ಗುರುವಾರ, ಫೆಬ್ರವರಿ 10, 2022

ರಾಯಚೂರು ಘಟನೆ: ಮೀಸಲು ಕ್ಷೇತ್ರದಿಂದ ಗೆದ್ದವರ ಮೌನ.

-ಜಗದೇವ ಎಸ್ ಕುಂಬಾರ.

ಚಿತ್ತಾಪುರ: 73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ. ಬಿಆರ್. ಅಂಬೇಡ್ಕರ್ ಅವರಿಗೆ ರಾಯಚೂರು ನ್ಯಾಯಾದೀಶರು ಅವಮಾನ ಮಾಡಿರುವ ಘಟನೆ ಖಂಡಿಸಿ ರಾಜ್ಯಾದ್ಯಂತಹ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಮೀಸಲು ಮತಕ್ಷೇತ್ರದಿಂದ ಗೆದ್ದು ಅಧಿಕಾರಕ್ಕೆ ಬಂದಿರುವ ಸಂಸದರು ಮತ್ತು ಶಾಸಕರು ಮೌನಕ್ಕೆ ಜಾರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ.

    ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಬಸವರಾಜ ಮತ್ತಿಮೂಡ, ಅವಿನಾಶ ಜಾಧವ್ ಅವರು ಮೀಸಲು ಮತಕ್ಷೇತ್ರಗಳಿಂದ ಗೆದ್ದು ಅಧಿಕಾರದಲ್ಲಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ಹಕ್ಕಿನಿಂದ ಗೆದ್ದವರು, ಡಾ. ಬಿಆರ್. ಅಂಬೇಡ್ಕರ್  ಅವರಿಗೆ ಮಾಡಿರುವ ಅಪಮಾನದ ಘಟನೆ ಖಂಡಿಸದೆ, ಮೌನಕ್ಕೆ ಶರಣಾಗಿರುವುದು ಎಷ್ಟರ ಮಟ್ಟಿಗೆ ಸರಿ.? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

     ಸಂಸದರು, ಶಾಸಕರ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದರೆ ಡಾ.ಅಂಬೇಡ್ಕರ್ ಅವರಿಗೆ ಆಗಿರುವ ಅವಮಾನದ ಘಟನೆ ಎಲ್ಲಿಯೂ ಸಹ ಖಂಡಿಸಿಲ್ಲ.  ಸಂಸದರು ಹಾಗೂ ಶಾಸಕರ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

    ಬಿಜೆಪಿ ಎಸ್ಸಿ ಮೋರ್ಚಾ ಸಹ ಡಾ.ಅಂಬೇಡ್ಕರ್ ಅವರ ಅವಮಾನದ ಘಟನೆ ಖಂಡಿಸದೇ, ಸಾರ್ವಜನಿಕರು ಹಾಗೂ ಸಂಘಟನೆಗಳು ಏರ್ಪಡಿಸಿದ ಪ್ರತಿಭಟನೆಗಳಲ್ಲಿ ಕಾಟಚಾರಕ್ಕೆ ಭಾಗಿಯಾಗುವ ಮೂಲಕ ಅಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ವರ್ತನೆ ತೋರಿದ್ದಾರೆ. ಆದರೆ, ಎಸ್ಸಿ ಮೋರ್ಚಾದ ಬಿಜೆಪಿ ಕಾರ್ಯಕರ್ತರು ತಾವು ಪ್ರತಿಭಟನೆಗಿಳಿಯದಿರುವುದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ

   ಅಂಬೇಡ್ಕರರಿಗೆ ಆದ ಅವಮಾನವನ್ನು ಖಂಡಿಸಿ ಮೀಸಲು ಮತಕ್ಷೇತ್ರದಲ್ಲಿನ ವಿವಿಧ ಸಂಘ ಸಂಘಟನೆಗಳಿಂದ ರಸ್ತೆಗಿಳಿದು ಪ್ರತಿಭಟನೆ ನಡೆಸಿದರೂ ಸಹ ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ವಿರುದ್ಧ ಇಲ್ಲಿವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಂಗಳವಾರ, ಜನವರಿ 25, 2022

ಯೋಗ ಮಾಡುವ ಮೂಲಕ ನಿರೋಗಿಯಾಗಿ:ಸಾಲಿಮಠ.

ವಾಡಿ: ಜೀವನದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದರ ಮೂಲಕ ನಿರೋಗಿಯಾಗಿ ಜೀವನ ನಡೆಸಲು ಸಾದ್ಯ ಎಂದು ಭಾರತ ಸ್ವಾಭಿಮಾನ ಟ್ರಸ್ಟನ ಜಿಲ್ಲಾ ಅದ್ಯಕ್ಷರ ಶಿವಾನಂದ ಸಾಲಿಮಠ ಹೇಳಿದರು.

ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾರತ ಸ್ವಾಭಿಮಾನ ಟ್ರಸ್ಟ, ಪತಾಂಜಲಿ ಯೋಗ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಯೋಗದಿಂದ ಆಜಾದಿಕೆ ಅಮೃತ ಮಹೋತ್ಸವದ ಅಂಗವಾಗಿ ಯೋಗದಿಂದ ಆರೋಗ್ಯ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕರೋನಾ ಬಂದ ಮೇಲೆ ಜನರಿಗೆ ಯೋಗದ ಮಹತ್ವ ಅರ್ಥವಾಗುತ್ತಿದೆ. ಇವತ್ತಿನ ಕಲುಷಿತ ಸಮಾಜದಲ್ಲಿ ದೀರ್ಘಕಾಲ ಆರೋಗ್ಯಯುತವಾಗಿ ಜೀವನ ಸಾಗಿಸಲು ಯೋಗ ಅತ್ಯಂತ ಅವಶ್ಯಕ. ಪಿಜ್ಜಾ, ಬರ್ಗರ್ ನಂತಹ ಜಂಕ್‌ಫುಡ್ ನಿಂದ ಚಿಕ್ಕ ವಯಸ್ಸಿನಲ್ಲೇ ಬರಬಾರದ ಖಾಯಿಲೆಗಳು ಬರುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಆಹಾರ ಪದ್ದತಿಯೂ ಬದಲಾಗಿರುವುದು ದುರಂತ.

ದೇಶಿಯ ಆಹಾರ ಪದ್ದತಿಯಲ್ಲಿ ರೊಟ್ಟಿ, ಚಪಾತಿ, ಕಾಳುಗಳು, ತರಕಾರಿ, ಮೊಸರು, ಹಣ್ಣುಗಳನ್ನು ಸೇವಿಸಿದರೆ ಖಾಯಿಲೆಗಳು ಬರುವುದಿಲ್ಲ. ಒಂದು ವೇಳೆ ಬಂದರೂ ನಾವು ನಿತ್ಯ ಮಾಡುವ ಯೋಗ, ಸೂರ್ಯ ನಮಸ್ಕಾರಗಳು, ಪ್ರಾಣಾಯಾಮಗಳು ನಮಗೆ ರೋಗ ಬರದಂತೆ ಮಾಡುತ್ತವೆ.ವಿದ್ಯಾರ್ಥಿಗಳು ಈಗಿನಿಂದಲೇ ಯೋಗಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ಆರೋಗ್ಯದ ಜೊತೆ ಜ್ಞಾಪಕ ಶಕ್ತಿಯು ವೃದ್ಧಿಸುವುದಲ್ಲದೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.

ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಯೋಗದ ಮೂಲಕ ಆರೋಗ್ಯದ ಅರಿವು ಮೂಡಿಸುವ ಅಗತ್ಯವಿದೆ. ಅನೇಕ ದುಶ್ಚಟಗಳಿಂದ ವಿದ್ಯಾರ್ಥಿಗಳು, ಯುವಕರು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯವಿಟ್ಟು ನಿಮ್ಮ ಮುಂದಿನ ಉತ್ತಮ ಆರೋಗ್ಯಯುತ ಬದುಕಿಗಾಗಿ ಯೋಗ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಂಚೂರು ಸವಿತಾ ಪೀಠದ ಶ್ರೀದರಾನಂದ ಸರಸ್ವತಿ ಸ್ವಾಮಿಗಳು,ಯೋಗ ಶಿಕ್ಷಕ ಮೋಹನ ಗಂಟಲಿ,ಶಿಕ್ಷಕ ಸಿದ್ಧಲಿಂಗ ಬಾಳಿ,ಶಿವಕುಮಾರ ಸರಡಗಿ, ಭೀಮಾಶಂಕರ ಬಮ್ಮನಳ್ಳಿ, ಸುಗುಣಾ ಕೋಳ್ಕೂರ, ಭುವನೇಶ್ವರಿ,ರಾಧಾ ರಾಠೋಡ, ಮಂಜುಳಾ ಪಾಟೀಲ, ವಿಜಯಲಕ್ಷ್ಮಿ ಬಮ್ಮನಳ್ಳಿ, ಇದ್ದರು.

ಸೋಮವಾರ, ಜನವರಿ 24, 2022

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.

 

ಚಿತ್ತಾಪುರ: ಇತ್ತೀಚಿಗೆ ಕರ್ನಾಟಕ ಸರ್ಕಾರ ನೇಮಕ ಮಾಡಿಕೊಂಡ ಪಿಎಸ್ಐ ನೇಮಕಾತಿಯಲ್ಲಿ ಶಶಿಧರ್ 44ನೇ ರ್ಯಾಂಕ್ ಪಡೆದು ನೇಮಕವಾಗಿದ್ದು ಮಗನ ಸಾಧನೆ ಕಂಡು ತಂದೆ-ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ತಾಲೂಕಿನ ದಿಗ್ಗಾಂವ್ ಗ್ರಾಮದ ಸರ್ಕಾರಿ ಶಿಕ್ಷಕರಾದ ದೇವಿಂದ್ರಪ್ಪ ಶಹಾಬಾದಕರ್ ತಾಯಿ ಕವಿತಾ ಎಂಬುವರ ಮಗ ಶಶಿಧರ್ ಎನ್ನುವರು ತಾಲೂಕಿನ ಶಿಶು ವಿಹಾರ ಪ್ರಾಥಮಿಕ ಮತ್ತು ಬೆಂಥನಿ ಪ್ರೌಢಶಾಲೆ 1ನೇ ರಿಂದ 10ನೇ ತರಗತಿವರಿಗೆ ಓದಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಯ ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಓದಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ನಂತರ ಬಿಸಿಎ ಪದವಿಯನ್ನು ಶರಣಬಸವೇಶ್ವರ ಪದವಿ ಕಾಲೇಜಿನಲ್ಲಿ ಮುಗಿಸಿ ಅಲ್ಲಿಯೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಮುಂದಿನ ಓದನ್ನು ನಿಲ್ಲಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತಹರಿಸಿ. ದಾರವಾಡ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿ ಸತತವಾಗಿ ಮೂರು ವರ್ಷಗಳಿಂದ ಕೋಚಿಂಗ್ ಪಡೆದು ಪರಿಶ್ರಮದಿಂದ ಮೊದಲ ಹಂತದ ಪಿಎಸ್ಐ ನೇಮಕಾತಿಯಲ್ಲಿ ಸ್ವಲ್ಪದರಲ್ಲಿಯೇ ವಿಫಲರಾಗಿದ್ದರು. 

 ಸೋಲೆ ಗೆಲುವಿನ ಮೆಟ್ಟಲು ಎಂದು ತಿಳಿದು ಕೋಚಿಂಗ್ ಅನ್ನು ಮುಂದುವರೆಸಿ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ನಿಂತು ಪಿಎಸ್ಐ ಹುದ್ದೆ ಕನಸು ನನಸು ಮಾಡಿಕೊಂಡು ಯಶಸ್ವಿಯಾಗಿದ್ದಾರೆ.

 ಮಗನ ತಂದೆ ದೇವಿಂದ್ರಪ್ಪ ಶಹಾಬಾದಕರ್ ಅವರು ಸಂಜೆವಾಣಿ ಪತ್ರಿಕಾ ವರದಿಗಾರರ ಜೊತೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ನನ್ನ ಮಗ 44ನೇ ರ್ಯಾಂಕ್ ನೊಂದಿಗೆ ನೇಮಕಾತಿ ಹೊಂದಿದ್ದು ವರದಾನವಾಗಿದೆ. 23ನೇ ವಯಸ್ಸಿಗೆ ಮಗನ ಸಾಧನೆಗೆ ಗುರು-ಹಿರಿಯರು ಕುಟುಂಬಸ್ಥರು,  ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಭಾನುವಾರ, ಜನವರಿ 23, 2022

ನಾಮಫಲಕ ವಿಲ್ಲದ ಅಬಕಾರಿ ಇಲಾಖೆ.

ಚಿತ್ತಾಪುರ: ಅಬಕಾರಿ ಇಲಾಖೆಗೆ ನಾಮಫಲಕ ವಿಲ್ಲದ ಕಾರಣ ಜನರ ಗೊಂದಲಕ್ಕೆ ಕಾರಣವಾಗಿದೆ.

