ಸೋಮವಾರ, ಮಾರ್ಚ್ 27, 2023

ಮೀಸಲಾತಿ ಜಾರಿ ಬಿಜೆಪಿ ಸರಕಾರದ ದೊಡ್ಡ ಸಾಧನೆ.


ಚಿತ್ತಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ಪ್ರಕಟಿಸಿರುವುದನ್ನು ಹಾಗೂ ವೀರಶೈವ ಲಿಂಗಾಯತ ಹಾಗೂ ಒಳಪಂಗಡಗಳು ಮತ್ತು ಒಕ್ಕಲಿಗರು ಹಾಗೂ ಒಳ ಪಂಗಡಗಳಿಗೆ ಮೀಸಲಾತಿ ಸೌಲಭ್ಯ ಘೋಷಣೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಬಿಜೆಪಿ ಸರಕಾರದ ದೊಡ್ಡ ಸಾಧನೆಯಾಗಿದೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರ ಮೂವತ್ತು ವರ್ಷಗಳಿಂದಲೂ ಇದೆ ಕಾಂಗ್ರೆಸ್ ಸರಕಾರ ಅಶ್ವಾಸನೆ ಕೊಡುತ್ತಾ ಮೂಗಿಗೆ ತುಪ್ಪ ಸವರಿಕೊಂಡು ಬಂದಿತ್ತು. ಆದರೆ ಇಂದು ಕಾಂಗ್ರೆಸ್ ಸರಕಾರದಿಂದ ಆಗಲಾರದ ಒಳ ಮೀಸಲಾತಿ ಜಾರಿಗೆ ತರುವ ಕೆಲಸ ಬಿಜೆಪಿ ಸರಕಾರ ಮಾಡಿ ತೋರಿಸಿದೆ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿಯ ಒಳಗಿರುವ ಅನೇಕ ಉಪಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯಿಲ್ಲದೇ ಎಲ್ಲರಿಗೂ ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ರಾಜ್ಯದಲ್ಲಿ ಜನಸಂಖ್ಯೆಗೆ ಆಧಾರವಾಗಿ ಪರಿಶಿಷ್ಟ ಜಾತಿಯಲ್ಲೇ ಇರುವ ಉಪ ಜಾತಿಗಳನ್ನು ವರ್ಗೀಕರಿಸಿ ಮೀಸಲಾತಿ ನೀಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದ್ದು ಅದಕ್ಕೆ ಸಂಬಂಧಿಸಿದಂತ  ತಕರಾರು ಚಳುವಳಿಗಳು, ಪ್ರತಿಭಟನೆಗಳು ಮತ್ತು ಸತ್ಯಾಗ್ರಹಗಳು ನಡೆದಿದ್ದವು ಎಂದರು.
 
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವುದು ಸವಾಲಿನ ಕೆಲಸವಾಗಿತ್ತು. ಸದಾಶಿವ ಆಯೋಗದ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವು ಸಮರ್ಥವಾಗಿ ಜಾರಿ ಮಾಡಿದ್ದು, ಪರಿಶಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಎಡಗೈ ಸಮುದಾಯಕ್ಕೆ ಶೇ.೬ ರಷ್ಟು, ಬಲಗೈ ಸಮುದಾಯಕ್ಕೆ ಶೇ.೫.೫ ರಷ್ಟು, ಭೋವಿ, ಬಂಜಾರಾ ಸಮುದಾಯಗಳಿಗೆ ಶೇ.೪.೫ ಹಾಗೂ ಅಲೆಮಾರಿ ಸಣ್ಣ ಸಮುದಾಯಗಳಿಗೆ ಶೇ.೧ ರಷ್ಟು ಮೀಸಲು ಜಾರಿ ಮಾಡಿರುವುದು ಶ್ಲಾಘನೀಯ ಎಂದರು

೨ಸಿ ಅಡಿ ಒಕ್ಕಲಿಗರಿಗೆ ಶೇ.೬ ರಷ್ಟು ಮೀಸಲಾತಿ ಹಾಗೂ ೨ಡಿ ಅಡಿ ಲಿಂಗಾಯತ ಸಮುದಾಯಕ್ಕೆ ಶೇ.೭ ರಷ್ಟು ಮೀಸಲಾತಿ ನೀಡುವ ಮೂಲಕ ಈ ಸಮಾಜವು ಎರಡು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸರಕಾರ ತಾರ್ಕಿಕ ಅಂತ್ಯವನ್ನು ನೀಡಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಮೀಸಲಾತಿ ಸೌಲಭ್ಯವು ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.                                                                                                            “ಸುಮಾರು ೩೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ, ಬಹುದಿನಗಳ ಬೇಡಿಕೆ ಈಡೇರಿಸಿದ ರಾಜ್ಯ ಸರಕಾರಕ್ಕೆ ಧನ್ಯವಾದಗಳು”

-ದೀಪಕ್ ಹೊಸ್ಸುರಕರ್ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷರು.

  “ಪರಿಶಿಷ್ಟ ಜಾತಿಯ ಮೀಸಲಾತಿ ವಿಚಾರವನ್ನು ಚುನಾವಣೆ ಬಂದಾಗ ಮಾತ್ರ ಪ್ರಸ್ತಾಪಿಸಿ ನಂತರ ಮರೆತು ಬಿಡುತ್ತಿದ್ದ ಕಾಂಗ್ರೆಸ್ ದಶಕಗಳ ಕಾಲದಿಂದ ಮೀಸಲಾತಿ ಹೆಸರಿನಲ್ಲಿ ಮೋಸ ಮಾಡುತ್ತಲೇ ಬಂದಿತ್ತು. ಆದರೆ ಬಿಜೆಪಿ ಸರಕಾರ ದಿಟ್ಟ ಹೆಜ್ಜೆ ಇಡುವ ಮೂಲಕ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಜಾರಿ ಮಾಡುವ ಮೂಲಕ ನ್ಯಾಯ ದೊರಕಿಸಿ ಕೊಟ್ಟಿದೆ.”

-ಅಯ್ಯಪ್ಪ ರಾಮತೀರ್ಥ ಬಿಜೆಪಿ ಹಾಲು ಪ್ರಕೋಷ್ಠದ ಜಿಲ್ಲಾ ಸಂಚಾಲಕರು.

ಸರ್ಕಾರಿ ಕಾರ್ಯಕ್ರಮದಲ್ಲಿ ಸೀರೆ ವಿತರಣೆ: ಅರವಿಂದ್ ಆಕ್ರೋಶ.

