ಸೋಮವಾರ, ನವೆಂಬರ್ 28, 2022

ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಮಾಡಲು ಮನವಿ.

ಚಿತ್ತಾಪುರ: ತಾಲೂಕಿನ ಸನ್ನತಿ ಗ್ರಾಮ ದೇಶದ ಭೂಪಟದಲ್ಲಿ ಗಮನ ಸೆಳೆದಿದೆ. ನೂರಾರು ವರ್ಷಗಳ ಬೌದ್ಧ ಇತಿಹಾಸವಿರುವ ಗ್ರಾಮ ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಅಧ್ಯಕ್ಷರಾಗಿರಬೇಕೆಂಬ ನಿಯಮ ಬದಲಿಸಿ ಬೌದ್ಧ ಅನುಯಾಯಿಗಳಿಗೆ ಅಥವಾ ಬೌದ್ಧ ಭಿಕ್ಕು ಒಬ್ಬರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ. ಕಲಬುರರ್ಗಿ ಲೋಕಸಭೆ ಸದಸ್ಯ ಡಾ.ಉಮೇಶ ಜಾಧವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದರು.

  ಇಡೀ ದೇಶದಲ್ಲಿಯೇ ಅಶೋಕ ಸಾಮ್ರಾಟ ನಿರ್ಮಿಸಿದ ಬೌದ್ಧ ಇತಿಹಾಸ ಹೆಚ್ಚಿನ ಭಾಗ ಸನ್ನತಿ ಎಂಬ ಹೆಗ್ಗಳಿಕೆಗೆ ಹೆಸರಾಗಿದೆ. ಭಾರತೀಯ ಪುರತತ್ವ ಇಲಾಖೆ ವತಿಯಿಂದ ಹಲವು ವರ್ಷಗಳ ಹಿಂದೆ ಉತ್ಖನನ ಮಾಡುವ ಸಂದರ್ಭದಲ್ಲಿ ಇಲ್ಲಿ ಸಕ್ಕಿರುವ ಬೌದ್ಧ ಶಾಸನ ಮತ್ತು ಶಿಲ್ಪಕಲೆಗಳು ಈ ದೇಶದ ಮೂಲ ಧರ್ಮದ ಬೌದ್ಧರ ಅಸ್ಥಿತ್ವದ ಬಗ್ಗೆ ಹಲವಾರು ಕುರುಹುಗಳು ಸಿಕ್ಕಿವೆ. ಇವನ್ನು ಗಮನಿಸಿದ ಸರಕಾರ ಆ ಸ್ಥಳವನ್ನು ಅಭಿವೃದ್ದಿ ಪಡಿಸಲು ಮತ್ತು ಸಂಶೋಧನಾ ಕೇಂದ್ರವಾಗಿಸಲು ಸನ್ನತಿ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ಅದರ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಇರಬೇಕು ಎಂಬ ನಿಯಮ ಮಾಡಿದೆ. ಆದರೆ ಇಲ್ಲಿರುವ ಬಹುಸಂಖ್ಯಾತ ಬೌದ್ಧ ಅನುಯಾಯಿಗಳು ಇರುವುದರಿಂದ ಈ  ಕೇಂದ್ರದ ಅಭಿವೃದ್ದಿಯಾಗದೇ ಇರುವುದರಿಂದ ಬೇಸರಗೊಂಡಿದ್ದಾರೆ ಎಂಬ ವಿಷಯ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ.

  ಕಾರಣ ಜಿಲ್ಲಾ ಉಸ್ತುವಾರಿ ಮಂತ್ರಿಯವರು ಪ್ರಾಧಿಕಾರದ ಅಧ್ಯಕ್ಷರಾಗಿರಬೇಕೆಂಬ ನಿಯಮ ಬದಲಿಸಿ ಜಿಲ್ಲೆಯ ಬೌದ್ಧ ಅನುಯಾಯಿಗಳು ಅಥವಾ ಬೌದ್ಧ ಭಿಕ್ಕು ಒಬ್ಬರಿಗೆ ಅದರ ಜವಾಬ್ದಾರಿ ಎಂದರೆ ಅಧ್ಯಕ್ಷರಾಗಿ ನೇಮಿಸಿ ಈ ಕೇಂದ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅವರು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಂಡು ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ ಎಂದು ಬಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾಹಿತಿ ನೀಡಿದ್ದಾರೆ.

  ರಾಜ್ಯದಲ್ಲಿ ಅನೇಕ ಪ್ರಾಧಿಕಾರಗಳು ಅಸ್ತಿತ್ವದಲ್ಲಿವೇ ಆದರೆ ಆಯಾ ಸಮುದಾಯದ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಅನುದಾನ ನೀಡಿ ಅಭಿವೃದ್ದಿ ಮಾಡಿದ್ದಾರೆ ಹೀಗಿರುವಾಗ ಇಲ್ಲಿನ ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಮಾತ್ರ ಬೌದ್ಧ ಅನುಯಾಯಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿದೆ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಯಾವ ನ್ಯಾಯ ಇದು ಹಿಂದಿನ ಸರಕಾರ ತಪ್ಪು ಮಾಡಿದ್ದರಿಂದ ಅಲ್ಲಿನ ಅಭಿವೃದ್ದಿ ಕುಸಿತಗೊಂಡಿದೆ ಆದ್ದರಿಂದ ಕೂಡಲೇ ನಿಯಮ ಬದಲಿಸಿ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಬೆಣ್ಣೂರಕರ್ ತಿಳಿಸಿದ್ದಾರೆ.

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಭೇಟಿ: ನಾದ್

ಚಿತ್ತಾಪುರ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮ ಹಾಗೂ ತಾಂಡಾಕ್ಕೆ ಭೇಟಿ ನೀಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಹಾಗೂ ಯೋಜನೆಗಳ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಿದ್ದೇನೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ಹೇಳಿದರು.
    
  ಮತಕ್ಷೇತ್ರದ ಅಲ್ಲೂರ.ಬಿ, ಅಳ್ಳೋಳ್ಳಿ, ಅಲ್ಲೂರ.ಕೆ, ರಾಮತೀರ್ಥ, ಭೀಮನಳ್ಳಿ, ಹಲಕಟ್ಟಿ, ರಾವೂರ, ರಾಂಪೂರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಉತ್ತಮ ಅಭಿಪ್ರಾಯ ಹಾಗೂ ಬೆಂಬಲ ವ್ಯಕ್ತವಾಗಿದೆ ಹಾಗೂ ಭಾರತೀಯ ಜನತಾ ಪಕ್ಷದ ಪರ ಉತ್ತಮ ವಾತಾವರಣವಿದೆ ಎಂದು ಹೇಳಿದರು.

  ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದಡಿ ಅರ್ಹ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದರು.
    
 ನಗರ ಯೋಜನಾ ಪ್ರಾಧಿಕಾರ ಸದಸ್ಯ ಶಾಂತಕುಮಾರ ಮಳಖೇಡ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕಡೇಸೂರ, ಹಂಪಣ್ಣ ಹುಳಾಗಡ್ಡಿ, ನಾಗಪ್ಪ ದೊಡ್ಡಮನಿ, ಈಶ್ವರ ಚಂದಣ್ಣನವರ್, ಭಾಸ್ಕರ್ ಭೀಮನಳ್ಳಿ, ಹಣಮಂತ ಹೆಡಗಿಮುದ್ರಿ, ಮಾರುತಿ ಮುಗುಳಕರ್, ಪರಶುರಾಮ ಭಾರ್ಗವ್ ಇತರರು ಇದ್ದರು.

ಭಾನುವಾರ, ನವೆಂಬರ್ 27, 2022

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಚಿತ್ತಾಪುರ: ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ನಾಗಾವಿ ಸಾಹಿತ್ಯ ಸಾಂಸ್ಕೃತಿ ಪರಿಷತ್ತ್ ವತಿಯಿಂದ  ಕೊಡಲ್ಪಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ವಿವಿಧ ಕ್ಷೇತ್ರದ ಏಳು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ತಿಳಿಸಿದ್ದಾರೆ.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯಲ್ಲಿದ್ದ ಎಲ್ಲ ಪದಾಧಿಕಾರಿಗಳ ಒಮ್ಮತದಿಂದ ಆಯಾ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ಗಣನೀಯ ಸೇವೆ ಸಲ್ಲಿಸಿದ್ದ ಸಾಧಕರನ್ನು ಗುರುತಿಸಿ ಯೋಗ್ಯ ಮತ್ತು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. 

ಬಸ್ಸಪ್ಪ ಮುಗುಳಖೋಡ (ಶಿಕ್ಷಣ ಕ್ಷೇತ್ರ), ವೀರಯ್ಯಸ್ವಾಮಿ ಸ್ಥಾವರಮಠ (ಸಾಹಿತ್ಯ ಕ್ಷೇತ್ರ), ಅಯ್ಯಣ್ಣ ಮಾಸ್ತರ ವಿಶ್ವಕರ್ಮ(ಸಂಗೀತ ಕ್ಷೇತ್ರ), ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ(ರಂಗಭೂಮಿ ಕ್ಷೇತ್ರ), ನರಸಿಂಹ ಆಲಮೇಲಕರ್ (ಚಿತ್ರಕಲೆ ಕ್ಷೇತ್ರ), ಮಹ್ಮದ ಇಬ್ರಾಹಿಂ (ಸಾಮಾಜಿಕ ಸೇವಾ ಕ್ಷೇತ್ರ), ಡಿ.ನರಸಯ್ಯಗೌಡ (ಕೃಷಿ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕವನ್ನು ಇಷ್ಟರಲ್ಲೇ ನಿಗದಿಪಡಿಸಿ ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಅತಿಥಿ ಗಣ್ಯಮಾನ್ಯರು ಹಾಗೂ ಸಾಹಿತಿಗಳನ್ನು ಅಹ್ವಾನಿಸಿ ಅರ್ಥಪೂರ್ಣವಾದ ಕಾರ್ಯಕ್ರಮ ಮಾಡಲು ನಿರ್ಧರಿಸಲಾಯಿತು.
 
ಈ ಸಂದರ್ಭದಲ್ಲಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವೀರಸಂಗಪ್ಪ ಸುಲೇಗಾಂವ, ಪದಾಧಿಕಾರಿಗಳಾದ ನರಸಪ್ಪ ಚಿನ್ನಕಟ್ಟಿ, ಶಾಂತಕುಮಾರ ಮಳಖೇಡ, ಭಾರತಿ ಸಿಂಪಿ, ರವಿಶಂಕರ ಬುರ್ಲಿ, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ಪ್ರದೀಪ ಕುಲಕರ್ಣಿ, ಜಗದೇವ ಕುಂಬಾರ, ಯಲ್ಲಯ್ಯ ಕಲಾಲ್ ಇದ್ದರು.





ಶುಕ್ರವಾರ, ನವೆಂಬರ್ 25, 2022

ಅಂಗನವಾಡಿ ಕೇಂದ್ರಕ್ಕೆ ಸಿಇಓ ಭೇಟಿ.