 ಪಟ್ಟಣದ ಬಸ್ ಘಟಕದ ಹತ್ತಿರ ಬಿಲ್ಡಿಂಗ್ ಒಂದರಲ್ಲಿ ಅಬಕಾರಿ ಇಲಾಖೆ ಇದ್ದು ಈ ಮುಂಚೆ ಚಿಕ್ಕದೊಂದು ಹಳೆಯ ನಾಮಫಲಕ ವಿತ್ತು ಆದರೆ ಈಗ ಆ ನಾಮಫಲಕ ಕೂಡ ಇಲ್ಲ ಆದ್ದರಿಂದ ಅಬಕಾರಿ ಇಲಾಖೆಗೆ ಬರುವ ಜನರಿಗೆ ಅಬಕಾರಿ ಇಲಾಖೆ ಕಚೇರಿ ಯಾವುದು ಎಂದು ರಸ್ತೆಯಲ್ಲಿ ನಿಂತು ಕೇಳುವ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಿದ್ದಾರೆ.

 ಈಗಲಾದರೂ ಅಬಕಾರಿ ಇಲಾಖೆಯವರು ಎಚ್ಚೆತ್ತುಕೊಂಡು ನಾಮಫಲಕ ಹಾಕುವಲ್ಲಿ ಮುಂದಾಗುತ್ತಾರೆ ಕಾದುನೋಡಬೇಕಾಗಿದೆ

ಗ್ರಾಪಂ ಅಧ್ಯಕ್ಷನಿಗೆ ಹೊಡೆದ ಅಬಕಾರಿ ಸಬ್ ಇನ್ಸ್ಪೆಕ್ಟರ್.

ಚಿತ್ತಾಪುರ: ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಸಂಬಂಧಿಸಿದಂತೆ ತಾಲೂಕಿನ ಬೀಮನಹಳ್ಳಿ ಗ್ರಾಮದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆಯಲು ಹೋಗಿದ್ದ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಜಟ್ಟೆಪ್ಪ ಎನ್ನುವರು ಭೀಮನಹಳ್ಳಿ ಗ್ರಾಪಂ, ಅಧ್ಯಕ್ಷ ಅಶೋಕ್ ಕಾಸಲ್ ಎಂಬುವರಿಗೆ ಹೊಡೆದಾಗ ಗ್ರಾಮಸ್ಥರು ಆಕ್ರೋಶ ಗೊಂಡಾಗ ಅಬಕಾರಿ ಇನ್ಸ್ಪೆಕ್ಟರ್ ಓಡಿಹೋದ ಘಟನೆ  ಶನಿವಾರ ನಡೆದಿದೆ.

ಚಿಂಚೋಳಿ ಅಬಕಾರಿಗೂ ನಮ್ಮ ಗ್ರಾಮಕ್ಕೂ ಏನು ಸಂಬಂಧ ಚಿತ್ತಾಪುರ ಅಬಕಾರಿ ಇಲಾಖೆಯವರು ಬಂದು ಕೇಳಲಿ. ಗ್ರಾಪಂ ಅಧ್ಯಕ್ಷರಿಗೆ ಅವರು ಯಾಕೆ ಹೊಡೆಯಬೇಕು ಎಂದು ಪ್ರಶ್ನಿಸಿದರು ಗ್ರಾಮಸ್ಥರ ಆಕ್ರೋಶಗೊಂಡ ಪರಿಣಾಮ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಓಡಿಹೋಗಿದರು ಉಳಿದ ಅಬಕಾರಿ ಸಿಬ್ಬಂದಿ ವರ್ಗದವರಿಗೆ ಹಾಗೂ ಅವರ ವಾಹನಗಳನ್ನು ಗ್ರಾಮದಿಂದ ಹೋಗದಂತೆ  ತಡೆದು ಮುಳ್ಳು ಕಂಟಿ ಹಚ್ಚಿ ವಾಹನಗಳಿಗೆ ಗಾಳಿ ಬಿಟ್ಟು ತಡೆದು ಗ್ರಾಮ ಪಂಚಾಯಿತಿಗೆ ಕರೆಸಿಕೊಂಡು ಗ್ರಾಮಸ್ಥರು ಓಡಿಹೋದ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬರಬೇಕೆಂದು ಪಟ್ಟು ಹಿಡಿದರು ಕೆಲವೊತ್ತು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ, ಹಾಗೂ ಅಬಕಾರಿ ಇಲಾಖೆಯ ಉಪ ಅಧೀಕ್ಷಕರು ವಿಜಯಕುಮಾರ್ ರಾಂಪುರೆ, ಅಬಕಾರಿ ಸಿಪಿಐ ಶರಣಗೌಡ ಬಿರಾದರ್, ಚಿತ್ತಾಪುರ ಅಬಕಾರಿ ಪಿಎಸ್ಐ ರಮೇಶ್ ಬಿರಾದರ್, ಆಗಮಿಸಿ ಪಂಚಾಯತ್ ಕಚೇರಿಯಲ್ಲಿ  ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಮ್ಮೆನೂರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್ ಸುಣಗಾರ್,   ಹಾಗೂ ಶಿವಾಜಿ ಭೂವಿ, ಬಸವರಾಜ್ ಹಾದಿಮನಿ, ಮೌನೇಶ್ ಹೊಸಳ್ಳಿ, ರಾಜಣ್ಣ ಕಂಬಾರ್, ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಚಿಂಚೋಳಿ ಸಬ್ ಇನ್ಸ್ಪೆಕ್ಟರ್ ಜಟ್ಟಪ್ಪ ಅವರಿಗೆ ಫೋನ್ ಮಾಡಿ ಭೀಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕಾಸಲ್ ಅವರಿಗೆ ಫೋನಿನಲ್ಲಿ ಕ್ಷಮೆ ಯಾಚಿಸಿ ಸಂಧಾನ ಮಾಡಿಸಿದರು.

 ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ  ಮಹಿಳೆಯನ್ನು ವಶಕ್ಕೆ ಪಡೆಯಲು ಅಬಕಾರಿ ಇಲಾಖೆ ಯವರು ಬಂದಿದ್ದರೆ ಮಹಿಳಾ ಅಬಕಾರಿ ಅಧಿಕಾರಿಯವರನ್ನು ಕರೆತಂದು ವಿಚಾರಣೆ ನಡೆಸಿ ವಶಕ್ಕೆ ಪಡೆಯಬೇಕಾಗಿತ್ತು ಅಥವಾ ಗ್ರಾಮ್ ಪಂಚಾಯತ್ ಪಿಡಿಓ, ಅಧ್ಯಕ್ಷರ ಮಾಹಿತಿ ಪಡೆಯಬೇಕಿತ್ತು ಆದರೆ ಏಕಾಏಕಿ ಗ್ರಾಮದ ಮಹಿಳೆಯ ಮನೆಗೆ ನುಗ್ಗಿ ಕಳ್ಳಬಟ್ಟಿ ಸಾರಾಯಿ ತುಂಬಿದ ಕೊಡಗಳನ್ನು ಚೆಲ್ಲಿ ಗಾಡಿಯಲ್ಲಿ ಕೂಡು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಇದು ಅವರು ಮಾಡಿದ ದೌರ್ಜನ್ಯ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

 ಈ ಗಲಾಟೆಗೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳಿಗೆ ಕೇಳಿದರೆ ಮಾಹಿತಿ ನೀಡಲಿಲ್ಲ ನಮಗೆ ಮಾಹಿತಿ ನೀಡುವ ಹಕ್ಕು ಇಲ್ಲ ಜಿಲ್ಲಾ ಅಬಕಾರಿ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆಯಿರಿ ಎಂದು ಹರುಕು ಉತ್ತರ ನೀಡಿದ್ದಾರೆ.

