ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂಕನೂರ, ಕೆಸರು ಗದ್ದೆಯಾದ ರಸ್ತೆ: ಜನ ಸಂಚಾರ ಅಸ್ತವ್ಯಸ್ತ.

ಇಮೇಜ್
ಸಂಕನೂರ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಕೆಸರು ಗದ್ದೆಯಾದ ರಸ್ತೆಯ ಚಿತ್ರಣ. ಚಿತ್ತಾಪುರ: ಅಳ್ಳೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನೂರ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರದ ಮುಂದಿನ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು, ಜನಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಗ್ರಾಮದ ಮುಖ್ಯರಸ್ತೆಯಾಗಿದ್ದು. ಈ ರಸ್ತೆಯಲ್ಲಿ ಸಾಕಷ್ಟು ಜನರು ಶಾಲಾ ವಿದ್ಯಾರ್ಥಿಗಳು, ನಡೆದಾಡುತ್ತಾರೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಈ ರಸ್ತೆ ದುರಸ್ತೇಗೆ ಮನವಿ ಮಾಡಿದ್ರು ಪ್ರಯೋಜನವಾಗುತ್ತಿಲ್ಲ . ಈಗಾಗಲೇ ಈ ರಸ್ತೆಯಿಂದಾಗಿ ಬೈಕ್ ಸವಾರರಿಗೆ ಸಾಕಷ್ಟು ಸಣ್ಣ-ಪುಟ್ಟ ಅನಾಹುತಗಳು ಆಗಿದ್ದು. ಶಾಲಾ ವಿದ್ಯಾರ್ಥಿಗಳು ಬಿದ್ದು ಸಮವಸ್ತ್ರ ಗಲೀಜು ಮಾಡಿಕೊಂಡ ಸಂದರ್ಭಗಳು ಇವೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಯನ್ನು ಕೈಯೆತ್ತಿಕೊಂಡು ಕೆಸರುಗದ್ದೆಯಾದ ರಸ್ತೆಯನ್ನು ಒಳ್ಳೆಯ ರಸ್ತೆಯನ್ನಾಗಿ ಮಾಡಿಕೊಡಬೇಕಾಗಿ ಗ್ರಾಮಸ್ಥರಾದ ಸಾಹೇಬ್ ಗೌಡ, ಮಂಜುನಾಥ್, ಮಹಾದೇವ್, ನಾಗಪ್ಪ, ಅಂಬರೀಶ್, ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ

ಇಮೇಜ್
ಪಟ್ಟಣದ ಮಾರ್ಕೆಟ್ ನಲ್ಲಿ ಬೀದಿ ನಾಯಿಗಳ ಓಡಾಟ, ಜಗಳ, ಜನರಲ್ಲಿ ಭಯದ ವಾತಾವರಣ ನಿರ್ಮಾಣ. ಚಿತ್ತಾಪುರ: ಮಾರ್ಕೆಟ್ ನಲ್ಲಿ  ಬೀದಿ ನಾಯಿಗಳದ್ದೇ ಕಾರುಬಾರು. ಪಟ್ಟಣದ ಬಹುತೇಕ ರಸ್ತೆಗಳನ್ನು ಆಕ್ರಮಿಸಿಕೊಂಡಿರುವ ಬೀದಿ ನಾಯಿಗಳಿಗೆ ರಸ್ತೆಗಳೇ ಆಶ್ರಯ ತಾಣಗಳಾಗಿವೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಮಧ್ಯೆದಲ್ಲಿಯೇ ದಿನನಿತ್ಯ ಅಡ್ಡಾಡುವ ನಾಯಿಗಳ ಹಾವಳಿಯಿಂದ ವಾಹನ ಸವಾರರು ನೆಮ್ಮದಿಯಿಂದ ವಾಹನ ಚಾಲನೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಪುರಸಭೆ ಮಾತ್ರ ಈ ವಿಷಯದಲ್ಲಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈಗಲಾದರೂ ಪುರಸಭೆ ಎಚ್ಚೆತ್ತುಕೊಂಡು ಪಟ್ಟಣದಲ್ಲಿನ ನಾಯಿಗಳ ಹಾವಳಿ ತಡೆಗಟ್ಟುವಂತೆ ಕ್ರಮವಹಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಮಾರ್ಕೆಟ್ ರಸ್ತೆಯಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕಾಗಿ ಹೋಗುವರಿಗೂ ಹಾಗೂ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಹ ವಾತಾವರಣ ನಿರ್ಮಾಣ ಆಗಿದೆ ಎನ್ನುತ್ತಾರೆ.              -ಮಂಜುನಾಥ್ ಸ್ವಾಮಿ ತಾಲೂಕಾಧ್ಯಕ್ಷ, ಕರವೇ ಕಾವಲು ಪಡೆ ಚಿತ್ತಾಪುರ. ================================== ಪಟ್ಟಣದಲ್ಲಿ ಅನೇಕ ಕಡೆಗಳಲ್ಲಿ ನಾಯಿಗಳ ಹಾವ...

ಸಾಹಿತ್ಯ ಬೆಳೆಸುವಲ್ಲಿ ಸಚಿವರ ಕೊಡುಗೆ ಅಪಾರ: ಡಾ.ಸಿದ್ದತೋಟೇಂದ್ರ.

ಇಮೇಜ್
ಚಿತ್ತಾಪೂರ: ಕ್ಷೇತ್ರದ ಶಾಸಕರು, ಸಚಿವರಾದ ಪ್ರಿಯಾಂಕ ಖರ್ಗೆ ಅವರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಹಾಗೂ ಸಾಹಿತ್ಯ ಜ್ಞಾನ ಬೆಳೆಸಿಕೊಳ್ಳುವ ಆಸಕ್ತಿ ಇದೆ. ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಎಜುಕೇಶನ್ ಹಬ್ ಮಾಡಿದ್ದಾರೆ ಹಾಗೂ ಈ ಭಾಗದಲ್ಲಿನ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಸಚಿವರ ಅಪಾರವಾದ ಕೊಡುಗೆಯಿದೆ ಎಂದು ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠ ನಾಲವಾರದ ಪೂಜ್ಯ ಶ್ರೀ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು . ಪಟ್ಟಣದ ಬಜಾಜ್ ಕಲ್ಯಾಣ್ ಮಂಟಪ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾಗಾವಿ ನಾಡು ಭವ್ಯ ಇತಿಹಾಸ ಹೊಂದಿದ್ದ ನಾಡಾಗಿದ್ದು ಇಲ್ಲಿನ 69 ಗುಡಿ ಅಂದಿನ ಪ್ರಾಚೀನ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ ದೇಶ ವಿದೇಶಗಳಿಂದ ಅಧ್ಯಯನ ಮಾಡಲು ಬರುತ್ತಿದ್ದರು ಇಂಥ ಪ್ರಾಚೀನ ಕಾಲದ ದತ್ತ ವೈಭವ ಮತ್ತೆ ಮರುಕಳಿಸಬೇಕಿದೆ ಎಂದು ಹೇಳಿ ಕನ್ನಡ ನಾನು ನುಡಿಯ ಬಗ್ಗೆ ಕೊಂಡಾಡಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮಾತನಾಡಿ ಈ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಸಮಾಜಕ್ಕೆ ಒಂದು ವಿಶೇಷವಾದ ಸಂದೇಶವನ್ನು ನೀಡಲು ಬಯಸುತ್ತೇನೆ ನಾಗಾವಿ ನಾಡಿನಲ್ಲಿ ಐತಿಹಾಸಿಕ ಸ್ಮಾರಕಗಳು, ಶಾಸನಗಳು, ದೊರ...

ನಿರ್ಣಯಗಳು ಕೈಗೊಳ್ಳದೆ ಮುಕ್ತಾಯಗೊಂಡ ೪ನೇ ಸಾಹಿತ್ಯ ಸಮ್ಮೇಳನ.

