ಪೋಸ್ಟ್‌ಗಳು

2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜ.4ಕ್ಕೆ ಅಂಬಿಗರ ಚೌಡಯ್ಯ ಜಯಂತಿ ಪೂರ್ವಸಿದ್ಧತಾ ಸಭೆ.

ಇಮೇಜ್
ಚಿತ್ತಾಪೂರ: ಪಟ್ಟಣದ  ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಜನವರಿ 4 ಬೆಳಿಗ್ಗೆ 10:30ಕ್ಕೆ  ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತೋತ್ಸವದ ಪೂರ್ವ ಸಿದ್ಧತಾ ಸಭೆ ಕರೆಯಲಾಗಿದೆ ಎಂದು ಕೋಲಿ ಸಮಾಜದ ಯುವ ಘಟಕ ನಗರ ಅಧ್ಯಕ್ಷ ರಾಜು ಹೋಳಿಕಟ್ಟಿ ತಿಳಿಸಿದ್ದಾರೆ. ಜನೆವರಿ 21 ರಂದು ಸರ್ಕಾರದಿಂದ ಆಚರಣೆ ಮಾಡುವ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಕುರಿತು ಚರ್ಚೆ ಮಾಡಲು ಹಾಗೂ ಸಮಾಜದ ಸಂಘಟನೆ ಕುರಿತು ಚರ್ಚೆ ನಡೆಸಲು ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ್, ಗೌರವಾಧ್ಯಕ್ಷ ಹಣಮಂತ ಸಂಕನೂರು, ಪ್ರಧಾನ ಕಾರ್ಯದರ್ಶಿ ದೇವಿಂದ್ರ ಅರಣಕಲ್ ನಗರ ಕೋಲಿ ಸಮಾಜದ ಅಧ್ಯಕ್ಷ ಭೀಮಣ್ಣ ಹೋತಿನಮಡು, ತಾಲ್ಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ಗುಂಡು ಐನಾಪುರ, ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು   ಸಮಾಜದ ಸರ್ವ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು, ಸಲಹಾ ಸಮಿತಿಯ ಸರ್ವ ಮುಖಂಡರು ತಪ್ಪದೆ ಸಭೆಗೆ ಆಗಮಿಸಿ ಜಯಂತಿ ಆಚರಣೆ ಬಗ್ಗೆ ಸಲಹೆ, ಸೂಚನೆ ನೀಡುವ ಮೂಲಕ ಮಾರ್ಗದರ್ಶನ ಮಾಡಿ ಸಭೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.  

ಹೋಟೆಲ್-ರೆಸ್ಟೋರೆಂಟ್ ಮಧ್ಯರಾತ್ರಿ 1 ಗಂಟೆಗೆ ಕ್ಲೋಸ್ ಮಾಸ್ಕ್ ಕಡ್ಡಾಯ: ಖಡಕ್ ರೂಲ್ಸ್ ಜಾರಿ ಮಾಡಿದ ಡಿಸಿ.

ಇಮೇಜ್
ಕಲಬುರಗಿ: ಹೊಸ ವರ್ಷಾಚರಣೆಯ ಮುನ್ನಾ ದಿನ ಹಾಗೂ ವರ್ಷಾಚರಣೆಗೆ ಸಂಬಂಧಪಟ್ಟಂತೆ ಎಲ್ಲಾ ಆಚರಣೆಗಳನ್ನು ಡಿಸೆಂಬರ 31 ಮತ್ತು ಜನವರಿ 1 ರಂದು ತಡರಾತ್ರಿ ರಾತ್ರಿ 1 ಗಂಟೆಯ ಒಳಗೆ ಪೂರ್ಣಗೊಳಸಬೇಕು. ವರ್ಷಾಚರಣೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಒಂದೆಡೆ ಸೇರುವ ಸಂದರ್ಭದಲ್ಲಿ ಕಾರ್ಯಕ್ರಮ ಹಗಲು ಹೊತ್ತಿನಲ್ಲಿ ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಬೇಕು. ಹೋಟೆಲ್, ಪಬ್, ರಸ್ಟೋರೆಂಟ್‌ಗಳ, ಕ್ಲಬ್, ರೆಸಾರ್ಟ್ ಇತ್ಯಾದಿ ಒರಂಗಣಗಳ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಎಚ್ಚರಿಕೆ ನೀಡಿದ್ದಾರೆ. ವಿದೇಶಗಳಲ್ಲಿ ಕೋವಿಡ್ ದಿಢೀರ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಜಿಲ್ಲೆಯ ಜನತೆ ಮೈ ಮರೆಯಬಾರದು. ಮಹಾಮಾರಿ ಕೋವಿಡ್ ಸೋಂಕಿನ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರದಲ್ಲಿದರೂ ಸಹ ಅದಾಗ್ಯೂ ಪ್ರಪಂಚದ ಕೆಲವು ದೇಶಗಳಲ್ಲಿ ಪ್ರಕರಣ ಏರುಗತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ ಎಂದಿದ್ದಾರೆ. ಅಂತರಾಷ್ಟ್ರೀಯ ಪ್ರಯಾಣಿಕರು ವಿದೇಶದಿಂದ ಕಲಬುರಗಿ ಜಿಲ್ಲೆಗೆ ಬಂದಾಗ ಏರ್‌ಪೋರ್ಟ್ನಲ್ಲಿ ಕೋವಿಡ್ ಸ್ಯಾಂಪಲ್ ನೀಡಿದಲ್ಲಿ ಫಲಿತಾಂಶ ಬರುವವರೆಗೂ 7 ದಿನಗಳ ವರೆಗೆ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಜ್ವರದ ಲಕ್ಷಣ ಕಂಡುಬಂದಲ್...

ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದು ಕುವೆಂಪು: ಮರತೂರ್

ಇಮೇಜ್
ಚಿತ್ತಾಪೂರ: ಕುವೆಂಪು ಅವರು ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರೆ ಎಂದು  ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು. ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್, ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯ ಅಂಗವಾಗಿ " ವಿಶ್ವ ಮಾನವ ದಿನಾಚರಣೆ" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆದು,ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಜೆವಾಣಿ ಪತ್ರಿಕೆಯ 2023ರ ಕ್ಯಾಲೆಂಡರ ಬಿಡುಗಡೆ ಮಾಡಿ ಮಾತನಾಡಿದ ಅವರು ಕುವೆಂಪು ಅವರು ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮನುಜಮತ ವಿಶ್ವಪಥ ಎಂದು ಸಾರಿ ಮಾನವ ಸಮಾಜಕ್ಕೆ ಅನೇಕ ಸಂದೇಶ ನೀಡಿದ್ದಾರೆ. ಹಾಗಾಗಿ ಅವರನ್ನು ವಿಶ್ವಮಾನವ ಎಂದು ಹೇಳಲಾಗುತ್ತದೆ ಎಂದರು. ಕುವೆಂಪು ಅವರು ನಾಡಿಗೆ ನಾಡ ಗೀತೆ, ರೈತ ಗೀತೆ ಹೇಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ  ಇಂದಿನ ವಿದ್ಯಾರ್ಥಿಗಳು ಅವರ ಕೃತಿಗಳನ್ನು ಓದಿ ಅರ್ಥಮಾಡಿಕೊಂಡು ಅವರ ವಿಚಾರಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಸ್ತಾವಿಕ ನಾಸಾಸಾಪ ಅಧ್ಯಕ್ಷ ಕಾಶಿನಾಥ ಗುತ್ತೇದಾರ್ ಮ...

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಇಮೇಜ್
ಚಿತ್ತಾಪುರ: ತಾಲೂಕಿನ ಕದ್ದರ್ಗಿ ಗ್ರಾಮಕ್ಕೆ ಬಿಜೆಪಿ ಪಕ್ಷದ ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸಲು ಆಗಮಿಸಿದ ವಾಹನಕ್ಕೆ ಬಿಜೆಪಿ ಕಾರ್ಯಕರ್ತರು ಖುಷಿಯಿಂದ ಹಾಲಿನ ಅಭಿಷೇಕ ಮಾಡಿ ಬರಮಾಡಿಕೊಂಡರು. ಗ್ರಾಮದ ಬಿಜೆಪಿ ಮುಖಂಡ ಅಡೆಪ್ಪ ಮಾಲಿ ಪಾಟೀಲ್ ಮಾತನಾಡಿ "ಜನ ಸೇವೆಯೇ ಜನಾರ್ದನ ಸೇವೆ" ಎಂಬ ಆಶಯದೊಂದಿಗೆ ಸಮಾಜ ಸೇವಕ ಮಣಿಕಂಠ ರಾಠೋಡ್ ಅವರು ತಾಲೂಕಿನಲ್ಲಿ ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಿನ ಚಿತ್ತಾಪುರ ಪಟ್ಟಣ, ವಾಡಿ, ನಾಲವಾರ, ದಂಡೋತಿ, ಹೆಬ್ಬಾಳ, ರಾವೂರ, ಮಾಡಬೂಳ, ಭೀಮನಹಳ್ಳಿ, ಭಂಕೂರ ಹೀಗೆ 9 ಕಡೆ ಜನ ಸ್ನೇಹಿ ಕೇಂದ್ರಗಳನ್ನು ತೆರೆದು  ಸೇವೆ ಮಾಡುತ್ತಿದ್ದಾರೆ. ಹಾಗೂ ಪಕ್ಷದ ಯೋಜನೆಗಳ ಮಾಹಿತಿ ಪ್ರತಿ ಗ್ರಾಮದ ಜನ ಸಾಮಾನ್ಯರಿಗೆ ತಿಳಿಯಲಿ ಎಂದು ವಾಹನದ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಸವರಾಜ್ ಬೆಳಗುಂಪಿ, ಗಣಪತಿ ನಾಯಕ, ವಿಶ್ವರಾಜ್ ದೇಸಾಯಿ, ಅಶೋಕ್ ಗುತ್ತೇದಾರ,  ಪರಮೇಶ್ವರ ಗುಡ್ಡಪೂರ,  ಮಲ್ಲಿಕಾರ್ಜುನ ದೇಸಾಯಿ,  ಚಂದ್ರಶೇಖರ್ ದೇಸಾಯಿ,  ಶಿವಕುಮಾರ್ ಪಾಳ, ಮೊದಿನ್ ಪಟೇಲ್,  ಸಿದ್ದಲಿಂಗ ಕೋರಿ, ಬಾಪೂಗೌಡ,  ಸಿದ್ದು ಜೀವಣಗಿ,  ಸಾಗರ ದೇಸಾಯಿ,  ಭೀಮಾಶಂಕರ್ ದೇಸಾಯಿ, ಸೇರಿದಂತೆ ಇತರರಿದ್ದರು.

