ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪ್ಪು 50ನೇ ಹುಟ್ಟುಹಬ್ಬ ಆಚರಣೆ.

ಇಮೇಜ್
ಚಿತ್ತಾಪುರ: ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟು ಹಬ್ಬವನ್ನು ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹತ್ತಿರ ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾ ತಾಲೂಕ ಅಧ್ಯಕ್ಷ ವೆಂಕಟೇಶ್ ಹರವಾಳ ನೇತೃತ್ವದಲ್ಲಿ ಅಪ್ಪು ಅಭಿಮಾನಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ ಪುನೀತ್ ರಾಜಕುಮಾ‌ರ್ ಅವರ ಜನ್ಮ ದಿನದ ಸಮಾರಂಭದಲ್ಲಿ ಕಲಾವಿದ ಬಾಬು ಕಾಶಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಬಾಲ ನಟನಾಗಿ ಅಭಿನಯಿಸಿ ನಂತರ ನಾಯಕ ನಟನಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಸಿನೇಮಾ ಮಾಡಿದ ಪುನೀತ್ ರಾಜಕುಮಾ‌ರ್ ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅಮೋಘವಾಗಿದೆ ಹಾಗೂ ಎಲೆಮರೆ ಕಾಯಿಯಂತೆ ಸಲ್ಲಿಸಿದ ಸಮಾಜ ಸೇವೆ ಮೆಚ್ಚುವಂಥದ್ದು ಇಂತಹ ಅಪರೂಪದ ಚಿತ್ರನಟ ಪುನೀತ್ ರಾಜಕುಮಾ‌ರ್ ಅವರ ಹೆಸರನ್ನು ಪಟ್ಟಣದ ಲಾಡ್ಡಿಂಗ್ ಕ್ರಾಸ್ ಗೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಕೇಕ್ ಕತ್ತರಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ರವಿ ವಿಟ್ಕರ್, ರಮೇಶ ಬೋಸಗಿ, ಬಾಬು ಜೆಸಿಬಿ, ತಿಮ್ಮಯ್ಯ ಪವಾರ್, ರಾಜೇಶ್ ಕಾಶಿ, ರಾಮು ಹರವಾಳ, ವಿಠಲ್ ಕಟ್ಟಿಮನಿ, ರವಿ ಇವಣಿ, ಕಾಶಿನಾಥ ಗುತ್ತೇದಾರ, ಆನಂದ್ ಗುತ್ತೇದಾರ, ನಾಗು ಕಲ್ಲಕ್, ಮಧುಸೂದನ್ ಕಾಶಿ, ಚಂದ್ರಶೇಖರ್ ಬಿಎಸ್‌ಎನ್‌ಎಲ್, ವೆಂಕಟ...

ಚಿತ್ತಾಪುರ: ಅಕ್ರಮ ಮದ್ಯ ವಶ.

ಇಮೇಜ್
ಚಿತ್ತಾಪುರ: ಪಟ್ಟಣದದಲ್ಲಿ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ರೂ.75045 ಮೌಲ್ಯದ ಮದ್ಯ ಹಾಗೂ ಒಂದು ಆಟೋ ವಶಕ್ಕೆ ಪಡೆದ ಘಟನೆ ನಡೆದಿದೆ. ಪಿಎಸ್‌ಐ ಶ್ರೀಶೈಲ ಅಂಬಾಟಿ ಬುಧವಾರ ರಾತ್ರಿ ದಾಳಿ ಮಾಡಿ 650ಎಂಎಲ್ ಪವರ್ ಕೂಲ್ ಸ್ಟ್ರಾಂಗ್ ಬೀರ್ 6 ಬಾಕ್ಸ್ 10800 ರೂಪಾಯಿ, 650ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ 5 ಬಾಕ್ಸ್ 11250ರೂಪಾಯಿ, 90ಎಂಎಲ್ ಒರಿಜಿನಲ್ ಚಾಯ್ಸ್ ವಿಸ್ಕಿ 10 ಬಾಕ್ಸ್ 36480 ರೂಪಾಯಿ, 180ಎಂಎಲ್ ಬ್ಯಾಗ ಪೇಪರ್ ವಿಸ್ಕಿ 1 ಬಾಕ್ಸ್ 6912 ರೂಪಾಯಿ, 330 ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ 4 ಬಾಕ್ಸ್ 9600 ರೂಪಾಯಿ ಒಟ್ಟು 75045 ರೂಪಾಯಿ ಮೌಲ್ಯದ ಆಕ್ರಮ ಮದ್ಯ ವಶಕ್ಕೆ ಪಡೆಯುವುದರ ಜೊತೆಗೆ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಾಗೂ ಒಂದು ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಸಿದ ತನಿಖೆ ಮುಂದುವರೆದಿದೆ ಎನ್ನಲಾಗಿದೆ.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ.

ಇಮೇಜ್
ಚಿತ್ತಾಪುರ: ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯೆಯರಾದ ಶ್ರೀಮತಿ ಅನ್ನಪೂರ್ಣ ನಾಗಪ್ಪ ಕಲ್ಲಕ್ ನೂತನ ಅಧ್ಯಕ್ಷೆಯಾಗಿ ಮತ್ತು ಶ್ರೀಮತಿ ಆತೀಯಾ ಬೇಗಂ ನಜಮೋದ್ದಿನ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತಿಕ್ಕೆಗೆ ಹೋಗಿದೆ. ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಶುಕ್ರವಾರ ನಡೆದ ಪುರಸಭೆ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ನಪೂರ್ಣ ಕಲ್ಲಕ್, ಬಿಜೆಪಿ ಪಕ್ಷದಿಂದ ಸುಶೀಲಾ ದೇವಸುಂಧರ ನಾಮಪತ್ರ ಸಲ್ಲಿಸಿದರು. ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಕಲ್ಲಕ್ ಅವರು 18 ಮತಗಳು ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ. ಬಿಜೆಪಿಯ ಸುಶೀಲಾ ದೇವಸುಂಧರ ಅವರು 5 ಮತಗಳು ಪಡೆದು ಸೋಲು ಅನುಭವಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಆತೀಯಾ ಬೇಗಂ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗಯ್ಯ ಹಿರೇಮಠ ಅವರು ಘೋಷಣೆ ಮಾಡಿದರು. ಇದೇ ವೇಳೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾ‌ರ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಪಾಶಾ ಖುರೇಶಿ, ಸುಮಂಗಲಾ ಸಣ್ಣೂರಕರ್, ಬೇಬಿಬಾಯಿ ಜಾಧವ, ವಿನೋದ ಗುತ್ತೇದಾರ, ಕಾಶಿಬಾಯಿ ಬ...

ಅಭಿವೃದ್ಧಿಗೆ ಶ್ರಮಿಸಿ, ಸಚಿವರ ಹೆಸರು ತನ್ನಿ: ನಾಗರೆಡ್ಡಿ ಪಾಟೀಲ.

ಇಮೇಜ್
ಚಿತ್ತಾಪುರ: ನೂತನವಾಗಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ತರಬೇಕು ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಕಿವಿಮಾತು ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಒಂದೇ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳು ಇದ್ದಾಗ ಸ್ವಲ್ಪ ಅಸಮಾಧಾನ ಇದ್ದೆ ಇರುತ್ತದೆ ಹೀಗಾಗಿ ಸ್ವಲ್ಪ ತಾಳ್ಮೆಯಿಂದ ಇರಬೇಕು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ, ಹೀಗಾಗಿ ಅಸಮಾಧಾನ ಬದಿಗಿಟ್ಟು ಎಲ್ಲರೂ ಒಗ್ಗೂಡಿ ಸರ್ವ ಸದಸ್ಯರ ಅಭಿಪ್ರಾಯ ಪಡೆದು ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದು ಹೇಳಿದರು. ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೂ ಮತ್ತು ಪುರಸಭೆ ಸದಸ್ಯರಿಗೂ ಯಾವುದೇ ದಕ್ಕೆ ಯಾಗದಂತೆ ಎಲ್ಲರ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದರು. - ಶ್ರೀಮತಿ ಅನ್ನಪೂರ್ಣ ಕಲ್ಲಕ್ ನೂತನ ಅಧ್ಯಕ್ಷೆ ಪುರಸಭೆ ಚಿತ್ತಾಪೂರ. ವೀಕ್ಷಕರಾಗಿ ಕಲಬುರಗಿ ಜಿಡಿಎ ಅಧ್ಯಕ್ಷ ಮಜ‌ರ್ ಅಲ್ಲಾಂಖಾನ್, ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ ಚಿಂಚನಸೂರ, ಈರಣ್ಣ ಝಳಕಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮರಗೋಳ...

