ಭಾನುವಾರ, ಮೇ 7, 2023

ಕ್ಷೇತ್ರವ್ಯಾಪ್ತಿಯಲ್ಲಿ ಮಣಿಕಂಠ ರಾಠೋಡ ಬಿರುಸಿನ ಪ್ರಚಾರ.

ಚಿತ್ತಾಪೂರ: ಮೀಸಲು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅಇವರು  ಪಟ್ಟಣದ 23 ವಾರ್ಡ್ ಗಳ ಮನೆ ಮನೆಗೆ ಹೋಗಿ ಮತ ಕೇಳುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ತಾಲೂಕಿನಲ್ಲಿ ಸಾಕಾಷ್ಟು ಅಭಿವೃದ್ಧಿಗೆ ಸಾದ್ಯವಾಗುತ್ತದೆ. ನಾನು ನಿಮ್ಮ ಮನೆಯ ಮಗನಾಗಿ ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ನನ್ನಗೆ ಒದಗಿ ಬಂದಿದೆ. ಹೀಗಾಗಿ ಮೇ,10ಕ್ಕೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ನನ್ನಗೆ ಗೆಲ್ಲಿಸಿ ಎಂದು ಮತದಾರರಲ್ಲಿ ಕೈ ಮುಗಿದು ಬೇಡಿಕೊಂಡರು.

ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ಕಾರ್ಯಕರ್ತರು ಪಣತೊಟ್ಟು ಮನೆಮನೆಗೂ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಯಕರ್ತರ ಪ್ರೀತಿಗೆ ಚಿರಋಣಿ ಎಂದು ಹೇಳಿದರು.

ಕೇಂದ್ರದಿಂದ ಬಿಡುಗಡೆಯಾಗುವ ಒಂದು ಪೈಸೆ ಹಣವೂ ನಿರ್ದಿಷ್ಟ ಫಲಾನುಭವಿ ಯನ್ನು ತಲುಪಲು ಹಾಗೂ ನಿರ್ದಿಷ್ಟ ಯೋಜನೆಗೆ ಬಳಕೆ ಯಾಗಲು ಡಬಲ್‌ ಎಂಜಿನ್ ಸರ್ಕಾರ ಮುಖ್ಯ. ನಾಲ್ಕು ವರ್ಷಗಳ ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಇದು ಸಾಬೀತಾಗಿದೆ

ಬಿಜೆಪಿಯ ಜನಕಲ್ಯಾಣ ಕಾರ್ಯಕ್ರಮಗಳೇ ಗೆಲುವಿಗೆ ಸ್ಪೂರ್ತಿಯಾಗಿದ್ದು, ಜನರ ಬದುಕು ಸುಧಾರಣೆಯತ್ತ ಸಾಗುತ್ತಿದೆ. ಸಮೃದ್ಧ ಕರ್ನಾಟಕ ಪ್ರತಿ ನಿರ್ಮಾಣಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಗರಾಜ ಬಂಕಲಗಿ, ಮಲ್ಲಿಕಾರ್ಜುನ ಎಮ್ಮೆನೋರ, ಪ್ರಭು ಗಂಗಾಣಿ, ಕೋಟೇಶ್ವರ ರೇಷ್ಮೆ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಪೂಜಾರಿ, ಸೇರಿದಂತೆ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿದ್ದರು.

ಶುಕ್ರವಾರ, ಮೇ 5, 2023

ಶಿಕ್ಷಣ,ಉದ್ಯೋಗಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ಕ್ಷೇತ್ರದ ಜನತೆಗೆ ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಸೀಗಬೇಕಾದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು.

ತಾಲ್ಲೂಕಿನ ತೋನಸನಳ್ಳಿ, ಮಲಕೂಡ, ಮರಗೋಳ, ಮುಡಬೂಳ, ಮೋಗಲಿ,
ದಂಡೋತಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಿಂದೆ ಹೋದರೆ‌ ಜೈಲು‌ ಹಾಗೂ ಬೇಲು ಗ್ಯಾರಂಟಿ ಜನರಿಗೆ ತಿಳಿ ಹೇಳಿದರು.

ಬಿಜೆಪಿಗರು ಮೋದಿ ಫೋಟೋ ತೋರಿಸಿ ಕಳ್ಳನಿಗೆ ಟಿಕೆಟ್ ಕೊಟ್ಟರೆ ಆರಿಸಿ ಕಳಿಸಲು ಚಿತ್ತಾಪುರದ ಪ್ರಬುದ್ಧ ಮತದಾರರು ಮತ ಹಾಕುತ್ತಾರೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನಿಗೆ ಚುನಾವಣೆಯಲ್ಲಿ ಅಪ್ಪಿತಪ್ಪಿ ಗೆಲ್ಲಿಸಿದರೆ ಅಂಗನವಾಡಿಗೆ ಹೋಗುವ ಮಕ್ಕಳಿಗೆ ಹಾಲು ಸಿಗಲ್ಲ. ಯಾಕೆಂದರೆ, ಅವನು ಅಕ್ರಮವಾಗಿ ಹಾಲಿನಪುಡಿ ಸಾಗಾಣಿಕೆ ಮಾಡಿದ್ದಕ್ಕೆ ಯಾದಗಿರಿ ಕೋರ್ಟ್ ಶಿಕ್ಷೆ ನೀಡಿದೆ. ಅವನ ವಿರುದ್ದ ತೆಲಂಗಾಣ, ಆಂಧ್ರ,‌ಕರ್ನಾಟಕ ಹಾಗೂ ಮಹಾರಾಷ್ಟ್ರ ಹೀಗೆ ನಾಲ್ಕು ರಾಜ್ಯದ ಆರು ಜಿಲ್ಲೆಗಳಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡಿದಕ್ಕೆ ಒಟ್ಟು 40 ಕೇಸುಗಳಿವೆ. ಹೀಗಾಗಿ ಅವನು ಕೇವಲ ರಾಜ್ಯದ ಫಿಗರ್ ಅಲ್ಲ ದಕ್ಷಿಣ ಭಾರತದ ಫಿಗರ್ ಆಗಿದ್ದಾನೆ ಎಂದು ವ್ಯಂಗ್ಯಮಾಡಿದರು.