ಚಿತ್ತಾಪುರ: ಮತಕ್ಷೇತ್ರದ ವಿವಿಧ ಇಲಾಖೆಯ ಕಾಮಗಾರಿಗಳ ಅಡಿಕಲ್ಲು ಉದ್ಘಾಟನೆ ಹಾಗೂ ಹಕ್ಕು ಪತ್ರ ವಿತರಣೆ ಈ ಸರ್ಕಾರಿ ಕಾರ್ಯಕ್ರಮದಲ್ಲಿ ಆಶಾ‌ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ವಿತರಣೆ ಮಾಡಿ ಶಾಸಕ ಪ್ರಿಯಾಂಕ್ ಖರ್ಗೆ  ನಿಯಮ ಉಲ್ಲಂಘಿಸಿದರೆ ಎಂದು ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್.19 ರಂದು ಪಟ್ಟಣದಲ್ಲಿ ದಿ. ವಾಲ್ಮೀಕಿ ನಾಯಕ ಅವರ ಪುಣ್ಯತಿಥಿ ಅಂಗವಾಗಿ ನಮ್ಮ ಸೋಹದರರಾದ ವಿಠ್ಠಲ್ ನಾಯಕ್ ಅವರು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದ್ರೆ ಚುನಾವಣೆ ಹತ್ತಿರ ಬರುತ್ತಿದೆ ಎಂದು ಕುಂಟು ನೆಪವೊಡ್ಡಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚಿತ್ತಾಪುರ ಆಗಮಿಸಿ ಬಿಜೆಪಿ ಮುಖಂಡರನ್ನು ಕರೆಸಿ ಉಡಿ ತುಂಬುವ ಕಾರ್ಯಕ್ರಮ ಮಾಡುವಂತಿಲ್ಲ ಎಂದು ತಡೆಹಿಡಿದ್ರು ನಾವು ಕಾರ್ಯಕ್ರಮ ರದ್ದು ಮಾಡಿವಿ ಆದ್ರೆ ನಿನ್ನೆ ಸರ್ಕಾರಿ ಕಾರ್ಯಕ್ರಮದಲ್ಲಿ ಮತದಾರರ ಮತಗಳನ್ನು ಸೆಳೆಯಲು ಸೀರೆ ವಿತರಣೆ ಮಾಡಿದ್ದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಇರಲಿಲ್ವ? ಹಾಗೂ ತಾಲೂಕಿನ ಅಧಿಕಾರಿಗಳು ಸಹ ಇದ್ದರೂ ಅವರ ಮುಂದೆ ಶಾಸಕರು ಸರಕಾರಿ ಕಾರ್ಯಕ್ರಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ಹಂಚಿಕೆ ಮಾಡಿರುವುದು ಖಂಡನೀಯ ಕೂಡಲೇ ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಪ್ರಿಯಾಂಕ ಖರ್ಗೆ ಸೀರೆ ವಿತರಣೆ.

ಇಷ್ಟು ದಿನ ಬಿಜೆಪಿ ಸರ್ಕಾರ ಅನುದಾನವನ್ನೇ ಕೊಡ್ತಿಲ್ಲ ಅಂತ ಸುಳ್ಳು ಹೇಳುತ್ತಿದ್ದ ಶಾಸಕರು ಮೊನ್ನೆ ತಾನೆ ಚಿತ್ತಾಪುರಕ್ಕೆ ಆಗಮಿಸಿ 173 ಕೋಟಿ ರೂಪಾಯಿಯ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಶಾಸಕರಾಗಿ 10 ವರ್ಷ ಕಳೆದರೂ ತಾಲೂಕಿನ ಮಹಿಳೆಯರ ಘನತೆ ಹಾಗೂ ಗೌರವದ ನೆನಪಾಗಿರಲಿಲ್ಲ. ಈಗ ಎಲೆಕ್ಷನ್ ಹತ್ತಿರ ಬಂದ ಕೂಡಲೇ, ತಾಲೂಕಿನ ಹಳ್ಳಿಗಳಲ್ಲಿ ನೈರ್ಮಲ್ಯ ಶೌಚಾಲಯ ನಿರ್ಮಿಸುವ ಭರವಸೆ ನೀಡುತ್ತಿದ್ದಾರೆ ಇದಕ್ಕಾಗಿ ಶಂಕು ಸ್ಥಾಪನೆಯನ್ನು ನೆರವೇರಿಸಿರುವುದಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಇದು ಮಹಿಳೆಯರಿಗೆ ಮೋಸ ಮಾಡುವ ಕುತಂತ್ರವಾಗಿದೆಯೇ ಹೊರತು, ಬೇರೇನೂ ಅಲ್ಲ. ಇವರು ಘೋಷಿಸಿರುವ ನೈರ್ಮಲ್ಯ ಶೌಚಾಲಯ ಎಲ್ಲಿ ನಿರ್ಮಾಣವಾಗುತ್ತೆ? ಇದಕ್ಕಾಗಿ ಗ್ರಾ.ಪಂ ಯಾವ ಜಾಗ ಮೀಸಲಿರಿಸಿದೆ? ಎಂಬ ಯಾವ ಮಾಹಿತಿಯೂ ಆಯಾ ಗ್ರಾ.ಪಂ ಸದಸ್ಯರಿಗಾಗಲಿ ಅಥವಾ ಅಲ್ಲಿನ ಪಿಡಿಓ ಗಳಿಗಾಗಲಿ ಇಲ್ಲ ಎಂದು ಹೇಳಿದರು.

2014 ರಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಬಸವ ಭವನ ನಿರ್ಮಿಸುವುದಾಗಿ ಘೋಷಿಸಿದ್ರು 50 ಲಕ್ಷ ರೂ.ಗಳನ್ನು ಕಡಿತಗೊಳಿಸಿ, ಕೇವಲ 50 ಲಕ್ಷ ರೂ.ಗಳಲ್ಲಿ ಬಸವ ಭವನ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಹಾಗಾದ್ರೆ, ಇನ್ನು 50 ಲಕ್ಷ ರೂ. ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು.

ಕಳೆದ 10 ವರ್ಷಗಳಿಂದ ಇಲ್ಲಿನ ಶಾಸಕರು ಎಂತಹ ಬೇಜವಾಬ್ದಾರಿ ಮನುಷ್ಯ ಎಂಬುದು ಚಿತ್ತಾಪುರದ ಜನತೆಗೆ ತಿಳಿದಿದೆ. ಎಲೆಕ್ಷನ್ ಸಮಯದಲ್ಲು ಬಂದು ಮೂಗಿಗೆ ತುಪ್ಪ ಸವರುವ ಇಂತಹ ಲೂಟಿಕೋರರನ್ನು ಇಲ್ಲಿನ ಜನರು ನಂಬುವುದಿಲ್ಲ.ನಿನ್ನೆ ಶಂಕುಸ್ಥಾಪನೆ ನಡೆಸಿದ ಎಲ್ಲಾ ಕಾಮಗಾರಿಗಳು ಶಾಸಕರ ಮತ್ತು ಅವರ ಚೇಲಾಗಳ ಜೇಬು ತುಂಬಿಸಿ, ಆ ಹಣದಲ್ಲಿ ಎಲೆಕ್ಷನ್ ಮಾಡುವುದಕ್ಕಾಗಿ ಮಾತ್ರವೇ ಎಂಬುದು ಜನರಿಗೆ ತಿಳಿದಿದೆ.