ಫೆ.25ಕ್ಕೆ ಕುಂಬಾರರ ಸಭೆ, ಮತ್ತು ಸರ್ವಜ್ಞ ಜಯಂತಿ ಆಚರಣೆ.

ಇಮೇಜ್
ಬೆಂಗಳೂರು: ರಾಜ್ಯ ಕುಂಬಾರರ ಯುವ ಸೈನ್ಯ ರಾಜ್ಯ ಘಟಕ ವತಿಯಿಂದ ಕುಂಬಾರರ ಸಭೆ ಮತ್ತು 505ನೇ ವರ್ಷದ ಸರ್ವಜ್ಞ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಎಸ್ ಕುಂಬಾರ ತಿಳಿಸಿದ್ದಾರೆ. ಬೆಂಗಳೂರು ನಗರದ ವಿಧಾನಸೌಧ ಮುಂಭಾಗ ಕಬ್ಬನ ಪಾರ್ಕ್ ನಲ್ಲಿ ಫೆಬ್ರುವರಿ,25 ಮಂಗಳವಾರ ಸಾಯಂಕಾಲ 4 ಗಂಟೆಗೆ ಸರ್ವಜ್ಞ ಜಯಂತಿ ಆಚರಣೆ ನಂತರ ಮಹತ್ವದ ಕುಂಬಾರರ ಸಭೆ ನಡೆಯಲಿದೆ ಈ ಒಂದು ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾ/ತಾಲೂಕಿನ ರಾಜ್ಯ ಕುಂಬಾರರ ಯುವ ಸೈನ್ಯ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು, ಸಮಯ ಬಿಡುವು ಮಾಡಿಕೊಂಡು ಈ ಒಂದು ಸಣ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ವಿವಿಧೆಡೆ ಸರ್ವಜ್ಞ ಜಯಂತಿ ಆಚರಣೆ.

ಇಮೇಜ್
ಚಿತ್ತಾಪುರ: ಪಟ್ಟಣದ ವಿವಿಧೆಡೆ ಕನ್ನಡ ಪರಂಪರೆಯ ಮಹಾನ್ ಮಾನವತಾವಾದಿ, ತತ್ವಜ್ಞಾನಿ, ತ್ರಿಪದಿಗಳ ಬ್ರಹ್ಮ ಕವಿ ಸರ್ವಜ್ಞ ಅವರ 505ನೇ ಜಯಂತಿ ಆಚರಿಸಲಾಯಿತು. ತಹಸೀಲ್ ಕಾರ್ಯಾಲಯದಲ್ಲಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಜಯಂತಿ ಆಚರಣೆ ಕುರಿತು ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ ಜನರು ಆಡುವ ಭಾಷೆಯಲ್ಲಿ ತ್ರಿಪದಿಯಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರ ಸರ್ವಜ್ಞ ರವರ ಆದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದು ಸಲಹೆ ನೀಡಿದರು. ಈ ವೇಳೆಯಲ್ಲಿ ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಕುಂಬಾರ, ಅಧ್ಯಕ್ಷ ಪ್ರಭು ಕುಂಬಾರ, ಭೀಮರಾಯ ಕುಂಬಾರ, ಶರಣು ಕುಂಬಾರ, ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು. ಪುರಸಭೆ ಕಾರ್ಯಾಲಯ ದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯ ನಿಮಿತ್ಯ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಿದರು ಈ ವೇಳೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್, ಸುನೀಲ ಕುಮಾರ, ಶರಣಪ್ಪ, ವೆಂಕಟೇಶ ಕುಮಾರ, ಭೀಮು ಇಲಾಖೆಯ ಇತರರು ಇದ್ದರು. ತಾಲ್ಲೂಕ ಪಂಚಾಯತ ಇಲಾಖೆ ಯಯಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯ ಪ್ರಯುಕ್ತ ಗುರುವಾರ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸು ಮೂಲಕ ಆಚರಿಸಿದರು.ಈ ...

ತಹಸೀಲನಲ್ಲಿ ಶಿವಾಜಿ ಜಯಂತ್ಯೋತ್ಸವ ಆಚರಣೆ.

ಇಮೇಜ್
ಚಿತ್ತಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ನಿಮಿತ್ಯ ಶಿವಾಜಿ ಭಾವಚಿತ್ರಕ್ಕೆ ತಾಲೂಕು ಆಡಳಿತ ಹಾಗೂ ಸಮಾಜದ ವತಿಯಿಂದ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸುವ ಮೂಲಕ ಸರಳವಾಗಿ ಜಯಂತ್ಯೋತ್ಸವ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ತಹಸೀಲ್ದಾರ ನಾಗಯ್ಯ ಹಿರೇಮಠ, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ, ಪಿಎಸ್‌ಐ ಚಂದ್ರಾಮಪ್ಪ, ಸಮಾಜದ ಅಧ್ಯಕ್ಷ ಅನಿಲ್ ಯಂಡೆ, ಮುಖಂಡರಾದ ರೋಹಿತ್ ಚವ್ಹಾಣ್, ರೋಹಿತ್ ಯಂಡೆ, ಸಂತೋಷ ಗವಳಕರ್, ಆಕಾಶ್ ಸುಗಂಧಿ, ರಾಘವೇಂದ್ರ ಮೋಹಿತೆ, ಸಂಜು ಸೂರ್ಯವಂಶಿ, ಗುರು ಉಪ್ಪಾರ್, ನವೀನ್ ಚವ್ಹಾಣ್, ಅನುಪ್ ಉಬಾಳೆ, ನರಹರಿ ಕುಲ್ಕರ್ಣಿ, ಸೇರಿದಂತೆ ಇತರರು ಇದ್ದರು.

ಶಿವಾಜಿ ಪ್ರಬುದ್ಧ ಆಡಳಿತಗಾರ: ಕಂಬಳೇಶ್ವರ ಶ್ರೀ.

ಇಮೇಜ್
ಚಿತ್ತಾಪುರ: ಶಿವಾಜಿ ಮಹಾರಾಜರು ಅತ್ಯುತ್ತಮ ನಾಯಕತ್ವ, ಆಡಳಿತ ತಂತ್ರಗಳು ಮತ್ತು ಪ್ರಬುದ್ಧ ಆಡಳಿತಗಾರನಾಗಿದ್ದರು ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು. ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ನಿಮಿತ್ಯ ಶಿವಾಜಿ ಮೂರ್ತಿಗೆ ಶ್ರೀಗಳು ಪೂಜೆ ಸಲ್ಲಿಸಿ ಮಾತನಾಡಿದ ಅವರು ಅವರ ಆಳ್ವಿಕೆಯ ಅವಧಿಯು ಆಡಳಿತ ಮತ್ತು ನ್ಯಾಯಾಲಯ ವಲಯಗಳಲ್ಲಿ ಪರ್ಷಿಯನ್ ಭಾಷೆಗಿಂತ ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡುವ ಮೂಲಕ ಗುರುತಿಸಲ್ಪಟ್ಟಿತು, ಇದು ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಅನಿಲ್ ಯಂಡೆ, ಮುಖಂಡರಾದ ರೋಹಿತ್ ಚವ್ಹಾಣ್, ರೋಹಿತ್ ಯಂಡೆ, ಸಂತೋಷ ಗವಳಕರ್, ಆಕಾಶ್ ಸುಗಂಧಿ, ರಾಘವೇಂದ್ರ ಮೋಹಿತೆ, ಸಂಜು ಸೂರ್ಯವಂಶಿ, ಗುರು ಉಪ್ಪಾರ್, ನವೀನ್ ಚವ್ಹಾಣ್, ಅನುಪ್ ಉಬಾಳೆ, ಬಂಟ್ಟಿ ಹರಳೆ, ಸುನೀಲ್ ಯಂಡೆ, ನಿತೇಶ ಸುಗಂಧಿ, ಅನೀಲ್ ಚಪಟ್ಲೆ, ಅಂಬಣ್ಣ ಹೋಳಿಕಟ್ಟಿ, ಸಾಬಣ್ಣ ಹೋಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ಮೇಘರಾಜ ಗುತ್ತೇದಾರ್, ನರಹರಿ ಕುಲ್ಕರ್ಣಿ, ಮಹೇಶ್ ಸುಗಂಧಿ, ಪ್ರಶಾಂತ್ ಶಿಂದೆ,ರಾಜೇಶ ಹೋಳಿಕಟ್ಟಿ, ಹರ್ಷ ಸೂರ್ಯವಂಶಿ ಸೇರಿದಂತೆ ಪಿಎಸ್‌ಐ ಚಂದ್ರಾಮಪ್ಪ, ದತ್ತು ಜಾನೆ, ಸವಿಕುಮಾರ, ಇತರರು ಇದ್ದರು.