ಭುಟ್ಟೊ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ.

ಇಮೇಜ್
ಚಿತ್ತಾಪೂರ: ಪ್ರಧಾನಿ ನರೇಂದ್ರ ಮೋದಿಯವರು "ಗುಜರಾತ್ ನ ಕಟುಕ" ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ವಿರುದ್ಧ ಬಿಜೆಪಿ ಯುವ ಘಟಕ ನೇತೃತ್ವದಲ್ಲಿ ಗುರುವಾರ ಪಟ್ಟಣದ ಲಾಡ್ಜೀಂಗ್ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿ ಭುಟ್ಟೊ ಅವರ ಪ್ರತಿಕೃತಿಗೆ ಬೂಟ್ ಗಾಲಿನಿಂದ ಒದ್ದು ಪ್ರಕೃತಿ ದಹಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರಣುಕುಮಾರ್ ಯಾಗಪೂರ ಮಾತನಾಡಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಧರ್ಮವನ್ನು ರಕ್ಷಿಸುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದ ಪಾಕಿಸ್ತಾನ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸುರೇಶ ಬೆನಕನಹಳ್ಳಿ, ಮಹ್ಮದ ಯುನುಸ್ ಪ್ರತಿಭಟನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಬಿಜೆಪಿ ಕಾರ್ಯದರ್ಶಿ ರಾಮದಾಸ ಚವ್ಹಾಣ್, ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಪ್ರಸಾದ್  ಅವಾಂಟಿ,  ಕಾರ್ಮಿಕ ಬಂಡಿ, ಅಕ್ಷಯ ಚಕಡಿ, ಹನುಮಾನ, ಯಮುನಪ್ಪ,ದೇವರಾಜ ತಳವಾರ, ಧನರಾಜ್ ರಾಠೋಡ್, ಶಂಕರ ಜಾಪೂರ,ರಾಜು ಹೊನಗುಂಟಾ,ಮಂಜು ಹೆಬ್ಬಾಳ, ಸಾಗರ, ಗುಂಡು, ಕಾಶಿ, ಅಂಬರೀಶ, ವೀರೇಶ ರಾವೂರ, ಸೇರಿದಂತೆ ಇತರರು ಇದ್ದರು.

ನಾಗಾವಿ ಕ್ಷೇತ್ರ ಶ್ರೀಮಂತವಾಗಬೇಕು: ಅಗಸರ್

ಇಮೇಜ್
ಚಿತ್ತಾಪುರ: ನಾಗಾವಿ ಘಟಿಕ ಸ್ಥಾನವು ಅಳಿವಿನಂಚಿನಲ್ಲಿದ್ದು ಅಲ್ಲಿರುವ ಅವಶೇಷಗಳು ಹಾಳಾಗಿ ಹೊಗುತ್ತಿದ್ದು ಅವುಗಳನ್ನು ಸಂರಕ್ಷಿಸುವದಲ್ಲದೇ ಮುಂದಿನ ಪೀಳಿಗೆಗೆ ಪೋಶಿಸಿ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶ್ರೀಮಂತಗೊಳಿಸಬೇಕಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಹೇಳಿದರು.   ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಉದ್ಘಾಟನೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರಕೂಟರ ಕಾಲದಲ್ಲಿಯೇ ನಾಗಾವಿ ಕ್ಷೇತ್ರವು ವಿಶ್ವವಿದ್ಯಾಲಯ ಕೇಂದ್ರವಾಗಿ ಪ್ರಸಿದ್ದಿ ಪಡೆದು ವಿಶ್ವದಲ್ಲಿಯೇ ಪ್ರಸಿದ್ದ ಕ್ಷೇತ್ರವಾಗಿದೆ.ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಅಧ್ಯಯನ ಕೇಂದ್ರವಾಗಬೇಕು ಎನ್ನುವ ಬೇಡಿಕೆ ಈ ಭಾಗದಿಂದ ಕೇಳಿಬರುತ್ತಿದೆ ಗುಲಬರ್ಗಾ ವಿಶ್ವವಿದ್ಯಾಲಯವು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.     ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ,ಈ ಭಾಗದ ಐತಿಹಾಸಿಕ ನಾಗಾವಿ ಕ್ಷೇತ್ರದ ಇತಿಹಾಸ ನಾಡಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಹುಟ್ಟು ಹಾಕಿರುವ ಕಾರ್ಯ ಶ್ಲಾಘನೀಯ,ನಾಗಾವಿ ಉತ್ಸವ ಮಾಡುವುದು ಅವಶ್ಯಕವಾಗಿದ್ದು ಇದಕ್ಕೆ ಬೇ...

ಭ್ರಷ್ಟಾಚಾರ-ನಿರುದ್ಯೋಗ ಬಗ್ಗೆ ಮಾತನಾಡಿದ್ದೇ ತಪ್ಪಾ?: ಪ್ರಿಯಾಂಕ್ ಖರ್ಗೆ

ಇಮೇಜ್
ಚಿತ್ತಾಪೂರ: ರಾಜ್ಯ ಸರ್ಕಾರದ ಬ್ರಹ್ಮಾಂಡದ ಭ್ರಷ್ಟಾಚಾರವನ್ನು ಬಯಲಿಗೇಳಿದ್ದೀದ್ದೇನೆ. ಉದ್ಯೋಗ ಸಿಗದೆ ನಮ್ಮ ಯುವಕರು ಬೀದಿ ಬೀದಿ ಅಲೆಯುತ್ತಿದ್ದಾರೆ. ಅವರಿಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದ್ದೇನೆ.ಇದು ಬಿಜೆಪಿಯವರಿಗೆ ಸರಿ ಕಾಣದೆ ನನ್ನನ್ನು ಹೇಗಾದರೂ ಮಾಡಿ ಚುನಾವಣೆಯಲ್ಲಿ ಸೋಲಿಸಲು ಷಡ್ಯಂತರ ಮಾಡುತ್ತಿದ್ದಾರೆ. ನಮ್ಮ ಚಿತ್ತಾಪುರದ ಜನರು ಪ್ರಜ್ಞಾವಂತರಿದ್ದ ಬಿಜೆಪಿಯವರ ಬೂಟಾಟಿಕೆಯ ಇಲ್ಲಿ ನಡೆಯುವುದಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಗುಡುಗಿದರು. ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಪುರಸಭೆ ಆಯೋಜಿಸಿದ್ದ, 2022-23ನೇ ಸಾಲಿನ 15ನೇ ಹಣಕಾಸಿನ ಲೋಕೋಪಯೋಗಿ ಇಲಾಖೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಇಲಾಖೆ ಯೋಜನೆಯಲ್ಲಿ 25.ಕೋಟಿ ಅನುದಾನದಡಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಬ್‌ಕಾ ಸಾತ್ ಸಬ್ ಕಾ ವಿಕಾಸ್ ಬರೀ ಬೊಗಳೆ ಘೋಷಣೆಯಾಗಿ ಉಳಿದುಕೊಂಡಿದೆ. ಅಲ್ಪಸಂಖ್ಯಾತರ ಮೇಲೆ ದಾಳಿ ಜಾಸ್ತಿಯಾಗಿದೆ. 58 ಪ್ರತಿಶತ ಬಜೆಟ್ ಜಾಹೀರಾತಿಗೆ ಬಳಸಲಾಗುತ್ತಿದೆ. ಮಕ್ಕಳು ಇಲ್ಲದೇ ಶಾಲೆಗಳು ಮುಚ್ಚುತ್ತಿವೆ. 100 ಸ್ಮಾರ್ಟ್ ಸಿಟಿ ಯೋಜನೆ ಎಲ್ಲಿ ಹೋಯಿತು. ರೈತರ ಆದಾಯ ಕುಸಿದು ಹೋಗುತ್ತಿದೆ. ಸ್ವಿಸ್ ಬ್ಯಾಂಕ್ ಹಣ ಯಾರಿಗೆ ಬಂದಿದೆ. 2 ಸಾವಿರ ಕೋಟಿ ಇದ್ದ ಹಣ ಬಿಜೆಪಿ ಬಂದ ಮೇಲೆ ವಿದೇಶಿ ಬ್ಯಾಂಕ್ ಗಳಲ್ಲಿ 38 ಸಾವಿರ ಕೋಟಿ ...

ಆಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳು ಭಾಗಿ: ಪ್ರಿಯಾಂಕ ಖರ್ಗೆ.

ಇಮೇಜ್
ಚಿತ್ತಾಪೂರ: ಆಕ್ರಮ ಮರಳು ದಂಧೆ ಕೊರರ ಜೊತೆ ಕಂದಾಯ, ಗಣಿ ಮತ್ತು ಭೂ-ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ,ಸಾರಿಗೆ ಇಲಾಖೆ,ಗೃಹ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಪಿಡಿಓವರೆಗೆ ಎಲ್ಲ ಹಂತದ ಇಲಾಖೆಯ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು  ಶಾಸಕ ಪ್ರಿಯಾಂಕ ಖರ್ಗೆ ಹೇಳಿದರು  ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ತಾಲೂಕು ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ತನಾಡಿದ ಅವರು ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸಂಗ್ರಹವಾದ ಡಿಎಂಎಫ್ ಸುಂಕದ ಹಣವನ್ನು ಕಲಬುರಗಿಗೆ ವರ್ಗಾವಣೆ ಆಗುತ್ತಿದೆ.ಆದರೆ ಸಂಗ್ರಹವಾದ ಸುಂಕವನ್ನು ಚಿತ್ತಾಪುರಕ್ಕೆ ಮಾತ್ರ ಬಳಕೆಯಾಗಬೇಕು ಕಾನೂನು ಬಾಹಿರವಾಗಿ 24 ತಾಸು ಕಾಲ ಗುತ್ತಿಗೆದಾರರು ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದಾರೆ. ಓವರ್ ಲೋಡ್ ಕೂಡಾ ಒಂದು ಸಮಸ್ಯೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಸರ್ಕಾರ ಈ ರಸ್ತೆಗಳನ್ನು ಕೂಡಾ ಮೇಲ್ದರ್ಜೆಗೆ ಏರಿಸುತ್ತಿಲ್ಲ. ಅಕ್ರಮ ಮರಳು ಸಾಗಾಣಿಕೆಯಿಂದ ಇಷ್ಟೆಲ್ಲ ಅನಾನೂಕೂಲ ಇದ್ದರೂ ಯಾಕೆ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು. ಒಬ್ಬ ವ್ಯಕ್ತಿ ಗರಿಷ್ಠ 70 ವಾಹನಗಳನ್ನು ನೋಂದಣಿ ಮಾಡಿಸಬಹುದು. ಒಂದು ಲಾರಿಗೆ ಕನಿಷ್ಠ 16 ಟನ್ ಗಳಿಂದ 22 ಟನ್ ಮರಳು ಸಾಗಾಣಿಕೆ ಮಾಡಬಹುದಾಗಿದೆ.ಎಂದು ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಇದರಿಂದ ...

ವಿಠಲ್ ಹೇರೂರ ಹಾಕಿಕೊಟ್ಟ ಮಾರ್ಗದರ್ಶನ ಪಾಲಿಸೋಣ.

ಇಮೇಜ್
ಚಿತ್ತಾಪೂರ: ಕೂಲಿ ಸಮಾಜಕ್ಕೆ ವಿಠಲ್ ಹೇರೂರು ಅವರು ಹಾಕಿಕೊಟ್ಟ ಮಾರ್ಗದರ್ಶನ ನಾವೂ ಎಲ್ಲಾರು ಪಾಲಿಸೋಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು. ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಠಲ ಹೇರೂರು ಅವರ ಪುಣ್ಯಸ್ಮರಣೆ ನಿಮಿತ್ಯ ಹೇರೂರು ಅವರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಂಘದಲ್ಲಿ ಹಿರಿಯ ಮಾರ್ಗದರ್ಶನ ವಿಲ್ಲದೆ ಯಾವುದೇ ರೀತಿಯ ಮನವಿ, ಪ್ರತಿಭಟನೆ ಯಾವುದು ಮಾಡಬೇಡಿ ಸಮಾಜದ ಪ್ರತಿಯೊಬ್ಬರ ಮಾರ್ಗದರ್ಶನ ತೆಗೆದುಕೊಳ್ಳಿ ಅದರ ಜೊತೆಗೆ ಸಂಘದ ಸಲಹ ಸಮಿತಿಯ ಮಾರ್ಗದರ್ಶನ ಕೂಡ ತೆಗೆದುಕೊಳ್ಳಬೇಕು ಎಂದು ಹೇಳಿದರು. ಬಸವರಾಜ ಚಿಮ್ಮನ್ನಳ್ಳಿ ಮಾತನಾಡಿ ವಿಠಲ್ ಹೇರೂರು ಅವರು ನಮ್ಮನ್ನು ಅಗಲಿ  9 ವರ್ಷಗಳು ಆಗುತ್ತಿದ್ದು ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೆವೆ. ಒಂದು ವೇಳೆ ವೀಠಲ್ ಹೇರೂರ ಸಾಹೇಬರು ಇದ್ದರೆ ಕೂಲಿ ಸಮಾಜ ಎಸ್‌ಟಿ ಸೇರ್ಪಡೆ ಆಗುತ್ತಿತ್ತು ಎಂದು ಹೇಳಿದರು. ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ ಸಂಘಟನೆ ಎಂಬ ವಿಷಯ ಬಂದಾಗ ನಮಗೆ ವಿಠಲ್ ಹೇರೂರು ಹೆಸರು ನಮ್ಮ ಸಮಾಜದಲ್ಲಿ ನೆನಪು ಬರುತ್ತದೆ. ಆದರೆ ಇಂದು ಸಮಾಜದಲ್ಲಿ ಸಂಘಟನೆ ದಾರಿ ತಪ್ಪುತ್ತಿದೆ. ರಾಜಕೀಯ ಮಾಡಬೇಡಿ ಸಮಾಜದ ಹಿತದೃಷ್ಟಿ ಇರಲಿ, ಸಂಘಟನೆಗೆ ಒಂದು ದೃಢತೆ ಇರಲಿ, ಇಲ್ಲ ಅಂದ್ರೆ ಸಂಘಟನೆಗೆ ರಾಜೀನಾಮೆ ನೀಡಿ ಎಂದು ಸಮಾಜ...

ಶೈಕ್ಷಣಿಕ ಅವಧಿ ಪ್ರಾರಂಭದಲ್ಲಿಯೇ ಯೋಜನೆಗಳು ಅನುಷ್ಠಾನವಾಗಲಿ.

ಇಮೇಜ್
ಚಿತ್ತಾಪುರ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಅನೇಕ ಯೋಜನೆಗಳು ಜಾರಿಗೊಳಿಸಿದೆ ಆದರೆ ಅವುಗಳು ಶೈಕ್ಷಣಿಕ ಅವಧಿ ಪ್ರಾರಂಭದಲ್ಲಿಯೇ ಅನುಷ್ಠಾನಗೊಂಡು ವಿದ್ಯಾರ್ಥಿಗಳಿಗೆ ತಲುಪುವಂತೆ ಆಗಬೇಕು ಎಂದು ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹೇಳಿದರು.  ಪಟ್ಟಣದ ನಾಗಾವಿ ಕ್ಯಾಂಪಸ್‌ನಲ್ಲಿನ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶೂ-ಸಾಕ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶೈಕ್ಷಣಿಕ ಅವಧಿ ಪ್ರಾರಂಭವಾಗಿ ಅರ್ಧ ವರ್ಷ ಕಳೆದ ನಂತರ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ-ಸಾಕ್ಸ್, ಪುಸ್ತಕಗಳು ವಿತರಿಸುತ್ತಿರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ ಹಾಗಾಗಿ ಸರಕಾರಗಳು ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ನಿಗದಿತ ಸಮಯದಲ್ಲಿ ಶಿಕ್ಷಣದ ಯೋಜನೆಗಳು ಮುಟ್ಟಿಸುವಂತದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಅನೇಕ ಯೋಜನೆಗಳು ಜಾರಿಗೊಳಿಸಿದೆ ಹೀಗಾಗಿ ವಿದ್ಯಾರ್ಥಿಗಳು ಸರಕಾರ ಸೌಲಭ್ಯಗಳನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸಬೇಕು     ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯ ಪರಿಪಾಲನೆ ಮತ್ತು ಏಕಾಗ್ರತೆ ಸಂಪಾದಿಸುವ ಮೂಲಕ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಹಾಗೂ ಮನೆಯಲ...

ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಮಾಡಲು ಮನವಿ.