ಈ ಸದಾಶಿವ ನಗರದ ಶಾಸಕರಿಗೆ ಎಲೆಕ್ಷನ್ ಬಂದಾಗ ಮಾತ್ರ ಚಿತ್ತಾಪುರ ಹಾಗೂ ಚಿತ್ತಾಪುರದ ಅಭಿವೃದ್ಧಿ ನೆನಪಾಗುತ್ತೆ. ಇನ್ನುಳಿದ ಸಂದರ್ಭದಲ್ಲಿ ಚಿತ್ತಾಪುರಕ್ಕೆ ಬಂದ ಅನುದಾನವನ್ನು ಲೂಟಿ ಹೊಡೆಯುವುದೇ ಇವರ ಕಾಯಕವಾಗಿರುತ್ತೆ. ಈ ಕಮೀಷನ್ ಖರ್ಗೆಯ ಭ್ರಷ್ಟಾಚಾರದಿಂದ ಚಿತ್ತಾಪುರದ ರಸ್ತೆಗಳ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲೂರ್ ಬಿ ಹಾಗೂ ಇವಣಿ ರಸ್ತೆಗಳು ಇವರ ಕಮೀಷನ್ ದಾಹಕ್ಕೆ ನಿರ್ಮಾಣವಾದ ಕೆಲವೇ ತಿಂಗಳುಗಳಲ್ಲಿ ಕಿತ್ತು ಹೋಗಿವೆ.

ಇಂತಹ ಭ್ರಷ್ಟ ಹಾಗೂ ಕಮೀಷನ್ ದಾಹಿಯನ್ನು ಸೋಲಿಸುವುದೇ ಚಿತ್ತಾಪುರದ ಜನತೆಯ ಗುರಿಯಾಗಿದೆ. ಕೇವಲ ಅಭಿವೃದ್ಧಿ ಎಂಬುದನ್ನು ತಮ್ಮ ಸಾಮಾಜಿಕ ಜಾಲತಾಣಗಳಿಗೆ ಸೀಮಿತಗೊಳಿಸಿದ ಇಂತಹ ಭ್ರಷ್ಟರನ್ನು ಸೋಲಿಸಿ, ಚಿತ್ತಾಪುರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಗುರಿಯಾಗಿದೆ ಎಂದರು ತಿಳಿಸಿದ್ದಾರೆ.

ಶುಕ್ರವಾರ, ಮಾರ್ಚ್ 24, 2023

ಈಡಿಗ ಸಮಾಜದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ.

ಚಿತ್ತಾಪುರ:ತಾಲೂಕು ಆರ್ಯ ಈಡಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ವಇಚ್ಛೆಯಿಂದ ನಾನು ರಾಜೀನಾಮೆ ನೀಡಿದ್ದೇನೆ ಎಂದು ಕಾಶಿನಾಥ ಗುತ್ತೇದಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಮಾಜದ ಮುಖಂಡರಿಂದ ಕಾಶಿನಾಥ ಗುತ್ತೇದಾರ್ ಅವರಿಗೆ ಸನ್ಮಾನ.

ತಾಲೂಕಿನಲ್ಲಿ ಕಳೆದ ೨೦೦೬ ರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಮಾಡುತ್ತಾ ಈ ಭಾಗದ ಜನರಲ್ಲಿ ಗುರುಗಳ ವಿಚಾರಗಳನ್ನು ಪರಿಚಯಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ. ಆಗಿನ ಸೋಲೂರಿನ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಳೆದ ೨೦೧೦ ರಲ್ಲಿ ಈಡಿಗ ಸಮಾಜದ ಸಂಘಟನೆಗಾಗಿ ತಾಲೂಕು ಪದಾಧಿಕಾರಿಗಳಾಗಿ ಆಯ್ಕೆ ಮಾಡಿದ್ದರು. ನನ್ನ ಸಂಘಟನಾ ಕಾರ್ಯಚಟುವಿಕೆ ಗಮನಿಸಿ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ವಹಿಸಿದ್ದರು. ಅಂದಿನಿಂದ ಇಲ್ಲಿವರೆಗೆ ತಾಲೂಕಿನಲ್ಲಿ ಈಡಿಗ ಸಮಾಜದ ಸಂಘಟನೆ ಬಲ ಪಡಿಸುವಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ ಎಂದರು.

ಸಮಾಜದ ಸೋಲೂರ ಮಠದ ಆರ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳು ಕಾಶಿನಾಥ ಗುತ್ತೇದಾರ ಅವರ ಮನೆಗೆ ಭೇಟಿ ನೀಡಿದ ಸಂದರ್ಭ.
 
ತಾಲೂಕಿನಲ್ಲಿ ಸಮಾಜದ ಸಂಘಟನೆ ಹಾಗೂ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮಕ್ಕಾಗಿ ಹಗಲಿರಳು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ೧೩ ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿದ್ದುಕೊಂಡು ಸಮಾಜದ ಸಂಘಟನೆ ಮಾಡುವುದಕ್ಕೆ ಸಹಕರಿಸಿದ ಸಮಾಜದ ಮುಖಂಡರಿಗೂ,ಯುವಕರಿಗೂ ಹಾಗೂ ನನ್ನ ಅಭಿಮಾನಿಗಳಿಗೂ ಕೃತಜ್ಞತೆಗಳು ಸಲ್ಲಿಸುತ್ತೇನೆ.ಇನ್ನೂ ಮುಂದೆ ಸಮಾಜದ ಯಾವುದೇ ಜವಾಬ್ದಾರಿ ವಹಿಸುವುದಿಲ್ಲ ಕೇವಲ ಸಾಮಾನ್ಯ ಕಾರ್ಯಕರ್ತನಾಗಿರುವೆ, ಕಾಲಕಾಲಕ್ಕೆ ಸೂಕ್ತ ಸಲಹೆ ಸೂಚನೆಗಳು ಹಾಗೂ ಮಾರ್ಗದರ್ಶನ ನೀಡುವುದಾಗಿ ತಿಳಿಸಿದ್ದಾರೆ.