ಸಂಘಟನೆಗೆ ಯುವಕರ ಪಾತ್ರ ಮುಖ್ಯ: ಬ್ಲಾಕ್ ಅಧ್ಯಕ್ಷ.

ಇಮೇಜ್
ಚಿತ್ತಾಪುರ: ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಯುವ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಲು ಕಾಂಗ್ರೇಸ್ ಯುವ ಘಟಕ ಪ್ರಾಮಾಣಿಕ ಪ್ರಯತ್ನ ಮಾಡಬೇಕು  ಅದರ ಜೊತೆಗೆ ಯುವಕರಲ್ಲಿ ಏನೇ ವೈ ಮನಸುಗಳಿದ್ದಲ್ಲಿ ಯುವಕರು ಸರಿಪಡಿಸಿಕೊಂಡು ಪಕ್ಷದ ಸಿದ್ಧಾಂತದ ಅಡಿಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಕೆಲಸ ಮಾಡಬೇಕೆಂದು ಹೇಳಿದರು. ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ ಹಿಂದಿನ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ಸಂಜು ಬೂಳ್ಕರ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು ಅದೇ ರೀತಿ ನೂತನ ಅಧ್ಯಕ್ಷರು ಸಹ ಸಕ್ರಿಯವಾಗಿ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಯುವಕರಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ತಿಳಿಸುವಂತಹ ಕೆಲಸಗಳು ಆಗಲಿ ಹೇಳಿದರು. ಪಕ್ಷದಲ್ಲಿನ ನನ್ನ ಸೇವೆಯನ್ನು ಗುರುತಿಸಿ ನನಗೆ ನೂತನ ತಾಲೂಕು ಯುವ ಘಟಕ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಸಂತೋಷವಾಗಿದೆ, ಇನ್ನು ಹೆಚ್ಚಿನ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಯುವ ಘಟಕ ಸಂಘಟನೆ ಸಲುವಾಗಿ ಸಕ್ರಿಯವಾಗಿ ನಾನು ಪಕ್ಷದಲ್ಲಿ ಸೇವೆ ಸಲ್ಲಿಸು...

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ಇಮೇಜ್
ಚಿತ್ತಾಪುರ: ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಮೂರು ಪವಿತ್ರ ತೀರ್ಥಸ್ಥಳ ಜೊತೆಗೆ ಪ್ರಯಾಗರಾಜ್ ಕೂಡ ಒಂದು ಪವಿತ್ರ ತೀರ್ಥಸ್ಥಳವಾಗಿದೆ ಎಂದು ಕಂಬಳೇಶ್ವರ ಮಠ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು. ಪಟ್ಟಣದಿಂದ ಪ್ರಯಾಗರಾಜ್ ಕುಂಭಮೇಳಕ್ಕೆ ಹೊರಟ ಭಕ್ತರ ವಾಹನಕ್ಕೆ ವರುಣನಗರದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎರಡು ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯುತ್ತಿದ್ದು 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ ಎಂದರು.  ಹಿಂದೂ ಪುರಾಣಗಳ ಪ್ರಕಾರ ಕುಂಭಮೇಳದಲ್ಲಿ ದೇವರುಗಳು ಭೂಮಿಗೆ ಇಳಿದು ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ ಜೊತೆಗೆ ಪ್ರಯಾಗರಾಜ್‌ ಈ ಸ್ಥಳದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ ಎಂದು ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ್ ಸಾಹುಕಾರ ಬಂಕಲಗಿ ಮಾತನಾಡಿ ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾ...

ರಸ್ತೆ ದುರಸ್ತಿಗೆ ಸ್ಪಂದನೆ: ಗ್ರಾಪಂ ಅಧ್ಯಕ್ಷ ಸ್ಪಷ್ಟನೆ.

ಇಮೇಜ್
ಚಿತ್ತಾಪುರ: ಭಾಗೋಡಿ ಮತ್ತು ಮುಡಬೂಳ ರಸ್ತೆ ದುರಸ್ತಿ ಬಗ್ಗೆ ಜನವರಿ 30ಕ್ಕೆ ಅಧಿಕಾರ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ತಿಳಿದು ವರದಿಗಾರರ ಜೊತೆ ಭಾಗೋಡಿ ಗ್ರಾಪಂ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಜಗದೀಶ್ ಪಾಟೀಲ್ ಮಾತನಾಡಿ ಭಾಗೋಡಿಯಿಂದ ಡಿಗ್ರಿ ಕಾಲೇಜು ಮಾರ್ಗವಾಗಿ ಮತ್ತು ಮುಡಬೂಳ ಮಾರ್ಗವಾಗಿ ಚಿತ್ತಾಪುರ ಹೋಗುವ ರಸ್ತೆ ಹಾಗೂ ಭಾಗೋಡಿಯಿಂದ ಗುಂಡಗುರ್ತಿ ರಸ್ತೆ ದುರಸ್ತಿ ಬಗ್ಗೆ ಈಗಾಗಲೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ರವರಿಗೆ ಮನವಿ ಮಾಡಲಾಗಿದ್ದು ಸಚಿವರು ಸ್ಪಂದಿಸಿ ಅದೋಷ್ಟು ಬೇಗನೆ ರಸ್ತೆ ದುರಸ್ತಿ ಮಾಡಿಸುವ ಭರವಸೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ.

