್ಲಿ ವಿಶೇಷವಾಗಿ ಮಲೇಷಿಯಾ ದೇಶದ ಕರೆನ್ಸಿ ಪತ್ತೆಯಾಗಿರುವುದು ಕಂಡುಬಂದಿದೆ. ಭಕ್ತರೊಬ್ಬರು ಮಲೇಷಿಯಾದ 1 ರಿಂಗಿಟ್ ಮುಖಬೆಲೆಯ 18 ನೋಟುಗಳನ್ನು ಹುಂಡಿಗೆ ಹಾಕಿದ್ದಾರೆ. ಭಾರತೀಯ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ (1 ರಿಂಗಿಟ್ = 23.26 ರೂ.) ಇದರ ಒಟ್ಟು ಮೊತ್ತ 418.68 ರೂಪಾಯಿಗಳಾಗುತ್ತದೆ.
ಇದರ ಜೊತೆಗೆ ಮಲೇಷಿಯಾದ 10 ಸೇನ್ (Sen) ಮುಖಬೆಲೆಯ 2 ನಾಣ್ಯಗಳು ಕೂಡ ಲಭ್ಯವಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆ ದರದ ಅನ್ವಯ 20 ಸೇನ್‌ನ ಮೌಲ್ಯ ಸುಮಾರು 4.65 ರೂಪಾಯಿಗಳಾಗಲಿದ್ದು, ವಿದೇಶಿ ಕರೆನ್ಸಿಯ ಒಟ್ಟು ಮೊತ್ತ ಅಂದಾಜು 423.33 ರೂಪಾಯಿಗಳಾಗಲಿದೆ.

ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು, "ಹುಂಡಿಯಲ್ಲಿ ಸಂಗ್ರಹವಾದ ಈ ಮೊತ್ತವು ಸರ್ಕಾರಕ್ಕೆ ಸೇರಿದ್ದಾಗಿದ್ದು, ಇದನ್ನು ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕೃತವಾಗಿ ಜಮಾ ಮಾಡಲಾಗುವುದು," ಎಂದು ತಿಳಿಸಿದರು.
ಸುದೀರ್ಘ 6 ಗಂಟೆಗಳ ಕಾಲ ನಡೆದ ಈ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶುಕ್ರವಾರ, ಫೆಬ್ರವರಿ 20, 2026

ಸಮಾಜದ ಅಂಕುಡೊಂಕು ತಿದ್ದಿದು ಸರ್ವಜ್ಞ: ನಾಗಯ್ಯ ಹೀರೆಮಠ.

ಚಿತ್ತಾಪುರ: "ತ್ರಿಪದಿ ಕವಿ ಸರ್ವಜ್ಞರು ತಮ್ಮ ಅರ್ಥಗರ್ಭಿತ ವಚನಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ ಹಾಗೂ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಸಮಾಜ ಸುಧಾರಕರು," ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ ಬಣ್ಣಿಸಿದರು.

ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 506ನೇ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಮಾತನಾಡಿದ ಅವರು ಸರ್ವಜ್ಞರು ಅಂದಿನ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಜೀವನದ ಸತ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಜಾತಿ, ಮತ ಎಂಬ ಭೇದವಿಲ್ಲದೆ ಸರ್ವ ಸಮಾನತೆಯನ್ನು ಸಾರಿದ ಅವರ ತ್ರಿಪದಿಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಸರ್ವಜ್ಞರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಕುಂಬಾರ ಸಮಾಜದ ಮಾಜಿ ಅಧ್ಯಕ್ಷ ಜಗದೇವ ಎಸ್. ಕುಂಬಾರ, "ಕುಂಬಾರ ಸಮಾಜದಲ್ಲಿ ಜನಿಸಿದ ಸರ್ವಜ್ಞರು ಇಡೀ ಜಗತ್ತೇ ಮೆಚ್ಚುವಂತಹ ಸಾಹಿತ್ಯ ನೀಡಿದ್ದಾರೆ. ಮಣ್ಣಿನಿಂದ ಕುಂಭ ತಯಾರಿಸುವ ಕಲೆಯಂತೆ, ಶಬ್ದಗಳ ಮೂಲಕ ಮನುಷ್ಯನ ವ್ಯಕ್ತಿತ್ವ ರೂಪಿಸುವ ಕಾರ್ಯವನ್ನು ಅವರು ಮಾಡಿದ್ದಾರೆ. ಕುಂಬಾರ ಸಮಾಜದ ಶ್ರಮಜೀವಿಗಳಿಗೆ ಸರ್ವಜ್ಞರ ಬದುಕು ಸದಾ ಸ್ಪೂರ್ತಿ," ಎಂದರು.

ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಮುಖಂಡರಾದ ವಿಶ್ವನಾಥ ಕುಂಬಾರ ಚಿತ್ತಾಪುರ, ಶ್ರೀಮಂತ ಕುಂಬಾರ, ಮೋಗಲಪ್ಪ ಕುಂಬಾರ, ರವಿ ಕುಂಬಾರ, ಕಾಶಿನಾಥ ಕುಂಬಾರ ಬೆಣ್ಣೂರ ಶಶಿಕುಮಾರ ಕುಂಬಾರ ರಾವೂರ, ಬೀಮರಾಯ ಕುಂಬಾರ ಭಂಕಲಗಿ, ಸೇರಿದಂತೆ ತಹಸೀಲ್ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.

ಕಂಬಳೇಶ್ವರ ಮಠಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಭೇಟಿ.


ಚಿತ್ತಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕಂಬಳೇಶ್ವರ ಮಠಕ್ಕೆ ಕೊಪ್ಪಳದ ಗವಿಮಠದ ಪೀಠಾಧಿಪತಿಗಳಾದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದೇ ಫೆಬ್ರವರಿ 23ರಂದು ಭೇಟಿ ನೀಡಲಿದ್ದಾರೆ ಎಂದು ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.


ಅಂದು ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಆಗಮಿಸಲಿರುವ ಶ್ರೀಗಳು, ಮೊದಲು ಕಂಬಳೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ನಮನಗಳನ್ನು ಸಲ್ಲಿಸಲಿದ್ದಾರೆ. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯರು ಗವಿಸಿದ್ದೇಶ್ವರ ಶ್ರೀಗಳಿಗೆ ನಾಗಾವಿ ನಾಡಿನ ಇತಿಹಾಸ ಸಾರುವ ಪುಸ್ತಕಗಳನ್ನು ನೀಡಿ, ಮಠದ ಪರವಾಗಿ ಭಕ್ತಿಪೂರ್ವಕವಾಗಿ ಸತ್ಕರಿಸಿ ಗೌರವಿಸಲಿದ್ದಾರೆ.

"ಅಪರೂಪದ ಪವಾಡ ಪುರುಷರು ಹಾಗೂ ಸಮಾಜಮುಖಿ ಚಿಂತಕರಾದ ಗವಿಸಿದ್ದೇಶ್ವರ ಶ್ರೀಗಳ ಆಗಮನವು ನಮ್ಮ ಭಾಗದ ಭಕ್ತರಿಗೆ ಸೌಭಾಗ್ಯದ ಸಂಗತಿಯಾಗಿದೆ. ಈ ಸುಸಂದರ್ಭದಲ್ಲಿ ತಾಲೂಕಿನ ಸಮಸ್ತ ಭಕ್ತಾದಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಶ್ರೀಗಳ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕು" ಎಂದು ಸೋಮಶೇಖರ ಶಿವಾಚಾರ್ಯರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಶಿವಾಜಿ ಆಡಳಿತ ವೈಖರಿ ಇಂದಿಗೂ ಮಾದರಿ: ತಹಸೀಲ್ದಾರ್.

ಚಿತ್ತಾಪುರ: ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ರಾಜನಾಗಿರದೆ, ಅಪ್ರತಿಮ ದೇಶಪ್ರೇಮಿ ಹಾಗೂ ಜನಪರ ಆಡಳಿತಗಾರರಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಶಿವಾಜಿ ಮಹಾರಾಜರ ಕಾಲದ ಆಡಳಿತವು ಅತ್ಯಂತ ಶಿಸ್ತುಬದ್ಧವಾಗಿತ್ತು. ಸ್ವರಾಜ್ಯದ ಪರಿಕಲ್ಪನೆಯಡಿ ಅವರು ಜಾರಿಗೆ ತಂದ ಆಡಳಿತಾತ್ಮಕ ಸುಧಾರಣೆಗಳು ಇಂದಿನ ಪ್ರಜಾಪ್ರಭುತ್ವಕ್ಕೂ ಅಡಿಪಾಯದಂತಿವೆ ಎಂದು ತಹಸೀಲ್ದಾರ್ ಬಣ್ಣಿಸಿದರು.

ಪರಕೀಯರ ಆಳ್ವಿಕೆಯ ನಡುವೆ ಸ್ವಂತ ಸಾಮ್ರಾಜ್ಯ ಕಟ್ಟಿದ ಶಿವಾಜಿಯವರ ಸಾಹಸಗಾಥೆ ಹಾಗೂ ಮಾತೃಭೂಮಿಯ ಮೇಲಿದ್ದ ಅವರ ಭಕ್ತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿತ್ತು. ತಮ್ಮ ಆಡಳಿತದಲ್ಲಿ ಎಲ್ಲ ಸಮುದಾಯದವರನ್ನು ಸಮಾನವಾಗಿ ಕಂಡಿದ್ದ ಮಹಾರಾಜರು, ಮಹಿಳೆಯರ ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಜೀವನ ಚರಿತ್ರೆ ನಮಗೆ ಶೌರ್ಯ ಮತ್ತು ನೀತಿ ಎರಡನ್ನೂ ಕಲಿಸುತ್ತದೆ ಎಂದರು.

.ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ , ವಿಠ್ಠಲ್ ರಾವ್, ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಯೆಂದೆ, ಪ್ರಹ್ಲಾದ್ ವಿಶ್ವಕರ್ಮ, ಉಪಾಧ್ಯಕ್ಷ ಅನೂಪ್ ಉಬಾಳೆ, ರೋಹಿತ್ ಚವ್ಹಾಣ, ಕಾರ್ಯದರ್ಶಿ ಗುರುರಾಜ್ ಉಪ್ಪಾರ, ಸಹ ಕಾರ್ಯದರ್ಶಿ ಮನೋಜ್ ಹರಾಳೆ, ಸಂಯುಕ್ತ ಕಾರ್ಯದರ್ಶಿ ಅಂಬರೀಶ್ ಭೋವಿ, ಖಜಾಂಚಿ ನವೀನ್ ಚವ್ಹಾಣ್,  ಸದಸ್ಯರಾದ ರೋಹಿತ್ ಯೆಂದೆ, ಸಂತೋಷ್ ಗಾವಲ್ಕರ್, ಸಂಜೀವ್ ಸೂರ್ಯವಂಶಿ, ಆಕಾಶ ಸುಗಂಧಿ ಲಾಡ್, ಗಣೇಶ ಜೀತುರೆ, ಮಹೇಶ್ ಸುಗಂಧಿ, ನಿತೇಶ್ ಸುಗಂಧಿ ಸೇರಿದಂತೆ ಮರಾಠ ಸಮಾಜದ ಮುಖಂಡರು ಅನೇಕರು ಉಪಸ್ಥಿತರಿದ್ದರು.

ತ್ಯಾಜ್ಯ ವಿಲೇವಾರಿ ಜ್ಞಾನದಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ: ಮುಖ್ಯಾಧಿಕಾರಿ.

ಚಿತ್ತಾಪುರ: ಪಟ್ಟಣದ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕಕ್ಕೆ ತಾಲ್ಲೂಕಿನ ಕದ್ದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಇತ್ತೀಚೆಗೆ ಶೈಕ್ಷಣಿಕ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪುರಸಭೆಯ ಮುಖ್ಯಾಧಿಕಾರಿಗಳಾದ ಮನೋಜ್ ಕುಮಾರ್ ಗುರಿಕಾರ್ ಅವರು ವಿಶೇಷ ಮಾಹಿತಿ ನೀಡಿದರು.

ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ಹೇಗೆ ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಲಾಗುತ್ತದೆ ಎಂಬ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸಿಕೊಡಲಾಯಿತು. ಮುಖ್ಯವಾಗಿ ಹಸಿ ಕಸದಿಂದ ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸುವ ವಿಧಾನ ಹಾಗೂ ಅದರ ಸಂರಕ್ಷಣೆಯ ಕುರಿತು ಮುಖ್ಯಾಧಿಕಾರಿಗಳು ವಿವರಿಸಿದರು.
ನಂತರ ಮಾತನಾಡಿದ ಅವರು, "ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಇಂದಿನಿಂದಲೇ ಸಂಕಲ್ಪ ಮಾಡಬೇಕು. ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ಪುರಸಭೆಯ ವಾಹನಗಳಿಗೆ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು," ಎಂದು ಕರೆ ನೀಡಿದರು.
ನಂತರ ಮುಖ್ಯಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಧ್ಯಾರ್ಥಿಗಳ ಪ್ರಶ್ನೆ, ಪ್ಲಾಸ್ಟಿಕ್ ಭೂಮಿಯಲ್ಲಿ ಕರಗಲು ಎಷ್ಟು ವರ್ಷ ಬೇಕು? ಎಂದಗಾ ಉತ್ತರಿದ ಅವರು ಪ್ಲಾಸ್ಟಿಕ್ ವಿಧಗಳ ಆಧಾರದ ಮೇಲೆ ನೂರಾರು ವರ್ಷಗಳು ಬೇಕಾಗಬಹುದು, ಅದಕ್ಕಾಗಿಯೇ ನಾವು ಮರುಬಳಕೆ (Recycle) ಮಾಡುವುದನ್ನು ಕಲಿಯಬೇಕು ಎಂದರು. ನಂತರ ಮತ್ತೆ ಪ್ರಶ್ನಿದ ವಿದ್ಯಾರ್ಥಿಗಳು ನಾವು ಮನೆಯಲ್ಲಿ ಗಿಡಗಳಿಗೆ ಸಾವಯವ ಗೊಬ್ಬರವನ್ನು ಹೇಗೆ ಬಳಸಬಹುದು ಎಂದರು ಆಗ ಉತ್ತರಿಸಿ ಅವರು ಪುರಸಭೆಯಿಂದ ಸಿದ್ಧವಾದ ಗೊಬ್ಬರವನ್ನು ನೀವು ಪಡೆದು ಗಿಡಗಳಿಗೆ ಬಳಸಬಹುದು, ಇದರಿಂದ ಗಿಡಗಳು ಆರೋಗ್ಯವಾಗಿ ಬೆಳೆಯುತ್ತವೆ. ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಮುಖ್ಯಾಧಿಕಾರಿಗಳು ಸರಳವಾಗಿ ಉತ್ತರಿಸುವ ಮೂಲಕ ಅವರಲ್ಲಿ ಪರಿಸರ ಪ್ರೇಮವನ್ನು ಜಾಗೃತಗೊಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರೋಹಿತ್ ಕಟ್ಟಿಮನಿ, ಶಾಲೆಯ ಮುಖ್ಯಗುರುಗಳಾದ ನಾಗಮ್ಮ ಕುಂಬಾರ, ಪುರಸಭೆ ಸಮುದಾಯ ಸಂಚಾಲಕರಾದ ಮೀನಾಕ್ಷಿ, ಅಕ್ಷತಾ, ರೇಣುಕಾ, ಶಿಕ್ಷಕ ಸೋಪನಗೌಡ ಪಾಟೀಲ್, ಅತಿಥಿ ಶಿಕ್ಷಕ ಜಗದೇವ ಕುಂಬಾರ, ಎಲ್ಎಲ್ಎಫ್ ಶಿಕ್ಷಕ ಹಣಮಂತ ಕುಂಬಾರ ಸೇರಿದಂತೆ ಇತರರು ಇದ್ದರು.

ಬುಧವಾರ, ಫೆಬ್ರವರಿ 18, 2026

ಜೆಜೆಎಂ ಕಾಮಗಾರಿ ಹೆಸರಲ್ಲಿ ಪರಿಸರ ಮಾರಣಹೋಮ; ನಿಯಮ ಉಲ್ಲಂಘಿಸಿ ಬೆಟ್ಟ ಕೊರೆಯುತ್ತಿರುವ ಗುತ್ತಿಗೆದಾರ!

ಚಿತ್ತಾಪೂರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ನಡುವೆ ಈಗ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ (JJM) ಯೋಜನೆಗೆ ಪರಿಸರ ಬಲಿಯಾಗುತ್ತಿದೆ. ವೈಜ್ಞಾನಿಕತೆ ಗಾಳಿಗೆ ತೂರಿ ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಗುತ್ತಿಗೆದಾರ ಕಂಪನಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸರ್ಕಾರದ ಷರತ್ತುಗಳಿಗೆ ಕವಡೆ ಕಾಸಿನ ಬೆಲೆ ಇಲ್ಲವೇ?
ಸನ್ನತ್ತಿ ನದಿಯಿಂದ 70 ಗ್ರಾಮಗಳಿಗೆ ನೀರು ಪೂರೈಸುವ ಜೆಜೆಎಂ 4ನೇ ಹಂತದ ಯೋಜನೆಗಾಗಿ ಹುಳಂಡಗೇರಾ, ತರಕಸಪೇಟ, ರಾಮತೀರ್ಥ, ದಂಡಗುಂಡ ಮತ್ತು ಬನಹಟ್ಟಿಯಲ್ಲಿ ಟ್ಯಾಂಕ್‌ಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಆಗಸ್ಟ್ 2025ರಲ್ಲಿ ಭೂಮಿ ಮಂಜೂರು ಮಾಡಿದ್ದರು. ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಅಡಿಯಲ್ಲಿ ಸುಮಾರು 2 ಎಕರೆ 36 ಗುಂಟೆ ಜಮೀನನ್ನು ಜಿಲ್ಲಾ ಪಂಚಾಯತ್ ಹೆಸರಿಗೆ ಹಸ್ತಾಂತರಿಸುವಾಗ "ಸರ್ಕಾರಿ ಜಮೀನನ್ನು ವಿನಾಶಕಾರಿ ಅಥವಾ ಕಾಯಂ ಹಾನಿಕಾರಕ ರೀತಿಯಲ್ಲಿ ಬಳಸಬಾರದು" ಎಂಬ ಸ್ಪಷ್ಟ ಷರತ್ತು ವಿಧಿಸಲಾಗಿತ್ತು. ಆದರೆ, ಪ್ರಸ್ತುತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಂಪನಿಯು ಈ ನಿಯಮಗಳನ್ನು ಗಾಳಿಗೆ ತೂರಿ, ಬೆಟ್ಟದ ಮೂಲ ಸ್ವರೂಪವನ್ನೇ ನಾಶ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಆರೋಪಿಸಿದ್ದಾರೆ.