ಭಾನುವಾರ, ಮಾರ್ಚ್ 19, 2023

ಕುಂಬಾರ ಅಭಿವೃದ್ಧಿ ನಿಗಮ ಘೋಷಣೆ : ಜಗದೇವ ಕುಂಬಾರ ಸ್ವಾಗತ.

ಬೆಂಗಳೂರ: ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ ಹೀಗಾಗಿ ಸರ್ಕಾರದ ಆದೇಶವನ್ನು ತುಂಬು ಹೃದಯದಿಂದ ಸ್ವಾಗತಿಸುವುದಾಗಿ ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಕುಂಬಾರ ತಿಳಿಸಿದ್ದಾರೆ.
ಹಿಂದುಳಿದ ಪ್ರವರ್ಗ -2(ಎ) ಅಡಿಯಲ್ಲಿ ಬರುವ ಕುಂಬಾರ, ಚಕ್ರಸಾಲಿ, ಗುಣಗ, ಗಣಗಿ, ನಿಗಮ ಕೊಯವ, ಕುಲ, ಕುಲಾಲ, ಕುಂಬಾರ್, ಕುಂಬಾರ್ಡ್, ಕುಮ್ಮಾರ, ಕಸವನ್, ಮೂಲ, ಸಜ್ಜನ ಕುಂಬಾರ, ಖುಮಾರ, ಕುಂಭಾರ, ಖುಂಭಾರ ಮತ್ತು ಕುಲಾಲ‌್ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ನಿಗಮ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ರಾಜ್ಯದ ಇನ್ನುಳಿದ ಸಚಿವರಿಗೂ ,ಶಾಸಕರಿಗೂ ವಿಶೇಷವಾಗಿ ಅಧೀವೇಶನದಲ್ಲಿ ಕುಂಬಾರ ಸಮಾಜದ ನಿಗಮ ಕುರಿತು ವಿಷಯ ಮಂಡಿಸಿದ ಶಾಸಕರು, ಹಾಗೂ ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ ಅವರಿಗೂ ಹೀಗೆ ಎಲ್ಲಾರಿಗೂ ರಾಜ್ಯ ಕುಂಬಾರರ ಯುವ ಸೈನ್ಯ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಭಾನುವಾರ, ಮಾರ್ಚ್ 12, 2023

ಮಾರ್ಚ್. 20ಕ್ಕೆ ಕಲಬುರಗಿ ಚಲೋ ಬೃಹತ ಪ್ರತಿಭಟನೆ.

ಚಿತ್ತಾಪೂರ: ಸುಮಾರು 40 ವರ್ಷಗಳಿಂದ ಕೋಲಿ ಕಬ್ಬಲಿಗ ಸಮಾಜದ ಬೇಡಿಕೆಗಳು ಈಡೇರಿಸದ ಕೇಂದ್ರ ಸರ್ಕಾರ ವಿರುದ್ಧ ಮಾರ್ಚ.20 ರಂದು ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಎಸ್ ಟಿ ಹೋರಾಟ ಸಮಿತಿ ವತಿಯಿಂದ ಕೋಲಿ ಕಬ್ಬಲಿಗ ಜಾತಿಗಳಿಗೆ ಎಸ್ ಟಿ ಯಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ  "ಕಲಬುರಗಿ ಚಲೋ" ಬೃಹತ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಸಮಾಜದ ಕುಲ ಶಾಸ್ತ್ರೀಯ ಅಧ್ಯಯನ ಮುಗಿದರೂ ಅದನ್ನು ಇನ್ನೂ ಸಮಾಜವನ್ನು ಎಸ್ ಟಿಗೆ ಸೇರ್ಪಡೆಯಾಗಿಲ್ಲ ಕೇಂದ್ರ ಸರ್ಕಾರ ಗಣ್ಯರು ಬರಿ ಹರಕೆ ಉತ್ತರ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ 20ರಂದು ಜಗತ್ ವೃತ್ತದಿಂದ ತಿಮ್ಮಪುರ ವೃತ್ತದಿಂದ ಡಿಸಿ ಕಛೇರಿಯ ವರೆಗೆ ನಡೆಯಲಿರುವ ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆಗೆ ಕೋಲಿ ಕಬ್ಬಲಿಗ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ,ರಾಮಲಿಂಗ ಬಾನರ್, ಹಣಮಂತ ಸಂಕನೂರ, ರಾಮಲಿಂಗ, ದೇವಿಂದ್ರ ಅರಣಕಲ್, ಭೀಮಣ್ಣ ಹೊತ್ತಿನಮಡಿ, ಚಂದ್ರು ಕಾಳಗಿ, ಶಿವಪ್ಪ, ನಾಗೇಂದ್ರ ಜೈಗಾಂಗ, ಮಹಾದೇವಪ್ಪ ಇಟಗಾ, ದೇವಿಂದ್ರ, ವಿಜಯಕುಮಾರ ಸಣ್ಣೂರ್, ಸೆರಿದಂತೆ ಇತರರು ಇದ್ದರು.

ಬೇಣ್ಣೂರಕರಗೆ ಬಿಜೆಪಿ ಟಿಕೆಟ್ ನೀಡಲು ಸ್ಥಳೀಯರ ಒತ್ತಾಯ.

ಚಿತ್ತಾಪೂರ:  ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಹಾಗೂ ಚಿತ್ತಾಪೂರ ಮೀಸಲು ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಬಸವರಾಜ ಬೆಣ್ಣೂರಕರ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಸ್ಥಳೀಯರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದರು.