ಇಮೇಜ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಮಹಾತ್ಮಾಪೀಠ ಗದ್ದಗಿಮಠದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಫೆ. 3 ರಿಂದ ಪ್ರಾರಂಭವಾಗಿ ಫೆ. 27 ಕ್ಕೆ ಮುಕ್ತಾಯವಾಗಲಿದೆ ಎಂದು ಪೀಠಾಧಿಪತಿ ನಾಗಪ್ಪಯ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ. ಫೆ.3 ರಂದು ಗಂಗಸ್ಥಳ, 4 ರಂದು ಮಹಾಪ್ರಸಾದ ಉಷಾ:ಕಾಲ ಕಾರಣಿಕ ಪೂಜೆ, 5 ರಂದು ಮಹಾಸೇವಾ ಹಾಗೂ ರಾತ್ರಿ 9 ಗಂಟೆಗೆ, ಪೂಜ್ಯ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಜರುಗುವುದು. 6 ರಂದು ಕೈ ಕುಸ್ತಿ, 7 ರಂದು ದಶಮಿ ಮೌನೇಶ್ವರ ಮಹಾಪ್ರಸಾದ, 8 ರಂದು ದಶಮಿ ಸೇವಾ, 12 ರಂದು ಹಾಲೋಕುಳಿ, 14 ರಂದು ಗಂಗಮ್ಮನ ಪೂಜೆ, 18 ರಂದು ತುರಕರ ಲಂಕಿ ಪ್ರಸಾದ, 26 ರಂದು ಶಿವರಾತ್ರಿ ಜಾಗರಣೆ, 27 ರಂದು  ಶಿವರಾತ್ರಿ ಅಮಾವಾಸ್ಯೆ ಹೀಗೆ ವಿವಿಧ ಕಾರ್ಯಕ್ರಮಗಳು ಹಾಗೂ ಸೇವೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ. 11ನೇ ಶತಮಾನದ ಧರ್ಮಕ್ರಾಂತಿಕಾರರು ಧಾರ್ಮಿಕ ಸಂಘರ್ಷಣೆಯಲ್ಲಿ ಭಾಗವಹಿಸಿ ಹಿಂದೂ ಧರ್ಮದ ಆರೂಢ ಮತವನ್ನು ಎತ್ತಿ ಹಿಡಿದಿದ್ದ ಶ್ರೀ ವಿರಾಟ ವಿಶ್ವಕರ್ಮ ಜಗದ್ಗುರು ಶ್ರೀ ಮೌನೇಶ್ವರರು ಕರ್ನಾಟಕದಲ್ಲೆಲ್ಲಾ ಅನೇಕ ಪವಾಡಗಳನ್ನು ಮಾಡಿದ ಮಹಾಯೋಗಿಗಳವರು ಅವರ ವರಪ್ರಸಾದಿಕರಾದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳು ಮಹಾಮಹಿಮರಾಗಿದ್ದರು. ಇವರ ಪವಾಡಗಳು ಒಂದಲ್ಲ ಸಾವಿರಾರು ಪವಾಡಗಳಾಗಿವೆ. ಇವರ ತರುವಾಯ ಬಂದ ಮಠದ ಲೀಲಾ ಪುರುಷರು ಸರ್ವಧರ್ಮಗಳನ್ನು ಸಮನಾಗಿ ಕಂಡು ಜನರಲ್ಲಿ...

ತಾಂಡಾದಲ್ಲಿ ವಿಜೃಂಭಣೆಯಿಂದ ಜರುಗಿದ ಪಲ್ಲಕ್ಕಿ ಉತ್ಸವ.

ಇಮೇಜ್
ಚಿತ್ತಾಪುರ: ಸ್ಟೇಷನ್‌ ತಾಂಡಾದಲ್ಲಿ 8 ನಾಯಕರ ನೇತೃತ್ವದಲ್ಲಿ ಎರಡನೇ ವರ್ಷದ ಪಲ್ಲಕ್ಕಿ ಉತ್ಸವ ಬಹು ವಿಜೃಂಭಣೆಯಿಂದ ನಡೆಯಿತ್ತು. ನಂತರ ಮೆರವಣಿಗೆ ಮುಖಾಂತರ ಸದ್ಗುರು ಸೇವಾಲಾಲ್‌ ಮಹಾರಾಜರ ಜಗಧಂಬಾ ದೇವಿಯ ಭಾವಚಿತ್ರದೊಂದಿಗೆ ಸ್ಟೇಷನ್‌ ತಾಂಡಾದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಯನ್ನು ಪೂಜಿಸುತ್ತಾ ಬಂಜಾರ ಸಮಾಜದ ಸಂಸ್ಕೃತಿಯನ್ನು ಎತ್ತಿ ಇಡಿಯುತ್ತಾ ಬಗೆ ಬಗೆಯ ಬಂಜಾರ ವೇಷಗಳನ್ನು ಧರಿಸಿ ಯುವತಿಯರು ಕುಂಭಮೇಳ ಆರುತಿ ಹಿಡಿದುಕೊಂಡು ಭಜನೆ ಮತ್ತು ಡೊಳ್ಳು, ಡಿಜೆ ಮುಖಾಂತರ ಪಲ್ಲಕಿಯು ಸೇವಾಲಾಲ್ ದೇವಸ್ಥಾನಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಕಿಶನ್ ರೂಪಲಾ ನಾಯಕ, ಕಿರಣ್ ಭೀಮಾ ನಾಯಕ, ಮೋತಿಲಾಲ್ ಬಾಬು ನಾಯಕ, ಲಕ್ಷ್ಮಣ ವಿಠಲ್ ನಾಯಕ್, ಚಂದು ನಾಯಕ, ಚಂರ್ದ ಭೀಕು ನಾಯಕ, ಪೊಮ್ಯಾ ನಾಯಕ, ರವೀಂದ್ರ ತಾರಾನಾಥ್,ನಾಯಕ, ದೇವಸ್ಥಾನ ಪೂಜಾರಿ, ಪೋಮು ಪಾಂಡು ಚವ್ಹಾಣ, ಬಂಜಾರ ಸಮಾಜದ ಗೌರವಾಧ್ಯಕ್ಷ ಗೋಪಾಲ ರಾಠೋಡ, ಸೇವಾಲಾಲ್‌ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ, ಭಮು ಪವಾರ, ಶಂಕರ್ ಬಾಬು ನಾಯಕ, ರಮೇಶ್ ನಾಗು ರಾಠೋಡ, ಚಂದ‌ರ್ ಮೋಟನಳ್ಳಿ, ದೇವಲಾ ನಾಮು ಚವ್ಹಾಣ, ಸಂಜು ರಾಠೋಡ, ಕುಶಾನ ಜಾಧವ, ಮನೋಜ್ ರಾಠೋಡ್ ಗೋರ್ ಸಿಕವಾಡಿ ಅಧ್ಯಕ್ಷ ಮನೋಜ್ ರಾಠೋಡ, ಅಂಬು ರಾಠೋಡ, ನಾಗ್ಯಾ ದೇವಲಾ, ಗೋಪಿ ರಾಠೋಡ, ಪಾಂಡು ರಾಠೋಡ, ರಾಮ ಚವ್ಹಾಣ, ರವಿ ಜಾಧವ, ಸುಭಾಷ್‌ ಜಾಧವ, ...

ತಹಸೀಲ್‌ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ.

ಇಮೇಜ್
ಚಿತ್ತಾಪುರ: ತಹಸೀಲ್‌ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯದ ಸಂರಕ್ಷಕ ಮಹಾನ್ ವಚನಕಾರ ಮಡಿವಾಳ ಮಾಚಿದೇವ ಜಯಂತ್ಯುತ್ಸವ ನಿಮಿತ್ತ ಭಾವಚಿತ್ರಕ್ಕೆ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕ‌ರ್, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಸಾಬಣ್ಣ ಮಡಿವಾಳ, ಮುಖಂಡರಾದ ವಿಜಯಕುಮಾ‌ರ್ ಮಡಿವಾಳ, ದೇವೇಂದ್ರಪ್ಪ ಮಡಿವಾಳ, ಸುರೇಶಕುಮಾರ್ ಮಡಿವಾಳ, ಮಾದೇವ ಮಡಿವಾಳ, ಲಕ್ಷ್ಮಣ್ ಮಡಿವಾಳ, ಸೂರ್ಯಕಾಂತ್ ಮಡಿವಾಳ, ರವಿಕುಮಾರ್ ಮಡಿವಾಳ, ವಿಶ್ವನಾಥ ಮಡಿವಾಳ, ಗೌರೀಶ್ ಮಡಿವಾಳ, ನಾಗಣ್ಣ ಮಡಿವಾಳ ದಿಗ್ಗಾಂವ, ಶರಣಪ್ಪ ಮಡಿವಾಳ, ನಾಗರಾಜ ಮಡಿವಾಳ, ಹುಸನಪ್ಪ ಮಡಿವಾಳ ಕಾಶಿನಾಥ ಮಡಿವಾಳ, ಸೇರಿದಂತೆ ಇತರರು ಇದ್ದರು.

ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಕೋಲಿ ಸಮಾಜದ ಮುಖಂಡರ ಆಗ್ರಹ.

