ಚಿತ್ತಾಪುರ: ಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸೋಮವಾರ ಮೆರವಣಿಗೆ ನಡೆಸುವ ಮೂಲಕ ಹಬ್ಬದವನ್ನು ಅದ್ದೂರಿಯಾಗಿ ಆಚರಿಸಿದರು. ಪಟ್ಟಣದ ಐತಿಹಾಸಿಕ ಹಜರತ್ ಚಿತ್ತಷಹಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಚಿತ್ತಾವಲಿ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮೆರವಣಿಗೆಗೆ ಚಾಲನೆ ನೀಡಿದರು. ಚಿತ್ತಾವಲಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಹೋಳಿ ಕಟ್ಟಿ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜಿಂಗ್ ವೃತ್ತ, ತಹಸೀಲ್ ಕಚೇರಿ ರಸ್ತೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಕಪ್ಪಡಾ ಬಜಾರ್ ಮೂಲಕ ಪುನಃ ಚಿತ್ತಾವಲಿ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತ್ತು. ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಪೂಜಾರಿ, ನಾಗರೆಡ್ಡಿ ಗೋಪಸೇನ್, ಭೀಮಸಿಂಗ್ ಚವ್ಹಾಣ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಮಹ್ಮದ್ ಎಕ್ಸಾಲ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಡಿ.ಯುನುಸ್, ಮೋಸಿನ್ ಚೈನು, ಆಸೀಫ್ ಶೇಖ್, ಮನಾನ್ ನಾಗಾಯಿ, ಸದ್ದಾಮ್, ಇಮ್ರಾನ್ ಖುರೇಷಿ, ಬಾಬಾ ಎಂಐಎಂ, ಇಬ್ರಾಹಿಂ ಎ.ಟು.ಝಡ್ ...