ಚಿತ್ತಾಪೂರ: ತಾಲ್ಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-5ಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀರಿಶ ದಿಲೀಪ್ ಬದೋಲೆ ಭೇಟಿ ನೀಡಿ ಅಂಗನವಾಡಿಯ ಸ್ವಚ್ಛತೆ,ಶಿಸ್ತು ಕ್ರಮಬದ್ಧತೆ ನೋಡಿ ಹಾಗೂ ಖುಷಿಯಿಂದ ಮಕ್ಕಳ ಜೊತೆ ಮಾತನಾಡಿಸಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಪಂ ಇಓ ನೀಲಗಂಗಾ ಬಬಲಾದ, ಸಿಡಿಪಿಓ ರಾಜಕುಮಾರ್ ರಾಠೋಡ, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಸಿದ್ದಣ್ಣ ಅಣಬಿ, ಹಿರಿಯ ಮುಖಂಡರಾದ ರಾಜಶೇಖರ್ ತಿಮ್ಮನಾಯಕ್ , ಮುನಿಯಪ್ಪ ಕೊಳ್ಳಿ, ಶಂಕರ್ ಕೊಳ್ಳಿ, ರಮೇಶ ಕವಡೆ ಸೇರಿದಂತೆ ಇತರರು ಇದ್ದರು.

ಬುಧವಾರ, ನವೆಂಬರ್ 23, 2022

ಬಡ ಮಹಿಳೆಯರಿಗೆ ಸೀರೆ ವಿತರಣೆ.


ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರ 44ನೇ ಜನ್ಮದಿನದ ನಿಮಿತ್ಯ ಪಟ್ಟಣದ ದೇವದಾಸಿ ಕಾಲೋನಿಯಲ್ಲಿನ ವಿಮುಕ್ತ ದೇವದಾಸಿ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು.
 ನಂತರ ಕೇಕ್ ಕಟ್ ಮಾಡಿ ಪ್ರತಿಯೊಬ್ಬರಿಗೆ ಸಿಹಿ ತಿನಿಸಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಮಾತನಾಡಿ  ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ಹಗಲು-ಇರುಳು ಅನ್ನದೆ ಶ್ರಮಿಸುತ್ತಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ನಾವು ಬೆಂಬಲಿಸಿ ಗೆಲ್ಲಿಸುವ ಜೊತೆಗೆ ಅವರ ಸರಳ ಮನೋಭಾವನೆಯನ್ನು ನಾವೆಲ್ಲರೂ ಪಾಲಿಸೋಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ್ ಶಿಂಧೆ, ಜಗನ್ನಾಥ ಮುಡಬೂಳಕರ್, ಆನಂದ್ ಮೊಗಲಾ, ಸಂಜಯ ಬುಳಕರ್, ವಿಜಯ್ ಕುಮಾರ್ ಚವ್ಹಾಣ, ಮಲ್ಲಿಕಾರ್ಜುನ್ ಕಲ್ಮರಿ, ಶರಣಬಸ್ಸು ಮುತ್ತಾಗಿ, ಸಿದ್ದಾರ್ಥ್, ಬಸವರಾಜ್, ರವಿ, ಸೇರಿದಂತೆ ಇತರರಿದ್ದರು.

ಪ್ರಿಯಾಂಕ್ ಖರ್ಗೆ ಜನ್ಮದಿನ ನಿಮಿತ್ಯ ಅನ್ನದಾಸೋಹ.


ಚಿತ್ತಾಪುರ : ಶಾಸಕ ಪ್ರಿಯಾಂಕ್ ಖರ್ಗೇ ಅವರ 44ನೇ ಜನ್ಮದಿನದ ನಿಮಿತ್ಯ  ಪಟ್ಟಣದ ಬಸ್ ನಿಲ್ದಾಣ ಹತ್ತಿರ ಭೀಮು ಹೊಳಿಕಟ್ಟಿ ಅವರ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ ಮೂಲಕ  ಹುಟ್ಟು ಹಬ್ಬವನ್ನು ಆಚರಿಸಲಾಯಿತು. 
 
ಈ ವೇಳೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಪ್ರಿಯಾಂಕ್ ಅಪ್ಪಟ ಅಭಿಮಾನಿ ಭೀಮು ಹೊಳಿಕಟ್ಟಿ ಅವರು ಮಾತನಾಡಿ  ಜಿಲ್ಲೆಯಲ್ಲಿ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿ ಮಾಡುದ್ದಾರೆ. ಮುಂಬರುವ ಚುನಾವಣೆಯಲ್ಲಿ ಯುವ ಮತದಾರರು ಸೇರಿದಂತೆ ಮತಕ್ಷೇತ್ರದ ಎಲ್ಲಾ ಮತ ಪ್ರಭುಗಳು ಅವರನ್ನು ಪ್ರಚಂಡ ಬಹು ಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಭೀಮಣ್ಣ ಹೊತ್ತಿನಮಡಿ , ಗುಂಡು ಐನಾಪುರ, ಶೀಲಾ ಕಾಶಿ, ಸಾಬಣ್ಣ ಹೊಳಿಕಟ್ಟಿ, ರಾಮಲಿಂಗ ಬಾನರ್, ಹಣಮಂತ ಸಂಕನೂರ, ಬಸವರಾಜ ಚಿನಮಳ್ಳಿ, ಸೇರಿದಂತೆ ಇತರರು ಇದ್ದರು.

ನೇಟೆರೋಗ ತೊಗರಿ ಬೆಳೆ ನಾಶ, ಪರಿಹಾರಕ್ಕೆ ಆಗ್ರಹ.

ಚಿತ್ತಾಪೂರ: ತೊಗರಿ ಬೆಳೆಗೆ ನೇಟೆರೋಗ ಬಾದೆಯಿಂದ ಚಿತ್ತಾಪೂರ, ಕಾಳಗಿ, ಹಾಗೂ ಶಹಬಾದ ತಾಲೂಕಿನಾದ್ಯಂತ ತೊಗರಿ ಬೆಳೆ ಕಾಯಿ ಕಟ್ಟುವ ಹಂತದಲ್ಲಿ ನೇಟೆರೋಗ ಭಾದೆಯಿಂದ ತೊಗರಿ ಬೆಳೆ ನಾಶವಾಗಿವೆ ಹೀಗಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಅತ್ಯುತ್ತಮ ತೊಗರಿ ಬೆಳೆ ಬೆಳೆಯುವ 3 ತಾಲೂಕುಗಳಲ್ಲಿ ನೇಟೆರೋಗದಿಂದ ಸಂಪೂರ್ಣ ಬೆಳೆ ನಾಶವಾಗಿವೆ. ಈಗಾಗಲೇ ಅತಿವೃಷ್ಟಿಯಿಂದ ಅನೇಕ ಬೆಳೆಗಳು ನಾಶವಾಗಿವೆ. ಇನ್ನು ಅಳಿದು ಉಳಿದ ಬೆಳೆ ನೇಟೆರೋಗ ಬಾದೆಯಿಂದ ಸಂಪೂರ್ಣ ನಾಶವಾಗಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. 

ರೈತ ಪರ ಕಾಳಜಿ ವಹಿಸಿ ಜಿಲ್ಲಾದ್ಯಾದಂತ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಯಶಸ್ವಿ ಮಾಡಿರುವ ಕೀರ್ತಿ ನಿಮಗೆ ಸಲ್ಲುತ್ತದೆ. ರೈತ ಪರ ಕಾಳಜಿ ಹೊಂದಿರುವಂತ ತಾವು ಚಿತ್ತಾಪೂರ ಕಾಳಗಿ, ಹಾಗೂ ಶಹಬಾದ ತಾಲೂಕುಗಳಲ್ಲಿ ಕೃಷಿ ಅಧಿಕಾರಿಗಳ ಮುಖಾಂತರ ಸರ್ವೆ ಮಾಡಿಸಿ. ನೇಟೆರೋಗಕ್ಕೆ ತುತ್ತಾದ ಬೆಳೆಗೆ 25 ಸಾವಿರ ರೂಪಾಯಿ  ಪರಿಹಾರ ಒದಗಿಸಲು ಕೋರಿದ್ದಾರೆ.

ಶನಿವಾರ, ನವೆಂಬರ್ 19, 2022

ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಗುರಿ: ಗುತ್ತೇದಾರ್


ಚಿತ್ತಾಪುರ: ನಾಗಾವಿ ನಾಡು ಎಂದು ಖ್ಯಾತಿ ಪಡೆದ ಚಿತ್ತಾಪುರ ತಾಲೂಕಿನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಹೊಸದಾಗಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಹುಟ್ಟು ಹಾಕಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿನ ಐತಿಹಾಸಿಕ ನಾಗಾವಿ ಕ್ಷೇತ್ರದ ಇತಿಹಾಸದ ಕೈಪಿಡಿಯನ್ನು ಸಿದ್ದಪಡಿಸುವ ಮೂಲಕ ಮನೆ ಮನೆಗೆ ಮುಟ್ಟಿಸುವ ಗುರಿ ಹೊಂದಲಾಗಿದೆ ಈ ನಿಟ್ಟಿನಲ್ಲಿ ನಮ್ಮ ನೆಲದ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಲಾಗುವುದು ಎಂದರು.

   ಪ್ರತಿ ವರ್ಷ ನಾಗಾವಿ ಉತ್ಸವ ಹಾಗೂ ವಿವಿಧ ಸಾಧಕರನ್ನು ಗುರುತಿಸಿ ನಾಗಾವಿ ಪ್ರಶಸ್ತಿ ಪ್ರಧಾನ ಮಾಡುವುದು, ತಾಲೂಕಿನ ಸಾಹಿತಿಗಳನ್ನು ಒಂದಡೇ ಸೇರಿಸಿ ಸಾಹಿತಿಗಳ ಸಂಗಮ, ಶಿಕ್ಷಕರ ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಸಾಹಿತ್ಯ ವಿಚಾರ ಸಂಕೀರ್ಣ, ಕವಿ ಕಲಾವಿಧರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದು, ನಾಗಾವಿ ನೆಲದಲ್ಲಿ ಬೆಳದಿಂಗಳು ಊಟ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  ಇದೇ ನ.೨೯ ರಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

   ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಅಹ್ವಾನ: ಚಿತ್ತಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಂಗೀತ ಕ್ಷೇತ್ರ, ನಾಟಕ (ರಂಗಭೂಮಿ) ಕ್ಷೇತ್ರ, ಕೃಷಿ ಕ್ಷೇತ್ರ, ಕಲಾ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ರಾಜ್ಯೋತ್ಸವ ಪ್ರಶಸ್ತಿಗಾಗಿ ತಮ್ಮ ಸೂಕ್ತ ದಾಖಲೆಗಳೊಂದಿಗೆ ಸ್ವ ವಿವರ ಮಾಹಿತಿಯನ್ನು ನರಸಪ್ಪ ಚಿನ್ನಕಟ್ಟಿ ಶಿಕ್ಷಕರು ಅಣ್ಣೆಮ್ಮ ಗೊಬ್ಬುರ ಪ್ರೌಢ ಶಾಲೆ ಶಹಾಬಾದ ರಸ್ತೆ ಚಿತ್ತಾಪುರ ವಿಳಾಸಕ್ಕೆ ಇದೇ ನ.೨೫ರ ಒಳಗೆ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಮೋ.೯೮೮೦೬೩೭೪೧೮, ೯೯೭೨೮೯೫೭೭೧ ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

  ಪದಾಧಿಕಾರಿಗಳ ಆಯ್ಕೆ: ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಾಶಿನಾಥ ಗುತ್ತೇದಾರ (ಅಧ್ಯಕ್ಷರು) ಸಾಯಬಣ್ಣಾ ಗುಡುಬಾ, ರವೀಂದ್ರ ಇವಣಿ, ನರಸಪ್ಪ ಚಿನ್ನಕಟ್ಟಿ (ಉಪಾಧ್ಯಕ್ಷರು), ವೀರಸಂಗಪ್ಪ ಸುಲೇಗಾಂವ (ಪ್ರಧಾನ ಕಾರ್ಯದರ್ಶಿ), ನಟರಾಜ ಶಿಲ್ಪಿ (ಸಹ ಕಾರ್ಯದರ್ಶಿ), ಶಾಂತಕುಮಾರ ಮಳಖೇಡ (ಸಂಘಟನಾ ಕಾರ್ಯದರ್ಶಿ), ರವಿಶಂಕರ ಬುರ್ಲಿ (ಖಜಾಂಚಿ), ಮಹ್ಮದ ಮಶಾಕ್, ಜಗದೇವ ಕುಂಬಾರ, ಯಲ್ಲಯ್ಯಾ ಕಲಾಲ್, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ಮುನಿಯಪ್ಪ ಕಡಬೂರ, ಮಲ್ಲಿಕಾರ್ಜುನ ಮದನಕರ್, ಶಿವಲೀಲಾ ಕಲಗುರ್ಕಿ, ಭಾರತಿ ಸಿಂಪಿ, ವಿಷ್ಣುವರ್ಧನರೆಡ್ಡಿ, ಮೋನಯ್ಯ ಪಂಚಾಳ, ದೇವಿಂದ್ರಪ್ಪ ಇಮಡಾಪೂರ, ಪ್ರದೀಪ ಕುಲಕರ್ಣಿ (ಸದಸ್ಯರು) ಆಯ್ಕೆಯಾಗಿದ್ದಾರೆ.