ರಾಮತೀರ್ಥ ಗ್ರಾಮದ ಸರಿಸುಮಾರು 1000 ಮೀಟರ್ ಉದ್ದದ ಭವ್ಯ 'ವಾರಿ ಬೆಟ್ಟ'ವು ಪ್ರಕೃತಿಯ ಸೌಂದರ್ಯಕ್ಕೆ ಹೆಸರಾಗಿತ್ತು. ಈಗ ಇಲ್ಲಿ ಜೆಜೆಎಂ ಟ್ಯಾಂಕ್ ನಿರ್ಮಾಣದ ಹೆಸರಿನಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಇಳಿಜಾರು ಪ್ರದೇಶದಲ್ಲಿ ಆಳವಾದ ಗುಂಡಿಗಳನ್ನು ತೋಡಲಾಗುತ್ತಿದೆ.
ನೂರಾರು ಗಿಡಮರಗಳು ಧರೆಗುರುಳುತ್ತಿವೆ.ಮಳೆಗಾಲದಲ್ಲಿ ಬೆಟ್ಟದ ಮಣ್ಣು ಸಡಿಲಗೊಂಡು ಇಡೀ ಟ್ಯಾಂಕ್ ಉರುಳಿ ಬೀಳುವ ಅಪಾಯವಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ" ಎಂದು ಕೈತೊಳೆದುಕೊಳ್ಳುತ್ತಿದ್ದರೆ, 
ಕೇಂದ್ರದ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ಸದಾ ಟೀಕೆ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅಕ್ರಮಗಳು ಕಾಣಿಸುತ್ತಿಲ್ಲವೇ?" ಎಂದು ಅಯ್ಯಪ್ಪ ರಾಮತೀರ್ಥ ಪ್ರಶ್ನಿಸಿದ್ದಾರೆ. ತರಾತುರಿಯಲ್ಲಿ ಕಾಮಗಾರಿ ನಡೆಸಿ ಹಣ ಲೂಟಿ ಮಾಡುವ ಉದ್ದೇಶ ಈ ಯೋಜನೆಯ ಹಿಂದಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.

ಕೂಡಲೇ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸ್ಥಳ ಪರಿಶೀಲನೆ ನಡೆಸಬೇಕು.ಜಿಲ್ಲಾಧಿಕಾರಿಗಳ ಷರತ್ತು ಉಲ್ಲಂಘಿಸಿದ ಗುತ್ತಿಗೆದಾರ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ನೈಸರ್ಗಿಕ ಬೆಟ್ಟ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು.
ಮುಂದಾಗಬಹುದಾದ ಭೀಕರ ಅನಾಹುತವನ್ನು ತಪ್ಪಿಸಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಫೆ. 23ಕ್ಕೆ 'ಅಭಿನಂದನ' ಪರ್ವ: ಗವಿಮಠದ ಶ್ರೀಗಳ ಪ್ರಪ್ರಥಮ ಆಗಮನ.

ಚಿತ್ತಾಪುರ: ಪಟ್ಟಣದ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ಶ್ರೀ ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ 16ನೇ ವಾರ್ಷಿಕೋತ್ಸವ ಹಾಗೂ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವು ಇದೇ ಫೆಬ್ರವರಿ 23ರಂದು ಬೆಳಗ್ಗೆ 10 ಗಂಟೆಗೆ ಎಂ.ಬಿ. ಪಾಟೀಲ ಪಬ್ಲಿಕ್ ಶಾಲಾ ಆವರಣದಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ, "ಶತಮಾನದ ಶರಣ, ಅಭಿನವ ಅನ್ನದಾನಿ ಎಂದೇ ಖ್ಯಾತರಾದ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೊದಲ ಬಾರಿಗೆ ಚಿತ್ತಾಪುರ ಪಟ್ಟಣಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಶ್ರೀಗಳ ದರ್ಶನ ಹಾಗೂ ಆಶೀರ್ವಚನ ಆಲಿಸಲು ತಾಲೂಕಿನ ಜನತೆ ಕಾತರರಾಗಿದ್ದಾರೆ," ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಪ್ರಿಯಾಂಕ್ ಖರ್ಗೆ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ದಿವ್ಯ ಸಾನಿಧ್ಯವನ್ನು ಅಬ್ಬೆ ತುಮಕೂರಿನ ಡಾ. ಗಂಗಾಧರ ಮಹಾಸ್ವಾಮಿಗಳು, ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು, ದಿಗ್ಗಾಂವದ ಶ್ರೀ ಸಿದ್ದವೀರ ಶಿವಾಚಾರ್ಯರು ಹಾಗೂ ರಾವೂರ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಆಶೀರ್ವದಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಶಂಕ್ರಮ್ಮ ಡವಳಗಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆ
ಸಮಾರಂಭಕ್ಕೆ ಆಗಮಿಸುವ ಭಕ್ತರಿಗಾಗಿ ಮತ್ತು ಪೋಷಕರಿಗಾಗಿ ಸಂಸ್ಥೆಯ ವತಿಯಿಂದ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ,ಸುಮಾರು 3,000ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಸುಸಜ್ಜಿತ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸುಸಜ್ಜಿತ ಊಟದ ವ್ಯವಸ್ಥೆ ಮಾಡಲಾಗಿದೆ,ಪಟ್ಟಣದ ಪ್ರತಿಯೊಬ್ಬ ನಾಗರಿಕರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು," ಎಂದು ನಾಗರೆಡ್ಡಿ ಪಾಟೀಲರು ಕೋರಿದ್ದಾರೆ.

ಮಂಗಳವಾರ, ಫೆಬ್ರವರಿ 17, 2026

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದುಗೌಡ ಕುರಾಳ ನೇಮಕ.

ಚಿತ್ತಾಪುರ: ರಾಜ್ಯಾದ್ಯಂತ ನಡೆಯುತ್ತಿರುವ ಬಿಜೆಪಿ ಸಂಘಟನಾ ಪರ್ವದ ಅಂಗವಾಗಿ, ಕಲಬುರಗಿ ಗ್ರಾಮಾಂತರ ಜಿಲ್ಲೆಯ ಚಿತ್ತಾಪುರ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಇದರಲ್ಲಿ ಬಿಜೆಪಿ ಯುವ ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದುಗೌಡ ಕುರಾಳ ಅವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಜವಾಬ್ದಾರಿ ನೀಡಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಂಡಲ ಅಧ್ಯಕ್ಷರಾದ ರವೀಂದ್ರ ಸಜ್ಜನಶೆಟ್ಟಿ ಅವರು, ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸಮರ್ಥ ಹಾಗೂ ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಮ್ಮ ನೇಮಕಾತಿ ಕುರಿತು ಸಂತಸ ವ್ಯಕ್ತಪಡಿಸಿರುವ ಸಿದ್ದುಗೌಡ ಕುರಾಳ ಅವರು ಮಾತನಾಡುತ್ತಾ "ನನ್ನ ಮೇಲೆ ನಂಬಿಕೆಯಿಟ್ಟು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ನೀಡಿದ ಪಕ್ಷದ ಎಲ್ಲಾ ಹಿರಿಯ ನಾಯಕರಿಗೆ ಮತ್ತು ಮಂಡಲ ಅಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಪಕ್ಷದ ಸಿದ್ಧಾಂತಗಳನ್ನು ತಳಮಟ್ಟದ ಯುವಕರಿಗೆ ತಲುಪಿಸುವುದು ನನ್ನ ಆದ್ಯತೆಯಾಗಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ಯುವಶಕ್ತಿಯನ್ನು ಸಂಘಟಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ," ಎಂದು ತಿಳಿಸಿದರು.

ಶಿವಾಜಿ ಮತ್ತು ಸರ್ವಜ್ಞ ಜಯಂತಿ: ತಾಲ್ಲೂಕು ಆಡಳಿತ ಸಜ್ಜು.

ಚಿತ್ತಾಪುರ: ಪಟ್ಟಣದ ಪ್ರಜಾಸೌಧದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂತ ಕವಿ ಸರ್ವಜ್ಞರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು, "ಮಹಾನ್ ಪುರುಷರ ಜಯಂತಿಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ. ತಾಲ್ಲೂಕು ಆಡಳಿತದ ವತಿಯಿಂದ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಸಮಾಜದ ಮುಖಂಡರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು," ಎಂದು ತಿಳಿಸಿದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷರಾದ ಅನಿಲ ಯೆಂದೆ ಅವರು ಮಾತನಾಡಿ, "ಬರುವ ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯು ತಾಲ್ಲೂಕಿನಲ್ಲಿ ಅತ್ಯಂತ ಅದ್ದೂರಿಯಾಗಿ ಮತ್ತು ಶಿಸ್ತುಬದ್ಧವಾಗಿ ಆಚರಿಸಲು ನಿರ್ಧರಿಸಲಾಗಿದೆ," ಎಂದರು.

ಇದೇ ವೇಳೆ ಕುಂಬಾರ ಸಮಾಜದ ಮಾಜಿ ಅಧ್ಯಕ್ಷರಾದ ಜಗದೇವ ಕುಂಬಾರ ಅವರು ಮಾತನಾಡಿ, "ಫೆಬ್ರವರಿ 20ರಂದು ಸರ್ವಜ್ಞ ಜಯಂತಿ ಇದ್ದು, ಅಂದು ಶಿಷ್ಟಾಚಾರದಂತೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸರಳವಾಗಿ ಆಚರಣೆಯಲ್ಲಿ ನಮ್ಮ ಸಮಾಜದ ಮುಖಂಡರು ಭಾಗವಹಿಸುತ್ತೆವೆ. ಮುಂದಿನ ಕೆಲವೇ ದಿನಗಳಲ್ಲಿ ಸಮಾಜದ ವತಿಯಿಂದ ಸರ್ವಜ್ಞ ಜಯಂತಿಯನ್ನು ಬೃಹತ್ ಪ್ರಮಾಣದಲ್ಲಿ ಆಚರಿಸಲು ಚಿಂತಿಸಲಾಗಿದೆ. ಆ ಸಂದರ್ಭದಲ್ಲಿ ತಾಲ್ಲೂಕು ಆಡಳಿತವು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು," ಎಂದು ಕೋರಿದರು.