ನನಗೆ ನೀವು ಹೇಗೆ ಆಶೀರ್ವಾದ ಮಾಡಬೇಕೆಂದರೆ ಮತ್ತೊಮ್ಮೆ ಬಿಜೆಪಿಗೆ ಚಿತ್ತಾಪುರದಲ್ಲಿ ಅಭ್ಯರ್ಥಿಗೆ ಮತ ಹಾಕಿರಬಾರದು ಎಂದು ಜನತೆಯಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ,ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಬೀಮಣ್ಣ ಸಾಲಿ, ನಾಗರೆಡ್ಡಿಗೌಡ ಪಾಟೀಲ, ರಾಜಶೇಖರ ತಿಮ್ಮನಾಯಕ, ತೆಲಂಗಾಣದ ಸುಜಾತ, ಶರಣಪ್ಪ ನಾಟೀಕಾರ್, ರಾಮಲಿಂಗ ಬಾನರ್, ಸಾಬಣ್ಣ ಡಿಗ್ಗಿ, ಬಸವರಾಜ ಚಿಮ್ಮನ್ನಳ್ಳಿ, ಗುಂಡು ಐನಾಪುರ, ಶರಣು ಡೋಣಗಾಂವ್, ರಮೇಶ ಕವಡೆ, ಸೇರಿದಂತೆ ಇತರರು ಇದ್ದರು.

ಸಮಾಜ ಸೇವೆ ನೋಡಿ ಮತ ಹಾಕಿ.

ಚಿತ್ತಾಪೂರ: ಕ್ಷೇತ್ರದಲ್ಲಿ ಒಂದು ವರ್ಷದಿಂದ ಸಮಾಜ ಸೇವೆ ಮಾಡುತ್ತಾ ಇರುವೆ ಈ ಸಮಾಜ ಸೇವೆ ನೋಡಿ ನನ್ನಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ಚಾಮನೂರ, ಕಡಬೂರ್, ಕುಲಕಂದ, ಮಳಗ, ತುನ್ನೂರ, ಬನ್ನಟ್ಟಿ, ಕುಂಬಾರ ಹಳ್ಳಿ, ನಾಲವಾರ ಸ್ಟೇಷನ್, ಸ್ಟೇಷನ್ ತಾಂಡಾ, ಸೂಗುರ, ಸೂಗುರ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಯಾವುದೇ ಉನ್ನತ ಹುದ್ದೆಯಲ್ಲಿ ಇಲ್ಲಾ ಶಾಸಕನು ಇಲ್ಲಾ ಆದರೂ ನಾನು ಕ್ಷೇತ್ರದಲ್ಲಿ ನನ್ನ ವೈಯಕ್ತಿಕ ಹಣದಿಂದ ನಿಮ್ಮೆಲ್ಲರ ಸೇವೆ ಮಾಡುತ್ತಿರುವೆ ಮುಂದೆಯೂ ಮಾಡುವೇ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದರೆ ಅದು ಸತ್ಯಕ್ಕೆ ದೂರವಾಗಿದೆ. ನಾನು ಒಂದು ವೇಳೆ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥ ಆಗಿದ್ದಾರೆ ಕಾನೂನು ಈಗಾಗಲೇ ನನ್ನ ಶಿಕ್ಷೇ ನೀಡುತ್ತಿತ್ತು ಅವರು ಹೇಳುವ ಮಾತ್ತು ಯಾರು ನಂಬಬೇಡಿ ಮತಗಳು ಸೆಳೆಯಲು ಇದು ಒಂದು ಕುತುಂತ್ರವಾಗಿದೆ ಎಂದರು.

ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡದೆ ಬಿಜೆಪಿ ಪಕ್ಷಕ್ಕೆ ಬೆಂಬಲಸಿ ನನ್ನಗೆ ಗೆಲ್ಲಿಸಿ, ನಾವು ಹಿಂದು ಧರ್ಮದ ಪರವಾಗಿದ್ದೆವೆ ಅವರು ಜಾತಿ-ಜಾತಿಗಳ ಮಧ್ಯ ಜಗಳ ಹಚ್ಚುವರು ಇದ್ದರೆ ಎಂದು ಹೇಳಿದರು.

ಇದೇ ವೇಳೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಇತರ ಪಕ್ಷವನ್ನು ತೊರೆದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಮಣಿಕಂಠ ರಾಠೋಡ ಅವರ ಸಮಾಜ ಸೇವೆ ನೋಡಿ ಮಾಜಿ ಜಿಪಂ ಸದಸ್ಯ ಇಬ್ರಾಹಿಂ ಪಟೇಲ,  ಮಾಜಿ ತಾಪಂ ಸದಸ್ಯ ಬಸವರಾಜ ಲೋಕನಳ್ಳಿ, ಅವರ ಮುಂದಾಳತ್ವದಲ್ಲಿ ನೂರಾರು ಜನರು ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜಾರ್ಖಂಡ್ ಸಂಸದ ಆದಿತ್ಯಸಾಹು ಸಿಂಗ್, ಮುಕುಂದ ದೇಶಪಾಂಡೆ, ಶಶಿಧರ ಸುಗೂರ, ನಿಂಗಾರೆಡ್ಢಿ ಭಾಸರೆಡ್ಡಿ, ಸುರೇಶ ರಾಠೋಡ್, ವಿಠ್ಠಲ ನಾಯಕ, ಸೇರಿದಂತೆ ಇತರರು ಇದ್ದರು.



ಗುರುವಾರ, ಮೇ 4, 2023

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.


ಚಿತ್ತಾಪೂರ: ಚುನಾವಣೆಯ ಭದ್ರತೆಯ ಸಲುವಾಗಿ ಪಟ್ಟಣದ ತಹಸೀಲ್ ಕಛೇರಿಯಲ್ಲಿ  ಕರ್ತವ್ಯದಲ್ಲಿ ಇದ್ದ ಪೋಲೀಸ ಪೇದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಮಲ್ಲಿಕಾರ್ಜುನ ಪೋತೆಪೂರ (38) ಎಂಬ ಪೋಲೀಸ ಪೇದೆ ಬುಧವಾರ ರಾತ್ರಿ ತಹಸೀಲ್ ಕಛೇರಿಯ ಭದ್ರತೆಯ ಕರ್ತವ್ಯದಲ್ಲಿದ್ದ ಪೋಲೀಸ ಪೇದೆ 303 ಬಂದೂಕನಿಂದ ತಾನೇ ಪೈರಿಂಗ್, ಅಥವಾ ಆಕಸ್ಮಿಕವಾಗಿ ಮಾಡಿಕೊಂಡಿರಬಹುದು ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಪೋಲೀಸ ಪೇದೆಯ ಚಲನ ವಲನದ ಕುರಿತು
ತಹಸೀಲ್ ಕಛೇರಿಯಲ್ಲಿನ ಸಿಸಿ ಟಿವಿ ಪರಿಶೀಲನೆಯ ನಡೆಯುತ್ತಿದೆ.

ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ಕೈಗೊಂಡು ಸಾವಿನ ನಿಖರತೆ ತಿಳಿಸಲಾಗುವುದು ಎಂದು ಪೋಲೀಸ ಮೂಲಗಳಿಂದ ತಿಳಿದು ಬಂದಿದೆ.

ಕೆಟ್ಬ ಹಾಗೂ ಭ್ರಷ್ಟ ಸರ್ಕಾರ‌ ರಾಜ್ಯದಲ್ಲಿದೆ: ಖರ್ಗೆ ಆರೋಪ.

ಚಿತ್ತಾಪೂರ: ರಾಜ್ಯದ ಇತಿಹಾಸದಲ್ಲಿಯೇ ಬಿಜೆಪಿ ಸರ್ಕಾರವು ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ತಾಲ್ಲೂಕಿನ ದಿಗ್ಗಾಂವ,
ಅಲ್ಲೂರು(ಬಿ), ಅಲ್ಲೂರ(ಕೆ), ಇಟಗಿ 
ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಇದೆ ಎನಿಸುವುದಿಲ್ಲ. 40% ಸರ್ಕಾರ ಇದೆ ಎನ್ನುವುದು ಜನರ ಅಭಿಪ್ರಾಯವಾಗಿದೆ. ಈ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಿಕೊಂಡು ನಿರುದ್ಯೋಗಿ ಯುವಕರ ಪಾಲಿಗೆ ಕರಾಳವಾಗಿ ಪರಿಣಮಿಸಿದೆ.

 ತಾಲೂಕಿನಲ್ಲಿ ರಾಜಕೀಯ ವಾತಾವರಣ ಕಲುಷಿತಗೊಳ್ಳುತ್ತಿದೆ. ತತ್ವ ಸಿದ್ದಾಂತದ ಬಗ್ಗೆ ಮಾತನಾಡುವ ಬಿಜೆಪಿ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗೆ ಟಿಕೇಟ್ ನೀಡಿದೆ. ಅಕ್ರಮ ಅಕ್ಕಿ ಹಾಗೂ ಹಾಲಿನ‌ಪುಡಿ‌ ಕಳ್ಳತನ ಮಾಡಿ ಮಾರಾಟ‌ ಮಾಡಿದ ಆರೋಪದ ಮೇಲೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ 40 ಕೇಸುಗಳು ದಾಖಲಾಗಿವೆ. ಇದನ್ನೆಲ್ಲ ನಾನು ಹೇಳುತ್ತಿಲ್ಲ. ಚುನಾವಣೆ ನಾಮ ಪತ್ರದ ಜೊತೆಗೆ ಅವನು ತಹಸೀಲ್ದಾರರಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ವಿವರವಾಗಿ ಹೇಳಿಕೊಂಡಿದ್ದಾನೆ. ಅಂತವನಿಗೆ ಟಿಕೇಟ್ ನೀಡಿರುವ ಬಿಜೆಪಿಗರು ಚಿತ್ತಾಪುರದ ಘನತೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ ಎಂದರು.

ಈ ಸಲದ ಚುನಾವಣೆ ಯುವಕರ ಭವಿಷ್ಯದ ಮಹಿಳೆಯ‌ ಸುಭದ್ರತೆಯ ಹಾಗೂ‌ ವಿದ್ಯಾರ್ಥಿಗಳ‌ ಶೈಕ್ಷಣಿಕ ಅಭಿವೃದ್ದಿಗೆ ಸಂಬಂಧಿಸಿದ್ದು ಕಾನೂನು ಬಾಹಿರ ಕೆಲಸ ಮಾಡುವ ವ್ಯಕ್ತಿಗಳಿಗೆ ಮತ ನೀಡುವ ಬದಲು ಅಭಿವೃದ್ದಿ ಪರವಾಗಿರುವ ನನ್ನಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ಹಣಮಂತ ಸಂಕನೂರ, ಶರಣಪ್ಪ ನಾಟೀಕಾರ್, ರಾಮಲಿಂಗ ಬಾನರ್, ಬಸವರಾಜ ಚಿಮ್ಮನ್ನಳ್ಳಿ, ಸೇರಿದಂತೆ ಹಲವರಿದ್ದರು.

ಭಜರಂಗದಳ, ಹಿಂದೂ ಸಮಾಜದ ಕವಚ: ಮಣಿಕಂಠ ರಾಠೋಡ.

ಚಿತ್ತಾಪೂರ: ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ದವಾಗಿರುವ ಕಾರ್ಯಕರ್ತರ ಪಡೆ, ಹಿಂದೂ ಸಮಾಜದ ಕವಚವಿದ್ದಂತೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.

ತಾಲ್ಲೂಕಿನ ಯರಗಲ್, ಮರಗೋಳ, ದಂಡೋತಿ, ತನಸನಹಳ್ಳಿ (ಟಿ), ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಹಿಂದೂ ವಿರೋಧಿ ನಿಲುವಿಗೆ ಧಿಕ್ಕಾರ.
ಬಜರಂಗ ದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳುತ್ತದೆ ಈ ನಿಲುವು  ನೋಡಿದ್ರೆ ನೀವು ಹಿಂದೂ ದ್ರೋಹಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದರು.

ನಾನು ಗೆಲ್ಲಲಿ ಬಿಡಲಿ ನಾನು ನಿಮ್ಮ ಕ್ಷೇತ್ರದ ಸಲುವಾಗಿ ಸೇವೆ ಸಲ್ಲಿಸುವೆ.
ಮರಗೋಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ ಜಾಸ್ತಿಯಾಗಿದೆ ನಾನು ಗಣೇಶನ ದೇವಸ್ಥಾನಕ್ಕೆ ಆಶೀರ್ವಾದ ಪಡೆಯಲು ಬರುವೆ ಎಂದರೆ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಮಣಿಕಂಠಗೆ ಕರಿಸಬೇಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಈ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಮಾತ್ತು ಹೇಳುವೇ ನಮ್ಮ ಬಿಜೆಪಿ ಪಕ್ಷ ಚಿತ್ತಾಪುರನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಆಗ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ತಿರುಗೇಟು ನೀಡಿದರು.