ಇಮೇಜ್
ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ಅವ್ವಣ್ಣ ಮ್ಯಾಕೇರಿ ಅವರಿಗೆ ಕಲಬುರ್ಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಕೋಲಿ ಸಮಾಜದ ಮುಖಂಡರಾದ ಅಂಬು ಹೋಳಿಕಟ್ಟಿ, ತಿಪ್ಪಣ್ಣ ಇವಣಿ, ರಾಜಶೇಖರ ಮೂಲಿಮನಿ ಹೊಸ್ಸುರ್‌ ಅವರು ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವ್ವಣ್ಣ ಮ್ಯಾಕೇರಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಸಂಘಟನೆಗೆ ಹಗಲಿರಳು ಶ್ರಮಿಸುತ್ತಾ ಬಂದಿರುತ್ತಾರೆ. ಅಲ್ಲದೇ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳು ಸೇರಿದಂತೆ ಅನೇಕ ಚುನಾವಣೆಯಲ್ಲಿ ಸಕ್ರೀಯವಾಗಿ ಶ್ರಮಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಲ್ಲಿವರೆಗೆ ಹಿಂದುಳಿದವರಿಗೆ ಅವಕಾಶ ನೀಡಿಲ್ಲ ಬರೀ  ಮೇಲ್ವರ್ಗದವರಿಗೆ ಮಣೆ ಹಾಕಲಾಗಿದೆ ಹೀಗಾಗಿ ಹಿಂದುಳಿದವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷ ಆಯ್ಕೆ ಮಾಡುವಲ್ಲಿ ಅವ್ವಣ್ಣ ಮ್ಯಾಕೇರಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಅವರು ಭರವಸೆಯನ್ನು ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ ಇದರಿಂದ ಜಿಲ್ಲೆಯ ಕಾರ್ಯಕರ್ತರಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ತಿಳಿಸಿದ್ದಾ...

ರಾಜಸ್ಥಾನಿಗಳಿಂದ ಹಣ ವಸೂಲಿ: ರೈತರ ಆಕ್ರೋಶ.

ಇಮೇಜ್
ಚಿತ್ತಾಪುರ: ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ಸಿಕ್ಕಾಪಟ್ಟೆ ದರ ಹೆಚ್ಚಳ ಮಾಡಿ ರೈತರ ಹತ್ತಿರ ಹೆಚ್ಚಿನ ದರದಲ್ಲಿ ಹಣ ವಸೂಲಿ ಮಾಡಿರುವ ಅವರ ಮೇಲೆ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮಂಗಳವಾರ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಳೆದ ಸಾಲಿನಲ್ಲಿ ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ತೊಗರಿ 75 ಕೆ.ಜಿ ಒಂದು ಪಾಕೀಟ ರಾಶಿ ಮಾಡಲು ರೂ.150 ಕಡಲೆ ರಾಶಿಗೆ ರೂ.80 ತೆಗೆದುಕೊಂಡು ತಾಲೂಕಿನ ರೈತರ ಜಮೀನುಗಳನ್ನು ರಾಶಿ ಮಾಡಿರುತ್ತಾರೆ. ಆದರೆ ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ತೊಗರಿ 75 ಕೆ.ಜಿ ಒಂದು ಪಾಕೇಟಿಗೆ 250 ಹಾಗೂ ಕಡಲೆ ರಾಶಿಗೆ 150 ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ರೈತರು, ಅವರಿಗೆ ತಕರಾರು ಮಾಡಿದರೆ ನಾವು ಮಾಡುವುದು ಹೀಗೆ ನೀವು ಮಾಡಿಕೊಳ್ಳಬೇಕಾದರೆ ಮಾಡಿಕೊಳ್ಳಿ ಇಲ್ಲವಾದರೆ ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ತೊಗರಿ, ಕಡಲೆ ಬೆಲೆ ಬಹಳ ಕಡಿಮೆ ಇದ್ದು ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ. ಆದಕಾರಣ ರೈತರ ಹತ್ತಿರ ಹೆಚ್ಚಿನ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ರಾಜಸ್ಥಾನ ಮಶೀನಗಳ ಮಾಲಿಕರ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಮ...

ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಶ್ರೀ ಚಾಲನೆ

ಇಮೇಜ್
ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ತುಕಾರಾಮ ಖೀರು ನಾಯಕ ಅವರ ಮನೆಯಿಂದ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ತಾಂಡಾದ ಎಲ್ಲ ಬೀದಿಗಳಲ್ಲಿ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ತಾಂಡಾದ ನಾಯಕರಾದ ತುಕಾರಾಮ ಖೀರು ನಾಯಕ, ಕನ್ನು ಯಂಕು ನಾಯಕ, ಚಂದ್ರಾಮ ಚವ್ಹಾಣ, ಡಾವ ಕಿಶನ, ಕಿಶನ ಕಾರಭಾರಿ, ಸರಪಂಚ ಭೋಜು ಪವಾರ, ಕಾಂತು ಚವ್ಹಾಣ, ಲಕ್ಷಣ ಪಾಂಡು, ಅನಿಲ, ಶಂಕರ, ನಾಗರಾಜ, ವಿಠಲ ರಾಠೋಡ, ಖುಬ್ಬು ರಾಠೋಡ, ವಿಕಾಸ ಪವಾರ, ಸುರೇಶ ರೂಪಲಾ, ರಮೇಶ್ ನಾಗು, ರವಿ ಹೀರು, ಆಕಾಶ ನಿಲು ಚವ್ಹಾಣ, ಖುಬ್ಬು ಚವ್ಹಾಣ, ಶಿವರಾಮ ಚವ್ಹಾಣ, ಅಶ್ವಥ ರಾಠೋಡ ಸೇರಿದಂತೆ ತಾಂಡಾದ ತಾಯಂದಿರು ಹಲವಾರು ಗಣ್ಯಮಾನ್ಯರು ಇದ್ದರು.

ತೋಟೇಂದ್ರ ಸ್ವಾಮೀಜಿ ಅಳಿಯ ಆತ್ಮಹತ್ಯೆ.

ಇಮೇಜ್
ಚಿತ್ತಾಪುರ: ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಭಕ್ತನೋರ್ವ ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಗುಂಡು ಹಿರೇಮಠ ಆತ್ಮಹತ್ಯೆಗೆ ಒಳಗಾದ ವ್ಯಕ್ತಿ (34) ಮಠದಲ್ಲಿನ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಗುಂಡು ಮಠದ ಪೀಠಾಧಿಪತಿ ಪೂಜ್ಯ ಶ್ರೀ ತೋಟೇಂದ್ರ ಶಿವಾಚಾರ್ಯ ಅವರ ತಂಗಿಯ ಪುತ್ರ ಎನ್ನಲಾಗಿದ್ದು, ಒಂದು ವರ್ಷದ ಹಿಂದೆ ಇವರ ಮದುವೆಯಾಗಿತ್ತು. ಪೂಜ್ಯರ ಸೇವೆ ಮಾಡುತ್ತ ಮಠದಲ್ಲೇ ವಾಸವಿದ್ದರು ಎಂಬುದು ಸಾರ್ವಜನಿಕರ ಮೂಲಗಳಿಂದ ತಿಳಿದುಬಂದಿದೆ. ಇನ್ನೊಂದು ಕಡೆ ಶ್ರೀ ಕೋರಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಗಿದು ಒಂದು ವಾರ ಕಳೆದಿಲ್ಲ ಮಠದಲ್ಲಿ ಆತ್ಮಹತ್ಯೆ ಘಟನೆ ತಿಳಿದು ಭಕ್ತರಲ್ಲಿ ದು:ಖದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ವಾಡಿ ಠಾಣೆ ಪಿಎಸ್‌ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಭಾಗೋಡಿ- ಮುಡಬೂಳ ರಸ್ತೆ ದುರಸ್ತಿಗೆ ಆಗ್ರಹ.