ಡಿ.ಎಸ್ ನಾಮದಾರ್ ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಸ್ಥಳೀಯವಾಗಿ ಶಾಸಕರಾದವರು ವಿಶ್ವನಾಥ್ ಪಾಟೀಲ್, ವಾಲ್ಮೀಕಿ ನಾಯಕ್ ಬಿಟ್ರು ಉಳಿದ ಬೇರೆಯವರೇ ಶಾಸಕರಾಗಿದ್ದಾರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇರೆಯವರಿಗೆ ಮಣೆ ಹಾಕುವುದು ಬಹುಶಃ ಅಷ್ಟು ಸಮಂಜಸವಲ್ಲ ಹೀಗಾಗಿ ಸ್ಥಳೀಯವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬುದು ಈ ನಮ್ಮ ಸ್ಥಳೀಯರ ಒತ್ತಾಯವಾಗಿದೆ.
ಈಗಾಗಲೇ ಬಸವರಾಜ್ ಬೆಣ್ಣೊರಕರ್ ಅವರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರು ಆಗಿದ್ದಾರೆ  ಹಾಗೂ ಈ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಘಟನೆಗಳಲ್ಲಿ ನೇತೃತ್ವ ವಹಿಸಿ ಪ್ರತಿ ಸಮಾಜದವರ ಜೊತೆ ಪ್ರೀತಿ ಸಹ ಬಾಳ್ವೆಯಿಂದ ನಡೆದುಕೊಂಡು ಬಂದವರು ಹೀಗಾಗಿ ಸ್ಥಳೀಯವಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸೂಕ್ತವಾದ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಬಿಜೆಪಿ ಕೇಂದ್ರ ರಾಜ್ಯದ ಪ್ರಭಾವಿ ನಾಯಕರಿಗೆ ಭೆಟ್ಟಿಯಾಗಿ ಬಸವರಾಜ ಬೆಣ್ಣೊರಕರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು ಈಗಾಗಲೇ ನಮ್ಮ ಪಕ್ಷದಲ್ಲಿ ಸುಮಾರು ಜನ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು ನಾವ್ಯಾರು ಅವರನ್ನು ಟಿಕೆಟ್ ನೀಡಬಾರದು ಎಂದು ಬಯಸುತ್ತಿಲ್ಲ. ಸ್ಥಳೀಯರನ್ನು ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಪಕ್ಷಿ ಯಾರಿಗೆ ಟಿಕೆಟ್ ನೀಡಿದರೂ ಸಹ ನಾವು ಒಗ್ಗಟ್ಟಿನಿಂದ ಚುನಾವಣೆ ಮಾಡುವುದಾಗಿ ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಬಸವರಾಜ್ ಸಾಹುಕಾರ್, ಮಲ್ಲಿನಾಥ ಇಂದನೂರ್ ಬಾಬುಮಿಯ ಕಲಗುರ್ತಿ, ಶರಣಗೌಡ ಪಾಟೀಲ್ ಸಂಗನಗೌಡ ಅಳ್ಳೊಳ್ಳಿ, ಅಪ್ಪಾರಾವ್ ಮುಗಳನಾಗಂವ್, ಹಣಮಂತ ಪೂಜಾರಿ, ಬಾಲಕೃಷ್ಣ ಜೋಶಿ ಮಲಗತ್ತಿ, ಸಂಗಣ್ಣ ನಾಗ್ ಶೆಟ್ಟಿ, ಖಾಜಾ ಹುಸೇನ್ ದಿಗ್ಗಾಂವ್, ಮಲ್ಲಿಕಾರ್ಜುನ್ ಪೂಜಾರಿ ಶಿವಯ್ಯ ಗುತ್ತೇದಾರ್, ಮಲ್ಲಿಕಾರ್ಜುನ್ ಇಟಗಾ, ಅನಿಲ್ ಕುಮಾರ್ ಇಂಗೇನ್ಕಲ್, ಕಾರಣ ಕುಮಾರ್ ಅಲ್ಲೂರ್, ಮಂಜು ಪೂಜಾರಿ ಜೀವಣಗಿ, ಮುನಿಯಪ್ಪ ದೇಸಾಯಿ ಕದ್ದರಗಿ, ಶರಣು, ಕಾಶೀನಾಥ್ ಮಾಲಗತ್ತಿ, ದಿಲೀಪ್ ದೊಡ್ಮನಿ, ಭರತ್ ಮುತ್ತಗಾ, ಗುರುರಾಜ್ ಗುಂಡಗುರ್ತಿ, ಸೇರಿದಂತೆ ಇತರರಿದ್ದರು.

ಶನಿವಾರ, ಡಿಸೆಂಬರ್ 31, 2022

ಜ.4ಕ್ಕೆ ಅಂಬಿಗರ ಚೌಡಯ್ಯ ಜಯಂತಿ ಪೂರ್ವಸಿದ್ಧತಾ ಸಭೆ.

ಚಿತ್ತಾಪೂರ: ಪಟ್ಟಣದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಜನವರಿ 4 ಬೆಳಿಗ್ಗೆ 10:30ಕ್ಕೆ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತೋತ್ಸವದ ಪೂರ್ವ ಸಿದ್ಧತಾ ಸಭೆ ಕರೆಯಲಾಗಿದೆ ಎಂದು ಕೋಲಿ ಸಮಾಜದ ಯುವ ಘಟಕ ನಗರ ಅಧ್ಯಕ್ಷ ರಾಜು ಹೋಳಿಕಟ್ಟಿ ತಿಳಿಸಿದ್ದಾರೆ.

ಜನೆವರಿ 21 ರಂದು ಸರ್ಕಾರದಿಂದ ಆಚರಣೆ ಮಾಡುವ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಕುರಿತು ಚರ್ಚೆ ಮಾಡಲು ಹಾಗೂ ಸಮಾಜದ ಸಂಘಟನೆ ಕುರಿತು ಚರ್ಚೆ ನಡೆಸಲು ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ್, ಗೌರವಾಧ್ಯಕ್ಷ ಹಣಮಂತ ಸಂಕನೂರು, ಪ್ರಧಾನ ಕಾರ್ಯದರ್ಶಿ ದೇವಿಂದ್ರ ಅರಣಕಲ್ ನಗರ ಕೋಲಿ ಸಮಾಜದ ಅಧ್ಯಕ್ಷ ಭೀಮಣ್ಣ ಹೋತಿನಮಡು, ತಾಲ್ಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ಗುಂಡು ಐನಾಪುರ, ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು  ಸಮಾಜದ ಸರ್ವ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು, ಸಲಹಾ ಸಮಿತಿಯ ಸರ್ವ ಮುಖಂಡರು ತಪ್ಪದೆ ಸಭೆಗೆ ಆಗಮಿಸಿ ಜಯಂತಿ ಆಚರಣೆ ಬಗ್ಗೆ ಸಲಹೆ, ಸೂಚನೆ ನೀಡುವ ಮೂಲಕ ಮಾರ್ಗದರ್ಶನ ಮಾಡಿ ಸಭೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
 

ಹೋಟೆಲ್-ರೆಸ್ಟೋರೆಂಟ್ ಮಧ್ಯರಾತ್ರಿ 1 ಗಂಟೆಗೆ ಕ್ಲೋಸ್ ಮಾಸ್ಕ್ ಕಡ್ಡಾಯ: ಖಡಕ್ ರೂಲ್ಸ್ ಜಾರಿ ಮಾಡಿದ ಡಿಸಿ.