ಕ್ಷೇತ್ರದ ಯಾವುದೇ ಗ್ರಾಮದ ಸಮಸ್ಯೆ ಇರಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿಮ್ಮ ಗ್ರಾಮಕ್ಕೆ ಕರೆಸಿ ಸಮಸ್ಯೆಗೆ ಪರಿಹಾರ ಕೋಡಿಸುವ ಪ್ರಯತ್ನ ಮಾಡುವೆ. ಮೇ,10ಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಕೈ ಮುಗಿದರು.

ಈ ಸಂಬಂಧದಲ್ಲಿ ಜಾರ್ಖಂಡ್ ಸಂಸದ ಅದಿತ್ಯಸಾಹು ಸಿಂಗ್, ಮುಕುಂದ ದೇಶಪಾಂಡೆ, ಶಶಿಧರ ಸುಗೂರ, ಶಶಿಕಲಾ ಟೆಂಗಳಿ, ಮಲ್ಲಿಕಾರ್ಜುನ ಎಮ್ಮೆನೋರ, ರಾಮದಾಸ ಚವ್ಹಾಣ್, ತಮ್ಮಣ್ಣ ಡಿಗ್ಗಿ, ಸೇರಿದಂತೆ ಇತರರು ಇದ್ದರು.


ಸೋಮವಾರ, ಮೇ 1, 2023

ನಿಮ್ಮ ಮಗನಾಗಿ ಸೇವೆ ಮಾಡುವೆ: ಮಣಿಕಂಠ ರಾಠೋಡ.

ಚಿತ್ತಾಪೂರ: ಮೇ,೧೦ಕ್ಕೆ ನಡೆಯಲ್ಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನಗೆ ಗೆಲ್ಲಿಸಿ ನಾ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು.
 
ತಾಲ್ಲೂಕಿನ ಸಾತನೂರ, ಹೊಸೂರ, ಭಂಕಲಗಾ, ಅಣೀಕೇರ ತಾಂಡಾ, ಭೀಮನಹಳ್ಳಿ, ಆಲೂರ, ಸೂಲಹಳ್ಳಿ, ಕಮರವಾಡಿ, ಕಮರವಾಡಿ ತಾಂಡಾ, ಡಿಗ್ಗಿ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಕುರಿತು ಮಾತನಾಡಿದ ಅವರು.

ನಾನು ಕ್ಷೇತ್ರದಲ್ಲಿ ಸಾಕಾಷ್ಟು ಸಮಾಜ ಸೇವೆ ಮಾಡಿರುವೆ. ಅದು ನಾ ಏನೂ ಹೇಳಬೇಕಿಲ್ಲ. ಅದು ನಿಮ್ಮೆಲ್ಲರಿಗೆ ಗೊತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಬೇಜವಾಬ್ದಾರಿಯಿಂದ ಕೆಲ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ ಹೀಗಾಗಿ ಮುಂಬರುವ ದಿನಗಳಲ್ಲಿ ನನ್ನಗೆ ಒಂದು ಬಾರಿ ಅವಕಾಶ ಕೋಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ನಾನು ನಿಷ್ಠೆಯಿಂದ ಮಾಡಿ ತೋರಿಸುವೆ.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂದು ಹೇಳಿ ದೇಶದ ಪ್ರಧಾನಿಗೆ ಅಪಮಾನ ಮಾಡಿದ್ರೆ ಇಲ್ಲಿ ಪ್ರಿಯಾಂಕ್ ಖರ್ಗೆ ಕೊಡ ಮೋದಿಗೆ ನಾಲಾಯಕ ಅನ್ನುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಅವರು ಮಾಡುವ ಅಪಮಾನ ಬರಿ ನರೇಂದ್ರ ಮೋದಿಗಷ್ಟೇ ಅಲ್ಲಾ ದೇಶದ ಪ್ರತಿಯೊಬ್ಬ ಪ್ರಜೆಗೆ ಅಪಮಾನ ಮಾಡಿದಂತೆ ಹೀಗಾಗಿ ಅವರಿಗೆ ಮೇ,೧೦ಕ್ಕೆ ನೀವು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದರು.

ಸುಮಾರು ೭೦ ವರ್ಷಗಳಿಂದ ನಮ್ಮ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸದೆ,
ಉದ್ಯೋಗ ನೀಡದೆ ತುಳಿದುಕೊಂಡು ಬಂದಿದ್ದರೆ. ಹೀಗಾಗಿ ನಮ್ಮ ಭಾಗದ ಜನರು ಬೆಂಗಳೂರ,ಮುಂಬೈ ,ಹೈದ್ರಾಬಾದ್ ನಲ್ಲಿ ಹೋಗಿ ಕೋಲಿ ನಲ್ಲಿ ಮಾಡಿ ಜೀವನ ನಡೆಸುತ್ತಿದ್ದಾರೆ ಎಂದು ಖರ್ಗೆ ಕುಟುಂಬದ ವಿರುದ್ಧ ಕಿಡಿಕಾರಿದರು. 

ಇದೇ ವೇಳೆಯಲ್ಲಿ ನೂರಾರು ಹಿರಿಯರು ಹಾಗೂ ಯುವಕರು ಕಾಂಗ್ರೆಸ್ ಜೆಡಿಎಸ್ ಹಾಗೂ ಇತರ ಪಕ್ಷ ತೊರೆದು ಬಿಜೆಪಿಯ ತತ್ವ ಸಿದ್ಧಾಂತ ಹಾಗೂ ಮಣಿಕಂಠ ರಾಠೋಡ ಅವರ ಸಮಾಜ ಸೇವೆ ಮೆಚ್ಚಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ನಿಂಗಾರೆಡ್ಢಿ ಭಾಸರೆಡ್ಡಿ, ಶರಣಗೌಡ, ರಾಮರೆಡ್ಡಿ ಗೌಡ, ಮಲ್ಲಿಕಾರ್ಜುನ ಎಮ್ಮೆನೋರ, ಶಂಕ್ರಣ್ಣ ಗೌಡ, ತಮ್ಮಣ್ಣ ಡಿಗ್ಗಿ, ಮಹಿಪಾಲ್ ಮೂಲಿಮನಿ, ಹಿಬ್ರಾಹಿಂ ದಿಗ್ಗಾಂವ, ಸಣ್ಣ ದೇವಪ್ಪ  ಹೋನಪ್ಪನೂರ, ಸೇರಿದಂತೆ ಅನೇಕ ಇದ್ದರು.