ಇಮೇಜ್
    4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆಯ  ಸಾರೋಟಿನಲ್ಲಿ ಯಾರು ಇಲ್ಲದ ದೃಶ್ಯ. ಚಿತ್ತಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹಿರಂಗ ಅಧಿವೇಶನ ಮಾಡದೇ ನಿರ್ಣಯಗಳನ್ನು ಕೈಗೊಳ್ಳದೇ ಮುಕ್ತಾಯಗೊಂಡಿರುವುದು ಸಾಹಿತ್ಯಾಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಜನರಲ್ಲಿ ಕನ್ನಡ ನಾಡು ನುಡಿ,ನೆಲ,ಜಲ ಭಾಷೆಯ ಬಗ್ಗೆ ಜಾಗೃತಿ ಉಂಟು ಮಾಡುವುದು ಹಾಗೂ ಕನ್ನಡಾಭಿಮಾನ ಮೂಡಿಸುವುದು ಜೊತೆಗೆ ಕನ್ನಡ ನಾಡಿನ ಶ್ರೀಮಂತಿಗೆ ಮತ್ತು ಇತಿಹಾಸ ಬಗ್ಗೆ ಪರಿಚಯಿಸುವ ಕೆಲಸ ಮಾಡುವ ಮೂಲಕ ಸಮ್ಮೇಳನದ ಕೊನೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಂಡು ಅವುಗಳ ಅನುಷ್ಠಾನಕ್ಕೆ ಸರಕಾರಕ್ಕೆ ವರದಿ ಸಲ್ಲಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿಯಾಗಿದೆ, ಆದರೆ ತಾಲೂಕು ಕಸಾಪ ಅಧ್ಯಕ್ಷರು ಪರಿಷತ್ತಿನ ನಿಯಮಗಳನ್ನೇ ಉಲ್ಲಂಘಿಸಿ ತಮ್ಮ ಮನ ಬಂದಂತೆ ವರ್ತಿಸಿರುವುದು ಕಂಡುಬಂದಿದೆ. 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜವಿದ್ದು ಪರಿಷತ್ತಿನ ಧ್ವಜ ಇಲ್ಲದೇ ಇರುವುದು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್ತಿನ ದ್ವಜಾರೋಹಣ ಮಾಡುವುದು ನಿಯಮವಿದೆ ಆದರೆ ಇಲ್ಲಿನ ಕಸಾಪ ಅಧ್ಯಕ್ಷರು ಕೇವಲ ರಾಷ್ಟ್ರದ್ವಜಾರೋ...

ಸಮ್ಮೇಳನ ಆಯೋಜನೆಯ ಸ್ವಷ್ಟನೆ ನೀಡಲಿ: ನಾಲವಾರಕರ್ ಆಗ್ರಹ.

ಇಮೇಜ್
ಚಿತ್ತಾಪುರ: ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆವಾಗಿರುವುದಿಲ್ಲ. ಆದರೆ ಯಾವ ಕಾರಣಕ್ಕಾಗಿ ಚಿತ್ತಾಪುರ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವ ಬಗ್ಗೆ ಸ್ವಷ್ಟನೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ರಾಜ್ಯ ವಕ್ತಾರ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದ್ದಾರೆ.  ಪಟ್ಟಣದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಹಂಪಿ ಉತ್ಸವ, ಮೈಸೂರು ದಸರಾ ಉತ್ಸವಗಳನ್ನು ಸರಳ ರೀತಿಯಲ್ಲಿ ಆಚರಣೆಗೆ ರಾಜ್ಯ ಸರಕಾರ ಬದ್ಧವಾಗಿದ್ದು ಅಲ್ಲದೇ ಮಂಡ್ಯ ಜಿಲ್ಲೆಯಲ್ಲಿ ನಡೆಯಬೇಕಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರದ್ದು ಮಾಡಿರುವ ಮಾದರಿಯಲ್ಲಿ ಚಿತ್ತಾಪುರ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕೂಡಾ ಮುಂದೂಡಬೇಕು ಎಂದರು   ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಿಗೆ ಮಾಹಿತಿ ನೀಡದೇ, ಕನ್ನಡಪರ ಹೋರಾಟಗಾರರನ್ನು ಹಾಗೂ ಸಾಹಿತಿಗಳನ್ನು ಹೊರಗಿಟ್ಟು ಏಕ ಪಕ್ಷೀಯವಾಗಿ ನಡೆದುಕೊಂಡು ಬರೀ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅಹ್ವಾನಿಸಿದ್ದರಿಂದ ಇದು ಸಾಹಿತ್ಯ ಸಮ್ಮೇಳನವಲ್ಲ ಕಾಂಗ್ರೆಸ್ ಸಮ್ಮೇಳನವಾಗಿದೆ ಎಂದು ಆರೋಪಿಸಿದರು.   ಉತ್ಸವಗಳಿಗೆ ಬಳಸುವ ಹಣವನ್ನು ರೈತರ...

ಟ್ರಸ್ಟ್‌ಗೆ ಸಂಬಂಧಿಸಿದ ಜಮೀನು ಕಾನೂನು ಬಾಹಿರ ಮಾರಾಟ.

ಇಮೇಜ್
ಕಲಬುರಗಿ: ನಗರದ ಕೆಎಚ್‌ಬಿ ಕಾಲೋನಿ ಮಾಲಗತ್ತಿ ಭೂಮಿ ಮಂಡಳಿಂದ ಅಬ್ದುಲ್ ಶುಕೂರ್ ತಂದೆ ಮೊಹಮ್ಮದ್ ಮಹಮೂದ್ ಅಲಿ ಎಂಬುವರು ಮಾಮುಪುರಿ ವಾಲೆ ಎಂಬ ಹೆಸರಿನಿಂದ ಕರೆಯಲ್ಪಡುವ ಇವರು ಕಾನೂನಿನ ಬಾಹಿರವಾಗಿ, ಕೆಎಚ್‌ಬಿ ಸಿ.ಎ ಸೈಟ್ ನಂ.1 ಗ್ರಾಮ ಪಂಚಾಯತ ನಂ. ಸರ್ವೆ ನಂ.84/1 ಹಾಗೂ 84/2, ಸೈಟಿ ನಂ.1 ವಿಸ್ತೀರ್ಣ4376.80 ಚ. ಮೀಟರ, ಕೆ ಎಚ್ ಬಿ ಕಾಲೋನಿ ಮಾಲಗತ್ತಿ ಕಲಬುರಗಿ, ಈ ಜಮೀನನ್ನು ಟ್ರಸ್ಟ ಕಡೆಯಿಂದ ಖರೀದಿ ಮಾಡಿ ಕಾನೂನು ಬಾಹಿರವಾಗಿ ಸೈಟಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರೆಸಿಡೆಂಟ್ ವರ್ಕಿಂಗ್ ಜರ್ನಾಲಿಸ್ಟ ಯೂನಿಯನ್ ಸೋಶಿಯಲ್ ಹಾಗೂ ವಲ್ವೇರ್ ಅಧ್ಯಕ್ಷ ಪಠಾನ ಸೂಫಿಯಾನ ಖಾನ ಆಗ್ರಹಿಸಿದ್ದಾರೆ.  ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿ ಮಾತನಾಡಿದ ಅವರು ಈ ಖರೀದಿ ಪತ್ರದ ನೊಂದಣಿ ಸಂಖ್ಯೆ ಜಿಎಲ್‌ಬಿ-1-07748--2021–22, ಸಿ.ಡಿ. ನಂ.ಜಿಎಲ್‌ಬಿಡಿ!146 ದಿನಾಂಕ 18-09-2021ರಂದು ಖರೀದಿ ಮಾಡಿರುತ್ತಾರೆ, ಈ ಜಮೀನು ಟ್ರಸ್ಟ ಜಮೀನು ಆದ ಕಾರಣ ಇದನ್ನು ಯಾವುದೆ ವ್ಯಕ್ತಿ ಸ್ವಯಂಗಾಗಿ ಖರೀದಿ ಮಾಡುವುದು ಕಾನೂನಿನ ಬಾಹಿರವಾಗಿರುತ್ತದೆ ಇದನ್ನು ಖರೀದಿಮಾಡಬೇಕಾದರೆ ಇದಕ್ಕೆ ತನ್ನದೆ ಆದ ಟ್ರಸ್ಟ್ ಗುರಿ ಉದ್ದೇಶಗಳು ಇರುತ್ತವೆ ಅವು ಯಾವುದೇ ಅನುಸರಿಸದೆ ಟ್ರಸ್ಟ್‌ನ ನಿಯಮಗಳನ್ನು ಉಲ್ಲಂಘಿಸಿದ ಯಾರೆ ಆಗರಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಖರೀದಿದಾರರು ಈ ಜಮೀನನ್ನು ಖರೀದಿಸಿದ ನಂತರ ಈ ಜಮೀನಿ...