ವಿವಿಧ ಜಯಂತೋತ್ಸವದಲ್ಲಿ ಮಹಾನ್ ಪುರುಷರ ಭಾವಚಿತ್ರಗಳಿಗೆ ಪ್ಲಾಸ್ಟಿಕ್ ಹಾರ ಹಾಕಿ ಜಯಂತಿ ಮಾಡುತ್ತಿರುವು ಕಂಡುಬರುತ್ತಿದೆ ಕೊಡಲೆ ತಹಸೀಲ್ದಾರರು ಎಲ್ಲಾ ಇಲಾಖೆಗಳಿಗೆ ಪ್ಲಾಸ್ಟಿಕ್ ಹಾರ ನಿಷೇಧ ಮಾಡಲು ಆದೇಶ ಹೊರಡಿಸಬೇಕು ಎಂದರು 

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ, ಶಿಕ್ಷಣ ಇಲಾಖೆಯ ಶಿವಶರಣಪ್ಪ, ರೋಹಿತ್ ಚವ್ಹಾಣ್, ಶಿವಪ್ರಕಾಶ್, ಅಮೃತ ಕ್ಷೀರ ಸಾಗರ, ರತ್ನ ಕುಮಾರ್, ಡಾ. ಶಾಂತಯ್ಯ, ಶ್ರೀಮತಿ ಸುನಿತಾ, ಸಂತೋಷ ಕುಮಾರ್, ರೋಹಿತ್ ಯೆಂದೆ, ಮನೋಜ್, ಮೋಹಿತ್ ಕಟ್ಟಿಮನಿ. ಆಕಾಶ್ ಸುಗಂಧಿ, ಶಶಿಕುಮಾರ್ ಕುಂಬಾರ ಇತರರು ಇದ್ದರು.

ಶುಕ್ರವಾರ, ಫೆಬ್ರವರಿ 13, 2026

ಮಾತಾ ಮಾಣಿಕೇಶ್ವರಿ ಭಕ್ತರಿಗೆ ರಾಜೇಶ್ ಹೋಳಿಕಟ್ಟಿ ತಂಡದಿಂದ ಅಲ್ಪಾಹಾರ ಸೇವೆ.

ಚಿತ್ತಾಪುರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಯಾನಗುಂದಿಯ ಶ್ರೀ ಮಾತಾ ಮಾಣಿಕೇಶ್ವರಿ ದೇವಿಯ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಭಕ್ತಾದಿಗಳಿಗೆ ತಾಲೂಕು ಕೋಲಿ ಸಮಾಜದ ಯುವ ಘಟಕದ ವತಿಯಿಂದ ಹಣ್ಣು-ಹಂಪಲು ಹಾಗೂ ಕುಡಿಯುವ ನೀರನ್ನು ವಿತರಿಸಲಾಯಿತು.

ಚಿತ್ತಾಪುರ ಮತಕ್ಷೇತ್ರದ ಬೆಣ್ಣೂರ್ (ಬಿ) ಗ್ರಾಮದ ಮಾತಾ ಮಾಣಿಕೇಶ್ವರಿಯ ಭಕ್ತರು ಯಾನಗುಂದಿ ಜಾತ್ರಾ ಮಹೋತ್ಸವದ ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ಮಾರ್ಗಮಧ್ಯೆ ತಾಲೂಕು ಕೋಲಿ ಸಮಾಜದ ಯುವ ಘಟಕದ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ಭಕ್ತರಿಗೆ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡುವ ಮೂಲಕ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಹೋಳಿಕಟ್ಟಿ ರವರು ಮಾತನಾಡಿ ಅವ "ಶಿವನ ಆರಾಧನೆಯ ಪವಿತ್ರ ಮಾಸದಲ್ಲಿ ಮಾತಾ ಮಾಣಿಕೇಶ್ವರಿಯ ದರ್ಶನಕ್ಕೆ ನೂರಾರು ಕಿಲೋಮೀಟರ್ ಪಾದಯಾತ್ರೆ ಬೆಳೆಸುವ ಭಕ್ತರ ಶ್ರದ್ಧೆ ಅಪಾರವಾದದ್ದು. ಇಂತಹ ಭಕ್ತಾದಿಗಳಿಗೆ ಅಲ್ಪಪ್ರಮಾಣದ ಸೇವೆಯನ್ನು ಸಲ್ಲಿಸುವುದು ನಮ್ಮ ಸಮಾಜದ ಭಾಗ್ಯವಾಗಿದೆ. ಪಾದಯಾತ್ರಿಗಳ ಹಸಿವು-ನೀರಿಕೆ ನೀಗಿಸುವ ಮೂಲಕ ಅವರ ಪವಿತ್ರ ಕಾರ್ಯಕ್ಕೆ ಕೈಜೋಡಿಸುವುದು ನಮ್ಮ ಉದ್ದೇಶ," ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪೊಲೀಸ್ ದತ್ತು ಜಾನೆ, ಶಂಕರ್ ತಳವಾರ್, ಸಾಬಣ್ಣ ಹೋಳಿಕಟ್ಟಿ, ದೇವರಾಜ್ ತಳವಾರ್, ಕರಣಕುಮಾರ್, ರಾಜೇಶ್ ಬೆನಕನಹಳ್ಳಿ, ಬೆಳ್ಳಪ್ಪ ಇಂಗನ್ಕಲ್, ನಾಗರಾಜ್ ಮೈನಾಳ್ಕರ್, ಮಹದೇವ್ ಬೆನ್ನೂರುಕಾರ್, ಬಸವರಾಜ, ವಿಕ್ರಂಕುಮಾರ್, ಗೂಳಿ ಡಿಗ್ಗಿ, ಶಾಮರಾವ್, ಗಣೇಶ್ ಇಟಗಿ, ನಾಗರಾಜ್ ಬೋವಿ, ಸುಭಾಷ ಬೋವಿ, ಶಿವು ಸೇರಿದಂತೆ ಅನೇಕ ಭಕ್ತಾದಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಸೇವಾಲಾಲ್ ಜಯಂತೋತ್ಸವ: ಭವ್ಯ ಮೆರವಣಿಗೆಯ ಸಿದ್ಧತೆ.

ಚಿತ್ತಾಪುರ: ಪಟ್ಟಣದಲ್ಲಿ ಫೆಬ್ರವರಿ 15ರ ಭಾನುವಾರದಂದು ತಾಲೂಕು ಆಡಳಿತ ಹಾಗೂ ಸೇವಾಲಾಲ್ ಜಯಂತೋತ್ಸವ ಸಮಿತಿ ವತಿಯಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ಗೋಪಾಲ್ ರಾಠೋಡ್ ತಿಳಿಸಿದರು.

ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ತಾಲೂಕಿನ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮದ ನಂತರ ತಹಶೀಲ್ದಾರ್ ಕಾರ್ಯಾಲಯದಿಂದ ಭವ್ಯ ಮೆರವಣಿಗೆ ಆರಂಭವಾಗಿ ರೈಲ್ವೆ ಸ್ಟೇಷನ್ ಹತ್ತಿರವಿರುವ ಸೇವಾಲಾಲ್ ವೃತ್ತಕ್ಕೆ ತಲುಪಿ ಅಲ್ಲಿ ವಿಶೇಷ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಮೆರವಣಿಗೆಯು ಸ್ಟೇಷನ್ ಮಾರ್ಗವಾಗಿ ನಾಗಾವಿ ಚೌಕ್, ಜನತಾ ಚೌಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ವೃತ್ತ ಹಾಗೂ ಲಾಡ್ಜಿಂಗ್ ಕ್ರಾಸ್ ಮುಖಾಂತರ ಸಾಗಿ ಪುನಃ ತಾಲೂಕು ಆಡಳಿತ ಕಾರ್ಯಾಲಯದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.

ಮೆರವಣಿಗೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರವಿರುವ ಪಲ್ಲಕ್ಕಿ ಪ್ರಮುಖ ಆಕರ್ಷಣೆಯಾಗಿರಲಿದೆ. ಬಂಜಾರ ಸಮಾಜದ ಸಾಂಪ್ರದಾಯಿಕ ವೇಷಭೂಷಣಗಳು, ಡೊಳ್ಳು ಕುಣಿತ, ಡಿಜೆ ಸೌಂಡ್ ಸಿಸ್ಟಮ್ ಸೇರಿದಂತೆ ಸಕಲ ವಾದ್ಯಗೋಷ್ಠಿಗಳು ಮೆರವಣಿಗೆಗೆ ಮೆರುಗು ನೀಡಲಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಚಂದು ಜಾಧವ, ಪ್ರಮುಖರಾದ ಭೀಮಸಿಂಗ್ ಚವ್ಹಾಣ, ಆಕಾಶ್ ಚವ್ಹಾಣ, ಸುನಿಲ್ ರಾಠೋಡ್, ದೇವಿದಾಸ್ ಚವ್ಹಾಣ, ಶಂಕರ್ ನಾಯಕ ಚೋಕಿ ತಾಂಡಾ, ನೀಲಕಂಠ ಪವಾರ್, ಗೋಪಿ ರಾಠೋಡ್, ರವಿ ಜಾಧವ, ರಾಜು ರಾಠೋಡ್, ಜಗದೀಶ್ ಪವಾರ್, ಶ್ರೀಕಾಂತ್ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವಸ್ಥಾನ ನಿರ್ಮಾಣ: ಜೀರ್ಣೋದ್ಧಾರಕ್ಕೆ ಭಕ್ತರ ಸಾಥ್.

ಚಿತ್ತಾಪುರ: ತಾಲೂಕಿನ ದಂಡಗುಂಡ ಗ್ರಾಮದಲ್ಲಿರುವ ಪುರಾತನ ಹಳೆಯ ಬಸವಣ್ಣ ದೇವಸ್ಥಾನವನ್ನು ತೆರವುಗೊಳಿಸಿ, ಭಕ್ತರ ಆಶಯದಂತೆ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಮಾದರಿಯಲ್ಲೇ ಭವ್ಯ ನೂತನ ಕಟ್ಟಡವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ತಿಳಿಸಿದರು.