ಇಮೇಜ್
ಚಿತ್ತಾಪುರ: ತಾಲೂಕಿನ ಸನ್ನತಿ ಗ್ರಾಮ ದೇಶದ ಭೂಪಟದಲ್ಲಿ ಗಮನ ಸೆಳೆದಿದೆ. ನೂರಾರು ವರ್ಷಗಳ ಬೌದ್ಧ ಇತಿಹಾಸವಿರುವ ಗ್ರಾಮ ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಅಧ್ಯಕ್ಷರಾಗಿರಬೇಕೆಂಬ ನಿಯಮ ಬದಲಿಸಿ ಬೌದ್ಧ ಅನುಯಾಯಿಗಳಿಗೆ ಅಥವಾ ಬೌದ್ಧ ಭಿಕ್ಕು ಒಬ್ಬರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ.  ಕಲಬುರರ್ಗಿ ಲೋಕಸಭೆ ಸದಸ್ಯ ಡಾ.ಉಮೇಶ ಜಾಧವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದರು.   ಇಡೀ ದೇಶದಲ್ಲಿಯೇ ಅಶೋಕ ಸಾಮ್ರಾಟ ನಿರ್ಮಿಸಿದ ಬೌದ್ಧ ಇತಿಹಾಸ ಹೆಚ್ಚಿನ ಭಾಗ ಸನ್ನತಿ ಎಂಬ ಹೆಗ್ಗಳಿಕೆಗೆ ಹೆಸರಾಗಿದೆ. ಭಾರತೀಯ ಪುರತತ್ವ ಇಲಾಖೆ ವತಿಯಿಂದ ಹಲವು ವರ್ಷಗಳ ಹಿಂದೆ ಉತ್ಖನನ ಮಾಡುವ ಸಂದರ್ಭದಲ್ಲಿ ಇಲ್ಲಿ ಸಕ್ಕಿರುವ ಬೌದ್ಧ ಶಾಸನ ಮತ್ತು ಶಿಲ್ಪಕಲೆಗಳು ಈ ದೇಶದ ಮೂಲ ಧರ್ಮದ ಬೌದ್ಧರ ಅಸ್ಥಿತ್ವದ ಬಗ್ಗೆ ಹಲವಾರು ಕುರುಹುಗಳು ಸಿಕ್ಕಿವೆ. ಇವನ್ನು ಗಮನಿಸಿದ ಸರಕಾರ ಆ ಸ್ಥಳವನ್ನು ಅಭಿವೃದ್ದಿ ಪಡಿಸಲು ಮತ್ತು ಸಂಶೋಧನಾ ಕೇಂದ್ರವಾಗಿಸಲು ಸನ್ನತಿ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ಅದರ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಇರಬೇಕು ಎಂಬ ನಿಯಮ ಮಾಡಿದೆ. ಆದರೆ ಇಲ್ಲಿರುವ ಬಹುಸಂಖ್ಯಾತ ಬೌದ್ಧ ಅನುಯಾಯಿಗಳು ಇರುವುದರಿಂದ ಈ  ಕೇಂದ್ರದ ಅಭಿವೃದ್ದಿಯಾಗದೇ ಇರುವುದರಿ...

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಭೇಟಿ: ನಾದ್

ಇಮೇಜ್
ಚಿತ್ತಾಪುರ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮ ಹಾಗೂ ತಾಂಡಾಕ್ಕೆ ಭೇಟಿ ನೀಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಹಾಗೂ ಯೋಜನೆಗಳ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಿದ್ದೇನೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ಹೇಳಿದರು.        ಮತಕ್ಷೇತ್ರದ ಅಲ್ಲೂರ.ಬಿ, ಅಳ್ಳೋಳ್ಳಿ, ಅಲ್ಲೂರ.ಕೆ, ರಾಮತೀರ್ಥ, ಭೀಮನಳ್ಳಿ, ಹಲಕಟ್ಟಿ, ರಾವೂರ, ರಾಂಪೂರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಉತ್ತಮ ಅಭಿಪ್ರಾಯ ಹಾಗೂ ಬೆಂಬಲ ವ್ಯಕ್ತವಾಗಿದೆ ಹಾಗೂ ಭಾರತೀಯ ಜನತಾ ಪಕ್ಷದ ಪರ ಉತ್ತಮ ವಾತಾವರಣವಿದೆ ಎಂದು ಹೇಳಿದರು.   ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದಡಿ ಅರ್ಹ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದರು.       ನಗರ ಯೋಜನಾ ಪ್ರಾಧಿಕಾರ ಸದಸ್ಯ ಶಾಂತಕುಮಾರ ಮಳಖೇಡ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕಡೇಸೂರ, ಹಂಪಣ್ಣ ಹುಳಾಗಡ್ಡಿ, ನಾಗಪ್ಪ ದೊಡ್ಡಮನಿ, ಈಶ್ವರ ಚಂದಣ್ಣನವರ್, ಭಾಸ್ಕರ್ ಭೀಮನಳ್ಳಿ, ಹಣಮಂತ ಹೆಡಗಿಮುದ್ರಿ, ಮಾರುತಿ ಮುಗುಳಕರ್, ಪರಶುರಾಮ ಭಾರ್ಗವ್ ಇತರರು ಇದ್ದರು.

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಇಮೇಜ್
ಚಿತ್ತಾಪುರ: ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ನಾಗಾವಿ ಸಾಹಿತ್ಯ ಸಾಂಸ್ಕೃತಿ ಪರಿಷತ್ತ್ ವತಿಯಿಂದ  ಕೊಡಲ್ಪಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ವಿವಿಧ ಕ್ಷೇತ್ರದ ಏಳು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ತಿಳಿಸಿದ್ದಾರೆ.   ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯಲ್ಲಿದ್ದ ಎಲ್ಲ ಪದಾಧಿಕಾರಿಗಳ ಒಮ್ಮತದಿಂದ ಆಯಾ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ಗಣನೀಯ ಸೇವೆ ಸಲ್ಲಿಸಿದ್ದ ಸಾಧಕರನ್ನು ಗುರುತಿಸಿ ಯೋಗ್ಯ ಮತ್ತು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.  ಬಸ್ಸಪ್ಪ ಮುಗುಳಖೋಡ (ಶಿಕ್ಷಣ ಕ್ಷೇತ್ರ), ವೀರಯ್ಯಸ್ವಾಮಿ ಸ್ಥಾವರಮಠ (ಸಾಹಿತ್ಯ ಕ್ಷೇತ್ರ), ಅಯ್ಯಣ್ಣ ಮಾಸ್ತರ ವಿಶ್ವಕರ್ಮ(ಸಂಗೀತ ಕ್ಷೇತ್ರ), ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ(ರಂಗಭೂಮಿ ಕ್ಷೇತ್ರ), ನರಸಿಂಹ ಆಲಮೇಲಕರ್ (ಚಿತ್ರಕಲೆ ಕ್ಷೇತ್ರ), ಮಹ್ಮದ ಇಬ್ರಾಹಿಂ (ಸಾಮಾಜಿಕ ಸೇವಾ ಕ್ಷೇತ್ರ), ಡಿ.ನರಸಯ್ಯಗೌಡ (ಕೃಷಿ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕವನ್ನು ಇಷ್ಟರಲ್ಲೇ ನಿಗದಿಪಡಿಸಿ ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಅತಿಥಿ ಗಣ್ಯಮಾನ್ಯ...

ಅಂಗನವಾಡಿ ಕೇಂದ್ರಕ್ಕೆ ಸಿಇಓ ಭೇಟಿ.

ಇಮೇಜ್
ಚಿತ್ತಾಪೂರ: ತಾಲ್ಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-5ಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀರಿಶ ದಿಲೀಪ್ ಬದೋಲೆ ಭೇಟಿ ನೀಡಿ ಅಂಗನವಾಡಿಯ ಸ್ವಚ್ಛತೆ,ಶಿಸ್ತು ಕ್ರಮಬದ್ಧತೆ ನೋಡಿ ಹಾಗೂ ಖುಷಿಯಿಂದ ಮಕ್ಕಳ ಜೊತೆ ಮಾತನಾಡಿಸಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಪಂ ಇಓ ನೀಲಗಂಗಾ ಬಬಲಾದ, ಸಿಡಿಪಿಓ ರಾಜಕುಮಾರ್ ರಾಠೋಡ, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಸಿದ್ದಣ್ಣ ಅಣಬಿ, ಹಿರಿಯ ಮುಖಂಡರಾದ ರಾಜಶೇಖರ್ ತಿಮ್ಮನಾಯಕ್ , ಮುನಿಯಪ್ಪ ಕೊಳ್ಳಿ, ಶಂಕರ್ ಕೊಳ್ಳಿ, ರಮೇಶ ಕವಡೆ ಸೇರಿದಂತೆ ಇತರರು ಇದ್ದರು.

ಬಡ ಮಹಿಳೆಯರಿಗೆ ಸೀರೆ ವಿತರಣೆ.

ಇಮೇಜ್
ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರ 44ನೇ ಜನ್ಮದಿನದ ನಿಮಿತ್ಯ ಪಟ್ಟಣದ ದೇವದಾಸಿ ಕಾಲೋನಿಯಲ್ಲಿನ ವಿಮುಕ್ತ ದೇವದಾಸಿ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು.  ನಂತರ ಕೇಕ್ ಕಟ್ ಮಾಡಿ ಪ್ರತಿಯೊಬ್ಬರಿಗೆ ಸಿಹಿ ತಿನಿಸಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಮಾತನಾಡಿ  ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ಹಗಲು-ಇರುಳು ಅನ್ನದೆ ಶ್ರಮಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ನಾವು ಬೆಂಬಲಿಸಿ ಗೆಲ್ಲಿಸುವ ಜೊತೆಗೆ ಅವರ ಸರಳ ಮನೋಭಾವನೆಯನ್ನು ನಾವೆಲ್ಲರೂ ಪಾಲಿಸೋಣ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ್ ಶಿಂಧೆ, ಜಗನ್ನಾಥ ಮುಡಬೂಳಕರ್, ಆನಂದ್ ಮೊಗಲಾ, ಸಂಜಯ ಬುಳಕರ್, ವಿಜಯ್ ಕುಮಾರ್ ಚವ್ಹಾಣ, ಮಲ್ಲಿಕಾರ್ಜುನ್ ಕಲ್ಮರಿ, ಶರಣಬಸ್ಸು ಮುತ್ತಾಗಿ, ಸಿದ್ದಾರ್ಥ್, ಬಸವರಾಜ್, ರವಿ, ಸೇರಿದಂತೆ ಇತರರಿದ್ದರು.