ಕಲಬುರಗಿ: ಹೊಸ ವರ್ಷಾಚರಣೆಯ ಮುನ್ನಾ ದಿನ ಹಾಗೂ ವರ್ಷಾಚರಣೆಗೆ ಸಂಬಂಧಪಟ್ಟಂತೆ ಎಲ್ಲಾ ಆಚರಣೆಗಳನ್ನು ಡಿಸೆಂಬರ 31 ಮತ್ತು ಜನವರಿ 1 ರಂದು ತಡರಾತ್ರಿ ರಾತ್ರಿ 1 ಗಂಟೆಯ ಒಳಗೆ ಪೂರ್ಣಗೊಳಸಬೇಕು. ವರ್ಷಾಚರಣೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಒಂದೆಡೆ ಸೇರುವ ಸಂದರ್ಭದಲ್ಲಿ ಕಾರ್ಯಕ್ರಮ ಹಗಲು ಹೊತ್ತಿನಲ್ಲಿ ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಬೇಕು. ಹೋಟೆಲ್, ಪಬ್, ರಸ್ಟೋರೆಂಟ್‌ಗಳ, ಕ್ಲಬ್, ರೆಸಾರ್ಟ್ ಇತ್ಯಾದಿ ಒರಂಗಣಗಳ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಎಚ್ಚರಿಕೆ ನೀಡಿದ್ದಾರೆ.

ವಿದೇಶಗಳಲ್ಲಿ ಕೋವಿಡ್ ದಿಢೀರ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಜಿಲ್ಲೆಯ ಜನತೆ ಮೈ ಮರೆಯಬಾರದು. ಮಹಾಮಾರಿ ಕೋವಿಡ್ ಸೋಂಕಿನ ಮುನ್ನೆಚ್ಚರಿಕೆ ಅಗತ್ಯವಾಗಿದೆ.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರದಲ್ಲಿದರೂ ಸಹ ಅದಾಗ್ಯೂ ಪ್ರಪಂಚದ ಕೆಲವು ದೇಶಗಳಲ್ಲಿ ಪ್ರಕರಣ ಏರುಗತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

ಅಂತರಾಷ್ಟ್ರೀಯ ಪ್ರಯಾಣಿಕರು ವಿದೇಶದಿಂದ ಕಲಬುರಗಿ ಜಿಲ್ಲೆಗೆ ಬಂದಾಗ ಏರ್‌ಪೋರ್ಟ್ನಲ್ಲಿ ಕೋವಿಡ್ ಸ್ಯಾಂಪಲ್ ನೀಡಿದಲ್ಲಿ ಫಲಿತಾಂಶ ಬರುವವರೆಗೂ 7 ದಿನಗಳ ವರೆಗೆ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಜ್ವರದ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಬೇಕು. ಫಲಿತಾಂಶ ಪಾಸಿಟಿವ್ ಬಂದು ರೋಗ ಲಕ್ಷಣ ರಹಿತವಾಗಿದಲ್ಲಿ ಹೋಂ ಐಸೋಲೇಷನ್‌ನಲ್ಲಿರಬೇಕು. ಲಕ್ಷಣ ತೀವ್ರತೆ ಹೆಚ್ಚಾದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಅವರು ತಿಳಿಸಿದ್ದಾರೆ.

60 ವರ್ಷ ಮೇಲ್ಪಟ್ಟವರು, ವೃದ್ಧರು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಇಂತಹ ಆಚರಣೆಗಳಿಂದ ದೂರವಿರುವುದು ಉತ್ತಮವಾಗಿದೆ ಎಂದು ಸಲಹೆ ನೀಡಿರುವ ಅವರು ಕಾರ್ಯಕ್ರಮಗಳ ಆಯೋಜಕರು ಮತ್ತು ಸೇವಾ ಸಿಬ್ಬಂದಿಗಳು ಕೋವಿಡ್ ಲಸಿಕೆಯ ಎರಡು ಡೋಸ್ ಅಥವಾ ಬೂಸ್ಟರ್ ಡೋಸ್ ಪಡೆದಿರಬೇಕು ಎಂದಿದ್ದಾರೆ. ಜನ ದಟ್ಟಣೆಯನ್ನು ನಿಯಂತ್ರಿಸಲು ಪ್ರವೇಶ ದ್ವಾರಗಳ ಸಂಖ್ಯೆಯನ್ನು ಹೆಚ್ಚಿಸುವುದು. ಒಳಾಂಗಣ ಪ್ರದೇಶಗಳಲ್ಲಿನ ಆಚರಣೆಯಲ್ಲಿ ಭಾಗವಹಿಸುವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮಾಸ್ಕ್ ಧರಿಸದವರಿಗೆ ಪ್ರವೇಶ ನೀಡಬಾರದು. ಪ್ರತಿಯೊಬ್ಬರೂ ಥರ್ಮಲ್ ಸ್ಥಾನಿಂಗ್‌ಗೆ ಒಳಪಡಿಸುವುದಲ್ಲದೆ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಬೇಕು. ಹೆಚ್ಚಿನ ಜನ ಸೇರುವುದುರಿಂದ ಮುಂಜಾಗ್ರತವಾಗಿ ಅಂಬುಲೆನ್ಸ್ ವ್ಯವಸ್ಥೆ ಸಹ ಮಾಡಬೇಕು ಎಂದು ಅವರು ಆಯೋಜಕರಿಗೆ ಸೂಚಿಸಿದ್ದಾರೆ.

ಬೂಸ್ಟರ್ ಡೋಸ್ ಪಡೆಯಲು ಮನವಿ: ಜಿಲ್ಲೆಯಲ್ಲಿ ಇದೂವರೆಗೆ ಬೂಸ್ಟರ್ ಡೋಸ್ ಪಡೆದವರ ಪ್ರಮಾಣ ಶೇ.21 ಇದ್ದು, ಜನವರಿ-2023 ಅಂತ್ಯದ ವರೆಗೆ ಇದರ ಪ್ರಮಾಣ ಶೇ.50ಕ್ಕೆ ಹೆಚ್ಚಿಸುವ ಗುರಿ ಇದೆ. ಕೋವಿಡ್ ಮಹಾಮಾರಿ ತಡೆಗಟ್ಟಲು ಬೂಸ್ಟರ್ ಪಡೆಯುವುದು ಅವಶ್ಯಕವಾಗಿರುವುದರಿಂದ ಎರಡು ಡೋಸ್ ಪಡೆದು ಬೂಸ್ಟರ್ ಡೋಸ್ ಪಡೆಯದವರು ಬೂಸ್ಟರ್ ಡೋಸ್ ಪಡೆಯುವಂತೆ ಡಿ.ಸಿ. ಯಶವಂತ  ಗುರುಕರ್ ಮನವಿ ಮಾಡಿದ್ದಾರೆ.