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಇಮೇಜ್
ಚಿತ್ತಾಪುರ: ತಾಲೂಕನ್ನು ಸಮಗ್ರ ಅಭಿವೃದ್ದಿಗೊಳಿಸಲು ಮುಂದಿನ ಐದು ವರ್ಷಗಳ ಅವಧಿಗಾಗಿ ನೂತನ ಯೋಜನೆಗಳ ಬಗ್ಗೆ ಪರಿಕಲ್ಪನೆ ಹೊಂದಿ‌ ಆ ಬಗ್ಗೆ ವರದಿ ತಯಾರಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಿದ್ದೆ, ಆದರೆ‌ ಸರ್ಕಾರದ‌ ಬಹುತೇಕ‌ ಇಲಾಖೆಗಳ ಅಧಿಕಾರಿಗಳು ಆ ಬಗ್ಗೆ ಗಮನ ಹರಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.  ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಳೆ ಕಲ್ಯಾಣಿಗಳ ಪುನಶ್ಚೇತನಗೊಳಿಸುವುದು ಸೇರಿದಂತೆ ತಾಲೂಕಿನ ಜಲಮೂಲಗಳ ಸಂರಕ್ಷಣೆಗಾಗಿ ಯೋಜನೆ ಹಾಕಿಕೊಳ್ಳಲಾಗಿದ್ದು, ಸಣ್ಣ, ಬೃಹತ್ ನೀರಾವರಿ ಇಲಾಖೆ, ಕೆಬಿಜೆಎನ್‌ಎಲ್, ಕೆಎನ್ ಎನ್ ಎಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗಳಯ ಜಂಟಿಯಾಗಿ ನೀಲನಕ್ಷೆ ತಯಾರಿಸಿ ಎಂದು ಸಚಿವರು ಸೂಚಿಸಿದರು. ಸನ್ನತಿ ಏತ ನೀರಾವರಿ ಯೋಜನೆಯಡಿಯಲ್ಲಿ‌ 16,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದ್ದು, ಈವರೆಗೆ 11,830 ಹೆಕ್ಟರ್ ನೀರಾವರಿ ಹೊಂದಲಾಗಿದ್ದು ಸ್ಥಳೀಯ ರೈತರ ಸಹಕಾರದಿಂದಾಗಿ ಬಾಕಿ‌ ಇರುವ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿಲ್ಲ ಎಂದು ಕೆಎನ್ ಎನ್ ಎಲ್ ಅಧಿಕಾರಿಗಳು ತಿಳಿಸಿದರು. ಪುನರ್ವಸತಿ ಕುರಿತಂತೆ ಯಾವ ಕ್ರಮ‌ಕೈಗೊಳ್ಳಲಾಗಿ...

ಸಚಿವರ ಮಾತಿಗೆ ಬೆಲೆ ಕೊಡದ ಅಬಕಾರಿ ಇಲಾಖೆ.

ಇಮೇಜ್
ಹಳ್ಳಿ-ಗಲ್ಲಿಗಳಲ್ಲಿ ಮದ್ಯ ದಂಧೆ ಜೋರು.  ಚಿತ್ತಾಪುರ: ತಾಲೂಕಿನ ಬಹುತೇಕ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಬೇಕಾಬಿಟ್ಟಿ ಅಕ್ರಮ ಸರಾಯಿ ಮಾರಾಟ ಹಾಗೂ ಸಾಗಾಟ ಜೋರಾಗಿ ನಡೆಯುತ್ತಿದೆ. ಇದನ್ನೆಲ್ಲ ನೋಡಿದರೆ ಈ ಅಕ್ರಮ ಸರಾಯಿ ಮಾರಾಟಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಕಂಡುಬರುತ್ತಿದೆ.  ಸಚಿವ ಪ್ರಿಯಾಂಕ್ ಖರ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ. ಅಗಸ್ಟ್ 4ರಂದು ತಾಲ್ಲೂಕು ಪಂಚಾಯಿತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಿರಾಣ ಅಂಗಡಿಗಳಲ್ಲಿ ದಾಭಾಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅವಧಿಗೆ ಮೀರಿದ ಸಮಯದವರೆಗೆ ದಾಭಾಗಳು ತೆಗೆದಿರುತ್ತವೆ.‌ಈ ಬಗ್ಗೆ ಅಬಕಾರಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು ಬೇರೆ ಜಿಲ್ಲೆಯವರು ಎಷ್ಟಾದರೂ ಮದ್ಯ ಮಾರಾಟ ಮಾಡಲಿ, ಚಿತ್ತಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಮಾರಾಟ ಮಾಡಲು ಅನುವು ಮಾಡಿಕೊಡಬೇಡಿ ಎಂದು  ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಬಕಾರಿ ಅಧಿಕಾರಿಗಳಿಗೆ ಹೇಳಿದರು ಅಬಕಾರಿ ಇಲಾಖೆ ಅಧಿಕಾರಿಗಳು ಸಚಿವರ ಮಾತಿಗೆ ಬೆಲೆ ಕೊಡದೆ ಅಕ್ರಮ ಸರಾಯಿ ಮಾರಾಟ...

ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ-ಎಸ್ಟಿ ಅನುದಾನ ಬಳಕೆ ಬೇಡ: ಡಿವಿಪಿ.

ಇಮೇಜ್
ಚಿತ್ತಾಪೂರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲು ಇರುವ 11 ಸಾವಿರ ಕೋಟಿ ಅನುದಾನವನ್ನು ಬಳಕೆ ಮಾಡದೇ ಸಮುದಾಯದ ಅಭಿವೃದ್ಧಿಗೆ ಬಳಸುವಂತೆ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯರವರಿಗೆ ಬರೆದ ಮನವಿ ಪತ್ರವನ್ನು ಮಾನ್ಯ ತಹಶೀಲ್ದಾರ ರವರ ಮೂಲಕ ಸಲ್ಲಿಸಿದರು.   ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಜಗದೇವ ಎಸ್ ಕುಂಬಾರ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಈ ಸಾಲಿನ ಅನುದಾನದಲ್ಲಿನ 11 ಸಾವಿರ ಕೋಟಿ ರೂಪಾಯಿ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗೆ ಬಳಸುತ್ತಿರುವುದನ್ನು ದಲಿತ ವಿದ್ಯಾರ್ಥಿ ಪರಿಷತ್ ವಿರೋಧಿಸುತ್ತದೆ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು.    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಮೀಸಲಿರಬೇಕಾಗಿದ್ದ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗಾಗಿ ಬಳಸುತ್ತಿರುವುದನ್ನು ಖಂಡನೀಯ. ಶೋಷಿತ ಸಮುದಾಯಗಳ ಹಕ್ಕು ಕಿತ್ತುಕೊಂಡು, ತಮ್ಮ ಘೋಷಣೆ ಯೋಜನೆಗಳಿಗಾಗಿ ನಮ್ಮ ಹಣಬಳಸದೆ ಈ ಸಮುದಾಯಗಳ ವಿದ್ಯಾರ್ಥಿ ಯುವಜನರ ಹಾಗೂ ನಿರುದ್ಯೋಗ ಯುವಕರ, ಮಹಿಳೆಯರ ಮಕ್ಕಳ, ರೈತ ಕೂಲಿ ಕಾರ್ಮಿಕರ, ಒಟ್ಟಾರೆ ಈ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಅನು...

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪಲ್ಲೇದ.

ಇಮೇಜ್
ಚಿತ್ತಾಪೂರ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳಿರುತ್ತೇವೆ. ಮಾತ್ರವಲ್ಲದೆ ಅದರ ಮೇಲೆ ಪ್ರೀತಿ, ಕಾಳಜಿಯು ಮುಖ್ಯವಾಗಿರುತ್ತದೆ. ಅದಕ್ಕನುಗುಣವಾಗಿ ವಿಶ್ವ ಪರಿಸರ ದಿನವೆಂದು ಜೂನ್‌ 5ರಂದು ಆಚರಿಸುತ್ತೇವೆ. ಈ ಮಾತು ಕೇವಲ ಆ ದಿನಕ್ಕನುಗುಣವಾಗಿರದೆ ಪ್ರತಿ ದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ ಎಸ್ ಪಲ್ಲೇದ ಹೇಳಿದರು. ಪಟ್ಟಣದ ಹೊರ ವಲಯದ ಜ್ಞಾನ ಗಂಗಾ ಶಿಕ್ಷಣಾ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಇವರ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ, ಪ್ಲಾಸ್ಟಿಕ್ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮ ನಿಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಮಾಡಿದ್ರೆ ನಮ್ಮ ಆರೋಗ್ಯ ಸುಚಿಯಾಗಿರುತ್ತದೆ. ಅಷ್ಟೇ ಅಲ್ಲದೇ ಸದೃಢ ಸಮಾಜ ನಿರ್ಮಾಣ ಮಾಡಲು ಸಾದ್ಯವಾಗುತ್ತದೆ ಎಂದರು. ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾತನಾಡಿ ಪರಿಸರ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ನಾವು ನಿರಂತರಾಗಿರಬೇಕು, ನಮ್ಮ ಸುತ್ತಲಿನ ಫಲವತ್ತಾದ ಮಣ್ಣು, ಸಗಣಿ, ಒಳಸಿಕೊಂಡು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕರೆ ...

ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಿ: ಕಾಶಿನಾಥ ಗುತ್ತೇದಾರ್

ಇಮೇಜ್
ಚಿತ್ತಾಪುರ: ಗ್ರಂಥಾಲಯ ಜ್ಞಾನದ ಭಂಡಾರ ಇದ್ದಂತೆ ಹೀಗಾಗಿ ಯುವಕರು ಅಲ್ಲಿ ಇಲ್ಲಿ ಕುಳಿತುಕೊಂಡು ಹರಾಟೆ ಹೊಡೆದು ವ್ಯರ್ಥ ಸಮಯವನ್ನು ಕಳೆಯದೇ ಗ್ರಂಥಾಲಯಕ್ಕೆ ಭೇಟಿ ನೀಡಿ ವಿವಿಧ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.   ಪಟ್ಟಣದ ಸ್ಟೇಷನ್ ತಾಂಡಾದ ಸೇವಾಲಾಲ್ ಮಂದಿರದ ಹತ್ತಿರ ತಾಂಡಾ ಅಭಿವೃದ್ದಿ ನಿಗಮದಿಂದ ಮಂಜೂರಾದ ನೂತನ ಗ್ರಂಥಾಲಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕವಾಗುವ ಪುಸ್ತಕಗಳು, ಭಾರತದ ಸಂವಿಧಾನ, ರಾಜಕೀಯ, ಇತಿಹಾಸ, ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಸಾವಿರಾರು ಪುಸ್ತಕಗಳು ಒಂದೇ ಸ್ಥಳದಲ್ಲಿ ಸಂಗ್ರಹಿಸಿರುವ ಗ್ರಂಥಾಲಯಗಳು ಅಮೂಲ್ಯವಾದ ಜ್ಞಾನ ಭಂಡಾರ ಎಂದರು. ಪ್ರತಿಯೊಬ್ಬರು ತಮ್ಮ ಜ್ಞಾನದ ಹಸಿವನ್ನು ತೀರಿಸಿಕೊಳ್ಳಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಜತೆಗೆ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.   ದೇವರ ಮೂರ್ತಿ ಇರುವುದಕ್ಕೆ ಎಲ್ಲರೂ ದೇವಸ್ಥಾನ ಎಂದು ಭಾವಿಸಿದ್ದಾರೆ ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಗ್ರಂಥಾಲಯವನ್ನು ದೇವಸ್ಥಾನ ಎಂದು ಭಾವಿಸಿಕೊಂಡು ಜೀವನದ ಅತ್ಯಮೂಲ್ಯ ಸಮಯ ಗ್ರಂಥಾಲಯದಲ್ಲೇ ಕಳೆದಿದ್ದರಿಂದ ಇಂದು ಮಹಾನ್ ಜ್ಞಾನಿಯಾಗಿದ್ದಾರ...

ಪ್ರೀಯಾಂಕ್ ಖರ್ಗೆ ಸಚಿವ ಸ್ಥಾನಕ್ಕಾಗಿ ಹರಕೆ ಈಡೇರಿಸಿದ ಅಭಿಮಾನಿ.

ಇಮೇಜ್
ಚಿತ್ತಾಪೂರ: ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಿಯಾಂಕ್ ಖರ್ಗೆ ಗೆಲುವಿಗೆ ಹಾಗೂ ಸಚಿವ ಸ್ಥಾನಕ್ಕೆ ಹೇಳವನಕೇರಿ ಗ್ರಾಮದ ಅಭಿಮಾನಿ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಲಹ ಸಮಿತಿ ಸದಸ್ಯ ತಿಪ್ಪಣ್ಣ ರಾಮಣ್ಣ ಹೆಳವ ಅವರು ಮಂಗಳವಾರ ದೇವರಿಗೆ ಹರಕೆ ತಿರಿಸಿದ್ದಾರೆ. ತೀವ್ರ ಜಿದ್ದಜಿದ್ದಿನ ಕ್ಷೇತ್ರವಾಗಿದ್ದ ಚಿತ್ತಾಪೂರ ಮತಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ಪಡೆದು ಗೆಲವು ಸಾಧಿಸಲೆಂದು ಹಾಗೂ ನೂತನ ಸರಕಾರದಲ್ಲಿ ಸಚಿವ ಸ್ಥಾನ ಸಿಗಲೆಂದು ಶ್ರೀ ನಾಗಾವಿ ಯಲ್ಲಮ್ಮ ದೇವಿ, ಯನಾಗುಂದಿ ಮಾತಾ ಮಣಿಕೇಶ್ವರಿ, ಯನಾಗುಂದಿ ಮೌಲಾಲಿ ಮುತ್ಯಾ, ಕಾನಕುರ್ತಿ ಶ್ರೀ ಯಲ್ಲಮ್ಮ ದೇವಿ, ಹಾಗೂ ಶ್ರೀ ಪರಶುರಾಮ ದೇವರಿಗೆ ಪ್ರತಿ ದೇವರಿಗೆ ಐದು ಟೆಂಗಿನಕಾಯಿ ಒಡಿಯುವ ಹರಿಕೆ ಮಾಡಿದ್ದರು. ನೂತನ ಸರಕಾರದಲ್ಲಿ ಗ್ರಾಮೀಣ ಪಂಚಾಯತ ರಾಜಾ ಇಲಾಖೆ ಸಚಿವರಾಗಿದ್ದಕ್ಕೆ ಅಭಿಮಾನಿಯು ಖುಷಿಯಿಂದ ಮಂಗಳವಾರ ಎಲ್ಲಾ ದೇವರಿಗೆ ಭೇಟಿ ನೀಡಿ ದೇವರ ಹರಿಕೆ ತಿರಿಸಿದ್ದರು.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಇಮೇಜ್
ಮುಂದಿನ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಬಿಜೆಪಿ ಗೆಲ್ಲಿಸುವೆ:ಮಣಿಕಂಠ     ಚಿತ್ತಾಪುರ: ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲು ಉಂಟಾಗಿದೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಗಲಿ ಅಥವಾ ಯಾರೇ ಅಭ್ಯರ್ಥಿಯಾಗಲಿ ಅವರ ಪರ ಶ್ರಮಿಸಿ 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.   ಪಟ್ಟಣದ ಬಾಪುರಾವ್ ಪಾಟೀಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವಿಧಾನಸಭೆ ಚುನಾವಣೆ ನಿಮಿತ್ತ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ನನಗೆ ಸ್ವಲ್ಪ ಮಾರ್ಗದರ್ಶನ ಕೊರತೆ ಇತ್ತು ನಾನು ಎಲ್ಲರನ್ನೂ ತೆಗೆದುಕೊಂಡು ಹೋಗಲು ಆಗಲಿಲ್ಲ, ಎಲ್ಲ ಮುಖಂಡರನ್ನು ಹಾಗೂ ಕಾರ್ಯಕರ್ತರ ಸಮೀಪ ಹೋಗುವುದಕ್ಕೆ ಆಗಲಿಲ್ಲ ಆದರೂ ಪಕ್ಷದ ಮೇಲೆ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಕಾರ್ಯಕರ್ತರು ಹಗರಲಿರಳು ಶ್ರಮಿಸಿದ್ದರಿಂದ ೬೭ ಸಾವಿರಕ್ಕೂ ಅಧಿಕ ಮತಗಳು ಬಂದಿವೆ ಇದೊಂದು ದೊಡ್ಡ ಸಾಧನೆ ಈ ಮೂಲಕ ಚಿತ್ತಾಪುರದಲ್ಲಿ ಕಾರ್ಯಕರ್ತರೇ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದಾರೆ ಎಂಬುದು ತೋರಿಸಿಕೊಟ್ಟಿದ್ದಾರೆ ಎಂದರು.   ಕಾರ್ಯಕರ್ತರು ಯಾರೂ ಎದೆಗುಂದದೇ ನಿಮ್ಮ ಜೊತೆ ನಾನು ಇದ್ದೇನೆ ಪಕ್ಷದ ಸಂಘಟನೆಯಲ್ಲಿ ...

ಪ್ರಿಯಾಂಕ್ ಖರ್ಗೆ ಹ್ಯಾಟ್ರಿಕ್ ಗೆಲುವು.