ಗುರುವಾರ, ನವೆಂಬರ್ 17, 2022

ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಬದ್ಧ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ಗ್ರಾಮೀಣ ಭಾಗಗಳ ಅಭಿವೃದ್ದಿ ನಾನು ಬದ್ಧತೆನಾಗಿದ್ದೆನೆ ಹಾಗೂ  ಇನ್ನೂ ಅಭಿವೃದ್ದಿ ಕೆಲಸ ಮಾಡುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ತಾಲ್ಲೂಕಿನ  ಹೊಸೂರ ಗ್ರಾಮದಲ್ಲಿ ಒಟ್ಟು ರೂ 68.05 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೋಣೆ ( ರೂ 52 ಲಕ್ಷ), ಮಾದಿಗ ಸಮಾಜದ ಏರಿಯಾದಲ್ಲಿ ಸಾಂಸ್ಕೃತಿಕ ಭವನ‌ ( ರೂ 6.05 ಲಕ್ಷ) ಹಾಗೂ ಕೋಲಿ ಸಮಾಜದ ಹತ್ತಿರ ಸಾಂಸ್ಕ್ರತಿಕ ಭವನ ( ರೂ 10 ಲಕ್ಷ) ಕ್ಕೆ ಅಡಿಗಲ್ಲು ನೆರವೇರಿಸಿ‌ ಮಾತನಾಡಿದ ಅವರು ನಾನು ಸಚಿವನಾಗಿದ್ದಾಗ ರೂ 80 ಕೋಟಿ ಕಲಬುರಗಿಗೆ ಕೊಟ್ಟಿದ್ದೇನೆ, ಸೇಡಂ, ಕಲಬುರಗಿ ಗ್ರಾಮೀಣ ಹಾಗೂ ಚಿಂಚೋಳಿ‌ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ ಈ‌ ಸರ್ಕಾರ ನನ್ನ ಕ್ಷೇತ್ರಕ್ಕೆ ಬಿಡುಗಡೆಯಾಗಬೇಕಿದ್ದ ರೂ. 200 ಕೋಟಿ ತಡೆ ಹಿಡಿಯಲಾಗಿದೆ ಇದು ದ್ವೇಷದ ರಾಜಕಾರಣದ ಫಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ ಬಾರಿ ಮೊದಲ ಹಂತದಲ್ಲಿ ಹೊಸೂರ ಗ್ರಾಮಕ್ಕೆ ರೂ 60 ಲಕ್ಷ ವೆಚ್ವದಲ್ಲಿ ಶಾಲೆಗಳಿಗೆ ಅನುದಾನ ನೀಡಿದ್ದೆ. ಈಗ ಎರಡನೆಯ ಹಂತದಲ್ಲಿ ಶಾಲೆಗಳ ನಿರ್ಮಾಣಕ್ಕಾಗಿ ರೂ‌ 60 ಲಕ್ಷ‌. ಹೀಗೆ ಒಟ್ಟು ರೂ 1ಕೋಟಿಗೂ ಅಧಿಕ‌ ಅನುದಾನವನ್ನು ಕೇವಲ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರ ವಿವೇಕ ಯೋಜನೆಯಡಿಯಲ್ಲಿ ನೂತನ ಶಾಲೆಗಳನ್ನು ಕಟ್ಟಿಸಿ ಅವುಗಳಿಗೆ ಕೇಸರಿ ಬಣ್ಣ ಬಳಿಯುತ್ತಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರದ ಆಧ್ಯತೆಯ ಬಗ್ಗೆ ತಕರಾರಿದೆ. ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಾಣ, ಶಿಕ್ಷಕರ ಕೊರತೆ ನೀಗಿಸುವುದು ಮುಖ್ಯವಾಗಬೇಕಿತ್ತು. ಅದನ್ನ ಬದಿಗಿಟ್ಟು ಧ್ಯಾನ ಮಾಡಿಸುವುದು ಪೋಷಕರಿಂದ ನೂರು ರೂಪಾಯಿ ಕಲೆಕ್ಟ್ ಮಾಡಲಾಗುತ್ತಿದೆ ಇದು ಸರಿಯಲ್ಲ. ನಮ್ಮ ಆದ್ಯತೆ ಶಾಲೆಯ ಶಿಕ್ಷಣ ಮೂಲ ಸೌಕರ್ಯವಾಗಿರಬೇಕೆ ಹೊರತು ಬಣ್ಣದಲ್ಲಲ್ಲ ಎಂದು ಟೀಕಿಸಿದರು.

ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ ಅವುಗಳನ್ನು ತುಂಬುವ ಆಸಕ್ತಿ ಇಲ್ಲ. ಆದರೆ ಕೆಪಿಟಿಸಿಎಲ್, ಪಿಎಸೈ, ಪಂಚಾಯತ ರಾಜ್ ನೇಮಕಾತಿ ನಡೆಸಿದ್ದರು ಆದರೆ ಅಲ್ಲಿ ಹಣದ ಅವ್ಯವಹಾರ ನಡೆದು ಇಂದು ಲಕ್ಷಾಂತರ ನಿರುದ್ಯೋಗಿ‌ ಯುವಕರ ಭವಿಷ್ಯ ಕತ್ತಲಲ್ಲಿ ಮುಳುಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲದ ವ್ಯಕ್ತಿಗಳು ಇತ್ತೀಚಿಗೆ ರಾಜಕಾರಣಕ್ಕೆ ಬರುತ್ತಿದ್ದಾರೆ‌. ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಠಿಸುತ್ತಿರುವವರನ್ನ ದೂರವಿಡಬೇಕು. ಅಭಿವೃದ್ದಿ ಪರವಿರುವ ಹಾಗೂ ಜನಪರ ಕಾಳಜಿ ಹೊಂದಿರುವವರನ್ನು ಗುರುತಿಸಬೇಕು. ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಗ್ರಾಪಂ ಅಧ್ಯಕ್ಷರಾದ ಮಹಿಪಾಲ ಮೂಲಿಮನಿ ಮಾತನಾಡಿ, ಗ್ರಾಮದಿಂದ ದಿಗ್ಗಾಂವ ಮುಖ್ಯ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು  ಮಾತನಾಡಿ ಗ್ರಾಮದಲ್ಲಿ ಎಲ್ಲ ಸಮೂದಾಯದವರಿಗೆ ಸ್ಮಶಾನ ಭೂಮಿ ಒದಗಿಸಬೇಕು. ಸಾಮೂಹಿಕ ವಿವಾಹ ಮಾಡಲು ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು. ಮುಸ್ಲಿಂರ ಖಬರಸ್ಥಾನಕ್ಕೆ ಕಂಪೌಂಡ್ ನಿರ್ಮಾಣ‌ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮಾಜಿ ಜಿಪಂ ಅಧ್ಯಕ್ಷ ರಮೇಶ ಮರಗೋಳ, ಮಾಜಿ ಜಿಪಂ ಸದಸ್ಯ ಶಿವರುದ್ರ ಬೀಣಿ, ಬಸವರಾಜ್ ಚಿಮ್ಮನ್ನಳ್ಳಿ ಸೇರಿದಂತೆ ಇತರರು ಇದ್ದರು.

ಮುಖ್ಯ ಶಿಕ್ಷಕರನ್ನು ಬದಲಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಚಿತ್ತಾಪೂರ: ನಾಗಾವಿ ಕ್ಯಾಂಪಸ್‌ ನಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಮುಖ್ಯ ಶಿಕ್ಷಕರನ್ನು ಬದಲಾಯಿಸಿ ಬೇರೆಯವರನ್ನು ನಿಯೋಜನೆ ಮಾಡಬೇಕು ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸಬೇಕು. ಇತರೆ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ನಾಗಾವಿ ಕ್ಯಾಂಪಸನ ಮುಖ್ಯ ರಸ್ತೆ,ಹಾಗೂ ಸಾತನೂರ ಮತ್ತು ಕರದಾಳ ಹೋಗುವ ರಸ್ತೆ ಬಂದ ಮಾಡಿ  ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಅವರು ಪ್ರತಿಭಟನೆ ಹಮ್ಮಿಕೊಂಡು ಗ್ರೇಡ್ 2 ತಹಸೀಲ್ದಾರ್ ಅಮಿತ ಕುಲ್ಕರ್ಣಿ, ಹಾಗೂ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯ ರುದ್ನೂರ ಅವರಿಗೆ ಪ್ರತಿಭಟನೆ ಮನವಿ ಪತ್ರವನ್ನು ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ್ ನೇತೃತ್ವದಲ್ಲಿ ಸಲ್ಲಿಸಿ ಮಾತನಾಡಿದ ಅವರು ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಶಾಲಾ ಆಡಳಿತದ ಮತ್ತು ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಅಸಮರ್ಥ, ಅಸಹಾಯಕ ದೃಷ್ಠಿಕೋನವಿರುವ ಮುಖ್ಯಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬದಲಾವಣೆ ಮಾಡುವ ಕ್ರಮ ಕೈಗೊಂಡು ಹೊಸದಾಗಿ ಮತ್ತು ನಕರಾತ್ಮಕ ಸಮರ್ಥವಿರುವ ಮುಖ್ಯಶಿಕ್ಷಕರನ್ನು ನಿಯೋಜಿಸಬೇಕು. 
6ನೇ ತರಗತಿಯಿಂದ 10ನೇ ತರಗತಿ ಇರುವ ಈ ಶಾಲೆಯಲ್ಲಿ 350 ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಈಗಿರುವ ಮುಖ್ಯಶಿಕ್ಷಕರು ಅಡಳಿತದ ಅನುಭವದ ಕೊರತೆಯಿಂದ ಶಾಲೆಯನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದರಿಂದ ಶಾಲೆಯ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದರಿಂದ ಬೇಸತ್ತಿದ್ದಾರೆ. ಇಂತಹ ಅಸಮರ್ಥ ಮುಖ್ಯಶಿಕ್ಷಕರಿಂದ ಶಾಲೆಯ ಶೈಕ್ಷಣಿಕ ವಾತಾವರಣ ಹಾಳಾಗಿದೆ ಈ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಅವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೆಳ್ಳದೇ ಇರುವುದರಿಂದ ಇಂದು ರಸ್ತೆತಡೆ ಮಾಡಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.

ಶಾಲಾಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಪಾತ್ರ ಬಹಳ ಪ್ರಮುಖವಾಗಿದೆ ಆದರೆ ಮುಖ್ಯಶಿಕ್ಷಕರು ಮಾತ್ರ ಎಸ್‌ಡಿಎಂಸಿ ಅವರ ಗಮನಕ್ಕೆ ಯಾವುದೇ ವಿಷಯ ಅಥವಾ ಸರಕಾರದ ಯೋಜನೆಗಳ ಬಗ್ಗೆ (ಉದಾ: ಶೂ, ಸಾಕ್ಸ್, ಬಟ್ಟೆ ಇತ್ಯಾದಿ) ಮಾಹಿತಿ ನೀಡದೇ ತಾವೇ ಎಲ್ಲ ಕೆಲಸ ಕಾರ್ಯಗಳು ಮಾಡುತ್ತಾರೆ, ಇಲ್ಲಿವರೆಗೆ ಶಾಲಾಭಿವೃದ್ಧಿಗೆ ಬಂದ ಅನುದಾನದ ಮಾಹಿತಿ ನೀಡಿಲ್ಲ ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ. ಅದರಲ್ಲೂ ಲೆಕ್ಕಪತ್ರದ ರೀಜಿಸ್ಟರ್ ನಿರ್ವಹಣೆ ಮಾಡಿಲ್ಲ ಹಾಗೂ ಇಲ್ಲಿ ಸಾಕಾಷ್ಟು ಅವ್ಯವಹಾರ ನಡೆದಿರುವುದು ಅನುಮಾನ ಮೂಡಿದೆ. ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಜೊತೆ ಅಸಭ್ಯ ರೀತಿಯಿಂದ ವರ್ತಿಸುತ್ತಾರೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ನೀಡುತಿಲ್ಲ. ಇಂತಹ ಅನಾನುಭವಿ ಮತ್ತು ಬೇಜವಾಬ್ದಾರಿ ಮುಖ್ಯಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬದಲಾಯಿಸಬೇಕು.

ಶಾಲೆಯಲ್ಲಿ ಮುಖ್ಯಶಿಕ್ಷಕರು, ಸಹಶಿಕ್ಷಕರು ಸೇರಿ 18 ಹುದ್ದೆಗಳಿವೆ ಆದರೆ ಈಗ ಮುಖ್ಯಶಿಕ್ಷಕರು ಸೇರಿ 7 ಜನ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ

ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರಿದೆ, ಕೂಡಲೇ ಅಗತ್ಯ. ಶಿಕ್ಷಕರ ನಿಯೋಜನೆ ಮಾಡಬೇಕು. ಶಿಕ್ಷಕರ ಸಮಸ್ಯೆಯ ನಡುವೆ 8 ಜನ ಅತಿಥಿ ಶಿಕ್ಷಕರ ಮೇಲೆಯೇ ಶಾಲೆ ನಡೆಯುತ್ತಿದೆ. ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣದಿಂದ ಮುಖ್ಯಶಿಕ್ಷಕಿಯನ್ನು ಬದಲಾಯಿಸಿ ಹೊಸದಾಗಿ ಮುಖ್ಯಶಿಕ್ಷಕರನ್ನು ನಿಯೋಜನೆ ಮಾಡುವ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈಗ ರಸ್ತೆತಡೆ ಪ್ರತಿಭಟನೆ ಮಾಡುತ್ತಿದ್ದೇವೆ ಬರುವ ದಿನಗಳಲ್ಲಿ ಶಾಲೆಗೆ ಬೀಗ ಹಾಕಿ ಪಾದಯತ್ರೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಮಾತನಾಡಿ ಶಾಲೆಯಲ್ಲಿನ ಶಿಕ್ಷಕರ ಕೊರತೆ ನಿಗಿಸಿ ಅಗತ್ಯ ಸಮಾಜ ವಿಜ್ಞಾನ, ಇಂಗ್ಲೀಷ್, ಗಣಿತ, ಕನ್ನಡ, ವಿಜ್ಞಾನ, ಹಿಂದಿ ವಿಷಯಗಳ ಶಿಕ್ಷಕರನ್ನು ಹಾಗೂ ಕ್ಲರ್ಕ್ ಮತ್ತು ಪ್ಯೂನ್, ವಾಚಮನ್ ನಿಯೋಜಿಸಬೇಕು.ಶಾಲೆಗೆ ಶುದ್ಧ ಕುಡಿಯುವ ನೀರು, ವಿದ್ಯುತ್‌, ಸ್ವಚ್ಛತೆ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು.

ನಮಗೆ ಮದ್ಯಾಹ್ನದ ಬಿಸಿಯೂಟ ಸರಿಯಾಗಿ ನೀಡುತ್ತಿಲ್ಲ. ಪ್ರತಿ ಬಾರಿ ಗ್ಯಾಸ್‌ ಸಮಸ್ಯೆ ಹೇಳುತ್ತಾರೆ. ಸರಕಾರದ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ಮೊಟ್ಟೆ ಮತ್ತು ಹಾಲು ಸರಿಯಾಗಿ ನೀಡುತ್ತಿಲ್ಲ.ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಾಗಾವಿ ಕ್ಯಾಂಪಸ್‌ ಒಳಗಡೆ ಸಾರಿಗೆ ಬಸ್ಸುಗಳು ವಾಯ್ಡಾ ಮಾಡಿ ಹೋಗುವಂತೆ ಮಾಡಬೇಕು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀಮತಿ ಸುನಿತಾ ತಳವಾರ, ಸದಸ್ಯರಾದ ಸುಭಾಶ್ಚಂದ್ರ ಅವಂಟಿ, ಅನಂದ ಕುಮಾರ್, ಹುಸನಯ್ಯ ಗುತ್ತೇದಾರ್, ಮಲ್ಲಿಕಾರ್ಜುನ, ಮಲ್ಲಿನ್ನಾಥ ಕಡ್ಲಿ, ಚನ್ನಬಸಪ್ಪ ಸಾತನೂರಕರ್, ದೇವಸುಂದರ್ ಕರದಾಳ, ಸೇರಿದಂತೆ ಇತರರು ಇದ್ದರು.


ಬುಧವಾರ, ನವೆಂಬರ್ 16, 2022

ವಿದ್ಯಾರ್ಥಿಯ ಕಾಲು ಮುರಿತ: ಶಾಲಾ ಆಡಳಿತ ನಿರ್ಲಕ್ಷ್ಯ.

ಶಹಾಬಾದ:ಬಸವ ಸಮಿತಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಬಾಗೇಶ್ ತಂದೆ ವಿಶ್ವನಾಥ್ ಎಂಬ ವಿದ್ಯಾರ್ಥಿಯ ಕಾಲು ಮುರಿದಿದ್ದು ಶಾಲಾ ಆಡಳಿತ ವಿದ್ಯಾರ್ಥಿಯ ಚಿಕಿತ್ಸೆಗೆ ಮುಂದಾಗದೆ ಸಂಪೂರ್ಣವಾಗಿ ನಿರ್ಲಕ್ಷತನ ತೋರಿದೆ ಎಂದು ವಿದ್ಯಾರ್ಥಿಯ ಅಜ್ಜನಾದ ಮಲ್ಲಿಕಾರ್ಜುನ್ ತಳವಾರ್ ತಿಳಿಸಿದ್ದಾರೆ.
ತಾಲೂಕಿನ ಭಂಕೂರ ಗ್ರಾಮದ ಬಸವ ಸಮಿತಿ ಪ್ರಾಥಮಿಕ ಶಾಲೆಗೆ ಅಗಸ್ಟ್- 19, ವಿದ್ಯಾರ್ಥಿಯು ಶಾಲಾ ಸಮಯಕ್ಕೆ ಸರಿಯಾಗಿ  ಬೆಳಿಗ್ಗೆ, 9:20ಕ್ಕೆ ಬಂದು  ಶಾಲಾ ಆವರಣದಲ್ಲಿ  ವಿದ್ಯಾರ್ಥಿಗಳು ಆಟವಾಡುವಾಗ 5ನೇ ತರಗತಿಯ ರೀಯಾನ್ ಎಂಬ ವಿದ್ಯಾರ್ಥಿ ಗೋಡೆಯ ಮೇಲಿಂದ ಬಾಗೇಶ್ ಎಂಬ ವಿದ್ಯಾರ್ಥಿಯ ಮೇಲೆ ಹಾರಿದ್ದರಿಂದ ವಿದ್ಯಾರ್ಥಿ ನೋವು ತಾಳಲಾರದೆ ಅಳಲು ಆರಂಭಿಸಿದಾಗ ಶಿಕ್ಷಕರು ಫೋನ್ ಮಾಡಿ ತಿಳಿಸಿದ್ದಾರೆ.

ದಿಡೀರನೆ ನಮ್ಮ ಮೊಮ್ಮಗನನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಹೇಳಿಕೆ ಪ್ರಕಾರ ವಿದ್ಯಾರ್ಥಿಯ ಕಾಲು ಮುರಿತವಾಗಿ ಕಾಲಿಗೆ ರಾಡ್ ಹಾಕಬೇಕು ತುಂಬಾ ಹಣ ಖರ್ಚು ಆಗುತ್ತದೆ ಎಂದಾಗ ನಮಗೆ ದಿಕ್ಕು ತೋಚದಂತಾಯ್ತು. ಕೂಡಲೇ ಶಾಲಾ ಆಡಳಿತಕ್ಕೆ ತಿಳಿಸಿದಾಗ ನಮಗೆ ಅದು ಯಾವುದು ಗೊತ್ತಿಲ್ಲ. ನೋಡೋಣ, ಆ ವಿದ್ಯಾರ್ಥಿಯ ಪಾಲಕರ ಜೊತೆ ಮಾತನಾಡುವೆ ಎಂದರು, ಮತ್ತೆ ನಾವು ರಿಯಾನ್ ಎಂಬ ವಿದ್ಯಾರ್ಥಿಯ ಪಾಲಕರಿಗೆ ಈ ವಿಷಯ ತಿಳಿಸಿದಾಗ ಅವರು ಸಹ ಸ್ಪಂದನೆ ನೀಡಿಲ್ಲ. ವಿಧಿ ಇಲ್ಲದೆ ಬೇರೆಯವರ ಹತ್ತಿರ ಸಾಲ ಮಾಡಿ ಮೊಮ್ಮಗನ ಚಿಕಿತ್ಸೆಗೆ ಮುಂದಾದೇವು ಈಗ ಸದ್ಯ ಮೊಮ್ಮಗನ ಚಿಕಿತ್ಸೆಗೆ 1ಲಕ್ಷ, 50ಸಾವಿರ ರೂಪಾಯಿ ಖರ್ಚಾಗಿದೆ.

ಇನ್ನು ಮೊಮ್ಮಗನ ಚಿಕಿತ್ಸೆಗೆ ಹಣ ಬೇಕಾಗಿದೆ. ಹಾಗೂ ಮೊಮ್ಮಗನ ಚಿಕಿತ್ಸೆಗೆ ಸಾಲ ಕೊಟ್ಟವರು ಹಣ ಕೇಳುತ್ತಿದ್ದಾರೆ. ಈಗ ನಮಗೆ ಏನು ಮಾಡಬೇಕು ಎಂದು ತಿಳಿಯದಾಗಿದೆ. ಕೂಡಲೇ ಬಸವ ಸಮಿತಿ ಶಾಲಾ ಆಡಳಿತ ಹಾಗೂ ರಿಯಾನ್ ಪಾಲಕರು ಕೂಡಲೇ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ನಾವು ಬಸವ ಸಮಿತಿ ಶಾಲಾ ಆಡಳಿತದ ವಿರುದ್ಧ ಹಾಗೂ ರಿಯಾನ್ ಪಾಲಕರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಅವರ ವಿರುದ್ಧ ದೂರ ದಾಖಲಿಸುವೆ, ಹಾಗೂ ನ್ಯಾಯಾಲಯದ ಮರೆ ಹೋಗುವುದಾಗಿ ತಿಳಿಸಿದ್ದಾರೆ.