 ಇಂತಹ ಘಟನೆಗೆ ಸಂಬಂಧಿಸಿದಂತೆ ಒಂದು ಹೇಳಿಕೆ ನೀಡದ ಅಧಿಕಾರಿಗಳು ಇನ್ನು ಕರ್ತವ್ಯ ಹೇಗೆ ನಿರ್ವಹಿಸುತ್ತಾರೆ ಜನಸಾಮಾನ್ಯರ ಜೊತೆ ಹೀಗೆ ವರ್ತಿಸುತ್ತಾರೆ ಎಂಬುದೇ ಒಂದು ಸವಾಲಾಗಿದೆ.

-ಅಶೋಕ್ ಕಾಸಲ್ ಗ್ರಾಪಂ, ಅಧ್ಯಕ್ಷರು ಭೀಮನಹಳ್ಳಿ

ಮಂಗಳವಾರ, ಜನವರಿ 18, 2022

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಜೆ,ಟಿವಿ ಕನ್ನಡ ಸುದ್ದಿ(ಜ,18)

ಚಿತ್ತಾಪುರ: ತಾಲ್ಲೂಕಿನಿಂದ ರಾವೂರ ಗ್ರಾಮಕ್ಕೆ ಹೋಗುವ ನಾಗಾವಿ ನಾಡಿಗೆ ಸ್ವಾಗತ ಕೋರುವ ಕಮನ ಹತ್ತಿರ ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಾಯಂಕಾಲ ವೇಳೆ ಸಂಭವಿಸಿದೆ.

  ಪಾಳೆದಾರ್ ಹೊಲದಲ್ಲಿ ತೊಗರಿ ಹೊರಿಕಟ್ಟಲು ಹೋಗಿದ್ದ ಕೂಲಿಕಾರರು ಕೆಲಸ ಮುಗಿಸಿಕೊಂಡು ಎತ್ತಿನ ಗಾಡಿಯಲ್ಲಿ ಚಿತ್ತಾಪುರ ಕಡೆ ಬರುವಾಗ ಹಿಂಬದಿಯಿಂದ ಪಿಕಪ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿಯು ರಸ್ತೆಯ ಪಕ್ಕಕ್ಕೆ ಉರುಳಿಬಿದ್ದ ರಿಂದ  8 ಜನರು ಗಾಯಗೊಂಡಿದ್ದಾರೆ.

  ಪಿಕಪ್ ಗಾಡಿಯ ಡ್ರೈವರ್ ಪರಾರಿಯಾಗಿದ್ದಾನೆ.ಸ್ಥಳೀಯರು ಕೂಡಲೇ ಗಾಯಗೊಂಡ ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಎತ್ತಿನ ಬಂಡಿ ಓಡಿಸುತ್ತಿದ್ದ ಬಸವರಾಜ್ ಡೆಂಗಿ, ಬಿಸಾಬಿ ಮುಜಾರ್, ಲಲಿತಾ ಬೀರಪ್ಪ ಪೂಜಾರಿ, ಅಬ್ದುಲ್ಲಾಬಿ ಗುಡಸಾಬ, ರವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

  ರಜಿಯಾಬಿ ಇಸ್ಮಾಯಿಲ್, ಕುತೀಜಾ ಬೇಗಂ ಮಹೇಬೂಬ ಸಾಬ್, ಶಕೀಲಾ ಸಲಿಂಮೀಯಾ, ಮೀನಾಕ್ಷಿ ಮಲ್ಲಿಕಾರ್ಜುನ ತೆಂಗಳೇರ ಎಂಬ ಕೂಲಿಕಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಬುಧವಾರ, ಡಿಸೆಂಬರ್ 8, 2021

ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.


ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ ರಾಜ್ ಇಲಾಖೆಗಳ ನಿರ್ಲಕ್ಷತನ.


-ಜಗದೇವ ಎಸ್ ಕುಂಬಾರ

ವಾಡಿ: ಶತ್ರು ಸೈನಿಕರು ಒಳ ನುಗ್ಗುವುದನ್ನು ಹಾಗೂ ದಾಳಿಗೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಗ್ರಾಮದ, ಜನರ ರಕ್ಷಣೆಗಾಗಿ ಗ್ರಾಮದಲ್ಲಿ ಹುಡೆ ಮತ್ತು ಊರ ಮುಂದೆ ಅಗಸಿನಿ ರ್ಮಿಸಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತಿದೆ ಆದರೆ ಅಂದು ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.

ಲಕ್ಷ್ಮಿಪುರವಾಡಿ ಈಗಿನ (ಗಾಂಧಿನಗರ) ಗ್ರಾಮದಲ್ಲಿ ಸುಮಾರು ವರ್ಷಗಳ ಹಳೆಯ ಹುಡೆ, ಅಗಸಿ ಇದ್ದು ಈಗ ಅವು ಅಳಿವಿನ ಅಂಚಿನಲ್ಲಿ ಇವೆ ಎಂದರೆ ಇದಕ್ಕೆಲ್ಲ ಕಾರಣ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳ ನಿರ್ಲಕ್ಷ್ಯತನವೇ ಎಂಬುವುದು ತೋರುತ್ತಿದೆ.


ಈ ಭಾಗದಲ್ಲಿ ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು, ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ರಾಷ್ಟ್ರಕೂಟರು ಈಗಿನ ಮಳಖೇಡ (ಮಾನ್ಯಖೇಟ) ತಮ್ಮ ರಾಜಧಾನಿಯನ್ನಾಗಿ ಸಿಕೊಂಡಿದ್ದ ಸಮಯದಲ್ಲಿ ತಾಲೂಕು ಕೇಂದ್ರ ಸೇಡಂನಲ್ಲಿ ರಾಣಿವಾಸ, ಸಮೀಪದ ನೀಲಹಳ್ಳಿಯಲ್ಲಿ ಖಜಾನೆಯು ಇತ್ತು. ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಟಂಕಣಶಾಲೆ ದಂಡೋತಿಯಲ್ಲಿ ಸೈನ್ಯದ ವಾಸಸ್ಥಳವಿತ್ತು. ಅಷ್ಟೇ ಅಲ್ಲದೆ ನಾಗವಿ ಎಲ್ಲಮ್ಮ ದೇವಾಲಯ ಹಾಗೂ ಹೊನಗುಂಟಾ ಚಂದ್ರಲಾ ಪರಮೇಶ್ವರಿ ದೇವಾಲಯ, ಮಹಬೂಬ್ ಸುಭಾನಿ ದರ್ಗಾ, ಚರ್ಚ್ ಗಳು ಸೇರಿದಂತೆ ಅನೇಕ ದೇವಾಲಯಗಳು ಒಳಗೊಂಡು ಶಕ್ತಿಪೀಠಗಳಾಗಿದ್ದವು.