ಗ್ರಾಮದ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ವಾಸ್ತುಶಿಲ್ಪಿ ಬಸವರಾಜ ಖಂಡೇರಾವ ಅವರು ತಯಾರಿಸಿದ 10 ಕೋಟಿ ರೂಪಾಯಿ ವೆಚ್ಚದ ನೀಲಿ ನಕ್ಷೆಯಂತೆ ಕಾಮಗಾರಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಭಕ್ತರ ಸ್ವಯಂ ಪ್ರೇರಿತ ದೇಣಿಗೆಯಿಂದಲೇ ಕೆಲಸ ಸಾಗಿದ್ದು, ಇದುವರೆಗೂ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಶೇ. 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳಿಗೆ ಹಣದ ಹೊಂದಾಣಿಕೆ ಮಾಡಲು ಟ್ರಸ್ಟ್ ಹಾಗೂ ಗ್ರಾಮಸ್ಥರು ತಂಡಗಳಾಗಿ ವಿವಿಧ ಗ್ರಾಮಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಲು ಸಜ್ಜಾಗಿದ್ದೇವೆ ಎಂದು ಅವರು ವಿವರಿಸಿದರು.

ದೇವಸ್ಥಾನದ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ತಲಾ 50 ಲಕ್ಷ ರೂ. ನೀಡಿದ್ದಾರೆ. ಇದಲ್ಲದೆ, 9 ಜನ ಭಕ್ತರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ವಂತ ಖರ್ಚಿನಲ್ಲಿ 9 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಮಾತನಾಡಿ, "ಜೀರ್ಣೋದ್ಧಾರ ಕಾರ್ಯಕ್ಕೆ ಕೆಲವರು ಅಡೆತಡೆ ಒಡ್ಡಲು ಪ್ರಯತ್ನಿಸಿದ್ದರು. ಆದರೆ ಭಕ್ತರು ಅವರ ಕುತಂತ್ರಕ್ಕೆ ಮಣಿಯದೆ ಬೆಂಬಲ ನೀಡಿದ್ದರಿಂದ ದೇವಸ್ಥಾನದ ಚಿತ್ರಣವನ್ನೇ ಬದಲಾಯಿಸಲು ಸಾಧ್ಯವಾಗುತ್ತಿದೆ" ಎಂದರು.

ಟ್ರಸ್ಟ್ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ ದೇವಸ್ಥಾನಕ್ಕೆ ಭಕ್ತರು 80 ಕೆಜಿ ಬೆಳ್ಳಿಯ ಪಲ್ಲಕ್ಕಿ ಕಾಣಿಕೆಯಾಗಿ ನೀಡಿದ್ದಾರೆ. ಅಲ್ಲದೆ 50 ತೊಲೆ ಬಂಗಾರದ ಕಿರೀಟವೂ ಇದೆ. ಭಕ್ತರು ನೀಡಿದ ಬೆಳ್ಳಿಯ ಸಣ್ಣ ಪುಟ್ಟ ವಸ್ತುಗಳನ್ನು ಕರಗಿಸಿ ಗರ್ಭಗುಡಿಯಲ್ಲಿ ಸುಂದರ ಕಮಾನು ನಿರ್ಮಿಸಲು ಚಿಂತಿಸಲಾಗಿದೆ. ದೇವಸ್ಥಾನಕ್ಕೆ ಭಕ್ತರು ಹರಕೆಯ ರೂಪದಲ್ಲಿ ಹೋರಿಗಳನ್ನು ನೀಡುವ ಸಂಪ್ರದಾಯವಿದೆ. ಆದರೆ ಅವುಗಳ ನಿರ್ವಹಣೆ ಕಷ್ಟವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಭಕ್ತರು ಹೋರಿಗಳ ಬದಲಿಗೆ ಹಣವನ್ನು ದೇಣಿಗೆಯಾಗಿ ನೀಡಬೇಕು. ಈಗಿರುವ ಹೋರಿಗಳನ್ನು ರಶೀದಿ ಮೂಲಕ ಪಡೆದು ಭಕ್ತರು ಹರಕೆ ತೀರಿಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್ ನ ಪ್ರಮುಖರಾದ ಮಹಾಂತಗೌಡ ಪಾಟೀಲ್ ಹಾಗೂ ರಾಜಶೇಖರ ಗೌಡ ಉಪಸ್ಥಿತರಿದ್ದರು

ಬುಧವಾರ, ಫೆಬ್ರವರಿ 11, 2026

ಚಿತ್ತಾಪುರ ಬಸ್ ನಿಲ್ದಾಣದ ದುಸ್ಥಿತಿ: ಸಾರ್ವಜನಿಕರ ಆಕ್ರೋಶ.

 ಕುಡಿಯಲು ಶುದ್ಧ ನೀರಿಲ್ಲ, ಸ್ವಚ್ಛತೆಯೂ ಇಲ್ಲ.

ಚಿತ್ತಾಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ನಿಲ್ದಾಣದ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟ ಕುಡಿಯುವ ನೀರು ಮತ್ತು ನೈರ್ಮಲ್ಯ
ನಿಲ್ದಾಣದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವು ಹೆಸರಿಗಷ್ಟೇ ಇದೆ. ಇಲ್ಲಿ ಸರಬರಾಜಾಗುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ನೀರಿನ ಟ್ಯಾಂಕ್‌ಗಳಲ್ಲಿ ಪಾಚಿ ಮತ್ತು ಕೊಳಚೆ ತುಂಬಿಕೊಂಡಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಇನ್ನು ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಂತೂ ಹೇಳತೀರದಾಗಿದೆ. ದುರ್ನಾತದಿಂದಾಗಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕವಿಗಳ ಚಿತ್ರಗಳಿಗೆ ಅಪಮಾನ, ನಿರ್ವಹಣೆಯಿಲ್ಲದ ಫ್ಯಾನ್‌ಗಳು ನಿಲ್ದಾಣದ ಗೋಡೆಗಳ ಮೇಲೆ ಅಳವಡಿಸಲಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾನ್ ಕವಿಗಳ ಭಾವಚಿತ್ರಗಳು ಧೂಳು ಹಿಡಿದು ಅನಾಥವಾಗಿವೆ. ವರ್ಷಗಳಿಂದ ಇವುಗಳನ್ನು ಸ್ವಚ್ಛಗೊಳಿಸುವ ಕನಿಷ್ಠ ಸೌಜನ್ಯವನ್ನೂ ಸಾರಿಗೆ ಇಲಾಖೆ ತೋರಿಲ್ಲ. ಅಳವಡಿಸಲಾದ ಫ್ಯಾನ್‌ಗಳು ಧೂಳಿನಿಂದ ತುಂಬಿ ನಿಷ್ಪ್ರಯೋಜಕವಾಗಿವೆ. ನಿಲ್ದಾಣಕ್ಕೆ ಸುಣ್ಣ-ಬಣ್ಣ ಬಳಿದು ವರ್ಷಗಳು ಕಳೆದಂತಿದ್ದು, ಕಟ್ಟಡವು ಭಣಗುಡುತ್ತಿದೆ.
ಸಾರಿಗೆ ವ್ಯವಸ್ಥಾಪಕರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕೂಡಲೇ ಈ ಸಮಸ್ಯೆಗಳತ್ತ ಗಮನಹರಿಸಿ, ಬಸ್ ನಿಲ್ದಾಣದ ನವೀಕರಣಕ್ಕೆ ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.

"ನಾವು ಪ್ರತಿದಿನ ಹಳ್ಳಿಗಳಿಂದ ಶಾಲಾ-ಕಾಲೇಜಿಗೆ ಬರಲು ಇದೇ ನಿಲ್ದಾಣವನ್ನು ಅವಲಂಬಿಸಿದ್ದೇವೆ. ಇಲ್ಲಿ ಕುಡಿಯಲು ಶುದ್ಧ ನೀರಿಲ್ಲ, ಕೂರಲು ಸರಿಯಾದ ಖುರ್ಚಿಗಳಿಲ್ಲ ಇದ್ದರು ಕಡಿಮೆ ಇವೆ. ಧೂಳು ಮತ್ತು ಗಲೀಜಿನ ನಡುವೆ ಬಸ್‌ಗಾಗಿ ಕಾಯಬೇಕಿದೆ. ಅಧಿಕಾರಿಗಳಿಗೆ ನಮ್ಮ ಕಷ್ಟ ಕಾಣುತ್ತಿಲ್ಲವೇ?"
  -ವಿಧ್ಯಾರ್ಥಿನಿ ಶೃತಿ 

"ವ್ಯಾಪಾರ-ವಹಿವಾಟುಗಳಿಗೆ ನೂರಾರು ಹಳ್ಳಿಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಬಸ್ ನಿಲ್ದಾಣದ ದುಸ್ಥಿತಿ ನೋಡಿದರೆ ವಾಕರಿಕೆ ಬರುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತು ನಿಲ್ದಾಣಕ್ಕೆ ಸುಣ್ಣ-ಬಣ್ಣ ಬಳಿಯಬೇಕು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು."
— ಮಲ್ಲಿಕಾರ್ಜುನ ಅಲ್ಲೂರಕರ್ 
ಕನ್ನಡ ಪರ ಹೋರಾಟಗಾರು ಚಿತ್ತಾಪೂರ 

ನೌಕರರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ: ನಿಂಬಾಳ.