ಬಿಜೆಪಿಯಿಂದ ಕೋಲಿ,ಕಬ್ಬಲಿಗ ಸಮಾಜಕ್ಕೆ ಅನ್ಯಾಯ: ಕಮಕನೂರ.

ಚಿತ್ತಾಪೂರ: ಕೋಲಿ,ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಮಾತು ಕೊಟ್ಟಿತ್ತು ಅದನ್ನು ತಪ್ಪಿದ್ದಾರೆ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿಗೆ ಸೇರಿಸದೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ತಾಲ್ಲೂಕಿನ ಮತಕ್ಷೇತ್ರದ ಹೊಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೇ ಅವರ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು ಕೇಂದ್ರ,ರಾಜ್ಯ ಸರ್ಕಾರ ಪತನ ಆಗಬೇಕು ಆಗ ನಮ್ಮ ಕೋಲಿ, ಕಬ್ಬಲಿಗ ಸಮಾಜಕ್ಕೆ ಎಸ್ ಟಿ ಮಿಸಲಾತಿ ಸಿಗುತ್ತದೆ.ಇಡಿ ಕರ್ನಾಟಕ ಸರ್ಕಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಸೋಲಿಸುವ ಹುನ್ನಾರ ನಡೆಸುತ್ತಿದ್ದಾರೆ ಹೀಗಾಗಿ ಅವರಿಗೆ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅವರ ಕೈ ಬಲಿಷ್ಠ ಪಡಿಸೋಣ ಎಂದರು.

ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ಬಂದೆ ಬರುತ್ತೆ, ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆ ಆಗುತ್ತೆ ಎಂದು ಭವಿಷ್ಯ ನುಡಿದರು. 

ಈ ಸಂದರ್ಭದಲ್ಲಿ ವಿಶ್ವನಾಥ ಪಾಟೀಲ ಹೆಬ್ಬಾಳ, ಜಗಣ್ಣಗೌಡ ರಾಮತೀರ್ಥ, ಪ್ರಭುರಾಜ ಕಾಂತಾ, ಶಾಂತಣ್ಣ ಚಾಳಿಕಾರ, ಶರಣಪ್ಪ ನಾಟೀಕಾರ್, ರಾಮಲಿಂಗ ಬಾನರ್, ಶಿವೂ ಸುಲ್ತನಪೂರ, ಭೀಮಣ್ಣ ಶಿಭಾ, ಸಾಬಣ್ಣ ಇಟಗಾ, ಭೀಮಣ್ಣ ಹೋತಿನಮಡಿ, ಸಾಯಬಗೌಡ, ಶಾಂತಪ್ಫ, ಸೇರಿದಂತೆ ಅನೇಕ ಇದ್ದರು.

ಶುಕ್ರವಾರ, ಏಪ್ರಿಲ್ 28, 2023

ಅಭಿವೃದ್ದಿ ನೋಡಿ ಮತ ಹಾಕಿ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ನಮಗೆ ಅಭಿವೃದ್ದಿಯೇ ಮೂಲಮಂತ್ರ, ಚಿತ್ತಾಪುರದಲ್ಲಿ ಒಂದು ಪರಿಪೂರ್ಣ ಸಮಾಜ ನಿರ್ಮಾಣದ ಕನಸು ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಮುಖ್ಯವಾಹಿನಿಗೆ ತರುವ ತುಡಿತ ನಮಗಿದೆ. ಯಾವುದೇ ಧರ್ಮ ಹಾಗೂ ಜಾತಿಯ ರಾಜಕೀಯ ಬೇಕಿಲ್ಲ. ಹಾಗಾಗಿ ಸರ್ವಾಂಗೀಣ ಅಭಿವೃದ್ದಿ ನೋಡಿ ನನ್ನಗೆ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು. 

ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆಗೊಂಡ ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಅಭಿವೃದ್ದಿ ಪರ, ಯುವಕರ ಭವಿಷ್ಯದ ಕಾಳಜಿ‌ ಇರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಹಾಗಾಗಿ ಅವರಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಈ ಸಲದ ಚುನಾವಣೆ ಚಿತ್ತಾಪುರದ ಭವಿಷ್ಯದ ಪ್ರಶ್ನೆಯಾಗಿದೆ. ಬಿಜೆಪಿ ಅಭ್ಯರ್ಥಿ ಪರ ಯಾವೊಬ್ಬ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಬಿಜೆಪಿಯಲ್ಲಿರುವ ಸ್ವಾಭಿಮಾನಿಗಳು ಕಾಂಗ್ರೆಸ್ ಸೇರುತ್ತಿದ್ದಾರೆ ಇಲ್ಲವೇ ತಟಸ್ಥರಾಗಿದ್ದಾರೆ ಹಾಗಾಗಿ ಕೇವಲ ಎನ್ ರವಿಕುಮಾರ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದಾರೆ.

ಬಸವ ತತ್ವ, ಅಂಬಿಗರ ಚೌಡಯ್ಯನವರ ತತ್ವ ಆದರ್ಶ, ಸಂವಿಧಾನದ ಪರಿಪಾಲನೆ ಹಾಗೂ ಅಭಿವೃದ್ಧಿ ಪರ ಚಿಂತನೆ ಇರುವ ವ್ಯಕ್ತಿ ಚುನಾವಣೆಗೆ ನಿಂತಾಗ ಮಾತ್ರ ಅವರ ಪರ ಮಾತನಾಡಲು ಕಾರ್ಯಕರ್ತರಿಗೆ ಎದೆಗಾರಿಕೆ ಇರುತ್ತದೆ. ಆದರೆ, ಬೆಜೆಪಿ ಪರವಾಗಿ ಅಂತ ವಾತಾವರಣ ಇಲ್ಲ. 