ಇಮೇಜ್
ಚಿತ್ತಾಪುರ: ಭಾಗೋಡಿ ಮತ್ತು ಮುಡಬೂಳ ರಸ್ತೆ ಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ತಕ್ಷಣ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ. ತಾಲೂಕಿನ ಭಾಗೋಡಿ ಗ್ರಾಮದಿಂದ ಮುಡಬೂಳ ಗ್ರಾಮ 8 ಕಿಲೋ ಮೀಟರ್ ರಸ್ತೆ ಡಾಂಬರೀಕರಣ ಮಾಡಿ ಎರಡು/ಮೂರು ವರ್ಷಗಳು ಕಳೆದಿಲ್ಲ ರಸ್ತೆಯ ಸ್ಥಿತಿಗತಿ ಬದಲಾಗಿ ರಸ್ತೆಯಲ್ಲಿ ಗುಂಡಿ, ತಗ್ಗುಗಳು ಬಿದ್ದಿರುವದರಿಂದ ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಅದಲ್ಲದೇ, ದಿನಾಲು ಒಂದಲ್ಲ ಒಂದು ಅಪಘಾತಗಳು ನಡೆಯುತ್ತಿರುವುದರಿಂದ ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದು ರಸ್ತೆ ದುರಸ್ತಿ ಮಾಡದಿರುವ ಬಗ್ಗೆ ಸಾರ್ವಜನಿಕರು ಇಲಾಖೆ ಆಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದ್ದಾರೆ. ಕೂಡಲೇ ಈ ರಸ್ತೆ ದುರಸ್ತಿ ಕೆಲಸ ಪ್ರಾರಂಭಿಸಿ ಸಾರ್ವಜನಿಕರಿಗೆ ಆನುಕೂಲ ಮಾಡಿಕೊಡುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಭಾಗೋಡಿ-ಮುಡ...

ಭವ್ಯ ಮೆರವಣಿಗೆ, ಡಿಜೆ ಸೌಂಡಗೆ ಕುಣಿದು ಕುಪ್ಪಳಿಸಿದ ಯುವಕರು.

ಇಮೇಜ್
ಚಿತ್ತಾಪುರ: ನಿಜಶರಣ ಅಂಬಿಗರ ಚೌಡಯ್ಯ ನವರ 905 ನೇ ಜಯಂತ್ಯೋತ್ಸವ ನಿಮಿತ್ತ ತಾಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಿಂದ ಪ್ರಾರಂಭವಾಗದ ಮೆರವಣಿಗೆ ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕ‌ರ್ ವೃತ್ತ, ಬಸ್‌ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಡಿಂಗ್ ಕ್ರಾಸ್ ವರೆಗೆ ನಡೆಯಿತ್ತು. ಈ ವೇಳೆ ತಾಲೂಕು ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿಯ ಶೋಭಾಯಾತ್ರೆ ಮಾಡುವುದಕ್ಕೆ ಎಷ್ಟೇ ಅಡೆತಡೆ ಹಾಗೂ ಯುವಕರ ಉತ್ಸಾಹ ಕುಗ್ಗಿಸುವ ಎಷ್ಟೇ ಪ್ರಯತ್ನ ಮಾಡಿದರೂ ಸಹ ಯುವಕರ ಒಗ್ಗಟ್ಟಿನಿಂದ ಮತ್ತು ಸಹಕಾರದಿಂದ ಯಶಸ್ವಿಯಾಗಿದೆ, ಇದರಿಂದ ಯುವಶಕ್ತಿ ಏನೆಂಬುದು ತೋರಿಸಿಕೊಟ್ಟಿದೆ. ಇದೊಂದು ಐತಿಹಾಸಿಕ ಶೋಭಾಯಾತ್ರೆ ಎಂದರೆ ತಪ್ಪಾಗಲಾರದು ಈ ನಿಟ್ಟಿನಲ್ಲಿ ಬಹಳ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ ಇದಕ್ಕೆ ಸಹಕರಿಸಿದ ಕೋಲಿ ಸಮಾಜದವರಿಗೂ ಹಾಗೂ ಇತರೆ ಸಮಾಜದ ಮುಖಂಡರಿಗೂ, ಯುವಕರಿಗೂ ಹಾಗೂ ರಕ್ಷಣೆ ನೀಡದ ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಸಲ್ಲಿಸಿದರು. ಮೆರವಣಿಗೆಯಲ್ಲಿ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿ ...

ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆ: ಚಿಂಚನಸೂರ.

ಇಮೇಜ್
ಚಿತ್ತಾಪುರ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಹೇಳಿದರು. ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದ ಹತ್ತಿರ ತಾಲೂಕು ಕೋಲಿ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ನವರ 905ನೇ ಜಯಂತ್ಯೋತ್ಸವ ನಿಮಿತ್ತ ಶೋಭಾಯಾತ್ರೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸಮಾಜಗಳು ಮುಂದೆ ಬಂದಿವೆ ಆದರೆ ಕೋಲಿ ಸಮಾಜ ಮಾತ್ರ ಹಿಂದುಳಿದಿದೆ ಅದಕ್ಕೆ ನಮ್ಮವರೇ ಕಾರಣ ಎಂದು ದೂರಿದರು. ಗುರುಮಠಕಲ್ ಕ್ಷೇತ್ರದಿಂದ ನನ್ನ ಸೋಲಿಗೆ ನಮ್ಮವರೇ ಕಾರಣ ಒಂದು ವೇಳೆ ನಾನು ಗೆಲುವು ಸಾಧಿಸಿದ್ದರೆ ಪ್ರಭಾವಿ ಖಾತೆಯ ಪವರಫುಲ್ ಮಂತ್ರಿಯಾಗುತ್ತಿದ್ದೆ, ಹಾಗೂ ಕೋಲಿ ಸಮಾಜ ಎಸ್‌.ಟಿ ಮಾಡುವ ಸಲುವಾಗಿ ಪ್ರಧಾನಿ ಮೋದಿ ಮನೆ ಮುಂದೆ ಅಮರಣಾಂತ ಉಪವಾಸ ಮಾಡುತ್ತಿದ್ದೆ. ಈಗ ನಾನು ಸೋತರೂ ಅಧಿಕಾರದಲ್ಲಿ ಇದ್ದೇನೆ ಎಂದು ಹೇಳಿದರು. ನಾನು ಅಧಿಕಾರಕ್ಕೆ ಬಂದಾಗೆಲ್ಲ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ ಆಗಿನ ಮುಖ್ಯಮಂತ್ರಿ ಈರಪ್ಪ ಮೊಯ್ಲಿ ಅವರ ಮೇಲೆ ಒತ್ತಡ ಹೇರಿ ಕೋಲಿ ಸಮಾಜವನ್ನು ಪ್ರವರ್ಗ 1 ಕ್ಕೆ ಸೇರಿಸಿದ್ದೇನೆ, ಕೋಲಿ ಸಮಾಜದ ದೇವಸ್ಥಾನಗಳಿಗೆ 33 ಕೋಟಿ ಅನುದಾನ ನೀಡಿದ್ದೇನೆ, ಎಸ್.ಟಿ ಸೇರಿಸುವ ಸಲುವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ ಹೀಗಾಗಿ ನಾನು ಸ...

ಯುವ ಘಟಕ ವತಿಯಿಂದ ಬೃಹತ್ ಶೋಭಾಯಾತ್ರೆ.

ಇಮೇಜ್
ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದ ಯುವ ಘಟಕ ಅಧ್ಯಕ್ಷ ರಾಜು ಹೋಳಿಕಟ್ಟಿ, ನಗರ ಅಧ್ಯಕ್ಷ ಬಸವರಾಜ ಮೈನಾಳಕರ್, ಬಸವರಾಜ ರಾಜೋಳ್ಳಿ , ಪ್ರಕಾಶ ಯಾಡಗೂಟ್ಟಿ, ಭಾಗಣ್ಣ ಹಳ್ಳಿ, ಜಗ್ಗು ಹಳ್ಳಿ, ನಾಗು ದಂಡಗುಂಡ, ಗೂಳಿ ಡಿಗ್ಗಿ, ಶಿವು ದಿಗ್ಗಾಂವ್ , ನಾಗು, ಗೌತಮ ಇತರರ ನೆತೃತ್ವದಲ್ಲಿ ಜ.28 ಇಂದು ಸಾಯಂಕಾಲ 4:30ಕ್ಕೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಅವರು ಬೃಹತ್‌ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಜೊತೆಗೆ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಸೇರಿದಂತೆ ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ. ಬೃಹತ್‌ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಕಳಸ, ಡೊಳ್ಳು ಕುಣಿತ, ಹಲಿಗೆ ವಾದನ ಶೋಭಾಯಾತ್ರೆಗೆ ಮೆರಗು ನೀಡಲಿದೆ. ಅಂಬಿಗರ ಚೌಡಯ್ಯನವರ ಮೂರ್ತಿ, ಮಾತೆ ಮಾಣಿಕೇಶ್ವರಿ, ಕೋಲಿ ಸಮಾಜದ ಧೀಮಂತ ಹೋರಾಟಗಾರ ದಿ.ವಿಠಲ್ ಹೇರೂರ ಭಾವಿಚಿತ್ರದ ಜೊತೆಗೆ ಅನೇಕ ಶರಣರ ಭಾವಚಿತ್ರವು ಅದ್ಧೂರಿಯಾಗಿ ಬೃಹತ್‌ ಶೋಭಾಯಾತ್ರೆ ಮೆರವಣಿಗೆ ನಡೆಯಲಿದ್ದು ಕೋಲಿ ಸಮಾಜದ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸಿ ಕಾರ್ಯಕ್...

ರೋಣದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

ಇಮೇಜ್
ಚಿತ್ತಾಪುರ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ರೋಣದ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.  ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನಿವೃತ್ತ ನೌಕರರ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಅಧ್ಯಕ್ಷರ ಆಯ್ಕೆ ಮಾಡಿದ್ದು ತಾಲೂಕು ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಕಿಶನ್ ರಾಠೋಡ ಸೂಚಿಸಿದರು ಮೋನಯ್ಯ ಪಂಚಾಳ ಅನುಮೋದನೆ ಮಾಡಿದರು.  ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರ ವಿಜಯಕುಮಾರ ಲೊಡ್ಡೆನೋರ ಖಜಾಂಚಿ ಮಲ್ಲಣ್ಣ ಮಾಡಬೂಳ, ಮಲ್ಲಿಕಾರ್ಜುನ ಮಲಕೂಡ, ಸುಭಾಷ್ ಮೆಂಗಜೀ ಆರೋಗ್ಯ ಇಲಾಖೆಯ ನಿಜಾಮೋದಿನ್, ಶಿವಾಜಿ ನಿಂಬೆಳಕರ, ಬಸವರಾಜ ಕಲಬುರ್ಗಿ ಬಾಗೋಡಿ, ಹಾಜಪ್ಪ ಶಹಾಬಾದ್, ಶಶಿಧರ, ಮಹ್ಮದ್ ಅಬ್ದುಲ್ ನಬಿ ರವಿ ಪೊತ್ದಾರ, ಇದ್ದರು.ಮಹಾದೇವಪ್ಪ ಉಪ್ಪಾರ ನಿರೂಪಿಸಿ, ಕಿಶನ್ ರಾಠೋಡ ವಂದಿಸಿದರು.

ಲುಂಬಿನಿ ಗಾರ್ಡನ್ ಲೋಕಾರ್ಪಣೆಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪುರ: ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ ಅದರಲ್ಲೂ ಚಿತ್ತಾಪುರ ತಾಲೂಕಿನ ಜನರ ಮನೋರಂಜನೆಗಾಗಿ ಹಾಗೂ ವಾರದ ಕೊನೆ ದಿನದಲ್ಲಿ ಮಕ್ಕಳ ಆಟೋಪೋಹಾರಕ್ಕಾಗಿ ಒಂದು ಸುಸಜ್ಜಿತ ಉದ್ಯಾನವನದ ಸ್ಥಾಪನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ತಾಲೂಕಿನ ಗುಂಡಗುರ್ತಿ ಗ್ರಾಮದ ಬಳಿ ಜನಾಕರ್ಷಕ ಲುಂಬಿನಿ ಉದ್ಯಾನವನ ವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಸುಮಾರು 10 ಎಕರೆ ವಿಸ್ತಾರ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಡಿಎಂಎಫ್ ಅನುದಾನ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ವಿವಿಧ ಬಗೆಯ ಸೌಲಭ್ಯಗಳಿಂದ ಜನರನ್ನು ಆಕರ್ಷಿಸುವುದರ ಜೊತೆಗೆ ವಿಭಿನ್ನ ಪ್ರಬೇಧದ ಚಿಟ್ಟೆಗಳು ಹಾಗೂ ಮರಗಿಡಗಳು ಹಾಗೂ ಹಚ್ಚ ಹಸಿರಿನ ಹುಲ್ಲು ಮನಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ ಮತ್ತು ಮಿಯಾವಾಕಿ ಅರಣ್ಯ ಚಿಟ್ಟೆ ಪಾರ್ಕ್, ಮರದ ಸೇತುವೆ, ಕಾರಂಜಿ, ವಿವಿಧ ಬಗೆಯ ಗಿಡಗಳು, ಹಸಿರು ಹುಲ್ಲಿನ ಹೊದಿಕೆ, ಮಕ್ಕಳ ಆಟದ ಸಾಮಾಗ್ರಿಗಳು, ವಾಟರ್ ಫಾಲ್ಸ್ ಇತ್ಯಾದಿ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿವೆ ಎಂದರು. ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರು,ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿಪಂ ಸಿಇಒ ಭಂವ‌ರ್ ಸಿಂಗ್ ಮೀನಾ, ಎಸ್.ಪಿ ಅಡ್ಡರು ಶ್ರೀನಿವಾಸಲು, ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಸಿಸಿಎಫ್‌...

ವಿದ್ಯಾರ್ಥಿಗಳು ಪರೀಕ್ಷೆ ಅನುಕೂಲ ಪಡೆಯಲಿ : ನಾಗರೆಡ್ಡಿ ಪಾಟೀಲ.

ಇಮೇಜ್
ಚಿತ್ತಾಪುರ: ವಿಶ್ವಗುರು ಶಿಕ್ಷಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ವತಿಯಿಂದ 10 ನೇ ತರಗತಿಯಿಂದ ಹೊರಹೊಮ್ಮುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತಿಭೆ ಗುರುತಿಸುವ ಪರೀಕ್ಷೆಗಳನ್ನು (Talent Search Exam) ದಿನಾಂಕ ಫೆಬ್ರವರಿ 2 ಹಾಗೂ 9 ರಂದು ಕಾಲೇಜು ಆವರಣದಲ್ಲಿ ನಡೆಸಲು ತೀರ್ಮಾನಿಸಿದ್ದು ಆಸಕ್ತಿವುಳ್ಳ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಭಾಗಿಯಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಕೋರಿದ್ದಾರೆ. ಫೆಬ್ರವರಿ 16 ರಂದು 10 ನೇ ತರಗತಿಯಿಂದ ಹೊರಹೊಮ್ಮುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ರಸಪ್ರಶ್ನೆವುಳ್ಳ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಂಡಿದ್ದು ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೊದಲನೆ ಬಹುಮಾನ 10,100, ಎರಡನೆ ಬಹುಮಾನ 5,100, ಮೂರನೇ ಬಹುಮಾನ 2,500 ಬಹುಮಾನ ವಿತರಿಸಲಾಗುವುದು. ತಾಲೂಕಿನ ಎಲ್ಲಾ ಪ್ರೌಢ ಶಾಲೆ ಕೇಂದ್ರಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಸೂಚನೆ: ಮೊದಲನೇ ಐದು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು. ಉಳಿದ 20 ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರನ್ನು ಹಾಗೂ ಉಪನ್ಯಾಸಕರನ್ನು 7406620055, 9591450303, 9663542019 ಸಂಪರ್ಕಿಸಬಹುದು ...

ನಾಳೆ ಅಂಬಿಗರ ಚೌಡಯ್ಯನ ಮೂರ್ತಿ ಬೃಹತ್ ಶೋಭಾಯಾತ್ರೆ.