ಚಿತ್ತಾಪುರ: ಬಿಸಿಯೂಟ ಯೋಜನೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು, ಇದು ಶಿಕ್ಷಣ ಇಲಾಖೆಯ ಅಡಿಯಲ್ಲೇ ಮುಂದುವರಿಯಬೇಕು ಅಡುಗೆ ಸಿಬ್ಬಂದಿ ನೌಕರರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ ಎಂದು ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಶ್ರೀಮತಿ ಮಹಾದೇವಿ ನಿಂಬಾಳ ಸರ್ಕಾರಕ್ಕೆ ತಾಕೀತು ಮಾಡಿದರು.

ಪಟ್ಟಣದ ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ವತಿಯಿಂದ ಜಂಟಿಯಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಸಲ್ಲಿಸಿ ಮಾತನಾಡಿದ ಅವರು ಬಿಸಿಯೂಟ ನೌಕರರು ಹಲವು ವರ್ಷಗಳಿಂದ ಅತ್ಯಂತ ಕಡಿಮೆ ವೇತನಕ್ಕೆ ಶ್ರಮಿಸುತ್ತಿದ್ದಾರೆ. ಸರ್ಕಾರವು ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಗಳಾದ ನೌಕರರು ಕಾಯಂ ಆಗುವ ತನಕ 'ಸಮಾನ ಕೆಲಸಕ್ಕೆ ಸಮಾನ ವೇತನ' ನೀಡಬೇಕು,ನಿವೃತ್ತಿ ಹೊಂದಿದ ನೌಕರರಿಗೆ ₹2 ಲಕ್ಷ ಇಡುಗಂಟು ಹಾಗೂ ಕರ್ತವ್ಯದ ಅವಧಿಯಲ್ಲಿ ಮರಣ ಹೊಂದಿದರೆ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು,
ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದಂತೆ ₹6,000 ವೇತನ ಹೆಚ್ಚಳವನ್ನು ಜಾರಿಗೊಳಿಸಬೇಕು.
ಮಕ್ಕಳ ಹಾಜರಾತಿ ಕಡಿಮೆಯಾದ ಕಾರಣಕ್ಕೆ ನೌಕರರನ್ನು ಕೆಲಸದಿಂದ ತೆಗೆಯಬಾರದು ಬದಲಾಗಿ ಹತ್ತಿರದ ಶಾಲೆಗಳಿಗೆ ನಿಯೋಜಿಸಬೇಕು, ಬೇಸಿಗೆ ಮತ್ತು ದಸರಾ ರಜೆ ಅವಧಿಯ ವೇತನವನ್ನು ಕಡ್ಡಾಯವಾಗಿ ಪಾವತಿಸಬೇಕು.ಕೆಲಸದ ಸ್ಥಳದಲ್ಲಿ ನೌಕರರಿಗೆ ನೀಡಲಾಗುತ್ತಿರುವ ಮಾನಸಿಕ ಕಿರುಕುಳವನ್ನು ನಿಲ್ಲಿಸಬೇಕು,ಚುನಾವಣೆ ಕರ್ತವ್ಯ ನಿರ್ವಹಿಸಿದ ನೌಕರರಿಗೆ ದಿನಭತ್ಯೆ ನೀಡಬೇಕು ಮತ್ತು ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಮುಕ್ತಾ ಚಂದಾ, ತಾಲೂಕಾಧ್ಯಕ್ಷೆ ಶ್ರೀಮತಿ ಸುವರ್ಣಾ ಶಾಂಪೂರಹಳ್ಳಿ, ಉಪಾಧ್ಯಕ್ಷೆ ಶ್ರೀಮತಿ ಸುನೀತಾ ಕುಂಬಾರ, ಶ್ರೀಮತಿ ಶಾಹೀನ್ ಬೇಗಂ, ಶ್ರೀಮತಿ ವೈಶಾಲಿ ಕೊಂಕನಳ್ಳಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ರಮೇಶ ಕವಡೆ, ಉದಯಕುಮಾರ್ ಸಾಗರ, ಶಿವಮೂರ್ತಿ ಪಾಮನೂರ, ನಾಗೇಂದ್ರ ಬುರ್ಲಿ, ನವಾಬ್ ಮುನ್ನಿ, ಭೀಮರಾಯ ಕಂಚೂರ, ಶ್ರೀಮತಿ ಕಲ್ಪನಾ ಕಲ್ಲಕ್, ಶ್ರೀಮತಿ ಶರಣಮ್ಮ ಕಾಶಿ, ಶ್ರೀಮತಿ ಸಿದ್ದಮ್ಮ ಎಡಗಿ, ಶ್ರೀಮತಿ ಬಸಮ್ಮ ಮರಗಮ್ಮಗುಡಿ, ಶ್ರೀಮತಿ ಸುಲೋಚನಾ, ಶ್ರೀಮತಿ ಅನಸೂಯಾ ನಂದೂರ, ಶ್ರೀಮತಿ ದೀಪಿಕಾ, ಶ್ರೀಮತಿ ರತ್ನಮ್ಮ ಸೇರಿದಂತೆ ಇತರರು ಇದ್ದರು.

ಸೋಮವಾರ, ಫೆಬ್ರವರಿ 9, 2026

ಕಾನೂನಿನ ಜೊತೆ ಸಾರ್ವಜನಿಕ ಜಾಗೃತಿ ಅಗತ್ಯ: ನ್ಯಾಯಾಧೀಶರು

ಚಿತ್ತಾಪುರ: ಸಮಾಜದಲ್ಲಿ ಇಂದಿಗೂ ಪರೋಕ್ಷವಾಗಿ ಅಸ್ತಿತ್ವದಲ್ಲಿರುವ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕೇವಲ ಕಠಿಣ ಕಾನೂನುಗಳಿದ್ದರೆ ಸಾಲದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡುವುದು ಅತ್ಯಗತ್ಯ. ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ," ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಅಭಿಷೇಕ ಜೋಶಿ ಹೇಳಿದರು.

ಪಟ್ಟಣದ ಪ್ರಜಾ ಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ “ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ” ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದ ಅವರು ಜೀತ ಪದ್ಧತಿಯು ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಯಾವುದೇ ವ್ಯಕ್ತಿಯನ್ನು ಸಾಲದ ನೆಪದಲ್ಲಾಗಲಿ ಅಥವಾ ಇನ್ಯಾವುದೇ ಕಾರಣಕ್ಕೆ ಜೀತದಾಳಗಿ ಇರಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ "ಜೀತ ಪದ್ಧತಿಯಿಂದ ಮುಕ್ತರಾದವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ತಾಲೂಕಿನ ಯಾವುದೇ ಮೂಲೆಯಲ್ಲಿ ಜೀತ ಪದ್ಧತಿ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಆಡಳಿತದ ಗಮನಕ್ಕೆ ತರಬೇಕು. ನಿರ್ಮೂಲನಾ ಕಾಯಿದೆಯಡಿ ಸಿಗುವ ಸವಲತ್ತುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತೇವೆ," ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿ ಬಸವರಾಜ ಎನ್. ಸಿಂಪಿ ಅವರು ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯ ಇತಿಹಾಸ ಮತ್ತು ಪ್ರಸ್ತುತ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಅಂಜನಾದೇವಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಕ್ರಂ ಪಾಶಾ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಬಿ. ಕರದಳ್ಳಿ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಆರತಿ ತುಪ್ಪದ,ಪೊಲೀಸ್ ಉಪ ನಿರೀಕ್ಷಕ ಮಂಜುನಾಥ ರೆಡ್ಡಿ,ಕಾರ್ಮಿಕ ನಿರೀಕ್ಷಕ ವಿಕ್ರಮ ಬಡಿಗೇರ, ತಹಸೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಕೋಲಿ ಸಮಾಜದ ಹಿತರಕ್ಷಣೆಗೆ ಸರ್ಕಾರದ ಪಣ: ಕಮಕನೂರ.

✓ಚೌಡಯ್ಯನವರ ಮೂರ್ತಿ ಅನಾವರಣ, ✓ಎಸ್‌ಟಿ ಪಟ್ಟಿಗೆ ಸೇರಿಸಲು ಬದ್ಧ.

ಚಿತ್ತಾಪುರ: ಕರ್ನಾಟಕದಲ್ಲಿ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ST) ಸೇರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು.

ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಕೋಲಿ ಸಮಾಜದ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಪದಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕಲ್ಯಾಣ ಕರ್ನಾಟಕ ಭಾಗದ ಸಚಿವರು ಹಾಗೂ ಶಾಸಕರು ಬೆಂಬಲ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಕಲಬುರಗಿ ನಗರದ ಗಾಂಧಿ ಚೌಕ್ ಹಾಗೂ ಜಗಜೀವನರಾಮ್ ಮೂರ್ತಿಗಳ ಮಧ್ಯೆ ಅಂಬಿಗರ ಚೌಡಯ್ಯನವರ ಬೃಹತ್ ಮೂರ್ತಿ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ದೊರೆತಿದೆ. ಮಹಾನಗರ ಪಾಲಿಕೆಯಿಂದ 40 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದು, ಎರಡು ತಿಂಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಹಾಗೂ ಬೆಂಗಳೂರಿನ ವಿಧಾನಸೌಧದ ಎದುರು ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ವಿಧಾನ ಪರಿಷತ್ತಿನ 75 ಸದಸ್ಯರು ಬೆಂಬಲ ಸೂಚಿಸಿದ್ದು, ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ.