ನಮ್ಮ ಭಾಗದ ಸಂಪತ್ತನ್ನು ಕೊಳ್ಳೆ ಹೊಡೆಯಬಾರದು ನಮ್ಮ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶದಿಂದ ಹುಡೆ ನಿರ್ಮಿಸುತ್ತಿದ್ದರು

ಇವುಗಳ ಎತ್ತರ 60 ಅಡಿವೆರೆಗೆ ಇದ್ದು, ನಾಲ್ಕು ದಿಕ್ಕುಗಳಿಗೂ ಅಥವಾ ಊರಿಗೆ ಒಂದು ನಿರ್ಮಿಸಿ. ಆಳೆತ್ತರ ಬಿಟ್ಟು ಕೆಳಗೆ ಮಣ್ಣು ತುಂಬಿರುತ್ತಿದ್ದರು. ವೀಕ್ಷಿಸುವುದಕ್ಕಾಗಿ ಸುತ್ತ ನಾಲ್ಕೂ ಗೋಡೆಗಳಿಗೆ ಸಣ್ಣ ಕಿಂಡಿಗಳನ್ನು ಬಿಟ್ಟಿರುತ್ತಿದ್ದರು. ಇದರ ಮೇಲೆ ಕಾವಲುಗಾರರು ಇರುತ್ತಿದ್ದರು. ಇವರ ಕಾಯಕವಿಷ್ಟೇ; ನಾಲ್ಕು ದಿಕ್ಕುಗಳನ್ನು ಸದಾ ಗಮನಿಸುವುದು. ದಾಳಿಗೆಂದು ಬರುವ ಶತ್ರು ಸೈನಿಕರನ್ನು ಸದೆ ಬಡೆಯಲು ರಾಜನಿಗೆ ಮಾಹಿತಿ ರವಾನಿಸುವುದಾಗಿತ್ತು.

ಇಂತಹ ಇತಿಹಾಸ ಸಾರುವ, ನಮ್ಮನ್ನು ರಕ್ಷಿಸುತ್ತಿದ್ದ ಹುಡೆಗಳು ಇಂದು ಮಾಯವಾಗುತ್ತಿವೆ. ಲಕ್ಷ್ಮಿಪುರವಾಡಿ ಗ್ರಾಮದಲ್ಲಿ ಹುಡೆ, ಅಗಸಿ ಅವಶೇಷಗಳು ಉಳಿದಿದ್ದು, ಹಾಳು ಬಿದ್ದ ಮನೆಯಂತೆ ಗೋಚರಿಸುತ್ತಿವೆ. ಹುಡೆ ಸುತ್ತಮುತ್ತ ಮನೆಗಳು ನಿರ್ಮಾಣವಾಗಿದ್ದು ಈಗ ಹುಡುಗಿ ಶಿಥಿಲಗೊಂಡು ಬೀಳುವ ಪರಿಸ್ಥಿತಿ ಬಂದೊದಗಿದೆ ಅಲ್ಲಿಯ ಸುತ್ತಮುತ್ತಲಿನ ಮನೆಯ ಜನರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಒಡೆಯ ಸುತ್ತಮುತ್ತ ಹಾಗೂ ಅಗಸಿ ಪಕ್ಕದಲ್ಲಿ ಸಣ್ಣ ಮಕ್ಕಳು ಆಟ ಆಡುತ್ತಾರೆ ಹೀಗಾಗಿ ಅನಾಹುತಗಳಿಗೆ ಹುಡೆ ಹಾಗೂ ಅಗಸಿ ಕಾರಣವಾಗುವುದೇ ಯಾವುದೇ ರೀತಿಯ ಸಂದೇಹವಿಲ್ಲ ಹೀಗಿದ್ದರೂ ಸಹ  ಅಭಿವೃದ್ಧಿ ಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಮುಂದಿನ ಸಮುದಾಯಕ್ಕೆ ಇದರ ಮಹತ್ವ ತಿಳಿಸುವ ಕೆಲಸಕ್ಕೆ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳು ಮುಂದೆ ಬಾರದೇ ಇರುವುದು ವಿಷಾದ ಮೂಡಿಸಿದೆ.


ಪ್ರಾಚೀನ ಕಾಲದದಲ್ಲಿ ನಿರ್ಮಾಣಗೊಂಡ ಕೋಟೆ, ದೇವಸ್ಥಾನ, ಊರ ಅಗಸಿಗಳು ಹಾಗೂ ಹುಡೆಗಳ  ರಕ್ಷಣೆ ಅಗಬೇಕು. ನಮ್ಮ ಇತಿಹಾಸ ತಿಳಿಯಲು ಇದರಿಂದ ಸಾಧ್ಯವಾಗುತ್ತದೆ. ಇದೇ ರೀತಿ ಅವಸಾನದತ್ತ ಸಾಗಿದರೆ ಮುಂದಿನ ಸಮುದಾಯಕ್ಕೆ ಇತಿಹಾಸ ಅರಿಯಲು ಸಾಧ್ಯವಾಗದು. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಇಂತಹ ಹುಡೆಗಳನ್ನು ಸಮೀಕ್ಷೆ ಮಾಡಿ, ರಕ್ಷಿಸಬೇಕು ಎಂದರು.

-ಡಾ.ಮಲ್ಲಿನಾಥ ತಳವಾರ್, ಸಾಹಿತಿಗಳು ರಾವೂರ್.


ನಮ್ಮ ಗ್ರಾಮದಲ್ಲಿರುವ ಹಳೆಯ ಕಾಲದ ಹುಡೆ ಮತ್ತು ಅಗಸಿ ಶಿಥಿಲಗೊಂಡು ಬಿದ್ದಿವೆ, ಅವುಗಳ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಮುಂದಾಗಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಭಾಗರಾಜ್, ತಿಮ್ಮಯ್ಯ ಶಿರವಾಳ್, ತಿಮ್ಮಯ್ಯ ಸೇಡಂ, ಮತ್ತು ಯುವ ಮುಖಂಡ ಯುವರಾಜ್ ರಾಠೋಡ್ ಆಗ್ರಹಿಸಿದ್ದಾರೆ.


ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು 3 ವರ್ಷದ ಹಿಂದೆಯೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿರುವೇ, ಹಾಗೂ ಇದು ಪುರಾತನ ಇಲಾಖೆಗೆ ಸಂಬಂಧಿಸಿದ್ದು ಆಗಿದ್ದು ಆದರೂ ಸಹ ಅದೇ ರೀತಿಯ ಅನಾಹುತ ಆಗದೇ ಇರಲಿ ಎಂದು ಮುನ್ನೆಚ್ಚರಿಕೆಗಾಗಿ ಪಂಚಾಯತ್ ವತಿಯಿಂದ ಸುತ್ತಮುತ್ತಲಿನ ಮನೆಗಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ಪಂಚಾಯತ್ ವತಿಯಿಂದ ಮಾಡಬಹುದಾದ ಕೆಲಸ ಮಾಡುತ್ತೇವೆ ಎಂದರು

- ಕಾವೇರಿ ರಾಠೋಡ್. ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ರಾವೂರ.

ಭಾನುವಾರ, ನವೆಂಬರ್ 21, 2021

ಕಸಾಪ ಚುನಾವಣೆ: ಬಿರುಸಿನಿಂದ ನಡೆದ ಮತದಾನ.

ಚಿತ್ತಾಪುರ: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಬೆಳಗ್ಗೆ 8 ಗಂಟೆಯಿಂದಲೇ ಬಿರುಸಿನಿಂದ ಮತದಾನ ಆರಂಭಗೊಂಡಿದೆ.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ನಡೆಯುತ್ತಿರುವ ಕಸಾಪ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು.ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಪರಿಷತ್ತು ಕೊಟ್ಟಿರುವ ಗುರುತಿನ ಚೀಟಿ, ಆಧಾರ್‌ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸರ್ಕಾರದ ಮಾನ್ಯತೆ ಹೊಂದಿರುವ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಲೂಕಿನಲ್ಲಿ ಒಟ್ಟು 439 ಮತದಾರರಲ್ಲಿ 12 ಗಂಟೆ ಸಮಯದವರೆಗೆ 124 ರಷ್ಟು ಮತದಾನ ಆಗಿದೆ ಎಂದು ಕಸಾಪ ತಾಲೂಕು ಚುನಾವಣಾ ಅಧಿಕಾರಿ ಮೋಹನ್ ರೆಡ್ಡಿ ತಿಳಿಸಿದ್ದಾರೆ.

11ಗಂಟೆಯಿಂದ ಕೆಲವೊತ್ತು ಮಳೆಸುರಿದರಿಂದ ಮತದಾನಕ್ಕೆ ಅಡ್ಡಿ ಉಂಟಾಗಿತ್ತು ಆದರೂ ಸಹ ಮತದಾರರು ಕ್ರುಷರ್ ನಲ್ಲಿ ಬಂದು ಮತದಾನ ಮಾಡಿದರು.

ಈ ಚುನಾವಣೆಯಲ್ಲಿ ರಾಜ್ಯಾದ್ಯಂತ 3 ಲಕ್ಷಕ್ಕೂ ಅಧಿಕ ಮಂದಿ ಮತದಾರರಿದ್ದಾರೆ. ಸುಮಾರು 410 ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಮಹೇಶ್ ಜೋಶಿ, ಮ.ಚಿ ಕೃಷ್ಣ, ವ.ಚ ಚನ್ನೇಗೌಡ, ಸಿ.ಕೆ ರಾಮೇಗೌಡ, ಸಂಗಮೇಶ ಬಾದವಾಡಗಿ, ರಾಜಶೇಖರ ಮುಲಾಲಿ, ಬಾಡದ ಭದ್ರಿನಾಥ್, ಬಸವರಾಜ ಶಿ. ಹಳ್ಳೂರ, ಶಿವರಾಜ ಪಾಟೀಲ, ಸರಸ್ವತಿ ಶಿವಪ್ಪ, ವೈ ರೇಣುಕಾ,ಕೆ. ರತ್ನಾಕರ ಶೆಟ್ಟಿ, ಪ್ರಮೋದ್ ಹಳಕಟ್ಟಿ, ಕೆ. ರವಿ ಅಂಬೇಕರ, ಮಾಯಣ್ಣ, ಸುಧೀಂದ್ರರಾವ್, ಸೇರಿದಂತೆ ರಾಜ್ಯಾದ್ಯಕ್ಷ ಸ್ಥಾನಕ್ಕಾಗಿ 21 ಮಂದಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಮಲಪ್ಪ ಹೊಸಮನಿ, ಬಿ.ಎಚ್ ನಿರಗುಡಿ, ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ವಿಶ್ವನಾಥ್ ಭಕರೆ, ವೀರಭದ್ರ ಸಿಂಪಿ 5 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ಭಾನುವಾರ ಸಂಜೆ ಘೋಷಣೆ ಆಗಲಿದೆ. ರಾಜ್ಯಾಧ್ಯಕ್ಷ ಸ್ಥಾನದ ಫಲಿತಾಂಶ 24 ಕ್ಕೆ ಘೋಷಣೆ ಆಗಲಿದೆ.

ಭಾನುವಾರ, ನವೆಂಬರ್ 14, 2021

ಇಎಸ್ಐ ಮೆಡಿಕಲ್ ಕಾಲೇಜಿನಲ್ಲಿ 15 ದಿನಗಳ ಸ್ವಚ್ಛತಾ ಆಂದೋಲನ.

ಕಲಬುರ್ಗಿ: ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಕಾಲೇಜುಗಳಲ್ಲಿ ನವೆಂಬರ್ 1 ರಿಂದ 15ರ ವರೆಗೆ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಕ್ಷಣ ಇಲಾಖೆ ಅವರು ಆದೇಶ ಅನ್ವಯ ಇಎಸ್ಐ ಮೆಡಿಕಲ್ ಕಾಲೇಜಿನಲ್ಲಿ 15 ದಿನಗಳ ಸ್ವಚ್ಚತಾ ಆಂದೋಲನ ಕಾರ್ಯಕ್ರಮ ನಡೆಯಿತು.

ಪಟ್ಟಣದ ಇಎಸ್ಐ ಆಸ್ಪತ್ರೆಯ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಆಂದೋಲನ ಕಾರ್ಯಕ್ರಮದಲ್ಲಿ  ಇಎ‌ಸ್ಐನ್ ಡೀನ್ ಇವೋನಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು 

 ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಎಲ್ಲ ಉದ್ಯೋಗಿಗಳಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ನೀಡಿ. ಆವರಣದ ಎಲ್ಲಾ ಸ್ಥಳಗಳಲ್ಲಿ ಸ್ಯಾನಿಟೈಜರ್ ಮಾಡಿ, ಕಡ್ಡಾಯವಾಗಿ ಮಾಸ್ಕ್ ಧರಿ‌ಸಲು ಸೂಚಿಸಿ, ಸ್ವಚ್ಛತಾ  ಕಾರ್ಯಾಗಾರ ಹಾಗು ಕೋವಿಡ್ ೧೯ ಮುನ್ನೆಚ್ಚರಿಕಾ ಕ್ರಮಗಳನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಅವಧಿಯಲ್ಲಿ ರಸ್ತೆ, ಶೌಚಾಲಯ, ವಾರ್ಡ್ ಮತ್ತು ಗಿಡ ಮರಗಳನ್ನು ನೆಡುವ ಬಗ್ಗೆ ಒತ್ತುಕೊಡಲಾಯಿತು ಎಂದರು.