ಇಮೇಜ್
ಚಿತ್ತಾಪೂರ: ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಭರ್ಜರಿ ಜಯಭೇರಿಯೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.  ಪ್ರಿಯಾಂಕ್ ಖರ್ಗೆ ಅವರು 13640 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಮಣಿಸಿದ್ದಾರೆ. ಪ್ರಿಯಾಂಕ್ ಅವರಿಗೆ 81,323 ಮತಗಳು ದೊರಕಿದ್ದರೆ, ಅವರ ನೇರ ಎದುರಾಳಿ ಮಣಿಕಂಠ 67,683 ಮತಗಳನ್ನು ಪಡೆದಿದ್ದಾರೆ. ಇವರಿಬ್ಬರ ಮಧ್ಯೆಯೇ ತೀವ್ರ ಪೈಪೋಟಿ ನಡೆಸಿದ್ದು, ಕ್ಷೇತ್ರದಲ್ಲಿದ್ದ ಇತರೆ ಯಾವ ಅಭ್ಯರ್ಥಿಯೂ ಸಾವಿರ ಮತಗಳ ಗಡಿ ದಾಟುವುದಕ್ಕೂ ಸಾಧ್ಯವಾಗಿಲ್ಲ. ಒಟ್ಟು 1,53,195 ಮತಗಳು ಚಲಾವಣೆಯಾಗಿದೆ. 962 ಮತಗಳನ್ನು ಪಡೆದ ಆಮ್ ಆದ್ಮಿ ಪಕ್ಷದ ಜಗದೀಶ್ ಎಸ್ ಸಾಗರ್ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಶರಣು ಸೂಗುರ 878 ಮತಗಳು, ಜೆಡಿಎಸ್ ಅಭ್ಯರ್ಥಿ ಡಾ. ಸುಭಾಶ್ಚಂದ್ರ ರಾಠೋಡ್ 643 ಮತಗಳು, ಕೆಆರ್ ಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಪೂಜಾರಿ 485 ಮತಗಳು, ಸ್ವತಂತ್ರ ಅಭ್ಯರ್ಥಿ ರಾಜು ಹುದನೂರ 505 ಮತಗಳು ಪಡೆದಿದ್ದಾರೆ. ಇನ್ನು ನೋಟಾಕ್ಕೆ 816 ಮತಗಳು ಬಿದ್ದಿವೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೈ ಅನ್ನುವ ಜಯ ಘೋಷಗಳು ಕೇಳಿ ಬಂದವು. ಸರ್ವ ಕಾಂಗ್ರೆಸ್ ಕಾರ್ಯಕರ್ತರು ಜಯ ಘೋಷಗಳೊಂದಿಗೆ ಗುಲಾಲ್ ಎರಚಿ ಸಂತಸ  ಪಡುತ್ತಿದ್ದಾರೆ. ಬಿಜೆಪಿಯವರು ಚಿತ್ತಾಪುರ ಜನತೆಗೆ ಇಷ್ಟ ಇಲ್ಲದಿದ್ದರೂ ರೌಡಿಶ...

ದಾದಾಗಿರಿಗೆ ಅಂಜುವ ಮೊಮ್ಮಗ ನಾನಲ್ಲ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ದಾದಾಗಿರಿ ಶುರು ಮಾಡಿದರೆ ಕಾಂಗ್ರೆಸ್ ನವರು ಹೊರಗಡೆ ಬರುವುದಕ್ಕೆ ಆಗುವುದಿಲ್ಲ ಅಂತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳುತ್ತಾನೆ.  ಎಂಎಲ್ಎ ಚುನಾವಣೆಗೆ ನಿಲ್ಲುವುದಕ್ಕೆ ಬಂದಿದ್ದಾನಾ? ಅಥವಾ ದಾದಾಗಿರಿ‌‌ ಮಾಡುವುದಕ್ಕೆ ಬಂದಿದ್ದಾನಾ? ಅವನು ದಾದಾಗಿರಿ ಮಾಡಿದರೆ ಚಿತ್ತಾಪುರದ ಮೊಮ್ಮಗ ನಾನು ಸುಮ್ಮನೆ ಕೂತಿರುತ್ತೇನಾ ? ಎಂದು ಕಾಂಗ್ರೆಸ್ ಅಭ್ಯರ್ಥಿ  ಪ್ರಿಯಾಂಕ್ ಖರ್ಗೆ ಮಾರುತ್ತರ ನೀಡಿದರು. ತಾಲ್ಲೂಕಿನ ಮಹಾನಗರ ತಾಂಡಾ, ಮುಗಳನಾಗಂವ್, ಬೆಣ್ಣೋರ, ಸಂಗಾವಿ, ಪೇಠಶಿರೂರು, ಕಾಟಮದೇವರ ಹಳ್ಳಿ, ಬೆಳಗುಂಪಾ, ಇವಣಿ,ಭಾಗೋಡಿ, ಕದ್ದರ್ಗಿ, ಜೀವಣಗಿ, ಗ್ರಾಮದಲ್ಲಿ ನಡೆದ‌ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು ನಾನು ಈ ತಾಲೂಕಿನ ಮೊಮ್ಮಗ ನಮ್ಮ ಜನರ ಕಷ್ಟ ಸುಖಗಳ ಅರಿವು ನನಗಿದೆ. ಎಲ್ಲಿಂದಲೋ ಬಂದವರು ದಾದಾಗಿರಿ ಮಾಡಿದರೆ ನಾನು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು. ಮಣಿಕಂಠ ಯಾರು ಅಂತ ನನಗೆ ಗೊತ್ತಿರಲಿಲ್ಲ. ಅವನು ನನಗೆ ಶೂಟ್ ಮಾಡುತ್ತೇನೆ ಎಂದು ಹೇಳಿದಾಗಲೇ ಅವನ ಬಗ್ಗೆ ಗೊತ್ತಾಗಿದ್ದು. " ಅಲ್ಲಪ್ಪ ನನಗೆ ಶೂಟ್ ಮಾಡುವುದಕ್ಕೆ ನಿಮ್ಮಪ್ಪನ ಗಂಟು ಏನಾದರೂ ತಿಂದಿದ್ದೇನಾ ? ಅಥವಾ ನಿನ್ನ ಗಂಟು ತಿಂದಿದ್ದೇನಾ? ಅಸಲಿಗೆ ನಿನ್ನ ಗಂಟು ಬೇಡ. ಯಾಕೆಂದರೆ ಅದು ಪಾಪದ‌ ದುಡ್ಡು ಎಂದು ತೀಕ್ಷ್ಣವಾಗಿ ಹೇಳಿದರು. ಮಣಿಕಂಠನನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ...

ಅಕ್ರಮದಲ್ಲಿ ತೊಡಗುವವರಿಗೆ ಜೈಲು‌ಭಾಗ್ಯ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ನಾನು ಗೆದ್ದು ಬಂದ ಮೇಲೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದವರಿಗೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗವವರಿಗೆ ಜೈಲ್ ಗೆ ಕಳಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಬ್ಬರಿಸಿದರು‌. ತಾಲ್ಲೂಕಿನ ಮಲಗಾಣ, ಕಣಸೂರ, ಅಶೋಕ ನಗರದಲ್ಲಿ ಚುನಾವಣೆಯ ಪ್ರಚಾರ ಸಭೆ ಕುರಿತು ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾನೆ. ನಿಮಗೆ ಶಿಕ್ಷಣ, ಉದ್ಯೋಗ ಹಾಗೂ ನೆಮ್ಮದಿಯ ಜೀವನ ಬೇಕಾದರೆ ನನಗೆ ಮತನೀಡಿ. ಢಾಬಾ, ಜೈಲು ಹಾಗೂ ಬೇಲು ಅಂತ ಅಲೆದಾಡಬೇಕಾದರೆ ಮಣಿಕಂಠನಿಗೆ ಮತ ಹಾಕಿ ಎಂದರು. ಖರ್ಗೆ ಹಾಗೂ ಕುಟುಂಬವನ್ನು ಸಾಫ್ ಮಾಡುತ್ತೇನೆ ಅಂತ ಅವನು ಹೇಳಿದ ಅಡಿಯೋ ವೈರಲ್ ಆಗಿದೆ. ನಮಗೆ ಸಾಫ್ ಮಾಡಲು ಬಂದರೆ ನನ್ನ ಕ್ಷೇತ್ರದ ಜನರು ಸುಮ್ಮನೆ ಇರುತ್ತೀರಾ ? ಎಂದು ಪ್ರಶ್ನಿಸಿದರು. ನಾನು ದಾದಾಗಿರಿ ಮಾಡಲು ಶುರು ಮಾಡಿದರೆ ಕಾಂಗ್ರೆಸ್ ನವರು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ ಅಂತ ಮರಗೋಳದಲ್ಲಿ ಹೇಳಿದ್ದಾನಂತೆ, ಆ ಪಾರನಿಗೆ ಗೊತ್ತಿರಲಿ ಚಿತ್ತಾಪುರದ ಈ ಮೊಮ್ಮಗ‌ ಇನ್ನೂ ‌ಜೀವಂತವಾಗಿದ್ದಾನೆ  ಎಂದು ಟಕ್ಕರ್ ಕೊಟ್ಟರು. ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ್, ಸುನೀಲ ದೊಡ್ಮನಿ, ಪ್ರವೀಣ ನಾಮದಾರ್, ಶಂಭುಲಿಂಗ ಗುಂಡಗುರ್ತಿ, ಶರಣಗೌಡ, ಸುಧಾಕರ ಪಾಟೀಲ್, ಆನಂದ ಹೊಸಮನಿ, ಪೃಥ್ವಿ ನಾಮದಾರ್, ಸೇರಿದಂತೆ ಇತರರು ಇದ್ದರು.

