ಚಿತ್ತಾಪುರ: ಪಟ್ಟಣದ ಪ್ರಮುಖ ಕೇಂದ್ರವಾದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಸಮಾಜ ಸೇವಕ ಪೃಥ್ವಿರಾಜ್ ಸಾಗರ ಅಭಿಮಾನಿಗಳ ಬಳಗದ ವತಿಯಿಂದ ಸತತ 6ನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಿಎಲ್ ಡಿ ಬ್ಯಾಂಕ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭಿಮಣ್ಣ ಸಾಲಿ ಅವರು, "ಬಾಬಾ ಸಾಹೇಬರ ಜಯಂತೋತ್ಸವವು ತಾಲೂಕಿನಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗುತ್ತಿದೆ. ಜೀವನದಲ್ಲಿ ಅನ್ನದಾನಕ್ಕಿಂತ ರಕ್ತದಾನವು ಅತ್ಯಂತ ಶ್ರೇಷ್ಠವಾದುದು. ತುರ್ತು ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ಪೃಥ್ವಿರಾಜ್ ಸಾಗರ ಅಭಿಮಾನಿ ಬಳಗವು ಸತತವಾಗಿ ಇಂತಹ ಜನಪದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸಭೆಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಕಾಶಿ ಅವರು ಮಾತನಾಡಿ, ಯುವ ಸಮೂಹವು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ರಕ್ತದಾನ ಶಿಬಿರ ಆಯೋಜಿಸಿದವರನ್ನು ಕೊಂಡಾಡಿದರು.
ಶಿಬಿರದಲ್ಲಿ ಒಟ್ಟು 22 ಜನ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಲಾದ ರಕ್ತವನ್ನು ಕಲಬುರ್ಗಿ ಜಿಲ್ಲಾ ಜೇಮ್ಸ್ (GIMS) ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಾದ ಡಾ. ಪೂಜಾ, ಸುಜ್ಞಾನಿ ಪಾಟೀಲ್, ಯಲ್ಲಪ್ಪ ವಾರಿ ಹಾಗೂ ತಂಡದವರು ರಕ್ತ ಸಂಗ್ರಹಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಅಣದೂರ ಬುದ್ಧ ವಿಹಾರದ ಮಾತಾಜಿ ಅರ್ಚಸ್ಮತಿ,ತಹಸೀಲ್ದಾರ್ ನಾಗಯ್ಯ ಹೀರೆಮಠ, ಗ್ರೇಡ್-2 ತಹಸಿಲ್ದಾರ್ ರಾಜಕುಮಾರ್ ಮರತೂರ, ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್ ಗುರಿಕಾರ್, ಪುರಸಭೆ ಮುಖ್ಯ ಅಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸಿಪಿಐ ಎಸ್.ಸಿ. ಪಾಟೀಲ್, ಪಿಎಸ್ಐ ಮಂಜುನಾಥ ರೆಡ್ಡಿ, ತಾಪಂ ಇಓ ಮಹಮ್ಮದ್ ಅಕ್ರಂ ಪಾಶಾ, ಅರಣ್ಯ ಅಧಿಕಾರಿ ವಿಜಯಕುಮಾರ್ ಬಡಿಗೇರ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಅಂಬೇಡ್ಕರ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಬೆಣ್ಣೂರಕರ್, ಶಿವಕಾಂತ ಬೆಣ್ಣೂರಕರ್, ಮಲ್ಲಿಕಾರ್ಜುನ ಕಾಳಗಿ, ಜಗದೀಶ್ ಚವ್ಹಾಣ್, ಗೂಪಸೇನ್ ರೆಡ್ಡಿ, ದೇವಿಂದ್ರಪ್ಪ ಅಣಕಲ್, ಉದಯಕುಮಾರ್ ಸಾಗರ್, ಶ್ರೀಕಾಂತ್ ಶಿಂಧೆ, ಮಲ್ಲಿಕಾರ್ಜುನ್ ಮುಡಬೂಳಕರ್, ಜಗನ್ನಾಥ ಮುಡಬೂಳಕರ್, ನಾಗೇಶ್ ಹಲಗಿ, ಸುರಾಜ್ ಕಲ್ಲಕ, ರಾಜು ಬುಳಕರ್, ಶರಣು ತಲಾಟಿ, ವಿಕಾಸ್ ಮತ್ತಿಮೂಡ, ಸಾಗರ ಚಿಟ್ಟೆಕರ್, ಕಾರ್ತಿಕ್ ಕಲ್ಲಾಕ್, ನಾಗಾರ್ಜುನ ಮೂಡಬುಳ್ಕರ್, ನಿತಿನ್, ಮಲ್ಲಿಕಾರ್ಜುನ್ ಕಲ್ಮೇರಿ, ಉಸನಪ್ಪ, ಸಂದೀಪ್ ಗಾಯಕ್ವಾಡ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