ಸಿನೆಮಾ ಹಾಲ್‌ನಲ್ಲಿ ಮಾಸ್ಕ್ ಕಡ್ಡಾಯ: ಜಿಲ್ಲೆಯ ಎಲ್ಲಾ ಸಿನೆಮಾ ಮಂದಿರ, ಥಿಯೇಟರ್‌ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪ್ರವೇಶದ್ವಾರದಲ್ಲಿ ಸಿಬ್ಬಂದಿಗಳು ಇದನ್ನು ಖಚಿತಪಡಿಸಿಕೊಳ್ಳಬೇಕು ಎಂದಿರುವ ಅವರು ಕೋವಿಡ್ ನಿಯಂತ್ರಣದಲ್ಲಿ ಆಗಾಗ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಕೋರಿದ್ದಾರೆ.

ಗುರುವಾರ, ಡಿಸೆಂಬರ್ 29, 2022

ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದು ಕುವೆಂಪು: ಮರತೂರ್

ಚಿತ್ತಾಪೂರ: ಕುವೆಂಪು ಅವರು ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರೆ ಎಂದು  ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್, ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯ ಅಂಗವಾಗಿ " ವಿಶ್ವ ಮಾನವ ದಿನಾಚರಣೆ" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆದು,ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಜೆವಾಣಿ ಪತ್ರಿಕೆಯ 2023ರ ಕ್ಯಾಲೆಂಡರ ಬಿಡುಗಡೆ ಮಾಡಿ ಮಾತನಾಡಿದ ಅವರು ಕುವೆಂಪು ಅವರು ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮನುಜಮತ ವಿಶ್ವಪಥ ಎಂದು ಸಾರಿ ಮಾನವ ಸಮಾಜಕ್ಕೆ ಅನೇಕ ಸಂದೇಶ ನೀಡಿದ್ದಾರೆ. ಹಾಗಾಗಿ ಅವರನ್ನು ವಿಶ್ವಮಾನವ ಎಂದು ಹೇಳಲಾಗುತ್ತದೆ ಎಂದರು.

ಕುವೆಂಪು ಅವರು ನಾಡಿಗೆ ನಾಡ ಗೀತೆ, ರೈತ ಗೀತೆ ಹೇಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ 
ಇಂದಿನ ವಿದ್ಯಾರ್ಥಿಗಳು ಅವರ ಕೃತಿಗಳನ್ನು ಓದಿ ಅರ್ಥಮಾಡಿಕೊಂಡು ಅವರ ವಿಚಾರಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ನಾಸಾಸಾಪ ಅಧ್ಯಕ್ಷ ಕಾಶಿನಾಥ ಗುತ್ತೇದಾರ್ ಮಾತನಾಡಿ  ನಾಗಾವಿ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ, ಅಭಿವೃದ್ಧಿಯ ಸಲುವಾಗಿ ಈ ಸಂಘ ಹುಟ್ಟಿಕೊಂಡಿದೆ. ಅದರ ಜೊತೆಗೆ ನಮ್ಮ ಕ್ಷೇತ್ರದ ಇತಿಹಾಸ ಮೊದಲು ನಾವು ಅರಿಯಬೇಕು ಅದು ನಾವು ನಮ್ಮ ಕ್ಷೇತ್ರದ ಇತಿಹಾಸ ಬಿಟ್ಟು ಬೇರೆ ಜಿಲ್ಲೆಗಳ ಇತಿಹಾಸ ತಿಳಿಯಲು ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು ನೋಡಿದರೆ ತುಂಬಾ ಬೇಜಾರು ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿ ಕಾಲೇಜಿನ ಪ್ರಾಂಶುಪಾಲರಲ್ಲಿ ಮನವಿ ಮಾಡಿ ಕಾಲೇಜಿನ ವಿದ್ಯಾರ್ಥಿಗಳನ್ನು ಎನ್ಎಸ್ಎಸ್ ಶಿಬಿರವನ್ನು ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ ಹಾಕಿಕೊಂಡು ವಿದ್ಯಾರ್ಥಿಗಳಲ್ಲಿ ಈ ಭಾಗದ ಇತಿಹಾಸ ತಿಳಿಸಲು ಹೇಳಿದರು.
ಸಂಜೆವಾಣಿ ಕನ್ನಡ ದಿನ ಪತ್ರಿಕೆಯು ಪ್ರತಿ ವರ್ಷ ಬಿಡುಗಡೆ ಮಾಡುವ ಕ್ಯಾಲೆಂಡರನ್ನು ಈ ವರ್ಷ ಚಿತ್ತಾಪುರಿನ ನಾಗಾವಿ ನಾಡಿ ರಾಷ್ಟ್ರಕೂಟ ಕುಲ ದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿ ಭಾವಚಿತ್ರವಿರುವ 2023ರ ಹೊಸ ವರ್ಷದ ಕ್ಯಾಲೆಂಡರನ್ನು ಗಣ್ಯರು ಬಿಡುಗಡೆ ಮಾಡಿದರು.

ಸಾ.ಶಿ.ಇ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಡಾ. ವಿಜಯಕುಮಾರ ಹಂಚನಾಳ, ಕಾಲೇಜಿನ ಪ್ರಾಂಶುಪಾಲರಾದ ಶಿವಶರಣಪ್ಪ ಬಿರಾದಾರ್, ಚಲನಚಿತ್ರ ನಿರ್ದೇಶಕರಾದ ಅಯ್ಯಪ್ಪ ರಾಮತೀರ್ಥ, ಮಾತನಾಡಿದರು. ಪ್ರಗತಿಪರ ರೈತರಾದ ರವೀಂದ್ರ ಸಜ್ಜನಶೆಟ್ಟಿ, ಕನ್ನಡ ಉಪನ್ಯಾಸಕರಾದ ಬಿ.ಕೆ ಪಂಡಿತ್ ಮೇದಿಕೆ ಮೇಲಿದ್ದರು. 