ಕ್ಷೇತ್ರವ್ಯಾಪ್ತಿಯಲ್ಲಿ ಮಣಿಕಂಠ ರಾಠೋಡ ಬಿರುಸಿನ ಪ್ರಚಾರ.

ಇಮೇಜ್
ಚಿತ್ತಾಪೂರ: ಮೀಸಲು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅಇವರು  ಪಟ್ಟಣದ 23 ವಾರ್ಡ್ ಗಳ ಮನೆ ಮನೆಗೆ ಹೋಗಿ ಮತ ಕೇಳುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ತಾಲೂಕಿನಲ್ಲಿ ಸಾಕಾಷ್ಟು ಅಭಿವೃದ್ಧಿಗೆ ಸಾದ್ಯವಾಗುತ್ತದೆ. ನಾನು ನಿಮ್ಮ ಮನೆಯ ಮಗನಾಗಿ ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ನನ್ನಗೆ ಒದಗಿ ಬಂದಿದೆ. ಹೀಗಾಗಿ ಮೇ,10ಕ್ಕೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ನನ್ನಗೆ ಗೆಲ್ಲಿಸಿ ಎಂದು ಮತದಾರರಲ್ಲಿ ಕೈ ಮುಗಿದು ಬೇಡಿಕೊಂಡರು. ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ಕಾರ್ಯಕರ್ತರು ಪಣತೊಟ್ಟು ಮನೆಮನೆಗೂ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಯಕರ್ತರ ಪ್ರೀತಿಗೆ ಚಿರಋಣಿ ಎಂದು ಹೇಳಿದರು. ಕೇಂದ್ರದಿಂದ ಬಿಡುಗಡೆಯಾಗುವ ಒಂದು ಪೈಸೆ ಹಣವೂ ನಿರ್ದಿಷ್ಟ ಫಲಾನುಭವಿ ಯನ್ನು ತಲುಪಲು ಹಾಗೂ ನಿರ್ದಿಷ್ಟ ಯೋಜನೆಗೆ ಬಳಕೆ ಯಾಗಲು ಡಬಲ್‌ ಎಂಜಿನ್ ಸರ್ಕಾರ ಮುಖ್ಯ. ನಾಲ್ಕು ವರ್ಷಗಳ ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಇದು ಸಾಬೀತಾಗಿದೆ ಬಿಜೆಪಿಯ ಜನಕಲ್ಯಾಣ ಕಾರ್ಯಕ್ರಮಗಳೇ ಗೆಲುವಿಗೆ ಸ್ಪೂರ್ತಿಯಾಗಿದ್ದು, ಜನರ ಬದುಕು ಸುಧಾರಣೆಯತ್ತ ಸಾಗುತ್ತಿದೆ. ಸಮೃದ್ಧ ಕರ್ನಾಟಕ ಪ್ರತಿ ನಿರ್ಮಾಣಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಾಗರಾಜ ಬಂಕಲಗಿ, ಮಲ್ಲಿಕಾರ್ಜುನ ಎಮ್ಮೆನೋರ, ಪ್ರಭು ಗಂಗಾಣಿ, ಕೋಟೇಶ್ವರ ರೇಷ್ಮೆ, ನಾಗರ...

ಶಿಕ್ಷಣ,ಉದ್ಯೋಗಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ಕ್ಷೇತ್ರದ ಜನತೆಗೆ ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಸೀಗಬೇಕಾದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು. ತಾಲ್ಲೂಕಿನ ತೋನಸನಳ್ಳಿ, ಮಲಕೂಡ, ಮರಗೋಳ, ಮುಡಬೂಳ, ಮೋಗಲಿ, ದಂಡೋತಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಿಂದೆ ಹೋದರೆ‌ ಜೈಲು‌ ಹಾಗೂ ಬೇಲು ಗ್ಯಾರಂಟಿ ಜನರಿಗೆ ತಿಳಿ ಹೇಳಿದರು. ಬಿಜೆಪಿಗರು ಮೋದಿ ಫೋಟೋ ತೋರಿಸಿ ಕಳ್ಳನಿಗೆ ಟಿಕೆಟ್ ಕೊಟ್ಟರೆ ಆರಿಸಿ ಕಳಿಸಲು ಚಿತ್ತಾಪುರದ ಪ್ರಬುದ್ಧ ಮತದಾರರು ಮತ ಹಾಕುತ್ತಾರೆಯೇ? ಎಂದು ಪ್ರಶ್ನಿಸಿದರು. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನಿಗೆ ಚುನಾವಣೆಯಲ್ಲಿ ಅಪ್ಪಿತಪ್ಪಿ ಗೆಲ್ಲಿಸಿದರೆ ಅಂಗನವಾಡಿಗೆ ಹೋಗುವ ಮಕ್ಕಳಿಗೆ ಹಾಲು ಸಿಗಲ್ಲ. ಯಾಕೆಂದರೆ, ಅವನು ಅಕ್ರಮವಾಗಿ ಹಾಲಿನಪುಡಿ ಸಾಗಾಣಿಕೆ ಮಾಡಿದ್ದಕ್ಕೆ ಯಾದಗಿರಿ ಕೋರ್ಟ್ ಶಿಕ್ಷೆ ನೀಡಿದೆ. ಅವನ ವಿರುದ್ದ ತೆಲಂಗಾಣ, ಆಂಧ್ರ,‌ಕರ್ನಾಟಕ ಹಾಗೂ ಮಹಾರಾಷ್ಟ್ರ ಹೀಗೆ ನಾಲ್ಕು ರಾಜ್ಯದ ಆರು ಜಿಲ್ಲೆಗಳಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡಿದಕ್ಕೆ ಒಟ್ಟು 40 ಕೇಸುಗಳಿವೆ. ಹೀಗಾಗಿ ಅವನು ಕೇವಲ ರಾಜ್ಯದ ಫಿಗರ್ ಅಲ್ಲ ದಕ್ಷಿಣ ಭಾರತದ ಫಿಗರ್ ಆಗಿದ್ದಾನೆ ಎಂದು ವ್ಯಂಗ್ಯಮಾಡಿದರು. ನನಗೆ ನೀವು ಹೇಗೆ ಆಶೀರ್ವಾದ ಮಾಡಬೇಕೆಂದರೆ ಮತ್ತೊಮ್ಮೆ ಬಿಜೆಪಿಗೆ ಚಿತ್ತಾಪುರದಲ್ಲಿ ಅಭ್ಯರ್ಥಿಗೆ ಮತ ಹಾಕಿರಬ...

ಸಮಾಜ ಸೇವೆ ನೋಡಿ ಮತ ಹಾಕಿ.