ಪ್ರಿಯಾಂಕ್ ಖರ್ಗೆ ಜನ್ಮದಿನ ನಿಮಿತ್ಯ ಅನ್ನದಾಸೋಹ.

ಇಮೇಜ್
ಚಿತ್ತಾಪುರ : ಶಾಸಕ ಪ್ರಿಯಾಂಕ್ ಖರ್ಗೇ ಅವರ 44ನೇ ಜನ್ಮದಿನದ ನಿಮಿತ್ಯ  ಪಟ್ಟಣದ ಬಸ್ ನಿಲ್ದಾಣ ಹತ್ತಿರ ಭೀಮು ಹೊಳಿಕಟ್ಟಿ ಅವರ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ ಮೂಲಕ  ಹುಟ್ಟು ಹಬ್ಬವನ್ನು ಆಚರಿಸಲಾಯಿತು.    ಈ ವೇಳೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಪ್ರಿಯಾಂಕ್ ಅಪ್ಪಟ ಅಭಿಮಾನಿ ಭೀಮು ಹೊಳಿಕಟ್ಟಿ ಅವರು ಮಾತನಾಡಿ  ಜಿಲ್ಲೆಯಲ್ಲಿ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿ ಮಾಡುದ್ದಾರೆ. ಮುಂಬರುವ ಚುನಾವಣೆಯಲ್ಲಿ ಯುವ ಮತದಾರರು ಸೇರಿದಂತೆ ಮತಕ್ಷೇತ್ರದ ಎಲ್ಲಾ ಮತ ಪ್ರಭುಗಳು ಅವರನ್ನು ಪ್ರಚಂಡ ಬಹು ಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.  ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಭೀಮಣ್ಣ ಹೊತ್ತಿನಮಡಿ , ಗುಂಡು ಐನಾಪುರ, ಶೀಲಾ ಕಾಶಿ, ಸಾಬಣ್ಣ ಹೊಳಿಕಟ್ಟಿ, ರಾಮಲಿಂಗ ಬಾನರ್, ಹಣಮಂತ ಸಂಕನೂರ, ಬಸವರಾಜ ಚಿನಮಳ್ಳಿ, ಸೇರಿದಂತೆ ಇತರರು ಇದ್ದರು.

ನೇಟೆರೋಗ ತೊಗರಿ ಬೆಳೆ ನಾಶ, ಪರಿಹಾರಕ್ಕೆ ಆಗ್ರಹ.

ಇಮೇಜ್
ಚಿತ್ತಾಪೂರ: ತೊಗರಿ ಬೆಳೆಗೆ ನೇಟೆರೋಗ ಬಾದೆಯಿಂದ ಚಿತ್ತಾಪೂರ, ಕಾಳಗಿ, ಹಾಗೂ ಶಹಬಾದ ತಾಲೂಕಿನಾದ್ಯಂತ ತೊಗರಿ ಬೆಳೆ ಕಾಯಿ ಕಟ್ಟುವ ಹಂತದಲ್ಲಿ ನೇಟೆರೋಗ ಭಾದೆಯಿಂದ ತೊಗರಿ ಬೆಳೆ ನಾಶವಾಗಿವೆ ಹೀಗಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಅತ್ಯುತ್ತಮ ತೊಗರಿ ಬೆಳೆ ಬೆಳೆಯುವ 3 ತಾಲೂಕುಗಳಲ್ಲಿ ನೇಟೆರೋಗದಿಂದ ಸಂಪೂರ್ಣ ಬೆಳೆ ನಾಶವಾಗಿವೆ. ಈಗಾಗಲೇ ಅತಿವೃಷ್ಟಿಯಿಂದ ಅನೇಕ ಬೆಳೆಗಳು ನಾಶವಾಗಿವೆ. ಇನ್ನು ಅಳಿದು ಉಳಿದ ಬೆಳೆ ನೇಟೆರೋಗ ಬಾದೆಯಿಂದ ಸಂಪೂರ್ಣ ನಾಶವಾಗಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.  ರೈತ ಪರ ಕಾಳಜಿ ವಹಿಸಿ ಜಿಲ್ಲಾದ್ಯಾದಂತ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಯಶಸ್ವಿ ಮಾಡಿರುವ ಕೀರ್ತಿ ನಿಮಗೆ ಸಲ್ಲುತ್ತದೆ. ರೈತ ಪರ ಕಾಳಜಿ ಹೊಂದಿರುವಂತ ತಾವು ಚಿತ್ತಾಪೂರ ಕಾಳಗಿ, ಹಾಗೂ ಶಹಬಾದ ತಾಲೂಕುಗಳಲ್ಲಿ ಕೃಷಿ ಅಧಿಕಾರಿಗಳ ಮುಖಾಂತರ ಸರ್ವೆ ಮಾಡಿಸಿ. ನೇಟೆರೋಗಕ್ಕೆ ತುತ್ತಾದ ಬೆಳೆಗೆ 25 ಸಾವಿರ ರೂಪಾಯಿ  ಪರಿಹಾರ ಒದಗಿಸಲು ಕೋರಿದ್ದಾರೆ.

ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಗುರಿ: ಗುತ್ತೇದಾರ್

ಇಮೇಜ್
ಚಿತ್ತಾಪುರ: ನಾಗಾವಿ ನಾಡು ಎಂದು ಖ್ಯಾತಿ ಪಡೆದ ಚಿತ್ತಾಪುರ ತಾಲೂಕಿನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಹೊಸದಾಗಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಹುಟ್ಟು ಹಾಕಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.   ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿನ ಐತಿಹಾಸಿಕ ನಾಗಾವಿ ಕ್ಷೇತ್ರದ ಇತಿಹಾಸದ ಕೈಪಿಡಿಯನ್ನು ಸಿದ್ದಪಡಿಸುವ ಮೂಲಕ ಮನೆ ಮನೆಗೆ ಮುಟ್ಟಿಸುವ ಗುರಿ ಹೊಂದಲಾಗಿದೆ ಈ ನಿಟ್ಟಿನಲ್ಲಿ ನಮ್ಮ ನೆಲದ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಲಾಗುವುದು ಎಂದರು.    ಪ್ರತಿ ವರ್ಷ ನಾಗಾವಿ ಉತ್ಸವ ಹಾಗೂ ವಿವಿಧ ಸಾಧಕರನ್ನು ಗುರುತಿಸಿ ನಾಗಾವಿ ಪ್ರಶಸ್ತಿ ಪ್ರಧಾನ ಮಾಡುವುದು, ತಾಲೂಕಿನ ಸಾಹಿತಿಗಳನ್ನು ಒಂದಡೇ ಸೇರಿಸಿ ಸಾಹಿತಿಗಳ ಸಂಗಮ, ಶಿಕ್ಷಕರ ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಸಾಹಿತ್ಯ ವಿಚಾರ ಸಂಕೀರ್ಣ, ಕವಿ ಕಲಾವಿಧರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದು, ನಾಗಾವಿ ನೆಲದಲ್ಲಿ ಬೆಳದಿಂಗಳು ಊಟ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.   ಇದೇ ನ.೨೯ ರಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ...

ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಬದ್ಧ: ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ:  ಗ್ರಾಮೀಣ ಭಾಗಗಳ ಅಭಿವೃದ್ದಿ ನಾನು ಬದ್ಧತೆನಾಗಿದ್ದೆನೆ ಹಾಗೂ  ಇನ್ನೂ ಅಭಿವೃದ್ದಿ ಕೆಲಸ ಮಾಡುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ತಾಲ್ಲೂಕಿನ   ಹೊಸೂರ ಗ್ರಾಮದಲ್ಲಿ ಒಟ್ಟು ರೂ 68.05 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೋಣೆ ( ರೂ 52 ಲಕ್ಷ), ಮಾದಿಗ ಸಮಾಜದ ಏರಿಯಾದಲ್ಲಿ ಸಾಂಸ್ಕೃತಿಕ ಭವನ‌ ( ರೂ 6.05 ಲಕ್ಷ) ಹಾಗೂ ಕೋಲಿ ಸಮಾಜದ ಹತ್ತಿರ ಸಾಂಸ್ಕ್ರತಿಕ ಭವನ ( ರೂ 10 ಲಕ್ಷ) ಕ್ಕೆ ಅಡಿಗಲ್ಲು ನೆರವೇರಿಸಿ‌ ಮಾತನಾಡಿದ ಅವರು  ನಾನು ಸಚಿವನಾಗಿದ್ದಾಗ ರೂ 80 ಕೋಟಿ ಕಲಬುರಗಿಗೆ ಕೊಟ್ಟಿದ್ದೇನೆ, ಸೇಡಂ, ಕಲಬುರಗಿ ಗ್ರಾಮೀಣ ಹಾಗೂ ಚಿಂಚೋಳಿ‌ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ ಈ‌ ಸರ್ಕಾರ ನನ್ನ ಕ್ಷೇತ್ರಕ್ಕೆ ಬಿಡುಗಡೆಯಾಗಬೇಕಿದ್ದ ರೂ. 200 ಕೋಟಿ ತಡೆ ಹಿಡಿಯಲಾಗಿದೆ ಇದು ದ್ವೇಷದ ರಾಜಕಾರಣದ ಫಲ ಎಂದು ವಿಷಾದ ವ್ಯಕ್ತಪಡಿಸಿದರು. ಕಳೆದ ಬಾರಿ ಮೊದಲ ಹಂತದಲ್ಲಿ ಹೊಸೂರ ಗ್ರಾಮಕ್ಕೆ ರೂ 60 ಲಕ್ಷ ವೆಚ್ವದಲ್ಲಿ ಶಾಲೆಗಳಿಗೆ ಅನುದಾನ ನೀಡಿದ್ದೆ. ಈಗ ಎರಡನೆಯ ಹಂತದಲ್ಲಿ ಶಾಲೆಗಳ ನಿರ್ಮಾಣಕ್ಕಾಗಿ ರೂ‌ 60 ಲಕ್ಷ‌. ಹೀಗೆ ಒಟ್ಟು ರೂ 1ಕೋಟಿಗೂ ಅಧಿಕ‌ ಅನುದಾನವನ್ನು ಕೇವಲ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು. ರಾಜ್ಯ ಸರ್ಕಾರ ವಿವೇಕ...