ಈ ಸಂದರ್ಭದಲ್ಲಿ  ಕಾಲೇಜಿನ ಉಪನ್ಯಾಸಕ ವೃಂದದವರಾದ ಡಾ. ಎಂ.ಎಂ ಮೇತ್ರಿ, ಡಾ. ಸಾವಿತ್ರಿ ಕುಲಕರ್ಣಿ, ಡಾ.ಮಲ್ಲಪ್ಪ ಮಾನೆಗಾರ್, ಡಾ.ಭಾಗ್ಯಲಕ್ಷ್ಮೀ ರಡ್ಡಿ, ಡಾ. ಶರಣಬಸಪ್ಪ ರಾಯಕೊಟ್ಟಿ, ಡಾ. ಶ್ರಾವಣ ಕಾಂಬಳೆ, ಡಾ. ಪರೀವಿನಾ ಪಾತೀಮಾ, ಡಾ. ನುಜಾತ್ ಪರೀವಿನ್, ಡಾ.ರವಿ ಬೀಳಾರ್, ನಬೀಸಾಬ್, ಶಿವಲಿಂಗಪ್ಪ ಕಂಬಾರ, ವಿರೇಂದ್ರ, ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಸದಸ್ಯರಾದ ಎಂ.ಡಿ ಮಶಾಕ್, ಸಂಜೆವಾಣಿ ಪತ್ರಕರ್ತರು ಜಗದೇವ ಕುಂಬಾರ, ಯಲ್ಲಯ್ಯ ಕಲಾಲ್,  ಸ್ವಾಗತ ಗೀತೆ ಮೌನೇಶ ಪಂಚಾಳ, ನಿರೂಪಣೆ, ವೀರಸಂಗಪ್ಪ ಸುಲೇಗಾಂವ, ಸ್ವಾಗತ ಭಾಷಣ, ವೀರೇಶ ಕರದಾಳ, ವಂದನಾರ್ಪಣೆ, ಪ್ರದೀಪ ಕುಲಕರ್ಣಿ ಮಾಡಿದರು.


ಶನಿವಾರ, ಡಿಸೆಂಬರ್ 24, 2022

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಚಿತ್ತಾಪುರ: ತಾಲೂಕಿನ ಕದ್ದರ್ಗಿ ಗ್ರಾಮಕ್ಕೆ ಬಿಜೆಪಿ ಪಕ್ಷದ ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸಲು ಆಗಮಿಸಿದ ವಾಹನಕ್ಕೆ ಬಿಜೆಪಿ ಕಾರ್ಯಕರ್ತರು ಖುಷಿಯಿಂದ ಹಾಲಿನ ಅಭಿಷೇಕ ಮಾಡಿ ಬರಮಾಡಿಕೊಂಡರು.

ಗ್ರಾಮದ ಬಿಜೆಪಿ ಮುಖಂಡ ಅಡೆಪ್ಪ ಮಾಲಿ ಪಾಟೀಲ್ ಮಾತನಾಡಿ "ಜನ ಸೇವೆಯೇ ಜನಾರ್ದನ ಸೇವೆ" ಎಂಬ ಆಶಯದೊಂದಿಗೆ ಸಮಾಜ ಸೇವಕ ಮಣಿಕಂಠ ರಾಠೋಡ್ ಅವರು ತಾಲೂಕಿನಲ್ಲಿ ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಿನ ಚಿತ್ತಾಪುರ ಪಟ್ಟಣ, ವಾಡಿ, ನಾಲವಾರ, ದಂಡೋತಿ, ಹೆಬ್ಬಾಳ, ರಾವೂರ, ಮಾಡಬೂಳ, ಭೀಮನಹಳ್ಳಿ, ಭಂಕೂರ ಹೀಗೆ 9 ಕಡೆ ಜನ ಸ್ನೇಹಿ ಕೇಂದ್ರಗಳನ್ನು ತೆರೆದು  ಸೇವೆ ಮಾಡುತ್ತಿದ್ದಾರೆ. ಹಾಗೂ ಪಕ್ಷದ ಯೋಜನೆಗಳ ಮಾಹಿತಿ ಪ್ರತಿ ಗ್ರಾಮದ ಜನ ಸಾಮಾನ್ಯರಿಗೆ ತಿಳಿಯಲಿ ಎಂದು ವಾಹನದ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ್ ಬೆಳಗುಂಪಿ,
ಗಣಪತಿ ನಾಯಕ, ವಿಶ್ವರಾಜ್ ದೇಸಾಯಿ,
ಅಶೋಕ್ ಗುತ್ತೇದಾರ, ಪರಮೇಶ್ವರ ಗುಡ್ಡಪೂರ, 
ಮಲ್ಲಿಕಾರ್ಜುನ ದೇಸಾಯಿ, ಚಂದ್ರಶೇಖರ್ ದೇಸಾಯಿ, ಶಿವಕುಮಾರ್ ಪಾಳ, ಮೊದಿನ್ ಪಟೇಲ್, ಸಿದ್ದಲಿಂಗ ಕೋರಿ, ಬಾಪೂಗೌಡ, ಸಿದ್ದು ಜೀವಣಗಿ, ಸಾಗರ ದೇಸಾಯಿ, ಭೀಮಾಶಂಕರ್ ದೇಸಾಯಿ, ಸೇರಿದಂತೆ ಇತರರಿದ್ದರು.

ಗುರುವಾರ, ಡಿಸೆಂಬರ್ 22, 2022

ಭುಟ್ಟೊ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ.

ಚಿತ್ತಾಪೂರ: ಪ್ರಧಾನಿ ನರೇಂದ್ರ ಮೋದಿಯವರು "ಗುಜರಾತ್ ನ ಕಟುಕ" ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ವಿರುದ್ಧ ಬಿಜೆಪಿ ಯುವ ಘಟಕ ನೇತೃತ್ವದಲ್ಲಿ ಗುರುವಾರ ಪಟ್ಟಣದ ಲಾಡ್ಜೀಂಗ್ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿ ಭುಟ್ಟೊ ಅವರ ಪ್ರತಿಕೃತಿಗೆ ಬೂಟ್ ಗಾಲಿನಿಂದ ಒದ್ದು ಪ್ರಕೃತಿ ದಹಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರಣುಕುಮಾರ್ ಯಾಗಪೂರ ಮಾತನಾಡಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಧರ್ಮವನ್ನು ರಕ್ಷಿಸುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದ ಪಾಕಿಸ್ತಾನ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸುರೇಶ ಬೆನಕನಹಳ್ಳಿ, ಮಹ್ಮದ ಯುನುಸ್ ಪ್ರತಿಭಟನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಬಿಜೆಪಿ ಕಾರ್ಯದರ್ಶಿ ರಾಮದಾಸ ಚವ್ಹಾಣ್, ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಪ್ರಸಾದ್  ಅವಾಂಟಿ,  ಕಾರ್ಮಿಕ ಬಂಡಿ, ಅಕ್ಷಯ ಚಕಡಿ, ಹನುಮಾನ, ಯಮುನಪ್ಪ,ದೇವರಾಜ ತಳವಾರ, ಧನರಾಜ್ ರಾಠೋಡ್, ಶಂಕರ ಜಾಪೂರ,ರಾಜು ಹೊನಗುಂಟಾ,ಮಂಜು ಹೆಬ್ಬಾಳ, ಸಾಗರ, ಗುಂಡು, ಕಾಶಿ, ಅಂಬರೀಶ, ವೀರೇಶ ರಾವೂರ, ಸೇರಿದಂತೆ ಇತರರು ಇದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...