ಇಮೇಜ್
ಚಿತ್ತಾಪೂರ: ಕ್ಷೇತ್ರದಲ್ಲಿ ಒಂದು ವರ್ಷದಿಂದ ಸಮಾಜ ಸೇವೆ ಮಾಡುತ್ತಾ ಇರುವೆ ಈ ಸಮಾಜ ಸೇವೆ ನೋಡಿ ನನ್ನಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು. ತಾಲ್ಲೂಕಿನ ಚಾಮನೂರ, ಕಡಬೂರ್, ಕುಲಕಂದ, ಮಳಗ, ತುನ್ನೂರ, ಬನ್ನಟ್ಟಿ, ಕುಂಬಾರ ಹಳ್ಳಿ, ನಾಲವಾರ ಸ್ಟೇಷನ್, ಸ್ಟೇಷನ್ ತಾಂಡಾ, ಸೂಗುರ, ಸೂಗುರ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಯಾವುದೇ ಉನ್ನತ ಹುದ್ದೆಯಲ್ಲಿ ಇಲ್ಲಾ ಶಾಸಕನು ಇಲ್ಲಾ ಆದರೂ ನಾನು ಕ್ಷೇತ್ರದಲ್ಲಿ ನನ್ನ ವೈಯಕ್ತಿಕ ಹಣದಿಂದ ನಿಮ್ಮೆಲ್ಲರ ಸೇವೆ ಮಾಡುತ್ತಿರುವೆ ಮುಂದೆಯೂ ಮಾಡುವೇ ಎಂದರು. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದರೆ ಅದು ಸತ್ಯಕ್ಕೆ ದೂರವಾಗಿದೆ. ನಾನು ಒಂದು ವೇಳೆ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥ ಆಗಿದ್ದಾರೆ ಕಾನೂನು ಈಗಾಗಲೇ ನನ್ನ ಶಿಕ್ಷೇ ನೀಡುತ್ತಿತ್ತು ಅವರು ಹೇಳುವ ಮಾತ್ತು ಯಾರು ನಂಬಬೇಡಿ ಮತಗಳು ಸೆಳೆಯಲು ಇದು ಒಂದು ಕುತುಂತ್ರವಾಗಿದೆ ಎಂದರು. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡದೆ ಬಿಜೆಪಿ ಪಕ್ಷಕ್ಕೆ ಬೆಂಬಲಸಿ ನನ್ನಗೆ ಗೆಲ್ಲಿಸಿ, ನಾವು ಹಿಂದು ಧರ್ಮದ ಪರವಾಗಿದ್ದೆವೆ ಅವರು ಜಾತಿ-ಜಾತಿಗಳ ಮಧ್ಯ ಜಗಳ ಹಚ್ಚುವರು ಇದ್ದರೆ ಎಂದು ಹೇಳಿದರು. ಇದೇ ವೇಳೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಇತರ ಪಕ್ಷವನ್ನು ತೊರೆದು ಬಿಜೆಪಿ ಪಕ್ಷದ ತತ್ವ ಸಿದ...

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಇಮೇಜ್
ಚಿತ್ತಾಪೂರ: ಚುನಾವಣೆಯ ಭದ್ರತೆಯ ಸಲುವಾಗಿ ಪಟ್ಟಣದ ತಹಸೀಲ್ ಕಛೇರಿಯಲ್ಲಿ  ಕರ್ತವ್ಯದಲ್ಲಿ ಇದ್ದ ಪೋಲೀಸ ಪೇದೆ ಸಾವನ್ನಪ್ಪಿದ ಘಟನೆ ನಡೆದಿದೆ. ಮಲ್ಲಿಕಾರ್ಜುನ ಪೋತೆಪೂರ (38) ಎಂಬ ಪೋಲೀಸ ಪೇದೆ ಬುಧವಾರ ರಾತ್ರಿ ತಹಸೀಲ್ ಕಛೇರಿಯ ಭದ್ರತೆಯ ಕರ್ತವ್ಯದಲ್ಲಿದ್ದ ಪೋಲೀಸ ಪೇದೆ 303 ಬಂದೂಕನಿಂದ ತಾನೇ ಪೈರಿಂಗ್, ಅಥವಾ ಆಕಸ್ಮಿಕವಾಗಿ ಮಾಡಿಕೊಂಡಿರಬಹುದು ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಪೋಲೀಸ ಪೇದೆಯ ಚಲನ ವಲನದ ಕುರಿತು ತಹಸೀಲ್ ಕಛೇರಿಯಲ್ಲಿನ ಸಿಸಿ ಟಿವಿ ಪರಿಶೀಲನೆಯ ನಡೆಯುತ್ತಿದೆ. ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ಕೈಗೊಂಡು ಸಾವಿನ ನಿಖರತೆ ತಿಳಿಸಲಾಗುವುದು ಎಂದು ಪೋಲೀಸ ಮೂಲಗಳಿಂದ ತಿಳಿದು ಬಂದಿದೆ.

ಕೆಟ್ಬ ಹಾಗೂ ಭ್ರಷ್ಟ ಸರ್ಕಾರ‌ ರಾಜ್ಯದಲ್ಲಿದೆ: ಖರ್ಗೆ ಆರೋಪ.

ಇಮೇಜ್
ಚಿತ್ತಾಪೂರ: ರಾಜ್ಯದ ಇತಿಹಾಸದಲ್ಲಿಯೇ ಬಿಜೆಪಿ ಸರ್ಕಾರವು ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ತಾಲ್ಲೂಕಿನ ದಿಗ್ಗಾಂವ, ಅಲ್ಲೂರು(ಬಿ), ಅಲ್ಲೂರ(ಕೆ), ಇಟಗಿ  ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಇದೆ ಎನಿಸುವುದಿಲ್ಲ. 40% ಸರ್ಕಾರ ಇದೆ ಎನ್ನುವುದು ಜನರ ಅಭಿಪ್ರಾಯವಾಗಿದೆ. ಈ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಿಕೊಂಡು ನಿರುದ್ಯೋಗಿ ಯುವಕರ ಪಾಲಿಗೆ ಕರಾಳವಾಗಿ ಪರಿಣಮಿಸಿದೆ.  ತಾಲೂಕಿನಲ್ಲಿ ರಾಜಕೀಯ ವಾತಾವರಣ ಕಲುಷಿತಗೊಳ್ಳುತ್ತಿದೆ. ತತ್ವ ಸಿದ್ದಾಂತದ ಬಗ್ಗೆ ಮಾತನಾಡುವ ಬಿಜೆಪಿ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗೆ ಟಿಕೇಟ್ ನೀಡಿದೆ. ಅಕ್ರಮ ಅಕ್ಕಿ ಹಾಗೂ ಹಾಲಿನ‌ಪುಡಿ‌ ಕಳ್ಳತನ ಮಾಡಿ ಮಾರಾಟ‌ ಮಾಡಿದ ಆರೋಪದ ಮೇಲೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ 40 ಕೇಸುಗಳು ದಾಖಲಾಗಿವೆ. ಇದನ್ನೆಲ್ಲ ನಾನು ಹೇಳುತ್ತಿಲ್ಲ. ಚುನಾವಣೆ ನಾಮ ಪತ್ರದ ಜೊತೆಗೆ ಅವನು ತಹಸೀಲ್ದಾರರಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ವಿವರವಾಗಿ ಹೇಳಿಕೊಂಡಿದ್ದಾನೆ. ಅಂತವನಿಗೆ ಟಿಕೇಟ್ ನೀಡಿರುವ ಬಿಜೆಪಿಗರು ಚಿತ್ತಾಪುರದ ಘನತೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ ಎಂದರು. ಈ ಸಲದ ಚುನಾವಣೆ ಯುವಕರ ಭವಿಷ್ಯದ ಮಹಿಳೆಯ...

ಭಜರಂಗದಳ, ಹಿಂದೂ ಸಮಾಜದ ಕವಚ: ಮಣಿಕಂಠ ರಾಠೋಡ.

ಇಮೇಜ್
ಚಿತ್ತಾಪೂರ: ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ದವಾಗಿರುವ ಕಾರ್ಯಕರ್ತರ ಪಡೆ, ಹಿಂದೂ ಸಮಾಜದ ಕವಚವಿದ್ದಂತೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು. ತಾಲ್ಲೂಕಿನ ಯರಗಲ್, ಮರಗೋಳ, ದಂಡೋತಿ, ತನಸನಹಳ್ಳಿ (ಟಿ), ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಹಿಂದೂ ವಿರೋಧಿ ನಿಲುವಿಗೆ ಧಿಕ್ಕಾರ. ಬಜರಂಗ ದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳುತ್ತದೆ ಈ ನಿಲುವು  ನೋಡಿದ್ರೆ ನೀವು ಹಿಂದೂ ದ್ರೋಹಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದರು. ನಾನು ಗೆಲ್ಲಲಿ ಬಿಡಲಿ ನಾನು ನಿಮ್ಮ ಕ್ಷೇತ್ರದ ಸಲುವಾಗಿ ಸೇವೆ ಸಲ್ಲಿಸುವೆ. ಮರಗೋಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ ಜಾಸ್ತಿಯಾಗಿದೆ ನಾನು ಗಣೇಶನ ದೇವಸ್ಥಾನಕ್ಕೆ ಆಶೀರ್ವಾದ ಪಡೆಯಲು ಬರುವೆ ಎಂದರೆ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಮಣಿಕಂಠಗೆ ಕರಿಸಬೇಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಈ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಮಾತ್ತು ಹೇಳುವೇ ನಮ್ಮ ಬಿಜೆಪಿ ಪಕ್ಷ ಚಿತ್ತಾಪುರನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಆಗ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ತಿರುಗೇಟು ನೀಡಿದರು. ಕ್ಷೇತ್ರದ ಯಾವುದೇ ಗ್ರಾಮದ ಸಮಸ್ಯೆ ಇರಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿಮ್ಮ ಗ್ರಾಮಕ್ಕೆ ಕರೆಸಿ ಸಮಸ್ಯೆಗೆ ಪರಿಹಾರ ಕೋಡಿಸುವ ಪ್ರ...