ಇಎಸ್ಐ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯಿಂದ ಜೈವಿಕ -ತ್ಯಾಜ್ಯ ನಿರ್ವಹಣೆ, ತೋಟಗಾರಿಕೆ ಮತ್ತು ಶಕ್ತಿಯ ಸಂರಕ್ಷರಣೆಗಾಗಿ ಸ್ತಪ್ ನೀರಿನ ಬಳಕೆ ಇತ್ಯಾದಿಗಳೊಂದಿಗೆ ಈ ಕೆಳಗಿನ  ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 

ಎಲ್ಲಾ ಕಟ್ಟಡಗಳ ಬೆಳಕಿನ ವ್ಯವಸ್ಥೆ,ಸೂಕ್ತವಾದ ಸ್ಥಳಗಳಲ್ಲಿ ಡಸ್ಟ್ ಬಿನ್, ಸ್ಯಾನಿಟೈಜರ್ ಹಾಗು ಹ್ಯಾಂಡ್ ವಾಶಗಳನ್ನು ಇರಿಸುವ ಬಗ್ಗೆ,ಆಸ್ಪತ್ರೆ ಆವರಣದಲ್ಲಿ ಗಿಡ ಮರಗಳನ್ನು ನೆಡುವ ಬಗ್ಗೆ, ಕಚೇರಿ ಆವರಣದಲ್ಲಿ ಸ್ವಚ್ಛತೆಯ ಕುರಿತು ವಿಚಾರಣಾ ಸಂಕಿರಣ / ಕಾರ್ಯಾಗಾರ ಗಳನ್ನುಆಯೋಜಿಸಿ ಜಾಗೃತಿ ಮೂಡಿಸುವುದು,ಫ್ಯಾನ್ , ಫೋಟೋಕಾಪಿ ಯಂತ್ರಗಳು, ಕಂಪ್ಯೂಟರ್ ಸೇರಿದಂತೆ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ವಚ್ಛಗೊಳಿಸುವುದು.

ಈ ಸಂದರ್ಭದಲ್ಲಿ ಡಾ.ಕೆ ಪಿ ಪದ್ಮಾಜ್,ಡಾ.ದಿನಂತಾ ಪೂಜಾರಿ, ಡಾ.ಸ್ವಾತಿ, ಬಾಬುಲಾಲ್, ಸೇರಿದಂತೆ ಇತರರಿದ್ದರು.

ಮಂಗಳವಾರ, ನವೆಂಬರ್ 9, 2021

ಬಿಜೆಪಿಗರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ: ಖರ್ಗೆ.

ಚಿತ್ತಾಪುರ: ಕಾಂಗ್ರೆಸ್ ಸರ್ಕಾರದ ಅವಧಿಯ ಅಭಿವೃದ್ಧಿ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮದ ಬಗ್ಗೆ ಬಿಜೆಪಿಗರು ಬಹಿರಂಗ ಚರ್ಚೆ ಬರಲಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ತಾಲೂಕಿನ ಮಾಡಬೂಳ ಗ್ರಾಮದಲ್ಲಿ 2.79 ಕೋಟಿ‌ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಜಲಜೀವನ ಮಿಷನ್ ಅಡಿಯಲ್ಲಿ ಮನೆ-ಮನೆಗೆ ನೀರು ಒದಗಿಸುವ ಯೋಜನೆ, ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಘನತ್ಯಾಜ್ಯ ಘಟಕ ನಿರ್ಮಾಣ ಯೋಜನೆಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಕಲ್ಯಾಣ‌ ಕರ್ನಾಟಕ ಅದರಲ್ಲೂ ಕಲಬುರಗಿ ಎಂದರೆ ಬಿಜೆಪಿ ಸರ್ಕಾರಕ್ಕೆ ಅಲರ್ಜಿಯಾಗಿದೆ.

ಎರಡುವರೆ ವರ್ಷದ ಅಧಿಕಾರಾವಧಿಯಲ್ಲಿ ಇಬ್ಬರು ಸಿಎಂ ಗಳನ್ನು ಬದಲಾವಣೆ ಮಾಡಿದ್ದೆ ಬಿಜೆಪಿ ಪಕ್ಷದ ಸಾಧನೆ ಏನೂ ಎಂದು ಟೀಕಿಸಿದರು.

ಅಭಿವೃದ್ದಿ ವಿಚಾರದಲ್ಲಿ ನಮ್ಮೊಂದಿಗೆ ಬಹಿರಂಗ ಚರ್ಚೆಗೆ  ಬಿಜೆಪಿಗರು ಬರಲಿ ನಾನು ಅವರಿಗೆ ಉತ್ತರಿಸುತ್ತೇನೆ, ಆಗ ನಿಮ್ಮೆಲ್ಲರ ಸೇವೆ ಮಾಡಲು ಯಾರು ಇರಬೇಕು ಎಂದು ನೀವೆ  ನಿರ್ಧರಿಸಿ ಎಂದು ಸವಾಲ್ ಹಾಕಿದರು.

ಕಳೆದ ವರ್ಷದ ಹಿಂದೆ ಇದೇ ದಿನದಂದು ನೋಟ್ ಬ್ಯಾನ್ ಮಾಡಿದ ಮೋದಿ ಸರ್ಕಾರ ಜನಸಾಮಾನ್ಯರ ಸಂಕಟಕ್ಕೆ ಕಾರಣವಾದರು. ಜೀರೋ ಅಕೌಂಟ್ ಓಪನ್ ಮಾಡಿಸಿ ಪ್ರತಿಯೊಬ್ಬರ ಅಕೌಂಟ್ ನಲ್ಲಿ ಹದಿನೈದು ಲಕ್ಷ ಹಾಕುವುದಾಗಿ ಹೇಳಿದವರು ಒಂದು ರೂಪಾಯಿನೂ ಹಾಕಲಿಲ್ಲ. ಜನಧನ್ ಯೋಜನೆ ಜನರಿಂದ ಧನ ಕೊಳ್ಳೆಹೊಡೆಯುವ ಯೋಜನೆಯಾಗಿ ಪರಿವರ್ತನೆಯಾಗಿದೆ ಎಂದು ಟೀಕಿಸಿದರು. ಮೋದಿ ಹಾಗೂ ಶಾ ಅವರನ್ನು ಚೋರ್ ಗುರು ಚಾಂಡಾಲ ಶಿಷ್ಯ ಎಂದು ಹೆಸರಿಸಿದ ಶಾಸಕರು ಗ್ರಾಮೀಣ ಭಾಗದ ಹೆಣ್ಣುಮಕ್ಕಳು ತಮ್ಮ ತಮ್ಮ ಸಂಸಾರದ ತಾಪತ್ರಯಕ್ಕೆ ಎಂದು ಕೂಡಿಟ್ಟ ಅಷ್ಟು ಇಷ್ಟು ದುಡ್ಡನ್ನೂ ಕೂಡಾ ಇವರು ತೆಗೆದುಕೊಂಡರು ಎಂದರು.