ಮಂಗಳವಾರ, ನವೆಂಬರ್ 15, 2022

ಪ್ರಿಯಾಂಕ್ ಖರ್ಗೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ:ಬೆಣ್ಣೂರಕರ್.

ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದಲ್ಲಿ ಪುರಸಭೆ ವತಿಯಿಂದ ನಡೆದ ವಿವಿಧ ಅಭಿವೃದ್ದಿ ಅಡಿಗಲ್ಲು ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ ನಾವು ಮನಸ್ಸು ಮಾಡಿದ್ದರೆ ಒಬ್ಬ ಬಿಜೆಪಿ ಲೀಡರ್ ಚಿತ್ತಾಪುರದಲ್ಲಿ ಅಷ್ಟೇ ಅಲ್ಲ ಕಲಬುರಗಿ ಜಿಲ್ಲೆಯಲ್ಲಿ ಓಡಾಡುವುದಿಲ್ಲ ಆ ರೀತಿ ಮಾಡುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ಸರ್ಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಹೇಳಿದರು.

  ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಡಿ ಪಟ್ಟಣದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ರಾಜಕೀಯ ಭಾಷಣ ಮಾಡುವ ಮೂಲಕ ಸರಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಯುತ ಟೀಕೆ ಟಿಪ್ಪಣೆ ಮಾಡಲಿ ಆದರೆ ನಾಲಿಗೆ ಹರಿಬಿಟ್ಟು ಮಾತನಾಡುವ ಮೂಲಕ ಚಿತ್ತಾಪುರ ಕ್ಷೇತ್ರದ ರಾಜಕೀಯಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ ಎಂದರು.

  ಪ್ರತಿ ಕಾರ್ಯಕ್ರಮದಲ್ಲಿ ಪ್ರಬುದ್ದ ಸಮಾಜ ಮತ್ತು ಸಮೃದ್ದ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳುವ ಶಾಸಕರು, ಇದೇನಾ ನಿಮ್ಮ ಪ್ರಬುದ್ದ ರಾಜಕಾರಣ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಒಬ್ಬ ಲೀಡರ್ ರಸ್ತೆಯಲ್ಲಿ ಓಡಾಡುವಂತಿಲ್ಲ ಹಾಗೆ ಮಾಡುತ್ತೇನೆ ಎಂದು ಹೇಳುವ ಮೂಲಕ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಪ್ರಚೋದನಾತ್ಮಕವಾಗಿದ್ದು ಸಮಾಜದಲ್ಲಿ ಅಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆ ತಂದAತಾಗಿದೆ. ಆದ್ದರಿಂದ ಕೂಡಲೇ ಇವರ ಮೇಲೆ ಪೊಲೀಸ್ ಇಲಾಖೆ ಸ್ಪಯಂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

  ಚಿತ್ತಾಪುರ ಕ್ಷೇತ್ರವು ಜಿಲ್ಲೆಯಲ್ಲಿಯೇ ಶಾಂತಿಗೆ ಹೆಸರಾದ ತಾಲೂಕಾಗಿದೆ, ಇಲ್ಲಿವರೆಗೆ ಶಾಂತಿಗೆ ಭಂಗ ತರುವ ಕೆಲಸಗಳು ಯಾವ ರಾಜಕಾರಣಿಗಳು ಮಾಡಿಲ್ಲ, ಮತ್ತು ದ್ವೇಷದ ರಾಜಕಾರಣ ಮಾಡಿಲ, ಆದರೆ ಈಗ ಕ್ಷೇತ್ರದಲ್ಲಿ ಬೇರೆಯವರು ಮುಗ್ದ ಜನರಲ್ಲಿ ದ್ವೇಷದ ಬೀಜಗಳು ಬಿತ್ತಿ ರಾಜಕೀಯ ವಾತಾವರಣ ಕಲುಷಿತಗೊಳಿಸುತ್ತಿರುವ ಅವರ ನಡೆ ಖಂಡನಾರ್ಹವಾಗಿದೆ ಹಾಗೂ ಅಂತಹವರಿಗೆ ಮತದಾರರ ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.

  ಶಾಸಕ ಪ್ರಿಯಾಂಕ್ ಖರ್ಗೆ ಅವರ ಮಾತುಗಳಿಂದ ಬಿಜೆಪಿ ಕಾರ್ಯಕರ್ತರಾರು ಭಯ ಪಡುವ ಅವಶ್ಯಕತೆಯಿಲ್ಲ, ದೈರ್ಯದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿ ನಿಮ್ಮ ಹಿಂದೆ ಪಕ್ಷದ ನಾಯಕರು ಇದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಶತಸಿದ್ದ ಹೀಗಾಗಿ ಪ್ರಿಯಾಂಕ್ ಖರ್ಗೆ ಸೋಲುವ ಬೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿ ಸಾಧ್ಯ:ಗಿರೀಶ್.

ಚಿತ್ತಾಪುರ: ಸಮಾಜದಲ್ಲಿ ಎಲ್ಲಾರೂ ಕೈಜೋಡಿಸಿ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಬ್ರಾಹ್ಮಣ  ಸಮಾಜದ ತಾಲೂಕ ಅಧ್ಯಕ್ಷ ಗೀರಿಶ ಜಾನಿಬ್ ಹೇಳಿದರು.
 
 ಪಟ್ಟಣದ ರಾಘವೇಂದ್ರ ದೇವಾಸ್ಥಾನದಲ್ಲಿ ನಡೆದ ಬ್ರಾಹ್ಮಣ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹಳೆಯ ಪದಾಧಿಕಾರಿಗಳ ಬೀಳ್ಕೋಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಾವೆಲ್ಲರು ಒಂದಾಗಿ ಸರ್ಕಾರಕ್ಕೆ ಒತ್ತಡ ಹಾಕಿದಾಗ ಮಾತ್ರ ಸರ್ಕಾರದಿಂದ ನಾವು ಸೌಲಭ್ಯವನ್ನು ಪಡೆಯಲು ಸಾಧ್ಯ, ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಬಡವರು ಇದ್ದಾರೆ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ, ನಮ್ಮ ಸಮಾಜದಲ್ಲಿನ ಬಡತನ ರೇಖೆಕ್ಕಿಂತ ಕಡಿಮೆ ಇರುವ ಜನರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಾವು ಎಲ್ಲಾರೂ ಕೂಡಿ ಮಾಡಬೇಕಾಗಿದೆ ಎಂದು ಹೇಳೀದರು. 

ನೂತನ ಪದಾಧಿಕಾರಿಗಳು: ಗೌರವಅಧ್ಯಕ್ಷ ದೇವಿದಾಸ ಕುಲ್ಕರ್ಣಿ, ಅಧ್ಯಕ್ಷ ಗಿರೀಶ ಜಾನಿಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಪ್ರಧಾನ ಕಾರ್ಯದರ್ಶಿ ಅನಂತನಾಗ ದೇಶಪಾಂಡೆ, ಖಜಾಂಚಿ ಜಯಂತ ಕುಲ್ಕರ್ಣೀ, ಸಲಹಾ ಸಮತಿ ಸದಸ್ಯರಾಗಿ ಸುಧಾಕರರಾವ ಕುಲ್ಕರ್ಣಿ, ಭೀಮರಾವ ಅಫಜಲಪುರಕರ್, ಶ್ರೀಹರಿ ಭಟ್, ಗುಂಡೆರಾವ ಸರಾಫ್, ಹಣಮೇಶ ಅರ್ಚಕ, ಅಂಬ್ರೀಷ ಜಾನಿಬ್, ರಾಮರಾವ ಕುಲ್ಕರ್ಣಿ, ಗೋಪಾಲರಾವ ಅಫಜಲಪುರಕರ್, ಹಣಮಂತರಾವ ಕುಲ್ಕರ್ಣೀ, ಪ್ರದೀಪ್ ಕುಲ್ಕರ್ಣಿ, ಮಾಣಿಕರಾವ ಕುಲ್ಕರ್ಣಿ ಅವರು ಆಯ್ಕೆಯಾಗಿದ್ದಾರೆ. 

  
ಈ ಸಂದರ್ಭದಲ್ಲಿ ರವಿ ಕುಲ್ಕರ್ಣಿ, ರಾಘವೇಂದ್ರ ಜಾನಿಬ್, ರಾಮರಾವ ಕುಲ್ಕರ್ಣಿ, ಮಾಣಿಕರಾವ ಕುಲ್ಕರ್ಣಿ, ಭೀಮಶೇನರಾವ್ ಕಲ್ಕರ್ಣಿ, ಪವನ್ ಜೋಶಿ, ರಾಜು ಕುಲ್ಕರ್ಣಿ ಸಂಜೀವ ಜಾನಿಬ್, ಆನಂದ ಪಟವಾರಿ, ಪ್ರಲ್ಹಾದ್ ಕುಲ್ಕರ್ಣಿ ಗವತಮ್ ನಾಯಕ ಸೆರಿದಂತೆ ಸಮಾಜ ಬಾಂಧವರು ಹಾಗು ಮಹಿಳೆಯರು ಇದ್ದರು, ಕಾರ್ಯಕ್ರಮದಲ್ಲಿ ಲಲಿತಾ ದೇಶಪಾಂಡೆ ಪ್ರಾರ್ಥಿಸಿದರು. ರವಿ ಕುಲ್ಕರ್ಣಿ ಸ್ವಾಗತ ಕೋರಿದರು. ರಾಮಾಚಾರಿ ಅವರು ನಿರೂಪಿಸಿ ವಂದಿಸಿದರು.

ನಿಮ್ಮ ಪಕ್ಷ ದಲಿತರ ಮೇಲೆ ದೌರ್ಜನ್ಯ ಮಾಡುವ ಪಕ್ಷ.

ಚಿತ್ತಾಪುರ: ಕಾಂಗ್ರೆಸ್ ಪಕ್ಷದಲ್ಲಿ ತತ್ವ ರೈತರ ರಾಜಕೀಯ, ನಡತೆಯಿಲ್ಲದು, ಆತ್ಮಸಾಕ್ಷಿಯಿಲ್ಲ, ನೈತಿಕತೆಯಿಲ್ಲ ಮಾನವೀಯತೆ ಇಲ್ಲಾ, ದೇಶದ ಅಭಿವೃದ್ಧಿ ಮಾಡದೇ ಇರುವ ಪಕ್ಷ ಹೀಗಾಗಿ ಮತದಾರರು, ಕಾರ್ಯಕರ್ತರು ತಮ್ಮ ಪಕ್ಷವನ್ನು ಕೈಬಿಟ್ಟಿದ್ದಾರೆ. ಜೊತೆಗೆ ನಿಮ್ಮ ಪಕ್ಷ ದೀನ ದಲಿತರ ಮೇಲೆ ದೌರ್ಜನ್ಯ ಮಾಡುವ ಪಕ್ಷವಾಗಿದೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಸುರೇಶ್ ರಾಠೋಡ್ ಹೇಳಿದರು.

ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿದ ಅವರು ಶಾಸಕ ಪ್ರಿಯಾಂಕ ಖರ್ಗೆಜಿ ತಾವು ಒಬ್ಬ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಗುಂಡಾಪಡೆಯಿಂದ ದಲಿತ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುವುದು ಅಥವಾ ಮಾಡುವುದು ಎಷ್ಟರ ಮಟ್ಟಿಗೆ ಸರಿ ಈ ಕ್ಷೇತ್ರವು ಮೀಸಲಾತಿ ಕ್ಷೇತ್ರವಾಗಿರುವುದರಿಂದ ಇಲ್ಲಿ ಎಲ್ಲಾ ದಲಿತರಿಗೂ ಕೂಡ ರಾಜಕೀಯದಲ್ಲಿ ಸಕ್ರಿಯವಾಗಿರಲು ಹಕ್ಕಿದೆ.

ಕ್ಷೇತ್ರದಲ್ಲಿ ರಸ್ತೆಗಳು ಅದಗೆಟ್ಟಿದರಿಂದ ದಿನಕ್ಕೊಂದು ಅಪಘಾತ ಸಂಭವಿಸುತ್ತಿವೆ, ನೀರಿನ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ, ಬೀದಿ ದೀಪಗಳಿಲ್ಲದೆ ರಾತ್ರಿಯಲ್ಲಿ ಜನರಿಗೆ ತಿರುಗಾಡುವುದು ಕಷ್ಟವಾಗಿದೆ, ಯುವಕರು ಕೆಲಸವಿಲ್ಲದೆ ಕ್ಷೇತ್ರದಲ್ಲಿ ಪರದಾಡುತ್ತಿದ್ದಾರೆ. ಇವುಗಳ ಕಡೆ ಮೊದಲು ಗಮನ ಹರಿಸಲು ಹೇಳಿದರು.

ಅದು ಬಿಟ್ಟು ಪೆಸಿಎಂ  ಸ್ಟಿಕರ್ ಹಚ್ಚುವುದು, ಎಂಪಿ ಕಾಣೆಯಾಗಿದ್ದಾರೆ ಅಂತ ಹೇಳುವುದು ನಿಮ್ಮದು ಸರಿಯಾದ ಉತ್ತರ ನಾವು ನಿಮ್ಮ ವಿರುದ್ಧ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಹಚ್ಚಿದ್ದು ತಪ್ಪೇ ಎಂದು ಪ್ರಶ್ನಿಶಿಸಿದರು.

ನಾನು ಸವಾಲ್ ಹಾಕುತ್ತೇನೆ ತಾಕತ್ತು, ದಮ್ಮು ಇದ್ದರೆ ಅದೇನು ಮಾಡುತ್ತೀರಾ ಮಾಡಿಕೊಳ್ಳಿ. ನಾವು ಇದೇ ಕ್ಷೇತ್ರದಲ್ಲಿ ವಾಸವಾಗಿದ್ದೇವೆ ನಮ್ಮ ಕಾರ್ಯಕರ್ತರ ಜೊತೆಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ನಮ್ಮ ಕಾರ್ಯಕರ್ತರು ನಮ್ಮ ಶಕ್ತಿ ನಮ್ಮ ಆಸ್ತಿ. ನಮ್ಮ ಮಾನ. ಪ್ರಾಣ ನಮ್ಮ ಕಾರ್ಯಕರ್ತರಿಗೋಸ್ಕರ ಮತ್ತು ಈ ಕ್ಷೇತ್ರದ ಮತದಾರರ ಗೋಸ್ಕರ ನಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡುತ್ತೇವೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚಿಸಲು ಸವಾಲ್.

ಚಿತ್ತಾಪುರ: ಸದನದಲ್ಲಿ ನಿಂತು ಸರ್ಕಾರಕ್ಕೆ ಸವಾಲೆಸೆದು ಚರ್ಚೆ ಮಾಡುವ ಶಾಸಕ ಪ್ರಿಯಾಂಕ್ ಅವರ ಬದಲಾಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರೆ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಲು ಸಾಕು. ಮೊದಲು ನಮ್ಮೊಂದಿಗೆ ಚರ್ಚಿಸಿ ಗೆದ್ದು ತೋರಿಸಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರ ಭೀಣಿ ಅವರು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ.

ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಪಕ್ಷದ ಅರವಿಂದ ಚವಾಣ್ ಅವರು ಚರ್ಚೆಗೆ ರೆಡಿ ಇದ್ದೇವೆ ಎಂದು ಹೇಳಿಕೊಂಡು ಶಾಸಕರ ಚರ್ಚೆಯ ಪಂಥಾಹ್ವಾನ ಸ್ವೀಕರಿಸಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಅವರೊಂದಿಗೆ ಚರ್ಚೆ ನಡೆಸುವ ಸಾಮರ್ಥ್ಯ, ಪ್ರಬುದ್ಧತೆ ಇಲ್ಲದ ನಿಮ್ಮ ಚರ್ಚೆಯ ಪ್ರಶ್ನೆಗೆ ಸಾಮಾನ್ಯ ಕಾರ್ಯಕರ್ತರಾದ ನಾವೆ ಉತ್ತರಿಸುತ್ತೇವೆ. ನಾವು ಕೇಳುವ ಪ್ರಶ್ನೆಗೆ ನೀವು ಉತ್ತರಿಸಿ. ನಮ್ಮನ್ನು ಸೋಲಿಸಿ ಗೆದ್ದು ತೊರಿಸಿ. ನಂತರ ನಾವೇ ಶಾಸಕರನ್ನೆ ರೆಡಿ ಮಾಡುತ್ತೇವೆ ಎಂದು ಅವರು  ಆಹ್ವಾನಿಸಿದ್ದಾರೆ.

ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಅವರು ಶಾಸಕರಾದ ನಂತರ ಮಾಡಿರುವ ಅಭಿವೃದ್ಧಿಯನ್ನು ನಮ್ಮ ಚರ್ಚೆಯಿಂದ ತಿಳಿದುಕೊಳ್ಳಿ. ಸಚಿವರಾಗಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ, ಮಾಡಿರುವ ಅಭಿವೃದ್ಧಿಯ ಸಾಧನೆ ಅರಿವು ಮೂಡಿಸುತ್ತೇವೆ. ನಿಮ್ಮ ಬಿಜೆಪಿ ಸರ್ಕಾರದ ಸಾಧನೆ,  ಕಲ್ಯಾಣ ಕರ್ನಾಟಕಕ್ಕೆ ನೀಡಿದ ಕೊಡುಗೆ, ಕಲಬುರಗಿ ಸಂಸದರು ಮಾಡಿರುವ ಕೆಲಸಗಳ, ಕ್ಷೇತ್ರಕ್ಕೆ ನೀವು ಮಾಡಿದ ಕೆಲಸಗಳ ಬಗ್ಗೆ ದಾಖಲೆ ಸಹಿತ ಬನ್ನಿ. ನಾವು ದಾಖಲೆ ಸಹಿತ ಬರುತ್ತೇವೆ ಚರ್ಚಿಸೋಣ ಎಂದು ಅವರು ಹೇಳಿದ್ದಾರೆ.

ಪ್ರಿಯಾಂಕ್ ಅವರೊಂದಿಗೆ ಚರ್ಚೆ ನಡೆಸುವ ಆಸಕ್ತಿಯಿದ್ದರೆ ಅರವಿಂದ ಮತ್ತು ಮಣಿಕಂಠ ಅವರು, ಬಿಜೆಪಿ ಸಂಸದ ಡಾ.ಉಮೇಶ ಜಾಧವ, ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರನ್ನೆ ರೆಡಿ ಮಾಡಿಸಿ. ಕಲಬುರಗಿ ನಗರದಲ್ಲೆ ಚರ್ಚೆ ನಡೆಯಲಿ. ರಾಜ್ಯದ ಜನತೆಗೆ ಗೊತ್ತಾಗಲಿ ಚರ್ಚೆಯ ಸಂಪೂರ್ಣ ವಿಷಯ. ಇದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿದ್ದರಿದ್ದಾರೆ ಎಂದರು.

ಸೋಮವಾರ, ನವೆಂಬರ್ 14, 2022

ನಮ್ಮ ಸರ್ಕಾರ ರೈತರ ಪರ ಸರ್ಕಾರ: ಬೊಮ್ಮಾಯಿ.

ಕಲಬುರಗಿ: ನಮ್ಮ ಸರ್ಕಾರ ರೈತರ ಪರ ಸರ್ಕಾರವಾಗಿದ್ದು, ರೈತರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ನುಡಿದರು.

ಸೋಮವಾರ ಸೇಡಂ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು ಹಾಗೂ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮತ ನೇತೃತ್ವದಲ್ಲಿ  ಅಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು ರೈತರ ಮಕ್ಕಳಿಗೆ ನೀಡುವ ವಿದ್ಯಾನಿಧಿ ಯೋಜನೆ ಮಹತ್ವದ್ದು. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 4 ಗಂಟೆಯಲ್ಲಿ ಜಾರಿಗೆ ತಂದೆನು ಎಂದು ಹೇಳಿದ ಅವರು ವಿದ್ಯಾನಿಧಿಯಿಂದ ರೈತರ ಮಕ್ಕಳು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ರಾಜ್ಯದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. 45 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್ ಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಮೂಲಕ ಎಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ತಲುಪಲಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ  ಸಹಕಾರ ರಂಗ ಇತರ ರಂಗಗಳಿಗಿಂತ ಮಂಚೂಣಿಯಲ್ಲಿರಬೇಕು. ಅದು ಸರ್ವ ಸ್ಪರ್ಶಿ-ಸರ್ವ ವ್ಯಾಪಿಯಾಗಬೇಕು ಎಂದು ಅವರು ಆಶಿಸಿದರು.

ಯಶಸ್ವಿನಿ ಯೋಜನೆ ಬಡವರಿಗೆ ಅನುಕೂಲಕರ ಯೋಜನೆಯಾಗಿದ್ದು, ಮತ್ತೆ ಈ ಯೋಜನೆ ಜಾರಿ ಮಾಡಬೇಕೆಂದು ಬಡಜನತೆ ಒತ್ತಾಯಿಸಿದ್ದರಿಂದ ರಾಜ್ಯ ಬಜೆಟ್‍ನಲ್ಲಿ 300 ಕೋಟಿ ರೂಪಾಯಿ ಮೀಸರಿಸಲಾಗಿದೆ. ಬಡವರಿಗೆ ಹೃದ್ರೋಗ, ಕಿಡ್ನಿ, ಕರಳು ಬೇನೆ, ಕ್ಯಾನ್ಸರ್ ಮುಂತಾದ ರೋಗಗಳಿಗೆ ಆಸ್ಪತ್ರೆಗಳಲ್ಲಿ ನೇರವಾಗಿ ಚಿಕಿತ್ಸೆ ದೊರೆಯಲಿದೆ ಎಂದು ಯಶಸ್ವಿನಿ ಯೋಜನೆಯ ಮಹತ್ವ ಹೇಳಿದರು.
 
ಮುಚ್ಚುವ ಸ್ಥಿತಿಯಲ್ಲಿದ್ದ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕನ್ನು ಮೇಲೆತ್ತಿ 1012 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಸುಸ್ಥಿತಿಗೆ ತಂದಿದ್ದಾರೆ ಎಂದು ಹೇಳುವ ಮೂಲಕ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರನ್ನು ಮುಖ್ಯಮಂತ್ರಿಗಳು ಹಾಡಿಹೊಗಳಿದರು.

  ಕಾಗಿಣಾ ಏತ ನೀರಾವರಿ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು, ಸದ್ಯದಲ್ಲೇ ನಾನೇ ಈ ಯೋಜನೆಗೆ ಚಾಲನೆ ನೀಡಲಿದ್ದೇನೆ ಎಂದು ಅವರು ಹೇಳಿದರು.