ನಿಮ್ಮ ಮಗನಾಗಿ ಸೇವೆ ಮಾಡುವೆ: ಮಣಿಕಂಠ ರಾಠೋಡ.

ಇಮೇಜ್
ಚಿತ್ತಾಪೂರ: ಮೇ,೧೦ಕ್ಕೆ ನಡೆಯಲ್ಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನಗೆ ಗೆಲ್ಲಿಸಿ ನಾ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು.   ತಾಲ್ಲೂಕಿನ ಸಾತನೂರ, ಹೊಸೂರ, ಭಂಕಲಗಾ, ಅಣೀಕೇರ ತಾಂಡಾ, ಭೀಮನಹಳ್ಳಿ, ಆಲೂರ, ಸೂಲಹಳ್ಳಿ, ಕಮರವಾಡಿ, ಕಮರವಾಡಿ ತಾಂಡಾ, ಡಿಗ್ಗಿ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಕುರಿತು ಮಾತನಾಡಿದ ಅವರು. ನಾನು ಕ್ಷೇತ್ರದಲ್ಲಿ ಸಾಕಾಷ್ಟು ಸಮಾಜ ಸೇವೆ ಮಾಡಿರುವೆ. ಅದು ನಾ ಏನೂ ಹೇಳಬೇಕಿಲ್ಲ. ಅದು ನಿಮ್ಮೆಲ್ಲರಿಗೆ ಗೊತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಬೇಜವಾಬ್ದಾರಿಯಿಂದ ಕೆಲ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ ಹೀಗಾಗಿ ಮುಂಬರುವ ದಿನಗಳಲ್ಲಿ ನನ್ನಗೆ ಒಂದು ಬಾರಿ ಅವಕಾಶ ಕೋಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ನಾನು ನಿಷ್ಠೆಯಿಂದ ಮಾಡಿ ತೋರಿಸುವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂದು ಹೇಳಿ ದೇಶದ ಪ್ರಧಾನಿಗೆ ಅಪಮಾನ ಮಾಡಿದ್ರೆ ಇಲ್ಲಿ ಪ್ರಿಯಾಂಕ್ ಖರ್ಗೆ ಕೊಡ ಮೋದಿಗೆ ನಾಲಾಯಕ ಅನ್ನುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಅವರು ಮಾಡುವ ಅಪಮಾನ ಬರಿ ನರೇಂದ್ರ ಮೋದಿಗಷ್ಟೇ ಅಲ್ಲಾ ದೇಶದ ಪ್ರತಿಯೊಬ್ಬ ಪ್ರಜೆಗೆ ಅಪಮಾನ ಮಾಡಿದಂತೆ ಹೀಗಾಗಿ ಅವರಿಗೆ ಮೇ,೧೦...

ಬಿಜೆಪಿಯಿಂದ ಕೋಲಿ,ಕಬ್ಬಲಿಗ ಸಮಾಜಕ್ಕೆ ಅನ್ಯಾಯ: ಕಮಕನೂರ.

ಇಮೇಜ್
ಚಿತ್ತಾಪೂರ: ಕೋಲಿ,ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಮಾತು ಕೊಟ್ಟಿತ್ತು ಅದನ್ನು ತಪ್ಪಿದ್ದಾರೆ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿಗೆ ಸೇರಿಸದೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು. ತಾಲ್ಲೂಕಿನ ಮತಕ್ಷೇತ್ರದ ಹೊಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೇ ಅವರ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು ಕೇಂದ್ರ,ರಾಜ್ಯ ಸರ್ಕಾರ ಪತನ ಆಗಬೇಕು ಆಗ ನಮ್ಮ ಕೋಲಿ, ಕಬ್ಬಲಿಗ ಸಮಾಜಕ್ಕೆ ಎಸ್ ಟಿ ಮಿಸಲಾತಿ ಸಿಗುತ್ತದೆ.ಇಡಿ ಕರ್ನಾಟಕ ಸರ್ಕಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಸೋಲಿಸುವ ಹುನ್ನಾರ ನಡೆಸುತ್ತಿದ್ದಾರೆ ಹೀಗಾಗಿ ಅವರಿಗೆ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅವರ ಕೈ ಬಲಿಷ್ಠ ಪಡಿಸೋಣ ಎಂದರು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ಬಂದೆ ಬರುತ್ತೆ, ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆ ಆಗುತ್ತೆ ಎಂದು ಭವಿಷ್ಯ ನುಡಿದರು.  ಈ ಸಂದರ್ಭದಲ್ಲಿ ವಿಶ್ವನಾಥ ಪಾಟೀಲ ಹೆಬ್ಬಾಳ, ಜಗಣ್ಣಗೌಡ ರಾಮತೀರ್ಥ, ಪ್ರಭುರಾಜ ಕಾಂತಾ, ಶಾಂತಣ್ಣ ಚಾಳಿಕಾರ, ಶರಣಪ್ಪ ನಾಟೀಕಾರ್, ರಾಮಲಿಂಗ ಬಾನರ್, ಶಿವೂ ಸುಲ್ತನಪೂರ, ಭೀಮಣ್ಣ ಶಿಭಾ, ಸಾಬಣ್ಣ ಇಟಗಾ, ಭೀಮಣ್ಣ ಹೋತಿನಮಡಿ, ಸಾಯಬಗೌಡ, ಶಾಂತಪ್ಫ, ಸೇರಿದಂತೆ ಅನೇ...

ಅಭಿವೃದ್ದಿ ನೋಡಿ ಮತ ಹಾಕಿ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ನಮಗೆ ಅಭಿವೃದ್ದಿಯೇ ಮೂಲಮಂತ್ರ, ಚಿತ್ತಾಪುರದಲ್ಲಿ ಒಂದು ಪರಿಪೂರ್ಣ ಸಮಾಜ ನಿರ್ಮಾಣದ ಕನಸು ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಮುಖ್ಯವಾಹಿನಿಗೆ ತರುವ ತುಡಿತ ನಮಗಿದೆ. ಯಾವುದೇ ಧರ್ಮ ಹಾಗೂ ಜಾತಿಯ ರಾಜಕೀಯ ಬೇಕಿಲ್ಲ. ಹಾಗಾಗಿ ಸರ್ವಾಂಗೀಣ ಅಭಿವೃದ್ದಿ ನೋಡಿ ನನ್ನಗೆ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು.  ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆಗೊಂಡ ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಅಭಿವೃದ್ದಿ ಪರ, ಯುವಕರ ಭವಿಷ್ಯದ ಕಾಳಜಿ‌ ಇರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಹಾಗಾಗಿ ಅವರಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ಈ ಸಲದ ಚುನಾವಣೆ ಚಿತ್ತಾಪುರದ ಭವಿಷ್ಯದ ಪ್ರಶ್ನೆಯಾಗಿದೆ. ಬಿಜೆಪಿ ಅಭ್ಯರ್ಥಿ ಪರ ಯಾವೊಬ್ಬ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಬಿಜೆಪಿಯಲ್ಲಿರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಇಲ್ಲವೇ ತಟಸ್ಥರಾಗಿದ್ದಾರೆ ಹಾಗಾಗಿ ಕೇವಲ ಎನ್ ರವಿಕುಮಾರ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಬಸವ ತತ್ವ, ಅಂಬಿಗರ ಚೌಡಯ್ಯನವರ ತತ್ವ ಆದರ್ಶ, ಸಂವಿಧಾನದ ಪರಿಪಾಲನೆ ಹಾಗೂ ಅಭಿವೃದ್ಧಿ ಪರ ಚಿಂತನೆ ಇರುವ ವ್ಯಕ್ತಿ ಚುನಾವ...