ಸಿಎಂ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಲು ಬರುತ್ತಿದ್ದಾರೆ. ಅವರ ಪರ ಏನು ಹೇಳಿ ಮತಯಾಚಿಸುತ್ತಾರೆ. ನಮ್ಮ ಅಭ್ಯರ್ಥಿ ಅಕ್ಕಿ ಹಾಗೂ ಹಾಲಿನಪುಡಿ ಕಳ್ಳ ಸಾಗಾಣಿಕೆ ಮಾಡುತ್ತಾರೆ ಅವರ ಮೇಲೆ 40 ಕೇಸು ದಾಖಲಾಗಿವೆ. ಒಂದು ಕೇಸಿನಲ್ಲಿ ಕೋರ್ಟ್ ಶಿಕ್ಷೆ ನೀಡಿದೆ ಅಂತ ಹೇಳಿ ಪ್ರಚಾರ ಮಾಡುತ್ತಾರೆಯೇ? ಎನ್ ರವಿಕುಮಾರ ಅವರು ಇಂತಹ ಅಭ್ಯರ್ಥಿಯನ್ನು ಸಮರ್ಥ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ನನ್ನ ಮೇಲೂ 9 ಕೇಸುಗಳಿವೆ ಅವೆಲ್ಲ ಸಮಾಜ ಕಲ್ಯಾಣಕ್ಕಾಗಿ ಹೋರಾಟ ನಡೆಸಿದಾಗ ಹಾಕಿದ ಕೇಸುಗಳು ಆದರೆ, ಮಣಿಕಂಠನ ವಿಚಾರನೆ ಬೇರೆ ಎಂದರು.

ಇಎಸ್ ಐಸಿ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯದ, ರೇಲ್ವೆ ಪ್ರತ್ಯೇಕ ವಲಯ ತರುವಲ್ಲಿ‌ ವಿಫಲರಾದ, ವಾಡಿ ರೇಲ್ವೆ ಮೇಲ್ಸೇತುವೆ ಪೂರ್ಣಗೊಳಿಸದ ಸಂಸದರನ್ನು ಗುಲಬರ್ಗಾ ಸಂಸದ ಎನ್ನಲು ಹೇಗೆ ಸಾಧ್ಯ? ಅವರು ಕೇವಲ ಚಿಂಚೋಳಿ ಸಂಸದ ಎಂದು ಉಮೇಶ ಜಾಧವ ಅವರಿಗೆ ಕುಟುಕಿದರು. 
ಈ ಸಂದರ್ಭದಲ್ಲಿ ಹೊಸರು ಗ್ರಾಮದ ಹಲವರು ಹಾಗೂ ಅಲ್ಲೂರು ( ಬಿ) ಗ್ರಾಮದ ಮಲ್ಲಯ್ಯ ಸ್ವಾಮಿ, ಯರಗಲ್ ಗ್ರಾಮದ ಮುಂತಾದವರು ಕಾಂಗ್ರೆಸ್ ಪಕ್ಷದ ತತ್ವ ಹಾಗೂ ಸಿದ್ದಾಂತವನ್ನು ಮತ್ತು ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ದಿಪರ‌ ಚಿಂತನೆ ಮೆಚ್ಚಿ ಕಾಂಗ್ರೆಸ್ ಪಕ್ಷ‌ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಭಾಗಣ್ಣಗೌಡ ಸಂಕನೂರು, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ ಮರಗೋಳ, ಶಿವಾನಂದ ಪಾಟೀಲ, ಮಹೇಬೂಬ ಸಾಹೇಬ, ಮುಕ್ತಾರ್ ಪಟೇಲ್,ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ್, ಮಾಜಿ ಶಾಸಕರ ವಿಶ್ವನಾಥ ಪಾಟೀಲ ಹೆಬ್ಬಾಳ ಸೇರಿದಂತೆ ಹಲವರಿದ್ದರು.

ಚಿತ್ತಾಪುರ ಜನರ ಚಿತ್ತ ಮಣಿಕಂಠನತ್ತ ಇರಲಿ: ಸಿಎಂ ಬೊಮ್ಮಾಯಿ.



  ಖರ್ಗೆ ಕ್ಷೇತ್ರದಲ್ಲಿ ಸಿಎಂ  ಬೊಮ್ಮಾಯಿ       ಭರ್ಜರಿ ರೋಡ್ ಶೋ.

ಚಿತ್ತಾಪುರ: ಇಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ ನೋಡಿದರೆ ನನಗನಿಸುತ್ತದೆ ನಿಮ್ಮೆಲ್ಲರ ಚಿತ್ತ ಮಣಿಕಂಠನತ್ತ ಇರಲಿ. ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ರೋಡ್ ಶೋ ಬಂದು ಭುವನೇಶ್ವರಿ ವೃತ್ತದಲ್ಲಿ ಮಾತನಾಡಿದ ಅವರು ನಾನು ಮುಖ್ಯಮಂತ್ರಿ ಆದ ಮೇಲೆ ಅಭಿವೃದ್ಧಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡಿರುವೆ ಅದರಲ್ಲೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇನೆ. ಅದೇ ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ಕೋಟಿ. ನೀಡಿದೆ ನೀವೇ ವಿಚಾರ ಮಾಡಿ ಎಂದು ಹೇಳಿದರು.
ಕಾಂಗ್ರೆಸ್ ನವರು ಮತದಾರರಿಗೆ ಗ್ಯಾರಂಟಿಗಳನ್ನು ನೀಡಿದ್ದಾರೆ ಆದರೆ ಆ ಗ್ಯಾರೆಂಟಿಗಳು ಮೇ ಹತ್ತರವರೆಗೆ ಮಾತ್ರ ಅವರ ಗ್ಯಾರಂಟಿಗಳು ನಂತರ ಗಳಗಂಟಿ ಗಳಗಂಟಿ ಎಂದು ಟೀಕೆ ಮಾಡಿದರು. ಚಿತ್ತಾಪುರ ನಲ್ಲಿ ಕಾಂಗ್ರೆಸ್ ಏನ್ ಗ್ಯಾರಂಟಿ ನೀಡಿದೆ ಅದಕ್ಕೆ ಪ್ರಧಾನಿಯವರು ಹೇಳಿದ್ದಾರೆ ಬ್ರಷ್ಟಾಚಾರವೇ ಅವರ ಗ್ಯಾರೆಂಟಿ ಅದು ಇನ್ನು ಮುಂದೆ ನಿಂತು ಹೋಗುತ್ತದೆ. ಮೇ 13ಕ್ಕೆ ಚಿತ್ತಾಪುರದಲ್ಲಿ ಗ್ಯಾರಂಟಿ ಇರುವುದು ಮಣಿಕಂಠ ರಾಠೋಡ್ ಒಬ್ಬನೇ ಎಂದು ಹೇಳಿದರು.