ಸಹಕಾರ ತತ್ವದ ಏಳು ತತ್ವಗಳನ್ನು ಸಾರುವ ಏಳು ಬಣ್ಣಗಳ ಒಳಗೊಂಡ ಸಹಕಾರ ಧ್ವಜಾರೋಹಣ ನೆರವೇರಿಸಿದ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ನಬಾರ್ಡ್‍ಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು. ಸಹಕಾರ ರಂಗ ಬಲವರ್ಧನೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಕಾರ ಖಾತೆಯನ್ನು ಸೃಷ್ಠಿಸಿದ್ದು, ಇದರ ಹೊಣೆಯನ್ನು ಅಮಿತ್ ಶಾ ಅವರು ಹೊತ್ತಿದ್ದಾರೆ ಎಂದು ಗುಣಗಾನ ಮಾಡಿದರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಾತನಾಡಿ, ಸಹಕಾರ ರಂಗದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಕರ್ನಾಟಕ ಸರ್ಕಾರ ಈಗ ಮುಂಚೂಣಿಗೆ ಬರುತ್ತಿದೆ ಎಂದು ಹೇಳಿದರು. 

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಮಾತನಾಡಿ ನವೆಂಬರ್ 14ರಿಂದ 20 ವರೆಗೆ ಸಹಕಾರ ಸಪ್ತಾಹ ಆಚರಿಸುವ ಮೂಲಕ ಗುರಿ-ಧ್ಯೇಯೋದ್ದೇಶಗಳ ಸಾಧಿಸಲಾಗುವುದು ಎಂದರು. ಇದೇ ಮೊದಲ ಬಾರಿಗೆ ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳು ಲಾಭದಲ್ಲಿವೆ ಎಂದು ಹೆಮ್ಮೆಪಟ್ಟುಕೊಂಡರು. ಸಹಕಾರಿ ಸಪ್ತಾಹದಲ್ಲಿ ಇಷ್ಟೊಂದು ಜನ ಎಲ್ಲೂ ಸೇರಿಸರಲಿಲ್ಲ. ಆದರೆ ಸೇಡಂದಲ್ಲಿ ನಿರೀಕ್ಷೆ ಮೀರಿ ಜನ ಸೇರಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್ ಅನ್ನು ಸುಸ್ಥಿಗೆ ತರುವ ಮೂಲಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರು ಕ್ರಾಂತಿ ಮಾಡಿದ್ದಾರೆ. ಎಲ್ಲಾ ವರ್ಗದವರಿಗೂ ಸಾಲ ಸಿಗುವ ಪ್ರಯತ್ನ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.  

  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗೂ ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ) ಕೂಡ ತೇಲ್ಕೂರ ಸೇವೆಯನ್ನು ಕೊಂಡಾಡಿದರು. ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆಯಲು ಶ್ರಮಿಸಿದ ಬ್ಯಾಂಕಿನ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. 
ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾತನಾಡಿ, ಮಂತ್ರಿಯಾಗಿದ್ದರೂ ಇಷ್ಟು ಖುಷಿ ದೊರಕುತ್ತಿರಲಿಲ್ಲ. ಆದರೆ ಮುಚ್ಚುವ ಸ್ಥಿತಿಗೆ ತಲುಪಿದ್ದ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಪುನ:ಶ್ಚೇತನಗೊಳಿಸಿ ರೈತರಿಗೆ ಮತ್ತೆ ಸಾಲ ವಿತರಣೆ ಮಾಡಿರುವುದು ಹೆಚ್ಚಿನ ಖುಷಿ ಕೊಟ್ಟಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜಕುಮಾರ್ ಪಾಟೀಲ್ ತೇಲ್ಕೂರ ಸೇರಿದಂತೆ 13 ಮಂದಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಲಬುರಗಿ ತರಬೇತಿ ಸಂಸ್ಥೆಯ ವಸತಿ ನಿಲಯದ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಿರು. 

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ  ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ,  ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ,  ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ (ಚಂದು ಪಾಟೀಲ), ವಿಧಾನಸಭೆ ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ,  ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ,  ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ್,  ಸಹಕಾರ ಸಂಘಗಳ ನಿಬಂಧಕ ಡಾ. ಕ್ಯಾಪ್ಟನ್ ಕೆ. ರಾಜೇಂದ್ರ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ ಡಾ. ಗಿರೀಶ ಡಿ. ಬದೋಲೆ, ಸೇಡಂ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಡಿಸಿಸಿ ಬ್ಯಾಂಕ್ ಹಾಗೂ ವಿವಿಧ ಸಹಕಾರ ಸಂಘಗಳ ನಿರ್ದೇಶಕರು, ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.

ಭಾನುವಾರ, ನವೆಂಬರ್ 13, 2022

ಬರವಣಿಗೆಗಳು ಸದಾ ಕಾಲ ಪ್ರಸ್ತುತ : ಗುತ್ತೇದಾರ.

ಚಿತ್ತಾಪೂರ: ರವಿ ಬೆಳಗೆರೆ ಅವರ ಕಾಲವಾದರೂ ಕೂಡಾ ಅವರ ಬರವಣಿಗೆಗಳು ಸದಾ ಕಾಲ ಪ್ರಸ್ತುತವಾಗಿವೆ ಎಂದು ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ರವಿ ಬೆಳಗೆರೆ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ರಂಗದ ಭೀಷ್ಮ ದಿ.ರವಿ ಬೆಳಗೆರೆ ರವರ ದ್ವಿತೀಯ ಪುಣ್ಯ ಸ್ಮರಣೆ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಶ್ರಮಜೀವಿಗಳಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು ಅಸಂಖ್ಯಾತ ಕನ್ನಡಿಗರ ಮನದಲ್ಲಿ ಅಕ್ಷರದ ಮೂಲಕವೇ ರೋಮಾಂಚನ ಮೂಡಿಸಿದ ಪ್ರತಿಭೆಯಾಗಿದ್ದಾರೆ ಎಂದರು.
ರವಿ ಬೆಳಗೆರೆ ಅಭಿಮಾನಿಗಳ ಸಂಘದ ಅಧ್ಯಕ್ಷ ರವಿ ಇವಣಿ ಮಾತನಾಡಿ ರವಿ ಬೆಳಗೆರೆಯಂಥ ಮತ್ತೊಬ್ಬ ಶ್ರಮಿಕ ಪತ್ರಕರ್ತ, ಅಕ್ಷರ ಯೋಗಿ ಹುಟ್ಟಿಬರಲು ಸಾಧ್ಯವಿಲ್ಲ. ಕನ್ನಡ ಪತ್ರಿಕಾರಂಗ ಕಂಡ ಅತ್ಯಂತ ವರ್ಚಸ್ವಿ, ಡೈನಾಮಿಕ್ ಮತ್ತು ಮಾನವೀಯ ಸಂವೇದಿ ಪತ್ರಕರ್ತ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ರವಿ ಬೆಳಗೆರೆ ಕೈಯಾಡಿಸದ ರಂಗವೂ ಇಲ್ಲ. ಉಪನ್ಯಾಸಕನಾಗಿ, ಪತ್ರಿಕೋದ್ಯಮಿಯಾಗಿ, ಬರಹಗಾರನಾಗಿ, ವಿಶೇಷ ಕಾರ್ಯಕ್ರಮಗಳ ನಿರೂಪಕನಾಗಿ, ಧಾರಾವಾಹಿ ನಿರ್ಮಾಪಕನಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ವ್ಯಕ್ತಿಯಾಗಿ ರವಿ ಬೆಳಗೆರೆಯಂತೆ ಆವರಿಸಿಕೊಂಡ ವ್ಯಕ್ತಿಯನ್ನು ಹುಡುಕುವುದು ಕಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ ನರಬೋಳಿ, ಕರವೇ ಜಿಲ್ಲಾಧ್ಯಕ್ಷ ಮಹೇಶ ಕಾಶಿ, ಪತ್ರಕರ್ತ ಕಾಶಿನಾಥ ಗುತ್ತೇದಾರ್, ರವೀಂದ್ರ ಸಜ್ಜನಶೆಟ್ಟಿ, ಕೋಟೇಶ್ವರ ರೇಷ್ಮೆ, ಬಾಬು ಕಾಶಿ, ನಾಗರಾಜ ಗುಂಡಗುರ್ತಿ, ಬಸವರಾಜ ಮಡಿವಾಳ, ಶರಣು ಯಾಧವ್, ನಾಗಣ್ಣ ಹಡಪದ ಸಾತನೂರ, ಮಹ್ಮದ ಯುನುಸ್, ಪ್ರಭು ಗಂಗಾಣಿ, ಪತ್ರಕರ್ತರಾದ ರವಿಶಂಕರ ಬುರ್ಲಿ, ಎಂ.ಡಿ ಮಶಾಖ್, ಜಗದೇವ ಕುಂಬಾರ, ಸಂತೋಷ ಕಟ್ಟಿಮನಿ, ಅನಂದ ರೆಡ್ಡಿ, ಪೃಥ್ವಿರಾಜ ಸಾಗರ, ಸೇರಿದಂತೆ ಇತರರು ಇದ್ದರು.

ಶುಕ್ರವಾರ, ನವೆಂಬರ್ 11, 2022

ಕನಕದಾಸರ ಆದರ್ಶ ಮೈಗೂಡಿಸಿಕೊಳ್ಳಿ : ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ಭಕ್ತ ಕನಕದಾಸರ ಬಗ್ಗೆ ಎಲ್ಲರೂ ಆಳವಾಗಿ ತಿಳಿದುಕೊಂಡು‌ ಅವರ ಮಾರ್ಗವನ್ನು ಅನುಸರಿಸುವುದರ ಜೊತೆಗೆ ಯುವಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ತಾಲೂಕ ಆಡಳಿತ ವತಿಯಿಂದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಾಸ ಶ್ರೇಷ್ಠ ಕನಕದಾಸರ ಹಾಗೂ ವೀರರಾಣಿ ಒನಕೆ‌ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದಾರ್ಶನಿಕರ, ಶರಣರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಿದ್ದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕರು, ಕನಕದಾಸರಂತ ದಾಸಶ್ರೇಷ್ಠ ರಂತವರು ಎಲ್ಲ ಜಾತಿ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕ‌ ಅಸಮಾನತೆಯನ್ನು ಅಂದಿನ‌ ಕಾಲದಲ್ಲೇ ಕನಕದಾಸರು ಟೀಕಿಸಿದ್ದರು. ಅದರ ವಿರುದ್ದ ಹೋರಾಟ ನಡೆಸಿದರು. ಆದರೆ ಈಗಲೂ ಅಸಮಾನತೆ ಇದೆ ಎಂದು‌ ವಿಷಾದಿಸಿದರು.