ನೋಟು ಅಮಾನ್ಯೀಕರಣದಿಂದಾಗಿ ದೇಶದಲ್ಲಿ ಈ ಹಿಂದೆ 50 ವರ್ಷದಲ್ಲಿ ಆಗಿರದಂತ ನಿರುದ್ಯೋಗ ಈಗ ಸೃಷ್ಠಿಯಾಗಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವ ವಾಗ್ಧಾನ ನೀಡಿದ್ದ ಮೋದಿ ಭರವಸೆ ನೆರವೇರಿಸಲಿಲ್ಲ ಎಂದರು. ಮಾಡಬೂಳ ಸುತ್ತಮುತ್ತ ಗ್ರಾಮಗಳ ಅಭಿವೃದ್ದಿ ಹಾಗೂ ಆರ್ಥಿಕತೆ ಸದೃಢತೆಗಾಗಿ ( National Investment Manufacturing Zone ) ನಿಮ್ಝ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಬಿಜೆಪಿ ಯಾವಾಗ ಅಧಿಕಾರಕ್ಕೆ ಬಂದಿತೋ ಈ ಯೋಜನೆ ಕೈ ತಪ್ಪಿ ಹೋಗಿದೆ.

ಚಿತ್ತಾಪುರ ಮತಕ್ಷೇತ್ರದ ಗ್ರಾಮಗಳಲ್ಲಿ ಶಿಕ್ಷಣದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ.  ವಾಡಿ ಪಟ್ಟಣದಲ್ಲಿ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಜುಕೇಷನ್ ಹಬ್ ನಿರ್ಮಾಣವಾಗಲಿದೆ. ಮರಗೋಳ ಗ್ರಾಮದ ಬಳಿ ರೂ 100 ಕೋಟಿ‌ ವೆಚ್ಚದಲ್ಲಿ ಪ್ರಾಣಿ ಸಂಗ್ರಹಾಲಯ ನಿರ್ಮಾಣಗೊಳ್ಳಲಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಅಪೌಷ್ಠಿಕಾಂಶ ಹೊಂದಿದ 6 ಸಾವಿರ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲಾಗಿದೆ. ಅಧಿಕಾರದಲ್ಲಿ ಇರುವ ಬಿಜೆಪಿಗರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಪ್ರಾಮಾಣಿಕ ಪ್ರಯತ್ನ, ಅಭಿವೃದ್ದಿ ಪರ ಚಿಂತನೆಯುಳ್ಳವರನ್ನು ಆಯ್ಕೆ ಮಾಡಿ ಕಳಿಸಬೇಕು ಎಂದು ಜನರಿಗೆ ಕರೆ ನೀಡಿದ ಶಾಸಕರು ಹಣದ ಆಸೆಗೆ ಬಿದ್ದು ಅಭಿವೃದ್ದಿಪರ ಇರುವವರನ್ನ ನೀವು ತಿರಸ್ಕರಿಸಬಾರದು ಎಂದು ಮನವಿ ಮಾಡಿದರು.

ಕೌಟುಂಬಿಕ ಕಾರ್ಯಕ್ರಮಗಳಿಗೆ ಭೇಟಿ‌ ನೀಡಬೇಕು, ಜಯಂತಿಗಳಿಗೆ ಅಟೆಂಡ್ ಮಾಡಬೇಕು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದು ಜನರು ನಮ್ಮಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಇದು ಬದಲಾದ ರಾಜಕೀಯ ಪರಿಸ್ಥಿತಿ. ಅದರ ಬದಲಿಗೆ ನನ್ನಿಂದ ಅಭಿವೃದ್ದಿ ಯೋಜನೆಗಳನ್ನು ಪಡೆದುಕೊಳ್ಳುವುದರ ಬಗ್ಗೆ ಜನರು ಯೋಚಿಸಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಭೀಮಣ್ಣ ಸಾಲಿ, ರಮೇಶ್ ಮರಗೋಳ, ಸುನೀಲ್ ದೊಡ್ಡಮನಿ, ಶಂಭುಲಿಂಗ ಗುಡಗುರ್ತಿ ಸೇರಿದಂತೆ ಹಲವರಿದ್ದರು.

ಶುಕ್ರವಾರ, ನವೆಂಬರ್ 5, 2021

ಅಪ್ಪುವಿನ ಗೋಶಾಲೆ ಮತ್ತು ಅನಾಥಾಶ್ರಮದ ಜವಾಬ್ದಾರಿ ದರ್ಶನ್ ತೆಗೆದುಕೊಂಡಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಂತ್ಯ ಕ್ರಿಯೆಗಳು ಸರ್ಕಾರದ ಗೌರವಗಳೊಂದಿಗೆ ನೆರವೇರಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ಧೈರ್ಯ ಕೊಡಲಿ ಎನ್ನುವುದೇ ಎಲ್ಲರ ಆಶಯ.

ಕುಟುಂಬಸ್ಥರು, ಸ್ನೇಹಿತರು ಅಭಿಮಾನಿ ಬಳಗ ಸೇರಿದಂತೆ ಎಲ್ಲರೂ ಅಪ್ಪು ನಿಧನ ದಿಂದ ಬಹಳ ದು:ಖಿತರಾಗಿರಗಿದ್ದಾರೆ. ಇತ್ತೀಚೆಗೆ ತಮಿಳು ಚಿತ್ರರಂಗದ ನಟ ವಿಶಾಲ್ ಅವರು ಅಪ್ಪು ಅವರು ಓದಿಸುತ್ತಿದ್ದ, 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿಕೆ ನೀಡಿದ್ದರು. 

ಇದೀಗ ನಟ ದರ್ಶನ್ ಅವರು ಸಹ ಅಪ್ಪು ಅವರ ಬಗ್ಗೆ ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.

ಇಷ್ಟು ದಿನಗಳ ಕಾಲ ಪುನೀತ್ ರಾಜ್ ಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಗೋಶಾಲೆ ಮತ್ತು ಅನಾಥಾಶ್ರಮದ ಜವಾಬ್ದಾರಿ ನಾನು ನೋಡಿಕೊಳ್ಳುವುದಾಗಿ ನಟ ದರ್ಶನ್ ಹೇಳಿದ್ದಾರೆ.ಇದೀಗ ಅಪ್ಪು ಅವರ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...