ಇಮೇಜ್
ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದಿಂದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ನೇತೃತ್ವದಲ್ಲಿ ಜ.28 ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ನಗರ ಅಧ್ಯಕ್ಷ ಬಸವರಾಜ ಮೈನಾಳಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟ್ಟಣದ ಅಂಬಿಗರ ಚೌಡಯ್ಯ ಭವನದ ಸಮೀಪ ಜ.28 ರಂದು ಮಧ್ಯಾಹ್ನ 1 ಗಂಟೆಗೆ ಶೋಭಾಯಾತ್ರೆಯಲ್ಲಿ ತೊನಸನಹಳ್ಳಿ (ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನದ ಮಲ್ಲಣಪ್ಪ ಮಹಾಸ್ವಾಮಿ, ಶಹಾಪೂರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ಸಾನಿಧ್ಯದಲ್ಲಿ ನಡೆಯಲಿದೆ. ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಅವರು ಬೃಹತ್‌ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಜೊತೆಗೆ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಸೇರಿದಂತೆ ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ. ಬೃಹತ್‌ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಕಳಸ, ಡೊಳ್ಳು ಕುಣಿತ, ಹಲಿಗೆ ವಾದನ ಶೋಭಾಯಾತ್ರೆಗೆ ಮೆರಗು ನೀಡಲಿದೆ. ಅಂಬಿಗರ ಚೌಡಯ್ಯನವರ ಮೂರ್ತಿ, ಮಾತೆ ಮಾಣಿಕೇಶ್ವರಿ, ಕೋಲಿ ಸಮಾಜದ ಧೀಮಂತ ಹೋರಾಟಗಾರ ದಿ.ವಿಠಲ್ ಹೇರೂರ ಭಾವಿಚಿತ್ರದ ಜೊತೆಗೆ ಅನೇಕ ಶರಣರ ಭಾವಚಿತ್ರವು ಅದ್ಧೂರಿಯ...

ಕ್ಷೇತ್ರದ ಅಭಿವೃದ್ದಿ ಕೆಲಸಕ್ಕೆ ಬಿಜೆಪಿ ಅಡ್ಡಿ: ಮಲ್ಲಿಕಾರ್ಜುನ ಕಾಳಗಿ.

ಇಮೇಜ್
● ಆರೋಪ ಸತ್ಯಕ್ಕೆ ದೂರ, ●ಅಸ್ತಿತ್ವ ಉಳಿವಿಗಾಗಿ ಅಧ್ಯಕ್ಷರ ಪರದಾಟ. ಚಿತ್ತಾಪುರ: ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಮುಖಂಡರು ಹಾಗೂ ಪುರಸಭೆ ಸದಸ್ಯರು ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಚಿತ್ತಾಪುರದಲ್ಲಿ ರವೀಂದ್ರ ಸಜ್ಜನಶೆಟ್ಟಿ ಅವರು ತಮ್ಮ ತಾಲೂಕು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪಟ್ಟಣದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದಿದ್ದಾರೆ ಆದರೆ ಅಭಿವೃದ್ಧಿ ಕೆಲಸ ಕಾಮಗಾರಿಳು ನಡೆಯುತ್ತಿಲ್ಲ ಎಂದು ಹೇಳುವುದು ಬಿಟ್ಟು ಯಾಕೆ ಅಭಿವೃದ್ದಿ ಕೆಲಸ ಕಾರ್ಯಗಳು ವಿಳಂಬ ಆಗುತ್ತಿವೆ ಎಂಬುದು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಲ್ಲಿ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಕೆಲ ತಾಂತ್ರಿಕ ದೋಷಗಳಿಂದ ಕುಂಠಿತಗೊಂಡಿವೆ ಎಂದು ಸ್ಪಷ್ಟತೆ ನೀಡಿದರು.  ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಂದ ಪಟ್ಟಣದ ನಾಗಾವಿ ಹೊರವಲಯದಲ್ಲಿ ನಿರ್ಮಾಣವಾದ 1000 ಮನೆಗಳಿಗೆ ಮೂಲ...

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ಇಮೇಜ್
ಚಿತ್ತಾಪುರ: ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಮಾಳಿಗೆ ಬಿ68  ಸ್ವಾಮಿ ಬರ್ತಡೇ ಸೆಲೆಬ್ರೇಶನ್ ಇವೆಂಟ್ ನಲ್ಲಿ ಸಂಶಯದ ಮೆರೆಗೆ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಮೂಲನಿವಾಸಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸೇರ್ ಅಲಿ  ಶೇಖ್ ತಿಳಿಸಿದ್ದಾರೆ. ಜ,13 ಸೋಮವಾರ ಬೆಳಗ್ಗೆ 10:45ಕ್ಕೆ ಬರ್ತಡೇ ಸೆಲೆಬ್ರೇಶನ್ ಸಲುವಾಗಿ ಹುಡುಗ/ಹುಡುಗಿ ಸ್ವಾಮಿ ಬರ್ತಡೆ ಸೆಲೆಬ್ರೇಶನ್ ಇವೆಂಟ್ ಬಂದಿರುತ್ತಾರೆ  ಬರ್ತಡೆ ಆಚರಣೆ ಮಾಡಿಕೊಳ್ಳಲು ಬಿಟ್ಟು ಹೋಗಿರುತ್ತಾರೆ ಮಧ್ಯಾಹ್ನ 2 ಗಂಟೆಯ ನಂತರ ಹುಡುಗ/ ಹುಡುಗಿ ಮಳಿಗೆಯಿಂದ ಹೊರಗೆ ಬರುವ ದೃಶ್ಯ ಕಂಡು ಪಕ್ಕದ ಮಳಿಗೆಯವರು ಸಂಶಯದ ಮೇಲೆ ಅವರಿಗೆ ವಿಚಾರಿಸಿದಾಗ ಭಯದಿಂದ ಅವರು ಓಡಿ ಹೋಗಿರುತ್ತಾರೆ ಇಂದು ಒಂದೆ ಘಟನೆ ಅಲ್ಲಾ ಇಲ್ಲಿ ಸುಮಾರು ಸಾರಿ ಈ ರೀತಿ ಘಟನೆಗಳು ಆಗಿವೆ ಎಂದಿದ್ದಾರೆ.  ಬರ್ತಡೇ ಸೆಲೆಬ್ರೇಶನ್ ಇವೆಂಟ್ ಒಳಗಡೆ ನೋಡಿದರೆ ಎಲ್ಲೆಂದರಲ್ಲಿ ಕಾಂಡೊಮ್ ಬಿದ್ದಿದು ಕಂಡುಬಂದಿತ್ತು.  ಡಸ್ಟ್ ಬಿನ್ ಒಂದರಲ್ಲಿ ಕಾಂಡೊಮ್ ಬಳಕೆ ಮಾಡಿ ಬಿಸಾಡಿದ ದೃಶ್ಯ ಸಹ ಕಂಡಿತು, ಹಾಗೂ ಸಿಸಿ ಕ್ಯಾಮೆರಾ ಕಿತ್ತಿ ಹಾಕಲಾಗಿತ್ತು. ಹಾಗೆ ಬೆಳಗ್ಗೆಯಿಂದ ರಾತ್ರಿವರೆಗೂ ಇಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಿರುತ್ತವೆ. ಸಮಯದ ಮಿತಿ ಇಲ್ಲ, ಒಳಗಡೆ ಮಧ್ಯಪಾನ ಸಹ ಮಾಡುತ್ತಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲ ವಿಷಯ ಕಂಡು ಪಕ್ಕದ ಮಾಳಿಗೆಯವರಿಗೆ ಸಂಶಯ ಉಂಟಾಗಿದೆ ಎನ್ನುತ್ತಾರೆ....

ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ದೇವಿಂದ್ರಮ್ಮ ಆಯ್ಕೆ

ಇಮೇಜ್
ಚಿತ್ತಾಪುರ: ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದಿಂದ ಮಹಿಳಾ ಸಾಧಕಿಯರಿಗೆ ಪ್ರತಿ ವರ್ಷ ನೀಡುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಜೀವಣಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದೇವಿಂದ್ರಮ್ಮ ವಿ ಮಾಲಿ ಪಾಟೀಲ್ ಆಯ್ಕೆಯಾಗಿದ್ದಾರೆ. ಜ.3ರಂದು ವಿಜಯಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಜಗದೇವ ಕುಂಬಾರ ಪ್ರಕಟಣೆಗೆ ತಿಳಿಸಿದ್ದಾರೆ.