ಮುಖ್ಯ ಶಿಕ್ಷಕರನ್ನು ಬದಲಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಇಮೇಜ್
ಚಿತ್ತಾಪೂರ: ನಾಗಾವಿ ಕ್ಯಾಂಪಸ್‌ ನಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಮುಖ್ಯ ಶಿಕ್ಷಕರನ್ನು ಬದಲಾಯಿಸಿ ಬೇರೆಯವರನ್ನು ನಿಯೋಜನೆ ಮಾಡಬೇಕು ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸಬೇಕು. ಇತರೆ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ನಾಗಾವಿ ಕ್ಯಾಂಪಸನ ಮುಖ್ಯ ರಸ್ತೆ,ಹಾಗೂ ಸಾತನೂರ ಮತ್ತು ಕರದಾಳ ಹೋಗುವ ರಸ್ತೆ ಬಂದ ಮಾಡಿ  ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಅವರು ಪ್ರತಿಭಟನೆ ಹಮ್ಮಿಕೊಂಡು ಗ್ರೇಡ್ 2 ತಹಸೀಲ್ದಾರ್ ಅಮಿತ ಕುಲ್ಕರ್ಣಿ, ಹಾಗೂ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯ ರುದ್ನೂರ ಅವರಿಗೆ ಪ್ರತಿಭಟನೆ ಮನವಿ ಪತ್ರವನ್ನು ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ್ ನೇತೃತ್ವದಲ್ಲಿ ಸಲ್ಲಿಸಿ ಮಾತನಾಡಿದ ಅವರು ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಶಾಲಾ ಆಡಳಿತದ ಮತ್ತು ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಅಸಮರ್ಥ, ಅಸಹಾಯಕ ದೃಷ್ಠಿಕೋನವಿರುವ ಮುಖ್ಯಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬದಲಾವಣೆ ಮಾಡುವ ಕ್ರಮ ಕೈಗೊಂಡು ಹೊಸದಾಗಿ ಮತ್ತು ನಕರಾತ್ಮಕ ಸಮರ್ಥವಿರುವ ಮುಖ್ಯಶಿಕ್ಷಕರನ್ನು ನಿಯೋಜಿಸಬೇಕು.  6ನೇ ತರಗತಿಯಿಂದ 10ನೇ ತರಗತಿ ಇರುವ ಈ ಶಾಲೆಯಲ್ಲಿ 350 ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಈಗಿರುವ ಮುಖ್ಯಶಿಕ್ಷಕರು ಅಡಳಿತದ ಅನುಭವದ ಕೊರತೆಯಿಂದ ಶಾಲೆಯನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದ...

ವಿದ್ಯಾರ್ಥಿಯ ಕಾಲು ಮುರಿತ: ಶಾಲಾ ಆಡಳಿತ ನಿರ್ಲಕ್ಷ್ಯ.

ಇಮೇಜ್
ಶಹಾಬಾದ: ಬಸವ ಸಮಿತಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಬಾಗೇಶ್ ತಂದೆ ವಿಶ್ವನಾಥ್ ಎಂಬ ವಿದ್ಯಾರ್ಥಿಯ ಕಾಲು ಮುರಿದಿದ್ದು ಶಾಲಾ ಆಡಳಿತ ವಿದ್ಯಾರ್ಥಿಯ ಚಿಕಿತ್ಸೆಗೆ ಮುಂದಾಗದೆ ಸಂಪೂರ್ಣವಾಗಿ ನಿರ್ಲಕ್ಷತನ ತೋರಿದೆ ಎಂದು ವಿದ್ಯಾರ್ಥಿಯ ಅಜ್ಜನಾದ ಮಲ್ಲಿಕಾರ್ಜುನ್ ತಳವಾರ್ ತಿಳಿಸಿದ್ದಾರೆ. ತಾಲೂಕಿನ ಭಂಕೂರ ಗ್ರಾಮದ ಬಸವ ಸಮಿತಿ ಪ್ರಾಥಮಿಕ ಶಾಲೆಗೆ ಅಗಸ್ಟ್- 19, ವಿದ್ಯಾರ್ಥಿಯು ಶಾಲಾ ಸಮಯಕ್ಕೆ ಸರಿಯಾಗಿ  ಬೆಳಿಗ್ಗೆ, 9:20ಕ್ಕೆ ಬಂದು  ಶಾಲಾ ಆವರಣದಲ್ಲಿ  ವಿದ್ಯಾರ್ಥಿಗಳು ಆಟವಾಡುವಾಗ 5ನೇ ತರಗತಿಯ ರೀಯಾನ್ ಎಂಬ ವಿದ್ಯಾರ್ಥಿ ಗೋಡೆಯ ಮೇಲಿಂದ ಬಾಗೇಶ್ ಎಂಬ ವಿದ್ಯಾರ್ಥಿಯ ಮೇಲೆ ಹಾರಿದ್ದರಿಂದ ವಿದ್ಯಾರ್ಥಿ ನೋವು ತಾಳಲಾರದೆ ಅಳಲು ಆರಂಭಿಸಿದಾಗ ಶಿಕ್ಷಕರು ಫೋನ್ ಮಾಡಿ ತಿಳಿಸಿದ್ದಾರೆ. ದಿಡೀರನೆ ನಮ್ಮ ಮೊಮ್ಮಗನನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಹೇಳಿಕೆ ಪ್ರಕಾರ ವಿದ್ಯಾರ್ಥಿಯ ಕಾಲು ಮುರಿತವಾಗಿ ಕಾಲಿಗೆ ರಾಡ್ ಹಾಕಬೇಕು ತುಂಬಾ ಹಣ ಖರ್ಚು ಆಗುತ್ತದೆ ಎಂದಾಗ ನಮಗೆ ದಿಕ್ಕು ತೋಚದಂತಾಯ್ತು. ಕೂಡಲೇ ಶಾಲಾ ಆಡಳಿತಕ್ಕೆ ತಿಳಿಸಿದಾಗ ನಮಗೆ ಅದು ಯಾವುದು ಗೊತ್ತಿಲ್ಲ. ನೋಡೋಣ, ಆ ವಿದ್ಯಾರ್ಥಿಯ ಪಾಲಕರ ಜೊತೆ ಮಾತನಾಡುವೆ ಎಂದರು, ಮತ್ತೆ ನಾವು ರಿಯಾನ್ ಎಂಬ ವಿದ್ಯಾರ್ಥಿಯ ಪಾಲಕರಿಗೆ ಈ ವಿಷಯ ತಿಳಿಸಿದಾಗ ಅವರು ಸಹ ಸ್ಪಂದನೆ ನೀಡಿಲ್ಲ. ವಿಧಿ...

ಪ್ರಿಯಾಂಕ್ ಖರ್ಗೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ:ಬೆಣ್ಣೂರಕರ್.

ಇಮೇಜ್
ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದಲ್ಲಿ ಪುರಸಭೆ ವತಿಯಿಂದ ನಡೆದ ವಿವಿಧ ಅಭಿವೃದ್ದಿ ಅಡಿಗಲ್ಲು ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ ನಾವು ಮನಸ್ಸು ಮಾಡಿದ್ದರೆ ಒಬ್ಬ ಬಿಜೆಪಿ ಲೀಡರ್ ಚಿತ್ತಾಪುರದಲ್ಲಿ ಅಷ್ಟೇ ಅಲ್ಲ ಕಲಬುರಗಿ ಜಿಲ್ಲೆಯಲ್ಲಿ ಓಡಾಡುವುದಿಲ್ಲ ಆ ರೀತಿ ಮಾಡುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ಸರ್ಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಹೇಳಿದರು.   ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಡಿ ಪಟ್ಟಣದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ರಾಜಕೀಯ ಭಾಷಣ ಮಾಡುವ ಮೂಲಕ ಸರಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಯುತ ಟೀಕೆ ಟಿಪ್ಪಣೆ ಮಾಡಲಿ ಆದರೆ ನಾಲಿಗೆ ಹರಿಬಿಟ್ಟು ಮಾತನಾಡುವ ಮೂಲಕ ಚಿತ್ತಾಪುರ ಕ್ಷೇತ್ರದ ರಾಜಕೀಯಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ ಎಂದರು.   ಪ್ರತಿ ಕಾರ್ಯಕ್ರಮದಲ್ಲಿ ಪ್ರಬುದ್ದ ಸಮಾಜ ಮತ್ತು ಸಮೃದ್ದ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳುವ ಶಾಸಕರು, ಇದೇನಾ ನಿಮ್ಮ ಪ್ರಬುದ್ದ ರಾಜಕಾರಣ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಒಬ್ಬ ಲೀಡರ್ ರಸ್ತೆಯಲ್ಲಿ ಓಡಾಡುವಂತಿಲ್ಲ ಹಾಗೆ ಮಾಡುತ್ತೇನೆ ಎಂದು ಹೇಳುವ ಮೂಲಕ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಪ್ರಚೋದನಾತ್ಮಕ...

ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿ ಸಾಧ್ಯ:ಗಿರೀಶ್.

ಇಮೇಜ್
ಚಿತ್ತಾಪುರ: ಸಮಾಜದಲ್ಲಿ ಎಲ್ಲಾರೂ ಕೈಜೋಡಿಸಿ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಬ್ರಾಹ್ಮಣ  ಸಮಾಜದ ತಾಲೂಕ ಅಧ್ಯಕ್ಷ ಗೀರಿಶ ಜಾನಿಬ್ ಹೇಳಿದರು.    ಪಟ್ಟಣದ ರಾಘವೇಂದ್ರ ದೇವಾಸ್ಥಾನದಲ್ಲಿ ನಡೆದ ಬ್ರಾಹ್ಮಣ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹಳೆಯ ಪದಾಧಿಕಾರಿಗಳ ಬೀಳ್ಕೋಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಾವೆಲ್ಲರು ಒಂದಾಗಿ ಸರ್ಕಾರಕ್ಕೆ ಒತ್ತಡ ಹಾಕಿದಾಗ ಮಾತ್ರ ಸರ್ಕಾರದಿಂದ ನಾವು ಸೌಲಭ್ಯವನ್ನು ಪಡೆಯಲು ಸಾಧ್ಯ, ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಬಡವರು ಇದ್ದಾರೆ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ, ನಮ್ಮ ಸಮಾಜದಲ್ಲಿನ ಬಡತನ ರೇಖೆಕ್ಕಿಂತ ಕಡಿಮೆ ಇರುವ ಜನರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಾವು ಎಲ್ಲಾರೂ ಕೂಡಿ ಮಾಡಬೇಕಾಗಿದೆ ಎಂದು ಹೇಳೀದರು.  ನೂತನ ಪದಾಧಿಕಾರಿಗಳು: ಗೌರವಅಧ್ಯಕ್ಷ ದೇವಿದಾಸ ಕುಲ್ಕರ್ಣಿ, ಅಧ್ಯಕ್ಷ ಗಿರೀಶ ಜಾನಿಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಪ್ರಧಾನ ಕಾರ್ಯದರ್ಶಿ ಅನಂತನಾಗ ದೇಶಪಾಂಡೆ, ಖಜಾಂಚಿ ಜಯಂತ ಕುಲ್ಕರ್ಣೀ, ಸಲಹಾ ಸಮತಿ ಸದಸ್ಯರಾಗಿ ಸುಧಾಕರರಾವ ಕುಲ್ಕರ್ಣಿ, ಭೀಮರಾವ ಅಫಜಲಪುರಕರ್, ಶ್ರೀಹರಿ ಭಟ್, ಗುಂಡೆರಾವ ಸರಾಫ್, ಹಣಮೇಶ ಅರ್ಚಕ, ಅಂಬ್ರೀಷ ಜಾನಿಬ್, ರಾಮರಾವ ಕುಲ್ಕರ್ಣಿ, ಗೋಪಾಲರಾವ ಅಫಜಲಪುರಕರ್, ಹಣಮಂತರಾವ ಕುಲ್ಕರ್ಣೀ, ಪ್ರದೀಪ್ ಕುಲ್ಕರ್ಣಿ, ಮಾಣಿಕರಾ...

ನಿಮ್ಮ ಪಕ್ಷ ದಲಿತರ ಮೇಲೆ ದೌರ್ಜನ್ಯ ಮಾಡುವ ಪಕ್ಷ.

ಇಮೇಜ್
ಚಿತ್ತಾಪುರ:  ಕಾಂಗ್ರೆಸ್ ಪಕ್ಷದಲ್ಲಿ ತತ್ವ ರೈತರ ರಾಜಕೀಯ, ನಡತೆಯಿಲ್ಲದು, ಆತ್ಮಸಾಕ್ಷಿಯಿಲ್ಲ, ನೈತಿಕತೆಯಿಲ್ಲ ಮಾನವೀಯತೆ ಇಲ್ಲಾ, ದೇಶದ ಅಭಿವೃದ್ಧಿ ಮಾಡದೇ ಇರುವ ಪಕ್ಷ ಹೀಗಾಗಿ ಮತದಾರರು, ಕಾರ್ಯಕರ್ತರು ತಮ್ಮ ಪಕ್ಷವನ್ನು ಕೈಬಿಟ್ಟಿದ್ದಾರೆ. ಜೊತೆಗೆ ನಿಮ್ಮ ಪಕ್ಷ ದೀನ ದಲಿತರ ಮೇಲೆ ದೌರ್ಜನ್ಯ ಮಾಡುವ ಪಕ್ಷವಾಗಿದೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಸುರೇಶ್ ರಾಠೋಡ್ ಹೇಳಿದರು. ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿದ ಅವರು ಶಾಸಕ ಪ್ರಿಯಾಂಕ ಖರ್ಗೆಜಿ ತಾವು ಒಬ್ಬ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಗುಂಡಾಪಡೆಯಿಂದ ದಲಿತ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುವುದು ಅಥವಾ ಮಾಡುವುದು ಎಷ್ಟರ ಮಟ್ಟಿಗೆ ಸರಿ ಈ ಕ್ಷೇತ್ರವು ಮೀಸಲಾತಿ ಕ್ಷೇತ್ರವಾಗಿರುವುದರಿಂದ ಇಲ್ಲಿ ಎಲ್ಲಾ ದಲಿತರಿಗೂ ಕೂಡ ರಾಜಕೀಯದಲ್ಲಿ ಸಕ್ರಿಯವಾಗಿರಲು ಹಕ್ಕಿದೆ. ಕ್ಷೇತ್ರದಲ್ಲಿ ರಸ್ತೆಗಳು ಅದಗೆಟ್ಟಿದರಿಂದ ದಿನಕ್ಕೊಂದು ಅಪಘಾತ ಸಂಭವಿಸುತ್ತಿವೆ, ನೀರಿನ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ, ಬೀದಿ ದೀಪಗಳಿಲ್ಲದೆ ರಾತ್ರಿಯಲ್ಲಿ ಜನರಿಗೆ ತಿರುಗಾಡುವುದು ಕಷ್ಟವಾಗಿದೆ, ಯುವಕರು ಕೆಲಸವಿಲ್ಲದೆ ಕ್ಷೇತ್ರದಲ್ಲಿ ಪರದಾಡುತ್ತಿದ್ದಾರೆ. ಇವುಗಳ ಕಡೆ ಮೊದಲು ಗಮನ ಹರಿಸಲು ಹೇಳಿದರು. ಅದು ಬಿಟ್ಟು ಪೆಸಿಎಂ  ಸ್ಟಿಕರ್ ಹಚ್ಚುವುದು, ಎಂಪಿ ಕಾಣೆಯಾಗಿದ್ದಾರೆ ಅಂತ ಹೇಳುವುದು ನಿಮ್ಮದು ಸರಿಯಾದ ಉತ್ತರ ನಾವು ನಿಮ್ಮ ವಿರುದ್ಧ ಕಾಣೆಯಾಗಿದ್ದಾರೆ...

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚಿಸಲು ಸವಾಲ್.

ಇಮೇಜ್
ಚಿತ್ತಾಪುರ: ಸದನದಲ್ಲಿ ನಿಂತು ಸರ್ಕಾರಕ್ಕೆ ಸವಾಲೆಸೆದು ಚರ್ಚೆ ಮಾಡುವ ಶಾಸಕ ಪ್ರಿಯಾಂಕ್ ಅವರ ಬದಲಾಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರೆ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಲು ಸಾಕು. ಮೊದಲು ನಮ್ಮೊಂದಿಗೆ ಚರ್ಚಿಸಿ ಗೆದ್ದು ತೋರಿಸಿ  ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರ ಭೀಣಿ ಅವರು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ. ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಪಕ್ಷದ ಅರವಿಂದ ಚವಾಣ್ ಅವರು ಚರ್ಚೆಗೆ ರೆಡಿ ಇದ್ದೇವೆ ಎಂದು ಹೇಳಿಕೊಂಡು ಶಾಸಕರ ಚರ್ಚೆಯ ಪಂಥಾಹ್ವಾನ ಸ್ವೀಕರಿಸಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಅವರೊಂದಿಗೆ ಚರ್ಚೆ ನಡೆಸುವ ಸಾಮರ್ಥ್ಯ, ಪ್ರಬುದ್ಧತೆ ಇಲ್ಲದ ನಿಮ್ಮ ಚರ್ಚೆಯ ಪ್ರಶ್ನೆಗೆ ಸಾಮಾನ್ಯ ಕಾರ್ಯಕರ್ತರಾದ ನಾವೆ ಉತ್ತರಿಸುತ್ತೇವೆ. ನಾವು ಕೇಳುವ ಪ್ರಶ್ನೆಗೆ ನೀವು ಉತ್ತರಿಸಿ. ನಮ್ಮನ್ನು ಸೋಲಿಸಿ ಗೆದ್ದು ತೊರಿಸಿ. ನಂತರ ನಾವೇ ಶಾಸಕರನ್ನೆ ರೆಡಿ ಮಾಡುತ್ತೇವೆ ಎಂದು ಅವರು  ಆಹ್ವಾನಿಸಿದ್ದಾರೆ. ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಅವರು ಶಾಸಕರಾದ ನಂತರ ಮಾಡಿರುವ ಅಭಿವೃದ್ಧಿಯನ್ನು ನಮ್ಮ ಚರ್ಚೆಯಿಂದ ತಿಳಿದುಕೊಳ್ಳಿ. ಸಚಿವರಾಗಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ, ಮಾಡಿರುವ ಅಭಿವೃದ್ಧಿಯ ಸಾಧನೆ ಅರಿವು ಮೂಡಿಸುತ್ತೇವೆ. ನಿಮ್ಮ ಬಿಜೆಪಿ ಸರ್ಕಾರದ ಸಾಧನೆ,  ಕಲ್ಯಾಣ ಕರ್ನಾಟಕಕ್ಕೆ ನೀಡಿದ ಕೊಡುಗೆ, ಕಲಬುರಗಿ ಸಂಸದರು ಮಾ...