ಮಾತಾ ಮಾಣಿಕೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಸಮ್ಮತಿಸಿದ್ದು, 200 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲಾಗಿದೆ. ಮತ್ತು ಕೂಡಲಸಂಗಮ ಮಾದರಿಯಲ್ಲಿ ಅಂಬಿಗರ ಚೌಡಯ್ಯ ಐಕ್ಯ ಸ್ಥಳವನ್ನು ಅಭಿವೃದ್ಧಿಪಡಿಸಲು 50 ಕೋಟಿ ರೂ. ವೆಚ್ಚದ ಪ್ರಾಧಿಕಾರ ರಚನೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ತೊನಸನಳ್ಳಿ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯ ಪರಶುರಾಮ ಮುತ್ಯಾ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಉದ್ಯಮಿ ಶಿವರಾಯ ಕಮಕನೂರ, ರಾಜೇಂದ್ರಪ್ಪ ಅರಣಕಲ್ ಸೇರಿದಂತೆ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಶುಕ್ರವಾರ, ಫೆಬ್ರವರಿ 6, 2026

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ, ಸರ್ಕಾರಿ ಪ್ರೌಢ ಶಾಲೆ ಪೇಠಶಿರೂರ, ಬಾಲಕರ ಪ್ರೌಢ ಶಾಲೆ ಶಹಾಬಾದ ಹಾಗೂ ಸರ್ಕಾರಿ ಪ್ರೌಢ ಶಾಲೆ ಮರತೂರ ಶಾಲೆಗಳಿಗೆ ಶುಕ್ರವಾರ ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾ ಭಂವರಸಿಂಗ್ ಮೀನಾ ಭೇಟಿ ನೀಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬರಲು ಕಾರಣ ಮತ್ತು ಫಲಿತಾಂಶ ಹೆಚ್ಚಳ ಮಾಡಲು ಅಗತ್ಯ ಸಲಹೆ ನೀಡಿ ಮಕ್ಕಳೊಂದಿಗೆ ಮಾತನಾಡಿದ ಅವರು, ಯಾವ ವಿಷಯದಲ್ಲಿ ಕಲಿಕೆಗೆ ತೊಂದರೆ ಕುರಿತು ಚರ್ಚಿಸಿದರು ಹಾಗೂ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು ಹಾಗೂ ಅರಿವೆ ಗುರು ಎಂಬ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಒಳಗೊಂಡ ಪುಸ್ತಕ ಅದರ ಬಳಕೆ ಮತ್ತು ಅಗತ್ಯತೆ ಕುರಿತು ಚರ್ಚಿಸಿ ಮಾರ್ಗದರ್ಶನ ನೀಡಿದರು.

ಶಹಾಬಾದ ಹಾಗೂ ಮರತೂರ ಶಾಲೆಯಲ್ಲಿ ಬಿಸಿಯೂಟ ಸಿದ್ಧತೆ ಪರಿಶೀಲಿಸಿ ಆಹಾರಧಾನ್ಯಗಳ ಗುಣಮಟ್ಟ ಪರಿಶೀಲಿಸಿ, ಸರ್ಕಾರಿ ಪ್ರೌಢ ಶಾಲೆ ಮರತೂರಲ್ಲಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಮಾಡಿದರು. ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ನೀಡುವ ಬಗ್ಗೆ ವಿಚಾರಿಸಿದರು ಹಾಗೂ ಮೊಟ್ಟೆ ತಿನ್ನದೆ ಇರುವ ಮಕ್ಕಳಿಗೆ ಮೊಟ್ಟೆಯ ಪೌಷ್ಟಿಕಾಂಶ ಬಗ್ಗೆ ತಿಳಿಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಸೇರಿದಂತೆ ಶಿಕ್ಷಕರು ಹಾಜರಿದ್ದರು.

ನಾಳೆ ಬೃಹತ್ ಹಿಂದೂ ಸಮ್ಮೇಳನ: ಸಾಸಬಾಳ್

ಚಿತ್ತಾಪುರ: ಪಟ್ಟಣದಲ್ಲಿ ಹಿಂದು ಸಮ್ಮೇಳನ ಆಯೋಜನ ಸಮಿತಿ ವತಿಯಿಂದ ನಾಳೆ ದಿ. 7 ರಂದು ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಅಧ್ಯಕ್ಷ ಉಮೇಶಬಾಬು ಸಾಸಬಾಳ್ ಹೇಳಿದರು.

ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಮಧ್ಯಾಹ್ನ 2.45 ಕ್ಕೆ ಪಟ್ಟಣದ ಅಕ್ಕಮಹಾದೇವಿ ಮಂದಿರದಿಂದ ಪ್ರಾರಂಭವಾಗುವ ಬೃಹತ್ ಶೋಭಾಯಾತ್ರೆ ಚಿತ್ತಾವಲ್ಲಿ ವೃತ್ತ, ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕ‌ರ್ ವೃತ್ತ, ಬಸ್‌ ನಿಲ್ದಾಣ ರಸ್ತೆ, ಲಾಡ್ಡಿಂಗ್ ಕ್ರಾಸ್, ಕೋರ್ಟ್ ರಸ್ತೆಯ ಮೂಲಕ ವರುಣ್ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಲಿದ್ದು, ನಂತರ ಸಾಯಂಕಾಲ 5 ಗಂಟೆಗೆ ಹಿಂದೂ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ಬೆಳಗುಂಪಾ ಶ್ರೀ ಅಬಿನವ ಪರ್ವತೇಶ್ವರ ಶಿವಾಚಾರ್ಯರು, ದಂಡೋತಿ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾಜೀ ಅವರು ವಹಿಸುವರು. ಮುಖ್ಯ ವಕ್ತಾರರಾಗಿ ಪ್ರಜ್ಞಾ ಪ್ರವಾಹ ಅಖೀಲ ಭಾರತೀಯ ಸಹ ಸಂಯೋಜಕ ರಘುನಂದನ ಜೀ, ಹಿಂದು ಸಮ್ಮೇಳನ ಆಯೋಜನ ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯಕ ರಾಠೋಡ ಗೌರವ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಅಯ್ಯಪ್ಪ ರಾಮತೀರ್ಥ, ಕೋಟೇಶ್ವರ ರೇಷ್ಮೆ, ಗಿರೀಶ್ ಭಜಂತ್ರಿ, ನಟರಾಜ್ ಶಿಲ್ಪಿ, ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯಕ ರಾಠೋಡ, ಕಾರ್ಯಾಧ್ಯಕ್ಷ ಸತ್ಯನಾರಾಯಣ ಯಾದವ್, ಅಂಬರೀಶ ಸುಲೇಗಾಂವ್, ಉಪಾಧ್ಯಕ್ಷರಾದ ಅಶೋಕ ಹಡಪದ, ಮಹಾದೇವಪ್ಪ ಉಪ್ಪಾರ, ನಾಗರಾಜ ರಾವೂರಕ‌ರ್, ದೇವಾನಂದ್‌ ತ್ರೀಮಲ್, ಕಾರ್ಯದರ್ಶಿ ಮೈಪಾಲ್ ಮೂಲಿಮನಿ, ಶಿವುಕುಮಾರ ಘವಾರಿಯಾ ಸೇರಿದಂತೆ ಇತರರು.

ನಾಮಫಲಕ ಅಳವಡಿಕೆಗೆ ಆಟೋ ಚಾಲಕರ ಆಗ್ರಹ

ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರ ಇರುವ
ಆಟೋ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಟ್ಟಣದ ವಿವಿಧೆಡೆ ಆಟೋ ನಿಲ್ದಾಣ ಮತ್ತು ನಾಮಫಲಕಗಳು ಅಳವಡಿಸಬೇಕು ಎಂದು ಆಗ್ರಹಿಸಿ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪುರಸಭೆ ಮುಖ್ಯಸ್ಥರಿಗೆ ಮನವಿ ಪತ್ರ ಸಲ್ಲಿಸಿದರು.

ನಾಗಾವಿ ವೃತ್ತದಲ್ಲಿ, ಭುವನೇಶ್ವರಿ ವೃತ್ತದಲ್ಲಿ, ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ, ಅಂಬೇಡ್ಕ‌ರ್ ವೃತ್ತದಲ್ಲಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹತ್ತಿರ, ಸ್ಟೇಷನ್ ರಸ್ತೆಯಲ್ಲಿರುವ ತಿರುಮಲ ಮನೆ ಎದುರುಗಡೆ ಇಟಗಾ ಗ್ರಾಮಕ್ಕೆ ಹೋಗುವ ಸ್ಥಳದಲ್ಲಿ ಹಾಗೂ ದಿಗ್ಗಾಂವ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಆಟೋ ನಿಲ್ದಾಣಗಳು ಹಾಕಿ ನಾಮಫಲಕಗಳು ಅಳವಡಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಯ್ಯ ಸಾಬಣ್ಣ ಭೋವಿ, ಕಾರ್ಯದರ್ಶಿ ಸುಭಾಷ್ ಕಾಶಿ, ಖಜಾಂಚಿ ಮುನಿಯಪ್ಪ ಬಾಗೋಡಿಕ‌ರ್, ಸದಸ್ಯರಾದ ಮಹೇಶ್ ಬುರ್ಲಿ, ಅಯಾಜ್, ನಾಗರಾಜ್ ಪೂಜಾರಿ, ಮಹೇಶ್ ಕಾಶಿ, ಶರಬಣ್ಣ ಮಡಿವಾಳ, ಗುರುರಾಜ್ ಚೌದರಿ, ಚಿತ್ತಣ್ಣ ಗುತ್ತೇದಾ‌ರ್, ಭೀಮು ಜಮಾದಾ‌ರ್, ಸಿದ್ದಪ್ಪ ರಾಂಪುರಹಳ್ಳಿ ಸೇರಿದಂತೆ ಇತರರು ಇದ್ದರು.

ಭಾಗೋಡಿಯಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ,

ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದಲ್ಲಿ
ಕೋಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಸಮಾರಂಭವನ್ನು ದಿ.8 ರಂದು ಬೆಳಗ್ಗೆ 10.30ಕ್ಕೆ ಅದ್ದೂರಿಯಾಗಿ ನಡೆಯಲಿದೆ ಎಂದು ಕೋಲಿ ಸಮಾಜದ ಮುಖಂಡ ದೇವೇಂದ್ರ ನಾಟೀಕಾರ, ಭಾಗೋಡಿ ಅಧ್ಯಕ್ಷ ದೇವಿಂದ್ರ ಹಾಸಬಾ, ತಾಲೂಕು ಕಾರ್ಯದರ್ಶಿ ಶರಣು ಅರಣಕಲ್, ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್ ಅವರು ಜಂಟಿಯಾಗಿ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳ ಪ್ರಚಾರಕ್ಕಾಗಿ ಹಾಗೂ ಕೋಲಿ ಸಮಾಜದ ಸಂಘಟನೆಗಾಗಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಮೂರ್ತಿ ಅನಾವರಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರೆ

ಪೂಜ್ಯ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ನರಸಿಪುರ, ತೊನಸನಳ್ಳಿ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಗುರುಮಠಕಲ್ ಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಮಹಾಸ್ವಾಮಿಗಳು, ಪೂಜ್ಯ ಮಲ್ಲಿಕಾರ್ಜುನ ಮುತ್ಯಾ ಮಹಲರೋಜಾ, ಪೂಜ್ಯ ಪರಶುರಾಮ ಮುತ್ಯಾ ಭಾಗೋಡಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಉದ್ಘಾಟಿಸುವರು, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಧ್ವಜಾರೋಹಣ ನೆರವೇರಿಸುವರು ಎಂದು ಹೇಳಿದರು.

ಪಿಎಲ್‌'ಡಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಕೆಪಿಸಿಸಿ ಕಾರ್ಯದರ್ಶಿ ರಾಜಗೋಪಾಲ ರೆಡ್ಡಿ, ರಾಜ್ಯ ಅಪೇಕ್ಸ್‌ ಬ್ಯಾಂಕ್ ನಿರ್ದೇಶಕ ಸುನೀಲ ದೊಡ್ಡಮನಿ, ಉದ್ಯಮಿ ಶಿವರಾಯ ಕಮಕನೂರ ಅವರು ಮಾತಾ ಮಾಣಿಕೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಕೂಡು ಒಕ್ಕಲಿಗ ಸಮಾಜದ ರಾಜ್ಯಾಧ್ಯಕ್ಷ ಶಿವರಾಜ ಪಾಟೀಲ ಕಲಗುರ್ತಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ, ಉದ್ಯಮಿ ಯಲ್ಲಾಲಿಂಗ ಪೂಜಾರಿ ಅವರು ದಿ.ವಿಠಲ್ 
ಹೇರೂರು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು.

 ರಾಯಚೂರು ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಹಾಂತಗೌಡ ಎಸ್. ಪಾಟೀಲ, ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಸಮಿತಿ ಜಿಲ್ಲಾಧ್ಯಕ್ಷ ಜಯಪ್ರಕಾಶ ಕಮಕನೂರ, ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಕೋಲಿ ಕಬ್ಬಲಿಗ ಎಸ್‌.ಟಿ.ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ, ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಜಿಲ್ಲಾಧ್ಯಕ್ಷ ರವಿರಾಜ ಕೋರವಿ, ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ ಅವರು ಜ್ಯೋತಿ ಬೆಳಗಿಸುವರು, ಕೋಲಿ ಸಮಾಜ ಹಿರಿಯ ಮುಖಂಡ ರಾಜೇಂದ್ರಪ್ಪ ಅರಣಕಲ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ಯುವ ಅಧ್ಯಕ್ಷ ರಾಜೇಶ್‌ ಹೊಳಿಕಟ್ಟಿ, ಮುಖಂಡರಾದ ದೇವಿಂದ್ರ ಡೋಣಗಾಂವ, ನಾಗರಾಜ ಬೆಣ್ಣೂರ, ಶರಣಪ್ಪ ಹಾಸಬಾ, ಕಾಮೇಶ್, ಸಂತೋಷ ನದಿಮುಲ್‌, ನಾಗರಾಜ ಹಾಸಬಾ, ಕಾಶಿನಾಥ ಭಂಗಿ ಸೇರಿದಂತೆ ಇತರರು ಇದ್ದರು.

ಬಜೆಟ್‌ಗೆ ಮುಖಂಡ ರಾಮತೀರ್ಥ ಮೆಚ್ಚುಗೆ.


ಚಿತ್ತಾಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 9ನೇ ಬಾರಿಗೆ ಬಜೆಟ್ ಮಂಡಿಸುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಈ ಬಾರಿ ಕರ್ಬಾಟಕ ರಾಜ್ಯಕ್ಕೆ 2 ಹೈಸ್ಪೀಡ್ ರೈಲು ಘೋಷಿಸಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ರಕ್ಷಣಾ, ಗೃಹ, ಕೃಷಿ ಸಾರಿಗೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ವಿಮೆ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಎಐ ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿರುವುದು ಹಾಗು ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿರುವುದು ಸಂತಸ.ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ 10 ಸಾವಿರ ಕೋಟಿ, ಬಯೋ ಫಾರ್ಮ ಗೆ 10 ಸಾವಿರ ಕೋಟಿ, ಚಾಂಪಿಯಾನಿಗಳಿಗಾಗಿ 10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ.

ಕ್ರೀಡಾಪಟುಗಳಿಗೆ ಖೇಲ್ ಇಂಡಿಯಾ ಯೋಜನೆ ಘೋಷಣೆ, ಎಸ್‌ಎಚ್‌ ಇ ಮಾರ್ಟ್ ಗಳ ಮೂಲಕ ಮಹಿಳಾ ಸಬಲೀಕರಣ, ಮುಂದಿನ 5 ವರ್ಷದಲ್ಲಿ 20 ಹೊಸ ಜಲಮಾರ್ಗ ನಿರ್ಮಾಣದ ಯೋಜನೆ ಕಾರ್ಯ ನಡೆಯಲಿದೆ ಎಂದಿದ್ದಾರೆ.

ಅತಿವೃಷಿಯಿಂದ ತತ್ತರಿಸಿದ ದೇಶದ ರೈತ, ಕೃಷಿ ಸಾಲ ಮನ್ನಾ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿದ್ದು, ಅದು ಈಡೇರಲಿಲ್ಲ ಎಂಬ ತುಸು ನಿರಾಶೆಯ ಬೆನ್ನಲ್ಲೇ ಕರಾವಳಿ ಭಾಗದ ರೈತರು ಬೆಳೆಯುವ ಗೋಡಂಬಿ, ಕೋಕೋ, ತೆಂಗು ಮುಂತಾದ ಬೆಳೆಗಳಿಗೆ ಕೇಂದ್ರದ ಬೆಂಬಲದ ಅಭಯಹಸ್ತ ಹಾಗೂ ಸ್ವಾವಲಂಬಿ ಬದುಕು ರೈತನಿಗೆ ಸಂಧಾನ ತಂದಿದೆ. ತಂಬಾಕು, ಮದ್ಯದಂತಹ ಹಾನಿಕಾರಕ ಮಾದಕ ದ್ರವ್ಯಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿ 17 ಕ್ಯಾನ್ಸರ್ ಔಷಧಿಗಳ ಸುಂಕ ವಿನಾಯ್ತಿ ನೀಡಿದ್ದು, ಅದರಲ್ಲಿ 7 ಔಷಧಗಳ ಮೇಲೆ ತೆರಿಗೆಯನ್ನೇರದ್ದು ಮಾಡಿದ್ದು ಉತ್ತಮ. ಹೀಗೆ ಬಜೆಟ್ ನಲ್ಲಿ ಹಲವಾರು ಉಪಯುಕ್ತ ಯೋಜನೆ ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಚಿವ ಸಂತೋಷ್ ಲಾಡ್ ನಾಲಿಗೆ ಹಿಡಿತವಿರಲಿ: ಮುರಳಿಕುಮಾರ.

ಚಿತ್ತಾಪುರ: ವಿಧಾನಸೌಧದ ಮುಂಭಾಗದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಲಾಡ್‌ ರವರು ಬಾರ್ಬರ್ ಅಂದರೆ ಹಜಾಮ ಎಂಬ ಹಡಪದ ಸಮಾಜದ ನಿಷೇಧಿತ ಪದ ಬಳಸಿ ಅಸಂಘಟಿತ ವಲಯದ ಕಾರ್ಮಿಕರಾದ ಕ್ಷೌರಿಕರಿಗೆ ಅವಮಾನಿಸಿದ್ದಾರೆ ಜವಾಬ್ದಾರಿಯುತ ಸಚಿವರು ಶಾಸಕರುಗಳೆ ನಿಷೇಧಿತ ಪದ ಬಳಸಿ ಅನುಮಾನಿಸುತ್ತಿದ್ದಾರೆ.

ತಕ್ಷಣ ಕ್ಷಮೆಯಾಚಿಸಬೇಕು ವಿಧಾನ ಸಭೆ ಅಧಿವೇಶನದಲ್ಲಿ ಕಾನೂನು ಜಾರಿಗೆ ತರುವ ಕುರಿತು ಚರ್ಚಿಸಲಿ ಎಂದು ಹಡಪದ ಸಮಾಜದ ನಗರ ಅಧ್ಯಕ್ಷ ಮುರಳಿಕುಮಾರ ಸಾತನೂರ ಪತ್ರಿಕೆ ಮುಖಾಂತರ ಒತ್ತಾಯಿಸಿದ್ದಾರೆ.

ಪಿಂಚಣಿ ಕಾಯ್ದೆ 2025 ರದ್ದತಿಗೆ ಆಗ್ರಹಿಸಿ ಪ್ರಧಾನಿಗೆ ಮನವಿ.

ಚಿತ್ತಾಪುರ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ '2025ರ ಊರ್ಜಿತಗೊಳಿಸುವಿಕೆ ಕಾಯ್ದೆ ಪಿಂಚಣಿದಾರರ ನಡುವೆ ತಾರತಮ್ಯ ಉಂಟು ಮಾಡುತ್ತಿದ್ದ...