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಮೋದಿ ಸರ್ಕಾರ ರೈತರಿಗೆ 
ಕಿಸಾನ್ ಸನ್ಮಾನ ಯೋಜನೆ,  ಪ್ರಧಾನ ಮಂತ್ರಿ ಅವಾಸ್ ಯೋಜನೆ, ಆರೋಗ್ಯಕ್ಕೆ ಆಯುಷ್ಮಾನ್ ಕಾರ್ಡ್, ನಮ್ಮ ರಾಜ್ಯ ಸರ್ಕಾರ ರೈತರಿಗೆ ವಿದ್ಯಾನಿಧಿ ಕೊಟ್ಟಿದೆ, ರೈತರಿಗೆ ಯಶಸ್ವಿನಿ ಯೋಜನೆ ತಂದಿದ್ದೇವೆ, ಕಳೆದ ವರ್ಷ ಡಿಜಲ್ ಸಬ್ಸಿಡಿ ಕೊಟ್ಟಿದ್ದೇವೆ, ಈ ವರ್ಷ ಐದು ಲಕ್ಷದವರೆಗೆ ಶೂನ್ಯ ಬಗ್ಗೆ ಸಾಲ ಕೊಡ್ತಾ ಇದೀವಿ ದಿನ- ದಲಿತರಿಗೆ 75 ಯೂನಿಟ್ ಪುಕ್ಕಟೆ ಕೊಡ್ತಾ ಇದ್ದೇವೆ. ಹೆಣ್ಣು ಮಕ್ಕಳಿಗೆ ಶ್ರೀ ಸಾಮರ್ಥ್ಯ ಯೋಜನೆ, ಮೂರು ಲಕ್ಷ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡ್ತಾ ಇದ್ದೇವೆ, ಸ್ವಾಮಿ ವಿವೇಕಾನಂದ ಯೋಜನೆಯಲ್ಲಿ ಯುವಕರಿಗಾಗಿ ಮೂರು ಲಕ್ಷ ಉದ್ಯೋಗವನ್ನು ಕೊಡ್ತಾ ಇದ್ದೇವೆ, ವಿದ್ಯಾರ್ಥಿಗಳಿಗೆ ಡಿಗ್ರಿವರೆಗೆ ಉಚಿತ ಶಿಕ್ಷಣ, ವಿದ್ಯಾರ್ಥಿಯರಿಗೆ ಉಚಿತ ಬಸ್ ಪ್ರಯಾಣ, ಹೀಗೆ ಬಿಜೆಪಿ ಸರ್ಕಾರ ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದೆ.

ಅಣ್ಣ ಬಸವಣ್ಣನ ಹಾದಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಅವರಿಗೂ ಸಮಪಾಲು ಸರ್ವರಿಗೂ ಸಮ ಬಾಳು. ಸಬ್ ಕೆ ಸಾಥ್ ಸಬ್ ಕಾ ವಿಕಾಸ್. ನಿಟ್ಟಿನಲ್ಲಿ ನಾವು ನಡೆಯುತ್ತಿದ್ದೇವೆ. ಕರ್ನಾಟಕದಿಂದ ನವ ಕರ್ನಾಟಕ ಭಾರತ ನಿರ್ಮಾಣವಾಗಬೇಕಾದರೆ ಚಿತ್ತಾಪುರ ನಲ್ಲಿ ಕಮಲ ಅರಳಬೇಕು ಎಂದರು.

ಭಾರತ ದೇಶವನ್ನು ಸ್ವಚ್ಛ ಭಾರತ ಮಾಡಲು ಹೊರಟಿರುವ ನರೇಂದ್ರ ಮೋದಿಯವರಿಗೆ ನಾವು ನೀವೆಲ್ಲರೂ ಶಕ್ತಿ ತುಂಬಬೇಕು. ಎಲ್ಲರೂ ಕೈಯಲ್ಲಿ ಕೇಸರಿ ಶಾಲು ಹಿಡಿಯಿರಿ ಈ ಕೇಸರಿ ಶಾಲು ನಮ್ಮ ಹಿಂದುತ್ವದ ಒಗ್ಗಟ್ಟು.
ಜೊತೆಗೆ ಚಿತ್ತಾಪುರ ನಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಮಣಿಕಂಠ ರಾಠೋಡ್ ಅವರನ್ನು ಗೆಲ್ಲಿಸಿ ಎಂದು ಹೇಳಿದರು. 

- ಶೃತಿ, ಚಲನಚಿತ್ರ ನಟಿ.


 ರಾಜ್ಯದ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಅವರು ಚಿತ್ತಾಪುರಗೆ ಬಂದು ನನಗೆ ಆಶೀರ್ವಾದ ಮಾಡಿದ್ದಾರೆ. ಜೊತೆಗೆ ಇಲ್ಲಿ ಸೇರಿದ ಸಾವಿರಾರು ಕಾರ್ಯಕರ್ತರ ಆಶೀರ್ವಾದ ನನ್ನ ಮೇಲಿದೆ ಹೀಗಾಗಿ ನನಗೆ ಈ ಬಾರಿ 50, ಸಾವಿರ ಅಧಿಕ ಮತಗಳಿಂದ ಆರಿಸಿ ತರಬೇಕು ಎಂದು ಮನವಿ ಮಾಡಿದರು.

- ಮಣಿಕಂಠ ರಾಠೋಡ್.
ಬಿಜೆಪಿ ಅಭ್ಯರ್ಥಿ ಚಿತ್ತಾಪುರ.

ಈ ಸಂದರ್ಭದಲ್ಲಿ ರಾಜುಗೌಡ, ಎನ್ ರವಿ ಕುಮಾರ್, ಬಸವರಾಜ್ ಬೆಣ್ಣೂರಕರ್, ಸೇರಿದಂತೆ ಸಾವಿರಾರು ಕಾರ್ಯಕರ್ತರು ಇತರರಿದ್ದರು.