ನಮ್ಮ ಸರ್ಕಾರ ರೈತರ ಪರ ಸರ್ಕಾರ: ಬೊಮ್ಮಾಯಿ.

ಇಮೇಜ್
ಕಲಬುರಗಿ: ನಮ್ಮ ಸರ್ಕಾರ ರೈತರ ಪರ ಸರ್ಕಾರವಾಗಿದ್ದು, ರೈತರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ನುಡಿದರು. ಸೋಮವಾರ ಸೇಡಂ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು ಹಾಗೂ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮತ ನೇತೃತ್ವದಲ್ಲಿ  ಅಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು  ರೈತರ ಮಕ್ಕಳಿಗೆ ನೀಡುವ ವಿದ್ಯಾನಿಧಿ ಯೋಜನೆ ಮಹತ್ವದ್ದು. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 4 ಗಂಟೆಯಲ್ಲಿ ಜಾರಿಗೆ ತಂದೆನು ಎಂದು ಹೇಳಿದ ಅವರು ವಿದ್ಯಾನಿಧಿಯಿಂದ ರೈತರ ಮಕ್ಕಳು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿದೆ ಎಂದು ಹೇಳಿದರು. ರಾಜ್ಯದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. 45 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್ ಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಮೂಲಕ ಎಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ತಲುಪಲಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ  ಸಹಕಾರ ರಂಗ ಇತರ ರಂಗಗಳಿಗಿಂತ ಮಂಚೂಣಿಯಲ್ಲಿರಬೇಕು. ಅದು ಸರ್ವ ಸ್ಪರ್ಶಿ-ಸರ್ವ ವ್ಯಾಪಿಯಾಗಬೇಕು ಎಂದು ಅವರು ಆಶಿಸಿದರು....

ಬರವಣಿಗೆಗಳು ಸದಾ ಕಾಲ ಪ್ರಸ್ತುತ : ಗುತ್ತೇದಾರ.

ಇಮೇಜ್
ಚಿತ್ತಾಪೂರ: ರವಿ ಬೆಳಗೆರೆ ಅವರ ಕಾಲವಾದರೂ ಕೂಡಾ ಅವರ ಬರವಣಿಗೆಗಳು ಸದಾ ಕಾಲ ಪ್ರಸ್ತುತವಾಗಿವೆ ಎಂದು ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು. ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ರವಿ ಬೆಳಗೆರೆ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ರಂಗದ ಭೀಷ್ಮ ದಿ.ರವಿ ಬೆಳಗೆರೆ ರವರ ದ್ವಿತೀಯ ಪುಣ್ಯ ಸ್ಮರಣೆ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಶ್ರಮಜೀವಿಗಳಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು ಅಸಂಖ್ಯಾತ ಕನ್ನಡಿಗರ ಮನದಲ್ಲಿ ಅಕ್ಷರದ ಮೂಲಕವೇ ರೋಮಾಂಚನ ಮೂಡಿಸಿದ ಪ್ರತಿಭೆಯಾಗಿದ್ದಾರೆ ಎಂದರು. ರವಿ ಬೆಳಗೆರೆ ಅಭಿಮಾನಿಗಳ ಸಂಘದ ಅಧ್ಯಕ್ಷ ರವಿ ಇವಣಿ ಮಾತನಾಡಿ ರವಿ ಬೆಳಗೆರೆಯಂಥ ಮತ್ತೊಬ್ಬ ಶ್ರಮಿಕ ಪತ್ರಕರ್ತ, ಅಕ್ಷರ ಯೋಗಿ ಹುಟ್ಟಿಬರಲು ಸಾಧ್ಯವಿಲ್ಲ. ಕನ್ನಡ ಪತ್ರಿಕಾರಂಗ ಕಂಡ ಅತ್ಯಂತ ವರ್ಚಸ್ವಿ, ಡೈನಾಮಿಕ್ ಮತ್ತು ಮಾನವೀಯ ಸಂವೇದಿ ಪತ್ರಕರ್ತ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ರವಿ ಬೆಳಗೆರೆ ಕೈಯಾಡಿಸದ ರಂಗವೂ ಇಲ್ಲ. ಉಪನ್ಯಾಸಕನಾಗಿ, ಪತ್ರಿಕೋದ್ಯಮಿಯಾಗಿ, ಬರಹಗಾರನಾಗಿ, ವಿಶೇಷ ಕಾರ್ಯಕ್ರಮಗಳ ನಿರೂಪಕನಾಗಿ, ಧಾರಾವಾಹಿ ನಿರ್ಮಾಪಕನಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ವ್ಯಕ್ತಿಯಾಗಿ ರವಿ ಬೆಳಗೆರೆಯಂತೆ ಆವರಿಸಿಕೊಂಡ ವ್ಯಕ್ತಿಯನ್ನು ಹುಡುಕುವುದು ಕಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ ನರಬೋಳಿ, ಕರವೇ ...

ಕನಕದಾಸರ ಆದರ್ಶ ಮೈಗೂಡಿಸಿಕೊಳ್ಳಿ : ಪ್ರಿಯಾಂಕ್ ಖರ್ಗೆ.

ಇಮೇಜ್
ಚಿತ್ತಾಪೂರ: ಭಕ್ತ   ಕನಕದಾಸರ  ಬಗ್ಗೆ ಎಲ್ಲರೂ ಆಳವಾಗಿ ತಿಳಿದುಕೊಂಡು‌ ಅವರ ಮಾರ್ಗವನ್ನು ಅನುಸರಿಸುವುದರ ಜೊತೆಗೆ ಯುವಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ತಾಲೂಕ ಆಡಳಿತ ವತಿಯಿಂದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಾಸ ಶ್ರೇಷ್ಠ ಕನಕದಾಸರ ಹಾಗೂ ವೀರರಾಣಿ ಒನಕೆ‌ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ದಾರ್ಶನಿಕರ, ಶರಣರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಿದ್ದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕರು, ಕನಕದಾಸರಂತ ದಾಸಶ್ರೇಷ್ಠ ರಂತವರು ಎಲ್ಲ ಜಾತಿ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕ‌ ಅಸಮಾನತೆಯನ್ನು ಅಂದಿನ‌ ಕಾಲದಲ್ಲೇ ಕನಕದಾಸರು ಟೀಕಿಸಿದ್ದರು. ಅದರ ವಿರುದ್ದ ಹೋರಾಟ ನಡೆಸಿದರು. ಆದರೆ ಈಗಲೂ ಅಸಮಾನತೆ ಇದೆ ಎಂದು‌ ವಿಷಾದಿಸಿದರು. ಸರ್ಕಾರ ಯಾವುದೇ ಇರಲಿ ಎಲ್ಲರೂ ಒಂದಾಗಿ ಯೋಜನೆಗೆಳ ಫಲ ಪಡೆಯಬೇಕು ಎಂದು ಕರೆ‌ ನೀಡಿದ ಶಾಸಕರು, ಬಿಜೆಪಿ ಸರ್ಕಾರ ಇತ್ತೀಚಿಗೆ ಕಲಬುರಗಿಯಲ್ಲಿ ಹಿಂದುಳಿದ ವರ್ಗದ ಸಮಾವೇಶ ನಡೆಸಲಾಯಿತು. ಆದರೆ ಕೇವಲ ಸಮಾವೇಶ ನಡೆಸುವುದರಿಂದ ಹಿಂದುಳಿದವರ ಆರ್ಥಿಕ‌ ಸಬಲತೆಗೆ ಸಹಕಾರಿಯಾಗದು. ಹಾಗಾಗಬೇಕಾದರೆ ಸರ್ಕಾರದ‌ ಎಲ್ಲ ಯೋಜನೆಗಳು ಕಡ್ಡಾಯವಾಗಿ ಆ ಭಾಗದ ಜನರಿಗೆ ತಲುಪಬೇಕು ಎಂದರು. ಕೋಲಿ ಹಾಗೂ ಕುರುಬರಿಗೆ ಎಸ್ಟಿಗೆ ಸೇರಿಸಲು ಹೋರಾಟ ನಡೆಯುತ್ತಲೇ...