ಸರ್ಕಾರ ಯಾವುದೇ ಇರಲಿ ಎಲ್ಲರೂ ಒಂದಾಗಿ ಯೋಜನೆಗೆಳ ಫಲ ಪಡೆಯಬೇಕು ಎಂದು ಕರೆ‌ ನೀಡಿದ ಶಾಸಕರು, ಬಿಜೆಪಿ ಸರ್ಕಾರ ಇತ್ತೀಚಿಗೆ ಕಲಬುರಗಿಯಲ್ಲಿ ಹಿಂದುಳಿದ ವರ್ಗದ ಸಮಾವೇಶ ನಡೆಸಲಾಯಿತು. ಆದರೆ ಕೇವಲ ಸಮಾವೇಶ ನಡೆಸುವುದರಿಂದ ಹಿಂದುಳಿದವರ ಆರ್ಥಿಕ‌ ಸಬಲತೆಗೆ ಸಹಕಾರಿಯಾಗದು. ಹಾಗಾಗಬೇಕಾದರೆ ಸರ್ಕಾರದ‌ ಎಲ್ಲ ಯೋಜನೆಗಳು ಕಡ್ಡಾಯವಾಗಿ ಆ ಭಾಗದ ಜನರಿಗೆ ತಲುಪಬೇಕು ಎಂದರು.
ಕೋಲಿ ಹಾಗೂ ಕುರುಬರಿಗೆ ಎಸ್ಟಿಗೆ ಸೇರಿಸಲು ಹೋರಾಟ ನಡೆಯುತ್ತಲೇ ಇದೆ. ಆದರೂ ಪ್ರಯೋಜನವಾಗಿಲ್ಲ. ಸುಳ್ಳು ಹೇಳಿ ದಾರಿ ತಪ್ಪಿಸಿದ ಕೆಲವರು ಇದೂವರೆಗೆ ಯಾವುದೇ ಪ್ರಯತ್ನ ಪಡಲಿಲ್ಲ ಎಂದು ಇತ್ತೀಚೆಗೆ ನಾನು ಕೇಂದ್ರ ಸಚಿವ ಮುಂಡಾ ಅವರನ್ನು ಭೇಟಿ ಮಾಡಿದಾಗ ತಿಳಿದುಬಂತು ಎಂದರು.
ಹಿಂದುಳಿದ ವರ್ಗದವರು ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದು ಕರೆ ನೀಡಿದ ಶಾಸಕರು, ಶಿಕ್ಷಣದಿಂದ ಮಾತ್ರ ಆರ್ಥಿಕ‌ ಸಮಾನತೆ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಬಸವಣ್ಣನವರ ಅರಿವೇ ಗುರು ಎನ್ನುವ ಮಾತಿನಂತೆ ನಡೆದುಕೊಳ್ಳಬೇಕು.‌ಇಂದಿನ ಯವಕರು ಓದಬೇಕು ಇತಿಹಾಸ ತಿಳಿದುಕೊಳ್ಳಬೇಕು ಅಂದಾಗಲೇ ಮಾತ್ರ ಮೌಲ್ಯಯುತ ಸಮಾಜ ನಿರ್ಮಾಣ ಎಂದು ಕರೆ‌ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಸಂತೋಷ ಪೂಜಾರಿ ಪ್ರಾಸ್ತಾವಿಕ ಮಾತನಾಡಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕನಕ ವೃತ್ತಗಳ ನಿರ್ಮಾಣ ಮಾಡಿಸಿದ್ದಾರೆ ಅಷ್ಟೇ ಅಲ್ಲದೇ ನಮ್ಮ ಸಮಾಜದ ಮೇಲೆ ಅಪಾರವಾದ ಕಾಳಜಿ ಹೊಂದಿದ್ದಾರೆ ಅದ್ದರಿಂದ ನಾವೂ ಅವರ ಜೊತೆ ಇರೋಣ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಮಹಾಂತೇಶ ಬಾಬಜೀ ಕನಕದಾಸರ ಆದರ್ಶವನ್ನು ನಾವೆಲ್ಲರೂ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಕುಲಕುಲ ಕುಲ ಎಂದು ಹೊಡದಾಡದಿರಿ ನೀವು ನಿಮ್ಮ ಕುಲದ‌ ನೆಲೆಯನ್ನು ಬಲ್ಲಿರಾ!! ಎಂದು ಅಂದಿನ‌ ಕಾಲದ ಜಾತಿ ವ್ಯವಸ್ಥೆಯ ವಿರುದ್ದ ತಮ್ಮ ಕೀರ್ತನೆ ಮೂಲಕ ಚಾಟಿ ಬೀಸಿದ್ದರು ಎಂದರು.

ಕನಕದಾಸರಿಗೆ ವಿಜಯನಗರ ಸಾಮ್ರಾಜ್ಯದ ರಕ್ತಪಾತ ನೋಡಿ ಬೇಸರ ವ್ಯಕ್ತಪಡಿಸಿದ್ದರು. ಯುದ್ದ ನೋಡಿ ವೈರಾಗ್ಯ ಉಂಟಾಗಿ ಮುಂದೊಂದು ದಿನ ಕನಕದಾಸರಾಗಿ ಅವರು ಹೆಸರು ಮಾಡಿದರು. ಅವರ ಕೀರ್ತನೆಗಳ ಜೊತೆಗೆ ರಾಮಧಾನ್ಯ ಚರಿತೆ, ಮೋಹಿನಿ ತರಂಗಣಿ,ನಳ ಚರಿತ್ರೆ ಸೇರಿದಂತೆ ಹಲವಾರು ಕಾವ್ಯಗಳನ್ನು ರಚಿಸಿದ್ದರು ಎಂದು ದಾಸ ಶ್ರೇಷ್ಠರನ್ನು ನೆನೆದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಉಪಾಧ್ಯಕ್ಷ ಶ್ರೀಮತಿ ಶೃತಿ ಪೂಜಾರಿ, ಆನಂದ ಪಾಟೀಲ ನರಿಬೋಳ, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಪೂಜಾರಿ, ಭೀಮಣ್ಣ ಸಾಲಿ, ಮಾಜಿ ಜಿಪಂ ಅಧ್ಯಕ್ಷ ರಮೇಶ ಮರಗೋಳ,  ತಹಸೀಲ್ದಾರ್  ಉಮಾಕಾಂತ ಹಳ್ಳೆ, ತಾಪಂ ಇಓ ನೀಲಗಂಗಾ ಬಬಲಾದ,  ಸಿಪಿಐ ಪ್ರಕಾಶ ಯಾತನೂರ, ಪ್ರಭು ಗಂಗಾಣಿ, ಸೇರಿದಂತೆ ಮತ್ತಿತರಿದ್ದರು.

ಗುರುವಾರ, ನವೆಂಬರ್ 10, 2022

ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಗುಂಡಾವರ್ತನೆ: ಅರವಿಂದ್ ಚವ್ಹಾಣ್.

ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿದ್ದೇನೆ ಅದರಲ್ಲಿ ವೈಯಕ್ತಿಕ ಟೀಕೆ ಆಗಲಿ ಅಥವಾ ಅವರ ಬಗ್ಗೆ ಹವ್ಯಾಚ್ಯ ಶಬ್ದಗಳ ಬಳಕೆ ಮಾಡಿಲ್ಲ. ಆದರೆ ಶಾಸಕ ಪ್ರಿಯಾಂಕ ಖರ್ಗೆ ಅವರ ಬೆಂಬಲಿಗರಿಂದ ನನ್ನ ಮೇಲೆ ಮರಣಾಂತಿಕ ಹಲ್ಲೆ ಮಾಡುವ ಮೂಲಕ ಗುಂಡಾವರ್ತನೆ ಮಾಡಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ  ಅರವಿಂದ ಚವ್ಹಾಣ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಇಟಗಾ ಗ್ರಾಮದ ರೈತರು ಧರಣಿ ಕುಳಿತು 80 ದಿನಗಳಾದರೂ ಶಾಸಕರು ಭೇಟಿ ನೀಡಿಲ್ಲ. ಕೆಲ ದಿನಗಳ ಹಿಂದೆ ಶಂಕರ್ ವಾಡಿ ಬ್ರಿಜ್ ಹತ್ತಿರ ಸರ್ಕಾರಿ ಬಸ್ ಪಲ್ಟಿ ಪಲ್ಟಿಯಾಗಿ ಸುಮಾರು ಜನ ಆಸ್ಪತ್ರೆ ಸೇರಿದರು ಆಗ ಕ್ಷೇತ್ರದ ಶಾಸಕರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಲಿಲ್ಲ. ಹಾಗೂ ಇನ್ನೂ ಅನೇಕ ಸಮಸ್ಯೆಗಳು ಕ್ಷೇತ್ರದಲ್ಲಿ ಇದ್ದು. ಇಂತಹ ಸಮಸ್ಯೆಗಳು ಜನಸಾಮಾನ್ಯರು ಕೇಳುವುದಾದರೂ ಯಾರಿಗೆ  ಅವರ ಬೆಂಬಲಿಗರು ಬೆಂಗಳೂರಿಗೆ ಹೋಗಿ ತಮ್ಮ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ. ಆದರೆ ಕ್ಷೇತ್ರದ ಜನಸಾಮಾನ್ಯ ಜನರು ಬೆಂಗಳೂರಿಗೆ ಹೋಗಲು ಆಗದೆ ತಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು ಎಂದು ಸುಮ್ಮನೆ ಕುಳಿತುಕೊಳ್ಳುತ್ತಿದ್ದಾರೆ.

ತಾವು "ಪೇ ಸಿಎಂ" ಎಂದು ಪೋಸ್ಟರ್ ಅಂಟಿಸಿಲ್ಲವೇ ?
ಹೀಗಿರುವಾಗ ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಅವರನ್ನು ಹುಡುಕಿ ಕ್ಷೇತ್ರಕ್ಕೆ ಕಳುಹಿಸಿ ಎಂದು ಪ್ರಕಟಣೆ ನೀಡಿದ್ದು ತಪ್ಪೇ ಎಂದು ಪ್ರಶ್ನಿಸಿದರು.

ತಮ್ಮ ಬೆಂಬಲಿಗರು, ರೌಡಿ ಶೀಟರ್ ಗಳು ನನ್ನ ಮೇಲೆ ಮರಣಾಂತಿಕ ಹಲ್ಲೆ ಮಾಡುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಪಿಎಸ್ಐ ಸಮ್ಮುಖದಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ನಮ್ಮ 40 ಜನರ ಮೇಲೆ ಕಾಂಗ್ರೆಸ್ನವರು ಜಾತಿ ನಿಂದನೆ ಕೇಸ್ ಹಾಕಿದ್ದಾರೆ. ಆದರೆ ಆ 40 ಜನರಲ್ಲಿ ಸ್ಥಳದಲ್ಲಿ ಇರದ ಹಾಗೂ ಆಸ್ಪತ್ರೆಯಲ್ಲಿದ್ದವರ ಮೇಲೆ ಕೇಸ್ ಮಾಡಲಾಗಿದೆ ಇದು ನ್ಯಾಯವೇ ಎಂದರು.

ನಿಮ್ಮ ಗುಂಡಾ ವರ್ತನೆಗೆ ನಾವು ಹೆದರುವುದಿಲ್ಲ. ಈಗ ಕ್ಷೇತ್ರದಲ್ಲಿ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿದ್ದೇವೆ. ಇನ್ನು ಮುಂದೆ ಕ್ಷೇತ್ರದ ಪ್ರತಿ ಬೂತ್ ಗಳಲ್ಲಿ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸುತ್ತೇವೆ ಏನು ಮಾಡುತ್ತೀರಿ ಮಾಡಿಕೊಳ್ಳಿ ಎಂದು ಸವಾಲ್ ಹಾಕಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಉಸ್ತುವಾರಿ ಶಶಿಧರ್ ಸೂಗೂರು, ತಾಲೂಕ್ ಅಧ್ಯಕ್ಷ ನೀಲಕಂಠರಾವ್ ಪಾಟೀಲ್, ನಗರಾಧ್ಯಕ್ಷ ಮಲ್ಲಿಕಾರ್ಜುನ್ ಪೂಜಾರಿ, ಶ್ರೀಮತಿ ಕವಿತಾ ಚವ್ಹಾಣ್, ಶರಣಪ್ಪ ನಾಟಿಕರ್, ಭೀಮಣ್ಣ ಸೀಭಾ, ಶಿವರಾಮ್ ಪವಾರ್, ಮಹೇಶ್ ಬಟಗೇರಿ, ಮೇಘರಾಜ್ ಗುತ್ತೇದಾರ್, ಸೇರಿದಂತೆ ಇತರರಿದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...