ಬುಧವಾರ, ಏಪ್ರಿಲ್ 26, 2023

ದೇಶದ ಸುರಕ್ಷತೆಯಲ್ಲಿ ಮೊದಿ ಸೇವೆ ಅಗಾಧ: ಎಮ್ಮೆನೋರ.

ಚಿತ್ತಾಪೂರ: ಭಾರತೀಯ ಜನಾತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಬಗ್ಗೆ ಯೋಚಿಸಿದಾಗ ಬಿಜೆಪಿ ಪಕ್ಷ ವಿಭಿನ್ನವಾದ ಪಕ್ಷ, ಏಕೆಂದರೆ ದೇಶದ ಪ್ರಧಾನಿ ನರೇಂದ್ರ ಮೊದಿ ಅವರು ದೇಶ ಅಭಿವೃದ್ಧಿ, ದೇಶ ಸುರಕ್ಷತೆಗಾಗಿ ಹಗಲು ಇರುಳು ಅನ್ನದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಹೇಳಿದರು.

ತಾಲ್ಲೂಕಿನ ತರ್ಕಸಪೇಟನ ಪ್ರಚಾರದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷ ಸಣ್ಣ-ಸಣ್ಣ ಸಮುದಾಯಗಳು ಸಹ ಸಮಾಜದ  ಮುಖ್ಯವಾಹಿನಿಗೆ ಬರಬೇಕೆಂದು ಅನೇಕ ನಿಗಮ ಮಂಡಳಿಗಳನ್ನು ಮಾಡಿದ್ದಾರೆ. ದೇಶದ ಪ್ರಗತಿಗಾಗಿ ಹಗಲು ರಾತ್ರಿ ಎನ್ನದೆ ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಅವರು ಜನ ಸೇವೆಯಲ್ಲಿ ತಮ್ಮ‌ನ್ನು ತಾವು ತೊಡಗಿಸಿಕೊಂಡಿದ್ದಾರೆ. ಪಿಎಂ ಕಿಸಾನ್ ಯೋಜನೆ ಅಡ್ಡಿಯಲ್ಲಿ ರೈತರಿಗೆ ನೇರವಾಗಿ 24 ಲಕ್ಷ ಕೋಟಿ ರೂ.ಹಣ ಜಮಾಡುವ ಕೆಲಸ ಮಾಡಿದ್ದಾರೆ. 

ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ  ಕೆಲಸ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದ್ರೆ ಹೇಳಿಕೊಳ್ಳುವಷ್ಟು ಕೆಲಸ ಆಗಿಲ್ಲ. ರೈತರ ಸಲುವಾಗಿ ಹಲವು ಕೆರೆ ತುಂಬುವ ಬೇಡಿಕೆಯನ್ನು ಕಳೆದ ಹತ್ತು ವರ್ಷದಿಂದ ಬಹು ಮುಖ್ಯ ಬೇಡಿಕೆಯಾಗಿತ್ತು. ಅದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿತು. ಆದ್ರೆ ಇನ್ನೂ ಆ ಬೇಡಿಕೆ  ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು 

ಒಂದು ಸಲ ಬಿಜೆಪಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಬಹುಮತಗಳ ಅಂತರದಲ್ಲಿ ಗೆಲ್ಲಿಸೋಣ ಎಂದು ಜನರಲ್ಲಿ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿ ತರ್ಕಸಪೇಟ ಗ್ರಾಮ ನನಗೆ ಹೊಸದೆನಲ್ಲ ಆದ್ರೆ ಇಷ್ಟೋಂದು ಜನ ಸೇರುತ್ತಾರೆ ಎಂದು ನಿರೀಕ್ಷೆ ಮಾಡಿಲ್ಲ, ಈ ಪ್ರೀತಿ ಮತದಾನ ದಿನದವರೆಗೆ ಇರಲಿ ಎಂದು ಜನರಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ.

 ಈ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳ ಹಾಗೂ ಬೇಡಿಕೆಗಳು ನೀಡಿದ್ದೀರಿ ಅವುಗಳಲ್ಲಿ ವಿಶೇಷವಾಗಿ ಬಸವೇಶ್ವರ ಮೂರ್ತಿ, ಗ್ರಾಮ ಪಂಚಾಯತ್ ಮತ್ತು ಮಹಿಳೆಯರ ಶೌಚಾಲಯ ಬಹುದಿನಗಳ ಬೇಡಿಕೆಯಾಗಿದೆ. ಆ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ. ನಿಮ್ಮ ಕಷ್ಟ ನನಗೆ ಅರ್ಥವಾಗುತ್ತೆ, ಈ ಸಮಸ್ಯೆ ಬಗೆಹರಿಸಲು, ನೀವೂ ನನ್ನಗೆ ಮತದಾನ ದಿನ ಮತ ನೀಡಿ ಗೆಲ್ಲಿಸಿ ಎಂದರು.

ಕಾಂಗ್ರೆಸ್,ಜೆಡಿಎಸ್ ಹಾಗೂ ಇತರ ಪಕ್ಷ ತೊರೆದು ತರ್ಕಸಪೇಟನ ನಾರಾರು ಯುವಕರ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ನಿಂಗಾರೆಡ್ಡಿ ಬಾಸರೆಡ್ಡಿ, ಭೀಮರಡ್ಡಿ ಕುರಾಳ,  ಸುರೇಶ ರಾಠೋಡ್ ಕವಿತಾ ಚವ್ಹಾಣ್, ಶಿವಕುಮಾರ ಸುಣಗಾರ, ಮಲ್ಲಿಕಾರ್ಜುನ ಅಅಲ್ಲೂರಕರ್, ಗೌಡ, ನಂದರೆಡ್ಡಿ ಗೌಡ, ಶಾಂತಯ್ಯ ಗುತ್ತೇದಾರ್ ನಾಗೇಶ ಪಂಚಾಳ, ವೆಂಕಟರೆಡ್ಡಿ ಗೌಡ, ಬಲವಂತ ದೇವರಳ್ಳಿ, ಮಲ್ಲಿಕಾರ್ಜುನ ಕುಂಬಾರ, ಈಶಪ್ಪ, ಬಸವರಾಜ ಕುಂಬಾರ ಸೇರಿದಂತೆ ಇತರರು ಇದ್ದರು.




ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...